ಶನಿವಾರ, ಆಗಸ್ಟ್ 31, 2019

Rave modaka recipe in Kannada | ರವೇ ಮೋದಕ ಮಾಡುವ ವಿಧಾನ

Rave modaka recipe in Kannada

Rave modaka recipe in Kannada | ರವೇ ಮೋದಕ ಮಾಡುವ ವಿಧಾನ

ರವೇ ಮೋದಕ ವಿಡಿಯೋ 

 ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಣ್ಣ ರವೇ
  2. 1/2 ಕಪ್ ತೆಂಗಿನ ತುರಿ
  3. 1/4 ಕಪ್ ಬೆಲ್ಲ
  4. 1/2 ಕಪ್ ನೀರು
  5. 1/2 ಕಪ್ ಹಾಲು
  6. 2 ಏಲಕ್ಕಿ
  7. 1 ಟೀಸ್ಪೂನ್ ತುಪ್ಪ 
  8. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ರವೇ ಮೋದಕ ಮಾಡುವ ವಿಧಾನ :

  1. ಒಂದು ಬಾಣಲೆಯಲ್ಲಿ ನೀರು ಮತ್ತು ಹಾಲನ್ನು ಕುದಿಯಲು ಇಡಿ. 
  2. 1/2 ಟೀಸ್ಪೂನ್ ತುಪ್ಪ ಮತ್ತು 1/2 ಟೀಸ್ಪೂನ್ ಉಪ್ಪು ಹಾಕಿ. 
  3. ನೀರು ಕುದಿಯಲು ಪ್ರಾರಂಭಿಸಿದ ನಂತರ ರವೆಯನ್ನು ಹಾಕಿ. 
  4. 2 - 3 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿ ಬೇಯಿಸಿ. ಪಕ್ಕಕ್ಕಿಡಿ. 
  5. ನಂತರ ಒಂದು ಬಾಣಲೆಯಲ್ಲಿ ತೆಂಗಿನ ತುರಿ, ಪುಡಿಮಾಡಿದ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ತೆಗೆದುಕೊಳ್ಳಿ. 
  6.  ಮಗುಚಿ ಹೂರಣ ಸಿದ್ಧ ಮಾಡಿಕೊಳ್ಳಿ. ಜಾಸ್ತಿ ಒಣಗಿಸ ಬೇಡಿ.  
  7. ಆಮೇಲೆ ಬೇಯಿಸಿದ ರವೇಯನ್ನು ಚೆನ್ನಾಗಿ ನಾದಿ.
  8. ಸಣ್ಣ ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು ಬಟ್ಟಲಿನಂತೆ ಅಗಲ ಮಾಡಿ. 
  9. ಮಧ್ಯದಲ್ಲಿ ಹೂರಣ ಇಟ್ಟು, ಅಂಚುಗಳನ್ನು ಒಟ್ಟಿಗೆ ಸೇರಿಸಿ, ಮೋದಕದ ಆಕಾರ ಮಾಡಿ. 
  10. ಇದನ್ನು ಸೆಕೆಯಲ್ಲಿ (ಆವಿಯಲ್ಲಿ) ಬೇಯಿಸಬೇಕಾಗಿಲ್ಲ. ನಿಮಗಿಷ್ಟ ಇದ್ದಲ್ಲಿ ಒಂದೈದು ನಿಮಿಷ ಬೇಯಿಸಿದರೆ ಸಮಸ್ಯೆ ಇಲ್ಲ.


ಗುರುವಾರ, ಆಗಸ್ಟ್ 29, 2019

Batani usli recipe in Kannada | ಬಟಾಣಿ ಉಸ್ಲಿ ಮಾಡುವ ವಿಧಾನ

Batani usli recipe in Kannada

Batani usli recipe in Kannada | ಬಟಾಣಿ ಉಸ್ಲಿ ಮಾಡುವ ವಿಧಾನ 

 ಬಟಾಣಿ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಒಣ ಬಟಾಣಿ
  2. 2 ಚಮಚ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ಟೀಸ್ಪೂನ್ಉದ್ದಿನಬೇಳೆ
  7. 1 ಒಣಮೆಣಸಿನಕಾಯಿ
  8. 1 - 2 ಹಸಿರು ಮೆಣಸಿನಕಾಯಿ
  9. 4 - 5 ಕರಿಬೇವಿನ ಎಲೆ
  10. 1 ಸೆಮೀ ಉದ್ದದ ಶುಂಠಿ
  11. ಎರಡು ಚಿಟಿಕೆ ಅರಿಶಿನ ಪುಡಿ
  12. ಒಂದು ದೊಡ್ಡ ಚಿಟಿಕೆ ಇಂಗು
  13. 1/4 ಕಪ್ ತೆಂಗಿನ ತುರಿ 
  14.  2 ಟೇಬಲ್ ಚಮಚ ಕೊತಂಬರಿ ಸೊಪ್ಪು 
  15. 2 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  16. ಉಪ್ಪು ರುಚಿಗೆ ತಕ್ಕಷ್ಟು.

ಬಟಾಣಿ ಉಸ್ಲಿ ಮಾಡುವ ವಿಧಾನ:

  1. ಬಟಾಣಿಯನ್ನು ಒಂದು ದಿನ ನೆನೆಸಿ. 
  2. ಅಗತ್ಯವಿದ್ದಷ್ಟು ನೀರು ಹಾಕಿ, ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ.
  4. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ. 
  5. ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಸೇರಿಸಿ. 
  6. ಸಾಸಿವೆ ಸಿಡಿದ ಮೇಲೆ ಒಣಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
  7. ಅರಿಶಿನ ಪುಡಿ ಮತ್ತು ಇಂಗು ಸೇರಿಸಿ ಮಗುಚಿ.  
  8. ಅದಕ್ಕೆ ಬೇಯಿಸಿದ ಬಟಾಣಿಯನ್ನು ಹಾಕಿ ಮಗುಚಿ.
  9. ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಅಗತ್ಯವಿದ್ದಲ್ಲಿ ಉಪ್ಪು ಹೊಂದಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  10. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಆಗಸ್ಟ್ 27, 2019

Small onion gojju recipe in Kannada | ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ

Small onion gojju recipe in Kannada

Small onion gojju recipe in Kannada |  ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ


ಸಣ್ಣ ಈರುಳ್ಳಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಿಪ್ಪೆ ತೆಗೆದ ಸಣ್ಣ ಈರುಳ್ಳಿ
  2. 1 ಟೇಬಲ್ ಚಮಚ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. ಸ್ವಲ್ಪ ಕರಿಬೇವು
  5. ಸಣ್ಣ ನಿಂಬೆ ಗಾತ್ರದ ಹುಣಿಸೇಹಣ್ಣು
  6. 2 ಟೀಸ್ಪೂನ್ ಬೆಲ್ಲ
  7. 2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನತುರಿ
  2. 2 ಒಣಮೆಣಸು
  3. 1 ಟೀಸ್ಪೂನ್ ಕೊತ್ತಂಬರಿ
  4. 1 ಚಮಚ ಎಣ್ಣೆ

ಸಣ್ಣ ಈರುಳ್ಳಿ ಗೊಜ್ಜು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಣಮೆಣಸು ಮತ್ತು ಕೊತ್ತಂಬರಿಯನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿದುಕೊಳ್ಳಿ.
  2. ಅದಕ್ಕೆ ಅರ್ಧ ಕಪ್ ತೆಂಗಿನತುರಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆದಿಟ್ಟುಕೊಳ್ಳಿ.  
  3. ನಂತ್ರ ಅದೇ ಬಾಣಲೆಯಲ್ಲಿ ಒಂದು ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  4. ಅದಕ್ಕೆ ಸಿಪ್ಪೆ ತೆಗೆದ ಸಣ್ಣ ಈರುಳ್ಳಿ ಹಾಕಿ ಎರಡು ನಿಮಿಷ ಚೆನ್ನಾಗಿ ಹುರಿಯಿರಿ. 
  5. ಆಮೇಲೆ ಉಪ್ಪು ಮತ್ತು ಹುಣಿಸೆರಸ ಸೇರಿಸಿ. ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ ಬೇಯಿಸಿ. 
  6. ಆಮೇಲೆ ಅರೆದ ಮಸಾಲೆ ಸೇರಿಸಿ.
  7. ಸ್ವಲ್ಪ ಬೆಲ್ಲ ಸೇರಿಸಿ. ಉಪ್ಪು ಮತ್ತು ಹುಳಿ ಹೊಂದಿಸಿಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ. 
  8. ಚೆನ್ನಾಗಿ ಕುದಿಸಿ, ಸ್ಟವ್ ಆಫ್ ಮಾಡಿ. ಅನ್ನ ಅಥವಾ ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ. 

ಸೋಮವಾರ, ಆಗಸ್ಟ್ 19, 2019

Dideer dose recipe in Kannada | ದಿಢೀರ್ ದೋಸೆ ಮಾಡುವ ವಿಧಾನ

Dideer dose recipe in Kannada

Instant crispy dose recipe in Kannada | ದಿಢೀರ್ ದೋಸೆ ಮಾಡುವ ವಿಧಾನ

ದಿಢೀರ್ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರವೆ
  2. 1/4 ಕಪ್ ಗೋಧಿ ಹಿಟ್ಟು
  3. 1 ಕಪ್ ಮೊಸರು 
  4. 1/4 ಚಮಚ ಅಡುಗೆ ಸೋಡಾ
  5. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  6. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ದೋಸೆ ಮಾಡುವ ವಿಧಾನ:

  1. ರವೆಯನ್ನು ಮಿಕ್ಸಿಯಲ್ಲಿ ನುಣ್ಣನೆ ಆದರೆ ಸ್ವಲ್ಪ ತರಿ-ತರಿ ಯಾಗಿ ಪುಡಿ ಮಾಡಿಕೊಳ್ಳಿ. 
  2. ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಗೋಧಿ ಹಿಟ್ಟು ಮತ್ತು ಮೊಸರು ಸೇರಿಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್), ಗಂಟಿಲ್ಲದಂತೆ ಮಗುಚಿ ದೋಸೆ ಹಿಟ್ಟು ತಯಾರಿಸಿ. 
  4. ಹದಿನೈದು ನಿಮಿಷ ನೆನೆಯಲು ಬಿಡಿ. 
  5. ಆಮೇಲೆ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ. ಚೆನ್ನಾಗಿ ಕಲಸಿ. 
  6. ಅಗತ್ಯವಿದ್ದಲ್ಲಿ ನೀರು ಸೇರಿಸಿ. ಹಿಟ್ಟು ತೆಳುವಾದ ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
  8. ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಉದ್ದಿನ ದೋಸೆಯಂತೆ ತೆಳ್ಳಗೆ ತಿಕ್ಕಿ ದೋಸೆ ಮಾಡಿ.
  9. ಮುಚ್ಚಳ ಮುಚ್ಚಿ ಬೇಯಿಸಿ. 
  10. ಹತ್ತು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  11. ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಮಂಗಳವಾರ, ಆಗಸ್ಟ್ 13, 2019

Sabbakki idli recipe in Kannada | ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ

Sabbakki idli recipe in Kannada

Sabbakki idli recipe in Kannada | ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ

ಸಬ್ಬಕ್ಕಿ ಇಡ್ಲಿ ವೀಡಿಯೊ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಬ್ಬಕ್ಕಿ
  2. 1/2 ಕಪ್ ಇಡ್ಲಿರವೇ
  3. 1 ಕಪ್ ಮೊಸರು (ಸ್ವಲ್ಪ ಹುಳಿ ಇರಲಿ)
  4. ಉಪ್ಪು ನಿಮ್ಮ ರುಚಿ ಪ್ರಕಾರ

ಹೆಚ್ಚುವರಿ ಪದಾರ್ಥಗಳು (ಬೇಕಾದಲ್ಲಿ): ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ತೆಂಗಿನತುರಿ
  2. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  3. 2 ಚಮಚ ಎಣ್ಣೆ
  4. 1/2 ಚಮಚ ಸಾಸಿವೆ
  5. 2 ಟೇಬಲ್ ಚಮಚ ಗೋಡಂಬಿ
  6. ಸಣ್ಣಗೆ ಕತ್ತರಿಸಿದ ಹಸಿಮೆಣಸು ಸ್ವಲ್ಪ
  7. ಸಣ್ಣಗೆ ಕತ್ತರಿಸಿದ ಕರಿಬೇವು ಸ್ವಲ್ಪ


ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಸಬ್ಬಕ್ಕಿ, ಇಡ್ಲಿ ರವೆ ಮತ್ತು ಮೊಸರನ್ನು ತೆಗೆದುಕೊಳ್ಳಿ.
  2. ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಸೇರಿಸಿ, ಹಿಟ್ಟನ್ನು ಕಲಸಿ. 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ. 
  3. ಹಿಟ್ಟು ಹುಳಿ ಬಂದ ಮೇಲೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ, ಹಿಟ್ಟನ್ನು ದಪ್ಪ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಈ ಹಿಟ್ಟಿನಿಂದ ಸಾದಾ ಇಡ್ಲಿ ಮಾಡಬಹುದು. ಅಥವಾ...
  5. ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  6. ಎಣ್ಣೆ, ಸಾಸಿವೆ, ಗೋಡಂಬಿ, ಹಸಿಮೆಣಸು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸೇರಿಸಿ. ಚೆನ್ನಾಗಿ ಕಲಸಿ. ಇಡ್ಲಿಹಿಟ್ಟು ತಯಾರಾಯಿತು. 
  7. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  8. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೆರಡು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ. ಖಾರ ಚಟ್ನಿ ಯೊಂದಿಗೆ ಬಡಿಸಿ. 

ಗುರುವಾರ, ಆಗಸ್ಟ್ 8, 2019

Carrot holige or obbatu recipe in Kannada | ಕ್ಯಾರಟ್ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ

Carrot holige or obbatu recipe in Kannada

Carrot holige or obbatu recipe in Kannada | ಕ್ಯಾರಟ್ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ

ಕ್ಯಾರಟ್ ಹೋಳಿಗೆ ವಿಡಿಯೋ

ಕಣಕಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು 
  2. ಉಪ್ಪು ರುಚಿಗೆ ತಕ್ಕಷ್ಟು
  3. 3 ಟೇಬಲ್ ಚಮಚ ಅಡುಗೆ ಎಣ್ಣೆ

ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕ್ಯಾರಟ್
  2. 1/4 ಕಪ್ ತೆಂಗಿನ ತುರಿ
  3. 1/2 ಕಪ್ ಪುಡಿಮಾಡಿದ ಬೆಲ್ಲ
  4. 1 ಏಲಕ್ಕಿ

ಕ್ಯಾರಟ್ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಹಾಕಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ಕಲಸಿ. 
  3. ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ. 
  4. ಈಗ ಹೂರಣ ತಯಾರಿಸಲು, ಒಂದು ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿ. 
  5. ಸಣ್ಣಗೆ ತುರಿದ ಕ್ಯಾರಟ್, ತೆಂಗಿನ ತುರಿ, ಏಲಕ್ಕಿ ಮತ್ತು ಪುಡಿಮಾಡಿದ ಬೆಲ್ಲವನ್ನು ಹಾಕಿ. ಬೇಕಾದಲ್ಲಿ ಕ್ಯಾರಟ್ ಮತ್ತು ತೆಂಗಿನತುರಿಯನ್ನು ಒಂದು ಸುತ್ತು ಅರೆದುಕೊಳ್ಳಬಹುದು. 
  6. ನೀರಿನಂಶ ಹೋಗುವವರೆಗೆ ಮಧ್ಯಮ ಉರಿಯಲ್ಲಿ ಮಗುಚಿ.
  7. ಹೂರಣ ಬೆಚ್ಚಗಾದ ನಂತರ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಉಂಡೆ ಮೃದುವಾಗಿರಬೇಕು. 
  8. ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಒಂದು ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಬಟ್ಟಲಿನಾಕಾರ ಮಾಡಿ.  ಹೂರಣಇಟ್ಟು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ.
  9. ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ.
  10. ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ. 
  11. ಕಾಯಿಸುವಾಗ ಎರಡು ಬದಿ ಸ್ವಲ್ಪ ತುಪ್ಪ ಹಚ್ಚಿ. ರುಚಿ ರುಚಿಯಾದ ಗೋಧಿ ಹಿಟ್ಟಿನ ಕ್ಯಾರಟ್ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

ಶನಿವಾರ, ಆಗಸ್ಟ್ 3, 2019

Panchamrutha and thrimadhura recipe in Kannada | ಪಂಚಾಮೃತ ಮತ್ತು ತ್ರಿಮಧುರ ಮಾಡುವ ವಿಧಾನ

Panchamrutha and thrimadhura recipe in Kannada

Panchamrutha and thrimadhura recipe in Kannada | ಪಂಚಾಮೃತ ಮತ್ತು ತ್ರಿಮಧುರ ಮಾಡುವ ವಿಧಾನ 

ಪಂಚಾಮೃತ ಮತ್ತು ತ್ರಿಮಧುರ ವಿಡಿಯೋ

ಪಂಚಾಮೃತಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2  ಕಪ್ ಹಾಲು
  2. 1/4 ಕಪ್ ಮೊಸರು
  3. 1 - 2 ಟೇಬಲ್ ಚಮಚ ಸಕ್ಕರೆ
  4. 1 ಚಮಚ ತುಪ್ಪ
  5. 1 ಚಮಚ ಜೇನುತುಪ್ಪ

ತ್ರಿಮಧುರಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಚಮಚ ಬೆಲ್ಲದ ಪುಡಿ ಅಥವಾ ಸಕ್ಕರೆ
  2. 1 ಚಮಚ ತುಪ್ಪ
  3. 1 ಚಮಚ ಜೇನುತುಪ್ಪ

ಪಂಚಾಮೃತ ಮತ್ತು ತ್ರಿಮಧುರ ಮಾಡುವ ವಿಧಾನ:

  1. ಪಂಚಾಮೃತಕ್ಕೆ ಪಟ್ಟಿ ಮಾಡಿದ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಕಲಸಿ. ದೇವರಿಗೆ ನೈವೇದ್ಯ ಮಾಡಿ. 
  2. ತ್ರಿಮಧುರಕ್ಕೆ ಪಟ್ಟಿ ಮಾಡಿದ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ದೇವರಿಗೆ ನೈವೇದ್ಯ ಮಾಡಿ. 

Related Posts Plugin for WordPress, Blogger...