ಬುಧವಾರ, ಡಿಸೆಂಬರ್ 30, 2020

Kottambari soppu rice recipe in Kannada | ಕೊತ್ತಂಬರಿ ಸೊಪ್ಪು ರೈಸ್ ಮಾಡುವ ವಿಧಾನ

 

Kottambari soppu rice recipe

Kottambari soppu rice recipe in Kannada | ಕೊತ್ತಂಬರಿ ಸೊಪ್ಪು ರೈಸ್ ಮಾಡುವ ವಿಧಾನ 

ಕೊತ್ತಂಬರಿ ಸೊಪ್ಪು ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಈರುಳ್ಳಿ
  3. 1/2 ಟೀಸ್ಪೂನ್ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 2 ಟೇಬಲ್ ಸ್ಪೂನ್ ಗೋಡಂಬಿ
  8. 1/4 ಟೀಸ್ಪೂನ್ ಅರಿಶಿನ ಪುಡಿ
  9. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  10. 1/2 ಟೀಸ್ಪೂನ್ ಸಕ್ಕರೆ
  11. 1 - 2 ಟೀಸ್ಪೂನ್ ನಿಂಬೆಹಣ್ಣಿನ ನಿಂಬೆರಸ
  12. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 2 - 3 ಹಸಿರು ಮೆಣಸಿನಕಾಯಿ
  2. ಒಂದು ಹಿಡಿ ಕೊತ್ತಂಬರಿ ಸೊಪ್ಪು
  3. 2 ಟೇಬಲ್ ಚಮಚ ತೆಂಗಿನತುರಿ
  4. ಸಣ್ಣ ಚೂರು ಶುಂಠಿ

ಕೊತ್ತಂಬರಿ ಸೊಪ್ಪು ರೈಸ್ ಮಾಡುವ ವಿಧಾನ:

  1. ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಒಂದು ಮಿಕ್ಸಿ ಜಾರ್ ನಲ್ಲಿ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ತೆಂಗಿನತುರಿ ಮತ್ತು ಶುಂಠಿ ತೆಗೆದುಕೊಳ್ಳಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆದಿಟ್ಟುಕೊಳ್ಳಿ. 
  4. ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಗೋಡಂಬಿ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  5. ಸಾಸಿವೆ ಸಿಡಿದಮೇಲೆ, ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಮೇಲೆ ಅರೆದ ಮಸಾಲೆ ಸೇರಿಸಿ. 
  7. ಉಪ್ಪು, ಸಕ್ಕರೆ ಮತ್ತು ಅರಿಶಿನ ಸೇರಿಸಿ. 
  8. ಚೆನ್ನಾಗಿ ಮಗುಚಿ, ಒಂದೆರಡು ನಿಮಿಷ ಕುದಿಸಿ. 
  9. ನಂತರ ಬೇಯಿಸಿದ ಅನ್ನ ಸೇರಿಸಿ. 
  10. ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
  11. ಬೇಕಾದಲ್ಲಿ ಒಂದೆರಡು ಚಮಚ ನಿಂಬೆರಸ ಸೇರಿಸಬಹುದು. ಬೆಳಿಗ್ಗಿನ ತಿಂಡಿಗೆ ಅಥವಾ ಲಂಚ್ ಬಾಕ್ಸ್ ಗೆ ಬಹಳಚೆನ್ನಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಡಿಸೆಂಬರ್ 14, 2020

Togarikalu saaru recipe in Kannada | ತೊಗರಿಕಾಳು ಸಾರು ಮಾಡುವ ವಿಧಾನ

 

Togarikalu saaru recipe in Kannada

Togarikalu saaru recipe in Kannada | ತೊಗರಿಕಾಳು ಸಾರು ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 1 ಕಪ್ ತೊಗರಿಕಾಳು
  2. 1 - 2 ಟೀ ಚಮಚ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ ಅಥವಾ ಕೆಳಗೆಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿಯಿರಿ
  3. 2 ಟೀಸ್ಪೂನ್ ಅಡುಗೆ ಎಣ್ಣೆ
  4. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  5. ನಿಮ್ಮ ರುಚಿ ಪ್ರಕಾರ ಉಪ್ಪು

ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)

  1. 1 ಕತ್ತರಿಸಿದ ಈರುಳ್ಳಿ
  2. 4 ಬೇಳೆ ಬೆಳ್ಳುಳ್ಳಿ
  3. ಸ್ವಲ್ಪ ಶುಂಠಿ
  4. 1 ಕತ್ತರಿಸಿದ ಟೊಮೆಟೊ
  5. 1/4 ಕಪ್ ತೆಂಗಿನ ತುರಿ
  6. ಸ್ವಲ್ಪ ಚಕ್ಕೆ 
  7. ಸ್ವಲ್ಪ ಲವಂಗ
  8. ಸ್ವಲ್ಪ ಕೊತ್ತುಂಬರಿ ಸೊಪ್ಪು
  9. ಸ್ವಲ್ಪ ಕರಿಬೇವು

ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ ಇಲ್ಲದಿದ್ದಲ್ಲಿ:

  1. 2 - 5 ಒಣಮೆಣಸಿನಕಾಯಿ 
  2. 2 ಟೀಸ್ಪೂನ್ ಕೊತ್ತಂಬರಿ ಬೀಜ
  3. 1/2 ಟೀಸ್ಪೂನ್  ಜೀರಿಗೆ
  4.  1/4 ಟೀಸ್ಪೂನ್ ಮೆಂತ್ಯ
  5. ದೊಡ್ಡ ಚಿಟಿಕೆ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ 
  2. 5 - 6 ಕರಿಬೇವಿನ ಎಲೆ
  3. 1/2 ಚಮಚ ಸಾಸಿವೆ 
  4. 2 ಟೀಸ್ಪೂನ್ ಅಡುಗೆ ಎಣ್ಣೆ

ತೊಗರಿಕಾಳು ಸಾರು ಮಾಡುವ ವಿಧಾನ:

  1. ತೊಗರಿಕಾಳನ್ನು ಬಿಡಿಸಿ ತೆಗೆದುಕೊಳ್ಳಿ. 
  2. ಒಂದು ಕುಕ್ಕರ್ ಅಥವಾ ಪಾತ್ರೆಗೆ ಹಾಕಿ. ಅರಿಶಿನ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಮೆತ್ತಗೆ ಬೇಯಿಸಿಕೊಳ್ಳಿ. 
  3. ಆ ಸಮಯದಲ್ಲಿ, ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಣಮೆಣಸಿನಕಾಯಿ ಮತ್ತು ಸಾರಿನಪುಡಿಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದುಕೊಳ್ಳಿ. ಸಾರಿನಪುಡಿ ಅಥವಾ ಸಾಂಬಾರ್ ಪುಡಿ ಇದ್ದಲ್ಲಿ ಹುರಿಯುವುದು ಬೇಡ. 
  4. ನಂತರ ಚಕ್ಕೆ, ಲವಂಗ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹುರಿಯಿರಿ. 
  5. ಹೆಚ್ಚಿದ ಈರುಳ್ಳಿಯನ್ನು ಹುರಿಯಿರಿ. 
  6. ಈರುಳ್ಳಿ ಹುರಿಯುವಾಗ, ಕರಿಬೇವು ಸೇರಿಸಿ ಹುರಿಯಿರಿ. 
  7. ಆಮೇಲೆ ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹುರಿಯಿರಿ. 
  8. ಕೊನೆಯಲ್ಲಿ ಕಾಯಿತುರಿ ಹಾಕಿ, ಸ್ಟವ್ ಆಫ್ ಮಾಡಿ, ಒಮ್ಮೆ ಮಗುಚಿ. 
  9. ಬಿಸಿ ಅರಿದಮೇಲೆ, ಒಂದು ಸೌಟು ಬೇಯಿಸಿದ ತೊಗರಿಕಾಳಿನೊಂದಿಗೆ, ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ. 
  10. ಬೇಯಿಸಿದ ತೊಗರಿಕಾಳಿಗೆ ಅರೆದ ಮಸಾಲೆ ಹಾಕಿ. 
  11. ಉಪ್ಪು, ಬೆಲ್ಲ ಮತ್ತು ಹುಳಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ. 
  12. ಅಗತ್ಯವಿದ್ದಷ್ಟು ನೀರು ಸೇರಿಸಿ, ಮಗುಚಿ, ಕುದಿಸಿ. 
  13. ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ, ಸ್ಟವ್ ಆಫ್ ಮಾಡಿ. 
  14. ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. 
  15. ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.

ಗುರುವಾರ, ಡಿಸೆಂಬರ್ 3, 2020

Rave halbai recipe in Kannada | ರವೆ ಹಾಲ್ಬಾಯಿ ಮಾಡುವ ವಿಧಾನ

 

Rave halbai recipe in Kannada

Rave halbai recipe in Kannada | ರವೆ ಹಾಲ್ಬಾಯಿ ಮಾಡುವ ವಿಧಾನ 

ರವೆ ಹಾಲ್ಬಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ರವೆ
  2. 1/2 ಕಪ್ ತೆಂಗಿನ ತುರಿ
  3. 1/2 ಕಪ್ ಬೆಲ್ಲ
  4. 2 ಟೇಬಲ್ ಸ್ಪೂನ್ ತುಪ್ಪ
  5. 2 ಏಲಕ್ಕಿ
  6. 1.25 ಕಪ್ ನೀರು

ರವೆ ಹಾಲ್ಬಾಯಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ತೆಂಗಿನತುರಿ ತೆಗೆದುಕೊಳ್ಳಿ.
  2. ರವೆ ಮತ್ತು ಏಲಕ್ಕಿ ಸೇರಿಸಿ.
  3. ಒಂದು ಕಪ್ ನೀರು ಹಾಕಿ ಸ್ವಲ್ಪ ತರಿತರಿಯಾಗಿ ಅರೆದುಕೊಳ್ಳಿ.  
  4. ಬೆಲ್ಲಕ್ಕೆ 1/4 ಕಪ್ ನೀರು ಹಾಕಿ ಕರಗಲು ಬಿಡಿ. ಇದನ್ನು ನಾವು ಸ್ವಲ್ಪ ಸಮಯದ ನಂತರ ಉಪಯೋಗಿಸುತ್ತೇವೆ. 
  5.  ಒಂದು ದಪ್ಪ ತಳದ ಬಾಣಲೆಗೆ ಅರೆದ ಹಿಟ್ಟು ಮತ್ತು ಬೆಲ್ಲದ ನೀರು ಹಾಕಿ.
  6. ಸ್ಟವ್ ಆನ್ ಮಾಡಿ, ಸ್ಟವ್ ಮೇಲಿಟ್ಟು ಮಗುಚಿ. 
  7. ಸ್ವಲ್ಪ ಗಟ್ಟಿಯಾದ ಕೂಡಲೇ ತುಪ್ಪ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ. ಸುಮಾರು ಹದಿನೈದು ನಿಮಿಷ ಮಗುಚಬೇಕಾಗುತ್ತದೆ. 
  8. ಸ್ವಲ್ಪ ಸಮಯದ ನಂತರ ಹಾಲುಬಾಯಿ ತಳ ಬಿಡಲು ಪ್ರಾರಂಭಿಸುತ್ತದೆ ಮತ್ತು ಹೊಳತೆ ಬರುತ್ತದೆ. 
  9. ಆಗ ಹಾಲುಬಾಯಿಯನ್ನು ತುಪ್ಪ ಸವರಿದ ಪ್ಲೇಟ್ ಗೆ ಸುರಿಯಿರಿ. 
  10. ಬಿಸಿ ಆರಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿದು ಆನಂದಿಸಿ.

ಶುಕ್ರವಾರ, ನವೆಂಬರ್ 27, 2020

Majjige paddu recipe in Kannada | ಮಜ್ಜಿಗೆ ಪಡ್ಡು ಮಾಡುವ ವಿಧಾನ

 

Majjige paddu recipe in Kannada

Majjige paddu recipe in Kannada | ಮಜ್ಜಿಗೆ ಪಡ್ಡು ಮಾಡುವ ವಿಧಾನ 

ಮಜ್ಜಿಗೆ ಪಡ್ಡು ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1.5 ಕಪ್ ಮಜ್ಜಿಗೆ ಅಥವಾ 1 ಕಪ್ ಮೊಸರು
  3. 1/4 ಕಪ್ ಅವಲಕ್ಕಿ (ಗಟ್ಟಿ ಅಥವಾ ಮೀಡಿಯಂ)
  4. 1 ಟೇಬಲ್ ಸ್ಪೂನ್ ಮೆಂತ್ಯ
  5. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  6. 1 ಚಮಚ ಜೀರಿಗೆ
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಟೀಸ್ಪೂನ್ ಸಕ್ಕರೆ

ಮಜ್ಜಿಗೆ ಪಡ್ಡು ಮಾಡುವ ವಿಧಾನ:

  1. ಅಕ್ಕಿ, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆಯಿರಿ. 
  2. ಮಜ್ಜಿಗೆಯಲ್ಲಿ 7 - 8 ಗಂಟೆಗಳ ಕಾಲ ನೆನೆಯಲು ಬಿಡಿ. ಮೊಸರು ಬಳಸುವುದಾದರೆ, ಮೊಸರಿಗೆ ಅರ್ಧ ಕಪ್ ನೀರು ಸೇರಿಸಿ ಮಜ್ಜಿಗೆ ಮಾಡಿಕೊಳ್ಳಿ. 
  3. ನೆನೆಸಿದ ನಂತರ ನೆನೆಸಿದ ಮಜ್ಜಿಗೆ ಸಹಿತ ಮಿಕ್ಸಿ ಜಾರಿಗೆ ಹಾಕಿ. 
  4. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. ಅರೆಯಲು ಬೇರೆ ನೀರು ಸೇರಿಸುವುದು ಬೇಡ. ಹಿಟ್ಟು ತುಂಬ ಬಿಸಿಯಾಗದಂತೆ ನೋಡಿಕೊಳ್ಳಿ.
  5. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.
  6. ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಜೀರಿಗೆ  ಸೇರಿಸಿ ಚೆನ್ನಾಗಿ ಕಲಸಿ. 
  7. ಮುಚ್ಚಳ ಮುಚ್ಚಿ 2 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಪಡ್ಡು ಅಥವಾ ಗುಳಿಯಪ್ಪದ ಹೆಂಚನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  9. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  10. 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  11. ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ನವೆಂಬರ್ 19, 2020

Ribbon pakoda recipe in Kannada | ರಿಬ್ಬನ್ ಪಕೋಡ ಮಾಡುವ ವಿಧಾನ

 

Ribbon pakoda recipe in Kannada

Ribbon pakoda recipe in Kannada | ರಿಬ್ಬನ್ ಪಕೋಡ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿಹಿಟ್ಟು 
  2. 1/2 ಕಪ್ ಕಡ್ಲೆಹಿಟ್ಟು
  3. 1 ಟೀಸ್ಪೂನ್ ಎಳ್ಳು 
  4. 1/2 ಟೀಸ್ಪೂನ್ ಜಜ್ಜಿದ ಜೀರಿಗೆ
  5. ದೊಡ್ಡ ಚಿಟಿಕೆ ಅರಿಶಿನ
  6. ದೊಡ್ಡ ಚಿಟಿಕೆ ಇಂಗು
  7. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  8. 1 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
  9. 1 ಟೇಬಲ್ ಚಮಚ ಬೆಣ್ಣೆ ಅಥವಾ 2 ಟೇಬಲ್ ಚಮಚ ಬಿಸಿ ಎಣ್ಣೆ
  10. ಎಣ್ಣೆ ಕಾಯಿಸಲು

ರಿಬ್ಬನ್ ಪಕೋಡ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಕಡ್ಲೆಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಎಳ್ಳು ಮತ್ತು ಜಜ್ಜಿದ ಜೀರಿಗೆ ಹಾಕಿ. 
  3. ಆಮೇಲೆ ಅರಿಶಿನ, ಅಚ್ಚಖಾರದ ಪುಡಿ ಮತ್ತು ಇಂಗು ಸೇರಿಸಿ. 
  4. ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ. ಒಮ್ಮೆ ಕಲಸಿ. 
  5. ಬೆಣ್ಣೆ (ಅಥವಾ ಬಿಸಿ ಎಣ್ಣೆ) ಹಾಕಿ, ಚೆನ್ನಾಗಿ ತಿಕ್ಕಿ ಕಲಸಿ. 
  6. ಬೆಚ್ಚಗಿನ ನೀರು ಹಾಕಿ ಮೃದುವಾದ ಹಿಟ್ಟು ಸಿದ್ಧಪಡಿಸಿಕೊಳ್ಳಿ.
  7. ರಿಬ್ಬನ್ ಪಕೋಡದ ಅಚ್ಚಿಗೆ ಹಿಟ್ಟನ್ನು ಹಾಕಿ ಬಿಸಿ ಎಣ್ಣೆಗೆ ಒತ್ತಿ. 
  8. ಮಧ್ಯಮ ಉರಿಯಲ್ಲಿ ಕಾಯಿಸಿ. ಸುಮಾರು ಹತ್ತು ಸೆಕೆಂಡ್ ಗಳ ನಂತರ ತಿರುಗಿಸಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  9. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಬಿಸಿ ಆರಿದ ಮೇಲೆ ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. 

ಬುಧವಾರ, ನವೆಂಬರ್ 18, 2020

Kaayi burfi recipe in Kannada | ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ

 

Kaayi burfi recipe in Kannada
Kaayi burfi recipe in Kannada

Kaayi burfi recipe in Kannada | ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ  


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ (ಒತ್ತಿ ತುಂಬಿಸಿದ್ದು)
  2. 3/4 ಕಪ್ ಬೆಲ್ಲ
  3. 1 ಟೇಬಲ್ ಸ್ಪೂನ್ ತುಪ್ಪ
  4. ಎರಡು ಏಲಕ್ಕಿ
  5. ತುಪ್ಪ ಹಚ್ಚಿದ ಪ್ಲೇಟ್ ಅಥವಾ ಟ್ರೇ

ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ:

  1. ತೆಂಗಿನತುರಿ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ತೆಗೆದುಕೊಳ್ಳಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್) ನುಣ್ಣಗೆ ಅರೆಯಿರಿ. 
  3. ಆಮೇಲೆ ಬೆಲ್ಲ ಸೇರಿಸಿ ಪುನಃ ಅರೆಯಿರಿ. ಬೆಲ್ಲದಲ್ಲಿ ಕಸ-ಕಡ್ಡಿ ಇದೆ ಎನಿಸಿದರೆ, ಅರ್ಧ ಕಪ್ ನೀರಿನಲ್ಲಿ, ಬೆಲ್ಲ ಕರಗಿಸಿ, ಆ ನೀರಿನಲ್ಲಿ ಕಾಯಿಯನ್ನು ಅರೆಯಿರಿ. 
  4. ಒಂದು ಬಾಣಲೆಗೆ ಅರೆದ ಮಿಶ್ರಣವನ್ನು ಹಾಕಿ ಕುದಿಯಲು ಇಡಿ. 
  5. ಒಂದು ಪ್ಲೇಟ್ ಅಥವಾ ಟ್ರೇ ಗೆ ತುಪ್ಪ ಹಚ್ಚಿಟ್ಟುಕೊಳ್ಳಿ. 
  6. ಮಧ್ಯಮ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಇರಿ. 
  7. 4 - 5 ನಿಮಿಷದಲ್ಲಿ ಸ್ವಲ್ಪ ಗಟ್ಟಿಯಾಗುವುದು. 
  8. ತುಪ್ಪವನ್ನು ಸೇರಿಸಿ. ಮಗುಚುವುದನ್ನು ಮುಂದುವರೆಸಿ. 
  9. ಮಧ್ಯಮ ಉರಿಯಲ್ಲಿ ಕೈ ಬಿಡದೆ ಮಗುಚುತ್ತಿರಿ. 
  10. ಒಂದೈದು ನಿಮಿಷದಲ್ಲಿ ಕಾಯಿ ಮತ್ತು ಬೆಲ್ಲದ ಮಿಶ್ರಣ ಒಂದೇ ಮುದ್ದೆಯಾಗಿ, ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ. 
  11. ಈ ಸಮಯದಲ್ಲಿ ತುಪ್ಪ ಸವರಿದ ಟ್ರೇ ಗೆ ಸುರಿಯಿರಿ. 
  12. ತುಪ್ಪ ಸವರಿದ ಚಮಚದ ಹಿಂಭಾಗ ಉಪಯೋಗಿಸಿ ಹರಡಿ. 
  13. ಬಿಸಿ ಸ್ವಲ್ಪ ಆರಿದ ಮೇಲೆ ಕತ್ತರಿಸಿ. 
  14. ಸಂಪೂರ್ಣ ಬಿಸಿ ಆರಿದ ಮೇಲೆ ಕಾಯಿ ಬರ್ಫಿ ತೆಗೆದು ಬಡಿಸಿ, ತಿಂದು ಆನಂದಿಸಿ. 

ಸೋಮವಾರ, ನವೆಂಬರ್ 9, 2020

Carrot rice recipe in Kannada | ಕ್ಯಾರಟ್ ರೈಸ್ ಮಾಡುವ ವಿಧಾನ

 

Carrot rice recipe in Kannada

Carrot rice recipe in Kannada | ಕ್ಯಾರಟ್ ರೈಸ್ ಮಾಡುವ ವಿಧಾನ 

ಕ್ಯಾರಟ್ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ಅನ್ನ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 2 ಟೇಬಲ್ ಚಮಚ ಶೇಂಗಾ 
  6. 2 ಟೇಬಲ್ ಚಮಚ ಗೋಡಂಬಿ
  7. 1 - 2 ಹಸಿಮೆಣಸಿನಕಾಯಿ
  8. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. 4-5 ಕರಿ ಬೇವಿನ ಎಲೆ
  10. 1 ದೊಡ್ಡ ಗಾತ್ರದ ಕ್ಯಾರಟ್
  11. ದೊಡ್ಡ ಚಿಟಿಕೆ ಅರಶಿನ ಪುಡಿ
  12. 1 ಟೀಸ್ಪೂನ್ ರಸಂ ಪೌಡರ್ 
  13. 2 ಟೇಬಲ್ ಚಮಚ ಅಡುಗೆ ಎಣ್ಣೆ
  14. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  15. 2 ಟೀಸ್ಪೂನ್ ನಿಂಬೆ ರಸ
  16. 2 ಟೇಬಲ್ ಚಮಚ ತೆಂಗಿನತುರಿ
  17. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು

ಕ್ಯಾರಟ್ ರೈಸ್ ಮಾಡುವ ವಿಧಾನ:

  1. ಕ್ಯಾರಟ್ ತುರಿಯಿರಿ, ಬೇರೆ ಪದಾರ್ಥಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ. 
  3. ನಂತ್ರ ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ. 
  4. ಸಾಸಿವೆ ಸಿಡಿದ ಕೂಡಲೇ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  5. ನಂತ್ರ ತುರಿದ ಕ್ಯಾರಟ್ ಸೇರಿಸಿ ಒಂದು ನಿಮಿಷ ಹುರಿಯಿರಿ.
  6. ಆಮೇಲೆ ಅರಿಶಿನ ಪುಡಿ, ಉಪ್ಪು ಮತ್ತು ರಸಂ ಪುಡಿ ಸೇರಿಸಿ. 
  7. ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. 
  8. ಬೇಯಿಸಿದ ಅನ್ನ ಸೇರಿಸಿ. ಮಗುಚಿ. 
  9. ಕೊನೆಯಲ್ಲಿ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಸೇರಿಸಿ. 
  10. ಸ್ಟವ್ ಆಫ್ ಮಾಡಿ, ಚೆನ್ನಾಗಿ ಕಲಸಿ, ಬಡಿಸಿ.

ಶುಕ್ರವಾರ, ಅಕ್ಟೋಬರ್ 30, 2020

Jeerige saaru recipe in Kannada | ಜೀರಿಗೆ ಸಾರು ಮಾಡುವ ವಿಧಾನ

 

Jeerige saaru recipe in Kannada | ಜೀರಿಗೆ ಸಾರು ಮಾಡುವ ವಿಧಾನ

ಜೀರಿಗೆ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 2 ಟೊಮೇಟೊ
  2. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  3. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  4. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  5. ದೊಡ್ಡ ಚಿಟಿಕೆ ಅರಿಶಿನ
  6. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಅರೆಯಲು ಬೇಕಾಗುವ ಪದಾರ್ಥಗಳು:

  1. 2 ಟೇಬಲ್ ಚಮಚ ತೊಗರಿಬೇಳೆ
  2. 1 ಟೇಬಲ್ ಚಮಚ  ಜೀರಿಗೆ
  3. 3 - 5 ಒಣಮೆಣಸಿನಕಾಯಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 1 ಒಣಮೆಣಸಿನಕಾಯಿ
  4. ಇಂಗು ಒಂದು ಚಿಟಿಕೆ
  5. 5 - 6 ಕರಿಬೇವಿನ ಎಲೆ
  6. 1 ಟೇಬಲ್ ಚಮಚ ತುಪ್ಪ (ಅಥವಾ ಎಣ್ಣೆ)

 ಜೀರಿಗೆ ಸಾರು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತೊಗರಿಬೇಳೆ, ಜೀರಿಗೆ ಮತ್ತು ಒಣಮೆಣಸನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿಯಿರಿ.
  2. ಸಣ್ಣ ಉರಿಯಲ್ಲಿ ಜೀರಿಗೆ ಸೀದು ಹೋಗದಂತೆ ಹುರಿಯಬೇಕು, ಇಲ್ಲವಾದಲ್ಲಿ ಸಾರು ಕಹಿ ಆಗಬಹುದು. 
  3. ಬಿಸಿ ಆರಿದ ಮೇಲೆ, ಮಿಕ್ಸಿಯಲ್ಲಿ ಪುಡಿ ಮಾಡಿ, ಪಕ್ಕಕ್ಕಿಡಿ. 
  4. ಆಮೇಲೆ ಅದೇ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಕತ್ತರಿಸಿದ ಟೊಮೇಟೊ, ಅರಿಶಿನ ಮತ್ತು ಸ್ವಲ್ಪ ಉಪ್ಪು ಹಾಕಿ. 
  5. ಹುರಿದು, ಮುಚ್ಚಳ ಮುಚ್ಚಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  6. ಆಮೇಲೆ ಪುಡಿಮಾಡಿದ ಮಸಾಲೆ ಸೇರಿಸಿ. ಒಮ್ಮೆ ಮಗುಚಿ.
  7. ಸುಮಾರು ಎರಡು ದೊಡ್ಡ ಲೋಟದಷ್ಟು ನೀರು ಸೇರಿಸಿ (ಅರ್ಧ ಲೀಟರ್). 
  8. ರುಚಿಗೆ ತಕ್ಕಂತೆ ಉಪ್ಪು, ಬೆಲ್ಲ ಮತ್ತು ಹುಣಿಸೆ ರಸ ಸೇರಿಸಿ. 
  9. ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ. 
  10. ಕೊತ್ತಂಬರಿ ಸೊಪ್ಪು ಸೇರಿಸಿ. 
  11. ಕೊನೆಯಲ್ಲಿ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಒಣಮೆಣಸು, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  12. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಅಕ್ಟೋಬರ್ 29, 2020

Sorekai palya recipe in Kannada | ಸೋರೆಕಾಯಿ ಪಲ್ಯ ಮಾಡುವ ವಿಧಾನ

 

Sorekai palya recipe in Kannada | ಸೋರೆಕಾಯಿ ಪಲ್ಯ ಮಾಡುವ ವಿಧಾನ 

sorekai palya video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೋರೆಕಾಯಿ
  2. 1/4 ಕಪ್ ಹೆಸರುಬೇಳೆ
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 - 2 ಟೇಬಲ್ ಚಮಚ ಅಡುಗೆ ಎಣ್ಣೆ
  6. 1 ಒಣ ಮೆಣಸಿನಕಾಯಿ
  7. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  8. 1 ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. 1/4 ಕಪ್ ತೆಂಗಿನ ತುರಿ
  11. ಉಪ್ಪು ರುಚಿಗೆ ತಕ್ಕಷ್ಟು
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು

ಸೋರೆಕಾಯಿ ಪಲ್ಯ ಮಾಡುವ ವಿಧಾನ:

  1. ಹೆಸರುಬೇಳೆಯನ್ನು ಹತ್ತು ನಿಮಿಷ ನೆನೆಸಿಕೊಳ್ಳಿ. 
  2. ಸೋರೆಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು,  ಕತ್ತರಿಸಿ. ಬೀಜ ಬೆಳೆದಿದ್ದರೆ ತೆಗೆಯಿರಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಒಣಮೆಣಸಿನಕಾಯಿ ಹಾಕಿ. 
  4. ಸಾಸಿವೆ ಸಿಡಿದ ಕೂಡಲೇ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  5. ಅದಕ್ಕೆ ಕತ್ತರಿಸಿದ ಸೋರೆಕಾಯಿ ಹಾಕಿ ಮಗುಚಿ. 
  6. ನೆನೆಸಿದ ಹೆಸರುಬೇಳೆ ಹಾಕಿ ಮಗುಚಿ. 
  7. ಅರಿಶಿನ, ಇಂಗು ಮತ್ತು ಉಪ್ಪು ಹಾಕಿ ಮಗುಚಿ.
  8. 1/4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  9. ಸೋರೆಕಾಯಿ ಮತ್ತು ಹೆಸರುಬೇಳೆ ಮೆತ್ತಗೆ ಬೆಂದ ಮೇಲೆ ತೆಂಗಿನತುರಿ ಸೇರಿಸಿ. 
  10. ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. 
  11. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಶನಿವಾರ, ಅಕ್ಟೋಬರ್ 10, 2020

Balekai palya recipe in Kannada | ಬಾಳೆಕಾಯಿ ಪಲ್ಯ ಮಾಡುವ ವಿಧಾನ

 

Balekai palya recipe in Kannada

Balekai palya recipe in Kannada | ಬಾಳೆಕಾಯಿ ಪಲ್ಯ ಮಾಡುವ ವಿಧಾನ

ಬಾಳೆಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಮಧ್ಯಮ ಗಾತ್ರದ ಬಾಳೆಕಾಯಿ
  2. ದೊಡ್ಡ ಚಿಟಿಕೆ ಅರಶಿನ ಪುಡಿ 
  3. ಚಿಟಿಕೆ ಇಂಗು
  4. ಉಪ್ಪು ರುಚಿಗೆ ತಕ್ಕಷ್ಟು
  5. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕೊತ್ತಂಬರಿ ಬೀಜ 
  2. 1/2 ಟೀಸ್ಪೂನ್ ಜೀರಿಗೆ 
  3. 1/4 ಟೀಸ್ಪೂನ್ ಸಾಸಿವೆ 
  4. 1/2 ಕಪ್ ತೆಂಗಿನ ತುರಿ  
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. 2 - 3 ಹಸಿಮೆಣಸಿನಕಾಯಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 1 ಚಮಚ ಕಡ್ಲೆಬೇಳೆ
  4. 1 ಚಮಚ ಉದ್ದಿನಬೇಳೆ
  5. 5 - 6 ಕರಿಬೇವಿನ ಎಲೆ
  6. 2 ಟೇಬಲ್ ಚಮಚ ಅಡುಗೆ ಎಣ್ಣೆ

ಬಾಳೆಕಾಯಿ ಪಲ್ಯ ಮಾಡುವ ವಿಧಾನ:

  1. ಬಾಳೆಕಾಯಿಯ ಸಿಪ್ಪೆ ತೆಗೆದು ತೊಳೆದು ಕತ್ತರಿಸಿ.
  2. ಎಣ್ಣೆ, ಸಾಸಿವೆ, ಒಣ ಮೆಣಸಿನಕಾಯಿ, ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  3. ಅದಕ್ಕೆ ಕತ್ತರಿಸಿದ ಬಾಳೆಕಾಯಿ ಹಾಕಿ. 
  4. ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ.
  5. ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ. ಅರ್ಧ ಕಪ್ ನೀರು ಸೇರಿಸಿ ಮಗುಚಿ. 
  6. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಆ ಸಮಯದಲ್ಲಿ, ಮಿಕ್ಸಿಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  8. ಬೇಯಿಸಿದ ಬದನೇಕಾಯಿಗೆ ಅರೆದ ಮಸಾಲೆ ಹಾಕಿ.
  9. ಚೆನ್ನಾಗಿ ಮಗುಚಿ ಎರಡು ನಿಮಿಷ ಬೇಯಿಸಿ. 
  10. ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.


ಬುಧವಾರ, ಸೆಪ್ಟೆಂಬರ್ 30, 2020

Masala jolada rotti recipe Kannada | ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ

 

Masala jolada rotti recipe Kannada

Masala jolada rotti recipe Kannada | ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ


ಮಸಾಲಾ ಜೋಳ ರೊಟ್ಟಿ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಜೋಳದ ಹಿಟ್ಟು
  2. 1.25 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ)
  3. 2 - 3 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1 ಮಧ್ಯಮ ಗಾತ್ರದ ಕ್ಯಾರಟ್
  6. 1ಸಣ್ಣ ಗಾತ್ರದ ಸೌತೆಕಾಯಿ
  7. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವು
  8. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
  10. 1 ಚಮಚ ಜೀರಿಗೆ
  11. ಉಪ್ಪು ರುಚಿಗೆ ತಕ್ಕಷ್ಟು
  12. ಎಣ್ಣೆ ರೊಟ್ಟಿ ಕಾಯಿಸಲು

ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರಟ್ ಮತ್ತು ತುರಿದ ಸೌತೆಕಾಯಿ ಸೇರಿಸಿ. 
  3. ನಂತರ ಸಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿರು ಮೆಣಸಿನಕಾಯಿ ಮತ್ತೊ ಜೀರಿಗೆ ಸೇರಿಸಿ. 
  4. ಉಪ್ಪನ್ನು ಸೇರಿಸಿ ಒಮ್ಮೆ ಕಲಸಿ. 
  5. ಅಗತ್ಯವಿದ್ದಷ್ಟು ಬೆಚ್ಚಗಿನ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  6. ರೊಟ್ಟಿ ಮಾಡುವ ಕಾವಲಿಗೆ ಎಣ್ಣೆ ಹಚ್ಚಿ, ದೊಡ್ಡ ಕಿತ್ತಳೆ ಗಾತ್ರದ ಹಿಟ್ಟು ತೆಗೆದುಕೊಳ್ಳಿ. 
  7. ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ವೃತ್ತಾಕಾರದ ತೆಳುವಾದ ರೊಟ್ಟಿಯನ್ನು ತಟ್ಟಿ.
  8. ಆಮೇಲೆ ಕಾವಲಿಯನ್ನು ಸ್ಟವ್ ಮೇಲಿರಿಸಿ, ಮೇಲಿನಿಂದ ಒಂದು ಚಮಚ ಎಣ್ಣೆ ಹಾಕಿ.
  9. ಮುಚ್ಚಳ ಮುಚ್ಚಿ ಬೇಯಿಸಿ. 
  10. ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. 
  11. ಚಟ್ನಿಯೊಂದಿಗೆ ಬಡಿಸಿ.



ಮಂಗಳವಾರ, ಸೆಪ್ಟೆಂಬರ್ 29, 2020

How to clean oil bottle in Kannada | ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ

 

How to clean oil bottle in Kannada | ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ

ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಎರಡು ಚಮಚ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ವಾಷಿಂಗ್ ಪೌಡರ್)
  2. ಕಾಲು ಕಪ್ ವಿನೆಗರ್ (ಅಥವಾ ಎರಡು ದೊಡ್ಡ ನಿಂಬೆಹಣ್ಣು)
  3. ಒಂದು ಚಮಚ ಅಡುಗೆ ಸೋಡಾ
  4. ಸ್ವಲ್ಪ ಬಟ್ಟೆ ಸೋಪ್
  5. ಒಂದು ಹಳೇ ಬ್ರಷ್
  6. ಒಂದು ದೊಡ್ಡ ಪಾತ್ರೆ ಅಥವಾ ಟಬ್
  7. ಅಗತ್ಯವಿದ್ದಷ್ಟು ಬಿಸಿ ನೀರು

ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ:

  1. ಎಣ್ಣೆ ಬಾಟಲಿಯಿಂದ ಹೆಚ್ಚಿನ ಎಣ್ಣೆಯನ್ನು ಪೇಪರ್ ಸಹಾಯದಿಂದ ಒರೆಸಿ ತೆಗೆಯಿರಿ.
  2. ನಂತರ ಒಂದು ಟಬ್ ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ. 
  3. ಅದಕ್ಕೆ ಪಾತ್ರೆ ತೊಳೆಯೋ ಲಿಕ್ವಿಡ್, ವಿನೆಗರ್ ಮತ್ತು ಸೋಡಾ ಸೇರಿಸಿ. 
  4. ಎಣ್ಣೆ ಬಾಟಲಿ ಮತ್ತು ಮುಚ್ಚಳವನ್ನು ಹದಿನೈದು ನಿಮಿಷ ನೆನೆಸಿಡಿ. 
  5. ಮತ್ತೆ ಸೋಪು ಮತ್ತು ಬ್ರಷ್ ನ ಸಹಾಯದಿಂದ ಸಂದಿ ಮೂಲೆಗಳನ್ನು ಸ್ವಚ್ಛಗೊಳಿಸಿ. 
  6. ನೀರು ಬದಲಿಸಿ, ಪುನಃ ಬಿಸಿ ನೀರು ಹಾಕಿ. 
  7. ಕೊನೆಯಲ್ಲಿ ಸ್ಕ್ರಬ್ಬರ್ ಮತ್ತು ಪಾತ್ರೆ ತೊಳೆಯೋ ಸೋಪ್ ಹಾಕಿ ಒಮ್ಮೆ ಎಲ್ಲ ಜಾಗವನ್ನು ತಿಕ್ಕಿ. 
  8. ಚೆನ್ನಾಗಿ ತೊಳೆದು, ನೀರಾರಲು ಬಿಡಿ. 

ಗುರುವಾರ, ಸೆಪ್ಟೆಂಬರ್ 17, 2020

Kalasida avalakki recipe in Kannada | ಕಲಸಿದ ಅವಲಕ್ಕಿ ಮಾಡುವ ವಿಧಾನ

 

Kalasida avalakki recipe in Kannada | ಕಲಸಿದ ಅವಲಕ್ಕಿ ಮಾಡುವ ವಿಧಾನ 

ಕಲಸಿದ ಅವಲಕ್ಕಿ ಒಗ್ಗರಣೆ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ಮೀಡಿಯಂ ಅವಲಕ್ಕಿ ಅಥವಾ ತೆಳು ಅವಲಕ್ಕಿ
  2. 1 ಈರುಳ್ಳಿ
  3. 1 ಸಣ್ಣ ಟೊಮ್ಯಾಟೋ 
  4. 1/4 ಕಪ್ ತೆಂಗಿನತುರಿ
  5. ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. 1 ಟೀಸ್ಪೂನ್ ಸಕ್ಕರೆ
  7. 3/4 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು
  8. 1 - 2 ಟೀಸ್ಪೂನ್ ನಿಂಬೆಹಣ್ಣಿನ ರಸ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು

  1. 1 ಟೇಬಲ್ ಚಮಚ ಅಡುಗೆ ಎಣ್ಣೆ
  2. 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಅಥವಾ ಶೇಂಗಾ
  3. 1/2 ಟೀಸ್ಪೂನ್ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ
  5. 2 - 3 ಹಸಿರು ಮೆಣಸಿನಕಾಯಿ
  6. 4 - 5 ಕರಿ ಬೇವಿನ ಎಲೆ

ಕಲಸಿದ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ತೆಗೆದುಕೊಳ್ಳಿ.
  2. ಉಪ್ಪು ಮತ್ತು ಸಕ್ಕರೆ ಸೇರಿಸಿ. 
  3. ಚೆನ್ನಾಗಿ ಹಿಸುಕಿ ಕಲಸಿ. 
  4. ಆಮೇಲೆ ಅದಕ್ಕೆ ಮೀಡಿಯಂ (ಅಥವಾ ತೆಳು) ಅವಲಕ್ಕಿ ಮತ್ತು ನಿಂಬೆರಸ ಸೇರಿಸಿ. 
  5. ಸುಮಾರು ಕಾಲು ಕಪ್ ನಷ್ಟು ನೀರು ಚಿಮುಕಿಸಿ ಕಲಸಿ. ತೆಳು ಅವಲಕ್ಕಿ ಆದಲ್ಲಿ ನೀರು ಹಾಕುವುದು ಬೇಡ. 
  6. ನಂತ್ರ ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  7. ಆ ಸಮಯದಲ್ಲಿ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮೊದಲಿಗೆ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ. 
  8. ಅದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ. 
  9. ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ. ಹುರಿದು ಸ್ಟವ್ ಆಫ್ ಮಾಡಿ.
  10. ಈ ಒಗ್ಗರಣೆಯನ್ನು ಕಲಸಿಟ್ಟ ಅವಲಕ್ಕಿಗೆ  ಹಾಕಿ ಮಗುಚಿ. 
  11. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಟೀ ಯೊಂದಿಗೆ ಸವಿದು ಆನಂದಿಸಿ.


ಮಂಗಳವಾರ, ಸೆಪ್ಟೆಂಬರ್ 15, 2020

Cheenikai dose recipe in Kannada | ಸಿಹಿಕುಂಬಳಕಾಯಿ ದೋಸೆ ಮಾಡುವ ವಿಧಾನ

 

ಸಿಹಿಗುಂಬಳ ದೋಸೆ

Cheenikai dose recipe in Kannada | ಸಿಹಿಕುಂಬಳಕಾಯಿ ದೋಸೆ ಮಾಡುವ ವಿಧಾನ 


ಸಿಹಿಕುಂಬಳಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1 ಕಪ್ ಸಿಪ್ಪೆ ತೆಗೆದು ಕತ್ತರಿಸಿದ ಸಿಹಿಗುಂಬಳಕಾಯಿ
  3. 1/2 ಕಪ್ ತೆಂಗಿನತುರಿ
  4. ಸಣ್ಣ ಚೂರು ಶುಂಠಿ
  5. ಸ್ವಲ್ಪ ಕರಿಬೇವು
  6. 2 - 3 ಒಣಮೆಣಸಿನಕಾಯಿ
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ಸಿಹಿಕುಂಬಳಕಾಯಿ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 2 - 3 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  3. ನಂತ್ರ ಚೀನಿಕಾಯಿ (ಸಿಹಿಗುಂಬಳ) ಯನ್ನು ಮಿಕ್ಸಿ ಜಾರಿಗೆ ಹಾಕಿ. 
  4. ತೆಂಗಿನತುರಿ, ಶುಂಠಿ, ಕರಿಬೇವು ಮತ್ತು ಒಣಮೆಣಸು ಸೇರಿಸಿ. 
  5. ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆದು, ಅದೇ ಪಾತ್ರೆಗೆ ಹಾಕಿ. 
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  7. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, 
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  11. ಸಣ್ಣ ಉರಿಯಲ್ಲಿ ಗರಿಗರಿ ಆಗುವವರೆಗೆ  ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಸೆಪ್ಟೆಂಬರ್ 9, 2020

Nimbe hannina uppinakayi recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ

 

Nimbe hannina uppinakayi recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ



ನಿಂಬೆಹಣ್ಣಿನ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 12 - 15 ನಿಂಬೆಹಣ್ಣು
  2. 4 - 5 ಟೇಬಲ್ ಚಮಚ ಉಪ್ಪು 
  3. 3 - 4 ಟೇಬಲ್ ಚಮಚ ಅಚ್ಚಖಾರದಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಹೊಂದಿಸಿ)
  4. 1/2 ಟೀಸ್ಪೂನ್ ಅರಿಶಿನ ಪುಡಿ
  5. 1/4 ಟೀಸ್ಪೂನ್ ಇಂಗು
  6. 2 ಟೇಬಲ್ ಚಮಚ ಅಡುಗೆ ಎಣ್ಣೆ
  7. 1 ಟೀಸ್ಪೂನ್ ಸಾಸಿವೆ
  8. 1 ಟೀಸ್ಪೂನ್ ಮೆಂತೆ
  9. ಸ್ವಲ್ಪ ಕರಿಬೇವಿನ ಎಲೆ

 ಉಪ್ಪಿನಕಾಯಿ ಮಾಡುವ ವಿಧಾನ:

  1. ನಿಂಬೆಹಣ್ಣನ್ನು ತೊಳೆದು ನೀರಾರಿಸಿಕೊಳ್ಳಿ. 
  2.  ನಿಂಬೆಹಣ್ಣನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿಕೊಳ್ಳಿ.
  3. ಕತ್ತರಿಸುವಾಗ ಸ್ವಲ್ಪ ನಿಂಬೆ ರಸ ಮತ್ತು ಬೀಜ ತೆಗೆಯಿರಿ. ಈ ರಸವನ್ನು ಅಗತ್ಯವಿದ್ದರೆ ಕೊನೆಯಲ್ಲಿ ಬಳಸಬಹುದು. 
  4. ನೀರಿನಂಶ ಇಲ್ಲದೆ ಇರುವ ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಂತ ಹಂತವಾಗಿ ಉಪ್ಪು ಸೇರಿಸಿ ಹಾಕಿ. 
  5. ದಿನಕ್ಕೊಮ್ಮೆ ಮಗುಚುತ್ತಾ 7 - 10 ದಿವಸ ಬಿಡಿ. 
  6. ಆಮೇಲೆ ಅಚ್ಚಖಾರದ ಪುಡಿ, ಇಂಗು ಮತ್ತು ಅರಿಶಿನ ಸೇರಿಸಿ. 
  7. ಚೆನ್ನಾಗಿ ಕಲಸಿ. ಚಮಚದಲ್ಲಿ ನೀರಿನಂಶ ಇಲ್ಲದಂತೆ ನೋಡಿಕೊಳ್ಳಿ. 
  8. ಬೇಕೆನಿಸಿದರೆ  ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು  ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ. 
  9. ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಒಗ್ಗರಣೆ ಬಿಸಿ ಆರಿದ ಮೇಲೆ ಹಾಕಿ. 
  10. ಮುಚ್ಚಳ ಮುಚ್ಚಿ ಇನ್ನೆರಡು ದಿನ ಬಿಡಿ. ಉಪ್ಪಿನಕಾಯಿ ಸವಿಯಲು ಸಿದ್ಧ.  

ಗುರುವಾರ, ಆಗಸ್ಟ್ 20, 2020

Mushti kadubu recipe in Kannada | ಮುಷ್ಟಿ ಕಡುಬು ಮಾಡುವ ವಿಧಾನ

 

Mushti kadubu recipe in Kannada | ಮುಷ್ಟಿ ಕಡುಬು ಮಾಡುವ ವಿಧಾನ

ಮುಷ್ಟಿ ಕಡುಬು ವಿಡಿಯೋ

ಸಿಹಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 1/2 ಕಪ್ ನೀರು
  3. 1/2 ಕಪ್ ಬೆಲ್ಲ
  4. 1/4 ಕಪ್ ತೆಂಗಿನತುರಿ
  5. 1 ಚಮಚ ತುಪ್ಪ
  6. 1/4 ಚಮಚ ಉಪ್ಪು
  7. ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಖಾರ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 3/4 ಕಪ್ ನೀರು (1/2 ಕಪ್ + 1/4 ಕಪ್)
  3. 1/4 ಕಪ್ ತೆಂಗಿನತುರಿ
  4. 1 ಚಮಚ ತುಪ್ಪ
  5. 1/2 ಚಮಚ ಸಾಸಿವೆ
  6. 1/2 ಚಮಚ ಕಡ್ಲೆಬೇಳೆ
  7. 1/2 ಚಮಚ ಉದ್ದಿನಬೇಳೆ
  8. 1/2 ಒಣಮೆಣಸು
  9. 1 ಚಮಚ ಕತ್ತರಿಸಿದ ಕರಿಬೇವಿನ ಸೊಪ್ಪು
  10. 1/2 ಚಮಚ ಕತ್ತರಿಸಿದ ಶುಂಠಿ
  11. 1/2 ಚಮಚ ಕತ್ತರಿಸಿದ ಹಸಿಮೆಣಸಿನಕಾಯಿ
  12. 1/2 ಚಮಚ ಉಪ್ಪು

ಸಿಹಿ ಮುಷ್ಟಿ ಕಡುಬು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಬೆಲ್ಲ ಮತ್ತು ನೀರು ಕುದಿಯಲು ಇಡಿ.  
  2. ಅದಕ್ಕೆ ತೆಂಗಿನತುರಿ, ಉಪ್ಪು, ಏಲಕ್ಕಿ ಪುಡಿ ಮತ್ತು ತುಪ್ಪ ಸೇರಿಸಿ. 
  3. ಕುದಿಯಲು ಶುರುವಾದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ. 
  4. ಚೆನ್ನಾಗಿ ಮಗುಚಿ, ಸ್ಟವ್ ಆಫ್ ಮಾಡಿ. 
  5. ಬಿಸಿ ಕಡಿಮೆ ಆದ ಮೇಲೆ ಮುಷ್ಟಿಯಲ್ಲಿ ಕಡುಬುಗಳನ್ನು ಮಾಡಿ. 
  6. 13 - 15 ನಿಮಿಷ ಆವಿಯಲ್ಲಿ ಬೇಯಿಸಿ. ಸವಿದು ಆನಂದಿಸಿ. 

ಖಾರ ಮುಷ್ಟಿ ಕಡುಬು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. 
  2. ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. 
  3. ಕತ್ತರಿಸಿದ ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ, ಹುರಿಯಿರಿ. 
  4. ಉರಿ ಕಡಿಮೆ ಮಾಡಿ, ತೆಂಗಿನತುರಿ ಮತ್ತು ಉಪ್ಪು ಸೇರಿಸಿ. 
  5. ಅರ್ಧ ಕಪ್ ನೀರು ಸೇರಿಸಿ, ಕುದಿಯಲು ಇಡಿ.  
  6. ಕುದಿಯಲು ಶುರುವಾದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ. 
  7. ಚೆನ್ನಾಗಿ ಮಗುಚಿ, ಉಳಿದ ಕಾಲು ಕಪ್ ನೀರು ಹಾಕಿ ಪುನಃ ಮಗುಚಿ. 
  8. ಸ್ಟವ್ ಆಫ್ ಮಾಡಿ. 
  9. ಬಿಸಿ ಕಡಿಮೆ ಆದ ಮೇಲೆ ಮುಷ್ಟಿಯಲ್ಲಿ ಕಡುಬುಗಳನ್ನು ಮಾಡಿ. 
  10. 13 - 15 ನಿಮಿಷ ಆವಿಯಲ್ಲಿ ಬೇಯಿಸಿ. ಸವಿದು ಆನಂದಿಸಿ. 

ಸೋಮವಾರ, ಆಗಸ್ಟ್ 17, 2020

Sweet curd recipe in Kannada | ಸಿಹಿ ಮೊಸರು (ಯೋಗರ್ಟ್) ಮಾಡುವ ವಿಧಾನ

 

Sweet curd recipe in Kannada | ಸಿಹಿ ಮೊಸರು (ಯೋಗರ್ಟ್) ಮಾಡುವ ವಿಧಾನ


ಸಿಹಿ ಮೊಸರು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಲೀಟರ್ ಹಾಲು
  2. ಅರ್ಧ ಕಪ್ ಸಕ್ಕರೆ
  3. ಕಾಲು ಕಪ್ ಮೊಸರು

ಸಿಹಿ ಮೊಸರು ಮಾಡುವ ವಿಧಾನ:

  1. ಹಾಲನ್ನು ಕುದಿಸಿ. 
  2. ಕುದಿಯಲು ಶುರು ಆದ ಮೇಲೆ, ಆಗಾಗ ಕೈಯಾಡಿಸುತ್ತಾ ಹತ್ತರಿಂದ ಹದಿನೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. 
  3. ಕುದಿಯುವ ಸಮಯದಲ್ಲಿ ಕಾಲು ಕಪ್ ಸಕ್ಕರೆಯನ್ನೂ ಸೇರಿಸಿ. 
  4. ಹಾಲು ಗಟ್ಟಿಯಾದ ನಂತರ ಸ್ಟವ್ ಆಫ್ ಮಾಡಿ. 
  5. ಇನ್ನೊಂದು ಬಾಣಲೆಯಲ್ಲಿ ಉಳಿದ ಕಾಲು ಕಪ್ ಸಕ್ಕರೆಯನ್ನು, ನೀರು ಹಾಕದೆ ಹೊಂಬಣ್ಣಕ್ಕೆ ಬರುವವರೆಗೆ ಕರಗಿಸಿ. 
  6. ಅದನ್ನು ಸ್ವಲ್ಪ ಸ್ವಲ್ಪವಾಗಿ ಬಿಸಿ ಹಾಲಿಗೆ ಹಾಕಿ ಕರಗಿಸಿ. 
  7. ಆಮೇಲೆ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು ಚನ್ನಾಗಿ ಕಲಕಿ. 
  8. ಅದನ್ನು, ಹಾಲು ಬಿಸಿ ಕಡಿಮೆ ಆದ ಮೇಲೆ (ಉಗುರು ಬೆಚ್ಚಗೆ ಗಿಂತ ಸ್ವಲ್ಪ ಜಾಸ್ತಿ ಬಿಸಿ ಇರಲಿ), ಸೇರಿಸಿ.
  9. ಚೆನ್ನಾಗಿ ಎತ್ತಿಹಾಕಿ ಮಿಕ್ಸ್ ಮಾಡಿ.  
  10. ಮೊಸರು ಮಾಡುವ ಪಾತ್ರೆಗೆ ಹಾಕಿ. 
  11. ಮುಚ್ಚಳ ಮುಚ್ಚಿ, ಬೆಚ್ಚಗಿನ ಜಾಗದಲ್ಲಿ, ಮೊಸರು ಆಗಲು ಬಿಡಿ. 
  12. ನಂತ್ರ ಐಸ್ ಕ್ರೀಮ್ ನ ಹಾಗೆ ಬಡಿಸಿ. ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ತಿನ್ನಬಹುದು.  

ಶುಕ್ರವಾರ, ಆಗಸ್ಟ್ 7, 2020

Shankarpali recipe in Kannada | ಶಂಕರಪಾಳಿ ಮಾಡುವ ವಿಧಾನ

 

Shankarpali recipe in Kannada | ಶಂಕರಪಾಳಿ ಮಾಡುವ ವಿಧಾನ


ದಿಢೀರ್ ಸೆಟ್ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿಹಿಟ್ಟು
  2. 1/2 ಕಪ್ ಹಾಲು
  3. 1/4 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ) 
  4. 1/4 ಕಪ್ ತುಪ್ಪ (ಅಥವಾ ಎಣ್ಣೆ)
  5. 1/4 ಚಮಚ ಉಪ್ಪು
  6. ಚಿಟಿಕೆ ಏಲಕ್ಕಿ ಪುಡಿ
  7. ಎಣ್ಣೆ ಕಾಯಿಸಲು

ಶಂಕರಪಾಳಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಹಾಲು, ಸಕ್ಕರೆ ಮತ್ತು ತುಪ್ಪ ತೆಗೆದುಕೊಳ್ಳಿ.
  2. ಸ್ಟವ್ ಮೇಲೆ ಕುದಿಯಲು ಇಡಿ.  
  3. ಅದಕ್ಕೆ ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ. 
  4. ಕುಡಿಯಲು ಶುರುವಾದ ಕೂಡಲೇ ಸ್ಟವ್ ಆಫ್ ಮಾಡಿ. 
  5. ಇನ್ನೊಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ತೆಗೆದುಕೊಳ್ಳಿ
  6. ಬಿಸಿ ಮಾಡಿದ ಹಾಲು, ಸಕ್ಕರೆ ಮತ್ತು ತುಪ್ಪದ ಮಿಶ್ರಣವನ್ನು ಸುರಿಯಿರಿ. 
  7. ಸಟ್ಟುಗದ ಸಹಾಯದಿಂದ ಕಲಸಿ. 
  8. ಬಿಸಿ ಕಡಿಮೆ ಆದ ಕೂಡಲೇ ಕೈಯಿಂದ ಚೆನ್ನಾಗಿ ಕಲಸಿ.
  9. ಕೂಡಲೇ ದಪ್ಪ ಚಪಾತಿಯಂತೆ ಲಟ್ಟಿಸಿ.
  10. ಸಣ್ಣ ಚೌಕಗಳಾಗಿ ಕತ್ತರಿಸಿ. 
  11. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣ ಉರಿಯಲ್ಲಿ ಕಾಯಿಸಿ. 
  12. ಚಹಾದೊಂದಿಗೆ ಸವಿದು ಆನಂದಿಸಿ. 

ಬುಧವಾರ, ಆಗಸ್ಟ್ 5, 2020

How to store tamarind in Kannada | ಹುಣಿಸೇಹಣ್ಣು ಶೇಖರಿಸುವ ವಿಧಾನ

How to store tamarind in Kannada

How to store tamarind in Kannada | ಹುಣಿಸೇಹಣ್ಣು ಶೇಖರಿಸುವ ವಿಧಾನ


ಹುಣಿಸೇಹಣ್ಣು ಪೇಸ್ಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಕೆಜಿ ಹುಣಿಸೆಹಣ್ಣು
  2. ಅರ್ಧ ಕಪ್ ಉಪ್ಪು
  3. ಅಗತ್ಯವಿದ್ದಷ್ಟು ನೀರು

ಹುಣಿಸೇಹಣ್ಣು ಶೇಖರಿಸುವ ವಿಧಾನ:

  1. ಹುಣಿಸೆಹಣ್ಣನ್ನು ನೀರಿನಲ್ಲಿ ಎರಡು ಘಂಟೆಗಳ ಕಾಲ ನೆನೆಸಿಡಿ.
  2. ನಂತರ ಚೆನ್ನಾಗಿ ಹಿಸುಕಿ. 
  3. ದೊಡ್ಡ ಕಣ್ಣಿರುವ ಪಾತ್ರೆ ಅಥವಾ ಪ್ಲೇಟ್ ನಲ್ಲಿ ಸೋಸಿ, ಗಟ್ಟಿಯಾದ ಹುಣಿಸೆರಸ ತೆಗೆದಿಟ್ಟುಕೊಳ್ಳಿ. 
  4. ಸೋಸುವಾಗ ಸೌಟು ಮತ್ತು ಸ್ವಲ್ಪ ನೀರು ಬಳಸಿದಲ್ಲಿ ಸುಲಭವಾಗಿ ಆಗುವುದು. 
  5. ನಂತರ ಆ ಹುಣಿಸೆ ಪೇಸ್ಟ್ ಅನ್ನು ಒಂದು ಬಾಣಲೆಗೆ ಹಾಕಿ, ಕುದಿಯಲು ಇಡಿ. 
  6. ಕುದಿಯುವಾಗ ಅರ್ಧ ಕಪ್ ಉಪ್ಪು ಸೇರಿಸಿ. 
  7. ಕುದಿಯಲು ಪ್ರಾರಂಭವಾದ ಮೇಲೆ, ಉರಿ ಕಡಿಮೆ ಮಾಡಿ. 
  8. ಹುಣಿಸೆರಸ ಗಟ್ಟಿಯಾಗುವವರೆಗೆ ಅಥವಾ ಸಿಡಿಯಲು ಪ್ರಾರಂಭವಾಗುವವರೆಗೆ ಕುದಿಸಿ. ಸುಮಾರು ಇಪ್ಪತ್ತು ನಿಮಿಷ ಬೇಕಾಯಿತು ನನಗೆ. 
  9. ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಡಬ್ಬದಲ್ಲಿ ತುಂಬಿಸಿ, ಫ್ರಿಡ್ಜ್ನಲ್ಲಿಡಿ. 6 - 7 ತಿಂಗಳು ಕೆಡುವುದಿಲ್ಲ. 
  10. ಹೊರಗೆ ಇಡುವುದಾದಲ್ಲಿ ಇನ್ನು ಸ್ವಲ್ಪ ಗಟ್ಟಿ ಪೇಸ್ಟ್ ಮಾಡಬೇಕಾಗುವುದು. 

ಸೋಮವಾರ, ಜುಲೈ 20, 2020

Instant set dose recipe in Kannada | ದಿಢೀರ್ ಸೆಟ್ ದೋಸೆ ಮಾಡುವ ವಿಧಾನ

Instant set dose recipe in Kannada

Instant set dose recipe in Kannada | ದಿಢೀರ್ ಸೆಟ್ ದೋಸೆ ಮಾಡುವ ವಿಧಾನ

ದಿಢೀರ್ ಸೆಟ್ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರವೆ
  2. 1/2 ಕಪ್ ಗಟ್ಟಿ ಅವಲಕ್ಕಿ ಅಥವಾ 3/4 ತೆಳು ಅವಲಕ್ಕಿ
  3. 1/2 ಕಪ್ ಮೊಸರು 
  4. 1/2 ಚಮಚ ಅಡುಗೆ ಸೋಡಾ
  5. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  6. ಸುಮಾರು 1.25 ಕಪ್ ನೀರು
  7. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ಸೆಟ್ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ತೊಳೆಯಿರಿ. 
  2. ಅದಕ್ಕೆ ರವೇ ಮತ್ತು ನೀರು ಸೇರಿಸಿ. 
  3. ಮೊಸರನ್ನೂ ಸೇರಿಸಿ. 
  4. ಹತ್ತು ನಿಮಿಷ ನೆನೆಯಲು ಬಿಡಿ. 
  5. ಆಮೇಲೆ ಮಿಕ್ಸಿಯಲ್ಲಿ ನುಣ್ಣನೆ ಅರೆಯಿರಿ. 
  6. ಪಾತ್ರೆಗೆ ಬಗ್ಗಿಸಿ, ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ. 
  7. ಚೆನ್ನಾಗಿ ಕಲಸಿ. ಅಗತ್ಯವಿದ್ದಲ್ಲಿ ನೀರು ಸೇರಿಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
  9. ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಸೆಟ್ ದೋಸೆಯಂತೆ ಸ್ವಲ್ಪ ಅಗಲ ಮಾಡಿ.
  10. ಮುಚ್ಚಳ ಮುಚ್ಚಿ ಬೇಯಿಸಿ. 
  11. ಹತ್ತು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  12. ನಂತರ ದೋಸೆಯನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. 
  13. ದೋಸೆಯನ್ನು ತೆಗೆಯಿರಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.

ಗುರುವಾರ, ಜುಲೈ 16, 2020

Ele kosu pathrode recipe in Kannada | ಎಲೆಕೋಸು ಪತ್ರೊಡೆ ಮಾಡುವ ವಿಧಾನ

Ele kosu pathrode recipe in Kannada

Ele kosu pathrode recipe in Kannada | ಎಲೆಕೋಸು ಪತ್ರೊಡೆ ಮಾಡುವ ವಿಧಾನ

ಎಲೆಕೋಸು ಪತ್ರೊಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಮಧ್ಯಮ ಗಾತ್ರದ ಎಲೆಕೋಸು
  2. 1 ಕಪ್ ದೋಸೆ ಅಕ್ಕಿ
  3. 2 - 4 ಒಣ ಮೆಣಸಿನಕಾಯಿ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಜೀರಿಗೆ
  6. 1/4 ಕಪ್ ತೆಂಗಿನ ತುರಿ
  7. 1 ದೊಡ್ಡ ನೆಲ್ಲಿಕಾಯಿ ಗಾತ್ರದ ಬೆಲ್ಲ
  8. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಉದ್ದಿನಬೇಳೆ
  3. 1 ಒಣ ಮೆಣಸಿನ ಕಾಯಿ
  4. ಚಿಟಿಕೆ ಅರಿಶಿನ
  5. ಚಿಟಿಕೆ ಇಂಗು
  6. 5 - 6 ಕರಿಬೇವಿನ ಎಲೆ
  7. 1/4 ಕಪ್ ತೆಂಗಿನ ತುರಿ
  8. 2 ಟೀಸ್ಪೂನ್ ಪುಡಿ ಮಾಡಿದ ಬೆಲ್ಲ
  9. ಸ್ವಲ್ಪ ಕೊತ್ತಂಬರಿ ಸೊಪ್ಪು
  10. 2 ಟೇಬಲ್ ಚಮಚ ಅಡುಗೆ ಎಣ್ಣೆ

ಎಲೆಕೋಸು ಪತ್ರೊಡೆ ಮಾಡುವ ವಿಧಾನ:

  1. ಅಕ್ಕಿಯನ್ನು ಕನಿಷ್ಟ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು. 
  2. ಕೋಸನ್ನು ಸಣ್ಣಗೆ ಹೆಚ್ಚಿ, ಹತ್ತು ನಿಮಿಷ ನೀರಲ್ಲಿ ನೆನೆಸಿ, ನೀರು ಬಗ್ಗಿಸಿ ಪಕ್ಕಕ್ಕಿಡಿ. 
  3. ಅಕ್ಕಿ ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಕೊತ್ತಂಬರಿ ಬೀಜ, ಜೀರಿಗೆ, ಒಣ ಮೆಣಸಿನಕಾಯಿ, ತೆಂಗಿನತುರಿ, ಬೆಲ್ಲ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ಸ್ವಲ್ಪ ನುಣ್ಣಗೆ ರುಬ್ಬಬೇಕು. 
  5. ಹಿಟ್ಟು ದೋಸೆ ಹಿಟ್ಟಿನಷ್ಟು ದಪ್ಪವಿರಲಿ.
  6. ಆಮೇಲೆ ಹಿಟ್ಟನ್ನು ಕತ್ತರಿಸಿದ ಎಲೆಕೋಸಿಗೆ ಹಾಕಿ, ಕಲಸಿ, 30 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ. 
  7. ಇಡ್ಲಿ ತಟ್ಟೆಯಲ್ಲಿಟ್ಟು ಬೇಯಿಸಿದರೆ ಕಡಿಮೆ ಸಮಯ ಸಾಕಾಗುವುದು. 
  8. ಬೆಂದ ನಂತರ ಪುಡಿ ಮಾಡಿಕೊಳ್ಳಿ. 
  9. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಮೆಣಸಿನ ಕಾಯಿ, ಕರಿಬೇವಿನ ಎಲೆ, ಅರಿಶಿನ ಮತ್ತು ಇಂಗಿನ ಒಗ್ಗರಣೆ ಮಾಡಿಕೊಳ್ಳಿ. 
  10. ಪುಡಿಮಾಡಿದ ಪತ್ರೊಡೆ ಹಾಕಿ ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಮಗುಚಿ. 
  11. ಕೊನೆಯಲ್ಲಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಮತ್ತು ಪುಡಿ ಮಾಡಿದ ಬೆಲ್ಲ ಹಾಕಿ, ಚೆನ್ನಾಗಿ ಮಗುಚಿ ಬಡಿಸಿ.

ಶುಕ್ರವಾರ, ಜುಲೈ 10, 2020

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ


ಕ್ಯಾರಟ್ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 5 - 6 ಬೆಳ್ಳುಳ್ಳಿ ಗಡ್ಡೆ ಅಥವಾ 3/4 ಕಪ್ ಸಿಪ್ಪೆ ತೆಗೆದ ಬೆಳ್ಳುಳ್ಳಿ
  2. 1 ನಿಂಬೆಹಣ್ಣು ಗಾತ್ರದ ಹುಣಿಸೇಹಣ್ಣು
  3. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  4. 3 - 4 ಟೀಸ್ಪೂನ್ ಅಚ್ಚಖಾರದ ಪುಡಿ
  5. 1/4 ಟೀಸ್ಪೂನ್  ಇಂಗು
  6. 1/4 ಟೀಸ್ಪೂನ್ ಅರಿಶಿನ
  7. 1 ಟೀಸ್ಪೂನ್ ಸಾಸಿವೆ
  8. ಸ್ವಲ್ಪ ಕರಿಬೇವು
  9. 2 - 4 ಟೇಬಲ್ ಚಮಚ ಎಣ್ಣೆ
  10. 2 ಟೀಸ್ಪೂನ್ ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಮೆಂತೆ
  2. 1 ಟೇಬಲ್ ಚಮಚ ಜೀರಿಗೆ
  3. 2 ಟೇಬಲ್ ಚಮಚ ಕೊತ್ತಂಬರಿ ಬೀಜ

ದಿಢೀರ್ ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಬೆಳ್ಳುಳ್ಳಿ ಸಿಪ್ಪೆ ತೆಗೆದಿಟ್ಟುಕೊಳ್ಳಿ.  
  2. ಒಂದು ಬಾಣಲೆಯಲ್ಲಿ ಜೀರಿಗೆ, ಕೊತ್ತಂಬರಿ ಬೀಜ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  3. ನಂತ್ರ ಅದೇ ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ.
  4. ಸಾಸಿವೆ ಸೇರಿಸಿ. 
  5. ಸಾಸಿವೆ ಸಿಡಿದ ಮೇಲೆ, ಇಂಗು ಮತ್ತು ಕರಿಬೇವು ಹಾಕಿ. 
  6. ಆಮೇಲೆ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ. 
  7. ಹುಣಿಸೆಹಣ್ಣಿನ ರಸ ಸೇರಿಸಿ. 
  8. ಅಚ್ಚಖಾರದ ಪುಡಿ, ಉಪ್ಪು ಮತ್ತು ಅರಿಶಿನ ಸೇರಿಸಿ. ಒಂದೆರಡು ನಿಮಿಷ ಕುದಿಸಿ. 
  9. ಕೊನೆಯಲ್ಲಿ ಉಪ್ಪಿನಕಾಯಿ ಮಸಾಲೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಗುಚಿ. 
  10. ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಬೆಲ್ಲ ಸೇರಿಸಬಹುದು .  
  11. ರುಚಿಕರ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಫ್ರಿಡ್ಜ್ ನಲ್ಲಿ ಒಂದೆರಡು ತಿಂಗಳು ಇಡಬಹುದು. 

ಬುಧವಾರ, ಜುಲೈ 8, 2020

Rave shavige recipe in Kannada | ರವೆ ಶಾವಿಗೆ ಮಾಡುವ ವಿಧಾನ

Rave shavige recipe in Kannada | ರವೆ ಶಾವಿಗೆ ಮಾಡುವ ವಿಧಾನ 


ರವೇ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ರವೇ (ಮೀಡಿಯಂ ಅಥವಾ ಸಣ್ಣ ರವೇ)
  2. 1 ಕಪ್ ನೀರು
  3. 1/2 ಟೀಸ್ಪೂನ್ ತುಪ್ಪ 
  4. ಉಪ್ಪು ರುಚಿಗೆ ತಕ್ಕಷ್ಟು

ರವೇ ಶಾವಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ರವೆಯನ್ನು ಹಾಕಿ, ಚೆನ್ನಾಗಿ ಮಗುಚಿ ಬೇಯಿಸಿ. 
  3. ಗಟ್ಟಿಯಾಗುತ್ತಾ ಬಂದಾಗ,  ಸ್ಟವ್ ಆಫ್ ಮಾಡಿ. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಹೆಚ್ಚಿನ ಬಿಸಿ ಆರಿದ ಮೇಲೆ, ಚೆನ್ನಾಗಿ ನಾದಿ.
  5. ತುಂಬ ಗಟ್ಟಿ ಎನಿಸಿದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಗಂಟಿಲ್ಲದಂತೆ  ಹಿಟ್ಟನ್ನು ತಯಾರಿಸಿಕೊಳ್ಳಿ. 
  6. ಉದ್ದುದ್ದ ಉಂಡೆಗಳನ್ನು ಮಾಡಿ, ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. ಎಣ್ಣೆಯ ಬದಲು, ಸ್ವಲ್ಪ ತೆಂಗಿನತುರಿ ಬೇಕಾದರೂ ಹಾಕಬಹುದು. 
  7. ಸೆಕೆಯಲ್ಲಿ (ಆವಿಯಲ್ಲಿ) 5 - 6 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ. 


ಶನಿವಾರ, ಜುಲೈ 4, 2020

Sabsige soppu dose recipe in Kannada | ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ

Sabsige soppu dose recipe in Kannada | ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ


ಸಬ್ಬಸ್ಸಿಗೆ ಸೊಪ್ಪು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1/4 ಕಪ್ ಉದ್ದಿನ ಬೇಳೆ
  3. 1/2 ಕಪ್ ತೆಳು ಅವಲಕ್ಕಿ ಅಥವಾ 1/4 ಕಪ್ ಗಟ್ಟಿ ಅವಲಕ್ಕಿ 
  4. 1 ಟೀಸ್ಪೂನ್ ಮೆಂತ್ಯ
  5. ಉಪ್ಪು ರುಚಿಗೆ ತಕ್ಕಷ್ಟು
  6. 2 ಟೀಸ್ಪೂನ್ ಎಣ್ಣೆ
  7. 1/2 ಟೀಸ್ಪೂನ್ ಸಾಸಿವೆ
  8. 1/2 ಟೀಸ್ಪೂನ್ ಜೀರಿಗೆ
  9. 1-2 ಹಸಿಮೆಣಸಿನಕಾಯಿ
  10. 1 ಈರುಳ್ಳಿ
  11. 1 ಸಣ್ಣ ಕಟ್ಟು ಸಬ್ಬಸ್ಸಿಗೆ ಸೊಪ್ಪು
  12. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು

ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ :

  1. ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿ. ತೆಳು ಅವಲಕ್ಕಿ ಆದಲ್ಲಿ ನೆನೆಸುವುದು ಬೇಡ. 
  3. ಅಕ್ಕಿ ಮತ್ತು ಬೇಳೆ ನೆನೆಸಿದ ನಂತ್ರ, ನೀರು ಬಗ್ಗಿಸಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ನುಣ್ಣಗೆ ರುಬ್ಬಿರಿ.
  4. ಕೊನೆಯಲ್ಲಿ ನೆನೆಸಿದ ಅವಲಕ್ಕಿ ಸೇರಿಸಿ ನುಣ್ಣಗೆ ಅರೆಯಿರಿ. 
  5. ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
  6. ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
  7. ಆಮೇಲೆ ಉಪ್ಪು ಸೇರಿಸಿ ಕಲಸಿ. 
  8. ಬಾಣಲೆಯಲ್ಲಿ ಎರಡು ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿ. 
  9. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
  10. ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಸಬ್ಬಸ್ಸಿಗೆ ಸೊಪ್ಪು ಸೇರಿಸಿ, ಹುರಿದು, ಬಿಸಿ ಆರಿದ ನಂತ್ರ ಹಿಟ್ಟಿಗೆ ಸೇರಿಸಿ. 
  11. ದೋಸೆ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಒಂದು ಸೌಟು ಹಿಟ್ಟನ್ನು ಹಾಕಿ, ಸ್ವಲ್ಪ ತೆಳ್ಳಗೆ ಮಾಡಿ. ಮುಚ್ಚಳ ಮುಚ್ಚಿ. 
  12. ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಕಾಯಿಸಿ. 
  13. ಬೇಕಾದಲ್ಲಿ ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.


ಮಂಗಳವಾರ, ಜೂನ್ 30, 2020

Bele paddu recipe in kannada | ಬೇಳೆ ಪಡ್ಡು ಮಾಡುವ ವಿಧಾನ

Bele paddu recipe in kannada | ಬೇಳೆ ಪಡ್ಡು ಮಾಡುವ ವಿಧಾನ


ಬೇಳೆ ದೋಸೆ ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ದೋಸೆ ಅಕ್ಕಿ
  2. 2 ಟೇಬಲ್ ಚಮಚ ಉದ್ದಿನ ಬೇಳೆ
  3. 2 ಟೇಬಲ್ ಚಮಚ ತೊಗರಿ ಬೇಳೆ 
  4. 2 ಟೇಬಲ್ ಚಮಚ ಹೆಸರು ಬೇಳೆ 
  5. 2 ಟೇಬಲ್ ಚಮಚ ಕಡ್ಲೇ ಬೇಳೆ 
  6. 2 ಟೇಬಲ್ ಚಮಚ ಮಸೂರ್ ಬೇಳೆ 
  7. 1/4 ಕಪ್ ಅವಲಕ್ಕಿ
  8. 2 - 4 ಒಣಮೆಣಸಿನಕಾಯಿ
  9. ಸಣ್ಣ ತುಂಡು ಶುಂಠಿ 
  10. 1/2 ಟೀಸ್ಪೂನ್ ಜೀರಿಗೆ 
  11. 1 ಟೀಸ್ಪೂನ್ ಕೊತ್ತಂಬರಿ ಬೀಜ
  12. 1 ಈರುಳ್ಳಿ
  13. ಸ್ವಲ್ಪ ಕರಿಬೇವಿನಸೊಪ್ಪು
  14. ಸ್ವಲ್ಪ ಕೊತ್ತಂಬರಿ ಸೊಪ್ಪು
  15. ಉಪ್ಪು ರುಚಿಗೆ ತಕ್ಕಷ್ಟು.

ಬೇಳೆ ಪಡ್ಡು ಮಾಡುವ ವಿಧಾನ:

  1. ಅಕ್ಕಿ ಮತ್ತು ಬೇಳೆಗಳನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು 10 ನಿಮಿಷ ನೆನೆಯಲು ಬಿಡಿ.
  3. 4 - 5 ಗಂಟೆಗಳ ನಂತರ ನೀರು ಬಗ್ಗಿಸಿ ಅಕ್ಕಿ ಮತ್ತು ಬೇಳೆಗಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. ಒಣಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಕೊತ್ತಂಬರಿ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ. 
  5. ನೆನೆಸಿದ ಅವಲಕ್ಕಿಯನ್ನು ಸೇರಿಸಿ ಅರೆಯಿರಿ. 
  6. ಅರೆದ ಹಿಟ್ಟನ್ನು ಪಾತ್ರೆಗೆ ಹಾಕಿ, 7 - 8 ಘಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ. 
  7. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  8. ಚೆನ್ನಾಗಿ ಕಲಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ಉದ್ದಿನ ದೋಸೆ ಹಿಟ್ಟಿನ  ದೋಸೆ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. 
  9. ಗುಳಿಯಪ್ಪ ಅಥವಾ ಪಡ್ಡು ಪ್ಯಾನ್ ಬಿಸಿ ಮಾಡಿ. ಸ್ವಲ್ಪ ಎಣ್ಣೆ ಹಾಕಿ, ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿ.
  10.  ಮೇಲಿನಿಂದ ಎಣ್ಣೆ ಹಾಕಿ. ತಿರುವಿ ಹಾಕಿ, ಇನ್ನೊಂದು ಬದಿಯೂ ಕಾಯಿಸಿ. 
  11. ಬಿಸಿ ಬಿಸಿ ಪಡ್ಡುವನ್ನು ಕಾಯಿ ಚಟ್ನಿಯೊಂದಿಗೆ ಬಡಿಸಿ.

ಬುಧವಾರ, ಜೂನ್ 24, 2020

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ

Mavinakayi gulamba recipe in Kannada

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ 

ಮಾವಿನಕಾಯಿ ಗುಳಂಬಾ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ದೊಡ್ಡ ಹುಳಿ ಇಲ್ಲದ ಮಾವಿನಕಾಯಿ
  2. 1 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
  3. 1 ಟೀಸ್ಪೂನ್ ತುಪ್ಪ
  4. 2 - 3 ಏಲಕ್ಕಿ 
  5. 2 ಲವಂಗ (ಬೇಕಾದಲ್ಲಿ)
  6. ಚಿಟಿಕೆ ಕೇಸರಿ (ಬೇಕಾದಲ್ಲಿ)

ಮಾವಿನಕಾಯಿ ಗುಳಂಬಾ ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಮಾವಿನಕಾಯಿ ತುರಿಯನ್ನು ಅಳತೆ ಮಾಡಿ. 
  2. ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಜಜ್ಜಿಟ್ಟು ಕೊಳ್ಳಿ. 
  3. ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಮಾವಿನಕಾಯಿ ಮೆತ್ತಗಾಗುವವರೆಗೆ ಹುರಿದು ಕೊಳ್ಳಿ. 
  4. ನಂತರ ಸಕ್ಕರೆ ಸೇರಿಸಿ. ಒಂದು ಕಪ್ ತುರಿಗೆ ಒಂದು ಕಪ್ ಸಕ್ಕರೆ ಬೇಕಾಗುವುದು. ನಾನು ಸ್ವಲ್ಪ ಕಡಿಮೆ ಸೇರಿಸಿದ್ದೇನೆ. 
  5. ಮಧ್ಯಮ ಉರಿಯಲ್ಲಿ ಮಗುಚಿ. ಮೊದಲಿಗೆ ಸಕ್ಕರೆ ಕರಗಿ ನೀರಾಗುವುದು. 
  6. ಆ ಸಮಯದಲ್ಲಿ ಜಜ್ಜಿದ ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಸೇರಿಸಿ. 
  7. ಎರಡೆಳೆ ಪಾಕ ಬರುವವರೆಗೆ ಮಗುಚಿ. (ಪಾಕ ಬಂದ ಮೇಲೂ ನೀರು ನೀರಾಗಿರುವುದು) 
  8. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುವುದು.  
  9. ಮಾವಿನಕಾಯಿ ಗುಳಂಬಾ ಸವಿಯಲು ಸಿದ್ಧ. ಚಪಾತಿ, ದೋಸೆ, ರೊಟ್ಟಿ ಮತ್ತು ಬ್ರೆಡ್ ನೊಂದಿಗೆ ಬಡಿಸಿ. ಫ್ರಿಡ್ಜ್ ನಲ್ಲಿ ಸುಮಾರು  ದಿನ ಇಡಬಹುದು. 
Related Posts Plugin for WordPress, Blogger...