Carrot rice recipe in Kannada | ಕ್ಯಾರಟ್ ರೈಸ್ ಮಾಡುವ ವಿಧಾನ
ಕ್ಯಾರಟ್ ರೈಸ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 ಕಪ್ ಅನ್ನ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಉದ್ದಿನಬೇಳೆ
- 2 ಟೇಬಲ್ ಚಮಚ ಶೇಂಗಾ
- 2 ಟೇಬಲ್ ಚಮಚ ಗೋಡಂಬಿ
- 1 - 2 ಹಸಿಮೆಣಸಿನಕಾಯಿ
- 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
- 4-5 ಕರಿ ಬೇವಿನ ಎಲೆ
- 1 ದೊಡ್ಡ ಗಾತ್ರದ ಕ್ಯಾರಟ್
- ದೊಡ್ಡ ಚಿಟಿಕೆ ಅರಶಿನ ಪುಡಿ
- 1 ಟೀಸ್ಪೂನ್ ರಸಂ ಪೌಡರ್
- 2 ಟೇಬಲ್ ಚಮಚ ಅಡುಗೆ ಎಣ್ಣೆ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 2 ಟೀಸ್ಪೂನ್ ನಿಂಬೆ ರಸ
- 2 ಟೇಬಲ್ ಚಮಚ ತೆಂಗಿನತುರಿ
- 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಕ್ಯಾರಟ್ ರೈಸ್ ಮಾಡುವ ವಿಧಾನ:
- ಕ್ಯಾರಟ್ ತುರಿಯಿರಿ, ಬೇರೆ ಪದಾರ್ಥಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ.
- ನಂತ್ರ ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
- ನಂತ್ರ ತುರಿದ ಕ್ಯಾರಟ್ ಸೇರಿಸಿ ಒಂದು ನಿಮಿಷ ಹುರಿಯಿರಿ.
- ಆಮೇಲೆ ಅರಿಶಿನ ಪುಡಿ, ಉಪ್ಪು ಮತ್ತು ರಸಂ ಪುಡಿ ಸೇರಿಸಿ.
- ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
- ಬೇಯಿಸಿದ ಅನ್ನ ಸೇರಿಸಿ. ಮಗುಚಿ.
- ಕೊನೆಯಲ್ಲಿ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಸೇರಿಸಿ.
- ಸ್ಟವ್ ಆಫ್ ಮಾಡಿ, ಚೆನ್ನಾಗಿ ಕಲಸಿ, ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ