Sweet curd recipe in Kannada | ಸಿಹಿ ಮೊಸರು (ಯೋಗರ್ಟ್) ಮಾಡುವ ವಿಧಾನ
ಸಿಹಿ ಮೊಸರು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- ಅರ್ಧ ಲೀಟರ್ ಹಾಲು
- ಅರ್ಧ ಕಪ್ ಸಕ್ಕರೆ
- ಕಾಲು ಕಪ್ ಮೊಸರು
ಸಿಹಿ ಮೊಸರು ಮಾಡುವ ವಿಧಾನ:
- ಹಾಲನ್ನು ಕುದಿಸಿ.
- ಕುದಿಯಲು ಶುರು ಆದ ಮೇಲೆ, ಆಗಾಗ ಕೈಯಾಡಿಸುತ್ತಾ ಹತ್ತರಿಂದ ಹದಿನೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.
- ಕುದಿಯುವ ಸಮಯದಲ್ಲಿ ಕಾಲು ಕಪ್ ಸಕ್ಕರೆಯನ್ನೂ ಸೇರಿಸಿ.
- ಹಾಲು ಗಟ್ಟಿಯಾದ ನಂತರ ಸ್ಟವ್ ಆಫ್ ಮಾಡಿ.
- ಇನ್ನೊಂದು ಬಾಣಲೆಯಲ್ಲಿ ಉಳಿದ ಕಾಲು ಕಪ್ ಸಕ್ಕರೆಯನ್ನು, ನೀರು ಹಾಕದೆ ಹೊಂಬಣ್ಣಕ್ಕೆ ಬರುವವರೆಗೆ ಕರಗಿಸಿ.
- ಅದನ್ನು ಸ್ವಲ್ಪ ಸ್ವಲ್ಪವಾಗಿ ಬಿಸಿ ಹಾಲಿಗೆ ಹಾಕಿ ಕರಗಿಸಿ.
- ಆಮೇಲೆ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು ಚನ್ನಾಗಿ ಕಲಕಿ.
- ಅದನ್ನು, ಹಾಲು ಬಿಸಿ ಕಡಿಮೆ ಆದ ಮೇಲೆ (ಉಗುರು ಬೆಚ್ಚಗೆ ಗಿಂತ ಸ್ವಲ್ಪ ಜಾಸ್ತಿ ಬಿಸಿ ಇರಲಿ), ಸೇರಿಸಿ.
- ಚೆನ್ನಾಗಿ ಎತ್ತಿಹಾಕಿ ಮಿಕ್ಸ್ ಮಾಡಿ.
- ಮೊಸರು ಮಾಡುವ ಪಾತ್ರೆಗೆ ಹಾಕಿ.
- ಮುಚ್ಚಳ ಮುಚ್ಚಿ, ಬೆಚ್ಚಗಿನ ಜಾಗದಲ್ಲಿ, ಮೊಸರು ಆಗಲು ಬಿಡಿ.
- ನಂತ್ರ ಐಸ್ ಕ್ರೀಮ್ ನ ಹಾಗೆ ಬಡಿಸಿ. ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ