ಶುಕ್ರವಾರ, ಆಗಸ್ಟ್ 31, 2018

Soft chapathi recipe in Kannada | ಮೃದುವಾದ ಚಪಾತಿ ಮಾಡುವ ವಿಧಾನ

Soft chapathi recipe in Kannada

Soft chapathi recipe in Kannada | ಮೃದುವಾದ ಚಪಾತಿ ಮಾಡುವ ವಿಧಾನ 

ಮೃದುವಾದ ಚಪಾತಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು (4 ದೊಡ್ಡ ಚಪಾತಿಗಾಗುವಷ್ಟು)
  2. 1/4 ಕಪ್ ಹಾಲು 
  3. 1 - 2 ಟೇಬಲ್ ಚಮಚ ಅಡುಗೆ ಎಣ್ಣೆ
  4. ಉಪ್ಪು ರುಚಿಗೆ ತಕ್ಕಷ್ಟು
  5. ಅಗತ್ಯವಿದ್ದಷ್ಟು ನೀರು

ಮೃದುವಾದ ಚಪಾತಿ ಮಾಡುವ ವಿಧಾನ:

  1. ಗೋಧಿ ಹಿಟ್ಟು ಮತ್ತು ಉಪ್ಪನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  2. ಬೆಚ್ಚಗಿನ ಹಾಲು ಹಾಕಿ ಕಲಸಲು ಪ್ರಾರಂಭಿಸಿ.
  3. ನಂತ್ರ ಅಗತ್ಯವಿದ್ದಷ್ಟು ನೀರು ಸೇರಿಸಿ ಮೃದುವಾದ ಹಿಟ್ಟು ತಯಾರಿಸಿ. 
  4. ಕೊನೆಯಲ್ಲಿ ಎಣ್ಣೆ ಸೇರಿಸಿ ಪುನಃ ಕಲಸಿ. 
  5. ಒಂದು ಗಂಟೆ ನೆನೆಯಲು ಬಿಡಿ. 
  6. ನಂತರ ಕಲಸಿಟ್ಟ ಚಪಾತಿ ಹಿಟ್ಟಿನಿಂದ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ವೃತ್ತಾಕಾರವಾಗಿ ಲಟ್ಟಿಸಿ.
  7. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. 
  8. ಖಾಯಿಸಿ ತೆಗೆದ ಮೇಲೆ ಎರಡೂ ಬದಿಯೂ ಸ್ವಲ್ಪ ತುಪ್ಪ ಹಚ್ಚಿ. ನಿಮ್ಮಿಷ್ಟದ ಗೊಜ್ಜಿನೊಂದಿಗೆ ಬಡಿಸಿ.

ಸೋಮವಾರ, ಆಗಸ್ಟ್ 27, 2018

Kayi chutney recipe in Kannada | ಕಾಯಿ ಚಟ್ನಿ ಮಾಡುವ ವಿಧಾನ

Kayi chutney recipe in Kannada

Kayi chutney recipe in Kannada | ಕಾಯಿ ಚಟ್ನಿ ಮಾಡುವ ವಿಧಾನ

ಕಾಯಿ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ 
  2. 2 - 3 ಹಸಿರು ಮೆಣಸಿನಕಾಯಿ 
  3. ಸ್ವಲ್ಪ ಕೊತಂಬರಿ ಸೊಪ್ಪು
  4. ಸ್ವಲ್ಪ ಹುಣಿಸೆ ಹಣ್ಣು 
  5. ಸಣ್ಣ ಚೂರು ಶುಂಠಿ
  6. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಎಣ್ಣೆ 
  2. ಒಂದು ಒಣಮೆಣಸಿನಕಾಯಿ
  3. 4 ಕರಿಬೇವಿನ ಎಲೆ
  4. 1/2 ಟಿಸ್ಪೂನ್ ಸಾಸಿವೆ 
  5. ಒಂದು ಚಿಟಿಕೆ ಇಂಗು

ಕಾಯಿ ಚಟ್ನಿ ಮಾಡುವ ವಿಧಾನ:

  1. ನಂತರ ಮಿಕ್ಸಿ ಜಾರಿಗೆ ತೆಂಗಿನ ತುರಿ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  2. ಕೊನೆಯಲ್ಲಿ ಹಸಿರುಮೆಣಸಿನಕಾಯಿ, ಹುಣಿಸೆ ಹಣ್ಣು, ಶುಂಠಿ, ಕೊತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ. 
  3. ತರಿತರಿಯಾಗಿ ಅರೆಯಿರಿ.
  4. ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಒಣಮೆಣಸು, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಗುರುವಾರ, ಆಗಸ್ಟ್ 23, 2018

Avalakki payasa recipe in Kannada | ಅವಲಕ್ಕಿ ಪಾಯಸ ಮಾಡುವ ವಿಧಾನ

Avalakki payasa recipe in Kannada

Avalakki payasa recipe in Kannada |ಅವಲಕ್ಕಿ ಪಾಯಸ ಮಾಡುವ ವಿಧಾನ 

ಅವಲಕ್ಕಿ ಪಾಯಸ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಗಟ್ಟಿ ಅವಲಕ್ಕಿ  
  2. 1/2 ಕಪ್  ಸಕ್ಕರೆ
  3. 2 ಕಪ್ ಹಾಲು
  4. 1 ಟೇಬಲ್ ಚಮಚ ತುಪ್ಪ
  5. 7 - 8 ಗೋಡಂಬಿ
  6. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಅವಲಕ್ಕಿ ಪಾಯಸ ಮಾಡುವ ವಿಧಾನ:

  1. ಗಟ್ಟಿ ಅವಲಕ್ಕಿಯನ್ನು ತೊಳೆದು ನೀರು ಬಗ್ಗಿಸಿ ಪಕ್ಕಕ್ಕಿಡಿ. 
  2. ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ದ್ರಾಕ್ಷಿ ಹುರಿದು ಎತ್ತಿಡಿ. 
  3. ಅದೇ ಬಾಣಲೆಗೆ ಹಾಲನ್ನು ಹಾಕಿ ಕುದಿಯಲು ಇಡಿ. 
  4. ಸಕ್ಕರೆಯನ್ನು ಸೇರಿಸಿ. 
  5. ಕುದಿಯಲು ಪ್ರಾರಂಭವಾದ ಕೂಡಲೇ ತೊಳೆದಿಟ್ಟ ಅವಲಕ್ಕಿ ಹಾಕಿ ಆಗಾಗ್ಯೆ ಮಗುಚುತ್ತಾ ಕುದಿಯಲು ಬಿಡಿ. 
  6. ಅವಲಕ್ಕಿ ಮೆತ್ತಗೆ ಬೇಯುವವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ. 
  7. ಏಲಕ್ಕಿ ಪುಡಿಯನ್ನು ಸೇರಿಸಿ. 
  8. ಸ್ಟೋವ್ ಆಫ್ ಮಾಡಿ. ರುಚಿಕರ ಪಾಯಸವನ್ನು ಸವಿಯಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಆಗಸ್ಟ್ 21, 2018

Balekai snacks recipe in Kannada | ಬಾಳೆಕಾಯಿ ಸ್ನಾಕ್ಸ್ ಮಾಡುವ ವಿಧಾನ

Balekai snacks recipe in Kannada

Balekai snacks recipe in Kannada | ಬಾಳೆಕಾಯಿ ಸ್ನಾಕ್ಸ್ ಮಾಡುವ ವಿಧಾನ 

ಬಾಳೆಕಾಯಿ ಸ್ನಾಕ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಬಾಳೆಕಾಯಿ
  2. 1 ದೊಡ್ಡ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  3. 1/2 ಟೀಸ್ಪೂನ್ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ 
  5. 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ
  6. 1 - 2 ಹಸಿರುಮೆಣಸಿನಕಾಯಿ
  7. ದೊಡ್ಡ ಚಿಟಿಕೆ ಅರಿಶಿನ 
  8. ದೊಡ್ಡ ಚಿಟಿಕೆ ಇಂಗು
  9. 7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ 
  10. 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು 
  11. 1 ಟೇಬಲ್ ಚಮಚ ಮೊಸರು (ಬೇಕಾದಲ್ಲಿ)
  12. ಉಪ್ಪು ರುಚಿಗೆ ತಕ್ಕಷ್ಟು 
  13. ಎಣ್ಣೆ ಕಾಯಿಸಲು

ಬಾಳೆಕಾಯಿ ಸ್ನಾಕ್ಸ್ ಮಾಡುವ ವಿಧಾನ:

  1. ಬಾಳೆಕಾಯಿಯನ್ನು ತುದಿ-ಬುಡ ಕತ್ತರಿಸಿ, ಕುಕ್ಕರ್ ನಲ್ಲಿ 3 - 4 ವಿಷಲ್ ಮಾಡಿ, ಮೆತ್ತಗೆ ಬೇಯಿಸಿ ಕೊಳ್ಳಿ. 
  2. ಬಿಸಿ ಆರಿದ ಮೇಲೆ ಸಿಪ್ಪೆ ತೆಗೆದು, ಪುಡಿಮಾಡಿಟ್ಟುಕೊಳ್ಳಿ. 
  3.  ಅದೇ ಸಮಯದಲ್ಲಿ 1 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ. 
  4. ಸಾಸಿವೆ ಮತ್ತು ಜೀರಿಗೆ ಹಾಕಿ. 
  5. ಸಾಸಿವೆ ಸಿಡಿದ ಮೇಲೆ ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಹಸಿರುಮೆಣಸಿನಕಾಯಿ ಸೇರಿಸಿ. 
  6. ಅರಿಶಿನ ಪುಡಿ ಮತ್ತು ಇಂಗು ಸೇರಿಸಿ, ಮಗುಚಿ. 
  7. ಕೂಡಲೇ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ. 
  8. ಕೊನೆಯಲ್ಲಿ ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  9. ಕೊನೆಯಲ್ಲಿ ಬೇಯಿಸಿ ಪುಡಿಮಾಡಿದ ಬಾಳೆಕಾಯಿ ಸೇರಿಸಿ. ಸ್ಟವ್ ಆಫ್ ಮಾಡಿ. 
  10. ಉಪ್ಪು ಮತ್ತು ಒಂದು ಟೇಬಲ್ ಚಮಚ ಮೊಸರು ಸೇರಿಸಿ, ಚೆನ್ನಾಗಿ ಕಲಸಿ. 
  11. ಬಿಸಿ ಆರಿದ ಮೇಲೆ ಸಣ್ಣ ನಿಂಬೆಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ.  
  12. ಗುಳಿಯಪ್ಪ ಅಥವಾ ಪಡ್ಡು ಪಾನ್ ನ್ನು ಬಿಸಿಮಾಡಿ, ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ. 
  13. ತಯಾರಿಸದ ಬಾಳೆಕಾಯಿ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ತಿರುವಿ ಹಾಕುತ್ತ ಬೇಯಿಸಿ. ಅಗತ್ಯವಿದ್ದಷ್ಟು ಎಣ್ಣೆ ಹಾಕಿ ಕಾಯಿಸಿ. 


ಶುಕ್ರವಾರ, ಆಗಸ್ಟ್ 17, 2018

Kotte kadubu recipe in Kannada | ಕೊಟ್ಟೆ ಕಡುಬು ಮಾಡುವ ವಿಧಾನ

Kotte kadubu recipe in Kannada

Kotte kadubu recipe in Kannada | ಕೊಟ್ಟೆ ಕಡುಬು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 3 ಕಪ್ ಇಡ್ಲಿ ರವ ಅಥವಾ ಉಪ್ಪಿಟ್ಟಿನ ರವೇ
  2. 1 ಕಪ್ ಉದ್ದಿನ ಬೇಳೆ 
  3. 1/4 - 1/2 ಟೀಸ್ಪೂನ್ ಮೆಂತ್ಯ 
  4. 0 - 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ
  6. 16 - 20 ಹಲಸಿನ ಎಲೆಗಳು

ಕೊಟ್ಟೆ ಕಡುಬು ಮಾಡುವ ವಿಧಾನ:

  1. ಉದ್ದಿನಬೇಳೆ ಮತ್ತು ಮೆಂತ್ಯವನ್ನು ತೊಳೆದು ಒಳ್ಳೆಯ ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. ಉತ್ತಮ ಫಲಿತಾಂಶಕ್ಕಾಗಿ ಇಡೀ ಉದ್ದಿನ ಬೇಳೆ ಬಳಸಿ.
  2. ಅವಲಕ್ಕಿಯನ್ನು ಬಳಸುತ್ತೀರಾದರೆ ಅದನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಾನು ಗ್ರೈಂಡರ್ ಬಳಸುವುದರಿಂದ ಅವಲಕ್ಕಿ ಸೇರಿಸುವುದಿಲ್ಲ. 
  3. 4 - 5 ಗಂಟೆಗಳ ನಂತರ ನೆನೆಸಿಟ್ಟ ಬೇಳೆಯ ನೀರನ್ನು ಬಸಿದು ಪಕ್ಕಕ್ಕಿಡಿ. ಅರೆಯುವಾಗ ಈ ನೀರು ಉಪಯೋಗಿಸಿದಲ್ಲಿ ಹಿಟ್ಟು ಚೆನ್ನಾಗಿ ಹುದುಗಲು ಸಹಾಯವಾಗುತ್ತದೆ.
  4. ಈಗ ಗ್ರೈಂಡರ್ ಗೆ ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿ (ಬಳಸುತ್ತೀರಾದಲ್ಲಿ) ಹಾಕಿ.
  5. ಏತನ್ಮಧ್ಯೆ, ಇಡ್ಲಿ ರವೆಗೆ ಬೆಚ್ಚಗಿನ ನೀರು ಹಾಕಿ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕೆ ಹೊಂದಿಸಿ. ಉಪ್ಪಿಟ್ಟಿನ ರವೇ ಬಳಸುವುದಾದಲ್ಲಿ, ಒಂದೈದು ನಿಮಿಷ ಸಣ್ಣ ಹುರಿದು, ಬಿಸಿ ಕಡಿಮೆ ಆದ ಮೇಲೆ ಸೇರಿಸಬೇಕು. 
  6. ಈಗ ಗ್ರೈಂಡರ್ ನಲ್ಲಿರುವ ಬೇಳೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುವ ಮೂಲಕ ನಯವಾಗಿ ಅರೆಯಿರಿ. ಅರೆಯಲು ಬೇಳೆ ನೆನೆಸಿದ ನೀರು ಉಪಯೋಗಿಸಿ. ಮಿಕ್ಸರ್ ಗ್ರೈಂಡರ್ನಲ್ಲಿ ರುಬ್ಬುವ ಸಂದರ್ಭದಲ್ಲಿ ತಣ್ಣೀರು ಸೇರಿಸಲು ಪ್ರಯತ್ನಿಸಿ. ಏಕೆಂದರೆ ಮಿಕ್ಸಿಯಲ್ಲಿ ಅರೆಯುವಾಗ ಹಿಟ್ಟು ಬಿಸಿಯಾಗುತ್ತದೆ.  ಆಗ ಹಿಟ್ಟು ಚೆನ್ನಾಗಿ ಹುದುಗುವುದಿಲ್ಲ.
  7. ಉದ್ದಿನ ಬೇಳೆ ಅರೆದು ಮುಗಿಯುವ ಸಂದರ್ಭದಲ್ಲಿ ತೊಳೆದಿಟ್ಟ ಇಡ್ಲಿ ರವಾ ಸೇರಿಸಿ,  5 ನಿಮಿಷ ರುಬ್ಬುವುದನ್ನು ಮುಂದುವರೆಸಿ. ಬೇಕೆನಿಸಿದರೆ ನೀರು ಸೇರಿಸಿ. ಇಡ್ಲಿ ಹಿಟ್ಟು ಸೌಟಿನಿಂದ ದಪ-ದಪನೆ ಬೀಳುವಷ್ಟು ಗಟ್ಟಿಯಾಗಿರಬೇಕು. ನೀವು ಮಿಕ್ಸರ್ ಗ್ರೈಂಡರ್ ಬಳಸುತ್ತಿದ್ದರೆ, ತೊಳೆದಿಟ್ಟ ಇಡ್ಲಿ ರವಾ ಇರುವ ಪಾತ್ರೆ ಗೆ ಅರೆದ ಉದ್ದಿನ ಹಿಟ್ಟನ್ನು ಹಾಕಿ, ನಂತರ ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ.
  8. ಒಂದು ದೊಡ್ಡ ಪಾತ್ರೆಯಲ್ಲಿ ಚೆನ್ನಾಗಿ ಕಲಸಿದ ಹಿಟ್ಟನ್ನು ಅಥವಾ ಗ್ರೈಂಡರ್ ನಲ್ಲಿ ಅರೆದ ಹಿಟ್ಟನ್ನು ಸುರಿಯಿರಿ.
  9. ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ.   
  10. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  11. ಹಲಸಿನ ಎಲೆಗಳನ್ನು ಸ್ವಚ್ಛಗೊಳಿಸಿ, ನಾಲ್ಕು ಎಲೆಗಳನ್ನು ತೆಗೆದುಕೊಂಡು ಕೊಟ್ಟೆ ತಯಾರಿಸಿ. 
  12. ಮಾಡಲು ಕಷ್ಟವಾದಲ್ಲಿ ಲೋಟದೊಳಗೆ ಎಲೆಗಳನ್ನು ಇಟ್ಟು ಕೊಟ್ಟೆ ಮಾಡಬಹುದು. ಹೀಗೆ ಎಲ್ಲ ಕೊಟ್ಟೆಗಳನ್ನು ಮಾಡಿಟ್ಟುಕೊಳ್ಳಿ. 
  13. ಅದಕ್ಕೆ ಇಡ್ಲಿ ಹಿಟ್ಟನ್ನು ಹಾಕಿ.
  14. 15 - 20 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಕಡುಬಿನ ಗಾತ್ರದ ಮೇಲೆ ಸಮಯ ಬದಲಾಗಬಹುದು..ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಿ.   

ಮಂಗಳವಾರ, ಆಗಸ್ಟ್ 14, 2018

Sambar butti recipe in Kannada | ಸಾಂಬಾರ್ ಬುತ್ತಿ ಮಾಡುವ ವಿಧಾನ

Sambar butti recipe in Kannada

Sambar butti recipe in Kannada | ಸಾಂಬಾರ್ ಬುತ್ತಿ ಮಾಡುವ ವಿಧಾನ

ಸಾಂಬಾರ್ ಬುತ್ತಿ ವಿಡಿಯೋ

 ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಸೋನಾ ಮಸೂರಿ ಅಕ್ಕಿ
  2. 1 ಸಣ್ಣ ನಿಂಬೆ ಗಾತ್ರದ ಹುಣಸೆ ಹಣ್ಣು 
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ 
  4. ರುಚಿಗೆ ತಕ್ಕಷ್ಟು ಉಪ್ಪು
  5. 1  ಟೇಬಲ್ ಚಮಚ ಸಾಂಬಾರ್ ಪುಡಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಕೆಂಪು ಮೆಣಸಿನಕಾಯಿ
  4. 1 - 2 ಹಸಿರು ಮೆಣಸಿನಕಾಯಿ
  5. 7 - 8 ಕರಿಬೇವಿನ ಎಲೆ
  6. 4 - 5 ಬೇಳೆ ಬೆಳ್ಳುಳ್ಳಿ 
  7. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  8. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಸಾಂಬಾರ್ ಬುತ್ತಿ ಮಾಡುವ ವಿಧಾನ:

  1. ಮೊದಲಿಗೆ ಮೆತ್ತಗೆ ಅನ್ನ ಮಾಡಿಟ್ಟು ಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಮೇಲೆ, ಒಣ ಮೆಣಸಿನಕಾಯಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವು ಹಾಕಿ. 
  4. ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. 
  5. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. 
  6. ಅದಕ್ಕೆ ಹುಣಿಸೆರಸ, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಕುದಿಸಿ. 
  7.  ಕುದಿದು ಸ್ವಲ್ಪ ಗಟ್ಟಿಯಾದ ಮೇಲೆ ಸಾಂಬಾರ್ ಪುಡಿ ಹಾಕಿ.
  8. ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ ಸ್ಟವ್ ಆಫ್ ಮಾಡಿ.  
  9. ನಂತರ ಬೇಯಿಸಿಟ್ಟ ಅನ್ನವನ್ನು ಸ್ವಲ್ಪ ನುರಿದು ಹಾಕಿ, ಚೆನ್ನಾಗಿ ಕಲಸಿ. ಕಿತ್ತಳೆ ಹಣ್ಣಿನ ಗಾತ್ರದ ಉಂಡೆಕಟ್ಟಿ ಬಡಿಸಿ. 

ಶುಕ್ರವಾರ, ಆಗಸ್ಟ್ 10, 2018

Godi dose recipe in Kannada | ಗೋದಿ ದೋಸೆ ಮಾಡುವ ವಿಧಾನ

Godi dose recipe in Kannada

Godi dose recipe in Kannada |  ಗೋದಿ ದೋಸೆ ಮಾಡುವ ವಿಧಾನ

ಗೋದಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 1/4 ಕಪ್ ಅಕ್ಕಿ ಹಿಟ್ಟು
  3. 1/4 ಕಪ್ ರವೆ
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1 ಟೀಸ್ಪೂನ್ ಜೀರಿಗೆ
  6. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1 ಟೇಬಲ್ ಚಮಚ  ಹೆಚ್ಚಿದ ಕರಿಬೇವಿನ ಸೊಪ್ಪು 
  8. 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
  9. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  10. ಉಪ್ಪು ರುಚಿಗೆ ತಕ್ಕಷ್ಟು

ಗೋಧಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ರವೇ ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ. ದೋಸೆ ಜಾಸ್ತಿ ಗರಿ ಗರಿ ಬೇಕಾದಲ್ಲಿ ರವೇ ಮತ್ತು ಅಕ್ಕಿಹಿಟ್ಟಿನ ಪ್ರಮಾಣ ಹೆಚ್ಚಿಸಿ. 
  2. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. 
  3. ಆಮೇಲೆ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ. 
  4. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತ ತೆಳುವಾದ ಹಿಟ್ಟು ತಯಾರಿಸಿಕೊಳ್ಳಿ. ಆದರೆ ಹಿಟ್ಟು ನೀರು ದೋಸೆ ಅಥವಾ ರವೇ ದೋಸೆಗಿಂತ ಸ್ವಲ್ಪ ಗಟ್ಟಿ ಇರಲಿ.  ನಾನು ಸುಮಾರು ಎರಡೂವರೆ ಕಪ್ ನೀರು ಬಳಸಿದ್ದೇನೆ. 
  5. ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ. 
  6. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  7. ಮುಚ್ಚಳ ಮುಚ್ಚಿ ಬೇಯಿಸಿ. 
  8. ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  9. ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಬುಧವಾರ, ಆಗಸ್ಟ್ 8, 2018

French fries recipe in Kannada | ಫ್ರೆಂಚ್ ಫ್ರೈಸ್ ಮಾಡುವ ವಿಧಾನ

French fries recipe in Kannada

French fries recipe in Kannada | ಫ್ರೆಂಚ್ ಫ್ರೈಸ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ತಾಜಾ ಆಲೂಗಡ್ಡೆ 
  2. ಉಪ್ಪು ನಿಮ್ಮ ರುಚಿ ಪ್ರಕಾರ
  3. ಎಣ್ಣೆ ಕಾಯಿಸಲು

ಫ್ರೆಂಚ್ ಫ್ರೈಸ್ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚೆನ್ನಾಗಿ ತೊಳೆಯಿರಿ. 
  2. ನಂತರ ಉದ್ದುದ್ದನಾಗಿ ಒಂದೇ ಅಳತೆಗೆ ಕತ್ತರಿಸಿ. 
  3. ಕತ್ತರಿಸಿದ ನಂತ್ರ ತಾಜಾ ಆಲೂಗಡ್ಡೆ ಅಲ್ಲವಾದಲ್ಲಿ, ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಡಿ. ಅಥವಾ ಎರಡರಿಂದ ಮೂರು ಬಾರಿ ನೀರು ಬದಲಾಯಿಸಿ ತೊಳೆಯಿರಿ. 
  4. ಆಮೇಲೆ ಒಂದು ಪಾತ್ರೆಯಲ್ಲಿ ನೀರು ಮತ್ತು ಸ್ವಲ್ಪ ಉಪ್ಪು (ಎರಡು ಆಲೂಗಡ್ಡೆಗೆ ಸುಮಾರು ಒಂದು ಚಮಚ ಉಪ್ಪು) ಹಾಕಿ ಕುದಿಯಲು ಇಡಿ. 
  5. ಕುದಿಯುವ ನೀರಿಗೆ, ಕತ್ತರಿಸಿದ ಆಲೂಗಡ್ಡೆ ಹಾಕಿ ಎರಡು ನಿಮಿಷ ಕುದಿಸಿ. 
  6. ಸ್ಟವ್ ಆಫ್ ಮಾಡಿ, ನೀರನ್ನು ಬಸಿಯಿರಿ. 
  7. ನಂತ್ರ ಬಟ್ಟೆಯ ಮೇಲೆ ಹರಡಿ. 
  8. ನೀರಾರಿದ ಮೇಲೆ (ಸುಮಾರು ೧೫ ನಿಮಿಷ) ಎಣ್ಣೆಯಲ್ಲಿ ಖಾಯಿಸಬಹುದು. ಹೆಚ್ಚು ಗರಿಗರಿಯಾಗಲು, ಒಂದು ಜಿಪ್ ಲಾಕ್ ಕವರ್ ಗೆ ಹಾಕಿ ಫ್ರೀಜರ್ ನಲ್ಲಿ ಇಪ್ಪತ್ತು ನಿಮಿಷ ಇಟ್ಟು ನಂತರ ಖಾಯಿಸಿ. ಫ್ರೀಜರ್ ನಲ್ಲಿ ಕೆಲವು ದಿನಗಳ ಕಾಲ ಇಟ್ಟು ಯಾವಾಗ ಬೇಕೋ ಅವಾಗ ಖಾಯಿಸಬಹುದು. 
  9. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಿಸಿ ಎಣ್ಣೆಗೆ ಫ್ರೀಜರ್ ನಲ್ಲಿ ಇಟ್ಟ ಆಲೂಗಡ್ಡೆ ಹಾಕಿ ಕಾಯಿಸಿ.
  10. ಗುಳ್ಳೆಗಳು ಕಡಿಮೆ ಆದಮೇಲೆ, ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಾಯಿಸಿ, ತೆಗೆಯಿರಿ. 
  11. ಟೊಮೇಟೊ ಸಾಸ್ ನೊಂದಿಗೆ ಬಡಿಸಿ. ಅಥವಾ ಒಂದು ಸಣ್ಣ ಬಟ್ಟಲಿನಲ್ಲಿ ಅಚ್ಚಖಾರದ ಪುಡಿ, ಉಪ್ಪು ಮತ್ತು ಇಂಗು ಹಾಕಿ ಕಲಸಿ ಮಸಾಲೆ ಪುಡಿ ಸಿದ್ಧ ಮಾಡಿ, ಕಾಯಿಸಿದ ಫ್ರೆಂಚ್ ಫ್ರೈಸ್ ಗೆ, ಮೇಲಿನಿಂದ ಮಸಾಲೆ ಹುಡಿ ಉದುರಿಸಿ. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಸೋಮವಾರ, ಆಗಸ್ಟ್ 6, 2018

Jelly recipe in Kannada | ಜೆಲ್ಲಿ ಮಾಡುವ ವಿಧಾನ

Jelly recipe in Kannada

Jelly recipe in Kannada | ಜೆಲ್ಲಿ ಮಾಡುವ ವಿಧಾನ 


ಜೆಲ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಪ್ಯಾಕ್ ಜೆಲ್ಲಿ ಪೌಡರ್
  2. 1/2 ಲೀ ನೀರು (ಅಥವಾ ಪ್ಯಾಕ್ ಮೇಲೆ ನಮೂದಿಸಿದಷ್ಟು) 

ಜೆಲ್ಲಿ ಮಾಡುವ ವಿಧಾನ:

  1. ಪಾಕ್ನಲ್ಲಿರುವ ಎರಡೂ ಬಗೆಯ ಪುಡಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ.  ಚೆನ್ನಾಗಿ ಕಲಸಿ. 
  2. ನಂತ್ರ ಇನ್ನೊಂದು ಪಾತ್ರೆಯಲ್ಲಿ ಅರ್ಧ ಲೀ ನೀರು ಕುದಿಸಿ. ಸ್ಟವ್ ಆಫ್ ಮಾಡಿ. 
  3. ಒಂದು ನಿಮಿಷದ ನಂತರ, ಕುದಿಸಿದ ನೀರನ್ನು ಪೌಡರ್ ಇರುವ ಪಾತ್ರೆಗೆ ಹಾಕಿ, ಚೆನ್ನಾಗಿ ಕಲಡಿಸಿ. 
  4. ಬಿಸಿ ಕಡಿಮೆ ಆದ ಮೇಲೆ ನಿಮ್ಮಿಷ್ಟದ ಅಚ್ಚು ಅಥವಾ ಪಾತ್ರೆಗೆ ಹಾಕಿ, ಜೆಲ್ಲಿ ಆಗಲು ಬಿಡಿ. ಫ್ರಿಡ್ಜ್ನಲ್ಲಿಟ್ಟರೆ, ಬೇಗ ಮತ್ತು ಚೆನ್ನಾಗಿ ಆಗುವುದು.  

ಶುಕ್ರವಾರ, ಆಗಸ್ಟ್ 3, 2018

Kesuvina ele chutney recipe in Kannada | ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ

Kesuvina ele chutney recipe in Kannada

Kesuvina ele chutney recipe in Kannada | ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ 

ಕೆಸುವಿನ ಎಲೆ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 7 - 8 ಮಧ್ಯಮ ಗಾತ್ರದ ಕೆಸುವಿನ ಎಲೆ
  2. 2 - 4 ಹಸಿ ಮೆಣಸಿನಕಾಯಿ
  3. 4 - 5 ಎಸಳು ಬೆಳ್ಳುಳ್ಳಿ
  4. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  5. 2 ಟೇಬಲ್ ಚಮಚ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ತೆಂಗಿನೆಣ್ಣೆ ಅಥವಾ ಅಡುಗೆ ಎಣ್ಣೆ
  4. 4 - 5 ಎಸಳು ಬೆಳ್ಳುಳ್ಳಿ, ಜಜ್ಜಿದ್ದು

ಕೆಸುವಿನ ಎಲೆ ಚಟ್ನಿ ಮಾಡುವ ವಿಧಾನ:

  1. ಕೆಸುವಿನ ಸೊಪ್ಪನ್ನು ತೊಳೆದು, ಒರೆಸಿ, ಕತ್ತರಿಸಿ. 
  2. ಅದೇ ರೀತಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. 
  4. ಆಮೇಲೆ ಕತ್ತರಿಸಿದ ಕೆಸುವಿನ ಸೊಪ್ಪು ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.  
  5. ಕೊನೆಯಲ್ಲಿ ಉಪ್ಪು ಮತ್ತು ಹುಣಿಸೆರಸ ಹಾಕಿ, ಸ್ಟವ್ ಆಫ್ ಮಾಡಿ. 
  6. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದುಕೊಳ್ಳಿ. 
  7. ಒಂದು ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಎಣ್ಣೆ ಮತ್ತು ಸಾಸಿವೆ ಹಾಕಿ ಒಗ್ಗರಣೆ ಮಾಡಿ. 
  8. ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ ಹುರಿಯಿರಿ.  
  9. ಅರೆದ ಮಿಶ್ರಣವನ್ನು ಹಾಕಿ, ಐದು ನಿಮಿಷ ಸಣ್ಣ ಉರಿಯಲ್ಲಿಮಗುಚಿ. ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ. 
Related Posts Plugin for WordPress, Blogger...