Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ
ಕ್ಯಾರಟ್ ಉಪ್ಪಿನಕಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 5 - 6 ಬೆಳ್ಳುಳ್ಳಿ ಗಡ್ಡೆ ಅಥವಾ 3/4 ಕಪ್ ಸಿಪ್ಪೆ ತೆಗೆದ ಬೆಳ್ಳುಳ್ಳಿ
- 1 ನಿಂಬೆಹಣ್ಣು ಗಾತ್ರದ ಹುಣಿಸೇಹಣ್ಣು
- 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
- 3 - 4 ಟೀಸ್ಪೂನ್ ಅಚ್ಚಖಾರದ ಪುಡಿ
- 1/4 ಟೀಸ್ಪೂನ್ ಇಂಗು
- 1/4 ಟೀಸ್ಪೂನ್ ಅರಿಶಿನ
- 1 ಟೀಸ್ಪೂನ್ ಸಾಸಿವೆ
- ಸ್ವಲ್ಪ ಕರಿಬೇವು
- 2 - 4 ಟೇಬಲ್ ಚಮಚ ಎಣ್ಣೆ
- 2 ಟೀಸ್ಪೂನ್ ಉಪ್ಪು
ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಟೀಸ್ಪೂನ್ ಮೆಂತೆ
- 1 ಟೇಬಲ್ ಚಮಚ ಜೀರಿಗೆ
- 2 ಟೇಬಲ್ ಚಮಚ ಕೊತ್ತಂಬರಿ ಬೀಜ
ದಿಢೀರ್ ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ:
- ಬೆಳ್ಳುಳ್ಳಿ ಸಿಪ್ಪೆ ತೆಗೆದಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಜೀರಿಗೆ, ಕೊತ್ತಂಬರಿ ಬೀಜ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
- ನಂತ್ರ ಅದೇ ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ.
- ಸಾಸಿವೆ ಸೇರಿಸಿ.
- ಸಾಸಿವೆ ಸಿಡಿದ ಮೇಲೆ, ಇಂಗು ಮತ್ತು ಕರಿಬೇವು ಹಾಕಿ.
- ಆಮೇಲೆ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ.
- ಹುಣಿಸೆಹಣ್ಣಿನ ರಸ ಸೇರಿಸಿ.
- ಅಚ್ಚಖಾರದ ಪುಡಿ, ಉಪ್ಪು ಮತ್ತು ಅರಿಶಿನ ಸೇರಿಸಿ. ಒಂದೆರಡು ನಿಮಿಷ ಕುದಿಸಿ.
- ಕೊನೆಯಲ್ಲಿ ಉಪ್ಪಿನಕಾಯಿ ಮಸಾಲೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಗುಚಿ.
- ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಬೆಲ್ಲ ಸೇರಿಸಬಹುದು .
- ರುಚಿಕರ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಫ್ರಿಡ್ಜ್ ನಲ್ಲಿ ಒಂದೆರಡು ತಿಂಗಳು ಇಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ