ಮಂಗಳವಾರ, ಜೂನ್ 30, 2020

Bele paddu recipe in kannada | ಬೇಳೆ ಪಡ್ಡು ಮಾಡುವ ವಿಧಾನ

Bele paddu recipe in kannada | ಬೇಳೆ ಪಡ್ಡು ಮಾಡುವ ವಿಧಾನ


ಬೇಳೆ ದೋಸೆ ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ದೋಸೆ ಅಕ್ಕಿ
  2. 2 ಟೇಬಲ್ ಚಮಚ ಉದ್ದಿನ ಬೇಳೆ
  3. 2 ಟೇಬಲ್ ಚಮಚ ತೊಗರಿ ಬೇಳೆ 
  4. 2 ಟೇಬಲ್ ಚಮಚ ಹೆಸರು ಬೇಳೆ 
  5. 2 ಟೇಬಲ್ ಚಮಚ ಕಡ್ಲೇ ಬೇಳೆ 
  6. 2 ಟೇಬಲ್ ಚಮಚ ಮಸೂರ್ ಬೇಳೆ 
  7. 1/4 ಕಪ್ ಅವಲಕ್ಕಿ
  8. 2 - 4 ಒಣಮೆಣಸಿನಕಾಯಿ
  9. ಸಣ್ಣ ತುಂಡು ಶುಂಠಿ 
  10. 1/2 ಟೀಸ್ಪೂನ್ ಜೀರಿಗೆ 
  11. 1 ಟೀಸ್ಪೂನ್ ಕೊತ್ತಂಬರಿ ಬೀಜ
  12. 1 ಈರುಳ್ಳಿ
  13. ಸ್ವಲ್ಪ ಕರಿಬೇವಿನಸೊಪ್ಪು
  14. ಸ್ವಲ್ಪ ಕೊತ್ತಂಬರಿ ಸೊಪ್ಪು
  15. ಉಪ್ಪು ರುಚಿಗೆ ತಕ್ಕಷ್ಟು.

ಬೇಳೆ ಪಡ್ಡು ಮಾಡುವ ವಿಧಾನ:

  1. ಅಕ್ಕಿ ಮತ್ತು ಬೇಳೆಗಳನ್ನು ತೊಳೆದು ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು 10 ನಿಮಿಷ ನೆನೆಯಲು ಬಿಡಿ.
  3. 4 - 5 ಗಂಟೆಗಳ ನಂತರ ನೀರು ಬಗ್ಗಿಸಿ ಅಕ್ಕಿ ಮತ್ತು ಬೇಳೆಗಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. ಒಣಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಕೊತ್ತಂಬರಿ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ. 
  5. ನೆನೆಸಿದ ಅವಲಕ್ಕಿಯನ್ನು ಸೇರಿಸಿ ಅರೆಯಿರಿ. 
  6. ಅರೆದ ಹಿಟ್ಟನ್ನು ಪಾತ್ರೆಗೆ ಹಾಕಿ, 7 - 8 ಘಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ. 
  7. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  8. ಚೆನ್ನಾಗಿ ಕಲಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ಉದ್ದಿನ ದೋಸೆ ಹಿಟ್ಟಿನ  ದೋಸೆ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. 
  9. ಗುಳಿಯಪ್ಪ ಅಥವಾ ಪಡ್ಡು ಪ್ಯಾನ್ ಬಿಸಿ ಮಾಡಿ. ಸ್ವಲ್ಪ ಎಣ್ಣೆ ಹಾಕಿ, ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿ.
  10.  ಮೇಲಿನಿಂದ ಎಣ್ಣೆ ಹಾಕಿ. ತಿರುವಿ ಹಾಕಿ, ಇನ್ನೊಂದು ಬದಿಯೂ ಕಾಯಿಸಿ. 
  11. ಬಿಸಿ ಬಿಸಿ ಪಡ್ಡುವನ್ನು ಕಾಯಿ ಚಟ್ನಿಯೊಂದಿಗೆ ಬಡಿಸಿ.

ಬುಧವಾರ, ಜೂನ್ 24, 2020

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ

Mavinakayi gulamba recipe in Kannada

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ 

ಮಾವಿನಕಾಯಿ ಗುಳಂಬಾ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ದೊಡ್ಡ ಹುಳಿ ಇಲ್ಲದ ಮಾವಿನಕಾಯಿ
  2. 1 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
  3. 1 ಟೀಸ್ಪೂನ್ ತುಪ್ಪ
  4. 2 - 3 ಏಲಕ್ಕಿ 
  5. 2 ಲವಂಗ (ಬೇಕಾದಲ್ಲಿ)
  6. ಚಿಟಿಕೆ ಕೇಸರಿ (ಬೇಕಾದಲ್ಲಿ)

ಮಾವಿನಕಾಯಿ ಗುಳಂಬಾ ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಮಾವಿನಕಾಯಿ ತುರಿಯನ್ನು ಅಳತೆ ಮಾಡಿ. 
  2. ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಜಜ್ಜಿಟ್ಟು ಕೊಳ್ಳಿ. 
  3. ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಮಾವಿನಕಾಯಿ ಮೆತ್ತಗಾಗುವವರೆಗೆ ಹುರಿದು ಕೊಳ್ಳಿ. 
  4. ನಂತರ ಸಕ್ಕರೆ ಸೇರಿಸಿ. ಒಂದು ಕಪ್ ತುರಿಗೆ ಒಂದು ಕಪ್ ಸಕ್ಕರೆ ಬೇಕಾಗುವುದು. ನಾನು ಸ್ವಲ್ಪ ಕಡಿಮೆ ಸೇರಿಸಿದ್ದೇನೆ. 
  5. ಮಧ್ಯಮ ಉರಿಯಲ್ಲಿ ಮಗುಚಿ. ಮೊದಲಿಗೆ ಸಕ್ಕರೆ ಕರಗಿ ನೀರಾಗುವುದು. 
  6. ಆ ಸಮಯದಲ್ಲಿ ಜಜ್ಜಿದ ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಸೇರಿಸಿ. 
  7. ಎರಡೆಳೆ ಪಾಕ ಬರುವವರೆಗೆ ಮಗುಚಿ. (ಪಾಕ ಬಂದ ಮೇಲೂ ನೀರು ನೀರಾಗಿರುವುದು) 
  8. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುವುದು.  
  9. ಮಾವಿನಕಾಯಿ ಗುಳಂಬಾ ಸವಿಯಲು ಸಿದ್ಧ. ಚಪಾತಿ, ದೋಸೆ, ರೊಟ್ಟಿ ಮತ್ತು ಬ್ರೆಡ್ ನೊಂದಿಗೆ ಬಡಿಸಿ. ಫ್ರಿಡ್ಜ್ ನಲ್ಲಿ ಸುಮಾರು  ದಿನ ಇಡಬಹುದು. 

ಶುಕ್ರವಾರ, ಜೂನ್ 19, 2020

Alugadde saaru recipe in Kannada | ಆಲೂಗಡ್ಡೆ ಸಾರು ಮಾಡುವ ವಿಧಾನ

Alugadde saaru recipe in Kannada

Alugadde saaru recipe in Kannada | ಆಲೂಗಡ್ಡೆ ಸಾರು ಮಾಡುವ ವಿಧಾನ

ಆಲೂಗಡ್ಡೆ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಆಲೂಗಡ್ಡೆ
  2. 1 ಚಮಚ ಹುಣಿಸೆರಸ
  3. 1/2 ಚಮಚ ಬೆಲ್ಲ
  4. 1- 2 ಹಸಿರು ಮೆಣಸಿನಕಾಯಿ
  5. ದೊಡ್ಡ ಚಿಟಿಕೆ ಇಂಗು
  6. ದೊಡ್ಡ ಚಿಟಿಕೆ ಅರಿಶಿನ
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣಮೆಣಸಿನಕಾಯಿ
  3. ದೊಡ್ಡ ಚಿಟಿಕೆ ಇಂಗು
  4. 4-5 ಕರಿಬೇವಿನ ಎಲೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ

ಆಲೂಗಡ್ಡೆ ಸಾರು ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು, ತೊಳೆದು ಕತ್ತರಿಸಿ.
  2. ಕತ್ತರಿಸಿದ ಆಲೂಗಡ್ದೆಯನ್ನು ಸುಮಾರು ಒಂದು ಲೋಟದಷ್ಟು ನೀರು ಸೇರಿಸಿ, ಮೆತ್ತಗೆ ಬೇಯಿಸಿಕೊಳ್ಳಿ. 
  3. ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮಸಿದು ಕೊಳ್ಳಿ  (ಮ್ಯಾಶ್ ಮಾಡಿಕೊಳ್ಳಿ)
  4. ಆಮೇಲೆ ಅದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  5. ಉಪ್ಪು, ಹುಣಿಸೆರಸ ಮತ್ತು ಬೆಲ್ಲವನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ. 
  6. ಇಂಗು ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮಗುಚಿ, ಕುದಿಯಲು ಇಡಿ.
  7. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಸಾಸಿವೆ, ಕರಿಬೇವು, ಇಂಗು ಮತ್ತು ಒಣಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿ. 
  8. ಕುದಿಸಿದ ಸಾರಿಗೆ ಒಗ್ಗರಣೆ ಹಾಕಿ, ಬಿಸಿ ಅನ್ನದೊಂದಿಗೆ ಬಡಿಸಿ. 

ಗುರುವಾರ, ಜೂನ್ 11, 2020

Kaju katli recipe in Kannada | ಗೋಡಂಬಿ ಬರ್ಫಿ ಮಾಡುವ ವಿಧಾನ

Kaju katli recipe in Kannada

Kaju katli recipe in Kannada | ಗೋಡಂಬಿ ಬರ್ಫಿ ಮಾಡುವ ವಿಧಾನ 

ಗೋಡಂಬಿ ಬರ್ಫಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಕಪ್ ಗೋಡಂಬಿ
  2. 1/2 ಕಪ್ ಸಕ್ಕರೆ 
  3. 1/4 ಕಪ್ ನೀರು
  4. 1 ಟೀಸ್ಪೂನ್ ತುಪ್ಪ
  5. 1 ಟೀಸ್ಪೂನ್ ರೋಸ್ ವಾಟರ್ ಅಥವಾ ಚಿಟಿಕೆ ಏಲಕ್ಕಿ ಪುಡಿ

ಗೋಡಂಬಿ ಬರ್ಫಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಗೋಡಂಬಿ ತೆಗೆದುಕೊಂಡು ಸಣ್ಣ ರವೆಯಂತೆ ಪುಡಿ ಮಾಡಿಕೊಳ್ಳಿ. ಅಗತ್ಯವಿದ್ದಲ್ಲಿ ಜರಡಿ ಹಿಡಿಯಿರಿ. 
  2. ಒಂದು ನಾನ್-ಸ್ಟಿಕ್ ಅಥವಾ ದಪ್ಪ ತಳದ ಬಾಣಲೆಯಲ್ಲಿ ಸಕ್ಕರೆ ಮತ್ತು ನೀರು ತೆಗೆದುಕೊಂಡು ಸ್ಟೋವ್ ಮೇಲಿಟ್ಟು ಮಗುಚಿ. 
  3. ಸಕ್ಕರೆ ಕರಗಿ ಚೆನ್ನಾಗಿ ಕುದಿಯಲು ಶುರು ಆದಾಗ ಪುಡಿಮಾಡಿದ ಗೋಡಂಬಿ ಹಾಕಿ ಮಗುಚಲು ಪ್ರಾರಂಭಿಸಿ.  
  4. ಗಂಟಿದ್ದರೆ ಪುಡಿ ಮಾಡುತ್ತಾ ಮಧ್ಯಮ ಉರಿಯಲ್ಲಿ ಮಗುಚುತ್ತಾ ಇರಿ. 
  5. ಸ್ವಲ್ಪ ನಿಮಿಷದ ನಂತ್ರ ಅಂಚು ಬಿಡಲು ಪ್ರಾರಂಭ ಆಗುತ್ತದೆ. ಜೊತೆಗೆ ಮಿಶ್ರಣವು ದಪ್ಪ ಪೇಸ್ಟ್ ನ ಹದಕ್ಕೆ ಬರುತ್ತದೆ. 
  6. ಆಗ ಒಂದು ಚಮಚ ತುಪ್ಪ ಹಾಕಿದ ಪ್ಲೇಟ್ ಅಥವಾ ಅಡುಗೆಮನೆ ಕಟ್ಟೆ ಅಥವಾ ಬಟರ್ ಶೀಟ್ ಮೇಲೆ ಮಿಶ್ರಣವನ್ನು ಸುರಿಯಿರಿ. 
  7. ಸ್ವಲ್ಪ ಬಿಸಿ ಆರಿದ ಮೇಲೆ ಒಂದು ಚಮಚ ರೋಜ್ ವಾಟರ್ ಅಥವಾ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ನಾದಿ. 
  8. ಕೈ ಮತ್ತು ಲಟ್ಟಣಿಗೆ ಸಹಾಯದಿಂದ ದಪ್ಪ ಚಪಾತಿಯಂತೆ ಒತ್ತಿ. 
  9. ನಂತರ ನಿಮಗೆ ಇಷ್ಟವಾದ ಆಕಾರಕ್ಕೆ ಕತ್ತರಿಸಿ.
  10. ರುಚಿಯಾದ ಗೋಡಂಬಿ ಬರ್ಫಿ ಸವಿಯಲು ಸಿದ್ದ.

ಶುಕ್ರವಾರ, ಜೂನ್ 5, 2020

Bellulli saaru recipe in Kannada | ಬೆಳ್ಳುಳ್ಳಿ ಸಾರು ಮಾಡುವ ವಿಧಾನ

Bellulli saaru recipe in Kannada

Bellulli saaru recipe in Kannada | ಬೆಳ್ಳುಳ್ಳಿ ಸಾರು ಮಾಡುವ ವಿಧಾನ

ಬೆಳ್ಳುಳ್ಳಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಟೊಮ್ಯಾಟೋ
  2. 10 - 12 ಎಸಳು ಬೆಳ್ಳುಳ್ಳಿ
  3. 1 ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
  4. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  5. 1/2 ಟೀಸ್ಪೂನ್ ಜೀರಿಗೆ
  6. 1/2 ಟೀಸ್ಪೂನ್ ಸಾಸಿವೆ
  7. 1 ಒಣಮೆಣಸಿನಕಾಯಿ
  8. 1 ಹಸಿರು ಮೆಣಸಿನಕಾಯಿ
  9. ದೊಡ್ಡ ಚಿಟಿಕೆ ಇಂಗು
  10. ದೊಡ್ಡ ಚಿಟಿಕೆ ಅರಿಶಿನ
  11. 4-5 ಕರಿಬೇವಿನ ಎಲೆ
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  13. 1 ಟೀಸ್ಪೂನ್ ಸಾರಿನ ಪುಡಿ (ಬೇಕಾದಲ್ಲಿ)
  14. 2 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
  15. ಉಪ್ಪು ರುಚಿಗೆ ತಕ್ಕಷ್ಟು.

ಬೆಳ್ಳುಳ್ಳಿ ಸಾರು ಮಾಡುವ ವಿಧಾನ:

  1. ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಬೇರೆ ಪದಾರ್ಥಗಳನ್ನು ಎತ್ತಿಟ್ಟುಕೊಳ್ಳಿ. 
  2. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಒಣಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ. 
  4. ನಂತರ ಇಂಗು ಮತ್ತು ಅರಿಶಿನ ಪುಡಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಮಗುಚಿ.
  5. ಆಮೇಲೆ ಸಿಪ್ಪೆ ತೆಗೆದು ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. 
  6. ಕತ್ತರಿಸಿದ ಟೊಮೆಟೊ, ಸ್ವಲ್ಪ ಉಪ್ಪು ಸೇರಿಸಿ ಟೊಮ್ಯಾಟೊ ಮೃದು ಆಗುವ ತನಕ ಹುರಿಯಿರಿ.
  7. ಈಗ ಉಪ್ಪು , ಹುಣಸೆ ರಸ, ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ. 
  8. ಕೊನೆಯಲ್ಲಿ ಬೇಕಾದಲ್ಲಿ ಸಾರಿನ ಪುಡಿ ಹಾಕಿ. 
  9. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ. 
  10. ಬಿಸಿ ಅನ್ನದೊಂದಿಗೆ ಬಡಿಸಿ. 

Related Posts Plugin for WordPress, Blogger...