ಶುಕ್ರವಾರ, ನವೆಂಬರ್ 27, 2020

Majjige paddu recipe in Kannada | ಮಜ್ಜಿಗೆ ಪಡ್ಡು ಮಾಡುವ ವಿಧಾನ

 

Majjige paddu recipe in Kannada

Majjige paddu recipe in Kannada | ಮಜ್ಜಿಗೆ ಪಡ್ಡು ಮಾಡುವ ವಿಧಾನ 

ಮಜ್ಜಿಗೆ ಪಡ್ಡು ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1.5 ಕಪ್ ಮಜ್ಜಿಗೆ ಅಥವಾ 1 ಕಪ್ ಮೊಸರು
  3. 1/4 ಕಪ್ ಅವಲಕ್ಕಿ (ಗಟ್ಟಿ ಅಥವಾ ಮೀಡಿಯಂ)
  4. 1 ಟೇಬಲ್ ಸ್ಪೂನ್ ಮೆಂತ್ಯ
  5. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  6. 1 ಚಮಚ ಜೀರಿಗೆ
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಟೀಸ್ಪೂನ್ ಸಕ್ಕರೆ

ಮಜ್ಜಿಗೆ ಪಡ್ಡು ಮಾಡುವ ವಿಧಾನ:

  1. ಅಕ್ಕಿ, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆಯಿರಿ. 
  2. ಮಜ್ಜಿಗೆಯಲ್ಲಿ 7 - 8 ಗಂಟೆಗಳ ಕಾಲ ನೆನೆಯಲು ಬಿಡಿ. ಮೊಸರು ಬಳಸುವುದಾದರೆ, ಮೊಸರಿಗೆ ಅರ್ಧ ಕಪ್ ನೀರು ಸೇರಿಸಿ ಮಜ್ಜಿಗೆ ಮಾಡಿಕೊಳ್ಳಿ. 
  3. ನೆನೆಸಿದ ನಂತರ ನೆನೆಸಿದ ಮಜ್ಜಿಗೆ ಸಹಿತ ಮಿಕ್ಸಿ ಜಾರಿಗೆ ಹಾಕಿ. 
  4. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. ಅರೆಯಲು ಬೇರೆ ನೀರು ಸೇರಿಸುವುದು ಬೇಡ. ಹಿಟ್ಟು ತುಂಬ ಬಿಸಿಯಾಗದಂತೆ ನೋಡಿಕೊಳ್ಳಿ.
  5. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ.
  6. ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಜೀರಿಗೆ  ಸೇರಿಸಿ ಚೆನ್ನಾಗಿ ಕಲಸಿ. 
  7. ಮುಚ್ಚಳ ಮುಚ್ಚಿ 2 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಪಡ್ಡು ಅಥವಾ ಗುಳಿಯಪ್ಪದ ಹೆಂಚನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  9. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  10. 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  11. ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ನವೆಂಬರ್ 19, 2020

Ribbon pakoda recipe in Kannada | ರಿಬ್ಬನ್ ಪಕೋಡ ಮಾಡುವ ವಿಧಾನ

 

Ribbon pakoda recipe in Kannada

Ribbon pakoda recipe in Kannada | ರಿಬ್ಬನ್ ಪಕೋಡ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿಹಿಟ್ಟು 
  2. 1/2 ಕಪ್ ಕಡ್ಲೆಹಿಟ್ಟು
  3. 1 ಟೀಸ್ಪೂನ್ ಎಳ್ಳು 
  4. 1/2 ಟೀಸ್ಪೂನ್ ಜಜ್ಜಿದ ಜೀರಿಗೆ
  5. ದೊಡ್ಡ ಚಿಟಿಕೆ ಅರಿಶಿನ
  6. ದೊಡ್ಡ ಚಿಟಿಕೆ ಇಂಗು
  7. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  8. 1 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
  9. 1 ಟೇಬಲ್ ಚಮಚ ಬೆಣ್ಣೆ ಅಥವಾ 2 ಟೇಬಲ್ ಚಮಚ ಬಿಸಿ ಎಣ್ಣೆ
  10. ಎಣ್ಣೆ ಕಾಯಿಸಲು

ರಿಬ್ಬನ್ ಪಕೋಡ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಕಡ್ಲೆಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಎಳ್ಳು ಮತ್ತು ಜಜ್ಜಿದ ಜೀರಿಗೆ ಹಾಕಿ. 
  3. ಆಮೇಲೆ ಅರಿಶಿನ, ಅಚ್ಚಖಾರದ ಪುಡಿ ಮತ್ತು ಇಂಗು ಸೇರಿಸಿ. 
  4. ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ. ಒಮ್ಮೆ ಕಲಸಿ. 
  5. ಬೆಣ್ಣೆ (ಅಥವಾ ಬಿಸಿ ಎಣ್ಣೆ) ಹಾಕಿ, ಚೆನ್ನಾಗಿ ತಿಕ್ಕಿ ಕಲಸಿ. 
  6. ಬೆಚ್ಚಗಿನ ನೀರು ಹಾಕಿ ಮೃದುವಾದ ಹಿಟ್ಟು ಸಿದ್ಧಪಡಿಸಿಕೊಳ್ಳಿ.
  7. ರಿಬ್ಬನ್ ಪಕೋಡದ ಅಚ್ಚಿಗೆ ಹಿಟ್ಟನ್ನು ಹಾಕಿ ಬಿಸಿ ಎಣ್ಣೆಗೆ ಒತ್ತಿ. 
  8. ಮಧ್ಯಮ ಉರಿಯಲ್ಲಿ ಕಾಯಿಸಿ. ಸುಮಾರು ಹತ್ತು ಸೆಕೆಂಡ್ ಗಳ ನಂತರ ತಿರುಗಿಸಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  9. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಬಿಸಿ ಆರಿದ ಮೇಲೆ ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. 

ಬುಧವಾರ, ನವೆಂಬರ್ 18, 2020

Kaayi burfi recipe in Kannada | ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ

 

Kaayi burfi recipe in Kannada
Kaayi burfi recipe in Kannada

Kaayi burfi recipe in Kannada | ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ  


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ (ಒತ್ತಿ ತುಂಬಿಸಿದ್ದು)
  2. 3/4 ಕಪ್ ಬೆಲ್ಲ
  3. 1 ಟೇಬಲ್ ಸ್ಪೂನ್ ತುಪ್ಪ
  4. ಎರಡು ಏಲಕ್ಕಿ
  5. ತುಪ್ಪ ಹಚ್ಚಿದ ಪ್ಲೇಟ್ ಅಥವಾ ಟ್ರೇ

ಬೆಲ್ಲ ಹಾಕಿದ ಕಾಯಿ ಬರ್ಫಿ ಮಾಡುವ ವಿಧಾನ:

  1. ತೆಂಗಿನತುರಿ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ತೆಗೆದುಕೊಳ್ಳಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್) ನುಣ್ಣಗೆ ಅರೆಯಿರಿ. 
  3. ಆಮೇಲೆ ಬೆಲ್ಲ ಸೇರಿಸಿ ಪುನಃ ಅರೆಯಿರಿ. ಬೆಲ್ಲದಲ್ಲಿ ಕಸ-ಕಡ್ಡಿ ಇದೆ ಎನಿಸಿದರೆ, ಅರ್ಧ ಕಪ್ ನೀರಿನಲ್ಲಿ, ಬೆಲ್ಲ ಕರಗಿಸಿ, ಆ ನೀರಿನಲ್ಲಿ ಕಾಯಿಯನ್ನು ಅರೆಯಿರಿ. 
  4. ಒಂದು ಬಾಣಲೆಗೆ ಅರೆದ ಮಿಶ್ರಣವನ್ನು ಹಾಕಿ ಕುದಿಯಲು ಇಡಿ. 
  5. ಒಂದು ಪ್ಲೇಟ್ ಅಥವಾ ಟ್ರೇ ಗೆ ತುಪ್ಪ ಹಚ್ಚಿಟ್ಟುಕೊಳ್ಳಿ. 
  6. ಮಧ್ಯಮ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಇರಿ. 
  7. 4 - 5 ನಿಮಿಷದಲ್ಲಿ ಸ್ವಲ್ಪ ಗಟ್ಟಿಯಾಗುವುದು. 
  8. ತುಪ್ಪವನ್ನು ಸೇರಿಸಿ. ಮಗುಚುವುದನ್ನು ಮುಂದುವರೆಸಿ. 
  9. ಮಧ್ಯಮ ಉರಿಯಲ್ಲಿ ಕೈ ಬಿಡದೆ ಮಗುಚುತ್ತಿರಿ. 
  10. ಒಂದೈದು ನಿಮಿಷದಲ್ಲಿ ಕಾಯಿ ಮತ್ತು ಬೆಲ್ಲದ ಮಿಶ್ರಣ ಒಂದೇ ಮುದ್ದೆಯಾಗಿ, ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ. 
  11. ಈ ಸಮಯದಲ್ಲಿ ತುಪ್ಪ ಸವರಿದ ಟ್ರೇ ಗೆ ಸುರಿಯಿರಿ. 
  12. ತುಪ್ಪ ಸವರಿದ ಚಮಚದ ಹಿಂಭಾಗ ಉಪಯೋಗಿಸಿ ಹರಡಿ. 
  13. ಬಿಸಿ ಸ್ವಲ್ಪ ಆರಿದ ಮೇಲೆ ಕತ್ತರಿಸಿ. 
  14. ಸಂಪೂರ್ಣ ಬಿಸಿ ಆರಿದ ಮೇಲೆ ಕಾಯಿ ಬರ್ಫಿ ತೆಗೆದು ಬಡಿಸಿ, ತಿಂದು ಆನಂದಿಸಿ. 

ಸೋಮವಾರ, ನವೆಂಬರ್ 9, 2020

Carrot rice recipe in Kannada | ಕ್ಯಾರಟ್ ರೈಸ್ ಮಾಡುವ ವಿಧಾನ

 

Carrot rice recipe in Kannada

Carrot rice recipe in Kannada | ಕ್ಯಾರಟ್ ರೈಸ್ ಮಾಡುವ ವಿಧಾನ 

ಕ್ಯಾರಟ್ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ಅನ್ನ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 2 ಟೇಬಲ್ ಚಮಚ ಶೇಂಗಾ 
  6. 2 ಟೇಬಲ್ ಚಮಚ ಗೋಡಂಬಿ
  7. 1 - 2 ಹಸಿಮೆಣಸಿನಕಾಯಿ
  8. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. 4-5 ಕರಿ ಬೇವಿನ ಎಲೆ
  10. 1 ದೊಡ್ಡ ಗಾತ್ರದ ಕ್ಯಾರಟ್
  11. ದೊಡ್ಡ ಚಿಟಿಕೆ ಅರಶಿನ ಪುಡಿ
  12. 1 ಟೀಸ್ಪೂನ್ ರಸಂ ಪೌಡರ್ 
  13. 2 ಟೇಬಲ್ ಚಮಚ ಅಡುಗೆ ಎಣ್ಣೆ
  14. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  15. 2 ಟೀಸ್ಪೂನ್ ನಿಂಬೆ ರಸ
  16. 2 ಟೇಬಲ್ ಚಮಚ ತೆಂಗಿನತುರಿ
  17. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು

ಕ್ಯಾರಟ್ ರೈಸ್ ಮಾಡುವ ವಿಧಾನ:

  1. ಕ್ಯಾರಟ್ ತುರಿಯಿರಿ, ಬೇರೆ ಪದಾರ್ಥಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ. 
  3. ನಂತ್ರ ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ. 
  4. ಸಾಸಿವೆ ಸಿಡಿದ ಕೂಡಲೇ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  5. ನಂತ್ರ ತುರಿದ ಕ್ಯಾರಟ್ ಸೇರಿಸಿ ಒಂದು ನಿಮಿಷ ಹುರಿಯಿರಿ.
  6. ಆಮೇಲೆ ಅರಿಶಿನ ಪುಡಿ, ಉಪ್ಪು ಮತ್ತು ರಸಂ ಪುಡಿ ಸೇರಿಸಿ. 
  7. ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. 
  8. ಬೇಯಿಸಿದ ಅನ್ನ ಸೇರಿಸಿ. ಮಗುಚಿ. 
  9. ಕೊನೆಯಲ್ಲಿ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಸೇರಿಸಿ. 
  10. ಸ್ಟವ್ ಆಫ್ ಮಾಡಿ, ಚೆನ್ನಾಗಿ ಕಲಸಿ, ಬಡಿಸಿ.

Related Posts Plugin for WordPress, Blogger...