Mushti kadubu recipe in Kannada | ಮುಷ್ಟಿ ಕಡುಬು ಮಾಡುವ ವಿಧಾನ
ಮುಷ್ಟಿ ಕಡುಬು ವಿಡಿಯೋ
ಸಿಹಿ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ ಹಿಟ್ಟು
- 1/2 ಕಪ್ ನೀರು
- 1/2 ಕಪ್ ಬೆಲ್ಲ
- 1/4 ಕಪ್ ತೆಂಗಿನತುರಿ
- 1 ಚಮಚ ತುಪ್ಪ
- 1/4 ಚಮಚ ಉಪ್ಪು
- ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಖಾರ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ ಹಿಟ್ಟು
- 3/4 ಕಪ್ ನೀರು (1/2 ಕಪ್ + 1/4 ಕಪ್)
- 1/4 ಕಪ್ ತೆಂಗಿನತುರಿ
- 1 ಚಮಚ ತುಪ್ಪ
- 1/2 ಚಮಚ ಸಾಸಿವೆ
- 1/2 ಚಮಚ ಕಡ್ಲೆಬೇಳೆ
- 1/2 ಚಮಚ ಉದ್ದಿನಬೇಳೆ
- 1/2 ಒಣಮೆಣಸು
- 1 ಚಮಚ ಕತ್ತರಿಸಿದ ಕರಿಬೇವಿನ ಸೊಪ್ಪು
- 1/2 ಚಮಚ ಕತ್ತರಿಸಿದ ಶುಂಠಿ
- 1/2 ಚಮಚ ಕತ್ತರಿಸಿದ ಹಸಿಮೆಣಸಿನಕಾಯಿ
- 1/2 ಚಮಚ ಉಪ್ಪು
ಸಿಹಿ ಮುಷ್ಟಿ ಕಡುಬು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಬೆಲ್ಲ ಮತ್ತು ನೀರು ಕುದಿಯಲು ಇಡಿ.
- ಅದಕ್ಕೆ ತೆಂಗಿನತುರಿ, ಉಪ್ಪು, ಏಲಕ್ಕಿ ಪುಡಿ ಮತ್ತು ತುಪ್ಪ ಸೇರಿಸಿ.
- ಕುದಿಯಲು ಶುರುವಾದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ.
- ಚೆನ್ನಾಗಿ ಮಗುಚಿ, ಸ್ಟವ್ ಆಫ್ ಮಾಡಿ.
- ಬಿಸಿ ಕಡಿಮೆ ಆದ ಮೇಲೆ ಮುಷ್ಟಿಯಲ್ಲಿ ಕಡುಬುಗಳನ್ನು ಮಾಡಿ.
- 13 - 15 ನಿಮಿಷ ಆವಿಯಲ್ಲಿ ಬೇಯಿಸಿ. ಸವಿದು ಆನಂದಿಸಿ.
ಖಾರ ಮುಷ್ಟಿ ಕಡುಬು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ.
- ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ.
- ಕತ್ತರಿಸಿದ ಕರಿಬೇವಿನ ಸೊಪ್ಪು, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ, ಹುರಿಯಿರಿ.
- ಉರಿ ಕಡಿಮೆ ಮಾಡಿ, ತೆಂಗಿನತುರಿ ಮತ್ತು ಉಪ್ಪು ಸೇರಿಸಿ.
- ಅರ್ಧ ಕಪ್ ನೀರು ಸೇರಿಸಿ, ಕುದಿಯಲು ಇಡಿ.
- ಕುದಿಯಲು ಶುರುವಾದ ಕೂಡಲೇ ಅಕ್ಕಿ ಹಿಟ್ಟನ್ನು ಸೇರಿಸಿ.
- ಚೆನ್ನಾಗಿ ಮಗುಚಿ, ಉಳಿದ ಕಾಲು ಕಪ್ ನೀರು ಹಾಕಿ ಪುನಃ ಮಗುಚಿ.
- ಸ್ಟವ್ ಆಫ್ ಮಾಡಿ.
- ಬಿಸಿ ಕಡಿಮೆ ಆದ ಮೇಲೆ ಮುಷ್ಟಿಯಲ್ಲಿ ಕಡುಬುಗಳನ್ನು ಮಾಡಿ.
- 13 - 15 ನಿಮಿಷ ಆವಿಯಲ್ಲಿ ಬೇಯಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ