ಗುರುವಾರ, ಡಿಸೆಂಬರ್ 29, 2022

Majjige uppittu recipe in Kannada | ಮಜ್ಜಿಗೆ ಉಪ್ಪಿಟ್ಟು ಮಾಡುವ ವಿಧಾನ

 

Majjige uppittu recipe in Kannada

Majjige uppittu recipe in Kannada | ಮಜ್ಜಿಗೆ ಉಪ್ಪಿಟ್ಟು ಮಾಡುವ ವಿಧಾನ

ಮಜ್ಜಿಗೆ ಉಪ್ಪಿಟ್ಟು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ರವೆ
  2. 1 ಕಪ್ ದಪ್ಪ ಮಜ್ಜಿಗೆ
  3. 2 ಕಪ್ ನೀರು
  4. 1/2 ಟೀಸ್ಪೂನ್ ಸಾಸಿವೆ
  5. 1 ಟೀಸ್ಪೂನ್ ಉದ್ದಿನಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1 ಒಣಮೆಣಸಿನಕಾಯಿ
  8. 1 ಟೀಸ್ಪೂನ್ ಶುಂಠಿ
  9. 2 ಹಸಿರು ಮೆಣಸಿನಕಾಯಿ
  10. 5-6 ಕರಿ ಬೇವಿನ ಎಲೆ
  11. 1 ಸಣ್ಣ ಈರುಳ್ಳಿ
  12. 2 ಟೇಬಲ್ ಚಮಚ ದೊಣ್ಣೆಮೆಣಸು
  13. 2 ಟೇಬಲ್ ಚಮಚ ಹಸಿಬಟಾಣಿ
  14. 1 ಸಣ್ಣ ಟೊಮೇಟೊ
  15. 2 - 3 ಟೇಬಲ್ ಚಮಚ ಅಡುಗೆ ಎಣ್ಣೆ
  16. ಒಂದು ಚಮಚ ತುಪ್ಪ
  17. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  18. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  19. 2 ಟೇಬಲ್ ಚಮಚ ತೆಂಗಿನತುರಿ

ಮಜ್ಜಿಗೆ ಉಪ್ಪಿಟ್ಟು ಮಾಡುವ ವಿಧಾನ:

  1. ರವೇಯನ್ನು ಒಂದು ಚಮಚ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ  ಒಳ್ಳೆಯ ಘಮ ಬರುವವರೆಗೆ ಹುರಿಯಿರಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಒಣಮೆಣಸು  ಹಾಕಿಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಶುಂಠಿ, ಕರಿಬೇವು ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ.
  4. ಈರುಳ್ಳಿ ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  5. ಹಸಿಬಟಾಣಿ ಮತ್ತು ದೊಣ್ಣೆಮೆಣಸು ಸೇರಿಸಿ ಹುರಿಯಿರಿ. 
  6. ಕತ್ತರಿಸಿದ ಟೊಮೇಟೊ ಹಾಕಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  7. ನಂತರ ಮಜ್ಜಿಗೆ ಮತ್ತು ನೀರು ಸೇರಿಸಿ. ಕುದಿಯಲು ಬಿಡಿ. 
  8. ತೆಂಗಿನತುರಿ  ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  9. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  10. ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ರವೇ ಹಾಕಿಮಗುಚಿ. 
  11. ಗಟ್ಟಿ ಆದ ಮೇಲೆ ಒಂದು ಚಮಚ ತುಪ್ಪ ಹಾಕಿ ಮಗುಚಿ.
  12.  ಸ್ಟವ್ ಆಫ್ ಮಾಡಿ. ಬಿಸಿಬಿಸಿಯಾಗಿ ಸವಿಯಿರಿ. 


ಬುಧವಾರ, ಡಿಸೆಂಬರ್ 21, 2022

Banale dose recipe in Kannada | ಬಾಣಲೆ ದೋಸೆ ಮಾಡುವ ವಿಧಾನ

 

Banale dose recipe in Kannada

Banale dose recipe in Kannada | ಬಾಣಲೆ ದೋಸೆ ಮಾಡುವ ವಿಧಾನ

ಬಾಣಲೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1 - 2 ಟೇಬಲ್ ಸ್ಪೂನ್ ಉದ್ದಿನಬೇಳೆ
  3. 1 ಟೀಸ್ಪೂನ್ ಮೆಂತ್ಯ
  4. 1/2 ಕಪ್ ತೆಂಗಿನತುರಿ
  5. 1/2 ಕಪ್ ಗಟ್ಟಿ ಅವಲಕ್ಕಿ ಅಥವಾ 1 ಕಪ್ ತೆಳು ಅವಲಕ್ಕಿ
  6. ಎಣ್ಣೆ ದೋಸೆ ಮಾಡಲು
  7. 1/2 ಟೀಸ್ಪೂನ ಸಕ್ಕರೆ
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಟೀಸ್ಪೂನ್ ಸಾಸಿವೆ 
  2. 1 ಟೀಸ್ಪೂನ್ ಕಡ್ಲೆಬೇಳೆ 
  3. 1 ಟೀಸ್ಪೂನ್ ಉದ್ದಿನಬೇಳೆ
  4. 1 ಟೀಸ್ಪೂನ್ ಹೆಚ್ಚಿದ ಶುಂಠಿ 
  5. 1 - 2 ಹಸಿಮೆಣಸಿನಕಾಯಿ
  6. 2 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವು 
  7. ಸ್ವಲ್ಪ ಕೊತ್ತಂಬರಿ ಸೊಪ್ಪು
  8. 2 - 3 ಟೇಬಲ್ ಸ್ಪೂನ್ ಎಣ್ಣೆ

ಬಾಣಲೆ ದೋಸೆ ಮಾಡುವ ವಿಧಾನ:

  1. ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು ಹತ್ತು ನಿಮಿಷ ನೆನೆಯಲು ಬಿಡಿ.
  3. ನೆನೆಸಿದ ನಂತರ ಮೊದಲಿಗೆ ಅಕ್ಕಿ ಮತ್ತು ಬೇಳೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  4. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. 
  5. ನಂತರ ತೆಂಗಿನತುರಿ ಮತ್ತು ಅವಲಕ್ಕಿ ಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  6. ಅರೆದು ಅದೇ ಪಾತ್ರೆಗೆ ಹಾಕಿ.
  7. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 10 - 12 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಕಡ್ಲೆಬೇಳೆ ಮತ್ತು ಉದ್ದಿನಬೇಳೆಯ ಒಗ್ಗರಣೆ ಮಾಡಿ. 
  10. ಕತ್ತರಿಸಿದ ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹುರಿಯಿರಿ. 
  11. ಬಿಸಿ ಸ್ವಲ್ಪ ಕಡಿಮೆ ಆದಮೇಲೆ ದೋಸೆ ಹಿಟ್ಟಿಗೆ ಸೇರಿಸಿ. 
  12. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ಸೆಟ್ ದೋಸೆಯಂತೆ ಸಣ್ಣ ಸಣ್ಣ ದೋಸೆ ಮಾಡಿ. ಹಿಟ್ಟನ್ನು ಜಾಸ್ತಿ ಹರಡಬೇಡಿ. 
  13. ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
  14. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ಚಟ್ನಿಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಡಿಸೆಂಬರ್ 12, 2022

Eerulli bonda recipe in kannada | ಈರುಳ್ಳಿ ಬೋಂಡಾ ಮಾಡುವ ವಿಧಾನ

 

Eerulli bonda recipe in kannada

Eerulli bonda recipe in kannada | ಈರುಳ್ಳಿ ಬೋಂಡಾ ಮಾಡುವ ವಿಧಾನ

ಈರುಳ್ಳಿ ಬೋಂಡಾ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಮಧ್ಯಮ ಗಾತ್ರದ ಈರುಳ್ಳಿ
  2. 1 ಕಪ್ ಕಡ್ಲೆ ಹಿಟ್ಟು
  3. 1/4 ಕಪ್ ಅಕ್ಕಿ ಹಿಟ್ಟು
  4. 1 - 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ
  5. 2 ಟೇಬಲ್ ಚಮಚ ಹೆಚ್ಚಿದ ಕರಿಬೇವು
  6. 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 1 ಟೀಸ್ಪೂನ್ ಶುಂಠಿ
  8. 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
  9. 1/2 ಟೀಸ್ಪೂನ್ ಜೀರಿಗೆ
  10. 1/2 ಟೀಸ್ಪೂನ್ ಬಡೆಸೊಂಪು
  11. 1 ಟೀಸ್ಪೂನ್ ಅಚ್ಚ ಖಾರದ ಪುಡಿ
  12. 1/4 ಟೀಸ್ಪೂನ್ ಅರಿಶಿನ
  13. ಚಿಟಿಕೆ ಇಂಗು
  14. ಚಿಟಿಕೆ ಸೋಡಾ
  15. ಉಪ್ಪು ರುಚಿಗೆ ತಕ್ಕಷ್ಟು
  16. 2 ಟೇಬಲ್ ಚಮಚ ಬಿಸಿ ಎಣ್ಣೆ
  17. ಎಣ್ಣೆ ಖಾಯಿಸಲು ಅಥವಾ ಕರಿಯಲು

ಈರುಳ್ಳಿ ಬೋಂಡಾ ಮಾಡುವ ವಿಧಾನ:

  1. ಈರುಳ್ಳಿ ಉದ್ದನಾಗಿ ತೆಳುವಾಗಿ ಕತ್ತರಿಸಿಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಹಸಿರು ಮೆಣಸಿನಕಾಯಿ , ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  3. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಈರುಳ್ಳಿ ನೀರು ಬಿಡುತ್ತದೆ. 
  4. ಇನ್ನೊಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಓಮ, ಜೀರಿಗೆ, ಸೋಂಪು, ಮೆಣಸಿನ ಪುಡಿ, ಸೋಡಾ, ಅರಿಶಿನ ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ.
  5. 2 ಟೇಬಲ್ ಚಮಚ ಬಿಸಿ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.
  6. ಈ ಹಿಟ್ಟನ್ನು ಈರುಳ್ಳಿ ಇರುವ ಪಾತ್ರೆಗೆ ಹಾಕಿ. 
  7. ಬೇಕಾದಲ್ಲಿ ಸ್ವಲ್ಪ ನೀರು ಸಿಂಪಡಿಸಿ ಚೆನ್ನಾಗಿ ಕಲಸಿ. 
  8. ಕೈಗೆ ಅಂಟುವಂತ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ. 
  9. ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ. 
  10. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಉಂಡೆಗಳನ್ನ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  11. ಗುಳ್ಳೆಗಳು ಕಡಿಮೆ ಆಗಿ, ಹೊಂಬಣ್ಣಕ್ಕೆ ಬಂದ ಕೂಡಲೇ ತೆಗೆಯಿರಿ. 

ಮಂಗಳವಾರ, ನವೆಂಬರ್ 29, 2022

Shenga hurigaalu recipe in Kannada | ಶೇಂಗಾ ಹುರಿಗಾಳು ಮಾಡುವ ವಿಧಾನ

 

Shenga hurigaalu recipe in Kannada

Shenga hurigaalu recipe in Kannada | ಶೇಂಗಾ ಹುರಿಗಾಳು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ 
  2. 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  3. 1/4 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ 1 ಚಮಚ ನಿಂಬೆ ರಸ (ನಿಮ್ಮ ರುಚಿಗೆ ತಕ್ಕಂತೆ) 
  4.  1/4 ಟೀಸ್ಪೂನ್ ಅರಶಿನ ಪುಡಿ
  5. ದೊಡ್ಡ ಚಿಟಿಕೆ ಇಂಗು
  6. ಉಪ್ಪು ರುಚಿಗೆ ತಕ್ಕಷ್ಟು

ಶೇಂಗಾ ಹುರಿಗಾಳು ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕೈ ಬಿಡದೇ ಹುರಿಯಿರಿ. 
  2. ಹುರಿದ ಕಡಲೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ. 
  3. ನಂತರ ಒಂದು ಸಣ್ಣ ಬಟ್ಟಲಿನಲ್ಲಿ ಕೆಂಪು ಮೆಣಸಿನಕಾಯಿ ಪುಡಿ, ಮಾವಿನಕಾಯಿ ಪುಡಿ (ಅಥವಾ ನಿಂಬೆ ರಸ), ಅರಿಶಿನ, ಇಂಗು ಮತ್ತು ಉಪ್ಪುತೆಗೆದುಕೊಳ್ಳಿ.
  4. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಸಿದ್ಧ ಪಡಿಸಿಕೊಳ್ಳಿ. 
  5. ಹುರಿದ ಶೇಂಗಾ ಸ್ವಲ್ಪ ಬಿಸಿ ಕಡಿಮೆ ಆದಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. 
  6. ಪುನಃ ಸ್ಟವ್ ಮೇಲಿಟ್ಟು ಶೇಂಗಾ ಒಣಗುವವರೆಗೆ ಹುರಿಯಿರಿ. 
  7. ಸ್ಟವ್ ಆಫ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಶುಕ್ರವಾರ, ನವೆಂಬರ್ 25, 2022

Marige gojju recipe in Kannada | ಮರಿಗೆ ಗೊಜ್ಜು ಮಾಡುವ ವಿಧಾನ

 

Marige gojju recipe in Kannada

Marige gojju recipe in Kannada | ಮರಿಗೆ ಗೊಜ್ಜು ಮಾಡುವ ವಿಧಾನ

ಮರಿಗೆ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 3 - 4 ಒಣ ಮೆಣಸಿನಕಾಯಿ
  2. 3 ಟೀಸ್ಪೂನ್ ಉದ್ದಿನಬೇಳೆ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1 ಟೀಸ್ಪೂನ್ ಎಳ್ಳು
  5. 1/2 ಟೀಸ್ಪೂನ್ ಸಾಸಿವೆ
  6. 4 - 5 ಎಸಳು ಬೆಳ್ಳುಳ್ಳಿ ಅಥವಾ ದೊಡ್ಡ ಚಿಟಿಕೆ ಇಂಗು
  7. 1/2 ಕಪ್ ಮೊಸರು
  8. 1 ಟೀಸ್ಪೂನ್ ಅಡುಗೆ ಎಣ್ಣೆ
  9. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. ಸ್ವಲ್ಪ ಕರಿಬೇವು
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಮರಿಗೆ ಗೊಜ್ಜು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಮೊದಲಿಗೆ ಒಣ ಮೆಣಸಿನಕಾಯಿಯನ್ನು ಹುರಿಯಿರಿ. 
  2. ನಂತರ ಉದ್ದಿನಬೇಳೆ ಮತ್ತು ಕೊತ್ತಂಬರಿ ಬೀಜ ಸೇರಿಸಿ ಉದ್ದಿನಬೇಳೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  3. ಆಮೇಲೆ ಎಳ್ಳು ಮತ್ತು ಸಾಸಿವೆ ಸೇರಿಸಿ, ಸಾಸಿವೆ ಸಿಡಿಯುವವರೆಗೆ ಹುರಿಯಿರಿ. 
  4. ಕೊನೆಯಲ್ಲಿ  ಇಂಗು ಅಥವಾ ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ (ನಾನು ಇಂಗು ಹಾಕಿದ್ದೆ).
  5. ಉಪ್ಪು ಸೇರಿಸಿ, ಒಂದು ಸುತ್ತು ಮಗುಚಿ ಸ್ಟವ್ ಆಫ್ ಮಾಡಿ. 
  6. ಬಿಸಿ ಆರಿದ ಮೇಲೆ ಮಿಕ್ಸಿ ಜಾರ್ನಲ್ಲಿ ಹುರಿದ ಪದಾರ್ಥಗಳನ್ನು ತೆಗೆದುಕೊಂಡು, ತರಿತರಿಯಾಗಿ ಪುಡಿ ಮಾಡಿಕೊಳ್ಳಿ. 
  7.  ಕೊನೆಯಲ್ಲಿ ಮೊಸರು ಸೇರಿಸಿ ಒಂದೆರಡು ಸುತ್ತು ಅರೆಯಿರಿ. 
  8. ಒಂದು ಪಾತ್ರೆಗೆ ಬಗ್ಗಿಸಿ. ಈ ಗೊಜ್ಜಿಗೆ ಒಗ್ಗರಣೆ ಹಾಕಬೇಕಾಗಿಲ್ಲ. ಬೇಕಾದಲ್ಲಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ನವೆಂಬರ್ 1, 2022

Hesaru bele dose recipe in kannada | ಹೆಸರು ಬೇಳೆ ದೋಸೆ ಮಾಡುವ ವಿಧಾನ

 

Hesaru bele dose recipe in kannada

Hesaru bele dose recipe in kannada | ಹೆಸರು ಬೇಳೆ ದೋಸೆ ಮಾಡುವ ವಿಧಾನ

ಹೆಸರು ಬೇಳೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೆಸರು ಬೇಳೆ 
  2. 1/4 ಕಪ್ ಅಕ್ಕಿ ಹಿಟ್ಟು
  3. 1/4 ಕಪ್ ತೆಂಗಿನ ತುರಿ
  4. 2 - 3 ಒಣಮೆಣಸಿನಕಾಯಿ
  5. ಸಣ್ಣ ತುಂಡು ಶುಂಠಿ 
  6. 1 ಚಮಚ ಜೀರಿಗೆ
  7. ದೊಡ್ಡ ಚಿಟಿಕೆ ಇಂಗು
  8. ಉಪ್ಪು ರುಚಿಗೆ ತಕ್ಕಷ್ಟು.

ಹೆಸರು ಬೇಳೆ ದೋಸೆ ಮಾಡುವ ವಿಧಾನ:

  1. ಹೆಸರು ಬೇಳೆಯನ್ನು ತೊಳೆದು ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಯಲು ಬಿಡಿ.
  2. 15 ನಿಮಿಷದ ನಂತರ ನೀರು ಬಗ್ಗಿಸಿ ಅಕ್ಕಿ ಹಿಟ್ಟು, ತೆಂಗಿನ ತುರಿ, ಒಣಮೆಣಸಿನಕಾಯಿ, ಶುಂಠಿ,  ಮತ್ತು ಜೀರಿಗೆ ಸೇರಿಸಿ. 
  3. ಅಗತ್ಯವಿದ್ದಷ್ಟು ನೀರು ಹಾಕಿ ನಯವಾಗಿ ಅರೆಯಿರಿ.
  4. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಬಗ್ಗಿಸಿ. 
  5. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇಂಗು ಸೇರಿಸಿ. 
  6. ಚೆನ್ನಾಗಿ ಕಲಸಿ, ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
  7. ಕೂಡಲೇ ದೋಸೆ ಮಾಡಿ. 
  8. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. 
  9. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, ಮುಚ್ಚಳ ಮುಚ್ಚಿ ಬೇಯಿಸಿ.
  10. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ.
  11. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 

ಗುರುವಾರ, ಅಕ್ಟೋಬರ್ 20, 2022

Kara boondi recipe in Kannada | ಖಾರ ಬೂಂದಿ ಮಾಡುವ ವಿಧಾನ

 

Kara boondi recipe in Kannada

Kara boondi recipe in Kannada | ಖಾರ ಬೂಂದಿ ಮಾಡುವ ವಿಧಾನ

ಖಾರ ಬೂಂದಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡ್ಲೆಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. ದೊಡ್ಡ ಚಿಟಿಕೆ ಇಂಗು
  4. ದೊಡ್ಡ ಚಿಟಿಕೆಅರಿಶಿನ
  5. 1 ಟೀಸ್ಪೂನ್ ಉಪ್ಪು 
  6. 1 ಟೇಬಲ್ ಚಮಚ ಬಿಸಿ ಎಣ್ಣೆ
  7. ಎಣ್ಣೆ ಖಾರ ಸೇವ್ ಕಾಯಿಸಲು

ಮಿಕ್ಸ್ಚರ್ ಮಾಡಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ಶೇಂಗಾ
  2. 1/2 ಕಪ್ ಹುರಿಗಡಲೆ 
  3. ಸ್ವಲ್ಪ ಗೋಡಂಬಿ
  4. ಸ್ವಲ್ಪ ಕರಿಬೇವು
  5. ಅಚ್ಚ ಖಾರದ ಪುಡಿ ನಿಮ್ಮ ರುಚಿಗೆ ತಕ್ಕಂತೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಂತೆ

ಖಾರ ಬೂಂದಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಅರಿಶಿನ ಮತ್ತು ಉಪ್ಪನ್ನು ಹಾಕಿ ಕಲಸಿ. 
  2. 1 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ. 
  3. ಸ್ವಲ್ಪ ಸ್ವಲ್ಪ ನೀರು ಹಾಕಿ ತೆಳುವಾದ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ.
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 
  5. ಕಣ್ಣು ಸಟ್ಟುಗ ಬಳಸಿ ಬೂಂದಿ ಮಾಡಿ. 
  6. ಮಧ್ಯಮ ಉರಿಯಲ್ಲಿ ಗುಳ್ಳೆಗಳು ನಿಲ್ಲುವವರೆಗೆ ಕಾಯಿಸಿ ತೆಗೆಯಿರಿ. 
  7.  ಶೇಂಗಾ ಹುರಿದು ಹಾಕಿ.
  8. ಹುರಿಗಡಲೆ ಹುರಿದು ಹಾಕಿ. 
  9. ಗೋಡಂಬಿ ಮತ್ತು ಕರಿಬೇವು ಹುರಿದು ಹಾಕಿ. 
  10. ಬೇಕಾದಲ್ಲಿ ಉಪ್ಪು ಮತ್ತು ಅಚ್ಚಖಾರದ ಪುಡಿ ಹಾಕಿ ಕಲಸಿ. 

ಮಂಗಳವಾರ, ಅಕ್ಟೋಬರ್ 11, 2022

Thapale dose recipe in Kannada | ತಪಲೆ ದೋಸೆ ಮಾಡುವ ವಿಧಾನ

 

Thapale dose recipe in Kannada

Thapale dose recipe in Kannada | ತಪಲೆ ದೋಸೆ ಮಾಡುವ ವಿಧಾನ

ತಪಲೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1/2 ಕಪ್ ಅಕ್ಕಿ 
  2. 1/2 ಕಪ್ ತೊಗರಿಬೇಳೆ
  3. 1/2 ಕಪ್ ತೆಂಗಿನತುರಿ
  4. 2 - 4 ಒಣಮೆಣಸಿನಕಾಯಿ
  5. 1/2 ಟೀಸ್ಪೂನ್ ಜೀರಿಗೆ
  6. 1/2 ಟೀಸ್ಪೂನ್ ಕರಿಮೆಣಸು
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ತಪಲೆ ದೋಸೆ ಮಾಡುವ ವಿಧಾನ:

  1. ಅಕ್ಕಿ ಮತ್ತು ಬೇಳೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಅದಕ್ಕೆ ಜೀರಿಗೆ, ಕರಿಮೆಣಸು ಮತ್ತು ಒಣಮೆಣಸಿನಕಾಯಿ ಸೇರಿಸಿ. 
  3. ಎಲ್ಲ ಪದಾರ್ಥಗಳನ್ನು ಎರಡು ಬಾರಿ ಚೆನ್ನಾಗಿ ತೊಳೆದು, ಅಗತ್ಯವಿದ್ದಷ್ಟು ನೀರು ಸೇರಿಸಿ 3 - 4 ಘಂಟೆ ನೆನೆಯಲು ಬಿಡಿ. 
  4. ನೆನೆಸಿದ ಪದಾರ್ಥಗಳನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. ತೆಂಗಿನತುರಿಯನ್ನೂ ಸೇರಿಸಿ. 
  5. ನೆನೆಸಲು ಬಳಸಿದ ನೀರನ್ನೇ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. 
  6. ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  7. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, 
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  11. ಸಣ್ಣ ಉರಿಯಲ್ಲಿ ಗರಿಗರಿ ಆಗುವವರೆಗೆ  ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಸೆಪ್ಟೆಂಬರ್ 29, 2022

Avalakki habe kadubu recipe in Kannada | ಅವಲಕ್ಕಿ ಹಬೆಕಡುಬು ಮಾಡುವ ವಿಧಾನ

 

Avalakki habe kadubu recipe in Kannada

Avalakki habe kadubu recipe in Kannada | ಅವಲಕ್ಕಿ ಹಬೆಕಡುಬು ಮಾಡುವ ವಿಧಾನ

ಅವಲಕ್ಕಿ ಹಬೆಕಡುಬು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೀಡಿಯಂ ಅವಲಕ್ಕಿ (ಅಥವಾ 1 ಕಪ್ ಗಟ್ಟಿ ಅವಲಕ್ಕಿ)
  2. 1/2 ಕಪ್ ತೊಗರಿಬೇಳೆ 
  3. 1/2 ಕಪ್ ಕಡ್ಲೆಬೇಳೆ 
  4. 1 - 2 ಹಸಿರು ಮೆಣಸಿನಕಾಯಿ 
  5. 1/2 ಇಂಚು ಉದ್ದದ ಶುಂಠಿ
  6. 5 - 6 ಕರಿಬೇವಿನ ಎಲೆ 
  7. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು 
  8. 1/2 ಕಪ್ ತೆಂಗಿನತುರಿ
  9. ನಿಮ್ಮ ರುಚಿ ಪ್ರಕಾರ ಉಪ್ಪು

ಅವಲಕ್ಕಿ ಹಬೆಕಡುಬು ಮಾಡುವ ವಿಧಾನ:

  1. ಬೇಳೆಗಳನ್ನು 3 - 4 ಘಂಟೆಗಳ ಕಾಲ ನೆನೆಸಿಡಿ. 
  2. ಅವಲಕ್ಕಿಯನ್ನು ಸಂಪೂರ್ಣ ಮೆತ್ತಗಾಗವವರೆಗೆ ನೆನೆಸಿ, ನೀರು ಬಗ್ಗಿಸಿಡಿ. 
  3. ಬೇಳೆಗಳು ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿಗೆ ಹಾಕಿ. 
  4. ಅದಕ್ಕೆ ತೆಂಗಿನತುರಿ, ಶುಂಠಿ, ಹಸಿರುಮೆಣಸಿನಕಾಯಿ ಸೇರಿಸಿ. 
  5. ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ. 
  6. ಒಂದು ಅಗಲವಾದ ಪಾತ್ರೆಯಲ್ಲಿ ನೆನೆಸಿದ ಅವಲಕ್ಕಿ ಮತ್ತು ರುಬ್ಬಿದ ಮಿಶ್ರಣ ತೆಗೆದುಕೊಳ್ಳಿ. 
  7. ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಂತೆ ಉಪ್ಪು ಹಾಕಿ ಕಲಸಿ. 
  8. ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಕಾಲು ಕಪ್) ಮೆತ್ತಗಿನ ಮಿಶ್ರಣ ತಯಾರಿಸಿಕೊಳ್ಳಿ. 
  9. ಬೇಕಾದ ಆಕಾರದಲ್ಲಿ ಉಂಡೆಗಳನ್ನು ಮಾಡಿ. 
  10. 15 - 20 ನಿಮಿಷಗಳ ಕಾಲ ಹಬೆ ಅಥವಾ ಆವಿಯಲ್ಲಿ ಬೇಯಿಸಿ. 
  11. ಚಟ್ನಿ ಅಥವಾ ಹಸಿ ಮಜ್ಜಿಗೆ ಯೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು. 

ಗುರುವಾರ, ಸೆಪ್ಟೆಂಬರ್ 22, 2022

Idli mix recipe in Kannada | ಇಡ್ಲಿ ಮಿಕ್ಸ್ ಮಾಡುವ ವಿಧಾನ

 

Idli mix recipe in Kannada

Idli mix recipe in Kannada | ಇಡ್ಲಿ ಮಿಕ್ಸ್ ಮಾಡುವ ವಿಧಾನ

ಇಡ್ಲಿ ಮಿಕ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಇಡ್ಲಿರವೆ
  2. 1/2 ಕಪ್ ಉದ್ದಿನ ಬೇಳೆ 
  3. 1/2 ಕಪ್ ಗಟ್ಟಿ ಅಥವಾ ಮೀಡಿಯಂ ಅವಲಕ್ಕಿ 
  4. ಉಪ್ಪು ನಿಮ್ಮ ರುಚಿ ಪ್ರಕಾರ


ಇಡ್ಲಿ ಮಿಕ್ಸ್ ಮಾಡುವ ವಿಧಾನ:

  1. ಉದ್ದಿನಬೇಳೆಯನ್ನು ಬಿಸಿಯಾಗುವವರೆಗೆ ಹುರಿಯಿರಿ. ಘಮ ಬಂದರೆ ಸಾಕು, ಬಣ್ಣ ಬದಲಾಗುವುದು ಬೇಡ.
  2. ಬಿಸಿ ಆರಿದ ಮೇಲೆ ಹುರಿದ ಉದ್ದಿನಬೇಳೆಯನ್ನು ನುಣ್ಣಗೆ ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿ.
  3. ನಂತರ ಅವಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿ ಅದೇ ಪಾತ್ರೆಗೆ ಸೇರಿಸಿ. 
  4. ಇಡ್ಲಿ ರವೆಯನ್ನು ಸೇರಿಸಿ.  ಚೆನ್ನಾಗಿ ಕಲಸಿ. 
  5. ಈ ಇಡ್ಲಿ ಮಿಕ್ಸ್ ಅನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  6. ಇಡ್ಲಿ ಮಾಡಲು, ಅಗತ್ಯವಿದ್ದಷ್ಟು ಇಡ್ಲಿ ಮಿಕ್ಸ್ ತೆಗೆದುಕೊಳ್ಳಿ.
  7. ಸುಮಾರು ಒಂದೂವರೆ ಪಟ್ಟು ನೀರು ಸೇರಿಸಿ. 
  8. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ. ಹಿಟ್ಟು ಮಾಮೂಲಿ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳು ಇರಲಿ. 
  9. ಮುಚ್ಚಳವನ್ನು ಮುಚ್ಚಿ 12 - 13 ಗಂಟೆಗಳ ಕಾಲ ಹಿಟ್ಟು ಹುದುಗಲು ಬಿಡಿ. 
  10. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  11. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  12. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಟ್ಟು, 10 - 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. 
  13. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆದು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಿ.

ಗುರುವಾರ, ಸೆಪ್ಟೆಂಬರ್ 15, 2022

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 4 - 5 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕರಿಬೇವಿನ ಸೊಪ್ಪು
  5. 4 - 5 ಒಣ ಮೆಣಸಿನಕಾಯಿ
  6. 1 - 2 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. 
  2. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  3. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  4. ತಿನ್ನುವ ಮೊದಲು, ಮಂಡಕ್ಕಿ ಇರುವ ಪಾತ್ರೆಗೆ ತೆಂಗಿನ ಎಣ್ಣೆ ಅಥವಾ ಕರಗಿಸಿದ ತುಪ್ಪ ಸೇರಿಸಿ.
  5. ಪುಡಿ ಮಾಡಿದ ಮಸಾಲೆ ಸೇರಿಸಿ. 
  6. ಚೆನ್ನಾಗಿ ಕೈಯಿಂದ ಕಲಸಿ. 
  7. ತಕ್ಷಣವೇ ಬಡಿಸಿ.

ಮಂಗಳವಾರ, ಸೆಪ್ಟೆಂಬರ್ 6, 2022

Dodna dose recipe in Kannada | ದೊಡ್ನ ದೋಸೆ ಮಾಡುವ ವಿಧಾನ

 

Dodna dose recipe in Kannada

Dodna dose recipe in Kannada | ದೊಡ್ನ ದೋಸೆ ಮಾಡುವ ವಿಧಾನ

ದೊಡ್ನ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1/2 ಕಪ್ ತೆಂಗಿನತುರಿ
  3. 1 ಕಪ್ ಅನ್ನ
  4. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
  5. 1/2 ಟೀಸ್ಪೂನ ಸಕ್ಕರೆ
  6. ಉಪ್ಪು ರುಚಿಗೆ ತಕ್ಕಷ್ಟು.

ದೊಡ್ನ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 2 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.
  3. ತೆಂಗಿನಕಾಯಿ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ. 
  5. ಅದಕ್ಕೆ ಬೇಯಿಸಿದ ಅನ್ನ ಸೇರಿಸಿ,  ನುಣ್ಣಗೆ ಅರೆಯಿರಿ. 
  6. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. 
  7. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 10 - 12 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ಸೆಟ್ ದೋಸೆಯಂತೆ ಸಣ್ಣ ಸಣ್ಣ ದೋಸೆ ಮಾಡಿ. ಹಿಟ್ಟನ್ನು ಜಾಸ್ತಿ ಹರಡಬೇಡಿ. 
  10. ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  12. ಬೇಕಾದಲ್ಲಿ ತಿರುವಿ ಹಾಕಿ ಇನ್ನೊಂದು ಬದಿ ಕಾಯಿಸಿ. ಚಟ್ನಿಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಆಗಸ್ಟ್ 31, 2022

Kadle bele usli recipe in Kannada | ಕಡಲೆಬೇಳೆ ಉಸ್ಲಿ ಮಾಡುವ ವಿಧಾನ

 

Kadle bele usli recipe in Kannada

Kadle bele usli recipe in Kannada | ಕಡಲೆಬೇಳೆ ಉಸ್ಲಿ ಮಾಡುವ ವಿಧಾನ

ಕಡಲೆಬೇಳೆ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡಲೆಬೇಳೆ
  2. 1 ಟೇಬಲ್ ಚಮಚ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಉದ್ದಿನಬೇಳೆ
  5. ಒಂದು ಚಿಟಿಕೆ ಅರಿಶಿನ ಪುಡಿ
  6. ಒಂದು ಚಿಟಿಕೆ ಇಂಗು
  7. 4 - 5 ಕರಿಬೇವಿನ ಎಲೆ
  8. ಒಂದು ಸಣ್ಣ ಚೂರು ಶುಂಠಿ
  9. 1 - 2 ಹಸಿರು ಮೆಣಸಿನಕಾಯಿ
  10. 2 ಟೇಬಲ್ ಚಮಚ ತೆಂಗಿನ ತುರಿ 
  11.  2 ಟೇಬಲ್ ಚಮಚ ಕೊತಂಬರಿ ಸೊಪ್ಪು 
  12. 1/2 - 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  13. ಉಪ್ಪು ರುಚಿಗೆ ತಕ್ಕಷ್ಟು.

ಕಡಲೆಬೇಳೆ ಉಸ್ಲಿ ಮಾಡುವ ವಿಧಾನ:

  1. ಕಡಲೆಬೇಳೆಯನ್ನು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 
  2. ಅಗತ್ಯವಿದ್ದಷ್ಟು ನೀರು ಹಾಕಿ (ಒಂದೂವರೆ ಪಟ್ಟು), ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ ಆದರೆ ಮುದ್ದೆಯಾಗುವುದು ಬೇಡ. 
  3. ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ. ನಾನು ಈ ನೀರಿನಿಂದ ಸಾರು ಮಾಡುತ್ತೇನೆ. 
  4. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ. 
  5. ಸಾಸಿವೆ ಸಿಡಿದ ಮೇಲೆ ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
  6. ಅದಕ್ಕೆ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. 
  7. ಅದಕ್ಕೆ ಬೇಯಿಸಿದ ಕಡಲೆಬೇಳೆ ಮತ್ತು ಉಪ್ಪನ್ನು ಹಾಕಿ ಮಗುಚಿ.
  8. ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  9. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಆಗಸ್ಟ್ 25, 2022

Tomato thokku recipe in Kannada | ಟೊಮೇಟೊ ತೊಕ್ಕು ಮಾಡುವ ವಿಧಾನ

 

Tomato thokku recipe in Kannada

Tomato thokku recipe in Kannada | ಟೊಮೇಟೊ ತೊಕ್ಕು ಮಾಡುವ ವಿಧಾನ 

ಟೊಮೇಟೊ ತೊಕ್ಕು ವಿಡಿಯೋ

ಬೇಕಾಗುವ ಪದಾರ್ಥಗಳು:

  1. 10 ಮಧ್ಯಮ ಗಾತ್ರದ  ಟೊಮೇಟೊ
  2. 10 ಒಣಮೆಣಸಿನಕಾಯಿ  (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. 1 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಮೆಂತೆ
  6. 1/4 ಟೀಸ್ಪೂನ್ ಅರಿಶಿನ
  7. 3 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 4 ಟೇಬಲ್ ಚಮಚ ಅಡುಗೆ ಎಣ್ಣೆ
  2. 1 ಟೀಸ್ಪೂನ್ ಸಾಸಿವೆ
  3. 8 ಕರಿಬೇವಿನ ಎಲೆ
  4. 1/4 ಟೀಸ್ಪೂನ್ ಇಂಗು

ಟೊಮೇಟೊ ತೊಕ್ಕು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿಯನ್ನು ಎಣ್ಣೆ ಹಾಕದೇ ಹುರಿಯಿರಿ. 
  2.  ನಂತರ ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಸೇರಿಸಿ. ಮೆಂತೆ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ
  3. ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. 
  4. ಟೊಮ್ಯಾಟೊವನ್ನು ತೊಳೆದು, ದೊಡ್ಡದಾಗಿ ಕತ್ತರಿಸಿಕೊಳ್ಳಿ. 
  5. ಕತ್ತರಿಸಿದ ಟೊಮ್ಯಾಟೊವನ್ನು ಮಿಕ್ಸಿಯಲ್ಲಿ ಅರೆದಿಟ್ಟು ಕೊಳ್ಳಿ. 
  6. ನಂತರ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  7. ರುಬ್ಬಿದ ಟೊಮೇಟೊ ಹಾಕಿ ಮಗುಚಿ, ಕುದಿಯಲು ಇಡಿ. 
  8. ಉಪ್ಪು ಮತ್ತು ಅರಿಶಿನ ಸೇರಿಸಿ. 
  9. ಸ್ವಲ್ಪ ಗಟ್ಟಿಯಾಗುವವರೆಗೆ ಆಗಾಗ್ಯೆ ಮಗುಚುತ್ತಾ ಬೇಯಿಸಿ. 
  10.  ನೀರು ಆರಿದ ಮೇಲೆ ತಯಾರಿಸಿದ ಮಸಾಲೆ ಪುಡಿ ಹಾಕಿ ಮಗುಚಿ. 
  11. ರುಚಿಗೆ ತಕ್ಕಂತೆ ಉಪ್ಪು ಮತ್ತು ಬೆಲ್ಲ ಹೊಂದಿಸಿಕೊಳ್ಳಿ.  
  12. ನೀರಾರಿ ಎಣ್ಣೆ ಬಿಡಲು ಶುರುವಾದಾಗ ಸ್ಟವ್ ಆಫ್ ಮಾಡಿ. 
  13. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡಿ.  ನೀರಾರುವವರೆಗೆ ಮಗುಚಿದಲ್ಲಿ ಹಲವು ತಿಂಗಳುಗಳ ಕಾಲ ಕೆಡುವುದಿಲ್ಲ.


ಗುರುವಾರ, ಆಗಸ್ಟ್ 4, 2022

Ulundogare recipe in Kannada | ಉಳುಂದೋಗರೆ ಮಾಡುವ ವಿಧಾನ

 

Ulundogare recipe in Kannada

Ulundogare recipe in Kannada | ಉಳುಂದೋಗರೆ ಮಾಡುವ ವಿಧಾನ 

ಉಳುಂದೋಗರೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ (ಸೋನಾಮಸೂರಿ)
  2. 1/4 ಕಪ್ ತೆಂಗಿನ ತುರಿ
  3. 4 ಟೀಸ್ಪೂನ್ ಉದ್ದಿನಬೇಳೆ
  4. 1/2 ಟೀಸ್ಪೂನ್ ಕಾಳುಮೆಣಸು
  5. 2 - 3 ಒಣ ಮೆಣಸಿನಕಾಯಿ
  6. 1/4 ಟೀಸ್ಪೂನ್ ತುಪ್ಪ
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 - 6 ಕರಿಬೇವಿನ ಎಲೆ
  3. ಸ್ವಲ್ಪ ಗೋಡಂಬಿ
  4. 2 ಟೇಬಲ್ ಚಮಚ ತುಪ್ಪ

ಉಳುಂದೋಗರೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, 1/4 ಟೀಸ್ಪೂನ್ ತುಪ್ಪ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. 
  2. ಉದ್ದಿನಬೇಳೆ, ಕಾಳುಮೆಣಸು ಮತ್ತು ಒಣ ಮೆಣಸಿನಕಾಯಿಯನ್ನು ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ. 
  3. ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. 
  4. ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ. 
  5. ಸಾಸಿವೆ, ಗೋಡಂಬಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  6. ತೆಂಗಿನತುರಿ ಸೇರಿಸಿ, ಹುರಿದು ಸ್ಟವ್ ಆಫ್ ಮಾಡಿ.  
  7. ಬೇಯಿಸಿದ ಅನ್ನ ಸೇರಿಸಿ ಚೆನ್ನಾಗಿ ಕಲಸಿ. 
  8. ನಂತರ ರುಚಿಗೆ ತಕ್ಕಂತೆ ಉಪ್ಪು ಮತ್ತು ಪುಡಿ ಮಾಡಿಟ್ಟ ಮಸಾಲೆ ಸೇರಿಸಿ.
  9. ಚೆನ್ನಾಗಿ ಕಲಸಿ ಬಡಿಸಿ. 

ಶುಕ್ರವಾರ, ಜುಲೈ 8, 2022

Hotel style tea recipe in Kannada | ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ

 

Hotel style tea recipe in Kannada

Hotel style tea recipe | ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ

ಹೋಟೆಲ್ ಸ್ಟೈಲ್ ಟೀ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್ )

  1. 1 ಕಪ್ ಹಾಲು
  2. 1 ಕಪ್ ನೀರು
  3. 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  4. 1 - 2 ಟೀಸ್ಪೂನ್ ಟೀ ಪೌಡರ್
  5. 2 ಮಾರಿ ಬಿಸ್ಕತ್ತು

ಹೋಟೆಲ್ ಸ್ಟೈಲ್ ಟೀ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಳ್ಳಿ.
  2. ನೀರು ಸೇರಿಸಿ. 
  3. ಸಕ್ಕರೆ ಸೇರಿಸಿ. 
  4. ಟೀ ಪೌಡರ್ ಸೇರಿಸಿ, ಕುದಿಯಲು ಇಡಿ. 
  5. ಬಿಸ್ಕತ್ತನ್ನು ಮಿಕ್ಸಿಯಲ್ಲಿ ಪುಡಿಮಾಡಿ. 
  6. 1 - 2 ಸ್ಪೂನ್ ಬಿಸ್ಕತ್ತು ಪುಡಿಯನ್ನು ಕುದಿಯಲು ಇಟ್ಟ ಟೀ ಗೆ ಸೇರಿಸಿ. 
  7. ಚೆನ್ನಾಗಿ ಮಗುಚಿ ಕುದಿಸಿ. 1 - 2 ನಿಮಿಷ ಕುದಿಸುವುದನ್ನು ಮುಂದುವರೆಸಿ. 
  8. ಸ್ಟವ್ ಆಫ್ ಮಾಡಿ.
  9. ಟೀ ಯನ್ನು ಸೋಸಿ, ಚೆನ್ನಾಗಿ ಎತ್ತಿ ಹಾಕಿ, ಕುಡಿಯಲು ನೀಡಿ.


ಶುಕ್ರವಾರ, ಜುಲೈ 1, 2022

Eerulli bhaji recipe in Kannada | ಈರುಳ್ಳಿ ಭಾಜಿ ಮಾಡುವ ವಿಧಾನ

 

Eerulli bhaji recipe in Kannada

Eerulli bhaji recipe in Kannada | ಈರುಳ್ಳಿ ಭಾಜಿ ಮಾಡುವ ವಿಧಾನ 

ಈರುಳ್ಳಿ ಭಾಜಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 2  ದೊಡ್ಡ ಗಾತ್ರದ ಈರುಳ್ಳಿ
  2. 1 ಟೊಮೇಟೊ
  3. 1/2 ಚಮಚ ಸಾಸಿವೆ 
  4. 1/2 ಚಮಚ ಉದ್ದಿನಬೇಳೆ
  5. ದೊಡ್ಡ ಚಿಟಿಕೆ ಅರಿಶಿನ ಪುಡಿ
  6. ದೊಡ್ಡ ಚಿಟಿಕೆ ಇಂಗು
  7. 5 - 6 ಕರಿಬೇವಿನ ಎಲೆ 
  8. ನಿಮ್ಮ ರುಚಿ ಪ್ರಕಾರ ಉಪ್ಪು 
  9. 2 ಟೇಬಲ್ ಚಮಚ ಅಡುಗೆ ಎಣ್ಣೆ

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 2  ಟೇಬಲ್ ಚಮಚ ಹುರಿಗಡಲೆ
  2. 2 - 3 ಒಣಮೆಣಸಿನಕಾಯಿ
  3. 1 ಟೀಸ್ಪೂನ್ ಧನಿಯಾ ಅಥವಾ ಕೊತ್ತಂಬರಿ ಬೀಜ
  4. 1/2 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಬಡೆಸೋಂಪು

ಈರುಳ್ಳಿ ಭಾಜಿ ಮಾಡುವ ವಿಧಾನ:

  1. ಮೊದಲಿಗೆ ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಟ್ಟು ಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 
  3. ಸಾಸಿವೆ ಮತ್ತು ಉದ್ದಿನಬೇಳೆ ಒಗ್ಗರಣೆ ಮಾಡಿ. 
  4. ಅದಕ್ಕೆ ಕರಿಬೇವು ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ. 
  5. ಕತ್ತರಿಸಿಟ್ಟ ಟೊಮೇಟೊ ಹಾಕಿ. 
  6. ಅರಶಿನ ಪುಡಿ ಮತ್ತು ಇಂಗು ಹಾಕಿ ಒಂದು ನಿಮಿಷ ಹುರಿಯಿರಿ. 
  7. ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಲು ಬಿಡಿ. 
  8. ಆ ಸಮಯದಲ್ಲಿ ಹುರಿಗಡಲೆ, ಒಣಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ ಮತ್ತು ಸೋಂಪನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. 
  9. ಅದನ್ನು ಬೇಯುತ್ತಿರುವ ಈರುಳ್ಳಿ ಮತ್ತು ಟೊಮ್ಯಾಟೊಗೆ ಸೇರಿಸಿ ಒಮ್ಮೆ ಮಗುಚಿ. 
  10. ಅಗತ್ಯವಿದ್ದಷ್ಟು ನೀರು ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಚೆನ್ನಾಗಿ ಮಗುಚಿ ಕುದಿಸಿ. 
  11. ಮುಚ್ಚಳ ಮುಚ್ಚಿ ಒಂದೆರಡು ನಿಮಿಷ ಬೇಯಿಸಿ. 
  12. ನಂತರ ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  13. ಚಪಾತಿ ಅಥವಾ ದೋಸೆ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಮಂಗಳವಾರ, ಜೂನ್ 28, 2022

Veelyadele saaru recipe in Kannada | ವೀಳ್ಯದೆಲೆ ಸಾರು ಮಾಡುವ ವಿಧಾನ

 

Veelyadele saaru recipe in Kannada

Veelyadele saaru recipe in Kannada | ವೀಳ್ಯದೆಲೆ ಸಾರು ಮಾಡುವ ವಿಧಾನ

ವೀಳ್ಯದೆಲೆ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 2 - 5ವೀಳ್ಯದೆಲೆ 
  2. 2 ಟೇಬಲ್ ಚಮಚ ತೊಗರಿಬೇಳೆ
  3. 1 ಟೊಮೇಟೊ
  4. 1/4 ಟೀಸ್ಪೂನ್ ಅರಿಶಿನ
  5. 1.5 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  6. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  7. 1 - 2 ಟೀಸ್ಪೂನ್ ಬೆಲ್ಲ
  8. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. 2 ಟೇಬಲ್ ಚಮಚ ಸಾರಿನ ಪುಡಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಒಣಮೆಣಸಿನಕಾಯಿ
  4. ದೊಡ್ಡ ಚಿಟಿಕೆ ಇಂಗು
  5. 5 - 6 ಕರಿಬೇವಿನ ಎಲೆ
  6. 2 ಟೇಬಲ್ ಚಮಚ ಎಣ್ಣೆ

 ವೀಳ್ಯದೆಲೆ ಸಾರು ಮಾಡುವ ವಿಧಾನ:

  1. ವೀಳ್ಯದೆಲೆಯನ್ನು ತೊಳೆದು, ತೊಟ್ಟು ತೆಗೆಯಿರಿ. 
  2. ನಂತರ ವೀಳ್ಯದೆಲೆಯನ್ನು ಕೈಯಲ್ಲಿ ಚೂರು ಮಾಡಿ ಮಿಕ್ಸಿ ಜಾರಿಗೆ ಹಾಕಿ.
  3. ತೊಳೆದ ತೊಗರಿಬೇಳೆ ಮತ್ತು ಕತ್ತರಿಸಿದ ಟೊಮೇಟೊ ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಒಣಮೆಣಸಿನಕಾಯಿಯ ಒಗ್ಗರಣೆ ಮಾಡಿ.  
  6. ಇಂಗು ಮತ್ತು ಕರಿಬೇವು ಸೇರಿಸಿ. 
  7. ಅರೆದ ಪೇಸ್ಟ್ ಮತ್ತು ಅರಿಶಿಣವನ್ನು ಸೇರಿಸಿ. 
  8. ಹಸಿ ವಾಸನೆ ಹೋಗುವವರೆಗೆ ಅಂದರೆ ಸುಮಾರು ಎರಡು ನಿಮಿಷ ಮಗುಚಿ ಬೇಯಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ. 
  10. ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ ಕುದಿಸಿ. 
  11. ಕುದಿಯಲು ಶುರು ಆದ ಮೇಲೆ ಸಾರಿನ ಪುಡಿ ಹಾಕಿ. ಒಂದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. 
  12. ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
  13. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಜೂನ್ 15, 2022

Dideer mandakki paddu recipe in Kannada | ದಿಢೀರ್ ಮಂಡಕ್ಕಿ ಪಡ್ಡು ಮಾಡುವ ವಿಧಾನ

 

Dideer mandakki paddu recipe in Kannada

Dideer mandakki paddu recipe in Kannada | ದಿಢೀರ್ ಮಂಡಕ್ಕಿ ಪಡ್ಡು ಮಾಡುವ ವಿಧಾನ 

ಮಂಡಕ್ಕಿ ಪಡ್ಡು ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 3 ಕಪ್ ಮಂಡಕ್ಕಿ
  2. 1/2 ಕಪ್ ರವೆ
  3. 1/4 ಕಪ್ ಅಕ್ಕಿಹಿಟ್ಟು
  4. 1/2 ಕಪ್ ಮೊಸರು
  5. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  6. 1 ಈರುಳ್ಳಿ
  7. 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 2 ಟೇಬಲ್ ಚಮಚ ತೆಂಗಿನತುರಿ
  9. 1 ಹಸಿಮೆಣಸಿನಕಾಯಿ
  10. 1/2 ಚಮಚ ಶುಂಠಿ
  11. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ಮಂಡಕ್ಕಿ ಪಡ್ಡು ಮಾಡುವ ವಿಧಾನ:

  1. ಮಂಡಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
  2. ಅದಕ್ಕೆ ರವೆ ಮತ್ತು ಅಕ್ಕಿಹಿಟ್ಟು ಸೇರಿಸಿ. 
  3. ಸ್ವಲ್ಪ ತರಿತರಿಯಾಗಿ ಪುಡಿಮಾಡಿಕೊಳ್ಳಿ. 
  4. ಅದಕ್ಕೆ ಅಗತ್ಯವಿದ್ದಷ್ಟು ನೀರು ಸೇರಿಸಿ. 
  5. ಮೊಸರನ್ನು ಸೇರಿಸಿ. 
  6. ರುಬ್ಬಿ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ದಪ್ಪ ಉದ್ದಿನ ದೋಸೆ ಹಿಟ್ಟಿನಂತಿರಲಿ. 
  7. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ. 
  8. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  9. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ. ಚೆನ್ನಾಗಿ ಕಲಸಿ. 
  10. ಪಡ್ಡು ಕಾವಲಿಯನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  11. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  12. 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  13. ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜೂನ್ 10, 2022

Bhadang churumuri recipe in Kannada | ಭಡಂಗ್ ಮಂಡಕ್ಕಿ ಮಾಡುವ ವಿಧಾನ

 

Bhadang churumuri recipe in Kannada

Bhadang churumuri recipe in Kannada | ಭಡಂಗ್ ಮಂಡಕ್ಕಿ ಮಾಡುವ ವಿಧಾನ

ಭಡಂಗ್ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಕಪ್ ಮಂಡಕ್ಕಿ
  2. 2 - 3 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  3. 7 - 8 ಬೆಳ್ಳುಳ್ಳಿ, ಸೀಳಿದ್ದು
  4. 7 - 8 ಕರಿಬೇವಿನ ಎಲೆ 
  5. 1 ಟೀಸ್ಪೂನ್ ಬ್ಯಾಡಗಿ ಮೆಣಸಿನ ಪುಡಿ
  6. ದೊಡ್ಡ ಚಿಟಿಕೆ ಇಂಗು
  7. 2 - 3 ಟೇಬಲ್ ಚಮಚ ಎಣ್ಣೆ
  8. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಬಡಿಸಲು ಬೇಕಾಗುವ ಪದಾರ್ಥಗಳು:

  1. ಒಂದು ಈರುಳ್ಳಿ, ಸಣ್ಣಗೆ ಹೆಚ್ಚಿದ್ದು
  2. ಒಂದು ಟೊಮೇಟೊ ಸಣ್ಣಗೆ ಹೆಚ್ಚಿದ್ದು 
  3. ಸ್ವಲ್ಪ ಕೊತ್ತಂಬರಿ ಸೊಪ್ಪು

ಭಡಂಗ್ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ. 
  2. ಅದಕ್ಕೆ ಸೀಳಿದ ಬೆಳ್ಳುಳ್ಳಿ ಮತ್ತು ಕರಿಬೇವನ್ನು ಹಾಕಿ ಹುರಿಯಿರಿ. 
  3. ಉರಿ ಸಣ್ಣ ಮಾಡಿ ಅಥವಾ ಸ್ಟವ್ ಆಫ್ ಮಾಡಿರಿ. 
  4. ನಂತರ ಕೆಂಪು ಮೆಣಸಿನ ಪುಡಿ ಮತ್ತು ಇಂಗು ಹಾಕಿ ಮಗುಚಿ.  
  5. ನಂತರ ಮಂಡಕ್ಕಿ ಹಾಕಿ ಚೆನ್ನಾಗಿ ಮಗುಚಿ. 
  6. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಸ್ಟವ್ ಹಚ್ಚಿ, ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಹುರಿಯಿರಿ. 
  7. ಮೇಲಿನಿಂದ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ. ಹಾಗೆಯೂ ತಿನ್ನಬಹುದು. 

ಗುರುವಾರ, ಮೇ 26, 2022

Southekai dose recipe in Kannada | ಸೌತೆಕಾಯಿ ದೋಸೆ ಮಾಡುವ ವಿಧಾನ

 

Southekai dose recipe in Kannada

Southekai dose recipe in Kannada | ಸೌತೆಕಾಯಿ ದೋಸೆ ಮಾಡುವ ವಿಧಾನ 

ಸೌತೆಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ರವೆ
  2.  2 ಮಧ್ಯಮ ಗಾತ್ರದ ಸೌತೆಕಾಯಿ
  3. 1/4 ಕಪ್ ತೆಂಗಿನತುರಿ
  4. 2 ಒಣಮೆಣಸಿನಕಾಯಿ
  5. 1 ಟೀಸ್ಪೂನ್ ಕೊತ್ತಂಬರಿ ಬೀಜ
  6. 1/2 ಟೀಸ್ಪೂನ್ ಜೀರಿಗೆ
  7. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  8. ಉಪ್ಪು ರುಚಿಗೆ ತಕ್ಕಷ್ಟು.

ಸೌತೆಕಾಯಿ ದೋಸೆ ಮಾಡುವ ವಿಧಾನ:

  1. ರವೆಯನ್ನು ಒಂದು ಕಪ್ ನೀರಿನಲ್ಲಿ ಹತ್ತು ನಿಮಿಷ ನೆನೆಯಲು ಬಿಡಿ.
  2. ಸೌತೆಕಾಯಿಯನ್ನು ಕತ್ತರಿಸಿಟ್ಟುಕೊಳ್ಳಿ. ಸಿಪ್ಪೆ ತೆಗೆಯಬೇಕಾಗಿಲ್ಲ. 
  3. ನೆನೆಸಿದ ರವೆಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಕತ್ತರಿಸಿದ ಸೌತೆಕಾಯಿ ಸೇರಿಸಿ. 
  5. ತೆಂಗಿನತುರಿ ಮತ್ತು ಒಣಮೆಣಸಿನಕಾಯಿ ಸೇರಿಸಿ. 
  6. ಕೊತ್ತಂಬರಿ ಮತ್ತು ಜೀರಿಗೆ ಸೇರಿಸಿ. 
  7. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. ನೀರು ಸೇರಿಸುವ ಅಗತ್ಯ ಇಲ್ಲ. 
  8. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  9. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  10. ದೋಸೆ ಹೆಂಚನ್ನು ಬಿಸಿಮಾಡಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ, 
  11. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  12. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ.
  13. ಸಣ್ಣ ಉರಿಯಲ್ಲಿ ಗರಿಗರಿ ಆಗುವವರೆಗೆ  ಕಾಯಿಸಿ. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮೇ 18, 2022

Hesaru kaalu saaru recipe in Kannada | ಹೆಸರು ಕಾಳು ಸಾರು ಮಾಡುವ ವಿಧಾನ

 

Hesaru kaalu saaru recipe in Kannada

Hesaru kaalu saaru recipe in Kannada |ಹೆಸರು ಕಾಳು ಸಾರು ಮಾಡುವ ವಿಧಾನ 

ಹೆಸರು ಕಾಳು ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಕಪ್ ಹೆಸರು ಕಾಳು
  2. 1 ಟೊಮೇಟೊ
  3. 1 ಟೇಬಲ್ ಚಮಚ ಸಾರಿನ ಪುಡಿ 
  4. ದೊಡ್ಡ ಚಿಟಿಕೆ ಅರಿಶಿನ
  5. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  6. 1 ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು
  7. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  8. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಒಣಮೆಣಸಿನಕಾಯಿ
  3. ಒಂದು ಚಿಟಿಕೆ ಇಂಗು ಅಥವಾ 4 ಎಸಳು ಬೆಳ್ಳುಳ್ಳಿ
  4. 5 - 6 ಕರಿಬೇವಿನ ಎಲೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ

ಹೆಸರು ಕಾಳು ಸಾರು ಮಾಡುವ ವಿಧಾನ:

  1. ಹೆಸರು ಕಾಳನ್ನು ತೊಳೆದು, ಅಗತ್ಯವಿದ್ದಷ್ಟು ನೀರು ಸೇರಿಸಿ, ಮೆತ್ತಗಾಗುವವರೆಗೆ ಬೇಯಿಸಿ. ನೆನೆಸಿ ಅಥವಾ ಮೊಳಕೆ ಬರಿಸಿ ಸಹ ಉಪಯೋಗಿಸಬಹುದು. 
  2. ಬೇಯಿಸಿದ ನಂತರ, ಬಸಿದು, ನೀರು ಮತ್ತು ಕಾಳನ್ನು ಬೇರ್ಪಡಿಸಿ. 
  3. ಬಸಿದ ನೀರಿಗೆ, ಕತ್ತರಿಸಿದ ಟೊಮೇಟೊ ಸೇರಿಸಿ. 
  4. ರುಚಿಗೆ ತಕ್ಕಂತೆ ಉಪ್ಪು, ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. 
  5. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  6.  ಆ ಸಮಯದಲ್ಲಿ ಎರಡರಿಂದ ಮೂರು ಸೌಟು ಬೇಯಿಸಿದ ಹೆಸರುಕಾಳನ್ನು ಅರೆದು ಬೆಂದ ಟೊಮ್ಯಾಟೊಗೆ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  8. ಸಾರಿನ ಪುಡಿ ಮತ್ತು ಅರಿಶಿನ ಸೇರಿಸಿ. 
  9. ಕೊತ್ತಂಬರಿ ಸೊಪ್ಪು ಸೇರಿಸಿ. 
  10. ಚೆನ್ನಾಗಿ ಕುದಿಸಿ ಸ್ಟವ್ ಆಫ್ ಮಾಡಿ. 
  11. 2 ಚಮಚಎಣ್ಣೆ, 1/2 ಚಮಚ ಸಾಸಿವೆ, ಇಂಗು (ಅಥವಾ ಜಜ್ಜಿದ ಬೆಳ್ಳುಳ್ಳಿ) ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮೇ 11, 2022

Thuppa dose recipe in Kannada | ತುಪ್ಪ ದೋಸೆ ಮಾಡುವ ವಿಧಾನ

 

Thuppa dose recipe in Kannada

Thuppa dose recipe in Kannada | ಇಡ್ಲಿ ಅಕ್ಕಿಯಿಂದ ತುಪ್ಪ ದೋಸೆ ಮಾಡುವ ವಿಧಾನ

ತುಪ್ಪ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕುಸುಬಲಕ್ಕಿ ಅಥವಾ ಇಡ್ಲಿ ಅಕ್ಕಿ
  2. 1/4 ಕಪ್ ಉದ್ದಿನ ಬೇಳೆ
  3. 1/2 ಟೀಸ್ಪೂನ್ ಮೆಂತೆ
  4. 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ
  6. ತುಪ್ಪ ದೋಸೆ ಮಾಡಲು


ತುಪ್ಪ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
  2. ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು ಬೇರೆ ಪಾತ್ರೆಯಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. 
  3. ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿಡಿ. 
  4. ನೆನೆಸಿದ ನಂತರ ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು. 
  5. ಅವಲಕ್ಕಿಯನ್ನು ಅರೆದು ಅದೇ ಪಾತ್ರೆಗೆ ಹಾಕಿ. 
  6. ನೆನೆಸಿದ ಅಕ್ಕಿಯ ನೀರು ಬಸಿದು, ನುಣ್ಣಗೆ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಸ್ವಲ್ಪ ತರಿ ತರಿ ಇದ್ದರೆ ಪರವಾಗಿಲ್ಲ.
  7. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ. ಚಳಿಗಾಲ ಸಮಯ ಆದಲ್ಲಿ ಸುಮಾರು 12 ಗಂಟೆ ಬೇಕಾಗಬಹುದು. 
  8. ಹುದುಗುವಿಕೆಯ ನಂತರ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  9. ದೋಸೆ ಹೆಂಚನ್ನು ಬಿಸಿ ಮಾಡಿ. ಸ್ವಲ್ಪ ಹಿಟ್ಟು ತೆಗೆದುಕೊಂಡು ದೋಸೆ ಮಾಡಿ. 
  10. ಮುಚ್ಚಳ ಮುಚ್ಚಿ ಕಾಯಿಸಿ.
  11. ಮೇಲಿನಿಂದ ತುಪ್ಪ ಹಾಕಿ ಕಾಯಿಸಿ.  
  12. ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. 

ಸೋಮವಾರ, ಮೇ 2, 2022

Sabbakki rotti recipe Kannada | ಸಬ್ಬಕ್ಕಿ ರೊಟ್ಟಿ ಮಾಡುವ ವಿಧಾನ

 

Sabbakki rotti recipe Kannada |  ಸಬ್ಬಕ್ಕಿ ರೊಟ್ಟಿ ಮಾಡುವ ವಿಧಾನ

ಸಬ್ಬಕ್ಕಿ ರೊಟ್ಟಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಬ್ಬಕ್ಕಿ
  2. 1/4 ಕಪ್ ಅಕ್ಕಿಹಿಟ್ಟು
  3. 1 ದೊಡ್ಡ ಆಲೂಗಡ್ಡೆ, ಬೇಯಿಸಿ ಸಿಪ್ಪೆ ತೆಗೆದಿದ್ದು
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಎಲೆ
  6. 2 ಹಸಿಮೆಣಸಿನಕಾಯಿ
  7. 1/2 ಟೀಸ್ಪೂನ್ ಜೀರಿಗೆ
  8. 2 ಟೇಬಲ್ ಚಮಚ ಹುರಿದು ಸಿಪ್ಪೆ ತೆಗೆದ ಶೇಂಗಾ ಅಥವಾ ಕಡ್ಲೆಕಾಯಿ
  9. 2 - 3  ಟೇಬಲ್ ಚಮಚ ನೀರು (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು
  11. ರೊಟ್ಟಿ ಮಾಡಲು ಎಣ್ಣೆ
  12. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಮಸಾಲೆ ಅವಲಕ್ಕಿ ರೊಟ್ಟಿ ಮಾಡುವ ವಿಧಾನ:

  1. ಸಬ್ಬಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೆನೆಸಿ ಅಥವಾ ಸಬ್ಬಕ್ಕಿಯನ್ನು ಬೆರಳುಗಳಲ್ಲಿ ಪುಡಿ ಮಾಡಲು ಆಗುವಷ್ಟು ಹೊತ್ತು ನೆನೆಸಿರಬೇಕು. 
  2. ನೆನೆಸಿದ ನಂತರ ನೀರು ಬಗ್ಗಿಸಿಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಜೀರಿಗೆ ಸೇರಿಸಿ. 
  4. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  5. ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿ. 
  6. ಬೇಕಾದಲ್ಲಿ ಹುರಿದು ಸಿಪ್ಪೆ ತೆಗೆದ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಸೇರಿಸಿ. 
  7. ಅಗತ್ಯವಿದ್ದಲ್ಲಿ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  8. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟು ಇರಿಸಿ.
  9. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ತಟ್ಟುತ್ತಾ ವೃತ್ತಾಕಾರದ ರೊಟ್ಟಿಯನ್ನುಮಾಡಿ.
  10. ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಬಾಳೆ ಎಲೆಯಲ್ಲಿ ಮಾಡಿದರೆ ಕೆಲಸ ಸುಲಭವಾಗುವುದು. ಮೇಲೆ ಹಾಕಿದ ವಿಡಿಯೋ ನೋಡಿ. 
  11. ಮೇಲಿನಿಂದ ಎಣ್ಣೆ ಹಾಕಿ ಕಾಯಿಸಿ. ರೊಟ್ಟಿಯನ್ನು ತಿರುವಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  12. ಚಟ್ನಿ ಅಥವಾ ಅಥವಾ ಹಾಗೆ ಬಡಿಸಿ.

ಬುಧವಾರ, ಏಪ್ರಿಲ್ 20, 2022

Jeerige ganji recipe in Kannada | ಜೀರಿಗೆ ಗಂಜಿ ಮಾಡುವ ವಿಧಾನ

 

Jeerige ganji recipe in Kannada

Jeerige ganji recipe in Kannada | ಜೀರಿಗೆ ಗಂಜಿ ಮಾಡುವ ವಿಧಾನ

ಜೀರಿಗೆ ಗಂಜಿ  ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ
  2. 1/2 ಕಪ್ ಹಸಿ ತೆಂಗಿನತುರಿ
  3. 1 ಟೀಸ್ಪೂನ್ ಜೀರಿಗೆ
  4. 1/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. 1 ಟೀಸ್ಪೂನ್ ತುಪ್ಪ (ಬಡಿಸಲು)
  6. ಉಪ್ಪಿನಕಾಯಿ (ಬಡಿಸಲು)

ಸೌತೆಕಾಯಿ ಪಚಡಿಗೆ ಬೇಕಾಗುವ ಪದಾರ್ಥಗಳು:

  1. 1/2 ಸೌತೆಕಾಯಿ
  2. 1/2 ಟೀಸ್ಪೂನ್ ಶುಂಠಿ
  3. 1/2 ಟೀಸ್ಪೂನ್ ಹಸಿರು ಮೆಣಸಿನಕಾಯಿ
  4. 1 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು 
  5. 3/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಜೀರಿಗೆ ಗಂಜಿ ಮಾಡುವ ವಿಧಾನ:

  1. ಅಕ್ಕಿಯನ್ನು ಚೆನ್ನಾಗಿ ತೊಳೆದು, ನಾಲ್ಕು ಪಟ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ತೆಂಗಿನತುರಿ ಮತ್ತು ಜೀರಿಗೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  3. ಬೇಯಿಸಿದ ಅನ್ನಕ್ಕೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಇಡಿ. 
  4. 1/4 ಟೀಸ್ಪೂನ್ ಅಥವಾ ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ. ಬೇಕಾದಲ್ಲಿ ಸ್ವಲ್ಪ ಬೆಲ್ಲ ಸಹ ಸೇರಿಸಬಹುದು. 
  5. ಒಂದೆರಡು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. 
  6. ಪಚಡಿ ಮಾಡಲು ಸೌತೆಕಾಯಿಯನ್ನು ಸಣ್ಣಗೆ ಕೊಚ್ಚಿಕೊಳ್ಳಿ. 
  7. ಹೆಚ್ಚಿದ ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ. 
  8. ಬಿಸಿ ಗಂಜಿಯನ್ನು ತುಪ್ಪ, ಪಚಡಿ ಮತ್ತು ಉಪ್ಪಿನಕಾಯಿಯೊಂದಿಗೆ ಬಡಿಸಿ. 

ಸೋಮವಾರ, ಏಪ್ರಿಲ್ 18, 2022

Quick onion sambar recipe in Kannada | 10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ

 

Quick onion sambar recipe in Kannada

Quick onion sambar recipe in Kannada | 10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ


10 ನಿಮಿಷದಲ್ಲಿ ಸಾಂಬಾರ್  ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೊಮೇಟೊ
  2. 2 ಟೇಬಲ್ ಚಮಚ ಹುರಿಗಡಲೆ
  3. 1 ಈರುಳ್ಳಿ
  4. 1 ಟೀಸ್ಪೂನ್ ಅಚ್ಚಖಾರದ ಪುಡಿ
  5. 1 ಟೀಸ್ಪೂನ್ ಧನಿಯಾ ಅಥವಾ ಕೊತ್ತಂಬರಿ ಪುಡಿ
  6. 1/4 ಟೀಸ್ಪೂನ್ ಗರಂ ಮಸಾಲಾ
  7. ದೊಡ್ಡ ಚಿಟಿಕೆ ಅರಿಶಿನ ಪುಡಿ
  8. ಉಪ್ಪು ನಿಮ್ಮ ರುಚಿ ಪ್ರಕಾರ
  9. 1 ಟೀಸ್ಪೂನ್ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
  10. ಗೋಲಿ ಗಾತ್ರದ ಹುಣಿಸೇಹಣ್ಣು (ಅಥವಾ ನಿಮ್ಮ ರುಚಿ ಪ್ರಕಾರ)
  11. ಸ್ವಲ್ಪ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. ಒಂದು ಚಿಟಿಕೆ ಇಂಗು
  5. 5 - 6 ಕರಿಬೇವು
  6. 2 ಟೇಬಲ್ ಚಮಚ ಅಡುಗೆ ಎಣ್ಣೆ

10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ:

  1. ಮಿಕ್ಸಿಯಲ್ಲಿ ಟೊಮೇಟೊ ಮತ್ತು ಹುರಿಗಡಲೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. 
  3. ಕತ್ತರಿಸಿದ ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. 
  4. ಅಚ್ಚಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಅರಿಶಿನ ಪುಡಿ ಸೇರಿಸಿ ಹುರಿಯಿರಿ. 
  5. ಅರೆದ ಟೊಮೇಟೊ ಮತ್ತು ಹುರಿಗಡಲೆ ಪೇಸ್ಟ್ ಸೇರಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಇಡಿ. 
  6. ನಿಮ್ಮ ರುಚಿ ಪ್ರಕಾರ ಉಪ್ಪು, ಬೆಲ್ಲ ಮತ್ತು ಹುಣಿಸೆರಸವನ್ನು ಸೇರಿಸಿ. 
  7. ಐದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ. 
  8. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ. ಬಿಸಿ ಅನ್ನದೊಂದಿಗೆ ಬಡಿಸಿ. ದೋಸೆ ಅಥವಾ ಇಡ್ಲಿಯೊಂದಿಗೂ ಬಡಿಸಬಹುದು. 

Related Posts Plugin for WordPress, Blogger...