ಕುರುಕಲು ತಿಂಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುರುಕಲು ತಿಂಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜೂನ್ 15, 2024

Chinthamani kadlekai recipe in Kannada | ಚಿಂತಾಮಣಿ ಕಡ್ಲೆಕಾಯಿ ಮಾಡುವ ವಿಧಾನ

 

Chinthamani kadlekai recipe in Kannada

Chinthamani kadlekai recipe in Kannada | ಚಿಂತಾಮಣಿ ಕಡ್ಲೆಕಾಯಿ ಮಾಡುವ ವಿಧಾನ

ಚಿಂತಾಮಣಿ ಕಡ್ಲೆಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ 
  2. ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
  3. 7 - 8 ಕರಿಬೇವಿನ ಎಲೆ
  4. 3 - 4 ಹಸಿಮೆಣಸಿನಕಾಯಿ
  5. 1/2 ನಿಂಬೆಹಣ್ಣಿನ ರಸ
  6.  1/4 ಟೀಸ್ಪೂನ್ ಅರಶಿನ ಪುಡಿ
  7. ದೊಡ್ಡ ಚಿಟಿಕೆ ಇಂಗು
  8. 1/4 ಟೀಸ್ಪೂನ್ ಮೆಂತ್ಯಕಾಳು
  9. ಉಪ್ಪು ರುಚಿಗೆ ತಕ್ಕಷ್ಟು

ಶೇಂಗಾ ಹುರಿಗಾಳು ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕೈ ಬಿಡದೇ ಹುರಿಯಿರಿ. 
  2. ಹುರಿದ ಕಡಲೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ. 
  3. ನಂತರ ಒಂದು ಮಿಕ್ಸಿ ಜಾರಿನಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಹಸಿಮೆಣಸಿನಕಾಯಿ ತೆಗೆದುಕೊಳ್ಳಿ.
  4. ಅದಕ್ಕೆ ಉಪ್ಪು, ನಿಂಬೆ ಹಣ್ಣಿನ ರಸ, ಇಂಗು ಮತ್ತು ಅರಿಶಿನ ಸೇರಿಸಿ. 
  5. ನೆನೆಸಿದ ಮೆಂತ್ಯ ಕಾಳನ್ನು ಸೇರಿಸಿ. 
  6. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಅರೆದುಕೊಳ್ಳಿ. 
  7. ಹುರಿದ ಶೇಂಗಾ ಸ್ವಲ್ಪ ಬಿಸಿ ಕಡಿಮೆ ಆದಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. 
  8. ಪುನಃ ಸ್ಟವ್ ಮೇಲಿಟ್ಟು ಶೇಂಗಾ ಒಣಗುವವರೆಗೆ ಹುರಿಯಿರಿ. 
  9. ಸ್ಟವ್ ಆಫ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಮಂಗಳವಾರ, ಡಿಸೆಂಬರ್ 5, 2023

Paneer tawa fry recipe in Kannada | ಪನೀರ್ ತವಾ ಫ್ರೈ ಮಾಡುವ ವಿಧಾನ

 

Paneer tawa fry recipe in Kannada | ಪನೀರ್ ತವಾ ಫ್ರೈ ಮಾಡುವ ವಿಧಾನ

ಪನೀರ್ ತವಾ ಫ್ರೈ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 200gm ಪನೀರ್
  2. 2 ಟೇಬಲ್ ಸ್ಪೂನ್ ಕಡ್ಲೆಹಿಟ್ಟು
  3. 1 ಟೇಬಲ್ ಸ್ಪೂನ್ ಬಿಸಿ ಎಣ್ಣೆ
  4. 1.5 ಟೀಸ್ಪೂನ್ ಅಚ್ಚಖಾರದ ಪುಡಿ
  5. 1 ಟೀಸ್ಪೂನ್ ಧನಿಯಾ ಪುಡಿ
  6. 1/2 ಟೀಸ್ಪೂನ್ ಜೀರಿಗೆ ಪುಡಿ
  7. 1/2 ಟೀಸ್ಪೂನ್ ಗರಂ ಮಸಾಲಾ
  8. 1/4 ಟೀಸ್ಪೂನ್ ಚಾಟ್ ಮಸಾಲಾ
  9. ದೊಡ್ಡ ಚಿಟಿಕೆ ಅರಿಶಿನ
  10. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  11. 2 ಟೇಬಲ್ ಸ್ಪೂನ್ ಗಟ್ಟಿ ಮೊಸರು
  12. 1 ಟೇಬಲ್ ಸ್ಪೂನ್ ಕಸೂರಿ ಮೇಥಿ
  13. ಉಪ್ಪು ರುಚಿಗೆ ತಕ್ಕಂತೆ

ಹಸಿರು ಚಟ್ನಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಸಣ್ಣ ಹಿಡಿ ಪುದೀನಾ ಸೊಪ್ಪು
  2. ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
  3. 1 - 2 ಹಸಿಮೆಣಸಿನಕಾಯಿ
  4. 1cm ಉದ್ದದ ಶುಂಠಿ
  5. 2 ಟೇಬಲ್ ಚಮಚ ಗಟ್ಟಿ ಮೊಸರು
  6. 1/4 ಟೀಸ್ಪೂನ್ ಜೀರಿಗೆ ಪುಡಿ
  7. 1/4 ಟೀಸ್ಪೂನ್ ಚಾಟ್ ಮಸಾಲಾ
  8. ಉಪ್ಪು ರುಚಿಗೆ ತಕ್ಕಷ್ಟು
  9. ಸಕ್ಕರೆ ರುಚಿಗೆ ತಕ್ಕಷ್ಟು

ಪನೀರ್ ತವಾ ಫ್ರೈ ಮಾಡುವ ವಿಧಾನ:

  1. ಕಡ್ಲೆಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಬಿಸಿ ಬಿಸಿ ಎಣ್ಣೆ ಹಾಕಿ ಕಲಸಿ.
  3. ಅದಕ್ಕೆ ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ.
  4. ಅರಿಶಿನ ಸೇರಿಸಿ ಮತ್ತು ಉಪ್ಪು ಸೇರಿಸಿ.
  5. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
  6. ಮೊಸರು ಮತ್ತು ಕಸೂರಿ ಮೇಥಿ ಸೇರಿಸಿ ಮಗುಚಿ.
  7. ಅದಕ್ಕೆ ಪನೀರ್ ಚೂರುಗಳನ್ನು ಹಾಕಿ ಕಲಸಿ, ಮೂವತ್ತು ನಿಮಿಷ ನೆನೆಯಲು ಬಿಡಿ.
  8. ತವ ಅಥವಾ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  9. ಮಸಾಲೆ ಹಚ್ಚಿದ ಪನೀರ್ ಚೂರುಗಳನ್ನು ಖಾಯಿಸಿ.
  10. ಹಸಿರು ಚಟ್ನಿ ಯೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು.

ಹಸಿರು ಚಟ್ನಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಪುದೀನಾ, ಕೊತ್ತಂಬರಿ ಸೊಪ್ಪು, ಮೊಸರು, ಹಸಿಮೆಣಸಿನಕಾಯಿ ಮತ್ತು ಶುಂಠಿ ತೆಗೆದುಕೊಳ್ಳಿ .
  2. ಅದಕ್ಕೆ ಜೀರಿಗೆ ಪುಡಿ, ಚಾಟ್ ಮಸಾಲಾ ಉಪ್ಪು ಮತ್ತು ಸಕ್ಕರೆ ಸೇರಿಸಿ.
  3. ನುಣ್ಣಗೆ ರುಬ್ಬಿ.
  4. ಪನೀರ್ ತವ ಫ್ರೈ ಅಥವಾ ಯಾವುದೇ ಸ್ನಾಕ್ಸ್ ಜೊತೆ ಬಡಿಸಿ.

ಸೋಮವಾರ, ನವೆಂಬರ್ 20, 2023

Hesaru bele chakli recipe in Kannada | ಹೆಸರುಬೇಳೆ ಚಕ್ಲಿ ಮಾಡುವ ವಿಧಾನ

 

Hesaru bele chakli recipe in Kannada

Hesaru bele chakli recipe in Kannada | ಹೆಸರುಬೇಳೆ ಚಕ್ಲಿ ಮಾಡುವ ವಿಧಾನ

ಹೆಸರುಬೇಳೆ ಚಕ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 0.25 ಕಪ್ ಹೆಸರುಬೇಳೆ 
  3. 1 ಟೀ ಸ್ಪೂನ್ ಜೀರಿಗೆ
  4. ದೊಡ್ಡ ಚಿಟಿಕೆ ಇಂಗು
  5. 2 ಟೇಬಲ್ ಚಮಚ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು
  7. ಎಣ್ಣೆ ಚಕ್ಕುಲಿ ಕಾಯಿಸಲು

ಚಕ್ಕುಲಿ ಮಾಡುವ ವಿಧಾನ:

  1. ಹೆಸರುಬೇಳೆಯನ್ನು ತೊಳೆದು, ಒಂದಕ್ಕೆ ಮೂರರಷ್ಟು ನೀರು ಸೇರಿಸಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. 
  2. ಬೇಯಿಸಿದ ಹೆಸರುಬೇಳೆಯನ್ನು ಚೆನ್ನಾಗಿ ಮಸಿದಿಟ್ಟುಕೊಳ್ಳಿ ಅಥವಾ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಟ್ಟುಕೊಳ್ಳಿ.
  3. ಅಕ್ಕಿ ಹಿಟ್ಟನ್ನು ಬಾಣಲೆಯನ್ನು ತೆಗೆದುಕೊಳ್ಳಿ. 
  4. ಜೀರಿಗೆ, ಇಂಗು ಮತ್ತು ಉಪ್ಪು ಹಾಕಿ ಕಲಸಿ. 
  5. ಆಮೇಲೆ ಬಿಸಿ ಎಣ್ಣೆಯನ್ನು ಹಾಕಿ, ಚಮಚದಲ್ಲಿ ಒಮ್ಮೆ ಕಲಸಿ.  
  6. ನಂತರ ಕೈಯಲ್ಲಿ ಚೆನ್ನಾಗಿ ತಿಕ್ಕಿ ಕಲಸಿ. 
  7. ಮಸೆದ ಹೆಸರುಬೇಳೆಯನ್ನು ಹಾಕಿ. ಗಟ್ಟಿ ಆದರೆ ಮೃದುವಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಚಕ್ಕುಲಿ ಒತ್ತಲು ಆಗುವಷ್ಟು ಮೆತ್ತಗಿದ್ದರೆ ಸಾಕು. 
  8. ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಅಚ್ಚನ್ನು ಉಪಯೋಗಿಸಿ ಚಕ್ಕುಲಿಯನ್ನು ಒತ್ತಿ. 
  9. ಎಣ್ಣೆ ಬಿಸಿ ಮಾಡಿ ಒತ್ತಿದ ಚಕ್ಕುಲಿಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.

ಗುರುವಾರ, ನವೆಂಬರ್ 9, 2023

Masala kaju recipe in Kannada | ಮಸಾಲೆ ಗೋಡಂಬಿ ಮಾಡುವ ವಿಧಾನ

 

Masala kaju recipe in Kannada

Masala kaju recipe in Kannada | ಮಸಾಲೆ ಗೋಡಂಬಿ ಮಾಡುವ ವಿಧಾನ

ಮಸಾಲೆ ಗೋಡಂಬಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಡಂಬಿ
  2. 1/2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ)
  3. 1/4 ಟೀಸ್ಪೂನ್ ಕರಿಮೆಣಸಿನಪುಡಿ
  4. 1/4 ಟೀಸ್ಪೂನ್ ಜೀರಿಗೆ ಪುಡಿ
  5. 1/4 ಟೀಸ್ಪೂನ್ ಗರಂ ಮಸಾಲಾ
  6. ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ
  7. ದೊಡ್ಡ ಚಿಟಿಕೆ ಇಂಗು
  8. 2 ಟೀಸ್ಪೂನ್ ತುಪ್ಪ
  9. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಗೋಡಂಬಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಕರಿಮೆಣಸಿನಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಮಾವಿನಕಾಯಿ ಪುಡಿ, ಇಂಗು ಮತ್ತು ಉಪ್ಪನ್ನು ತೆಗೆದುಕೊಳ್ಳಿ. ಕಲಸಿ ಪಕ್ಕಕ್ಕಿಡಿ. 
  2. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. 
  3. ಮಧ್ಯಮ ಉರಿಯಲ್ಲಿ ಗೋಡಂಬಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. 
  4. ಅಚ್ಚಖಾರದ ಪುಡಿ ಸೇರಿಸಿ, ಒಮ್ಮೆ ಕಲಸಿ. 
  5. ಕಲಸಿಟ್ಟ ಮಸಾಲೆ ಪುಡಿಗಳನ್ನು ಸೇರಿಸಿ, ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  6. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಶುಕ್ರವಾರ, ಅಕ್ಟೋಬರ್ 20, 2023

Masale avalakki recipe in Kannada | ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ

 

Hasiru masale avalakki recipe in Kannada

Masale avalakki recipe in Kannada | ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ

ಮಸಾಲೆ ಅವಲಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 3 ಕಪ್ ತೆಳು ಅವಲಕ್ಕಿ
  2. 1 ಕಪ್ ತೆಂಗಿನತುರಿ
  3. 2 ಹಸಿಮೆಣಸಿನಕಾಯಿ
  4. ಸ್ವಲ್ಪ ಕರಿಬೇವು
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. 1 - 2 ಟೀಸ್ಪೂನ್ ನಿಂಬೆಹಣ್ಣಿನ ರಸ
  7. ರುಚಿಗೆ ತಕ್ಕಂತೆ ಉಪ್ಪು
  8. ರುಚಿಗೆ ತಕ್ಕಂತೆ ಸಕ್ಕರೆ

ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ:

  1. ಒಂದು ಮಿಕ್ಸಿಜಾರಿನಲ್ಲಿ ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಕರಿಬೇವನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  3. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.  
  4. ರುಚಿಗೆ ತಕ್ಕಂತೆ ಸಕ್ಕರೆಯನ್ನು ಸೇರಿಸಿ. 
  5. ನಿಂಬೆಹಣ್ಣಿನ ರಸವನ್ನೂ ಸೇರಿಸಿ. 
  6. ನೀರು ಹಾಕದೇ ಪುಡಿಮಾಡಿಕೊಳ್ಳಿ. 
  7. ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ.
  8. ಚೆನ್ನಾಗಿ ಹಿಸುಕಿ ಕಲಸಿ. 
  9. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಟೀ ಯೊಂದಿಗೆ ಸವಿದು ಆನಂದಿಸಿ. ಕಡ್ಲೆ ಉಸ್ಲಿಯೊಂದಿಗೆ ಬಡಿಸಿದರೆ ಬಹಳ ಚೆನ್ನಾಗಿರುತ್ತದೆ. 


ಮಂಗಳವಾರ, ಸೆಪ್ಟೆಂಬರ್ 5, 2023

Mini kodubale recipe in Kannada | ಮಿನಿ ಕೋಡುಬಳೆ ಮಾಡುವ ವಿಧಾನ

 

Mini kodubale recipe in Kannada

Mini kodubale recipe in Kannada | ಮಿನಿ ಕೋಡುಬಳೆ ಮಾಡುವ ವಿಧಾನ

ಮಿನಿ ಕೋಡುಬಳೆ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1/2 ಕಪ್ ಚಿರೋಟಿ ರವೇ 
  3. 1/2 ಕಪ್ ಮೈದಾ ಹಿಟ್ಟು
  4. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  5. 1/4 ಟೀಸ್ಪೂನ್ ಇಂಗು
  6. 1 ಟೀಸ್ಪೂನ್ ಓಂಕಾಳು
  7. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  8. 3 - 4 ಟೇಬಲ್ ಚಮಚ ಬಿಸಿ ಎಣ್ಣೆ
  9. ಎಣ್ಣೆ ಕೋಡುಬಳೆ ಕಾಯಿಸಲು


ಮಿನಿ ಕೋಡುಬಳೆ ಮಾಡುವ ವಿಧಾನ:

  1. ಅಕ್ಕಿ ಹಿಟ್ಟು, ಚಿರೋಟಿ ರವೇ ಮತ್ತು ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ . 
  2. ನಂತರ ಅದಕ್ಕೆ ಅಚ್ಚಖಾರದ ಪುಡಿ, ಇಂಗು ಮತ್ತುಓಮವನ್ನು ಸೇರಿಸಿ. 
  3. ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ ಕಲಸಿ.
  4. ನಂತ್ರ 3 - 4 ಟೇಬಲ್ ಚಮಚ ಬಿಸಿ ಎಣ್ಣೆಯನ್ನು ಹಾಕಿ, ಚೆನ್ನಾಗಿ ತಿಕ್ಕಿ ಕಲಸಿ. 
  5. ಕಲಸಿದ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಕೋಡುಬಳೆ ಮಾಡುವಷ್ಟು ಮೆತ್ತಗಿದ್ದರೆ ಸಾಕು.
  6. ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಬಳೆಗಳನ್ನು ಮಾಡಿ. 
  7. ಎಣ್ಣೆ ಬಿಸಿ ಮಾಡಿ ಕೋಡುಬಳೆಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.

ಮಂಗಳವಾರ, ಜೂನ್ 13, 2023

Avalakki sandige recipe in Kannada | ಅವಲಕ್ಕಿ ಸಂಡಿಗೆ ಮಾಡುವ ವಿಧಾನ

 

Avalakki sandige recipe in Kannada

Avalakki sandige recipe in Kannada | ಅವಲಕ್ಕಿ ಸಂಡಿಗೆ ಮಾಡುವ ವಿಧಾನ

ಅವಲಕ್ಕಿ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 60 ಎಂಎಲ್)

  1. 3 ಕಪ್ ತೆಳು ಅವಲಕ್ಕಿ
  2. ಒಣಮೆಣಸಿನ ಚೂರುಗಳು ಅಥವಾ ಹಸಿಮೆಣಸಿನಕಾಯಿ ಪೇಸ್ಟ್
  3. 1/2 ಟೀಸ್ಪೂನ್ ಓಮ
  4. 1/4 ಟೀಸ್ಪೂನ್ ಸೋಡಾ
  5. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅವಲಕ್ಕಿ ಸಂಡಿಗೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ತೆಗೆದುಕೊಳ್ಳಿ.
  2. ನೀರು ಹಾಕಿ ತೊಳೆದು ಕೂಡಲೇ ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ. 
  3. ನಂತರ ಅದಕ್ಕೆ ಉಪ್ಪು, ಒಣಮೆಣಸಿನಕಾಯಿ ಚೂರುಗಳು, ಓಮ, ಸೋಡಾ ಮತ್ತು ಉಪ್ಪು ಸೇರಿಸಿ. 
  4. ಅಥವಾ ನಿಮ್ಮಿಷ್ಟದ ಯಾವುದೇ ಮಸಾಲೆ (ಇಂಗು, ಜೀರಿಗೆ, ಎಳ್ಳು ಇತ್ಯಾದಿ) ಸೇರಿಸಬಹುದು. 
  5. ಚೆನ್ನಾಗಿ ಕೈಯಲ್ಲಿ ಹಿಸುಕಿ ಕಲಸಿ. 
  6.  ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ಅಥವಾ ಬಟ್ಟೆಯಲ್ಲಿ ಸಂಡಿಗೆ ಹಾಕಲು ತಯಾರು ಮಾಡಿ. 
  7. ಚಕ್ಕುಲಿ ಅಚ್ಚಿನಲ್ಲಿ ಕಲಸಿದ ಹಿಟ್ಟನ್ನು ತುಂಬಿಸಿ, ರಿಬ್ಬನ್ ನಂತೆ ಸಂಡಿಗೆಯನ್ನು ಒತ್ತಿ. ಬಿಸಿಲಿನಲ್ಲಿ ಒಣಗಲು ಇಡಿ. 
  8. ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ. 
  9. ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. 
  10. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.

ಭಾನುವಾರ, ಮಾರ್ಚ್ 12, 2023

Hurigadale masale vade recipe in Kannada | ಹುರಿಗಡಲೆ ಮಸಾಲೆ ವಡೆ ಮಾಡುವ ವಿಧಾನ

 

Hurigadale masale vade recipe in Kannada

Hurigadale masale vade (ambode) recipe in Kannada | ಹುರಿಗಡಲೆ ಮಸಾಲೆ ವಡೆ (ಆಂಬೊಡೆ) ಮಾಡುವ ವಿಧಾನ 

Hurigadale masale vade video

ಹುರಿಗಡಲೆ ಮಸಾಲೆವಡೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)

  1. 1 ಕಪ್ ಹುರಿಗಡಲೆ
  2. 1 ಒಣಮೆಣಸಿನಕಾಯಿ 
  3. 1/2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
  5. 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
  6. 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  7. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  9. 2 ಟೇಬಲ್ ಚಮಚ ಸಬ್ಬಸಿಗೆ ಸೊಪ್ಪು
  10. ನಿಮ್ಮ ರುಚಿ ಪ್ರಕಾರ ಉಪ್ಪು

ಹುರಿಗಡಲೆ ಮಸಾಲೆ ವಡೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಹೆಚ್ಚಿದ ಹಸಿರುಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಶುಂಠಿ ತೆಗೆದುಕೊಳ್ಳಿ.
  2. ನಂತರ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  3. ಆಮೇಲೆ ಕತ್ತರಿಸಿದ ಈರುಳ್ಳಿ ಸೇರಿಸಿ. 
  4. ಕತ್ತರಿಸಿದ ಸಬ್ಬಸ್ಸಿಗೆ ಸೊಪ್ಪನ್ನು ಸೇರಿಸಿ. 
  5. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ ಕಲಸಿ. 
  6. ನಂತರ ಒಂದು ಮಿಕ್ಸಿಜಾರಿನಲ್ಲಿ ಹುರಿಗಡಲೆ, ಒಣಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜ ತೆಗೆದುಕೊಂಡು ಪುಡಿಮಾಡಿ. ಪುಡಿ ಸ್ವಲ್ಪ ತರಿತರಿಯಾಗಿರಲಿ. 
  7. ಅದನ್ನು ಕಲಸಿಟ್ಟ ಬೇರೆ ಪದಾರ್ಥಗಳೊಂದಿಗೆ ಸೇರಿಸಿ ಕಲಸಿ. 
  8. ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅಂಗೈನಿಂದ ಒತ್ತಿ ವಡೆಗಳನ್ನು ಮಾಡಿ, ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  9. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ. ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಸೋಮವಾರ, ಡಿಸೆಂಬರ್ 12, 2022

Eerulli bonda recipe in kannada | ಈರುಳ್ಳಿ ಬೋಂಡಾ ಮಾಡುವ ವಿಧಾನ

 

Eerulli bonda recipe in kannada

Eerulli bonda recipe in kannada | ಈರುಳ್ಳಿ ಬೋಂಡಾ ಮಾಡುವ ವಿಧಾನ

ಈರುಳ್ಳಿ ಬೋಂಡಾ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಮಧ್ಯಮ ಗಾತ್ರದ ಈರುಳ್ಳಿ
  2. 1 ಕಪ್ ಕಡ್ಲೆ ಹಿಟ್ಟು
  3. 1/4 ಕಪ್ ಅಕ್ಕಿ ಹಿಟ್ಟು
  4. 1 - 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ
  5. 2 ಟೇಬಲ್ ಚಮಚ ಹೆಚ್ಚಿದ ಕರಿಬೇವು
  6. 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 1 ಟೀಸ್ಪೂನ್ ಶುಂಠಿ
  8. 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
  9. 1/2 ಟೀಸ್ಪೂನ್ ಜೀರಿಗೆ
  10. 1/2 ಟೀಸ್ಪೂನ್ ಬಡೆಸೊಂಪು
  11. 1 ಟೀಸ್ಪೂನ್ ಅಚ್ಚ ಖಾರದ ಪುಡಿ
  12. 1/4 ಟೀಸ್ಪೂನ್ ಅರಿಶಿನ
  13. ಚಿಟಿಕೆ ಇಂಗು
  14. ಚಿಟಿಕೆ ಸೋಡಾ
  15. ಉಪ್ಪು ರುಚಿಗೆ ತಕ್ಕಷ್ಟು
  16. 2 ಟೇಬಲ್ ಚಮಚ ಬಿಸಿ ಎಣ್ಣೆ
  17. ಎಣ್ಣೆ ಖಾಯಿಸಲು ಅಥವಾ ಕರಿಯಲು

ಈರುಳ್ಳಿ ಬೋಂಡಾ ಮಾಡುವ ವಿಧಾನ:

  1. ಈರುಳ್ಳಿ ಉದ್ದನಾಗಿ ತೆಳುವಾಗಿ ಕತ್ತರಿಸಿಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಹಸಿರು ಮೆಣಸಿನಕಾಯಿ , ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  3. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಈರುಳ್ಳಿ ನೀರು ಬಿಡುತ್ತದೆ. 
  4. ಇನ್ನೊಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಓಮ, ಜೀರಿಗೆ, ಸೋಂಪು, ಮೆಣಸಿನ ಪುಡಿ, ಸೋಡಾ, ಅರಿಶಿನ ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ.
  5. 2 ಟೇಬಲ್ ಚಮಚ ಬಿಸಿ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.
  6. ಈ ಹಿಟ್ಟನ್ನು ಈರುಳ್ಳಿ ಇರುವ ಪಾತ್ರೆಗೆ ಹಾಕಿ. 
  7. ಬೇಕಾದಲ್ಲಿ ಸ್ವಲ್ಪ ನೀರು ಸಿಂಪಡಿಸಿ ಚೆನ್ನಾಗಿ ಕಲಸಿ. 
  8. ಕೈಗೆ ಅಂಟುವಂತ ಮೆತ್ತಗಿನ ಹಿಟ್ಟು ತಯಾರಿಸಿಕೊಳ್ಳಿ. 
  9. ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ. 
  10. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಉಂಡೆಗಳನ್ನ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  11. ಗುಳ್ಳೆಗಳು ಕಡಿಮೆ ಆಗಿ, ಹೊಂಬಣ್ಣಕ್ಕೆ ಬಂದ ಕೂಡಲೇ ತೆಗೆಯಿರಿ. 

ಮಂಗಳವಾರ, ನವೆಂಬರ್ 29, 2022

Shenga hurigaalu recipe in Kannada | ಶೇಂಗಾ ಹುರಿಗಾಳು ಮಾಡುವ ವಿಧಾನ

 

Shenga hurigaalu recipe in Kannada

Shenga hurigaalu recipe in Kannada | ಶೇಂಗಾ ಹುರಿಗಾಳು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ 
  2. 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  3. 1/4 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ 1 ಚಮಚ ನಿಂಬೆ ರಸ (ನಿಮ್ಮ ರುಚಿಗೆ ತಕ್ಕಂತೆ) 
  4.  1/4 ಟೀಸ್ಪೂನ್ ಅರಶಿನ ಪುಡಿ
  5. ದೊಡ್ಡ ಚಿಟಿಕೆ ಇಂಗು
  6. ಉಪ್ಪು ರುಚಿಗೆ ತಕ್ಕಷ್ಟು

ಶೇಂಗಾ ಹುರಿಗಾಳು ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕೈ ಬಿಡದೇ ಹುರಿಯಿರಿ. 
  2. ಹುರಿದ ಕಡಲೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ. 
  3. ನಂತರ ಒಂದು ಸಣ್ಣ ಬಟ್ಟಲಿನಲ್ಲಿ ಕೆಂಪು ಮೆಣಸಿನಕಾಯಿ ಪುಡಿ, ಮಾವಿನಕಾಯಿ ಪುಡಿ (ಅಥವಾ ನಿಂಬೆ ರಸ), ಅರಿಶಿನ, ಇಂಗು ಮತ್ತು ಉಪ್ಪುತೆಗೆದುಕೊಳ್ಳಿ.
  4. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಸಿದ್ಧ ಪಡಿಸಿಕೊಳ್ಳಿ. 
  5. ಹುರಿದ ಶೇಂಗಾ ಸ್ವಲ್ಪ ಬಿಸಿ ಕಡಿಮೆ ಆದಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. 
  6. ಪುನಃ ಸ್ಟವ್ ಮೇಲಿಟ್ಟು ಶೇಂಗಾ ಒಣಗುವವರೆಗೆ ಹುರಿಯಿರಿ. 
  7. ಸ್ಟವ್ ಆಫ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಗುರುವಾರ, ಅಕ್ಟೋಬರ್ 20, 2022

Kara boondi recipe in Kannada | ಖಾರ ಬೂಂದಿ ಮಾಡುವ ವಿಧಾನ

 

Kara boondi recipe in Kannada

Kara boondi recipe in Kannada | ಖಾರ ಬೂಂದಿ ಮಾಡುವ ವಿಧಾನ

ಖಾರ ಬೂಂದಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡ್ಲೆಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. ದೊಡ್ಡ ಚಿಟಿಕೆ ಇಂಗು
  4. ದೊಡ್ಡ ಚಿಟಿಕೆಅರಿಶಿನ
  5. 1 ಟೀಸ್ಪೂನ್ ಉಪ್ಪು 
  6. 1 ಟೇಬಲ್ ಚಮಚ ಬಿಸಿ ಎಣ್ಣೆ
  7. ಎಣ್ಣೆ ಖಾರ ಸೇವ್ ಕಾಯಿಸಲು

ಮಿಕ್ಸ್ಚರ್ ಮಾಡಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ಶೇಂಗಾ
  2. 1/2 ಕಪ್ ಹುರಿಗಡಲೆ 
  3. ಸ್ವಲ್ಪ ಗೋಡಂಬಿ
  4. ಸ್ವಲ್ಪ ಕರಿಬೇವು
  5. ಅಚ್ಚ ಖಾರದ ಪುಡಿ ನಿಮ್ಮ ರುಚಿಗೆ ತಕ್ಕಂತೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಂತೆ

ಖಾರ ಬೂಂದಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಅರಿಶಿನ ಮತ್ತು ಉಪ್ಪನ್ನು ಹಾಕಿ ಕಲಸಿ. 
  2. 1 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ. 
  3. ಸ್ವಲ್ಪ ಸ್ವಲ್ಪ ನೀರು ಹಾಕಿ ತೆಳುವಾದ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ.
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 
  5. ಕಣ್ಣು ಸಟ್ಟುಗ ಬಳಸಿ ಬೂಂದಿ ಮಾಡಿ. 
  6. ಮಧ್ಯಮ ಉರಿಯಲ್ಲಿ ಗುಳ್ಳೆಗಳು ನಿಲ್ಲುವವರೆಗೆ ಕಾಯಿಸಿ ತೆಗೆಯಿರಿ. 
  7.  ಶೇಂಗಾ ಹುರಿದು ಹಾಕಿ.
  8. ಹುರಿಗಡಲೆ ಹುರಿದು ಹಾಕಿ. 
  9. ಗೋಡಂಬಿ ಮತ್ತು ಕರಿಬೇವು ಹುರಿದು ಹಾಕಿ. 
  10. ಬೇಕಾದಲ್ಲಿ ಉಪ್ಪು ಮತ್ತು ಅಚ್ಚಖಾರದ ಪುಡಿ ಹಾಕಿ ಕಲಸಿ. 

ಗುರುವಾರ, ಸೆಪ್ಟೆಂಬರ್ 15, 2022

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 4 - 5 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕರಿಬೇವಿನ ಸೊಪ್ಪು
  5. 4 - 5 ಒಣ ಮೆಣಸಿನಕಾಯಿ
  6. 1 - 2 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. 
  2. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  3. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  4. ತಿನ್ನುವ ಮೊದಲು, ಮಂಡಕ್ಕಿ ಇರುವ ಪಾತ್ರೆಗೆ ತೆಂಗಿನ ಎಣ್ಣೆ ಅಥವಾ ಕರಗಿಸಿದ ತುಪ್ಪ ಸೇರಿಸಿ.
  5. ಪುಡಿ ಮಾಡಿದ ಮಸಾಲೆ ಸೇರಿಸಿ. 
  6. ಚೆನ್ನಾಗಿ ಕೈಯಿಂದ ಕಲಸಿ. 
  7. ತಕ್ಷಣವೇ ಬಡಿಸಿ.

ಬುಧವಾರ, ಆಗಸ್ಟ್ 31, 2022

Kadle bele usli recipe in Kannada | ಕಡಲೆಬೇಳೆ ಉಸ್ಲಿ ಮಾಡುವ ವಿಧಾನ

 

Kadle bele usli recipe in Kannada

Kadle bele usli recipe in Kannada | ಕಡಲೆಬೇಳೆ ಉಸ್ಲಿ ಮಾಡುವ ವಿಧಾನ

ಕಡಲೆಬೇಳೆ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡಲೆಬೇಳೆ
  2. 1 ಟೇಬಲ್ ಚಮಚ ಅಡುಗೆ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ 
  4. 1/2 ಟೀಸ್ಪೂನ್ ಉದ್ದಿನಬೇಳೆ
  5. ಒಂದು ಚಿಟಿಕೆ ಅರಿಶಿನ ಪುಡಿ
  6. ಒಂದು ಚಿಟಿಕೆ ಇಂಗು
  7. 4 - 5 ಕರಿಬೇವಿನ ಎಲೆ
  8. ಒಂದು ಸಣ್ಣ ಚೂರು ಶುಂಠಿ
  9. 1 - 2 ಹಸಿರು ಮೆಣಸಿನಕಾಯಿ
  10. 2 ಟೇಬಲ್ ಚಮಚ ತೆಂಗಿನ ತುರಿ 
  11.  2 ಟೇಬಲ್ ಚಮಚ ಕೊತಂಬರಿ ಸೊಪ್ಪು 
  12. 1/2 - 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  13. ಉಪ್ಪು ರುಚಿಗೆ ತಕ್ಕಷ್ಟು.

ಕಡಲೆಬೇಳೆ ಉಸ್ಲಿ ಮಾಡುವ ವಿಧಾನ:

  1. ಕಡಲೆಬೇಳೆಯನ್ನು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 
  2. ಅಗತ್ಯವಿದ್ದಷ್ಟು ನೀರು ಹಾಕಿ (ಒಂದೂವರೆ ಪಟ್ಟು), ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ ಆದರೆ ಮುದ್ದೆಯಾಗುವುದು ಬೇಡ. 
  3. ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ. ನಾನು ಈ ನೀರಿನಿಂದ ಸಾರು ಮಾಡುತ್ತೇನೆ. 
  4. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ. 
  5. ಸಾಸಿವೆ ಸಿಡಿದ ಮೇಲೆ ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ. 
  6. ಅದಕ್ಕೆ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ. 
  7. ಅದಕ್ಕೆ ಬೇಯಿಸಿದ ಕಡಲೆಬೇಳೆ ಮತ್ತು ಉಪ್ಪನ್ನು ಹಾಕಿ ಮಗುಚಿ.
  8. ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  9. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜೂನ್ 10, 2022

Bhadang churumuri recipe in Kannada | ಭಡಂಗ್ ಮಂಡಕ್ಕಿ ಮಾಡುವ ವಿಧಾನ

 

Bhadang churumuri recipe in Kannada

Bhadang churumuri recipe in Kannada | ಭಡಂಗ್ ಮಂಡಕ್ಕಿ ಮಾಡುವ ವಿಧಾನ

ಭಡಂಗ್ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಕಪ್ ಮಂಡಕ್ಕಿ
  2. 2 - 3 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  3. 7 - 8 ಬೆಳ್ಳುಳ್ಳಿ, ಸೀಳಿದ್ದು
  4. 7 - 8 ಕರಿಬೇವಿನ ಎಲೆ 
  5. 1 ಟೀಸ್ಪೂನ್ ಬ್ಯಾಡಗಿ ಮೆಣಸಿನ ಪುಡಿ
  6. ದೊಡ್ಡ ಚಿಟಿಕೆ ಇಂಗು
  7. 2 - 3 ಟೇಬಲ್ ಚಮಚ ಎಣ್ಣೆ
  8. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಬಡಿಸಲು ಬೇಕಾಗುವ ಪದಾರ್ಥಗಳು:

  1. ಒಂದು ಈರುಳ್ಳಿ, ಸಣ್ಣಗೆ ಹೆಚ್ಚಿದ್ದು
  2. ಒಂದು ಟೊಮೇಟೊ ಸಣ್ಣಗೆ ಹೆಚ್ಚಿದ್ದು 
  3. ಸ್ವಲ್ಪ ಕೊತ್ತಂಬರಿ ಸೊಪ್ಪು

ಭಡಂಗ್ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ. 
  2. ಅದಕ್ಕೆ ಸೀಳಿದ ಬೆಳ್ಳುಳ್ಳಿ ಮತ್ತು ಕರಿಬೇವನ್ನು ಹಾಕಿ ಹುರಿಯಿರಿ. 
  3. ಉರಿ ಸಣ್ಣ ಮಾಡಿ ಅಥವಾ ಸ್ಟವ್ ಆಫ್ ಮಾಡಿರಿ. 
  4. ನಂತರ ಕೆಂಪು ಮೆಣಸಿನ ಪುಡಿ ಮತ್ತು ಇಂಗು ಹಾಕಿ ಮಗುಚಿ.  
  5. ನಂತರ ಮಂಡಕ್ಕಿ ಹಾಕಿ ಚೆನ್ನಾಗಿ ಮಗುಚಿ. 
  6. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಸ್ಟವ್ ಹಚ್ಚಿ, ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಹುರಿಯಿರಿ. 
  7. ಮೇಲಿನಿಂದ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ. ಹಾಗೆಯೂ ತಿನ್ನಬಹುದು. 

ಗುರುವಾರ, ಫೆಬ್ರವರಿ 24, 2022

Batani chat recipe in Kannada | ಬಟಾಣಿ ಚಾಟ್ ಮಾಡುವ ವಿಧಾನ

 

Batani chat recipe in Kannada

Batani chat recipe in Kannada | ಬಟಾಣಿ ಚಾಟ್ ಮಾಡುವ ವಿಧಾನ

ಬಟಾಣಿ ಚಾಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ 
  2. 2 ಸಣ್ಣದಾಗಿ ಹೆಚ್ಚಿದ ಟೊಮೆಟೊ 
  3. 4 ಟೇಬಲ್ ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 
  4. 4 ಟೇಬಲ್ ಚಮಚ ಸೇವ್
  5. 2 ಟೇಬಲ್ ಚಮಚ ಹುರಿದ ಶೇಂಗಾ

ಗ್ರೇವಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಒಣ ಬಟಾಣಿ 
  2. 1/4 ಕಪ್ ಕಡ್ಲೆಕಾಳು
  3. 1 ಆಲೂಗಡ್ಡೆ 
  4. 1/2 ಟೀಸ್ಪೂನ್ ಬಡೆಸೊಂಪು
  5. 1 - 2 ಹಸಿರು ಮೆಣಸು 
  6. 4 - 5 ಎಸಳು ಬೆಳ್ಳುಳ್ಳಿ 
  7. 1 cm ಉದ್ದದ ಶುಂಠಿ 
  8. 1 ಕತ್ತರಿಸಿದ  ಈರುಳ್ಳಿ
  9. 1 ಕತ್ತರಿಸಿದ ಟೊಮೆಟೊ
  10. 2 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  11. 2 ಟೇಬಲ್ ಚಮಚ ಕತ್ತರಿಸಿದ ಪುದಿನ 
  12. 1/2 ಟೀಸ್ಪೂನ್ ಗರಂ ಮಸಾಲಾ ಪುಡಿ 
  13. 1/2 ಟೀಸ್ಪೂನ್ ಚಾಟ್ ಮಸಾಲಾ 
  14. 1/2 ಟೀಸ್ಪೂನ್ ಜೀರಿಗೆ ಪುಡಿ
  15. 1/4 ಟೀಸ್ಪೂನ್ ಮಾವಿನಕಾಯಿ ಪುಡಿ (ಅಥವಾ ಹುಣಿಸೆ ರಸ)
  16. ನಿಮ್ಮ ರುಚಿಗೆ ತಕ್ಕಂತೆ ಉಪ್ಪು
  17. 1/4 ಟೀಸ್ಪೂನ್ ಸೈನ್ದವ ಲವಣ (ಬೇಕಾದಲ್ಲಿ)
  18. 1 ಟೀಸ್ಪೂನ್ ಎಣ್ಣೆ

ಬಟಾಣಿ ಚಾಟ್ ಮಾಡುವ ವಿಧಾನ:

  1. ಬಟಾಣಿ ಮತ್ತು ಕಡ್ಲೆಕಾಳನ್ನು 5  ಘಂಟೆ ಅಥವಾ ರಾತ್ರೆಯಿಡಿ ನೆನೆಸಿಡಿ. 
  2. ನೆನೆಸಿದ ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  3. ಆಲೂಗಡ್ಡೆಯನ್ನು ಪುಡಿಮಾಡಿಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಬಡೆಸೋಂಪನ್ನು ಹುರಿಯಿರಿ. 
  5. ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ. 
  6. ನಂತರ ಈರುಳ್ಳಿ ಸೇರಿಸಿ ಹುರಿಯಿರಿ. 
  7. ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ
  8. ಮೆತ್ತಗಾದ ಮೇಲೆ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಹಾಕಿ ಹುರಿಯಿರಿ.
  9. ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  10. ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆ ಇರುವ ಕುಕ್ಕರ್ ಗೆ ಅರೆದ ಮಿಶ್ರಣವನ್ನು ಹಾಕಿ. 
  11. ಮಸಾಲೆ ಪುಡಿಗಳನ್ನು ಸೇರಿಸಿ (ಗರಂ ಮಸಾಲಾ ಪುಡಿ, ಚಾಟ್ ಮಸಾಲಾ,  ಜೀರಿಗೆ ಪುಡಿ ಮತ್ತು ಮಾವಿನಕಾಯಿ ಪುಡಿ). 
  12. ಉಪ್ಪನ್ನೂ ಸೇರಿಸಿ. 
  13. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಗ್ರೇವಿ ತಯಾರಾಯಿತು. 
  14. ಸರ್ವಿಂಗ್ ಪ್ಲೇಟ್ ನಲ್ಲಿ 4 ಸೌಟಿನಷ್ಟು ತಯಾರಿಸಿದ ಗ್ರೇವಿಯನ್ನು ಹಾಕಿ. 
  15. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ. ಸವಿದು ಆನಂದಿಸಿ. 

ಮಂಗಳವಾರ, ಜನವರಿ 25, 2022

Thuppada avalakki recipe in Kannada | ತುಪ್ಪದ ಅವಲಕ್ಕಿ ಮಾಡುವ ವಿಧಾನ

 

Thuppada avalakki recipe in Kannada

Thuppada avalakki recipe in Kannada | ತುಪ್ಪದ ಅವಲಕ್ಕಿ ಮಾಡುವ ವಿಧಾನ

ತುಪ್ಪದ ಅವಲಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 3 ಕಪ್ ತೆಳು ಅವಲಕ್ಕಿ
  2. 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಅಥವಾ ಶೇಂಗಾ
  3. 2 ಟೇಬಲ್ ಸ್ಪೂನ್ ಗೋಡಂಬಿ
  4. 1/2 ಕಪ್ ತೆಂಗಿನತುರಿ
  5. ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. 1 - 2 ಟೀಸ್ಪೂನ್ ನಿಂಬೆಹಣ್ಣಿನ ರಸ
  7. 1 ಟೀಸ್ಪೂನ್ ತುಪ್ಪ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು

  1. 2 ಟೀಸ್ಪೂನ್ ತುಪ್ಪ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 ಈರುಳ್ಳಿ
  5. 2 - 3 ಹಸಿರು ಮೆಣಸಿನಕಾಯಿ
  6. 4 - 5 ಕರಿ ಬೇವಿನ ಎಲೆ
  7. 3/4 ಟೀಸ್ಪೂನ್ ಸಕ್ಕರೆ ಅಥವಾ ನಿಮ್ಮ ರುಚಿಗೆ ತಕ್ಕಷ್ಟು
  8. 3/4 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು

ತುಪ್ಪದ ಅವಲಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಂದು ಟೀಸ್ಪೂನ್ ತುಪ್ಪ ಬಿಸಿ ಮಾಡಿ. 
  2. ಶೇಂಗಾವನ್ನು ಹುರಿಯಿರಿ.
  3. ನಂತರ ಗೋಡಂಬಿಯನ್ನು ಹಾಕಿ ಹುರಿಯಿರಿ. ಎರಡನ್ನು ತೆಗೆದು ಪಕ್ಕಕ್ಕಿಡಿ. 
  4. ಪುನಃ  ಎರಡು ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ. 
  5. ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಉಪ್ಪು ಮತ್ತು ಸಕ್ಕರೆ ಸೇರಿಸಿ ಮಗುಚಿ ಸ್ಟವ್ ಆಫ್ ಮಾಡಿ. 
  7. ಅದಕ್ಕೆ ಅವಲಕ್ಕಿ ಸೇರಿಸಿ.
  8.  ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಮತ್ತು ನಿಂಬೆರಸ ಸೇರಿಸಿ. 
  9. ಚೆನ್ನಾಗಿ ಹಿಸುಕಿ ಕಲಸಿ. 
  10. ಆಮೇಲೆ ಅದಕ್ಕೆ ಹುರಿದಿಟ್ಟ ಶೇಂಗಾ ಅಥವಾ ಗೋಡಂಬಿ ಹಾಕಿ ಕಲಸಿ. 
  11. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಟೀ ಯೊಂದಿಗೆ ಸವಿದು ಆನಂದಿಸಿ.


ಮಂಗಳವಾರ, ಜುಲೈ 13, 2021

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 - 3 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕೊತ್ತಂಬರಿ ಸೊಪ್ಪು
  5. 2 - 3 ಹಸಿರು ಮೆಣಸಿನಕಾಯಿ
  6. 1 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  2. ನಂತರ ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  3. ಅದನ್ನು ಮಂಡಕ್ಕಿ ಇರುವ ಪಾತ್ರೆಗೆ ಹಾಕಿ. 
  4. ತೆಂಗಿನ ಎಣ್ಣೆ ಸೇರಿಸಿ.
  5. ಚೆನ್ನಾಗಿ ಕಲಸಿ. 
  6. ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.

ಶನಿವಾರ, ಮೇ 1, 2021

Avalakki upkari recipe in Kannada | ಅವಲಕ್ಕಿ ಉಪ್ಕರಿ ಮಾಡುವ ವಿಧಾನ

 

Avalakki upkari recipe in Kannada

Avalakki upkari recipe in Kannada | ಅವಲಕ್ಕಿ ಉಪ್ಕರಿ ಮಾಡುವ ವಿಧಾನ 

ಅವಲಕ್ಕಿ ಉಪ್ಕರಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 3 ಕಪ್ ತೆಳು ಅವಲಕ್ಕಿ
  2. 1/2 ಕಪ್ ತೆಂಗಿನ ತುರಿ 
  3. 2 - 3 ಟೇಬಲ್ ಸ್ಪೂನ್ ಪುಡಿ ಮಾಡಿದ ಬೆಲ್ಲ
  4. ಉಪ್ಪು ರುಚಿಗೆ ತಕ್ಕಷ್ಟು 
  5. 2 ಟೀಸ್ಪೂನ್ ರಸಂ ಪೌಡರ್

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ 
  2. 1/2 ಟೀಸ್ಪೂನ್ ಉದ್ದಿನಬೇಳೆ
  3. 1 ಒಣ ಮೆಣಸಿನಕಾಯಿ 
  4. 4 - 5 ಕರಿಬೇವಿನ ಎಲೆ 
  5. 2 ಟೀಸ್ಪೂನ್ ಅಡುಗೆ ಎಣ್ಣೆ 

ರಸಂ ಪೌಡರ್ ಇಲ್ಲದಿದ್ದಲ್ಲಿ ಬೇಕಾಗುವ ಪದಾರ್ಥಗಳು:

  1. 3 ಒಣ ಮೆಣಸಿನಕಾಯಿ 
  2. 2 ಟೀಸ್ಪೂನ್ ಕೊತ್ತಂಬರಿ ಬೀಜ
  3. 1 ಟೀಸ್ಪೂನ್ ಜೀರಿಗೆ

ಅವಲಕ್ಕಿ ಉಪ್ಕರಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ತೆಂಗಿನ ತುರಿ, ಬೆಲ್ಲ, ರಸಂ ಪೌಡರ್ ಮತ್ತು ಉಪ್ಪು ಹಾಕಿ. 
  2. ಚೆನ್ನಾಗಿ ಹಿಸುಕಿ ಕಲಸಿ. 
  3. ರಸಂ ಪೌಡರ್ ಅಥವಾ ಸಾರಿನ ಪುಡಿ ಇಲ್ಲದಿದ್ದಲ್ಲಿ ಮೇಲೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದು ಪುಡಿಮಾಡಿಕೊಳ್ಳಿ. ನಂತ್ರ ಕಲಸಿ. 
  4. ಅದಕ್ಕೆ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಹಿಸುಕಿ ಕಲಸಿ. 
  5. ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣಮೆಣಸು,ಉದ್ದಿನಬೇಳೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  6. ಒಗ್ಗರಣೆ ಸೇರಿಸಿ ಚೆನ್ನಾಗಿ ಕಲಸಿ. 
  7. ಬಾಳೆಹಣ್ಣು ಅಥವಾ ಕಡಲೆ ಉಸ್ಲಿ ಅಥವಾ ಉಪ್ಪಿಟ್ಟು ಅಥವಾ ಮೊಸರಿನೊಂದಿಗೆ ಅಥವಾ ಹಾಗೇ ಸವಿದು ಆನಂದಿಸಿ. 

ಶುಕ್ರವಾರ, ಏಪ್ರಿಲ್ 16, 2021

Godhi hittina snacks recipe in Kannada | ಗೋಧಿ ಹಿಟ್ಟಿನ ಸ್ನಾಕ್ಸ್ ಮಾಡುವ ವಿಧಾನ

 

Godhi hittina snacks recipe in Kannada

Godhi hittina snacks recipe in Kannada | ಗೋಧಿ ಹಿಟ್ಟಿನ ಸ್ನಾಕ್ಸ್ ಮಾಡುವ ವಿಧಾನ 

ಗೋಧಿ ಹಿಟ್ಟಿನ ಸ್ನಾಕ್ಸ್ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿ ಹಿಟ್ಟು
  2. 1/2 ಟೀಸ್ಪೂನ್ ಗರಂ ಮಸಾಲಾ
  3. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  4. 1/2 ಟೀಸ್ಪೂನ್ ಜೀರಿಗೆ ಪುಡಿ
  5. 1/4 ಟೀಸ್ಪೂನ ಓಮ
  6. 2 - 3 ಟೇಬಲ್ ಚಮಚ ಎಣ್ಣೆ
  7. ಅಗತ್ಯವಿದ್ದಷ್ಟು ನೀರು
  8. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
  9. ಎಣ್ಣೆ ಕಾಯಿಸಲು

ಗೋಧಿ ಹಿಟ್ಟಿನ ಸ್ನಾಕ್ಸ್ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲಾ ಪುಡಿ, ಜೀರಿಗೆ ಪುಡಿ ಮತ್ತು ಓಮ ಹಾಕಿ. 
  3. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಮ್ಮೆ ಕಲಸಿ. 
  4. ಎರಡು ಟೇಬಲ್ ಚಮಚ ಬಿಸಿಬಿಸಿ ಎಣ್ಣೆ ಸುರಿಯಿರಿ. ಜಾಸ್ತಿ ಗರಿಗರಿ ಬೇಕಾದಲ್ಲಿ ಇನ್ನೊಂದು ಟೇಬಲ್ ಚಮಚ ಹಾಕಬಹುದು. 
  5. ಬೇಕಾದಲ್ಲಿ ಅರ್ಧ ಚಮಚ ಸಕ್ಕರೆ ಪುಡಿ ಸೇರಿಸಿ. 
  6. ಒಮ್ಮೆ ಚಮಚದಲ್ಲಿ ಕಲಸಿ, ಆಮೇಲೆ ಕೈಯಲ್ಲಿ ಚೆನ್ನಾಗಿ ತಿಕ್ಕಿ ಕಲಸಿ. 
  7. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಗಟ್ಟಿಯಾದ ಹಿಟ್ಟನ್ನು ನಾದಿಕೊಳ್ಳಿ. 
  8. ಮೇಲಿನಿಂದ ಒಂದು ಚಮಚ ಎಣ್ಣೆ ಸೇರಿಸಿ, ಪುನಃ ಕಲಸಿ. 
  9. ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ತೆಳುವಾಗಿ ಲಟ್ಟಿಸಿ.
  10. ಒಂದು ಲೋಟ ಅಥವಾ ಬೌಲ್ ತೆಗೆದುಕೊಂಡು ವೃತ್ತಾಕಾರ ಮಾಡಿಕೊಳ್ಳಿ. ಬೇರೆ ಆಕಾರದಲ್ಲೂ ಕತ್ತರಿಸಬಹುದು. 
  11. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಣ್ಣ ಮಧ್ಯಮ ಉರಿಯಲ್ಲಿ ಕಾಯಿಸಿ. 
  12. ಗುಳ್ಳೆಗಳು ನಿಂತ ಮೇಲೆ ತೆಗೆದು ಟೀ ಜೊತೆ ಸವಿದು ಆನಂದಿಸಿ. 

ಬುಧವಾರ, ಏಪ್ರಿಲ್ 7, 2021

Aloo sandwich recipe in Kannada | ಆಲೂಗಡ್ಡೆ ಬ್ರೆಡ್ ಟೋಸ್ಟ್ ಮಾಡುವ ವಿಧಾನ

 

Aloo sandwich recipe in Kannada
Aloo sandwich recipe in Kannada | ಆಲೂಗಡ್ಡೆ ಬ್ರೆಡ್ ಟೋಸ್ಟ್ ಮಾಡುವ ವಿಧಾನ 

ಆಲೂಗಡ್ಡೆ ಬ್ರೆಡ್ ಟೋಸ್ಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 8 ಬ್ರೆಡ್ 
  2. 2 ಮಾದ್ಯಮ ಗಾತ್ರದ ಆಲೂಗಡ್ಡೆ
  3. ಎರಡು ಟೇಬಲ್ ಚಮಚ ಬೆಣ್ಣೆ 
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1 ಹಸಿರುಮೆಣಸಿನಕಾಯಿ
  6. ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
  8. 1/2 ಟೀಸ್ಪೂನ್ ಗರಂ ಮಸಾಲಾ
  9. 1/4 ಟೀಸ್ಪೂನ್ ಕಾಳುಮೆಣಸಿನಪುಡಿ
  10. ಉಪ್ಪು ರುಚಿಗೆ ತಕ್ಕಷ್ಟು.
  11. ಸ್ವಲ್ಪ ನಿಂಬೆರಸ ಅಥವಾ ಮಾವಿನಕಾಯಿ ಪುಡಿ
  12. ಸ್ವಲ್ಪ ಟೊಮೇಟೊ ಸಾಸ್ (ಬೇಕಾದಲ್ಲಿ)

ಆಲೂಗಡ್ಡೆ ಬ್ರೆಡ್ ಟೋಸ್ಟ್ ಮಾಡುವ ವಿಧಾನ:

  1. ಆಲೂಗಡ್ಡೆ ಬೇಯಿಸಿ, ಸಿಪ್ಪೆ ತೆಗೆದಿಟ್ಟುಕೊಳ್ಳಿ.ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
  2. ಒಂದು ಪಾತ್ರೆಯಲ್ಲಿ ಬೇಯಿಸಿ, ಸಿಪ್ಪೆ ತೆಗೆದ ಆಲೂಗಡ್ಡೆ ತೆಗೆದುಕೊಳ್ಳಿ. ಚೆನ್ನಾಗಿ ಪುಡಿಮಾಡಿಕೊಳ್ಳಿ. 
  3. ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ. 
  4. ಆಮೇಲೆ ಅಚ್ಚಖಾರದ ಪುಡಿ, ಗರಂ ಮಸಾಲಾ, ಕಾಳುಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ. 
  5. ಸ್ವಲ್ಪ ನಿಂಬೆರಸ ಅಥವಾ ಮಾವಿನಕಾಯಿ ಪುಡಿ ಹಾಕಿ, ಚೆನ್ನಾಗಿ ಕಲಸಿ.
  6. ಬ್ರೆಡ್ ತೆಗೆದುಕೊಂಡು ಟೊಮೇಟೊ ಸಾಸ್ (ಬೇಕಾದಲ್ಲಿ) ಹಚ್ಚಿ. 
  7.  ಮೇಲಿನಿಂದ ಆಲೂಗಡ್ಡೆ ಮಿಶ್ರಣವನ್ನು ಹರಡಿ. 
  8. ಮೇಲಿನಿಂದ ಟೊಮೇಟೊ ಸಾಸ್ ಹಚ್ಚಿದ ಬ್ರೆಡ್ ಮುಚ್ಚಿ. 
  9. ತವಾ ಮೇಲೆ ಬೆಣ್ಣೆ ಬಿಸಿ ಮಾಡಿ, ಸ್ಯಾಂಡ್ವಿಚ್ ಅನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. 
  10. ಮೇಲಿನಿಂದ ಬೆಣ್ಣೆ ಹಚ್ಚಿ ಇನ್ನೊಂದು ಬದಿಯೂ ಕಾಯಿಸಿ. ಕತ್ತರಿಸಿ ಟೊಮೇಟೊ ಸಾಸ್ ನೊಂದಿಗೆ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...