ಸಲಹೆ-ಸೂಚನೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಲಹೆ-ಸೂಚನೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಮೇ 22, 2021

How to clean thamrada pathre in Kannada | ತಾಮ್ರದ ಪಾತ್ರೆ ಸ್ವಚ್ಛ ಗೊಳಿಸುವ ವಿಧಾನ

 

How to clean thamrada pathre in Kannada

How to clean thamrada pathre in Kannada | ತಾಮ್ರದ ಪಾತ್ರೆ ಸ್ವಚ್ಛ ಗೊಳಿಸುವ ವಿಧಾನ

ತಾಮ್ರದ ಪಾತ್ರೆ ಸ್ವಚ್ಛ ಗೊಳಿಸುವ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಅಗತ್ಯವಿದ್ದಷ್ಟು ಉಪ್ಪು
  2. ಅಗತ್ಯವಿದ್ದಷ್ಟು ವಿನೆಗರ್
  3. ಒಂದು ಸ್ಕ್ರಬ್ಬರ್

ತಾಮ್ರದ ಪಾತ್ರೆ ಸ್ವಚ್ಛ ಗೊಳಿಸುವ ವಿಧಾನ:

  1. ಒಂದು ತಾಮ್ರದ ಪಾತ್ರೆ ತೆಗೆದುಕೊಳ್ಳಿ. 
  2. ಸ್ವಲ್ಪ ಉಪ್ಪು ಉದುರಿಸಿ. 
  3. ಮೇಲಿನಿಂದ ಸ್ವಲ್ಪ ವಿನೆಗರ್ ಹಾಕಿ. ವಿನೆಗರ್ ಇಲ್ಲವಾದಲ್ಲಿ, ನಿಂಬೆ ರಸ ಅಥವಾ ಹುಣಿಸೆರಸ ಹಾಕಬಹುದು. 
  4. ನಂತರ ಸ್ಕ್ರಬ್ಬರ್ ಹಾಕಿ ಮೆದುವಾಗಿ ತಿಕ್ಕಿ. 
  5. ನೀರಿನಲ್ಲಿ ತೊಳೆಯಿರಿ. 

ಭಾನುವಾರ, ಮೇ 16, 2021

How to clean stove burner in Kannada | ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ

  

How to clean stove burner in Kannada

How to clean stove burner in Kannada | ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ

ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ ೧:( ಅಳತೆ ಕಪ್ = 240 ಎಂಎಲ್ )

  1. ಅಗತ್ಯವಿದ್ದಷ್ಟು ಬಿಸಿ ನೀರು
  2. ಅರ್ಧ ನಿಂಬೆ ಹಣ್ಣು
  3. ಒಂದು ಸಣ್ಣ ಪ್ಯಾಕ್ ಇನೋ 
  4. ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್)
  5. ಒಂದು ಬ್ರಷ್ ಅಥವಾ ಸ್ಕ್ರಬ್ಬರ್

ಬೇಕಾಗುವ ಪದಾರ್ಥಗಳು - ವಿಧಾನ ೨:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಕಪ್ ಬಿಸಿ ನೀರು
  2. ಅರ್ಧ ಕಪ್ ವಿನೆಗರ್
  3. ಎರಡು ಚಮಚ ಅಡುಗೆ ಸೋಡಾ
  4. ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್)
  5. ಒಂದು ಬ್ರಷ್ ಅಥವಾ ಸ್ಕ್ರಬ್ಬರ್

ಸ್ಟವ್ ಬರ್ನರ್ ಸ್ವಚ್ಛ ಗೊಳಿಸುವ ವಿಧಾನ:

  1. ಮೊದಲನೇ ವಿಧಾನವಾದಲ್ಲಿ, ಒಂದು ಬೌಲ್ನಲ್ಲಿ ಬಿಸಿ ನೀರು, ಅರ್ಧ ನಿಂಬೆ ಹಣ್ಣು ಮತ್ತು ಒಂದು ಸಣ್ಣ ಪ್ಯಾಕ್ ಇನೋ ಫ್ರೂಟ್ ಸಾಲ್ಟ್ ಹಾಕಿ. ಅದರಲ್ಲಿ ಸ್ಟವ್ ಬರ್ನರ್ ಎರಡು ಘಂಟೆ ನೆನೆಸಿಡಿ. 
  2. ಮೊದಲನೇ ವಿಧಾನವಾದಲ್ಲಿ, ಒಂದು ಬೌಲ್ನಲ್ಲಿ ಬಿಸಿ ನೀರು, ವಿನೆಗರ್ ಮತ್ತು ಅಡುಗೆ ಸೋಡಾ ಹಾಕಿ. ಅದರಲ್ಲಿ ಸ್ಟವ್ ಬರ್ನರ್ ಎರಡು ಘಂಟೆ ನೆನೆಸಿಡಿ. 
  3. ಇನೋ ಫ್ರೂಟ್ ಸಾಲ್ಟ್ ಅಥವಾ ವಿನೆಗರ್ ಇಲ್ಲವಾದಲ್ಲಿ, ಬಿಸಿ ನೀರು ಮತ್ತು ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ಡಿಟರ್ಜೆಂಟ್) ನಲ್ಲಿ ನೆನೆಸಿಡಿ. 
  4. ನೆನೆಸಿದ ನಂತರ ಬ್ರಷ್ (ಅಥವಾ ಸ್ಕ್ರಬ್ಬರ್) ಮತ್ತು ಪಾತ್ರೆ ತೊಳೆಯೋ ಸೋಪ್ ಹಾಕಿ ಚೆನ್ನಾಗಿ ತಿಕ್ಕಿ. 
  5. ಜಾಸ್ತಿ ಹೊಳತೆ ಬೇಕಾದಲ್ಲಿ ಸ್ಟೀಲ್ ಸ್ಕ್ರಬ್ಬರ್ ನಲ್ಲಿ ಮೆತ್ತಗೆ ತಿಕ್ಕಿ. 
  6. ಚೆನ್ನಾಗಿ ತೊಳೆದು, ನೀರಾರಲು ಬಿಡಿ. 

ಮಂಗಳವಾರ, ಸೆಪ್ಟೆಂಬರ್ 29, 2020

How to clean oil bottle in Kannada | ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ

 

How to clean oil bottle in Kannada | ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ

ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಎರಡು ಚಮಚ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ವಾಷಿಂಗ್ ಪೌಡರ್)
  2. ಕಾಲು ಕಪ್ ವಿನೆಗರ್ (ಅಥವಾ ಎರಡು ದೊಡ್ಡ ನಿಂಬೆಹಣ್ಣು)
  3. ಒಂದು ಚಮಚ ಅಡುಗೆ ಸೋಡಾ
  4. ಸ್ವಲ್ಪ ಬಟ್ಟೆ ಸೋಪ್
  5. ಒಂದು ಹಳೇ ಬ್ರಷ್
  6. ಒಂದು ದೊಡ್ಡ ಪಾತ್ರೆ ಅಥವಾ ಟಬ್
  7. ಅಗತ್ಯವಿದ್ದಷ್ಟು ಬಿಸಿ ನೀರು

ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ:

  1. ಎಣ್ಣೆ ಬಾಟಲಿಯಿಂದ ಹೆಚ್ಚಿನ ಎಣ್ಣೆಯನ್ನು ಪೇಪರ್ ಸಹಾಯದಿಂದ ಒರೆಸಿ ತೆಗೆಯಿರಿ.
  2. ನಂತರ ಒಂದು ಟಬ್ ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ. 
  3. ಅದಕ್ಕೆ ಪಾತ್ರೆ ತೊಳೆಯೋ ಲಿಕ್ವಿಡ್, ವಿನೆಗರ್ ಮತ್ತು ಸೋಡಾ ಸೇರಿಸಿ. 
  4. ಎಣ್ಣೆ ಬಾಟಲಿ ಮತ್ತು ಮುಚ್ಚಳವನ್ನು ಹದಿನೈದು ನಿಮಿಷ ನೆನೆಸಿಡಿ. 
  5. ಮತ್ತೆ ಸೋಪು ಮತ್ತು ಬ್ರಷ್ ನ ಸಹಾಯದಿಂದ ಸಂದಿ ಮೂಲೆಗಳನ್ನು ಸ್ವಚ್ಛಗೊಳಿಸಿ. 
  6. ನೀರು ಬದಲಿಸಿ, ಪುನಃ ಬಿಸಿ ನೀರು ಹಾಕಿ. 
  7. ಕೊನೆಯಲ್ಲಿ ಸ್ಕ್ರಬ್ಬರ್ ಮತ್ತು ಪಾತ್ರೆ ತೊಳೆಯೋ ಸೋಪ್ ಹಾಕಿ ಒಮ್ಮೆ ಎಲ್ಲ ಜಾಗವನ್ನು ತಿಕ್ಕಿ. 
  8. ಚೆನ್ನಾಗಿ ತೊಳೆದು, ನೀರಾರಲು ಬಿಡಿ. 

ಬುಧವಾರ, ಆಗಸ್ಟ್ 5, 2020

How to store tamarind in Kannada | ಹುಣಿಸೇಹಣ್ಣು ಶೇಖರಿಸುವ ವಿಧಾನ

How to store tamarind in Kannada

How to store tamarind in Kannada | ಹುಣಿಸೇಹಣ್ಣು ಶೇಖರಿಸುವ ವಿಧಾನ


ಹುಣಿಸೇಹಣ್ಣು ಪೇಸ್ಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಕೆಜಿ ಹುಣಿಸೆಹಣ್ಣು
  2. ಅರ್ಧ ಕಪ್ ಉಪ್ಪು
  3. ಅಗತ್ಯವಿದ್ದಷ್ಟು ನೀರು

ಹುಣಿಸೇಹಣ್ಣು ಶೇಖರಿಸುವ ವಿಧಾನ:

  1. ಹುಣಿಸೆಹಣ್ಣನ್ನು ನೀರಿನಲ್ಲಿ ಎರಡು ಘಂಟೆಗಳ ಕಾಲ ನೆನೆಸಿಡಿ.
  2. ನಂತರ ಚೆನ್ನಾಗಿ ಹಿಸುಕಿ. 
  3. ದೊಡ್ಡ ಕಣ್ಣಿರುವ ಪಾತ್ರೆ ಅಥವಾ ಪ್ಲೇಟ್ ನಲ್ಲಿ ಸೋಸಿ, ಗಟ್ಟಿಯಾದ ಹುಣಿಸೆರಸ ತೆಗೆದಿಟ್ಟುಕೊಳ್ಳಿ. 
  4. ಸೋಸುವಾಗ ಸೌಟು ಮತ್ತು ಸ್ವಲ್ಪ ನೀರು ಬಳಸಿದಲ್ಲಿ ಸುಲಭವಾಗಿ ಆಗುವುದು. 
  5. ನಂತರ ಆ ಹುಣಿಸೆ ಪೇಸ್ಟ್ ಅನ್ನು ಒಂದು ಬಾಣಲೆಗೆ ಹಾಕಿ, ಕುದಿಯಲು ಇಡಿ. 
  6. ಕುದಿಯುವಾಗ ಅರ್ಧ ಕಪ್ ಉಪ್ಪು ಸೇರಿಸಿ. 
  7. ಕುದಿಯಲು ಪ್ರಾರಂಭವಾದ ಮೇಲೆ, ಉರಿ ಕಡಿಮೆ ಮಾಡಿ. 
  8. ಹುಣಿಸೆರಸ ಗಟ್ಟಿಯಾಗುವವರೆಗೆ ಅಥವಾ ಸಿಡಿಯಲು ಪ್ರಾರಂಭವಾಗುವವರೆಗೆ ಕುದಿಸಿ. ಸುಮಾರು ಇಪ್ಪತ್ತು ನಿಮಿಷ ಬೇಕಾಯಿತು ನನಗೆ. 
  9. ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಡಬ್ಬದಲ್ಲಿ ತುಂಬಿಸಿ, ಫ್ರಿಡ್ಜ್ನಲ್ಲಿಡಿ. 6 - 7 ತಿಂಗಳು ಕೆಡುವುದಿಲ್ಲ. 
  10. ಹೊರಗೆ ಇಡುವುದಾದಲ್ಲಿ ಇನ್ನು ಸ್ವಲ್ಪ ಗಟ್ಟಿ ಪೇಸ್ಟ್ ಮಾಡಬೇಕಾಗುವುದು. 

ಶನಿವಾರ, ಫೆಬ್ರವರಿ 15, 2020

Curd in 1 hour recipe in Kannada | ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ

Curd in 1 hour recipe in Kannada

Curd in 1 hour recipe in Kannada | ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ

ಗಟ್ಟಿಮೊಸರು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. ಅರ್ಧ ಲೀಟರ್ ಹಾಲು
  2. 5 - 6 ಟೇಬಲ್ ಚಮಚ ಮೊಸರು

ಗಟ್ಟಿಮೊಸರು 1 ಘಂಟೆಯಲ್ಲಿ ಮಾಡುವ ವಿಧಾನ:

  1. ಹಾಲನ್ನು ಕುದಿಸಿ.
  2. ಬಿಸಿ ಕಡಿಮೆ ಆದ ಮೇಲೆ (ಉಗುರು ಬೆಚ್ಚಗೆ ಗಿಂತ ಸ್ವಲ್ಪ ಜಾಸ್ತಿ ಬಿಸಿ ಇರಲಿ), ಮೊಸರು ಸೇರಿಸಿ.
  3. ಚೆನ್ನಾಗಿ ಎತ್ತಿಹಾಕಿ ಮಿಕ್ಸ್ ಮಾಡಿ.  
  4. ಮೊಸರು ಮಾಡಲು ಎರಡು ಪಾತ್ರೆಗೆ ಹಾಕಿ. 
  5. ಒಂದು ಪಾತ್ರೆಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಅದರಲ್ಲಿ ಮೊದಲನೇ ಹಾಲಿನ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ. ಈ ವಿಧಾನದಲ್ಲಿ ಸುಮಾರು ಎರಡು ಘಂಟೆ ಬೇಕಾಗುತ್ತದೆ. 
  6. ಎರಡನೇ ವಿಧಾನದಲ್ಲಿ, ಒಂದು ಪಾತ್ರೆ ಅಥವಾ ಕುಕ್ಕರ್ ನಲ್ಲಿ ಸ್ವಲ್ಪ ನೀರು ಬಿಸಿ ಮಾಡಿ. ನಂತರ ಸ್ಟವ್ ಆಫ್ ಮಾಡಿ. 
  7. ಒಂದು ಸ್ಟಾಂಡ್ ಇಟ್ಟು, ಹಾಲಿನ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ. 
  8. ನಂತ್ರ ಪಾತ್ರೆ ಅಥವಾ ಕುಕ್ಕರ್ ನ ಮುಚ್ಚಳವನ್ನೂ ಮುಚ್ಚಿ. 
  9. ಈ ವಿಧಾನದಲ್ಲಿ ಒಂದೇ ಘಂಟೆಯಲ್ಲಿ ಮೊಸರು ತಯಾರಾಗುತ್ತದೆ. 
  10. ಮಾಡಿ ನೋಡಿ. ಮೇಲೆ ಇರುವ ವಿಡಿಯೋವನ್ನು ಒಮ್ಮೆ ನೋಡಿ. 

ಶನಿವಾರ, ಫೆಬ್ರವರಿ 8, 2020

Peanut butter recipe in Kannada | ಶೇಂಗಾ ಬೆಣ್ಣೆ ಮಾಡುವ ವಿಧಾನ

Peanut butter recipe in Kannada

Peanut butter recipe in Kannada | ಶೇಂಗಾ ಬೆಣ್ಣೆ ಮಾಡುವ ವಿಧಾನ

ಶೇಂಗಾ ಬೆಣ್ಣೆ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ನೆಲಗಡಲೆ ಅಥವಾ ಶೇಂಗಾ
  2. ದೊಡ್ಡ ಚಿಟಿಕೆ ಉಪ್ಪು
  3. 1 ಚಮಚ ತೆಂಗಿನೆಣ್ಣೆ (ಬೇಕಾದಲ್ಲಿ; ಬೇರೆ ಎಣ್ಣೆ ಬಳಸಬಹುದು)
  4. 1 ಚಮಚ ಬೆಲ್ಲ ಅಥವಾ ಜೇನುತುಪ್ಪ

ಶೇಂಗಾ ಬೆಣ್ಣೆ ಮಾಡುವ ವಿಧಾನ:

  1. ಶೇಂಗಾ ಅಥವಾ ಕಡ್ಲೆಕಾಯಿಯನ್ನು ದಪ್ಪ ತಳದ ಬಾಣಲೆಯಲ್ಲಿ ತೆಗೆದುಕೊಂಡು ಅಲ್ಲಲ್ಲಿ ಕಂದುಬಣ್ಣ ಬರುವವರೆಗೆ ಅಥವಾ ಗರಿಗರಿಯಾಗುವವರೆಗೆ, ಮಧ್ಯಮ ಉರಿಯಲ್ಲಿ ಹುರಿಯಿರಿ.
  2. ಬಿಸಿ ಆರಿದ ಮೇಲೆ ಸಿಪ್ಪೆ ತೆಗೆಯಿರಿ. 
  3. ಮಿಕ್ಸಿಜಾರಿನಲ್ಲಿ ತೆಗೆದುಕೊಂಡು ಪುಡಿ ಮಾಡಿ. 
  4. ಆಮೇಲೆ ಉಪ್ಪು, ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ. 
  5. ಶೆಂಗಾ ಎಣ್ಣೆ ಬಿಟ್ಟು, ಪೇಸ್ಟ್ ಆಗುವವರೆಗೆ ಅರೆಯಿರಿ (ಮೇಲಿರುವ ವಿಡಿಯೋ ನೋಡಿ)
  6. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಫ್ರಿಡ್ಜ್ ನಲ್ಲಿ ಮೂರು ತಿಂಗಳು, ಹೊರಗೆ ಒಂದು ತಿಂಗಳು ಇಡಬಹುದು. 
  7. ಬ್ರೆಡ್, ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ. ಸ್ಯಾಂಡ್ವಿಚ್ ನಲ್ಲೂ ಬಳಸಬಹುದು. 


ಸೋಮವಾರ, ಡಿಸೆಂಬರ್ 30, 2019

How to store green peas in kannada | ಹಸಿಬಟಾಣಿಯನ್ನು ತುಂಬ ದಿನ ಇಡುವುದು ಹೇಗೆ?

How to store green peas in kannada

How to store green peas in kannada | ಹಸಿಬಟಾಣಿಯನ್ನು ತುಂಬ ದಿನ ಇಡುವುದು ಹೇಗೆ?


ಹಸಿಬಟಾಣಿಯನ್ನು ಶೇಖರಿಸುವ ವಿಡಿಯೋ

ಹಸಿಬಟಾಣಿಯನ್ನು ಶೇಖರಿಸುವ ಸಲಹೆಗಳು:

  1. ಅಗತ್ಯವಿದ್ದಷ್ಟು ಹಸಿಬಟಾಣಿಯನ್ನು ಸುಲಿದು ತೆಗೆದುಕೊಳ್ಳಿ. 
  2. ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ. 
  3. ಕುದಿಯಲು ಶುರು ಆದ ಮೇಲೆ  ಸುಲಿದ ಬಟಾಣಿ ಹಾಕಿ.
  4. ಒಂದು ನಿಮಿಷ ಅಥವಾ ಬಟಾಣಿ ಎಲ್ಲ ಮೇಲೆ ಬರುವವರೆಗೆ ಕುದಿಸಿ, ಕೂಡಲೇ ಸ್ಟವ್ ಆಫ್ ಮಾಡಿ. 
  5. ನಂತ್ರ  ನೀರನ್ನು ಬಗ್ಗಿಸಿ. 
  6. ಮೇಲಿನಿಂದ ಸ್ವಲ್ಪ ನೀರನ್ನು ಸುರಿಯಿರಿ. ಹೀಗೆ ಮಾಡುವುದರಿಂದ ಜಾಸ್ತಿ ಬೇಯಿಸುವುದನ್ನು ತಪ್ಪಿಸಬಹುದು. 
  7. ಆಮೇಲೆ ಒಂದು ಬಟ್ಟೆಯ ಮೇಲೆ ಹರಡಿ. 
  8. ಬಿಸಿ ಆರಿದ ಮೇಲೆ ಬಾಕ್ಸ್ ಅಥವಾ ಜಿಪ್ ಲಾಕ್ ಕವರ್ ನಲ್ಲಿ ಹಾಕಿ ಫ್ರೀಜರ್ನಲ್ಲಿಡಿ (ಫ್ರಿಡ್ಜ್ ನ ಮೇಲ್ಭಾಗ).  
  9. ಒಂದು ವರ್ಷದವರೆಗೆ ಹಾಳಾಗುವುದಿಲ್ಲ. ಅಗತ್ಯವಿದ್ದಾಗ ಬಳಸಿ. 

ಶನಿವಾರ, ಫೆಬ್ರವರಿ 16, 2019

How to store leaves in kannada | ಸೊಪ್ಪನ್ನು ತುಂಬ ದಿನ ಇಡುವುದು ಹೇಗೆ?

How to store leaves in kannada

How to store leaves in kannada | ಸೊಪ್ಪನ್ನು ತುಂಬ ದಿನ ಇಡುವುದು ಹೇಗೆ?

ಅಡುಗೆಮನೆಯ ಉಪಯುಕ್ತ ಸಲಹೆಗಳು

ಅಡುಗೆಮನೆಯ ಉಪಯುಕ್ತ ಸಲಹೆಗಳು:

  1. ಕರಿಬೇವನ್ನು ಆಯ್ದು, ಎಲೆಗಳನ್ನು ತೆಗೆದುಕೊಳ್ಳಿ.
  2. ನಂತ್ರ ಚೆನ್ನಾಗಿ ತೊಳೆದು ಒಂದು ಬಟ್ಟೆಯ ಮೇಲೆ ಹರಡಿ ನೀರಾರಲು ಬಿಡಿ. 
  3. ನೀರಾರಿದ ಮೇಲೆ, ಒಂದು ಬಾಕ್ಸ್ ನ ತಳಕ್ಕೆ ಟಿಶ್ಯೂ ಪೇಪರ್ ಹಾಕಿ, ಕರಿಬೇವನ್ನು ತುಂಬಿಸಿ ಫ್ರಿಡ್ಜ್ ನಲ್ಲಿಡಿ. ಒಂದು ತಿಂಗಳು ಹಾಳಾಗುವುದಿಲ್ಲ. 
  4. ಕೊತ್ತಂಬರಿ ಸೊಪ್ಪನ್ನು ಆರಿಸಿ. ಕೊಳೆತ, ಹಣ್ಣಾದ ಮತ್ತು ಹಾಳಾದ ಸೊಪ್ಪು ಬೇರ್ಪಡಿಸಿ. ಹಣ್ಣಾದ ಸೊಪ್ಪನ್ನು ಒಂದೆರಡು ದಿನಗಳಲ್ಲಿ ಉಪಯೋಗಿಸಿ ಬಿಡಿ. 
  5. ಬೇರಿನ ಭಾಗವನ್ನೂ ತೆಗೆಯಿರಿ. 
  6. ಒಳ್ಳೆ ಸೊಪ್ಪನ್ನು ಪೇಪರ್ ನಲ್ಲಿ ಸುತ್ತಿ. ನೀರಿನ ಪಸೆ ಇರಬಾರದು. 
  7. ಆಮೇಲೆ ಪೇಪರ್ ಸಹಿತ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಮೂರು ವಾರ ಹಾಳಾಗುವುದಿಲ್ಲ. 

ಸೋಮವಾರ, ಅಕ್ಟೋಬರ್ 8, 2018

Kitchen tips and tricks in kannada | ಅಡುಗೆಮನೆಯ ಉಪಯುಕ್ತ ಸಲಹೆಗಳು

Kitchen tips and tricks in kannada

Kitchen tips and tricks in kannada | ಅಡುಗೆಮನೆಯ ಉಪಯುಕ್ತ ಸಲಹೆಗಳು

ಅಡುಗೆಮನೆಯ ಉಪಯುಕ್ತ ಸಲಹೆಗಳು

ಅಡುಗೆಮನೆಯ ಉಪಯುಕ್ತ ಸಲಹೆಗಳು:

  1. ಹಸಿರುಮೆಣಸಿನಕಾಯಿಯನ್ನು ಕತ್ತರಿಯಲ್ಲಿ ಕತ್ತರಿಸಿ. ಇದರಿಂದ ಕೈ ಉರಿಯುವುದಿಲ್ಲ. 
  2. ನಿಂಬೆ ಹಣ್ಣನ್ನು ಚೆನ್ನಾಗಿ ತಿಕ್ಕಿ, ತೊಳೆದು ಆಮೇಲೆ ರಸ ತೆಗೆದರೆ, ರಸ ತೆಗೆಯಲೂ ಸುಲಭ ಮತ್ತು ಹೆಚ್ಚು ರಸವೂ ಬರುತ್ತದೆ. 
  3. ಶುಂಠಿ ಸಿಪ್ಪೆಯನ್ನು ಚಮಚದಲ್ಲಿ ತೆಗೆಯಿರಿ. 
  4. ಶುಂಠಿಯನ್ನು ಸಣ್ಣಗೆ ಕತ್ತರಿಸಲು, ತುರಿಯಿರಿ ಅಥವಾ ತೆಳುವಾದ ಚಕ್ರಮಾಡಿಕೊಂಡು ಜಜ್ಜಿ. 
  5. ಸಕ್ಕರೆಗೆ ಇರುವೆ ಬರದಿರಲು ನಾಲ್ಕೈದು ಲವಂಗ ಹಾಕಿ ಇಡೀ. 
  6. ಈರುಳ್ಳಿ ಭಾಗ ಮಾಡಿ, ಸಿಪ್ಪೆ ತೆಗೆದು, ಒಮ್ಮೆ ನೀರಿನಲ್ಲಿ ತೊಳೆದು, ಆಮೇಲೆ ಕತ್ತರಿಸುವುದರಿಂದ ಕಣ್ಣೀರು ಬರುವುದಿಲ್ಲ. 
  7. ಬೆಳ್ಳುಳ್ಳಿ ಗಡ್ಡೆಯನ್ನು ಚೆನ್ನಾಗಿ ಗುದ್ದಿದಲ್ಲಿ ಸಿಪ್ಪೆ ತೆಗೆಯಲು ಸುಲಭವಾಗುತ್ತದೆ (ಮೇಲೆ ಹಾಕಿದ ವಿಡಿಯೋ ನೋಡಿ)
  8. ಬೆಳ್ಳುಳ್ಳಿ ಬೇಳೆಯನ್ನು ಬಿಸಿ ನೀರಿಗೆ ಹಾಕಿ, ಒಂದೆರಡು ನಿಮಿಷ ಬಿಟ್ಟರೆ, ಸುಲಭವಾಗಿ ಸಿಪ್ಪೆ ತೆಗೆಯಬಹುದು. 

ಗುರುವಾರ, ಮಾರ್ಚ್ 3, 2016

Molake kaalu maduva vidhana in Kannada | ಮೊಳಕೆ ಕಾಳು ಮಾಡುವ ವಿಧಾನ:

ಮೊಳಕೆ ಕಾಳು ಮಾಡುವ ವಿಧಾನ

ಮೊಳಕೆ ಕಾಳು ಮಾಡುವ ವಿಧಾನ:

  1. ಹೆಸರು ಕಾಳನ್ನು ಒಳ್ಳೆಯ ನೀರಿನಲ್ಲಿ ಒಂದೆರಡು ಬಾರಿ ತೊಳೆದು, 5 - 6 ಘಂಟೆಗಳ ಕಾಲ ನೆನೆಸಿಡಿ. ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ನೆನೆಸುತ್ತೇನೆ.
  2. ನೆನೆದ ನಂತರ ನೀರನ್ನು ಬಗ್ಗಿಸಿ ಪುನಃ ಒಮ್ಮೆ ಒಳ್ಳೆಯ ನೀರಿನಲ್ಲಿ ತೊಳೆಯಿರಿ. ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ.
  3. ಈಗ ಒಂದು ಶುದ್ಧವಾದ ಬಟ್ಟೆಯಲ್ಲಿ ನೆನೆಸಿದ ಕಾಳನ್ನು ಸುರಿಯಿರಿ.
  4. ಕಾಳನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಶುದ್ಧವಾಗಿರುವ ಪಾತ್ರೆಯೊಳಗೆ ಇಡಿ.
  5. ಮೇಲಿನಿಂದ ಒಂದು ಕಲ್ಲು ಅಥವಾ ಇನ್ನಾವುದೇ ಭಾರದ ವಸ್ತುವೊಂದನ್ನು ಇಡಿ. ಹೀಗೆ ಮಾಡುವುದರಿಂದ ಮೊಳಕೆ ಚೆನ್ನಾಗಿ ಬರುತ್ತದೆ.
  6. ಸುಮಾರು 12 - 14 ಘಂಟೆಗಳ ನಂತರ ಬಟ್ಟೆ ಬಿಡಿಸಿ ನೋಡಿದಲ್ಲಿ ಕಾಳು ಚೆನ್ನಾಗಿ ಮೊಳಕೆಯೊಡೆಡಿರುತ್ತದೆ. ನಿಮಗೆ ಉದ್ದ ಮೊಳಕೆ ಬೇಕಾದಲ್ಲಿ ಹೆಚ್ಚು ಸಮಯ ಇಡಿ. ಈಗ ಈ ಮೊಳಕೆ ಕಾಳನ್ನು ಪಲ್ಯ, ಕೋಸಂಬರಿ ಅಥವಾ ಇನ್ನಾವುದೇ ಅಡುಗೆಯಲ್ಲಿ ಉಪಯೋಗಿಸಿ. 
  7. ಒಂದು ಸುಲಭ ಕೋಸಂಬರಿ ಮಾಡಲು, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಕ್ಯಾರೆಟ್ ತುರಿದುಕೊಳ್ಳಿ. ಒಂದು ಟೊಮ್ಯಾಟೋ ವನ್ನು ಸಣ್ಣಗೆ ಹೆಚ್ಚಿ ಕೊಳ್ಳಿ. ಸ್ವಲ್ಪ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ಲಿಂಬೆಹಣ್ಣಿನ ರಸವನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  8. ಈಗ ಎಲ್ಲ ಪದಾರ್ಥಗಳನ್ನು 1 ಕಪ್ ಹೆಸರು ಕಾಳು ಮೊಳಕೆಯೊಂದಿಗೆ ಬೆರೆಸಿ ಸವಿಯಿರಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ, ಜನವರಿ 23, 2016

Gatti mosaru maduva vidhana | ಗಟ್ಟಿ ಮೊಸರು ಮಾಡುವ ವಿಧಾನ


ಗಟ್ಟಿ ಮೊಸರು ಮಾಡುವ ವಿಧಾನ

ಮನೆಯಲ್ಲಿ ಗಟ್ಟಿ ಮೊಸರು ಮಾಡುವುದು ಹೇಗೆಂದು ತಿಳಿದುಕೊಳ್ಳಿ. ಮನೆಯಲ್ಲಿ ಮಾಡಿದೆ ಮೊಸರು ಶುದ್ಧ, ರುಚಿಕರ ಮತ್ತು ಮಾಡಲು ಬಹಳ ಸರಳವಾಗಿದೆ. ನಮ್ಮ ಮನೆಗಳಲ್ಲಿ ಮೊಸರು ಅಥವಾ ಮಜ್ಜಿಗೆ ಇಲ್ಲದ ಊಟವನ್ನು ಅಪೂರ್ಣವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಮನೆಯಲ್ಲಿ ಮೊಸರು ಮಾಡುವುದು ದೈನಂದಿನ ಪ್ರಕ್ರಿಯೆಯಾಗಿದೆ. ನಾನು ಈ ಗಟ್ಟಿ ಮೊಸರು ಮಾಡುವ ವಿಧಾನವನ್ನು, ಮೊಸರು ಮಾಡಲು ತೊಂದರೆ ಅನುಭವಿಸುತ್ತಿರುವವರಿಗೋಸ್ಕರ ವಿವರಿಸುತ್ತಿದ್ದೇನೆ.. ನಮ್ಮಲ್ಲಿ ಅನೇಕರು ಮೊಸರನ್ನು ಅಂಗಡಿಯಲ್ಲಿ ಖರೀದಿಸುತ್ತೀರಿ. ಆದರೆ ಮನೆಯಲ್ಲಿ ಮೊಸರು ಮಾಡುವುದು ಬಹಳ ಸುಲಭ ಮತ್ತು ನೀವು ಒಮ್ಮೆ ಮೊಸರು ಮಾಡುವುದನ್ನು ಸರಿಯಾಗಿ ಕಲಿತುಕೊಂಡರೆ ನಂತರ ಅಂಗಡಿಗಳಿಂದ ಮೊಸರು ಖರೀದಿ ಮಾಡುವುದನ್ನು ಖಂಡಿತ ನಿಲ್ಲಿಸುವಿರಿ.

ಮನೆಯಲ್ಲಿ ಗಟ್ಟಿ ಮೊಸರು ಮಾಡುವ ವಿಧಾನ:

  1. ಮನೆಯಲ್ಲಿ ಮೊಸರು ಮಾಡಲು ಮೊದಲಿಗೆ ನೀರು ಬೆರೆಸದೇ ಹಾಲನ್ನು ಕುದಿಸಬೇಕು. ನಿಮಗೆ ಹಾಲು ನೀರಾಗಿದೆ ಎನಿಸಿದರೆ ಕೆಲವು ನಿಮಿಷಗಳ ಕಾಲ ಹೆಚ್ಚು ಕುದಿಸಿ. ಯಾವಾಗಲೂ ಮೊಸರು ಮಾಡುವ ಸ್ವಲ್ಪ ಮೊದಲು ಹಾಲನ್ನು ಕುದಿಸಬೇಕು. ಯಾವಾಗಲೋ ಕುದಿಸಿ ಇಟ್ಟ ಹಾಲಿಂದ ಮೊಸರು ಮಾಡಲು ಹೊರಟರೆ ಚೆನ್ನಾಗಿ ಬರುವುದಿಲ್ಲ, ಜೊತೆಗೆ ಮೊಸರು ಆಗುವ ಮೊದಲೇ ಹಾಲು ಹಾಳಾಗುವ ಸಾಧ್ಯತೆಯೂ ಇದೆ.
  2. ಹಾಲು ಬೆಚ್ಚಗಾಗುವವರೆಗೆ ಕಾಯಿರಿ. ಗಮನಿಸಿ, ಹಾಲು ಬಿಸಿಯಾಗಿರಬಾರದು ಮತ್ತು ಪೂರ್ತಿ ತಣ್ಣಗೆ ಸಹ ಆಗಬಾರದು. ಈ ಬೆಚ್ಚಗಾಗಿರುವ ಹಾಲಿಗೆ 1 ರಿಂದ 2 ಚಮಚದಷ್ಟು ಮೊಸರು ಹಾಕಿ ಚೆನ್ನಾಗಿ ಮಗುಚಬೇಕು. ನೀವು ಪ್ಯಾಕೆಟ್ ಹಾಲು ಬಳಸುತ್ತಿದ್ದರೆ ಅಥವಾ ಚಳಿ ಪ್ರದೇಶದಲ್ಲಿದ್ದರೆ 2 ಚಮಚದಷ್ಟು ಮೊಸರು ಹಾಕಿ.., ಇಲ್ಲವೇ 1 ಚಮಚ ಸಾಕಾಗುತ್ತದೆ.
  3. ಈಗ ಮುಚ್ಚಳ ಮುಚ್ಚಿ 6-7 ಘಂಟೆಗಳ ಕಾಲ ಹಾಗೆ ಇಡಿ. ಮೊಸರು ಆಗಲು ಬೇಕಾದ ಈ ಸಮಯ ಕೂಡ ನೀವಿರುವ ಪ್ರದೇಶದ ಹವಾಮಾನವನ್ನು ಅವಲಂಬಿಸಿರುತ್ತದೆ. ಈ ಸಮಯದಲ್ಲಿ ಪಾತ್ರೆಯನ್ನು ಅಲ್ಲಾಡಿಸಬಾರದು. ಜಾಸ್ತಿ ಮೊಸರು ಹಾಕುವುದು ಅಥವಾ ತುಂಬಾ ಸಮಯ ಬಿಡುವುದು ಮಾಡಿದಲ್ಲಿ ಮೊಸರು ಹುಳಿಯಾಗುವ ಸಾಧ್ಯತೆಯೂ ಇದೆ. ಹೇಳಿದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊಸರು ಮಾಡಿದಲ್ಲಿ ರುಚಿಕರ ಗಟ್ಟಿ ಮೊಸರು ಮಾಡಲು ಸಾಧ್ಯವಾಗುತ್ತದೆ.

ಗುರುವಾರ, ನವೆಂಬರ್ 26, 2015

How to make ghee in Kannada | ತುಪ್ಪ ಮಾಡುವ ವಿಧಾನ


ತುಪ್ಪ ಮಾಡುವ ವಿಧಾನ

ಮನೆಯಲ್ಲಿ ಶುದ್ಧ ತುಪ್ಪ ಮಾಡುವ ವಿಧಾನವನ್ನು ಇಲ್ಲಿ ಚಿತ್ರ ಸಹಿತ ವಿವರಿಸಲಾಗಿದೆ. ಮನೆಯಲ್ಲಿ ಮಾಡಿದ ತುಪ್ಪದಲ್ಲಿ ಯಾವುದೇ ರೀತಿಯ ಕಲಬೆರಕೆ ಇಲ್ಲದಿರುವುದರಿಂದ, ಆದಷ್ಟು ಮನೆಯಲ್ಲೇ ತುಪ್ಪ ಮಾಡುವುದು ಉತ್ತಮ. ಅಲ್ಲದೇ ಮನೆಯಲ್ಲಿ ಮಾಡಿದ ತುಪ್ಪ ಒಳ್ಳೆ ಸುವಾಸನೆ 
ಮತ್ತು ರುಚಿಯನ್ನು ಹೊಂದಿರುತ್ತದೆ.

ತುಪ್ಪ ಮಾಡುವ ವಿಧಾನ:

  1. ಬೆಣ್ಣೆಯನ್ನು ಒಂದು ದಪ್ಪ ತಳದ ದೊಡ್ಡ ಪಾತ್ರೆಯಲ್ಲಿ ತೆಗೆದುಕೊಳ್ಳಿ. ಸ್ವಚ್ಛ ಬೆಣ್ನೆಗಾಗಿ ಹಲವಾರು ಬಾರಿ ಚೆನ್ನಾಗಿ ತೊಳೆಯಿರಿ (ನನ್ನಮ್ಮ ಹೇಳುವ ಪ್ರಕಾರ 7 ಬಾರಿ ತೊಳೆಯಬೇಕು). ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ.
  2. ನಂತರ ಸ್ಟೋವ್ ಹಚ್ಚಿ ಬೆಣ್ಣೆಯನ್ನು ಕಾಯಲು ಇಡಿ. ಸ್ಟೋವ್ ಮಧ್ಯಮ ಉರಿಯಲ್ಲಿರಲಿ. ಕೆಲವೇ ಕ್ಷಣಗಳಲ್ಲಿ ಬೆಣ್ಣೆ ಸಂಪೂರ್ಣ ಕರಗಿ ನೊರೆ ನೊರೆಯಾಗಿ ಕುದಿಯಲಾರಂಬಿಸುತ್ತದೆ.
  3. ನಿಧಾನವಾಗಿ, ನೊರೆಯು ನೀರಿನ ಗುಳ್ಳೆಗಳಂತೆ ಬದಲಾಗಿ ಒಂದು ಸಣ್ಣ ಸದ್ದಿನೊಂದಿಗೆ ಕುದಿಯುವುದನ್ನು ನೀವು ಕಾಣುತ್ತೀರಿ. ಈ ಸಮಯದಲ್ಲಿ ಹಾಲಿನ ಗಟ್ಟಿ ಅಂಶ ತಳದಲ್ಲಿ ಶೇಖರಣೆಯಾಗ ತೊಡಗುತ್ತದೆ. ಆಗೊಮ್ಮೆ ಈಗೊಮ್ಮೆ ಮಗುಚಿ. ಸ್ವಲ್ಪ ಸಮಯದಲ್ಲಿ ಈ ಹಾಲಿನ ಗಟ್ಟಿ ಅಂಶ ಕಂದು ಬಣ್ಣಕ್ಕೆ ತಿರುಗುತ್ತದೆ. ಕೂಡಲೇ ಸ್ಟೋವ್ ಆಫ್ ಮಾಡಿ.
  4. ಒಂದು ಹತ್ತು ನಿಮಿಷ ಬಿಟ್ಟು, ನೀರಿನ ಪಸೆ ಇಲ್ಲದ ಪಾತ್ರೆಗೆ ಜರಡಿಯ ಸಹಾಯದಿಂದ ತುಪ್ಪವನ್ನು ಸೋಸಿ. ಮನೆಯಲ್ಲಿ ಮಾಡಿದ ಘಮ ಘಮ ತುಪ್ಪ ಸವಿಯಲು ಸಿದ್ಧ.



Related Posts Plugin for WordPress, Blogger...