Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ
ಮಾವಿನಕಾಯಿ ಗುಳಂಬಾ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1 ದೊಡ್ಡ ಹುಳಿ ಇಲ್ಲದ ಮಾವಿನಕಾಯಿ
- 1 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
- 1 ಟೀಸ್ಪೂನ್ ತುಪ್ಪ
- 2 - 3 ಏಲಕ್ಕಿ
- 2 ಲವಂಗ (ಬೇಕಾದಲ್ಲಿ)
- ಚಿಟಿಕೆ ಕೇಸರಿ (ಬೇಕಾದಲ್ಲಿ)
ಮಾವಿನಕಾಯಿ ಗುಳಂಬಾ ಮಾಡುವ ವಿಧಾನ:
- ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಮಾವಿನಕಾಯಿ ತುರಿಯನ್ನು ಅಳತೆ ಮಾಡಿ.
- ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಜಜ್ಜಿಟ್ಟು ಕೊಳ್ಳಿ.
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಮಾವಿನಕಾಯಿ ಮೆತ್ತಗಾಗುವವರೆಗೆ ಹುರಿದು ಕೊಳ್ಳಿ.
- ನಂತರ ಸಕ್ಕರೆ ಸೇರಿಸಿ. ಒಂದು ಕಪ್ ತುರಿಗೆ ಒಂದು ಕಪ್ ಸಕ್ಕರೆ ಬೇಕಾಗುವುದು. ನಾನು ಸ್ವಲ್ಪ ಕಡಿಮೆ ಸೇರಿಸಿದ್ದೇನೆ.
- ಮಧ್ಯಮ ಉರಿಯಲ್ಲಿ ಮಗುಚಿ. ಮೊದಲಿಗೆ ಸಕ್ಕರೆ ಕರಗಿ ನೀರಾಗುವುದು.
- ಆ ಸಮಯದಲ್ಲಿ ಜಜ್ಜಿದ ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಸೇರಿಸಿ.
- ಎರಡೆಳೆ ಪಾಕ ಬರುವವರೆಗೆ ಮಗುಚಿ. (ಪಾಕ ಬಂದ ಮೇಲೂ ನೀರು ನೀರಾಗಿರುವುದು)
- ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುವುದು.
- ಮಾವಿನಕಾಯಿ ಗುಳಂಬಾ ಸವಿಯಲು ಸಿದ್ಧ. ಚಪಾತಿ, ದೋಸೆ, ರೊಟ್ಟಿ ಮತ್ತು ಬ್ರೆಡ್ ನೊಂದಿಗೆ ಬಡಿಸಿ. ಫ್ರಿಡ್ಜ್ ನಲ್ಲಿ ಸುಮಾರು ದಿನ ಇಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ