Kaayi burfi recipe in Kannada |
Kaayi burfi recipe in Kannada | ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ತೆಂಗಿನ ತುರಿ (ಒತ್ತಿ ತುಂಬಿಸಿದ್ದು)
- 3/4 ಕಪ್ ಬೆಲ್ಲ
- 1 ಟೇಬಲ್ ಸ್ಪೂನ್ ತುಪ್ಪ
- ಎರಡು ಏಲಕ್ಕಿ
- ತುಪ್ಪ ಹಚ್ಚಿದ ಪ್ಲೇಟ್ ಅಥವಾ ಟ್ರೇ
ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ:
- ತೆಂಗಿನತುರಿ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್) ನುಣ್ಣಗೆ ಅರೆಯಿರಿ.
- ಆಮೇಲೆ ಬೆಲ್ಲ ಸೇರಿಸಿ ಪುನಃ ಅರೆಯಿರಿ. ಬೆಲ್ಲದಲ್ಲಿ ಕಸ-ಕಡ್ಡಿ ಇದೆ ಎನಿಸಿದರೆ, ಅರ್ಧ ಕಪ್ ನೀರಿನಲ್ಲಿ, ಬೆಲ್ಲ ಕರಗಿಸಿ, ಆ ನೀರಿನಲ್ಲಿ ಕಾಯಿಯನ್ನು ಅರೆಯಿರಿ.
- ಒಂದು ಬಾಣಲೆಗೆ ಅರೆದ ಮಿಶ್ರಣವನ್ನು ಹಾಕಿ ಕುದಿಯಲು ಇಡಿ.
- ಒಂದು ಪ್ಲೇಟ್ ಅಥವಾ ಟ್ರೇ ಗೆ ತುಪ್ಪ ಹಚ್ಚಿಟ್ಟುಕೊಳ್ಳಿ.
- ಮಧ್ಯಮ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಇರಿ.
- 4 - 5 ನಿಮಿಷದಲ್ಲಿ ಸ್ವಲ್ಪ ಗಟ್ಟಿಯಾಗುವುದು.
- ತುಪ್ಪವನ್ನು ಸೇರಿಸಿ. ಮಗುಚುವುದನ್ನು ಮುಂದುವರೆಸಿ.
- ಮಧ್ಯಮ ಉರಿಯಲ್ಲಿ ಕೈ ಬಿಡದೆ ಮಗುಚುತ್ತಿರಿ.
- ಒಂದೈದು ನಿಮಿಷದಲ್ಲಿ ಕಾಯಿ ಮತ್ತು ಬೆಲ್ಲದ ಮಿಶ್ರಣ ಒಂದೇ ಮುದ್ದೆಯಾಗಿ, ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ.
- ಈ ಸಮಯದಲ್ಲಿ ತುಪ್ಪ ಸವರಿದ ಟ್ರೇ ಗೆ ಸುರಿಯಿರಿ.
- ತುಪ್ಪ ಸವರಿದ ಚಮಚದ ಹಿಂಭಾಗ ಉಪಯೋಗಿಸಿ ಹರಡಿ.
- ಬಿಸಿ ಸ್ವಲ್ಪ ಆರಿದ ಮೇಲೆ ಕತ್ತರಿಸಿ.
- ಸಂಪೂರ್ಣ ಬಿಸಿ ಆರಿದ ಮೇಲೆ ಕಾಯಿ ಬರ್ಫಿ ತೆಗೆದು ಬಡಿಸಿ, ತಿಂದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ