Rave shavige recipe in Kannada | ರವೆ ಶಾವಿಗೆ ಮಾಡುವ ವಿಧಾನ
ರವೇ ಶಾವಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ರವೇ (ಮೀಡಿಯಂ ಅಥವಾ ಸಣ್ಣ ರವೇ)
- 1 ಕಪ್ ನೀರು
- 1/2 ಟೀಸ್ಪೂನ್ ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು
ರವೇ ಶಾವಿಗೆ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಪ್ರಾರಂಭಿಸಿದ ನಂತರ ರವೆಯನ್ನು ಹಾಕಿ, ಚೆನ್ನಾಗಿ ಮಗುಚಿ ಬೇಯಿಸಿ.
- ಗಟ್ಟಿಯಾಗುತ್ತಾ ಬಂದಾಗ, ಸ್ಟವ್ ಆಫ್ ಮಾಡಿ. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ.
- ಹೆಚ್ಚಿನ ಬಿಸಿ ಆರಿದ ಮೇಲೆ, ಚೆನ್ನಾಗಿ ನಾದಿ.
- ತುಂಬ ಗಟ್ಟಿ ಎನಿಸಿದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಗಂಟಿಲ್ಲದಂತೆ ಹಿಟ್ಟನ್ನು ತಯಾರಿಸಿಕೊಳ್ಳಿ.
- ಉದ್ದುದ್ದ ಉಂಡೆಗಳನ್ನು ಮಾಡಿ, ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. ಎಣ್ಣೆಯ ಬದಲು, ಸ್ವಲ್ಪ ತೆಂಗಿನತುರಿ ಬೇಕಾದರೂ ಹಾಕಬಹುದು.
- ಸೆಕೆಯಲ್ಲಿ (ಆವಿಯಲ್ಲಿ) 5 - 6 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ