Rave halbai recipe in Kannada | ರವೆ ಹಾಲ್ಬಾಯಿ ಮಾಡುವ ವಿಧಾನ
ರವೆ ಹಾಲ್ಬಾಯಿ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ರವೆ
- 1/2 ಕಪ್ ತೆಂಗಿನ ತುರಿ
- 1/2 ಕಪ್ ಬೆಲ್ಲ
- 2 ಟೇಬಲ್ ಸ್ಪೂನ್ ತುಪ್ಪ
- 2 ಏಲಕ್ಕಿ
- 1.25 ಕಪ್ ನೀರು
ರವೆ ಹಾಲ್ಬಾಯಿ ಮಾಡುವ ವಿಧಾನ:
- ಮಿಕ್ಸಿ ಜಾರಿನಲ್ಲಿ ತೆಂಗಿನತುರಿ ತೆಗೆದುಕೊಳ್ಳಿ.
- ರವೆ ಮತ್ತು ಏಲಕ್ಕಿ ಸೇರಿಸಿ.
- ಒಂದು ಕಪ್ ನೀರು ಹಾಕಿ ಸ್ವಲ್ಪ ತರಿತರಿಯಾಗಿ ಅರೆದುಕೊಳ್ಳಿ.
- ಬೆಲ್ಲಕ್ಕೆ 1/4 ಕಪ್ ನೀರು ಹಾಕಿ ಕರಗಲು ಬಿಡಿ. ಇದನ್ನು ನಾವು ಸ್ವಲ್ಪ ಸಮಯದ ನಂತರ ಉಪಯೋಗಿಸುತ್ತೇವೆ.
- ಒಂದು ದಪ್ಪ ತಳದ ಬಾಣಲೆಗೆ ಅರೆದ ಹಿಟ್ಟು ಮತ್ತು ಬೆಲ್ಲದ ನೀರು ಹಾಕಿ.
- ಸ್ಟವ್ ಆನ್ ಮಾಡಿ, ಸ್ಟವ್ ಮೇಲಿಟ್ಟು ಮಗುಚಿ.
- ಸ್ವಲ್ಪ ಗಟ್ಟಿಯಾದ ಕೂಡಲೇ ತುಪ್ಪ ಸೇರಿಸಿ. ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ. ಸುಮಾರು ಹದಿನೈದು ನಿಮಿಷ ಮಗುಚಬೇಕಾಗುತ್ತದೆ.
- ಸ್ವಲ್ಪ ಸಮಯದ ನಂತರ ಹಾಲುಬಾಯಿ ತಳ ಬಿಡಲು ಪ್ರಾರಂಭಿಸುತ್ತದೆ ಮತ್ತು ಹೊಳತೆ ಬರುತ್ತದೆ.
- ಆಗ ಹಾಲುಬಾಯಿಯನ್ನು ತುಪ್ಪ ಸವರಿದ ಪ್ಲೇಟ್ ಗೆ ಸುರಿಯಿರಿ.
- ಬಿಸಿ ಆರಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ, ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ