ಉತ್ತರ ಭಾರತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉತ್ತರ ಭಾರತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಆಗಸ್ಟ್ 1, 2023

Pocket paratha recipe in Kannada | ಪಾಕೆಟ್ ಪರೋಟ ಮಾಡುವ ವಿಧಾನ

 

Pocket paratha recipe in Kannada

Pocket paratha recipe in Kannada | ಪಾಕೆಟ್ ಪರೋಟ ಮಾಡುವ ವಿಧಾನ 

ಪಾಕೆಟ್ ಪರೋಟ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಗೋಧಿ ಹಿಟ್ಟು
  2. 1 ಟೇಬಲ್ ಚಮಚ ಎಣ್ಣೆ
  3. ಉಪ್ಪು ರುಚಿಗೆ ತಕ್ಕಷ್ಟು
  4. 3 ಟೇಬಲ್ ಚಮಚ ಎಣ್ಣೆ ಪರೋಟ ಕಾಯಿಸಲು

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ 
  2. 1 - 2 ಹಸಿಮೆಣಸಿನಕಾಯಿ
  3. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  4. 1/2 ದೊಣ್ಣೆಮೆಣಸು
  5. 1 ಸಣ್ಣ ಕ್ಯಾರಟ್ 
  6. ಚಿಟಿಕೆ ಅರಿಶಿನ
  7. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  8. 1/2 ಟೀಸ್ಪೂನ್ ಧನಿಯಾ ಪುಡಿ
  9. 1/4 ಟೀಸ್ಪೂನ್ ಜೀರಿಗೆ ಪುಡಿ
  10. 1/4 ಟೀಸ್ಪೂನ್ ಗರಂ ಮಸಾಲಾ
  11. 1/4 ಟೀಸ್ಪೂನ್ ಮಾವಿನಕಾಯಿ ಪುಡಿ
  12. 100gm ಪನ್ನೀರ್
  13. 1 ಟೇಬಲ್ ಚಮಚ ಕಸೂರೀಮೇಥಿ ಅಥವಾ ಕೊತ್ತಂಬರಿ ಸೊಪ್ಪು
  14. 3 ಟೇಬಲ್ ಚಮಚ ಎಣ್ಣೆ
  15. ಉಪ್ಪು ರುಚಿಗೆ ತಕ್ಕಷ್ಟು

ಪಾಕೆಟ್ ಪರೋಟ ಮಾಡುವ ವಿಧಾನ:

  1. ಗೋಧಿ ಹಿಟ್ಟು, ಉಪ್ಪು, ಎಣ್ಣೆ ಮತ್ತು ನೀರು ಬಳಸಿ ಮೆತ್ತಗಿನ ಚಪಾತಿ ಹಿಟ್ಟು ಕಲಸಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.  
  3.  ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಲು ಮುಂದುವರೆಸಿ. 
  4. ಸಣ್ಣಗೆ ಕತ್ತರಿಸಿದ ದೊಣ್ಣೆಮೆಣಸು ಮತ್ತು ತುರಿದ ಕ್ಯಾರಟ್ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  5. ಅದಕ್ಕೆ ಉಪ್ಪು ಅರಿಶಿನ, ಧನಿಯಾ ಪುಡಿ, ಜೀರಿಗೆ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲಾ ಪುಡಿ ಮತ್ತು ಮಾವಿನಕಾಯಿ ಪುಡಿ ಸೇರಿಸಿ ಮಗುಚಿ. 
  6. ತುರಿದ ಪನೀರ್ ಮತ್ತು ಕಸೂರಿ ಮೇಥಿ ಸೇರಿಸಿ ಮಗುಚಿ. 
  7. ಚಪಾತಿ ಹಿಟ್ಟನ್ನು ತೆಗೆದುಕೊಂಡು, ತೆಳುವಾದ ದೊಡ್ಡ ಚಪಾತಿ ಲಟ್ಟಿಸಿ.
  8. ಮಧ್ಯದಲ್ಲಿ ಮಸಾಲೆ ಇಟ್ಟು ಪಾಕೆಟಿನಂತೆ ಮಡಿಸಿ. 
  9. ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ತುಪ್ಪ ಅಥವಾ ಎಣ್ಣೆ ಹಾಕಿ. 
  10. ಕೆಚಪ್ ಅಥವಾ ಮೊಸರು ಅಥವಾ ಯಾವುದೇ ಗೊಜ್ಜಿನೊಂದಿಗೆ  ಬಡಿಸಿ. ಹಾಗೆಯೂ ತಿನ್ನಬಹುದು. 

ಶುಕ್ರವಾರ, ಮಾರ್ಚ್ 3, 2023

Dal fry recipe in Kannada | ದಾಲ್ ಫ್ರೈ ಮಾಡುವ ವಿಧಾನ

 

Dal fry recipe in Kannada

Dal fry recipe in Kannada | ದಾಲ್ ಫ್ರೈ ಮಾಡುವ ವಿಧಾನ 

ದಾಲ್ ಫ್ರೈ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೊಗರಿಬೇಳೆ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. ಒಂದು ಈರುಳ್ಳಿ
  5. 7 - 8 ಕರಿಬೇವಿನ ಎಲೆ
  6. 1 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  7. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  8. 1 ಟೊಮೇಟೊ
  9. 1/4 ಟೀಸ್ಪೂನ್ ಅರಶಿನ ಪುಡಿ
  10. 1 ಟೀಸ್ಪೂನ್ ಅಚ್ಚಖಾರದ ಪುಡಿ
  11. 1 ಟೀಸ್ಪೂನ್ ಗರಂ ಮಸಾಲಾ
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. ಉಪ್ಪು ರುಚಿಗೆ ತಕ್ಕಷ್ಟು
  14. 1 ಟೇಬಲ್ ಚಮಚ ಅಡುಗೆ ಎಣ್ಣೆ

ದಾಲ್ ಫ್ರೈ ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು, ಚಿಟಿಕೆ ಅರಿಶಿನ ಮತ್ತು ನಾಲ್ಕೈದು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  2. ಬೇಯಿಸಿದ ಬೇಳೆಯನ್ನು ಸೌಟಿನಲ್ಲಿ ಮಸೆದು ಪಕ್ಕಕ್ಕಿಡಿ.  
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  4.  ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  5. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಗುಚಿ. 
  6. ಕತ್ತರಿಸಿದ ಟೊಮೇಟೊ ಸೇರಿಸಿ, ಮೆತ್ತಗಾಗುವವರೆಗೆ ಹುರಿಯಿರಿ.
  7. ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ. 
  8. ಮಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
  9. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
  10. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
  11. ಸ್ಟವ್ ಆಫ್ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ಆಗಸ್ಟ್ 17, 2020

Sweet curd recipe in Kannada | ಸಿಹಿ ಮೊಸರು (ಯೋಗರ್ಟ್) ಮಾಡುವ ವಿಧಾನ

 

Sweet curd recipe in Kannada | ಸಿಹಿ ಮೊಸರು (ಯೋಗರ್ಟ್) ಮಾಡುವ ವಿಧಾನ


ಸಿಹಿ ಮೊಸರು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಲೀಟರ್ ಹಾಲು
  2. ಅರ್ಧ ಕಪ್ ಸಕ್ಕರೆ
  3. ಕಾಲು ಕಪ್ ಮೊಸರು

ಸಿಹಿ ಮೊಸರು ಮಾಡುವ ವಿಧಾನ:

  1. ಹಾಲನ್ನು ಕುದಿಸಿ. 
  2. ಕುದಿಯಲು ಶುರು ಆದ ಮೇಲೆ, ಆಗಾಗ ಕೈಯಾಡಿಸುತ್ತಾ ಹತ್ತರಿಂದ ಹದಿನೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. 
  3. ಕುದಿಯುವ ಸಮಯದಲ್ಲಿ ಕಾಲು ಕಪ್ ಸಕ್ಕರೆಯನ್ನೂ ಸೇರಿಸಿ. 
  4. ಹಾಲು ಗಟ್ಟಿಯಾದ ನಂತರ ಸ್ಟವ್ ಆಫ್ ಮಾಡಿ. 
  5. ಇನ್ನೊಂದು ಬಾಣಲೆಯಲ್ಲಿ ಉಳಿದ ಕಾಲು ಕಪ್ ಸಕ್ಕರೆಯನ್ನು, ನೀರು ಹಾಕದೆ ಹೊಂಬಣ್ಣಕ್ಕೆ ಬರುವವರೆಗೆ ಕರಗಿಸಿ. 
  6. ಅದನ್ನು ಸ್ವಲ್ಪ ಸ್ವಲ್ಪವಾಗಿ ಬಿಸಿ ಹಾಲಿಗೆ ಹಾಕಿ ಕರಗಿಸಿ. 
  7. ಆಮೇಲೆ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು ಚನ್ನಾಗಿ ಕಲಕಿ. 
  8. ಅದನ್ನು, ಹಾಲು ಬಿಸಿ ಕಡಿಮೆ ಆದ ಮೇಲೆ (ಉಗುರು ಬೆಚ್ಚಗೆ ಗಿಂತ ಸ್ವಲ್ಪ ಜಾಸ್ತಿ ಬಿಸಿ ಇರಲಿ), ಸೇರಿಸಿ.
  9. ಚೆನ್ನಾಗಿ ಎತ್ತಿಹಾಕಿ ಮಿಕ್ಸ್ ಮಾಡಿ.  
  10. ಮೊಸರು ಮಾಡುವ ಪಾತ್ರೆಗೆ ಹಾಕಿ. 
  11. ಮುಚ್ಚಳ ಮುಚ್ಚಿ, ಬೆಚ್ಚಗಿನ ಜಾಗದಲ್ಲಿ, ಮೊಸರು ಆಗಲು ಬಿಡಿ. 
  12. ನಂತ್ರ ಐಸ್ ಕ್ರೀಮ್ ನ ಹಾಗೆ ಬಡಿಸಿ. ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ತಿನ್ನಬಹುದು.  

ಭಾನುವಾರ, ಸೆಪ್ಟೆಂಬರ್ 10, 2017

chana masala recipe in Kannada | ಚನಾ ಮಸಾಲಾ ಮಾಡುವ ವಿಧಾನ

Chana masala recipe in Kannada

Chana masala recipe in Kannada | ಚನಾ ಮಸಾಲಾ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಾಬುಲ್ ಕಡ್ಲೆ
  2.  1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  3. 2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
  4.  1/2 ಟೀಸ್ಪೂನ್ ಜೀರಿಗೆ
  5. 1 ಪುಲಾವ್ ಅಥವಾ ದಾಲ್ಚಿನ್ನಿ ಎಲೆ
  6. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ (ಅಥವಾ ಸಣ್ಣಗೆ ಹೆಚ್ಚಿದ್ದು)
  7.  1/2 ಟೀಸ್ಪೂನ್ ಅಚ್ಚಖಾರದ ಪುಡಿ
  8.  1/4 ಟೀಸ್ಪೂನ್ ಗರಂ ಮಸಾಲಾ
  9.  1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  10. 1/4 ಟೀಸ್ಪೂನ್ ಜೀರಿಗೆ ಪುಡಿ 
  11. 1/4 ಟೀಸ್ಪೂನ್ ಅರಿಶಿನ ಪುಡಿ 
  12. 1/4 ಟೀಸ್ಪೂನ್ ಮಾವಿನಕಾಯಿ ಪುಡಿ 
  13. 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು  (ಬೇಕಾದಲ್ಲಿ) 
  14. 1 ಟೇಬಲ್ ಚಮಚ ಅಡುಗೆ ಎಣ್ಣೆ 
  15. 1 ಟೇಬಲ್ ಚಮಚ ಬೆಣ್ಣೆ
  16. ಉಪ್ಪು ರುಚಿಗೆ ತಕ್ಕಷ್ಟು

ಚನಾ ಮಸಾಲಾ ಮಾಡುವ ವಿಧಾನ:

  1. ಕಾಬುಲ್ ಕಡ್ಲೆಯನ್ನು 5 - 6 ಘಂಟೆಗಳ ಕಾಲ ನೆನೆಸಿ.
  2. ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ದಾಲ್ಚಿನ್ನಿ ಎಲೆ ಹಾಕಿ. 
  3. ಜೀರಿಗೆ ಸಿಡಿದ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
  4.  ನಂತರ ಸಣ್ಣಗೆ ಕತ್ತರಿಸಿದ ಟೊಮೇಟೊ ಸೇರಿಸಿ ಹುರಿಯಿರಿ.
  5. ನಂತರ ಅದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲಾ, ಕೊತ್ತಂಬರಿ ಅಥವಾ ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಮಾವಿನಕಾಯಿ ಪುಡಿ ಹಾಕಿ ಮಗುಚಿ. 
  6. ಆಮೇಲೆ ಉಪ್ಪು ಮತ್ತು ಅರಿಶಿನ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  7. ಅದಕ್ಕೆ ನೆನೆಸಿದ ಕಡ್ಲೆಯನ್ನು ಹಾಕಿ.
  8. 2 ಕಪ್ ನೀರು ಮತ್ತು ಕಸೂರಿ ಮೇಥಿ ಹಾಕಿ. 
  9. ಮುಚ್ಚಳ ಮುಚ್ಚಿ ಕಡ್ಲೆ ಮೆತ್ತಗಾಗುವವರೆಗೆ ಬೇಯಿಸಿ. ನಾನು 2 - 2 - 2 ರಂತೆ ಮೂರು ಬಾರಿ ವಿಷಲ್ ಮಾಡಿದೆ. 
  10. ಕುಕ್ಕರ್ ನ ಒತ್ತಡ ಕಡಿಮೆ ಆದಮೇಲೆ ಸಟ್ಟುಗದ ಹಿಂಭಾಗ ಉಪಯೋಗಿಸಿ ಸ್ವಲ್ಪ ಕಡ್ಲೆಯನ್ನು ಮಸೆಯಿರಿ ಅಥವಾ ಮ್ಯಾಶ್ ಮಾಡಿ .
  11. ಸ್ವಲ್ಪ ಹೊತ್ತು ಕುದಿಸಿ ಸ್ಟವ್ ಆಫ್ ಮಾಡಿ. ಕೊನೆಯಲ್ಲಿ ಬೆಣ್ಣೆ ಹಾಕಿ ಮಗುಚಿ. ಚಪಾತಿ ಅಥವಾ ಪೂರಿಯೊಂದಿಗೆ ಬಡಿಸಿ.

ಗುರುವಾರ, ಫೆಬ್ರವರಿ 16, 2017

Paneer butter masala recipe in Kannada | ಪನೀರ್ ಬಟರ್ ಮಸಾಲಾ ಮಾಡುವ ವಿಧಾನ

Paneer butter masala recipe in Kannada

Paneer butter masala recipe in Kannada | ಪನೀರ್ ಬಟರ್ ಮಸಾಲಾ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 200gm ಪನೀರ್ ಅಥವಾ 1 ಲೀಟರ್ ಹಾಲಿನಿಂದ ಮಾಡಿದ ಪನೀರ್ 
  2. 1 ಸಣ್ಣ ಪಲಾವ್ ಎಲೆ 
  3. 1 - 2 ಹಸಿರು ಮೆಣಸಿನಕಾಯಿ
  4. 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
  5. 1/2 ಟೀಸ್ಪೂನ್ ಗರಂ ಮಸಾಲಾ
  6. 2 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  7. 1/4 ಟೀಸ್ಪೂನ್ ಅರಿಶಿನ ಪುಡಿ 
  8. 1/2 ಕಪ್ ಹಾಲು
  9. 2 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು
  10. 2 ಟೇಬಲ್ ಚಮಚ ಅಡುಗೆ ಎಣ್ಣೆ 
  11. 2 ಟೇಬಲ್ ಚಮಚ ಬೆಣ್ಣೆ
  12. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 2 ಮಧ್ಯಮ ಗಾತ್ರದ ಈರುಳ್ಳಿ 
  2. 4 ಎಸಳು ಬೆಳ್ಳುಳ್ಳಿ
  3. 1 ಇಂಚು ಉದ್ದದ ಶುಂಠಿ
  4. 3 ಮಧ್ಯಮ ಗಾತ್ರದ ಟೊಮೇಟೊ
  5. 10 - 12 ಗೋಡಂಬಿ

ಪನೀರ್ ಬಟರ್ ಮಸಾಲಾ ಮಾಡುವ ವಿಧಾನ:

  1. ಗೋಡಂಬಿಯನ್ನು ಅರ್ಧ ಘಂಟೆ ನೆನೆಸಿಟ್ಟು ಪೇಸ್ಟ್ ಮಾಡಿಟ್ಟುಕೊಳ್ಳಿ. 
  2. ದೊಡ್ಡದಾಗಿ ಕತ್ತರಿಸಿದ ಟೊಮ್ಯಾಟೊವನ್ನು ನೀರಿನಲ್ಲಿ ೨ ನಿಮಿಷ ಕುದಿಸಿ, ಬಿಸಿ ಆರಿದ ಮೇಲೆ ಪೇಸ್ಟ್ ಮಾಡಿಟ್ಟುಕೊಳ್ಳಿ. 
  3. ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಪೇಸ್ಟ್ ಮಾಡಿಟ್ಟುಕೊಳ್ಳಿ.
  4. ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಬೆಣ್ಣೆಯನ್ನು ಬಿಸಿಮಾಡಿ. 
  5. ಪಲಾವ್ ಎಲೆ ಮತ್ತು ಅರೆದ ಈರುಳ್ಳಿ+ಬೆಳ್ಳುಳ್ಳಿ ಮತ್ತು +ಶುಂಠಿ ಪೇಸ್ಟ್ ನ್ನು ಹಾಕಿ ೩ - ೪ ನಿಮಿಷ ಬಾಡಿಸಿ. 
  6. ಸೀಳಿದ ಹಸಿರುಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಮಗುಚಿ. 
  7. ಗೋಡಂಬಿ ಪೇಸ್ಟ್ ಹಾಕಿ ಮಗುಚಿ. 
  8. ಟೊಮೇಟೊ ಪೇಸ್ಟ್ ಮತ್ತು ಅರಿಶಿನ ಪುಡಿ ಹಾಕಿ. ೩ - ೪ ನಿಮಿಷ ಬಾಡಿಸಿ.
  9. ನಂತರ ಅದಕ್ಕೆ ಗರಂ ಮಸಾಲಾ ಮತ್ತು ಕೊತ್ತಂಬರಿ ಅಥವಾ ಧನಿಯಾ ಪುಡಿ  ಹಾಕಿ ಮಗುಚಿ. 
  10. ಹಾಲು ಮತ್ತು ಉಪ್ಪು ಹಾಕಿ. ಮುಚ್ಚಳ ಮುಚ್ಚಿ ೪ - ೫ ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.
  11. ಕತ್ತರಿಸಿದ ಪನೀರ್ ಮತ್ತು ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
  12. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಗುರುವಾರ, ಡಿಸೆಂಬರ್ 15, 2016

Peas pulao recipe in Kannada | ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ

Peas pulao recipe in Kannada

Peas pulao recipe in Kannada | ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಬಾಸಮತಿ ಅಕ್ಕಿ
  2. 1 ಕಪ್ ಹಸಿ ಬಟಾಣಿ 
  3. 1.5 ಕಪ್ ನೀರು
  4. 0.5 ಕಪ್ ತೆಂಗಿನ ಕಾಯಿಹಾಲು
  5. 4 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ
  6. 1 ಸಣ್ಣ ಪುಲಾವ್ ಎಲೆ
  7. 1 ಮರಾಟಿ ಮೊಗ್ಗು
  8. 2 ದಳ ಜಾಪತ್ರೆ (ಬೇಕಾದಲ್ಲಿ)
  9. 1 ಏಲಕ್ಕಿ
  10. 1/2 ಬೆರಳುದ್ದ ಚಕ್ಕೆ 
  11. 5 - 6 ಲವಂಗ
  12. 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
  13. 5 ಗೋಡಂಬಿ ತುಂಡು ಮಾಡಿದ್ದು 
  14. 4 - 5 ಬೇಳೆ ಬೆಳ್ಳುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  15. 1 - 2 ಹಸಿರು ಮೆಣಸಿನಕಾಯಿ
  16. 2 ಟೇಬಲ್ ಚಮಚ ಕತ್ತರಿಸಿದ ಪುದೀನಾ ಎಲೆ ಅಥವಾ ಮೆಂತೆ ಸೊಪ್ಪು (ಬೇಕಾದಲ್ಲಿ)
  17. 2 ಈರುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  18. 1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  19. 2 ಚಮಚ ನಿಂಬೆ ರಸ (ಬೇಕಾದಲ್ಲಿ)
  20. ಉಪ್ಪು ರುಚಿಗೆ ತಕ್ಕಷ್ಟು


ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ:

  1. ಅಕ್ಕಿ ತೊಳೆದು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ. 
  2. ಬಟಾಣಿ ಸುಲಿಯಿರಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಪುದಿನ ಎಲೆಗಳನ್ನು ಕತ್ತರಿಸಿ. 
  3. ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ. 
  4. ಕುಕ್ಕರ್ ನಲ್ಲಿ ತುಪ್ಪ ಅಥವಾ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ಪುಲಾವ್ ಎಲೆ, ಮರಾಟಿ ಮೊಗ್ಗು, ಜಾಪತ್ರೆ, ಏಲಕ್ಕಿ, ಚಕ್ಕೆ ಮತ್ತು ಲವಂಗ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. 
  5. ಸಣ್ಣದಾಗಿ ಕತ್ತರಿಸಿದ ಶುಂಠಿ , ಬೆಳ್ಳುಳ್ಳಿ ಮತ್ತು ತುಂಡು ಮಾಡಿದ ಗೋಡಂಬಿಯನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
  6. ಕತ್ತರಿಸಿದ ಪುದಿನ ಎಲೆ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ. 
  7. ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಮಗುಚಿ. 
  8. ಮತ್ತು ಸುಲಿದ ಬಟಾಣಿ ಹಾಕಿ ಮಧ್ಯಮ ಉರಿಯಲ್ಲಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  9. ನಂತರ ತೊಳೆದಿಟ್ಟ ಅಕ್ಕಿ ಹಾಕಿ 2 - 3 ನಿಮಿಷಗಳ ಕಾಲ ಹುರಿಯಿರಿ. 
  10. ನೀರು ಮತ್ತು ತೆಂಗಿನ ಕಾಯಿ ಹಾಲು ಹಾಕಿ ಮಗುಚಿ.
  11. ಉಪ್ಪು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ. 
  12. ಒತ್ತಡ ಇಳಿದ ಕೂಡಲೇ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಕಲಸಿ. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಸವಿಯಿರಿ.

ಬುಧವಾರ, ಡಿಸೆಂಬರ್ 14, 2016

Alugadde hookosu gojju in Kannada | ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ

Alugadde hookosu gojju in Kannada

Alugadde hookosu gojju in Kannada | ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೂಕೋಸು
  2.  1/2 ಕಪ್ ಕತ್ತರಿಸಿದ ಆಲೂಗಡ್ಡೆ
  3.  1/2 ಕಪ್ ಹಸಿ ಬಟಾಣಿ (ಬದಲಿಗೆ ಆಲೂಗಡ್ಡೆಯನ್ನು ಹೆಚ್ಚಿಸಬಹುದು)
  4.  1/2 ಟೀಸ್ಪೂನ್ ಜೀರಿಗೆ
  5.  1 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
  6.  1/4 ಟೀಸ್ಪೂನ್ ಗರಂ ಮಸಾಲಾ
  7.  1 ಟೀಸ್ಪೂನ್ ಕೊತ್ತಂಬರಿ ಅಥವಾ ಧನಿಯಾ ಪುಡಿ 
  8. 1/4 ಟೀಸ್ಪೂನ್ ಅರಿಶಿನ ಪುಡಿ 
  9. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. 1 ಟೇಬಲ್ ಚಮಚ ಕಸೂರಿ ಮೇಥಿ ಅಥವಾ ಒಣಗಿದ ಮೆಂತೆ ಸೊಪ್ಪು  (ಬೇಕಾದಲ್ಲಿ) 
  11. 1 ಟೇಬಲ್ ಚಮಚ ಅಡುಗೆ ಎಣ್ಣೆ 
  12. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1 ಕತ್ತರಿಸಿದ ಈರುಳ್ಳಿ 
  2. 1 ಕತ್ತರಿಸಿದ ದೊಡ್ಡ ಟೊಮೇಟೊ
  3. 4 ಎಸಳು ಬೆಳ್ಳುಳ್ಳಿ
  4. 1cm ಉದ್ದದ ಶುಂಠಿ

ಆಲೂಗಡ್ಡೆ ಹೂಕೋಸು ಗೊಜ್ಜು ಮಾಡುವ ವಿಧಾನ:

  1. ಹೂಕೋಸನ್ನು ಆಯ್ದು, ಕುದಿಯುವ ಉಪ್ಪು ನೀರಿನಲ್ಲಿ ಎರಡು ನಿಮಿಷ ಹಾಕಿ ತೆಗೆದಿಟ್ಟುಕೊಳ್ಳಿ.
  2. ಮಿಕ್ಸಿಯಲ್ಲಿ ಅರೆಯಲು ಹೇಳಿದ ಪದಾರ್ಥಗಳನ್ನು ನುಣ್ಣನೆ ಅರೆದಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ. 
  4. ಜೀರಿಗೆ ಸಿಡಿದ ಮೇಲೆ ಅರೆದ ಪೇಸ್ಟ್ ನ್ನು ಹಾಕಿ ಬಾಡಿಸಿ. 
  5. ನಂತರ ಅದಕ್ಕೆ ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಕೊತ್ತಂಬರಿ ಅಥವಾ ಧನಿಯಾ ಪುಡಿ ಮತ್ತು ಅರಿಶಿನ ಪುಡಿ ಹಾಕಿ ಮಗುಚಿ. 
  6. ಅದಕ್ಕೆ ಹೂಕೋಸು, ಹೆಚ್ಚಿದ ಆಲೂಗಡ್ಡೆ ಮತ್ತು ಹಸಿ ಬಟಾಣಿಯನ್ನು ಹಾಕಿ.
  7. ರುಚಿಗೆ ತಕ್ಕಷ್ಟು ಉಪ್ಪು ಮತ್ತು ೧ ಕಪ್ ನೀರು ಹಾಕಿ ಕುದಿಸಿ. 
  8. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ತರಕಾರಿಗಳು ಮೆತ್ತಗೆ ಬೇಯುವವರೆಗೆ ಬೇಯಿಸಿ. 
  9. ಕಸೂರಿ ಮೇಥಿ ಹಾಕಿ ಒಂದೆರಡು ನಿಮಿಷ ಕುದಿಸಿ.
  10. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಚಪಾತಿ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಬುಧವಾರ, ಆಗಸ್ಟ್ 3, 2016

Layered parota recipe in Kannada | ಪದರು ಪದರಾದ ಪರೋಟ ಮಾಡುವ ವಿಧಾನ

Layered parota recipe in Kannada

Layered parota recipe in Kannada | ಪದರು ಪದರಾದ ಪರೋಟ ಮಾಡುವ ವಿಧಾನ




ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಮೃದುವಾದ ಚಪಾತಿ ಹಿಟ್ಟು 
  2. ಪಾಸ್ತಾ ಅಥವಾ ಪಿಜ್ಜಾ ಸೀಸನಿಂಗ್ (ಬೇಕಾದಲ್ಲಿ ಅಥವಾ ಬೇರೆ ನಿಮ್ಮಿಷ್ಟದ ಮಸಾಲೆ ಪುಡಿ)
  3. ಅಡುಗೆ ಎಣ್ಣೆ 
  4. ಗೋಧಿ ಹಿಟ್ಟು ಸ್ವಲ್ಪ


ಪದರು ಪದರಾದ ಪರೋಟ ಮಾಡುವ ವಿಧಾನ:

  1. ಮೊದಲಿಗೆ ಒಂದು ನಿಂಬೆ ಗಾತ್ರದ ಚಪಾತಿ ಹಿಟ್ಟು ತೆಗೆದುಕೊಂಡು ತೆಳುವಾದ ಚಪಾತಿ ಮಾಡಿ. 
  2. ಅದರ ಮೇಲೆ ಎಣ್ಣೆ, ಮಸಾಲೆ ಪುಡಿ ಮತ್ತು ಸ್ವಲ್ಪ ಗೋಧಿ ಹಿಟ್ಟನ್ನು ಉದುರಿಸಿ. 
  3. ಚಪಾತಿಯನ್ನು ಸುತ್ತಿ ಎರಡು ಭಾಗವಾಗಿ ಸೀಳಿ. ಒಂದು ಬದಿ ಕೂಡಿ ಕೊಂಡಿರಲಿ. 
  4. ನಂತರ ಸೀಳಿದ ಚಪಾತಿಯನ್ನು ವೃತ್ತಾಕಾರವಾಗಿ ಸುತ್ತಿ ಪುನಃ ಲಟ್ಟಿಸಿ. ದಯವಿಟ್ಟು ಮೇಲೆ ನೀಡಿದ ವಿಡಿಯೋ ನೋಡಿ. 
  5. ಬಿಸಿ ತವಾ ಮೇಲೆ ಎಣ್ಣೆ ಹಾಕಿ ಎರಡು ಬದಿ ಕಾಯಿಸಿ. ನಿಮ್ಮಿಷ್ಟದ ಪಲ್ಯ ಅಥವಾ ಗೊಜ್ಜಿನೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜುಲೈ 29, 2016

Paneer recipe in Kannada | ಪನೀರ್ ಮಾಡುವ ವಿಧಾನ

Paneer recipe in Kannada

Paneer recipe in Kannada | ಪನೀರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಲೀ ಹಾಲು 
  2. 1/4 ಕಪ್ ಮೊಸರು (ಹುಳಿಯಿದ್ದರೆ ಉತ್ತಮ) 
  3. 2 ಟೀಸ್ಪೂನ್ ನಿಂಬೆ ರಸ ಅಥವಾ ವಿನೆಗರ್
  4. 1/2 ಕಪ್ ಐಸ್ ಕ್ಯೂಬ್ಸ್ ಅಥವಾ ತಣ್ಣಗಿನ ನೀರು

ಪನೀರ್ ಮಾಡುವ ವಿಧಾನ:

  1. ಮೊದಲಿಗೆ ಹಾಲನ್ನು ಒಂದು ದೊಡ್ಡ ಪಾತ್ರೆಯಲ್ಲಿ ಕುದಿಸಿ. 
  2. ಕುದಿಯುವ ಹಾಲಿಗೆ ಮೊಸರು ಹಾಕಿ. ಕೆಲವು ಸೆಕೆಂಡ್ ಗಳಲ್ಲಿ ಹಾಲು ಒಡೆಯುತ್ತದೆ. ಮೊಸರು ಹಾಕಿದರೆ ಪನೀರ್ ಮೃದುವಾಗಿ ಬರುತ್ತದೆ. 
  3. ಹಾಲು ಒಡೆಯುತ್ತಿಲ್ಲವಾದಲ್ಲಿ ೧ ರಿಂದ ೨ ಚಮಚದಷ್ಟು ನಿಂಬೆರಸವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. 
  4. ಹಾಲು ಒಡೆದ ಕೂಡಲೇ ಸ್ಟವ್ ಆಫ್ ಮಾಡಿ. ಮತ್ತು ಐಸ್ ಕ್ಯೂಬ್ಸ್ ಅಥವಾ ತಣ್ಣಗಿನ ನೀರನ್ನು ಹಾಕಿ. 
  5. ಒಡೆದ ಹಾಲನ್ನು ಬಟ್ಟೆಯ ಮೂಲಕ ಸೋಸಿ. ಗಂಟು ಕಟ್ಟಿ ಸ್ವಲ್ಪ ಹೊತ್ತು ನೀರಿಳಿಯಲು ಬಿಡಿ. 
  6. ನಂತರ ಅದನ್ನು ಯಾವುದಾದರೂ ಮಣೆ ಅಥವಾ ಪ್ಲೇಟ್ ಮೇಲಿಟ್ಟು ಮೇಲಿಂದ ಭಾರವಾದ ವಸ್ತುವನ್ನಿಡಿ. ೩೦ - ೪೦ ನಿಮಿಷದ ನಂತ್ರ ಪನೀರ್ ಸಿದ್ಧ. ನಿಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...