ಗುರುವಾರ, ನವೆಂಬರ್ 28, 2019

Majjige saaru recipe in Kannada | ಮಜ್ಜಿಗೆ ಸಾರು ಮಾಡುವ ವಿಧಾನ

Majjige saaru recipe in Kannada

Majjige saaru recipe in Kannada | ಮಜ್ಜಿಗೆ ಸಾರು ಮಾಡುವ ವಿಧಾನ


ಮಜ್ಜಿಗೆ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1 ಕಪ್ ಮೊಸರು
  2. ಸುಮಾರು 1 ಕಪ್ ಮಜ್ಜಿಗೆ
  3. 1/2 ಚಮಚ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ
  5. 1/2 ಚಮಚ ಕಡ್ಲೆಬೇಳೆ 
  6. 1/2 ಚಮಚ ಉದ್ದಿನಬೇಳೆ 
  7. 1 - 2 ಒಣಮೆಣಸಿನಕಾಯಿ
  8. 4 - 5 ಜಜ್ಜಿದ ಬೆಳ್ಳುಳ್ಳಿ
  9. 1 - 2 ಹಸಿಮೆಣಸಿನಕಾಯಿ
  10. 5 - 6 ಕರಿಬೇವಿನ ಎಲೆ
  11. 1 ಈರುಳ್ಳಿ
  12. 1/2 ಚಮಚ ಶುಂಠಿ
  13. ದೊಡ್ಡ ಚಿಟಿಕೆ ಅರಿಶಿನ
  14. ಇಂಗು ಒಂದು ಚಿಟಿಕೆ
  15. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  16. 1.5 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  17. 1 ಟೇಬಲ್ ಚಮಚ ಅಡುಗೆ ಎಣ್ಣೆ

 ಮಜ್ಜಿಗೆ ಸಾರು ಮಾಡುವ ವಿಧಾನ:

  1. ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹೆಚ್ಚಿಟ್ಟುಕೊಳ್ಳಿ.
  2. ಒಂದು ಪಾತ್ರೆಯಲ್ಲಿ ಮೊಸರು ಮತ್ತು ಉಪ್ಪು ತೆಗೆದುಕೊಂಡು ಕಡೆಯಿರಿ. ಅದಕ್ಕೆ ಒಂದು ಕಪ್ ನೀರು ಸೇರಿಸಿ ಮಜ್ಜಿಗೆ ಮಾಡಿ ಪಕ್ಕಕ್ಕಿಡಿ. 
  3. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 1/2 ಚಮಚ ಸಾಸಿವೆ ಮತ್ತು 1/2 ಚಮಚ ಜೀರಿಗೆ ಹಾಕಿ. 
  4. ಸಾಸಿವೆ ಸಿಡಿದ ಮೇಲೆ, ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಚೂರು ಮಾಡಿದ ಒಣಮೆಣಸು ಸೇರಿಸಿ. 
  5. ನಂತ್ರ ಜಜ್ಜಿದ ಬೆಳ್ಳುಳ್ಳಿ, ಸೀಳಿದ ಹಸಿಮೆಣಸು ಮತ್ತು ಕರಿಬೇವು ಹಾಕಿ ಹುರಿಯಿರಿ. 
  6. ಹೆಚ್ಚಿದ ಈರುಳ್ಳಿ ಮತ್ತು ಶುಂಠಿ ಸೇರಿಸಿ, ಈರುಳ್ಳಿಯನ್ನು ಹುರಿಯಿರಿ. 
  7. ಜೊತೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ. ಬೇಕಾದಲ್ಲಿ ಸ್ವಲ್ಪ ಎಣ್ಣೆ ಅಥವಾ ಸ್ವಲ್ಪ ನೀರು ಸೇರಿಸಿ, ಈರುಳ್ಳಿಯನ್ನು ಮೆತ್ತಗಾಗುವವರೆಗೆ ಹುರಿಯಿರಿ. 
  8. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ, ಹುರಿದು ಸ್ಟವ್ ಆಫ್ ಮಾಡಿ. 
  9. ಬಿಸಿ ಆರಿದ ಮೇಲೆ, ಉಪ್ಪು ಬೆರೆಸಿದ ಮಜ್ಜಿಗೆ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ನವೆಂಬರ್ 22, 2019

Parota recipe in Kannada | ಪರೋಟ ಮಾಡುವ ವಿಧಾನ

Parota recipe in Kannada

Parota recipe in Kannada | ಪರೋಟ ಮಾಡುವ ವಿಧಾನ

ಪರೋಟ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು 
  2. ಅಡುಗೆ ಎಣ್ಣೆ 
  3. ರುಚಿಗೆ ತಕ್ಕಷ್ಟು ಉಪ್ಪು


ಪರೋಟ ಮಾಡುವ ವಿಧಾನ:

  1. ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ಮತ್ತು ಉಪ್ಪು ತೆಗೆದುಕೊಳ್ಳಿ. 
  2. ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಚಪಾತಿ ಹಿಟ್ಟಿನಂತೆ ಮೃದುವಾದ ಹಿಟ್ಟು ಕಲಸಿಕೊಳ್ಳಿ. 
  3. ನಂತ್ರ ಸುಮಾರು ಅರ್ಧ ಗಂಟೆಯಿಂದ ಒಂದು ಗಂಟೆವರೆಗೆ ನೆನೆಯಲು ಬಿಡಿ. 
  4. ನಿಂಬೆ ಗಾತ್ರದ ಚಪಾತಿ ಹಿಟ್ಟು ತೆಗೆದುಕೊಂಡು ತೆಳುವಾದ ಚಪಾತಿ ಮಾಡಿ. ಅಗತ್ಯವಿದ್ದಷ್ಟು ಎಣ್ಣೆ ಮುಟ್ಟಿಸಿಕೊಳ್ಳಿ.
  5. ಲಟ್ಟಿಸಿದ  ಚಪಾತಿಯನ್ನು ಒಟ್ಟು ಮಾಡಿ, ವೃತ್ತಾಕಾರವಾಗಿ ಸುತ್ತಿ ಪುನಃ ಲಟ್ಟಿಸಿ. ದಯವಿಟ್ಟು ಮೇಲೆ ನೀಡಿದ ವಿಡಿಯೋ ನೋಡಿ. 
  6. ಬಿಸಿ ತವಾ ಮೇಲೆ ಎಣ್ಣೆ ಹಾಕಿ ಎರಡು ಬದಿ ಕಾಯಿಸಿ. 
  7. ಕೊನೆಯಲ್ಲಿ ಎಲ್ಲ ಪರೋಟಗಳನ್ನು ಒಟ್ಟಿಗೆಇಟ್ಟು ಎರಡು ಕೈಯಿಂದ ಮುದ್ದೆಯಾಗುವಂತೆ ಬಡಿಯಿರಿ. ನಿಮ್ಮಿಷ್ಟದ ಪಲ್ಯ ಅಥವಾ ಗೊಜ್ಜಿನೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ನವೆಂಬರ್ 20, 2019

Hagalakayi fry recipe in Kannada | ಹಾಗಲಕಾಯಿ ಫ್ರೈ ಮಾಡುವ ವಿಧಾನ

Hagalakayi fry recipe in Kannada

Hagalakayi fry recipe in Kannada | ಹಾಗಲಕಾಯಿ ಫ್ರೈ ಮಾಡುವ ವಿಧಾನ 

ಹಾಗಲಕಾಯಿ ಫ್ರೈ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 2  ಎಳೆಯ ಹಾಗಲಕಾಯಿ
  2. 1/4 ಟೀಸ್ಪೂನ್ ಅರಿಶಿನ ಪುಡಿ
  3. ಒಂದು ದೊಡ್ಡ ಚಿಟಿಕೆ ಇಂಗು
  4. 1 ಟೀಸ್ಪೂನ್ ಅಚ್ಚಖಾರದ ಪುಡಿ
  5. 1 ಟೀಸ್ಪೂನ್ ಧನಿಯಾ ಪುಡಿ
  6. 1/2 ಟೀಸ್ಪೂನ್ ಜೀರಿಗೆ ಪುಡಿ
  7. 1/2 - 1 ಟೀಸ್ಪೂನ್ ಮಾವಿನಕಾಯಿ ಪುಡಿ
  8. 1/2 ಟೀಸ್ಪೂನ್ ಗರಂ ಮಸಾಲಾ
  9. 1 ಟೀಸ್ಪೂನ್ ಜಜ್ಜಿದ ಸೋಂಪು
  10. 1 ಟೇಬಲ್ ಚಮಚ ಕಡ್ಲೆಹಿಟ್ಟು
  11. ನಿಮ್ಮ ರುಚಿ ಪ್ರಕಾರ ಉಪ್ಪು 
  12. 3 - 5 ಟೇಬಲ್ ಚಮಚ ಅಡುಗೆ ಎಣ್ಣೆ

 ಹಾಗಲಕಾಯಿ ಫ್ರೈ ಮಾಡುವ ವಿಧಾನ:

  1. ಮೊದಲಿಗೆ ಹಾಗಲಕಾಯಿಯನ್ನು ತೆಳು ಚಕ್ರಗಳನ್ನಾಗಿ ಕತ್ತರಿಸಿ, ಬೀಜ ತೆಗೆಯಿರಿ.
  2. ಬೇಕಾದಲ್ಲಿ ಉಪ್ಪು ನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿಟ್ಟು ನೀರನು ಸಂಪೂರ್ಣ ಹಿಂಡಿ ತೆಗೆಯಿರಿ.  
  3. ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  4. ಅದಕ್ಕೆ ಕತ್ತರಿಸಿಟ್ಟ ಹಾಗಲಕಾಯಿ ಹಾಕಿ. ಸಣ್ಣ ಉರಿಯಲ್ಲಿ ಅಲ್ಲಲ್ಲಿಕಂದು ಬಣ್ಣ ಬರುವವರೆಗೆ ಹುರಿಯಿರಿ. ಬೇಕಾದಲ್ಲಿ ಸ್ವಲ್ಪ ಎಣ್ಣೆ ಸೇರಿಸಿಕೊಳ್ಳಿ.  
  5. ಅದಕ್ಕೆ ಉಪ್ಪು, ಅರಿಶಿನ, ಅಚ್ಚಖಾರದ ಪುಡಿ ಮತ್ತು ಇಂಗು ಸೇರಿಸಿ.
  6.  ಜೊತೆಯಲ್ಲಿ ಧನಿಯಾ ಪುಡಿ, ಜೀರಿಗೆ ಪುಡಿ, ಮಾವಿನಕಾಯಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮಗುಚಿ. 
  7. ಒಂದು ಚಮಚದಷ್ಟು ಜಜ್ಜಿದ ಸೋಂಪು ಸೇರಿಸಿ ಮಗುಚಿ. 
  8. ಕೊನೆಯಲ್ಲಿ ಕಡ್ಲೆಹಿಟ್ಟು ಸೇರಿಸಿ, ಎರಡು ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ಬೇಕಾದಲ್ಲಿ ಸ್ವಲ್ಪ ಎಣ್ಣೆ ಸೇರಿಸಿಕೊಳ್ಳಿ.  
  9. ಸ್ಟವ್ ಆಫ್ ಮಾಡಿ ಮೊಸರನ್ನ ಅಥವಾ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ನವೆಂಬರ್ 15, 2019

Southekayi avalakki recipe in Kannada | ಸೌತೆಕಾಯಿ ಅವಲಕ್ಕಿ ಮಾಡುವ ವಿಧಾನ

Southekayi avalakki recipe in Kannada

Southekayi avalakki recipe in Kannada | ಸೌತೆಕಾಯಿ ಅವಲಕ್ಕಿ ಮಾಡುವ ವಿಧಾನ 


ಸೌತೆಕಾಯಿ ಅವಲಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 3 ಕಪ್ ತೆಳು ಅವಲಕ್ಕಿ
  2. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಜೀರಿಗೆ
  5. 1 - 2 ಹಸಿರು ಮೆಣಸಿನಕಾಯಿ 
  6. 4 - 5 ಕರಿಬೇವಿನ ಎಲೆ
  7. 1 ಈರುಳ್ಳಿ 
  8. 1 ಟೊಮೇಟೊ
  9. 1 ಸಣ್ಣ ಗಾತ್ರದ ಸೌತೆಕಾಯಿ
  10. ಸಕ್ಕರೆ ರುಚಿಗೆ ತಕ್ಕಷ್ಟು (ಬೇಕಾದಲ್ಲಿ)
  11. ಉಪ್ಪು ರುಚಿಗೆ ತಕ್ಕಷ್ಟು 
  12. 1 ಟೇಬಲ್ ಚಮಚ ಅಡುಗೆ ಎಣ್ಣೆ
  13. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. ಸ್ವಲ್ಪ ನಿಂಬೆಹಣ್ಣಿನ ರಸ (ಬೇಕಾದಲ್ಲಿ)

ಸೌತೆಕಾಯಿ ಅವಲಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕಡಲೇಕಾಯಿಯನ್ನು ಹುರಿಯಿರಿ. 
  2. ನಂತರ ಸಾಸಿವೆ ಮತ್ತು ಜೀರಿಗೆ ಹಾಕಿ. 
  3. ಸಾಸಿವೆ ಸಿಡಿದ ಮೇಲೆ ಕತ್ತರಿಸಿದ ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ.
  4.  ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಬಾಡಿಸಿ. 
  5. ನಂತರ ಕತ್ತರಿಸಿದ ಟೊಮೇಟೊ ಮತ್ತು ಸೌತೆಕಾಯಿ ಸೇರಿಸಿ.  
  6. ಸಕ್ಕರೆ ಮತ್ತು ಉಪ್ಪು ಹಾಕಿ ಕಲಸಿ. ಸ್ಟವ್ ಆಫ್ ಮಾಡಿ. 
  7. ನಂತರ ಅದಕ್ಕೆ ಅವಲಕ್ಕಿಯನ್ನು ಹಾಕಿ ಕಲಸಿ.
  8. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸೌತೆಕಾಯಿ ಅವಲಕ್ಕಿ ಸವಿಯಲು ಸಿದ್ದ. 

ಬುಧವಾರ, ನವೆಂಬರ್ 13, 2019

10 minute sambar recipe in Kannada | 10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ

10 minute sambar recipe in Kannada

10 minute sambar recipe in Kannada | 10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ



10 ನಿಮಿಷದಲ್ಲಿ ಸಾಂಬಾರ್  ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಈರುಳ್ಳಿ
  2. 1 ಕ್ಯಾರಟ್
  3. 1 ಟೊಮೇಟೊ
  4. 1 ದೊಣ್ಣೆಮೆಣಸು
  5. ದೊಡ್ಡ ಚಿಟಿಕೆ ಅರಿಶಿನ ಪುಡಿ
  6. ಉಪ್ಪು ನಿಮ್ಮ ರುಚಿ ಪ್ರಕಾರ
  7. 1/2 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  8. ಗೋಲಿ ಗಾತ್ರದ ಹುಣಿಸೇಹಣ್ಣು
  9. ಸ್ವಲ್ಪ ಕೊತ್ತಂಬರಿ ಸೊಪ್ಪು
  10. 1 ಟೀಸ್ಪೂನ್ ಅಡುಗೆ ಎಣ್ಣೆ

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/4 ಕಪ್ ತೆಂಗಿನ ತುರಿ
  2. 2 ಒಣ ಮೆಣಸಿನಕಾಯಿ
  3. 1 ಟೀಸ್ಪೂನ್ ಕಡ್ಲೆಬೇಳೆ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 3 ಟೀಸ್ಪೂನ್ ತೊಗರಿಬೇಳೆ
  6. 2 ಟೀಸ್ಪೂನ್ ಕೊತ್ತಂಬರಿ ಬೀಜ
  7. 1/4 ಟೀಸ್ಪೂನ್ ಜೀರಿಗೆ
  8. 10 - 12 ಮೆಂತ್ಯ ಕಾಳು
  9. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. ಒಂದು ಚಿಟಿಕೆ ಇಂಗು
  5. 1 ಟೀಸ್ಪೂನ್ ಅಡುಗೆ ಎಣ್ಣೆ

10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ:

  1. ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕಡ್ಲೆಬೇಳೆ, ತೊಗರಿಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು 1 ಟೀಸ್ಪೂನ್ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವರೆಗೆ ಹುರಿಯಿರಿ. 
  2. ಹುರಿದ ಪದಾರ್ಥಗಳನ್ನು ಪಕ್ಕಕ್ಕಿಟ್ಟು ಅದೇ ಬಾಣಲೆಯಲ್ಲಿ ಇನ್ನೊಂದು ಚಮಚ ಎಣ್ಣೆ ಬಿಸಿ ಮಾಡಿ. 
  3. ಮೊದಲಿಗೆ ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. 
  4. ಆಮೇಲೆ ತೆಳುವಾಗಿ ಹೆಚ್ಚಿದ ಕ್ಯಾರಟ್ ಸೇರಿಸಿ ಹುರಿಯಿರಿ. 
  5. ನಂತರ ಕತ್ತರಿಸಿದ ದೊಣ್ಣೆಮೆಣಸು ಸೇರಿಸಿ ಹುರಿಯಿರಿ. 
  6. ಕೊನೆಯಲ್ಲಿ ಕತ್ತರಿಸಿದ ಟೊಮೇಟೊ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  7. ಚಿಟಿಕೆ ಅರಶಿನ ಪುಡಿ, ಉಪ್ಪು ಮತ್ತು 1 ಕಪ್ ನೀರು ಸೇರಿಸಿ ಕುದಿಸಿ. 
  8. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. 
  9. ಆ ಸಮಯದಲ್ಲಿ ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  10. ಅರೆದ ಮಸಾಲೆಯನ್ನು ಬೇಯುತ್ತಿರುವ ತರಕಾರಿಗೆ ಹಾಕಿ. 
  11. ಅಗತ್ಯವಿದ್ದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
  12. ಬೆಲ್ಲ ಸೇರಿಸಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ. 
  13.  ಒಂದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. 
  14. ಒಣ ಮೆಣಸು, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. ದೋಸೆ ಅಥವಾ ಇಡ್ಲಿಯೊಂದಿಗೂ ಬಡಿಸಬಹುದು. 

ಗುರುವಾರ, ನವೆಂಬರ್ 7, 2019

Idli - Dose batter recipe in Kannada | ಇಡ್ಲಿ ಮತ್ತು ದೋಸೆ ಹಿಟ್ಟು ಮಾಡುವ ವಿಧಾನ

Idli - Dose batter recipe in Kannada

Idli - Dose batter recipe in Kannada | ಇಡ್ಲಿ ಮತ್ತು ದೋಸೆ ಹಿಟ್ಟು ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1 ಕಪ್ ಕುಸುಬುಲಕ್ಕಿ ಅಥವಾ ಇಡ್ಲಿ ಅಕ್ಕಿ
  3. 1/2 ಕಪ್ ಉದ್ದಿನ ಬೇಳೆ (ಚಳಿಗಾಲ ಆದ್ರೆ ಸ್ವಲ್ಪ ಜಾಸ್ತಿ ಮಾಡಿ)
  4. 1 ಟೀಸ್ಪೂನ್ ಮೆಂತೆ
  5. 1/4 - 1/2 ಕಪ್ ಗಟ್ಟಿ ಅವಲಕ್ಕಿ 
  6. ಉಪ್ಪು ನಿಮ್ಮ ರುಚಿ ಪ್ರಕಾರ


ಇಡ್ಲಿ ಮತ್ತು ದೋಸೆ ಹಿಟ್ಟು ಮಾಡುವ ವಿಧಾನ:

  1. ಎರಡು ರೀತಿಯ ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
  2. ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು ಬೇರೆ ಪಾತ್ರೆಯಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. 
  3. ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿಡಿ. 
  4. ನಂತರ ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು. 
  5. ಆಮೇಲೆ ನೆನೆಸಿದ ಅಕ್ಕಿಯ ನೀರು ಬಸಿದು, ಸ್ವಲ್ಪ ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ಮಾತ್ರ ನೀರು ಸೇರಿಸಿ. ಗಮನಿಸಿ, ಹೆಚ್ಚು ನೀರು ಸೇರಿಸಬೇಡಿ ಮತ್ತು ಸ್ವಲ್ಪ ತರಿ ತರಿ ಇದ್ದರೆ ಸಾಕು.
  6. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ. ಚಳಿಗಾಲ ಸಮಯ ಆದಲ್ಲಿ ಸುಮಾರು 12 ಗಂಟೆ ಬೇಕಾಗಬಹುದು. 
  7. ಹುದುಗುವಿಕೆಯ ನಂತರ ಅಗತ್ಯವಿದ್ದಷ್ಟು ಹಿಟ್ಟು ತೆಗೆದುಕೊಂಡು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  8. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  9. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.
  10. ನಂತರ ದೋಸೆ ಮಾಡಲು, ಅಗತ್ಯವಿದ್ದಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರು ಮತ್ತು ಅಗತ್ಯವಿದ್ದಷ್ಟು ಉಪ್ಪು ಹಾಕಿ ದೋಸೆ ಮಾಡಿ. 
  11. ಅದೇ ದೋಸೆ ಹಿಟ್ಟಲ್ಲಿ ಈರುಳ್ಳಿ ದೋಸೆ ಮಾಡಿ. ಈರುಳ್ಳಿ ದೋಸೆ ಮಾಡಲು, ಎರಡು ಸೌಟು ಹಿಟ್ಟು ಹಾಕಿ, ಮೇಲಿಂದ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಮತ್ತು ತುರಿದ ಕ್ಯಾರಟ್ ಹಾಕಿ ಎರಡು ಬದಿ ಕಾಯಿಸಿ. 
  12. ಪಡ್ಡು ಮಾಡಲು ದೋಸೆ ಹಿಟ್ಟಿಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಹಸಿಮೆಣಸು ಹಾಕಿ ಪಡ್ಡು ಹೆಂಚಲ್ಲಿ ಪಡ್ಡು ಮಾಡಿ. 
Related Posts Plugin for WordPress, Blogger...