ಶನಿವಾರ, ಮೇ 30, 2020

Shunti chutney recipe in Kannada | ಶುಂಠಿ ಚಟ್ನಿ ಮಾಡುವ ವಿಧಾನ

Shunti chutney recipe in Kannada

Shunti chutney recipe in Kannada | ಶುಂಠಿ ಚಟ್ನಿ ಮಾಡುವ ವಿಧಾನ


ಶುಂಠಿ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಶುಂಠಿ
  2. 5 - 8 ಒಣಮೆಣಸು
  3. 1 ಟೇಬಲ್ ಚಮಚ ಕಡ್ಲೆಬೇಳೆ 
  4. 1 ಟೇಬಲ್ ಚಮಚ ಉದ್ದಿನಬೇಳೆ
  5. ಸಣ್ಣ ನಿಂಬೆಗಾತ್ರದ ಹುಣಿಸೇಹಣ್ಣು
  6. 1/2 ಕಪ್ ಬೆಲ್ಲ
  7. ಸ್ವಲ್ಪ ಕರಿಬೇವು
  8. ದೊಡ್ಡ ಚಿಟಿಕೆ ಅರಿಶಿನ
  9. 1/4 ಟೀಸ್ಪೂನ್ ಇಂಗು
  10. 2 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಂತೆ)
  11. 2 ಟೇಬಲ್ ಚಮಚ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಟೇಬಲ್ ಚಮಚ ಎಣ್ಣೆ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಎಳ್ಳು

ಶುಂಠಿ ಚಟ್ನಿ ಮಾಡುವ ವಿಧಾನ:

  1. ಶುಂಠಿಯನ್ನು ಸಿಪ್ಪೆ ತೆಗೆದು, ತೊಳೆದು, ಕತ್ತರಿಸಿಟ್ಟುಕೊಳ್ಳಿ.  
  2. ಒಂದು ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ ಒಣಮೆಣಸಿನಕಾಯಿಯನ್ನುಹುರಿಯಿರಿ. 
  3. ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಸೇರಿಸಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  4. ಆಮೇಲೆ ಕತ್ತರಿಸಿದ ಶುಂಠಿ ಮತ್ತು ಆರಿಸಿ ಚೂರು ಮಾಡಿದ ಹುಣಿಸಹಣ್ಣು ಸೇರಿಸಿ ಸಣ್ಣ ಉರಿಯಲ್ಲಿ ಶುಂಠಿ ಮೆತ್ತಗಾಗುವವರೆಗೆ ಹುರಿಯಿರಿ. 
  5. ನಂತರ ಕರಿಬೇವು, ಅರಿಶಿನ ಮತ್ತು ಇಂಗು ಸೇರಿಸಿ ಹುರಿಯಿರಿ. 
  6. ಬೆಲ್ಲ ಸೇರಿಸಿ ಮಗುಚಿ. ಬೆಲ್ಲ ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಬಹುದು.  
  7. ಕೊನೆಯಲ್ಲಿ ಉಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ. ಸ್ವಲ್ಪ ಹೊತ್ತು ಮಗುಚಿ.  
  8. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ನೀರು ಸೇರಿಸಿಸದೆ ಅರೆಯಿರಿ. ನೀರು ಸೇರಿಸಿದರೆ ಹೆಚ್ಚು ದಿನ ಇಡಲಾಗುವುದಿಲ್ಲ.  
  9. ಕೊನೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಎಳ್ಳಿನ ಒಗ್ಗರಣೆ ಕೊಡಿ.  ಈ ಚಟ್ನಿಯನ್ನು ಸುಮಾರು ಎರಡು ತಿಂಗಳು ಇಡಬಹುದು. ಅನ್ನ, ದೋಸೆ ಮತ್ತು ಇಡ್ಲಿಯೊಂದಿಗೆ ಬಡಿಸಿ. 

ಮಂಗಳವಾರ, ಮೇ 26, 2020

Mavinakayi uppinakayi recipe in Kannada | ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ

Mavinakayi uppinakayi recipe in Kannada

Mavinakayi uppinakayi recipe in Kannada | ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ


ಮಾವಿನಕಾಯಿ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಮಾವಿನಕಾಯಿ (ಹುಳಿ ಕಡಿಮೆ ಇರುವಂಥದ್ದು)
  2. 3/4 - 1 ಕಪ್ ನೀರು
  3. ದೊಡ್ಡ ಚಿಟಿಕೆ ಅರಿಶಿನ (ಬೇಕಾದಲ್ಲಿ)
  4. 2 ಟೇಬಲ್ ಚಮಚ ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 10 -15 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಜೀರಿಗೆ
  4. 7 - 8 ಮೆಂತೆ
  5. 1/4 ಟೀಸ್ಪೂನ್ ಇಂಗು

ದಿಢೀರ್ ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು, ನೀರಾರಿಸಿ, ಕತ್ತರಿಸಿಟ್ಟುಕೊಳ್ಳಿ.  
  2. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  3. ನೀರು ಕುದಿಯಲು ಶುರುವಾದ ಕೂಡಲೇ, ಕತ್ತರಿಸಿದ ಮಾವಿನಕಾಯಿ ಹಾಕಿ ಸ್ಟವ್ ಆಫ್ ಮಾಡಿ.ಬಿಸಿ ಆರಲು ಬಿಡಿ. 
  4. ಆ ಸಮಯದಲ್ಲಿ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ಕೊನೆಯಲ್ಲಿ ಇಂಗು ಹಾಕಿ ಸ್ಟವ್ ಆಫ್ ಮಾಡಿ. 
  5. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  6. ಆ ಪುಡಿಯನ್ನು ಉಪ್ಪು ನೀರು ಮತ್ತು ಮಾವಿನಕಾಯಿ ಇರುವ ಬಾಣಲೆಗೆ ಹಾಕಿ, ಚೆನ್ನಾಗಿ ಮಗುಚಿ.
  7. ಬೇಕಾದಲ್ಲಿ ಅರಿಶಿನ ಪುಡಿ ಸೇರಿಸಿ, ಮಗುಚಿ. 
  8. ಬಿಸಿ ಆರಿದ ಮೇಲೆ ಉಪ್ಪಿನಕಾಯಿ ಸ್ವಲ್ಪ ಗಟ್ಟಿ ಆಗುವುದು. ಇದನ್ನು ಕೂಡಲೇ ಬಡಿಸಬಹುದು. ಒಂದು ದಿನದ ನಂತ್ರ ರುಚಿ ಹೆಚ್ಚುವುದು. ಹೊರಗೆ ಸುಮಾರು ಹದಿನೈದು ದಿವಸ ಮತ್ತು ಫ್ರಿಡ್ಜ್ ನಲ್ಲಿ ಎರಡು ತಿಂಗಳು ಇಡಬಹುದು. 

ಶುಕ್ರವಾರ, ಮೇ 8, 2020

Halkova recipe in Kannada | ಹಾಲ್ಕೊವಾ ಮಾಡುವ ವಿಧಾನ

Halkova recipe in Kannada
Halkova recipe in Kannada | ಹಾಲ್ಕೊವಾ ಮಾಡುವ ವಿಧಾನ

ಹಾಲ್ಕೊವಾ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಮೈದಾ
  2. 1/2 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. 1/4 ಕಪ್ ತುಪ್ಪ
  4. 1 - 2 ಏಲಕ್ಕಿ

ಹಾಲ್ಕೊವಾ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿನಲ್ಲಿ ಸಕ್ಕರೆ ಮತ್ತು ಏಲಕ್ಕಿ ತೆಗೆದುಕೊಂಡು ನುಣ್ಣಗೆ ಪುಡಿಮಾಡಿಕೊಳ್ಳಿ.
  2. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ.  
  3. ಕೂಡಲೇ ಮೈದಾ ಸೇರಿಸಿ ಮಧ್ಯಮ  ಉರಿಯಲ್ಲಿ ಚೆನ್ನಾಗಿ ಮಗುಚುತ್ತಾ 7 - 8 ನಿಮಿಷ ಹುರಿಯಿರಿ. ಹಸಿವಾಸನೆ ಹೋಗಿ ಹುರಿದ ಘಮ ಬರಬೇಕು. 
  4. ಸ್ಟವ್ ಆಫ್ ಮಾಡಿ. ಒಂದೆರಡು ನಿಮಿಷ ಬಿಟ್ಟು ಸಕ್ಕರೆ ಪುಡಿ ಸೇರಿಸಿ.
  5. ಚೆನ್ನಾಗಿ ಕಲಸಿ. ಒಂದು ಪ್ಲೇಟ್ ಅಥವಾ ಟ್ರೇ ಗೆ ಹಾಕಿ ತಣ್ಣಗಿರುವ ಜಾಗದಲ್ಲಿ ಒಂದೆರಡು ಘಂಟೆ ಬಿಡಿ. ಫ್ರಿಡ್ಜ್ ನಲ್ಲಿ ೧೫-೨೦ ನಿಮಿಷ ಇಟ್ಟರೆ ಸಾಕು.   
  6. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ಸವಿದು ಆನಂದಿಸಿ. 

ಬುಧವಾರ, ಮೇ 6, 2020

Mango happala recipe in Kannada | ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ

Mango happala recipe in Kannada

Mango happala recipe in Kannada | ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ

ಫ್ರೂಟಿ, ಮಾಜ ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 2 ಕಪ್ ಕತ್ತರಿಸಿದ ಮಾವಿನಹಣ್ಣು
  2. 2 ಟೇಬಲ್ ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. ಚಿಟಿಕೆ ಉಪ್ಪು
  4. 1 - 2 ಏಲಕ್ಕಿ
  5. ಅಗತ್ಯವಿದ್ದಷ್ಟು ನೀರು

ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ಮಾವಿನ ಹಣ್ಣು, ಸಕ್ಕರೆ, ಉಪ್ಪು ಮತ್ತು ಏಲಕ್ಕಿಯನ್ನು ತೆಗೆದುಕೊಳ್ಳಿ.
  2. ನುಣ್ಣಗೆ ಅರೆದು ಒಂದು ಬಾಣಲೆಗೆ ಹಾಕಿ. ಮಿಕ್ಸಿ ಜಾರು ತೊಳೆಯುವಷ್ಟು ಮಾತ್ರ ನೀರು ಸೇರಿಸಿ.  
  3. ಮಧ್ಯಮ  ಉರಿಯಲ್ಲಿ ಮಗುಚುತ್ತಾ 7 - 8 ನಿಮಿಷ, ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ.
  4. ಸ್ಟವ್ ಆಫ್ ಮಾಡಿ. ಒಂದು ಪ್ಲೇಟ್ ಗೆ ಸುರಿದು ಹರಡಿ.  
  5. ಬಿಸಿಲಿನಲ್ಲಿ ಒಣಗಲು ಇಡಿ. ಕಸ-ಧೂಳು ಸೇರದಿರಲು ಮೊದಲನೇ ದಿನ ಒಂದು ಬಟ್ಟೆ ಮುಚ್ಚುವುದು ಒಳ್ಳೆಯದು.  
  6. ಎರಡರಿಂದ ಮೂರು ದಿನ ಚೆನ್ನಾಗಿ ಒಣಗಿದ ಮೇಲೆ ಅಂಚು ಬಿಡಿಸಿ, ತೆಗೆಯಿರಿ.  
  7. ಬೇಕಾದ ಆಕಾರಕ್ಕೆ ಕತ್ತರಿಸಿ ಅಥವಾ ಸುರುಳಿ ಮಾಡಿ ಎತ್ತಿಡಿ.
  8. ಒಂದು ವರ್ಷದವರೆಗೂ ಹಾಳಾಗುವುದಿಲ್ಲ. ಬೇಕಾದರೆ ಫ್ರಿಡ್ಜ್ ನಲ್ಲಿಡಿ.  ಚಾಕಲೇಟ್ ನಂತೆ ಸವಿದು ಆನಂದಿಸಿ. 

ಮಂಗಳವಾರ, ಮೇ 5, 2020

Lemon juice powder recipe in Kannada | ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ

Lemon juice powder recipe in Kannada
Lemon juice powder recipe in Kannada | ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ

ನಿಂಬೆಹಣ್ಣು ಜ್ಯೂಸು ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 4 - 5 ನಿಂಬೆಹಣ್ಣು
  2. 1 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. ದೊಡ್ಡ ಚಿಟಿಕೆ ಉಪ್ಪು
  4. 1/2 ಚಮಚ ಸಣ್ಣಗೆ ಕತ್ತರಿಸಿದ ಶುಂಠಿ

ನಿಂಬೆಹಣ್ಣು ಜ್ಯೂಸು ಪುಡಿ ಮಾಡುವ ವಿಧಾನ:

  1. 4 - 5 ನಿಂಬೆಹಣ್ಣು ತೆಗೆದುಕೊಂಡು ಚೆನ್ನಾಗಿ ಒತ್ತಿ ತಿಕ್ಕಿ. ರಸ ತೆಗೆಯಲು ಸುಲಭವಾಗುವುದು. 
  2. ನಿಂಬೆಹಣ್ಣಿನ ರಸ ತೆಗೆಯಿರಿ.
  3. ರಸವನ್ನು ಅಳತೆ ಮಾಡಿ ಒಂದು ಅಗಲವಾದ ತಟ್ಟೆಗೆ ಹಾಕಿ. 
  4.  ರಸದ ನಾಲ್ಕರಷ್ಟು ಸಕ್ಕರೆ ಸೇರಿಸಿ (ಒಂದು ಅಳತೆ ರಸಕ್ಕೆ ನಾಲ್ಕು ಅಳತೆ ಸಕ್ಕರೆ)
  5. ಬೇಕಾದಲ್ಲಿ ಉಪ್ಪು ಮತ್ತು ಶುಂಠಿ ಸೇರಿಸಿ. ಏಲಕ್ಕಿ ಅಥವಾ ನಿಮ್ಮಿಷ್ಟದ ಬೇರೆ ಮಸಾಲೆಯನ್ನು ಸೇರಿಸಬಹುದು.  
  6. ಒಮ್ಮೆ ಕಲಸಿ, ಫ್ಯಾನ್ ಕೆಳಗೆ ಅಥವಾ ಹಾಗೆ ಒಣಗಲು ಬಿಡಿ. ಬಿಸಿಲಿಗೆ ಇಡುವುದು ಬೇಡ. 
  7. ದಿನಕ್ಕೊಮ್ಮೆ ಮಗುಚಿ, ಪುನಃ ಒಣಗಲು ಬಿಡಿ.  
  8. 3 - 4 ದಿನಗಳಲ್ಲಿ ಒಣಗುವುದು. 
  9. ಸಂಪೂರ್ಣ ಒಣಗಿದ ಮೇಲೆ, ಮಿಕ್ಸಿಯಲ್ಲಿ ಪುಡಿ ಮಾಡಿ. 
  10. ಡಬ್ಬದಲ್ಲಿ ಹಾಕಿ ಎತ್ತಿಡಿ. ನಿಂಬೆ ರಸಕ್ಕೆ ಸಕ್ಕರೆ ಪುಡಿ ಸೇರಿಸಿ, ಪೇಸ್ಟ್ ನಂತೆ ಮಾಡಿಯೂ ಇಡಬಹುದು. 
  11. ಜ್ಯೂಸು ಮಾಡಲು ಅಗತ್ಯವಿದ್ದಷ್ಟು ಪುಡಿಯನ್ನು ನೀರಿನಲ್ಲಿ ಸೇರಿಸಿ, ಕುಡಿಯಿರಿ. 
Related Posts Plugin for WordPress, Blogger...