Shankarpali recipe in Kannada | ಶಂಕರಪಾಳಿ ಮಾಡುವ ವಿಧಾನ
ದಿಢೀರ್ ಸೆಟ್ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿಹಿಟ್ಟು
- 1/2 ಕಪ್ ಹಾಲು
- 1/4 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
- 1/4 ಕಪ್ ತುಪ್ಪ (ಅಥವಾ ಎಣ್ಣೆ)
- 1/4 ಚಮಚ ಉಪ್ಪು
- ಚಿಟಿಕೆ ಏಲಕ್ಕಿ ಪುಡಿ
- ಎಣ್ಣೆ ಕಾಯಿಸಲು
ಶಂಕರಪಾಳಿ ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ಹಾಲು, ಸಕ್ಕರೆ ಮತ್ತು ತುಪ್ಪ ತೆಗೆದುಕೊಳ್ಳಿ.
- ಸ್ಟವ್ ಮೇಲೆ ಕುದಿಯಲು ಇಡಿ.
- ಅದಕ್ಕೆ ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ.
- ಕುಡಿಯಲು ಶುರುವಾದ ಕೂಡಲೇ ಸ್ಟವ್ ಆಫ್ ಮಾಡಿ.
- ಇನ್ನೊಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ತೆಗೆದುಕೊಳ್ಳಿ
- ಬಿಸಿ ಮಾಡಿದ ಹಾಲು, ಸಕ್ಕರೆ ಮತ್ತು ತುಪ್ಪದ ಮಿಶ್ರಣವನ್ನು ಸುರಿಯಿರಿ.
- ಸಟ್ಟುಗದ ಸಹಾಯದಿಂದ ಕಲಸಿ.
- ಬಿಸಿ ಕಡಿಮೆ ಆದ ಕೂಡಲೇ ಕೈಯಿಂದ ಚೆನ್ನಾಗಿ ಕಲಸಿ.
- ಕೂಡಲೇ ದಪ್ಪ ಚಪಾತಿಯಂತೆ ಲಟ್ಟಿಸಿ.
- ಸಣ್ಣ ಚೌಕಗಳಾಗಿ ಕತ್ತರಿಸಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣ ಉರಿಯಲ್ಲಿ ಕಾಯಿಸಿ.
- ಚಹಾದೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ