ಗುರುವಾರ, ಏಪ್ರಿಲ್ 30, 2020

Avalakki boondi recipe in Kannada | ಅವಲಕ್ಕಿ ಸಿಹಿ ಸ್ನಾಕ್ಸ್ ಮಾಡುವ ವಿಧಾನ

Avalakki boondi recipe in Kannada

Avalakki boondi recipe in Kannada | ಅವಲಕ್ಕಿ ಸಿಹಿ ಸ್ನಾಕ್ಸ್ ಮಾಡುವ ವಿಧಾನ 

ಅವಲಕ್ಕಿ ಸಿಹಿ ಸ್ನಾಕ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗಟ್ಟಿ ಅವಲಕ್ಕಿ
  2. 1/4 ಕಪ್ ಸಕ್ಕರೆ
  3. 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  4. 2 ಟೇಬಲ್ ಚಮಚ ಗೋಡಂಬಿ
  5. 1 ಟೀಸ್ಪೂನ್ ತುಪ್ಪ
  6. ಚಿಟಿಕೆ ಉಪ್ಪು
  7. 2 - 3 ಟೇಬಲ್ ಚಮಚ ನೀರು

ಅವಲಕ್ಕಿ ಸಿಹಿ ಸ್ನಾಕ್ಸ್ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಗಟ್ಟಿ ಅವಲಕ್ಕಿಯನ್ನು ಎಣ್ಣೆ ಹಾಕದೇ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉಬ್ಬಿ ಬರುವವರೆಗೆ ಹುರಿಯಿರಿ. (ನಿಮಗಿಷ್ಟವಿದ್ದರೆ ಎಣ್ಣೆಯಲ್ಲಿಯೂ ಕಾಯಿಸಬಹುದು) 
  2. ಹುರಿದ ಅವಲಕ್ಕಿಯನ್ನು ತೆಗೆದಿಟ್ಟು, ಒಂದು ಚಮಚ ತುಪ್ಪ ಬಿಸಿ ಮಾಡಿ ನೆಲಗಡಲೆ ಅಥವಾ ಶೇಂಗಾ ವನ್ನು ಹುರಿಯಿರಿ. 
  3. ಆಮೇಲೆ ಗೋಡಂಬಿಯನ್ನು ಸೇರಿಸಿ ಹುರಿಯಿರಿ.
  4. ಎರಡನ್ನು ತೆಗೆದು ಪಕ್ಕಕ್ಕಿಟ್ಟು, ಅದೇ ಬಾಣಲೆಗೆ ಸಕ್ಕರೆ ಮತ್ತು ಉಪ್ಪು ಸೇರಿಸಿ. 
  5. 2 - 3 ಟೇಬಲ್ ಚಮಚ ನೀರು ಸೇರಿಸಿ ಕುದಿಯಲು ಇಡೀ. 
  6. ಗಟ್ಟಿ ಪಾಕ ಮಾಡಿಕೊಂಡು (ಗುಜು ಗುಜು ನೊರೆ ಬರುವವರೆಗೆ), ಹುರಿದಿಟ್ಟ ಅವಲಕ್ಕಿ, ಶೇಂಗಾ ಮತ್ತು ಗೋಡಂಬಿ ಹಾಕಿ ಚೆನ್ನಾಗಿ ಮಗುಚಿ. 
  7. ಸ್ಟವ್ ಆಫ್ ಮಾಡಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ. ಒಂದು ಅರ್ಧ ದಿನ ಬಿಟ್ಟರೆ ರುಚಿ ಚೆನ್ನಾಗಿ ಬರುವುದು. 

ಮಂಗಳವಾರ, ಏಪ್ರಿಲ್ 28, 2020

Frooti juice recipe in Kannada | ಫ್ರೂಟಿ, ಮಾಜ ಜ್ಯೂಸು ಮಾಡುವ ವಿಧಾನ

Frooti juice recipe in Kannada

Frooti juice recipe in Kannada | ಫ್ರೂಟಿ, ಮಾಜ ಜ್ಯೂಸು ಮಾಡುವ ವಿಧಾನ

ಫ್ರೂಟಿ, ಮಾಜ ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 2 ಕಪ್ ಕತ್ತರಿಸಿದ ಮಾವಿನಹಣ್ಣು
  2. 1/4 ಕಪ್ ಕತ್ತರಿಸಿದ ಮಾವಿನಕಾಯಿ
  3. 1/2 ಕಪ್ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  4. ಅಗತ್ಯವಿದ್ದಷ್ಟು ನೀರು

ಫ್ರೂಟಿ, ಮಾಜ ಜ್ಯೂಸು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಕತ್ತರಿಸಿದ ಮಾವಿನ ಹಣ್ಣು ಮತ್ತು ಮಾವಿನಕಾಯಿಯನ್ನು ತೆಗೆದುಕೊಳ್ಳಿ.
  2. ಅದಕ್ಕೆ ಸಕ್ಕರೆ ಸೇರಿಸಿ.  
  3. ಮುಚ್ಚುವಷ್ಟು ನೀರು ಸೇರಿಸಿ, ಕುದಿಸಿ. 
  4. ಮುಚ್ಚಳ ಮುಚ್ಚಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
  5. ಸ್ಟವ್ ಆಫ್ ಮಾಡಿ. ಬಿಸಿ ಕಡಿಮೆ ಆದ ಮೇಲೆ, ನೀರನ್ನು ಬಗ್ಗಿಸಿ ತೆಗೆಯಿರಿ.  
  6. ಬೇಯಿಸಿದ ಮಾವಿನ ಚೂರುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. 
  7. ದೊಡ್ಡ ಜರಡಿಯ ಸಹಾಯದಿಂದ ಸೋಸಿ, ಬಗ್ಗಿಸಿಟ್ಟ ನೀರಿಗೆ ಸೇರಿಸಿ. ಸೋಸುವಾಗ ಚಮಚದ ಸಹಾಯ ಮತ್ತು ಸ್ವಲ್ಪ ನೀರು ಸೇರಿಸಿದಲ್ಲಿ ಸುಲಭವಾಗುವುದು. 
  8. ಚೆನ್ನಾಗಿ ಮಗುಚಿ, ಸಕ್ಕರೆ ಮತ್ತು ನೀರನ್ನು ಹೊಂದಿಸಿ. 
  9. ತಣ್ಣಗೆ ಮಾಡಿ ಕುಡಿಯಿರಿ. ಫ್ರಿಡ್ಜ್ ನಲ್ಲಿ ಒಂದು ತಿಂಗಳು ಇತ್ತು ಕುಡಿಯಬಹುದು. 

ಗುರುವಾರ, ಏಪ್ರಿಲ್ 23, 2020

Akki peni sandige recipe in Kannada | ಅಕ್ಕಿ ಪೇಣಿ ಸಂಡಿಗೆ ಮಾಡುವ ವಿಧಾನ

Akki peni sandige recipe in Kannada
Akki peni sandige recipe in Kannada | ಅಕ್ಕಿ ಪೇಣಿ ಸಂಡಿಗೆ ಮಾಡುವ ವಿಧಾನ

ಅಕ್ಕಿ ಪೇಣಿ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಅಕ್ಕಿ ಹಿಟ್ಟು
  2. 1.5 ಕಪ್ ನೀರು
  3. ದೊಡ್ಡ ಚಿಟಿಕೆ ಇಂಗು
  4. 1 ಟೀಸ್ಪೂನ್ ಎಣ್ಣೆ
  5. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅಕ್ಕಿ ಪೇಣಿ ಸಂಡಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು ತೆಗೆದುಕೊಂಡು ಕುದಿಯಲು ಇಡಿ. 
  2. ಅದಕ್ಕೆ ಉಪ್ಪು, ಅರ್ಧ ಚಮಚ ಎಣ್ಣೆ ಮತ್ತು ಇಂಗು ಸೇರಿಸಿ. 
  3. ನೀರು ಕುದಿಯಲು ಪ್ರಾರಂಭವಾದ ಮೇಲೆ ಅಕ್ಕಿ ಹಿಟ್ಟನ್ನು ಸೇರಿಸಿ. 
  4. ಮೃದುವಾದ ಹಿಟ್ಟು ತಯಾರಾಗುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ.
  5. ಬಿಸಿ ಕಡಿಮೆ ಆದ ಮೇಲೆ, ಇನ್ನರ್ಧ ಚಮಚ ಎಣ್ಣೆ ಹಾಕಿ, ನಾದಿ. 
  6. ಸಣ್ಣ ತೂತುಗಳಿರುವ ಅಚ್ಚಿಗೆ ಹಿಟ್ಟು ತುಂಬಿಸಿ. 
  7. ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಬಟ್ಟೆಯ ಮೇಲೆ ಸಂಡಿಗೆ ಹಾಕಿ. 
  8. ಬಿಸಿಲಿನಲ್ಲಿ ಒಣಗಲು ಇಡಿ. 
  9. ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ. 
  10. ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು ಅಥವಾ ಹಾಗೆಯೂ ತಿನ್ನಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.

ಬುಧವಾರ, ಏಪ್ರಿಲ್ 8, 2020

Menthe thambli recipe in kannada | ಮೆಂತೆ ತಂಬ್ಳಿ ಮಾಡುವ ವಿಧಾನ

Menthe thambli recipe in kannada

Menthe thambli recipe in kannada | ಮೆಂತೆ ತಂಬ್ಳಿ ಮಾಡುವ ವಿಧಾನ

ಮೆಂತೆ ತಂಬ್ಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಒಣಮೆಣಸಿನಕಾಯಿ ಅಥವಾ ಒಂದು ಚಮಚ ಕಾಳು ಮೆಣಸು
  2. ಒಂದು ಚಮಚ ಮೆಂತ್ಯ
  3. ಒಂದು ಚಮಚ ಜೀರಿಗೆ
  4. 1/2 ಕಪ್ ಮೊಸರು
  5. 1/2 ಕಪ್ ತೆಂಗಿನ ತುರಿ 
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 
  7. 1 ಟೀಸ್ಪೂನ್ ತುಪ್ಪ ಅಥವಾ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಚಮಚ ಸಾಸಿವೆ
  4. ಚಿಟಿಕೆ ಇಂಗು
  5. ಸ್ವಲ್ಪ ಕರಿಬೇವು

ಮೆಂತೆ ತಂಬ್ಳಿ ಮಾಡುವ ವಿಧಾನ:

  1. ಒಗ್ಗರಣೆ ಸೌಟು ಅಥವಾ ಸಣ್ಣ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. 
  2. ಒಣಮೆಣಸಿನಕಾಯಿ (ಅಥವಾ ಕರಿಮೆಣಸು), ಮೆಂತ್ಯ ಮತ್ತು ಜೀರಿಗೆ ಸೇರಿಸಿ ಮಧ್ಯಮ ಉರಿಯಲ್ಲಿ ಜೀರಿಗೆ ಚಟಪಟ ಅನ್ನುವವರೆಗೆ ಹುರಿಯಿರಿ. 
  3. ನಂತರ ಮಿಕ್ಸಿಯಲ್ಲಿ ಹುರಿದ ಪದಾರ್ಥಗಳನ್ನು ತೆಗೆದುಕೊಳ್ಳಿ. 
  4. ಅದಕ್ಕೆ ತೆಂಗಿನ ತುರಿ ಸೇರಿಸಿ.
  5. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
  6. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  7. ಮೊಸರನ್ನು ಸೇರಿಸಿ, ಇನ್ನೊಂದು ಸುತ್ತು ಅರೆಯಿರಿ.
  8. ನಂತ್ರ ಒಂದು ಬೌಲ್ ನಲ್ಲಿ ಅರೆದ ಮಿಶ್ರಣ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ.  ತಂಬ್ಳಿ ಸ್ವಲ್ಪ ನೀರಾಗಿರಬೇಕು. 
  9. ಎಣ್ಣೆ, ಮೆಣಸಿನಕಾಯಿ, ಇಂಗು, ಕರಿಬೇವು  ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. 
  10. ಬಿಸಿಯಾದ ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.

ಶುಕ್ರವಾರ, ಏಪ್ರಿಲ್ 3, 2020

Vegetable salad recipe in Kannada | ತರಕಾರಿ ಸಾಲಡ್ ಮಾಡುವ ವಿಧಾನ

Vegetable salad recipe in Kannada

Vegetable salad recipe in Kannada | ತರಕಾರಿ ಸಾಲಡ್ ಮಾಡುವ ವಿಧಾನ 

ತರಕಾರಿ ಸಲಾಡ್ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಕಾಬುಲ್ ಕಡ್ಲೆ
  2. 1/4 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ
  3. 1/4 ಕಪ್ ಸಣ್ಣದಾಗಿ ಹೆಚ್ಚಿದ ಟೊಮೆಟೊ
  4. 1/4 ಕಪ್ ತುರಿದ ಕ್ಯಾರೆಟ್
  5. 1/4 ಕಪ್ ತುರಿದ ಮೂಲಂಗಿ
  6. 1/4 ಕಪ್ ಸಣ್ಣದಾಗಿ ಹೆಚ್ಚಿದ ಸೌತೆಕಾಯಿ
  7. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 1 ಟೇಬಲ್ ಚಮಚ ಹುರಿದ ಎಳ್ಳು
  9. 1/2 - 1 ಟೀಸ್ಪೂನ್ ಕರಿಮೆಣಸಿನಪುಡಿ
  10. 1 - 2 ಟೀಸ್ಪೂನ್ ನಿಂಬೆರಸ
  11. ಉಪ್ಪು ರುಚಿಗೆ ತಕ್ಕಷ್ಟು
  12. ಒಂದು ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ

ತರಕಾರಿ ಸಾಲಡ್ ಮಾಡುವ ವಿಧಾನ:

  1. ಕಡ್ಲೆಯನ್ನು 7 - 8 ಘಂಟೆಗಳ ಕಾಲ ನೆನೆಸಿ.
  2. ನೆನೆಸಿದ ನಂತ್ರ ಸ್ವಲ್ಪ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಒಂದು ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ತುರಿದ ಮೂಲಂಗಿ ಮತ್ತು ತುರಿದ ಕ್ಯಾರೆಟ್ ತೆಗೆದುಕೊಳ್ಳಿ.
  4. ಬೇಯಿಸಿದ ಕಡ್ಲೆ ಸೇರಿಸಿ. 
  5. ಹುರಿದ ಎಳ್ಳು ಉದುರಿಸಿ. 
  6. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  7. ರುಚಿಗೆ ತಕ್ಕಂತೆ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ. 
  8. ನಿಂಬೆರಸವನ್ನು ಸೇರಿಸಿ. 
  9. ಕೊನೆಯಲ್ಲಿ ಒಂದು ಚಮಚ ಎಣ್ಣೆ ಸೇರಿಸಿ ಕಲಸಿ. 
  10. ಸವಿದು ಆನಂದಿಸಿ. ಇದನ್ನು ಕೂಡಲೇ ಅಥವಾ ಸ್ವಲ್ಪ ಹೊತ್ತು ಬಿಟ್ಟು ತಿನ್ನಬಹುದು. ಈ ಸಲಾಡ್ ಆರೋಗ್ಯಕ್ಕೆ ಮತ್ತು ದೇಹದ ತೂಕ ಕಾಪಾಡಲು ಬಲು ಸಹಾಯಕಾರಿ. 
Related Posts Plugin for WordPress, Blogger...