Nimbe hannina uppinakayi recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 12 - 15 ನಿಂಬೆಹಣ್ಣು
- 4 - 5 ಟೇಬಲ್ ಚಮಚ ಉಪ್ಪು
- 3 - 4 ಟೇಬಲ್ ಚಮಚ ಅಚ್ಚಖಾರದಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಹೊಂದಿಸಿ)
- 1/2 ಟೀಸ್ಪೂನ್ ಅರಿಶಿನ ಪುಡಿ
- 1/4 ಟೀಸ್ಪೂನ್ ಇಂಗು
- 2 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಮೆಂತೆ
- ಸ್ವಲ್ಪ ಕರಿಬೇವಿನ ಎಲೆ
ಉಪ್ಪಿನಕಾಯಿ ಮಾಡುವ ವಿಧಾನ:
- ನಿಂಬೆಹಣ್ಣನ್ನು ತೊಳೆದು ನೀರಾರಿಸಿಕೊಳ್ಳಿ.
- ನಿಂಬೆಹಣ್ಣನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿಕೊಳ್ಳಿ.
- ಕತ್ತರಿಸುವಾಗ ಸ್ವಲ್ಪ ನಿಂಬೆ ರಸ ಮತ್ತು ಬೀಜ ತೆಗೆಯಿರಿ. ಈ ರಸವನ್ನು ಅಗತ್ಯವಿದ್ದರೆ ಕೊನೆಯಲ್ಲಿ ಬಳಸಬಹುದು.
- ನೀರಿನಂಶ ಇಲ್ಲದೆ ಇರುವ ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಂತ ಹಂತವಾಗಿ ಉಪ್ಪು ಸೇರಿಸಿ ಹಾಕಿ.
- ದಿನಕ್ಕೊಮ್ಮೆ ಮಗುಚುತ್ತಾ 7 - 10 ದಿವಸ ಬಿಡಿ.
- ಆಮೇಲೆ ಅಚ್ಚಖಾರದ ಪುಡಿ, ಇಂಗು ಮತ್ತು ಅರಿಶಿನ ಸೇರಿಸಿ.
- ಚೆನ್ನಾಗಿ ಕಲಸಿ. ಚಮಚದಲ್ಲಿ ನೀರಿನಂಶ ಇಲ್ಲದಂತೆ ನೋಡಿಕೊಳ್ಳಿ.
- ಬೇಕೆನಿಸಿದರೆ ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.
- ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಒಗ್ಗರಣೆ ಬಿಸಿ ಆರಿದ ಮೇಲೆ ಹಾಕಿ.
- ಮುಚ್ಚಳ ಮುಚ್ಚಿ ಇನ್ನೆರಡು ದಿನ ಬಿಡಿ. ಉಪ್ಪಿನಕಾಯಿ ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ