ಹಪ್ಪಳ-ಸಂಡಿಗೆ-ಉಪ್ಪಿನಕಾಯಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಪ್ಪಳ-ಸಂಡಿಗೆ-ಉಪ್ಪಿನಕಾಯಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 4, 2023

Goddu khara recipe in Kannada | ಗೊಡ್ಡುಖಾರ ಮಾಡುವ ವಿಧಾನ

 

Goddu khara recipe in Kannada

Goddu khara recipe in Kannada | ಗೊಡ್ಡುಖಾರ ಮಾಡುವ ವಿಧಾನ

ಗೊಡ್ಡುಖಾರ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 10 -12 ಒಣಮೆಣಸಿನಕಾಯಿ
  2. 1 ಮಧ್ಯಮ ಗಾತ್ರದ ಬೆಳ್ಳುಳ್ಳಿ
  3. 1 ಟೀಸ್ಪೂನ್ ಜೀರಿಗೆ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1 ಎಸಳು ಕರಿಬೇವು
  6. 1 ಸಣ್ಣ ಗಾತ್ರದ ಈರುಳ್ಳಿ
  7. 1 ಟೀಸ್ಪೂನ್ ಎಣ್ಣೆ
  8. 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  9. ಉಪ್ಪು ರುಚಿಗೆ ತಕ್ಕಷ್ಟು

 ಗೊಡ್ಡುಖಾರ ಮಾಡುವ ವಿಧಾನ:

  1. ಮೊದಲಿಗೆ ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿಯಿರಿ. 
  2. ನಂತರ ಸಿಪ್ಪೆ ತೆಗೆದ ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  3. ಆಮೇಲೆ ಕೊತ್ತಂಬರಿ ಬೀಜ, ಜೀರಿಗೆ ಮತ್ತು ಕರಿಬೇವನ್ನು ಸೇರಿಸಿ, ಕರಿಬೇವು ಗರಿಗರಿಯಾಗುವವರೆಗೆ ಹುರಿಯಿರಿ. 
  4. ಈರುಳ್ಳಿಯನ್ನು ಸ್ಟವ್ ಮೇಲೆ ಹಿಡಿದು ಸುಟ್ಟು, ದೊಡ್ಡದಾಗಿ ಕತ್ತರಿಸಿಟ್ಟುಕೊಳ್ಳಿ. 
  5. ಬಿಸಿ ಅರಿದಮೇಲೆ ಹುರಿದ ಪದಾರ್ಥ ಮತ್ತು ಸುಟ್ಟ ಈರುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ.
  6. ರುಚಿಗೆ ತಕ್ಕಂತೆ ಉಪ್ಪು ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  8. ಬಿಸಿ ಅನ್ನದೊಂದಿಗೆ ಅಥವಾ ರೊಟ್ಟಿಯೊಂದಿಗೆ ತುಪ್ಪದ ಜೊತೆ ಬಡಿಸಿ. ಹೊರಗೆ ಒಂದು ವಾರ ಮತ್ತು ಫ್ರಿಡ್ಜ್ ನಲ್ಲಿ ಒಂದು ತಿಂಗಳು ಇಡಬಹುದು.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಜೂನ್ 13, 2023

Avalakki sandige recipe in Kannada | ಅವಲಕ್ಕಿ ಸಂಡಿಗೆ ಮಾಡುವ ವಿಧಾನ

 

Avalakki sandige recipe in Kannada

Avalakki sandige recipe in Kannada | ಅವಲಕ್ಕಿ ಸಂಡಿಗೆ ಮಾಡುವ ವಿಧಾನ

ಅವಲಕ್ಕಿ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 60 ಎಂಎಲ್)

  1. 3 ಕಪ್ ತೆಳು ಅವಲಕ್ಕಿ
  2. ಒಣಮೆಣಸಿನ ಚೂರುಗಳು ಅಥವಾ ಹಸಿಮೆಣಸಿನಕಾಯಿ ಪೇಸ್ಟ್
  3. 1/2 ಟೀಸ್ಪೂನ್ ಓಮ
  4. 1/4 ಟೀಸ್ಪೂನ್ ಸೋಡಾ
  5. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅವಲಕ್ಕಿ ಸಂಡಿಗೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ತೆಗೆದುಕೊಳ್ಳಿ.
  2. ನೀರು ಹಾಕಿ ತೊಳೆದು ಕೂಡಲೇ ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ. 
  3. ನಂತರ ಅದಕ್ಕೆ ಉಪ್ಪು, ಒಣಮೆಣಸಿನಕಾಯಿ ಚೂರುಗಳು, ಓಮ, ಸೋಡಾ ಮತ್ತು ಉಪ್ಪು ಸೇರಿಸಿ. 
  4. ಅಥವಾ ನಿಮ್ಮಿಷ್ಟದ ಯಾವುದೇ ಮಸಾಲೆ (ಇಂಗು, ಜೀರಿಗೆ, ಎಳ್ಳು ಇತ್ಯಾದಿ) ಸೇರಿಸಬಹುದು. 
  5. ಚೆನ್ನಾಗಿ ಕೈಯಲ್ಲಿ ಹಿಸುಕಿ ಕಲಸಿ. 
  6.  ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ಅಥವಾ ಬಟ್ಟೆಯಲ್ಲಿ ಸಂಡಿಗೆ ಹಾಕಲು ತಯಾರು ಮಾಡಿ. 
  7. ಚಕ್ಕುಲಿ ಅಚ್ಚಿನಲ್ಲಿ ಕಲಸಿದ ಹಿಟ್ಟನ್ನು ತುಂಬಿಸಿ, ರಿಬ್ಬನ್ ನಂತೆ ಸಂಡಿಗೆಯನ್ನು ಒತ್ತಿ. ಬಿಸಿಲಿನಲ್ಲಿ ಒಣಗಲು ಇಡಿ. 
  8. ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ. 
  9. ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. 
  10. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.

ಸೋಮವಾರ, ಏಪ್ರಿಲ್ 24, 2023

Rave sandige recipe in Kannada | ರವೆ ಸಂಡಿಗೆ ಮಾಡುವ ವಿಧಾನ

 
Rave sandige recipe in Kannada

Rave sandige recipe in Kannada |ರವೆ ಸಂಡಿಗೆ ಮಾಡುವ ವಿಧಾನ

ರವೆ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 60 ಎಂಎಲ್)

  1. 1 ಕಪ್ ರವೆ 
  2. 7 ಕಪ್ ನೀರು
  3. ದೊಡ್ಡ ಚಿಟಿಕೆ ಇಂಗು (ಬೇಕಾದಲ್ಲಿ)
  4. 1 ಟೀಸ್ಪೂನ್ ಜೀರಿಗೆ
  5. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ರವೆ ಸಂಡಿಗೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ನೀರನ್ನು ಅಳತೆ ಮಾಡಿ ಕುದಿಯಲು ಇಡಿ. 
  2. ಅದಕ್ಕೆ ಉಪ್ಪು, ಇಂಗು ಮತ್ತು ಜೀರಿಗೆ ಸೇರಿಸಿ. 
  3. ನೀರು ಕುದಿಯಲು ಶುರು ಆದ ಕೂಡಲೇ ರವೆ ಹಾಕಿ ಮಗುಚಿ. 
  4. ಐದಾರು ನಿಮಿಷ ಅಥವಾ ರವೆ ಬೇಯುವವರೆಗೆ ಮಗುಚಿ.  
  5. ಸ್ಟವ್ ಆಫ್ ಮಾಡಿ.
  6. ಬಿಸಿ ಕಡಿಮೆ ಆದ ಮೇಲೆ, ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ನಲ್ಲಿ ಸಂಡಿಗೆ ಹಾಕಿ. ಬಿಸಿಲಿನಲ್ಲಿ ಒಣಗಲು ಇಡಿ. 
  7. ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ. 
  8. ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. 
  9. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.

ಗುರುವಾರ, ಆಗಸ್ಟ್ 25, 2022

Tomato thokku recipe in Kannada | ಟೊಮೇಟೊ ತೊಕ್ಕು ಮಾಡುವ ವಿಧಾನ

 

Tomato thokku recipe in Kannada

Tomato thokku recipe in Kannada | ಟೊಮೇಟೊ ತೊಕ್ಕು ಮಾಡುವ ವಿಧಾನ 

ಟೊಮೇಟೊ ತೊಕ್ಕು ವಿಡಿಯೋ

ಬೇಕಾಗುವ ಪದಾರ್ಥಗಳು:

  1. 10 ಮಧ್ಯಮ ಗಾತ್ರದ  ಟೊಮೇಟೊ
  2. 10 ಒಣಮೆಣಸಿನಕಾಯಿ  (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. 1 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಮೆಂತೆ
  6. 1/4 ಟೀಸ್ಪೂನ್ ಅರಿಶಿನ
  7. 3 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 4 ಟೇಬಲ್ ಚಮಚ ಅಡುಗೆ ಎಣ್ಣೆ
  2. 1 ಟೀಸ್ಪೂನ್ ಸಾಸಿವೆ
  3. 8 ಕರಿಬೇವಿನ ಎಲೆ
  4. 1/4 ಟೀಸ್ಪೂನ್ ಇಂಗು

ಟೊಮೇಟೊ ತೊಕ್ಕು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿಯನ್ನು ಎಣ್ಣೆ ಹಾಕದೇ ಹುರಿಯಿರಿ. 
  2.  ನಂತರ ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಸೇರಿಸಿ. ಮೆಂತೆ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ
  3. ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. 
  4. ಟೊಮ್ಯಾಟೊವನ್ನು ತೊಳೆದು, ದೊಡ್ಡದಾಗಿ ಕತ್ತರಿಸಿಕೊಳ್ಳಿ. 
  5. ಕತ್ತರಿಸಿದ ಟೊಮ್ಯಾಟೊವನ್ನು ಮಿಕ್ಸಿಯಲ್ಲಿ ಅರೆದಿಟ್ಟು ಕೊಳ್ಳಿ. 
  6. ನಂತರ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  7. ರುಬ್ಬಿದ ಟೊಮೇಟೊ ಹಾಕಿ ಮಗುಚಿ, ಕುದಿಯಲು ಇಡಿ. 
  8. ಉಪ್ಪು ಮತ್ತು ಅರಿಶಿನ ಸೇರಿಸಿ. 
  9. ಸ್ವಲ್ಪ ಗಟ್ಟಿಯಾಗುವವರೆಗೆ ಆಗಾಗ್ಯೆ ಮಗುಚುತ್ತಾ ಬೇಯಿಸಿ. 
  10.  ನೀರು ಆರಿದ ಮೇಲೆ ತಯಾರಿಸಿದ ಮಸಾಲೆ ಪುಡಿ ಹಾಕಿ ಮಗುಚಿ. 
  11. ರುಚಿಗೆ ತಕ್ಕಂತೆ ಉಪ್ಪು ಮತ್ತು ಬೆಲ್ಲ ಹೊಂದಿಸಿಕೊಳ್ಳಿ.  
  12. ನೀರಾರಿ ಎಣ್ಣೆ ಬಿಡಲು ಶುರುವಾದಾಗ ಸ್ಟವ್ ಆಫ್ ಮಾಡಿ. 
  13. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಎತ್ತಿಡಿ.  ನೀರಾರುವವರೆಗೆ ಮಗುಚಿದಲ್ಲಿ ಹಲವು ತಿಂಗಳುಗಳ ಕಾಲ ಕೆಡುವುದಿಲ್ಲ.


ಬುಧವಾರ, ಜನವರಿ 12, 2022

Nellikai leha recipe in Kannada | ನೆಲ್ಲಿಕಾಯಿ ಲೇಹ ಮಾಡುವ ವಿಧಾನ

 

Nellikai leha or jam recipe in Kannada

Nellikai leha recipe in Kannada | ನೆಲ್ಲಿಕಾಯಿ ಲೇಹ ಮಾಡುವ ವಿಧಾನ

ನೆಲ್ಲಿಕಾಯಿ ಲೇಹ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/4ಕೆಜಿ ನೆಲ್ಲಿಕಾಯಿ (8 - 10 ದೊಡ್ಡ ನೆಲ್ಲಿಕಾಯಿ)
  2. 1 - 2 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
  3. 2 - 3 ಏಲಕ್ಕಿ 
  4. 1/4 ಟೀಸ್ಪೂನ್ ಉಪ್ಪು

ನೆಲ್ಲಿಕಾಯಿ ಲೇಹ ಮಾಡುವ ವಿಧಾನ:

  1. ನೆಲ್ಲಿಕಾಯಿಯನ್ನು ತೊಳೆದು, ತುರಿದುಕೊಳ್ಳಿ. 
  2. ತುರಿಯನ್ನು ಅಳತೆ ಮಾಡಿ. ನನಗೆ ಎರಡು ಕಪ್ ತುರಿ ಸಿಕ್ಕಿತು.  
  3. ಒಂದು ಬಾಣಲೆಯಲ್ಲಿ ನೆಲ್ಲಿಕಾಯಿ ತುರಿ ಹಾಕಿ. 
  4. 1/4 ಕಪ್ ನೀರು ಹಾಕಿ. ಮೆತ್ತಗಾಗುವವರೆಗೆ ಹುರಿದು ಬೇಯಿಸಿ ಕೊಳ್ಳಿ. 
  5. ನಂತರ ಸಕ್ಕರೆ ಸೇರಿಸಿ. ಎರಡು ಕಪ್ ತುರಿಗೆ ಎರಡು ಕಪ್ ಸಕ್ಕರೆ ಬೇಕಾಗುವುದು. ನಾನು ಸ್ವಲ್ಪ ಕಡಿಮೆ ಅಂದರೆ ಒಂದು ಕಪ್ ಸೇರಿಸಿದ್ದೇನೆ. 
  6. ಮಧ್ಯಮ ಉರಿಯಲ್ಲಿ ಮಗುಚಿ. ಮೊದಲಿಗೆ ಸಕ್ಕರೆ ಕರಗಿ ನೀರಾಗುವುದು. 
  7. ಜಜ್ಜಿದ ಏಲಕ್ಕಿ ಸೇರಿಸಿ ಮಗುಚಿ. 
  8. ನೀರಾರುವವರೆಗೆ ಅಥವಾ ಒಂದೆಳೆ ಪಾಕ ಬರುವವರೆಗೆ ಮಗುಚಿ. (ಪಾಕ ಬಂದ ಮೇಲೂ ನೀರು ನೀರಾಗಿರುವುದು) 
  9. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುವುದು.  
  10. ನೆಲ್ಲಿಕಾಯಿ ಲೇಹ ಸವಿಯಲು ಸಿದ್ಧ. ಚಪಾತಿ, ದೋಸೆ, ರೊಟ್ಟಿ ಮತ್ತು ಬ್ರೆಡ್ ನೊಂದಿಗೆ ಬಡಿಸಿ. ಫ್ರಿಡ್ಜ್ ನಲ್ಲಿ ಸುಮಾರು  ದಿನ ಇಡಬಹುದು. 

ಭಾನುವಾರ, ಡಿಸೆಂಬರ್ 12, 2021

Nellikai candy recipe in Kannada | ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ

 

Nellikai candy recipe in Kannada

Nellikai candy recipe in Kannada | ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ

ನೆಲ್ಲಿಕಾಯಿ ಕ್ಯಾಂಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 10 - 12 ನೆಲ್ಲಿಕಾಯಿ 
  2. 1/2 ಕಪ್ ಸಕ್ಕರೆ
  3. 1/4 ಟೀಸ್ಪೂನ್ ಉಪ್ಪು

 ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ:

  1. ನೆಲ್ಲಿಕಾಯಿಯನ್ನು ತೊಳೆಯಿರಿ. 
  2. ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಆವಿಯಲ್ಲಿ ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ.
  3. ಸ್ವಲ್ಪ ಬಿಸಿ ಆರಿದ ಮೇಲೆ ನೆಲ್ಲಿಕಾಯಿ ಗೆರೆಯ ಮೇಲೆ ಕತ್ತರಿಸಿ, ಬೀಜ ತೆಗೆಯಿರಿ.  
  4. 1/4 ಕಪ್ ಸಕ್ಕರೆ ಮತ್ತು 1/4 ಟೀಸ್ಪೂನ್ ಹಾಕಿ ಕಲಸಿ 5 - 6 ಘಂಟೆ ಪಕ್ಕಕ್ಕಿಡಿ.
  5. ನೆಲ್ಲಿಕಾಯಿ ಬಿಟ್ಟ ನೀರನ್ನು ಬಸಿದು ತೆಗೆಯಿರಿ. 
  6. ಪುನಃ 1/4 ಕಪ್ ಸಕ್ಕರೆ ಹಾಕಿ ಕಲಸಿ. 
  7. 2 - 3 ದಿನ ಬಿಸಿಲಿನಲ್ಲಿ ಒಣಗಲು ಬಿಡಿ. 
  8. ವರ್ಷವಿಡೀ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ, ಜುಲೈ 31, 2021

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

 

Uddina happala recipe in Kannada

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

ಉದ್ದಿನ ಹಪ್ಪಳ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಉದ್ದಿನಬೇಳೆ
  2. ಅಗತ್ಯವಿದ್ದಷ್ಟು ನೀರು
  3. 1/4 ಟೀಸ್ಪೂನ್ ಉಪ್ಪು
  4. 1/4 ಟೀಸ್ಪೂನ್ ಸೋಡಾ
  5. ಕಾಯಿಸಲು ಎಣ್ಣೆ

ಉದ್ದಿನ ಹಪ್ಪಳ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಉದ್ದಿನಬೇಳೆ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ ಜರಡಿ ಹಿಡಿದುಕೊಳ್ಳಿ. 
  2. ನಂತ್ರ ಆ ಹಿಟ್ಟಿಗೆ ಉಪ್ಪು ಮತ್ತು ಸೋಡಾ ಹಾಕಿ ಕಲಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ಗಟ್ಟಿಯಾದ ಹಿಟ್ಟು ಕಲಸಿ. 
  4. ಒಂದು ಕುಟ್ಟಾಣಿ ತೆಗೆದುಕೊಂಡು ಹಿಟ್ಟನ್ನು ಚೆನ್ನಾಗಿ ಗುದ್ದಿ ಮೃದು ಮಾಡಿಕೊಳ್ಳಿ. 
  5. ಸಣ್ಣ ಉಂಡೆ ತೆಗೆದುಕೊಂಡು, ತೆಳ್ಳಗೆ ಲಟ್ಟಿಸಿ. 
  6. ಒಂದು ಬಟ್ಟಲಿನಿಂದ ಒತ್ತಿ, ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ.  
  7. ಹತ್ತಿಯ ಬಟ್ಟೆ ಮೇಲೆ ಒಂದೆರಡು ಘಂಟೆ ಗಾಳಿಯಾಡಲು ಬಿಡಿ. ಬಿಸಿಲಿನಲ್ಲಿ ಒಣಗಿಸಬಾರದು.  
  8. ಎಣ್ಣೆಯಲ್ಲಿ ಕಾಯಿಸಿ. ಲಟ್ಟಿಸಿದ ಕೂಡಲೆಯೂ ಕಾಯಿಸಬಹುದು.  
  9. ಚೆನ್ನಾಗಿ ನೆರಳಿನಲ್ಲಿ ಒಣಗಿಸಿದರೆ ಒಂದು ತಿಂಗಳು ಹಾಳಾಗುವುದಿಲ್ಲ. 
  10. ಸವಿದು ಆನಂದಿಸಿ. 


ಮಂಗಳವಾರ, ಮಾರ್ಚ್ 30, 2021

Onadrakshi recipe in Kannada | ಒಣದ್ರಾಕ್ಷಿ ಮಾಡುವ ವಿಧಾನ

 

Onadrakshi recipe in Kannada

Onadrakshi recipe in Kannada | ಒಣದ್ರಾಕ್ಷಿ ಮಾಡುವ ವಿಧಾನ 

ಒಣದ್ರಾಕ್ಷಿ ಮಾಡುವ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. ಅಗತ್ಯವಿದ್ದಷ್ಟು ದ್ರಾಕ್ಷಿ (ಸಿಹಿ, ತೆಳು ಸಿಪ್ಪೆಯ ದ್ರಾಕ್ಷಿ)
  2. ಬೇಯಿಸಲು ಇಡ್ಲಿ ಪಾತ್ರೆ 

ಒಣದ್ರಾಕ್ಷಿ ಮಾಡುವ ವಿಧಾನ:

  1. ಚೆನ್ನಾಗಿ ಹಣ್ಣಾದ, ತೆಳು ಸಿಪ್ಪೆಯ ದ್ರಾಕ್ಷಿಯನ್ನು ತೆಗೆದುಕೊಳ್ಳಿ. 
  2. ಹಣ್ಣನ್ನು ಬಿಡಿಸಿ, ಚೆನ್ನಾಗಿ ತೊಳೆಯಿರಿ. 
  3. ಇಡ್ಲಿ ಪ್ಲೇಟ್ ನಲ್ಲಿಟ್ಟು ಐದು ನಿಮಿಷ ಆವಿಯಲ್ಲಿ (ಹಬೆಯಲ್ಲಿ) ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ. 
  4. ಒಂದು ಹತ್ತಿಯ ಬಟ್ಟೆ ಅಥವಾ ಟ್ರೇ ಯಲ್ಲಿ ಹರಡಿ. 
  5. ಬಿಸಿಲಿನಲ್ಲಿಟ್ಟು ಒಂದೆರಡು ದಿವಸ ಒಣಗಿಸಿ. 
  6. ಒಣಗಿದ ಮೇಲೆ, ಬಿಸಿಲು ವಾಸನೆ ಹೋಗುವ ಸಲುವಾಗಿ ಒಂದು ದಿನ ಬಿಟ್ಟು ನಂತರ  ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಸೆಪ್ಟೆಂಬರ್ 9, 2020

Nimbe hannina uppinakayi recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ

 

Nimbe hannina uppinakayi recipe in Kannada | ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ



ನಿಂಬೆಹಣ್ಣಿನ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 12 - 15 ನಿಂಬೆಹಣ್ಣು
  2. 4 - 5 ಟೇಬಲ್ ಚಮಚ ಉಪ್ಪು 
  3. 3 - 4 ಟೇಬಲ್ ಚಮಚ ಅಚ್ಚಖಾರದಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಹೊಂದಿಸಿ)
  4. 1/2 ಟೀಸ್ಪೂನ್ ಅರಿಶಿನ ಪುಡಿ
  5. 1/4 ಟೀಸ್ಪೂನ್ ಇಂಗು
  6. 2 ಟೇಬಲ್ ಚಮಚ ಅಡುಗೆ ಎಣ್ಣೆ
  7. 1 ಟೀಸ್ಪೂನ್ ಸಾಸಿವೆ
  8. 1 ಟೀಸ್ಪೂನ್ ಮೆಂತೆ
  9. ಸ್ವಲ್ಪ ಕರಿಬೇವಿನ ಎಲೆ

 ಉಪ್ಪಿನಕಾಯಿ ಮಾಡುವ ವಿಧಾನ:

  1. ನಿಂಬೆಹಣ್ಣನ್ನು ತೊಳೆದು ನೀರಾರಿಸಿಕೊಳ್ಳಿ. 
  2.  ನಿಂಬೆಹಣ್ಣನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿಕೊಳ್ಳಿ.
  3. ಕತ್ತರಿಸುವಾಗ ಸ್ವಲ್ಪ ನಿಂಬೆ ರಸ ಮತ್ತು ಬೀಜ ತೆಗೆಯಿರಿ. ಈ ರಸವನ್ನು ಅಗತ್ಯವಿದ್ದರೆ ಕೊನೆಯಲ್ಲಿ ಬಳಸಬಹುದು. 
  4. ನೀರಿನಂಶ ಇಲ್ಲದೆ ಇರುವ ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಂತ ಹಂತವಾಗಿ ಉಪ್ಪು ಸೇರಿಸಿ ಹಾಕಿ. 
  5. ದಿನಕ್ಕೊಮ್ಮೆ ಮಗುಚುತ್ತಾ 7 - 10 ದಿವಸ ಬಿಡಿ. 
  6. ಆಮೇಲೆ ಅಚ್ಚಖಾರದ ಪುಡಿ, ಇಂಗು ಮತ್ತು ಅರಿಶಿನ ಸೇರಿಸಿ. 
  7. ಚೆನ್ನಾಗಿ ಕಲಸಿ. ಚಮಚದಲ್ಲಿ ನೀರಿನಂಶ ಇಲ್ಲದಂತೆ ನೋಡಿಕೊಳ್ಳಿ. 
  8. ಬೇಕೆನಿಸಿದರೆ  ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು  ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ. 
  9. ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಒಗ್ಗರಣೆ ಬಿಸಿ ಆರಿದ ಮೇಲೆ ಹಾಕಿ. 
  10. ಮುಚ್ಚಳ ಮುಚ್ಚಿ ಇನ್ನೆರಡು ದಿನ ಬಿಡಿ. ಉಪ್ಪಿನಕಾಯಿ ಸವಿಯಲು ಸಿದ್ಧ.  

ಶುಕ್ರವಾರ, ಜುಲೈ 10, 2020

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ


ಕ್ಯಾರಟ್ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 5 - 6 ಬೆಳ್ಳುಳ್ಳಿ ಗಡ್ಡೆ ಅಥವಾ 3/4 ಕಪ್ ಸಿಪ್ಪೆ ತೆಗೆದ ಬೆಳ್ಳುಳ್ಳಿ
  2. 1 ನಿಂಬೆಹಣ್ಣು ಗಾತ್ರದ ಹುಣಿಸೇಹಣ್ಣು
  3. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  4. 3 - 4 ಟೀಸ್ಪೂನ್ ಅಚ್ಚಖಾರದ ಪುಡಿ
  5. 1/4 ಟೀಸ್ಪೂನ್  ಇಂಗು
  6. 1/4 ಟೀಸ್ಪೂನ್ ಅರಿಶಿನ
  7. 1 ಟೀಸ್ಪೂನ್ ಸಾಸಿವೆ
  8. ಸ್ವಲ್ಪ ಕರಿಬೇವು
  9. 2 - 4 ಟೇಬಲ್ ಚಮಚ ಎಣ್ಣೆ
  10. 2 ಟೀಸ್ಪೂನ್ ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಮೆಂತೆ
  2. 1 ಟೇಬಲ್ ಚಮಚ ಜೀರಿಗೆ
  3. 2 ಟೇಬಲ್ ಚಮಚ ಕೊತ್ತಂಬರಿ ಬೀಜ

ದಿಢೀರ್ ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಬೆಳ್ಳುಳ್ಳಿ ಸಿಪ್ಪೆ ತೆಗೆದಿಟ್ಟುಕೊಳ್ಳಿ.  
  2. ಒಂದು ಬಾಣಲೆಯಲ್ಲಿ ಜೀರಿಗೆ, ಕೊತ್ತಂಬರಿ ಬೀಜ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  3. ನಂತ್ರ ಅದೇ ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ.
  4. ಸಾಸಿವೆ ಸೇರಿಸಿ. 
  5. ಸಾಸಿವೆ ಸಿಡಿದ ಮೇಲೆ, ಇಂಗು ಮತ್ತು ಕರಿಬೇವು ಹಾಕಿ. 
  6. ಆಮೇಲೆ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ. 
  7. ಹುಣಿಸೆಹಣ್ಣಿನ ರಸ ಸೇರಿಸಿ. 
  8. ಅಚ್ಚಖಾರದ ಪುಡಿ, ಉಪ್ಪು ಮತ್ತು ಅರಿಶಿನ ಸೇರಿಸಿ. ಒಂದೆರಡು ನಿಮಿಷ ಕುದಿಸಿ. 
  9. ಕೊನೆಯಲ್ಲಿ ಉಪ್ಪಿನಕಾಯಿ ಮಸಾಲೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಗುಚಿ. 
  10. ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಬೆಲ್ಲ ಸೇರಿಸಬಹುದು .  
  11. ರುಚಿಕರ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಫ್ರಿಡ್ಜ್ ನಲ್ಲಿ ಒಂದೆರಡು ತಿಂಗಳು ಇಡಬಹುದು. 

ಬುಧವಾರ, ಜೂನ್ 24, 2020

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ

Mavinakayi gulamba recipe in Kannada

Mavinakayi gulamba recipe in Kannada | ಮಾವಿನಕಾಯಿ ಗುಳಂಬಾ ಮಾಡುವ ವಿಧಾನ 

ಮಾವಿನಕಾಯಿ ಗುಳಂಬಾ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ದೊಡ್ಡ ಹುಳಿ ಇಲ್ಲದ ಮಾವಿನಕಾಯಿ
  2. 1 ಕಪ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
  3. 1 ಟೀಸ್ಪೂನ್ ತುಪ್ಪ
  4. 2 - 3 ಏಲಕ್ಕಿ 
  5. 2 ಲವಂಗ (ಬೇಕಾದಲ್ಲಿ)
  6. ಚಿಟಿಕೆ ಕೇಸರಿ (ಬೇಕಾದಲ್ಲಿ)

ಮಾವಿನಕಾಯಿ ಗುಳಂಬಾ ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ. ಮಾವಿನಕಾಯಿ ತುರಿಯನ್ನು ಅಳತೆ ಮಾಡಿ. 
  2. ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಜಜ್ಜಿಟ್ಟು ಕೊಳ್ಳಿ. 
  3. ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಮಾವಿನಕಾಯಿ ಮೆತ್ತಗಾಗುವವರೆಗೆ ಹುರಿದು ಕೊಳ್ಳಿ. 
  4. ನಂತರ ಸಕ್ಕರೆ ಸೇರಿಸಿ. ಒಂದು ಕಪ್ ತುರಿಗೆ ಒಂದು ಕಪ್ ಸಕ್ಕರೆ ಬೇಕಾಗುವುದು. ನಾನು ಸ್ವಲ್ಪ ಕಡಿಮೆ ಸೇರಿಸಿದ್ದೇನೆ. 
  5. ಮಧ್ಯಮ ಉರಿಯಲ್ಲಿ ಮಗುಚಿ. ಮೊದಲಿಗೆ ಸಕ್ಕರೆ ಕರಗಿ ನೀರಾಗುವುದು. 
  6. ಆ ಸಮಯದಲ್ಲಿ ಜಜ್ಜಿದ ಏಲಕ್ಕಿ, ಲವಂಗ ಮತ್ತು ಕೇಸರಿಯನ್ನು ಸೇರಿಸಿ. 
  7. ಎರಡೆಳೆ ಪಾಕ ಬರುವವರೆಗೆ ಮಗುಚಿ. (ಪಾಕ ಬಂದ ಮೇಲೂ ನೀರು ನೀರಾಗಿರುವುದು) 
  8. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುವುದು.  
  9. ಮಾವಿನಕಾಯಿ ಗುಳಂಬಾ ಸವಿಯಲು ಸಿದ್ಧ. ಚಪಾತಿ, ದೋಸೆ, ರೊಟ್ಟಿ ಮತ್ತು ಬ್ರೆಡ್ ನೊಂದಿಗೆ ಬಡಿಸಿ. ಫ್ರಿಡ್ಜ್ ನಲ್ಲಿ ಸುಮಾರು  ದಿನ ಇಡಬಹುದು. 

ಮಂಗಳವಾರ, ಮೇ 26, 2020

Mavinakayi uppinakayi recipe in Kannada | ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ

Mavinakayi uppinakayi recipe in Kannada

Mavinakayi uppinakayi recipe in Kannada | ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ


ಮಾವಿನಕಾಯಿ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಮಾವಿನಕಾಯಿ (ಹುಳಿ ಕಡಿಮೆ ಇರುವಂಥದ್ದು)
  2. 3/4 - 1 ಕಪ್ ನೀರು
  3. ದೊಡ್ಡ ಚಿಟಿಕೆ ಅರಿಶಿನ (ಬೇಕಾದಲ್ಲಿ)
  4. 2 ಟೇಬಲ್ ಚಮಚ ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 10 -15 ಒಣ ಮೆಣಸಿನಕಾಯಿ
  2. 2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಜೀರಿಗೆ
  4. 7 - 8 ಮೆಂತೆ
  5. 1/4 ಟೀಸ್ಪೂನ್ ಇಂಗು

ದಿಢೀರ್ ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು, ನೀರಾರಿಸಿ, ಕತ್ತರಿಸಿಟ್ಟುಕೊಳ್ಳಿ.  
  2. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  3. ನೀರು ಕುದಿಯಲು ಶುರುವಾದ ಕೂಡಲೇ, ಕತ್ತರಿಸಿದ ಮಾವಿನಕಾಯಿ ಹಾಕಿ ಸ್ಟವ್ ಆಫ್ ಮಾಡಿ.ಬಿಸಿ ಆರಲು ಬಿಡಿ. 
  4. ಆ ಸಮಯದಲ್ಲಿ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ಕೊನೆಯಲ್ಲಿ ಇಂಗು ಹಾಕಿ ಸ್ಟವ್ ಆಫ್ ಮಾಡಿ. 
  5. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  6. ಆ ಪುಡಿಯನ್ನು ಉಪ್ಪು ನೀರು ಮತ್ತು ಮಾವಿನಕಾಯಿ ಇರುವ ಬಾಣಲೆಗೆ ಹಾಕಿ, ಚೆನ್ನಾಗಿ ಮಗುಚಿ.
  7. ಬೇಕಾದಲ್ಲಿ ಅರಿಶಿನ ಪುಡಿ ಸೇರಿಸಿ, ಮಗುಚಿ. 
  8. ಬಿಸಿ ಆರಿದ ಮೇಲೆ ಉಪ್ಪಿನಕಾಯಿ ಸ್ವಲ್ಪ ಗಟ್ಟಿ ಆಗುವುದು. ಇದನ್ನು ಕೂಡಲೇ ಬಡಿಸಬಹುದು. ಒಂದು ದಿನದ ನಂತ್ರ ರುಚಿ ಹೆಚ್ಚುವುದು. ಹೊರಗೆ ಸುಮಾರು ಹದಿನೈದು ದಿವಸ ಮತ್ತು ಫ್ರಿಡ್ಜ್ ನಲ್ಲಿ ಎರಡು ತಿಂಗಳು ಇಡಬಹುದು. 

ಬುಧವಾರ, ಮೇ 6, 2020

Mango happala recipe in Kannada | ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ

Mango happala recipe in Kannada

Mango happala recipe in Kannada | ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ

ಫ್ರೂಟಿ, ಮಾಜ ಜ್ಯೂಸು ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 2 ಕಪ್ ಕತ್ತರಿಸಿದ ಮಾವಿನಹಣ್ಣು
  2. 2 ಟೇಬಲ್ ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಂತೆ)
  3. ಚಿಟಿಕೆ ಉಪ್ಪು
  4. 1 - 2 ಏಲಕ್ಕಿ
  5. ಅಗತ್ಯವಿದ್ದಷ್ಟು ನೀರು

ಮಾವಿನ ಹಣ್ಣು ಹಪ್ಪಳ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ಮಾವಿನ ಹಣ್ಣು, ಸಕ್ಕರೆ, ಉಪ್ಪು ಮತ್ತು ಏಲಕ್ಕಿಯನ್ನು ತೆಗೆದುಕೊಳ್ಳಿ.
  2. ನುಣ್ಣಗೆ ಅರೆದು ಒಂದು ಬಾಣಲೆಗೆ ಹಾಕಿ. ಮಿಕ್ಸಿ ಜಾರು ತೊಳೆಯುವಷ್ಟು ಮಾತ್ರ ನೀರು ಸೇರಿಸಿ.  
  3. ಮಧ್ಯಮ  ಉರಿಯಲ್ಲಿ ಮಗುಚುತ್ತಾ 7 - 8 ನಿಮಿಷ, ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ.
  4. ಸ್ಟವ್ ಆಫ್ ಮಾಡಿ. ಒಂದು ಪ್ಲೇಟ್ ಗೆ ಸುರಿದು ಹರಡಿ.  
  5. ಬಿಸಿಲಿನಲ್ಲಿ ಒಣಗಲು ಇಡಿ. ಕಸ-ಧೂಳು ಸೇರದಿರಲು ಮೊದಲನೇ ದಿನ ಒಂದು ಬಟ್ಟೆ ಮುಚ್ಚುವುದು ಒಳ್ಳೆಯದು.  
  6. ಎರಡರಿಂದ ಮೂರು ದಿನ ಚೆನ್ನಾಗಿ ಒಣಗಿದ ಮೇಲೆ ಅಂಚು ಬಿಡಿಸಿ, ತೆಗೆಯಿರಿ.  
  7. ಬೇಕಾದ ಆಕಾರಕ್ಕೆ ಕತ್ತರಿಸಿ ಅಥವಾ ಸುರುಳಿ ಮಾಡಿ ಎತ್ತಿಡಿ.
  8. ಒಂದು ವರ್ಷದವರೆಗೂ ಹಾಳಾಗುವುದಿಲ್ಲ. ಬೇಕಾದರೆ ಫ್ರಿಡ್ಜ್ ನಲ್ಲಿಡಿ.  ಚಾಕಲೇಟ್ ನಂತೆ ಸವಿದು ಆನಂದಿಸಿ. 

ಗುರುವಾರ, ಏಪ್ರಿಲ್ 23, 2020

Akki peni sandige recipe in Kannada | ಅಕ್ಕಿ ಪೇಣಿ ಸಂಡಿಗೆ ಮಾಡುವ ವಿಧಾನ

Akki peni sandige recipe in Kannada
Akki peni sandige recipe in Kannada | ಅಕ್ಕಿ ಪೇಣಿ ಸಂಡಿಗೆ ಮಾಡುವ ವಿಧಾನ

ಅಕ್ಕಿ ಪೇಣಿ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಅಕ್ಕಿ ಹಿಟ್ಟು
  2. 1.5 ಕಪ್ ನೀರು
  3. ದೊಡ್ಡ ಚಿಟಿಕೆ ಇಂಗು
  4. 1 ಟೀಸ್ಪೂನ್ ಎಣ್ಣೆ
  5. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅಕ್ಕಿ ಪೇಣಿ ಸಂಡಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು ತೆಗೆದುಕೊಂಡು ಕುದಿಯಲು ಇಡಿ. 
  2. ಅದಕ್ಕೆ ಉಪ್ಪು, ಅರ್ಧ ಚಮಚ ಎಣ್ಣೆ ಮತ್ತು ಇಂಗು ಸೇರಿಸಿ. 
  3. ನೀರು ಕುದಿಯಲು ಪ್ರಾರಂಭವಾದ ಮೇಲೆ ಅಕ್ಕಿ ಹಿಟ್ಟನ್ನು ಸೇರಿಸಿ. 
  4. ಮೃದುವಾದ ಹಿಟ್ಟು ತಯಾರಾಗುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ.
  5. ಬಿಸಿ ಕಡಿಮೆ ಆದ ಮೇಲೆ, ಇನ್ನರ್ಧ ಚಮಚ ಎಣ್ಣೆ ಹಾಕಿ, ನಾದಿ. 
  6. ಸಣ್ಣ ತೂತುಗಳಿರುವ ಅಚ್ಚಿಗೆ ಹಿಟ್ಟು ತುಂಬಿಸಿ. 
  7. ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಬಟ್ಟೆಯ ಮೇಲೆ ಸಂಡಿಗೆ ಹಾಕಿ. 
  8. ಬಿಸಿಲಿನಲ್ಲಿ ಒಣಗಲು ಇಡಿ. 
  9. ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ. 
  10. ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು ಅಥವಾ ಹಾಗೆಯೂ ತಿನ್ನಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.

ಸೋಮವಾರ, ಡಿಸೆಂಬರ್ 9, 2019

Nimbe hannina sippe recipes in Kannada

Nimbe hannina sippe recipes in Kannada | ನಿಂಬೆಹಣ್ಣಿನ ಸಿಪ್ಪೆಯ ಅಡುಗೆ ಮತ್ತು ಉಪಯೋಗಗಳು


ನಿಂಬೆಹಣ್ಣಿನ ಸಿಪ್ಪೆಯ ಅಡುಗೆ ವಿಡಿಯೋ

ಉಪ್ಪಿನಕಾಯಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 4 ನಿಂಬೆಹಣ್ಣಿನ ಸಿಪ್ಪೆ
  2. 1 - 2 ನಿಂಬೆಹಣ್ಣು
  3. 2 - 3 ಟೇಬಲ್ ಚಮಚ ಉಪ್ಪು 
  4. 2 ಟೀಸ್ಪೂನ್ ಅಚ್ಚಖಾರದಪುಡಿ
  5. 1/4 ಟೀಸ್ಪೂನ್ ಅರಿಶಿನ ಪುಡಿ
  6. ಒಂದು ದೊಡ್ಡ ಚಿಟಿಕೆ ಇಂಗು
  7. 1 ಟೇಬಲ್ ಚಮಚ ಅಡುಗೆ ಎಣ್ಣೆ
  8. 1/2 ಟೀಸ್ಪೂನ್ ಸಾಸಿವೆ
  9. 2 ಕರಿಬೇವಿನ ಎಲೆ

ಚಟ್ನಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1 ನಿಂಬೆಹಣ್ಣಿನ ಸಿಪ್ಪೆ
  2. 1 - 2 ಹಸಿಮೆಣಸಿನಕಾಯಿ
  3. 2 ಟೀಸ್ಪೂನ್ ಉದ್ದಿನಬೇಳೆ
  4. 1/2 ಕಪ್ ತೆಂಗಿನತುರಿ
  5. 1 ಟೀಸ್ಪೂನ್ ಅಡುಗೆ ಎಣ್ಣೆ
  6. 1/2 ಟೀಸ್ಪೂನ್ ಸಾಸಿವೆ
  7. 1 ಒಣಮೆಣಸು
  8. ಒಂದು ದೊಡ್ಡ ಚಿಟಿಕೆ ಇಂಗು

ಟೀ ಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1/2 ಟೀಸ್ಪೂನ್ ಕತ್ತರಿಸಿದ ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ)
  2. 1/2 ಟೀಸ್ಪೂನ್ ಕತ್ತರಿಸಿದ ಶುಂಠಿ
  3. ಸ್ವಲ್ಪ ಪುದಿನ ಎಲೆ

 ಉಪ್ಪಿನಕಾಯಿ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
  2. ಒಂದು ಗಾಜಿನ ಪಾತ್ರೆ ಅಥವಾ ಬಾಟಲಿಗೆ ಹಾಕಿ ಉಪ್ಪು ಸೇರಿಸಿ. 
  3. ಜೊತೆಗೆ ಅಚ್ಚಖಾರದ ಪುಡಿ ಮತ್ತು ಅರಿಶಿನ ಸೇರಿಸಿ. 
  4. ಮೇಲಿನಿಂದ ಒಂದು ದೊಡ್ಡ ನಿಂಬೆ ಹಣ್ಣಿನಿಂದ ತೆಗೆದ ರಸ ಸೇರಿಸಿ ಚೆನ್ನಾಗಿ ಕಲಸಿ. ಕೈ, ಚಮಚ ಮತ್ತು ಪಾತ್ರೆಯಲ್ಲಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಿ. 
  5. ಬೇಕೆನಿಸಿದರೆ  ಇನ್ನೊಂದು ನಿಂಬೆಹಣ್ಣಿನ ರಸವನ್ನೂ ಸೇರಿಸಿ. ಉಪ್ಪು ಮತ್ತು ಖಾರವನ್ನು  ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ. 
  6. ಮುಚ್ಚಳ ಮುಚ್ಚಿ ಏಳು ದಿನ ಇಡಿ. ದಿನಕ್ಕೊಮ್ಮೆ ನೀರಿನ ಪಸೆ ಇಲ್ಲದ ಚಮಚದಲ್ಲಿ ಮಗುಚುತ್ತಿರಿ.  
  7. ಏಳರಿಂದ ಹತ್ತು ದಿನದ ನಂತರ ಬೇಕಾದಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಉಪ್ಪಿನಕಾಯಿ ಸವಿಯಲು ಸಿಧ್ಧ. 

ಚಟ್ನಿ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆಯನ್ನು ಉಪ್ಪಿನ ಡಬ್ಬದಲ್ಲಿ ಏಳರಿಂದ ಹತ್ತು ದಿನ ಹಾಕಿಡಿ. 
  2. ಉದ್ದಿನಬೇಳೆ ಮತ್ತು ಮೆಣಸಿನಕಾಯಿಯನ್ನು ಹುರಿಯಿರಿ. 
  3. ಉಪ್ಪಿನಲ್ಲಿ ಹಾಕಿದ ಸಿಪ್ಪೆ, ಉದ್ದಿನಬೇಳೆ, ಮೆಣಸಿನಕಾಯಿ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  4. ಪಾತ್ರೆಗೆ ಬಗ್ಗಿಸಿ ಒಗ್ಗರಣೆ ಕೊಡಿ.ಅನ್ನ ಅಥವಾ ದೋಸೆಯೊಂದಿಗೆ ಬಡಿಸಿ. 

ಟೀ ಮಾಡುವ ವಿಧಾನ:

  1. ನಿಂಬೆಹಣ್ಣಿನ ಸಿಪ್ಪೆ (ಹೊರಭಾಗ ಮಾತ್ರ), ಶುಂಠಿ ಮತ್ತು ಪುದಿನವನ್ನು ಅರ್ಧ ಕಪ್ ನೀರಿನಲ್ಲಿ ಒಂದು ನಿಮಿಷ ಕುದಿಸಿ.
  2. ಶೋಧಿಸಿ ಕುಡಿಯಿರಿ. 

ಮಂಗಳವಾರ, ಡಿಸೆಂಬರ್ 3, 2019

Menasinakayi fry recipe in Kannada | ಮೆಣಸಿನಕಾಯಿ ಫ್ರೈ ಮಾಡುವ ವಿಧಾನ

Menasinakayi fry recipe in Kannada

Menasinakayi fry recipe in Kannada | ಮೆಣಸಿನಕಾಯಿ ಫ್ರೈ ಮಾಡುವ ವಿಧಾನ 


ಮೆಣಸಿನಕಾಯಿ ಫ್ರೈ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 10 - 12 ಹಸಿರುಮೆಣಸಿನಕಾಯಿ (ಕಡಿಮೆ ಖಾರದ್ದು)
  2. 1 ಸ್ಪೂನ್ ಧನಿಯಾ ಪುಡಿ
  3. 1/2 ಸ್ಪೂನ್ ಜೀರಿಗೆ ಪುಡಿ
  4. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
  5. ಒಂದು ದೊಡ್ಡ ಚಿಟಿಕೆ ಇಂಗು
  6. 1 ಟೇಬಲ್ ಚಮಚ ನಿಂಬೆಹಣ್ಣು
  7. ನಿಮ್ಮ ರುಚಿ ಪ್ರಕಾರ ಉಪ್ಪು 
  8. 2 ಟೇಬಲ್ ಚಮಚ ಅಡುಗೆ ಎಣ್ಣೆ

 ಮೆಣಸಿನಕಾಯಿ ಫ್ರೈ ಮಾಡುವ ವಿಧಾನ:

  1. ಮೊದಲಿಗೆ ಹಸಿಮೆಣಸಿನಕಾಯಿಯನ್ನು ತೊಳೆದು ನೀರು ಒರೆಸಿಕೊಳ್ಳಿ.
  2. ಆಮೇಲೆ ಉದ್ದುದ್ದವಾಗಿ ಸೀಳಿ, ಆದರೆ ಎರಡು ಭಾಗ ಮಾಡಬೇಡಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸೀಳಿದ ಹಸಿಮೆಣಸು ಹಾಕಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಹುರಿಯಿರಿ. 
  4. ಆಮೇಲೆ ಅದಕ್ಕೆ ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ.
  5. ಜೊತೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ.
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ. 
  7. ಕೊನೆಯಲ್ಲಿ ನಿಂಬೆಹಣ್ಣಿನ ರಸ ಸೇರಿಸಿ, ಮಗುಚಿ. 
  8. ಮುಚ್ಚಳ ಮುಚ್ಚಿ ಒಂದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. 
  9. ಮುಚ್ಚಳ ತೆಗೆದು, ಇನ್ನೊಮ್ಮೆ ಕೈಯ್ಯಾಡಿಸಿ, ಸ್ಟವ್ ಆಫ್ ಮಾಡಿ. 
  10.  ರೊಟ್ಟಿ, ಚಪಾತಿ, ಮೊಸರನ್ನ ಅಥವಾ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಫೆಬ್ರವರಿ 1, 2019

Carrot uppinakayi recipe in Kannada | ದಿಢೀರ್ ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ

Carrot uppinakayi recipe in Kannada

Carrot uppinakayi recipe in Kannada | ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ

ಕ್ಯಾರಟ್ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೆಚ್ಚಿದ ಕ್ಯಾರಟ್
  2. 1 ದೊಡ್ಡ ನಿಂಬೆಹಣ್ಣು
  3. 5 - 6 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 7 - 8 ಮೆಂತೆ
  7. 12 ಟೇಬಲ್ ಚಮಚ ಉಪ್ಪು

ದಿಢೀರ್ ಕ್ಯಾರಟ್ ಉಪ್ಪಿನಕಾಯಿ ಮಾಡುವ ವಿಧಾನ:

  1. ಒಂದು ಪಾತ್ರೆ ಯಲ್ಲಿ ಸಣ್ಣಗೆ ಕತ್ತರಿಸಿದ ಕ್ಯಾರಟ್ ತೆಗೆದುಕೊಳ್ಳಿ.  
  2. ಅದಕ್ಕೆ ಉಪ್ಪು ಮತ್ತು ನಿಂಬೆರಸ ಹಾಕಿ. ಚೆನ್ನಾಗಿ ಮಗುಚಿ ಐದು ನಿಮಿಷ ನೆನೆಯಲು ಬಿಡಿ. 
  3. ಈಗ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  4. ಆ ಪುಡಿಯನ್ನು ಉಪ್ಪು ಮತ್ತು ನಿಂಬೆರಸ ಬೆರೆಸಿದ ಕ್ಯಾರಟ್ ಗೆ ಹಾಕಿ, ಚೆನ್ನಾಗಿ ಮಗುಚಿ. 
  5. ಕೊನೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. 
  6. ರುಚಿಕರ ಕ್ಯಾರಟ್ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಫ್ರಿಡ್ಜ್ ನಲ್ಲಿ ಒಂದು ವಾರ ಇಡಬಹುದು. 

ಶುಕ್ರವಾರ, ಅಕ್ಟೋಬರ್ 26, 2018

Pudina chutney pudi recipe in Kannada | ಪುದೀನಾ ಚಟ್ನಿ ಪುಡಿ ಮಾಡುವ ವಿಧಾನ

Pudina chutney pudi recipe in Kannada

Pudina chutney pudi recipe in Kannada | ಪುದೀನಾ ಚಟ್ನಿ ಪುಡಿ ಮಾಡುವ ವಿಧಾನ 

ಪುದೀನಾ ಚಟ್ನಿ ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಪುದಿನಾ ಸೊಪ್ಪು
  2. 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
  3. 1/2 ಕಪ್ ಅಗಸೆ ಬೀಜ
  4. 1/2 ಕಪ್ ಕಡಲೆಬೇಳೆ 
  5. 1/2 ಕಪ್ ಉದ್ದಿನ ಬೇಳೆ 
  6. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  7. 1/4 ಟೀಸ್ಪೂನ್ ಇಂಗು
  8. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
  9. 1 ಟೀಸ್ಪೂನ್ ಅಡುಗೆ ಎಣ್ಣೆ

ಪುದೀನಾ ಚಟ್ನಿ ಪುಡಿ ಮಾಡುವ ವಿಧಾನ:

  1. ಪುದಿನ ಸೊಪ್ಪನ್ನು ಆರಿಸಿ, ತೊಳೆದು, ನೀರಾರಿಸಿಕೊಳ್ಳಿ. 
  2. ಒಂದು ಬಾಣಲೆಯನ್ನು ಬಿಸಿ ಮಾಡಿ. ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  3. ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  4. ನಂತರ 1 ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
  5. ನಂತರ ಪುದಿನ ಸೊಪ್ಪನ್ನು ಹಾಕಿ ಸಂಪೂರ್ಣ ನೀರಾರಿ, ಸೊಪ್ಪುಬಾಡುವವರೆಗೆ ಹುರಿಯಿರಿ.  
  6. ಅದಕ್ಕೆ ಒಣ ಕೊಬ್ಬರಿ ಸೇರಿಸಿ ಹುರಿಯಿರಿ. 
  7. ಹುರಿದಿಟ್ಟ ಪದಾರ್ಥಗಳನ್ನು ಸೇರಿಸಿ. 
  8. ಕೊನೆಯಲ್ಲಿ ಇಂಗು, ಉಪ್ಪು ಸಕ್ಕರೆ ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿದು ಸ್ಟವ್ ಆಫ್ ಮಾಡಿ. 
  9. ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಮಂಗಳವಾರ, ಜೂನ್ 12, 2018

Mavinakayi thokku recipe in Kannada | ಮಾವಿನಕಾಯಿ ತೊಕ್ಕು ಮಾಡುವ ವಿಧಾನ

Mavinakayi thokku recipe in Kannada

Mavinakayi thokku recipe in Kannada | ಮಾವಿನಕಾಯಿ ತೊಕ್ಕು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಮಾಧ್ಯಮ ಗಾತ್ರದ ಮಾವಿನಕಾಯಿ
  2. 1 - 2 ಟೇಬಲ್ ಚಮಚ ಅಚ್ಚಖಾರದ ಪುಡಿ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೇಬಲ್ ಚಮಚ ಉಪ್ಪು  ಅಥವಾ ನಿಮ್ಮ ರುಚಿಗೆ ತಕ್ಕಷ್ಟು

ಹುರಿಯಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಮೆಂತೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/4 ಟೀಸ್ಪೂನ್ ಇಂಗು
  3. 4 - 5 ಕರಿಬೇವಿನ ಎಲೆ
  4. 4 ಟೇಬಲ್ ಚಮಚ ಎಣ್ಣೆ

ಮಾವಿನಕಾಯಿ ತೊಕ್ಕು ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು ನೀರಾರಿಸಿ, ತುರಿದಿಟ್ಟುಕೊಳ್ಳಿ. ಬೇಕಾದಲ್ಲಿ ಸಿಪ್ಪೆ ತೆಗೆಯಬಹುದು. ನಾನು ತೆಗೆಯಲಿಲ್ಲ. 
  2. ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ಪುಡಿ ಮಾಡಿಟ್ಟು ಕೊಳ್ಳಿ.
  3. ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  4. ಅದಕ್ಕೆ ತುರಿದ ಮಾವಿನಕಾಯಿಯನ್ನು ಸೇರಿಸಿ. 
  5. ಅಚ್ಚಖಾರದಪುಡಿ, ಅರಿಶಿನ, ಹುರಿದು ಪುಡಿಮಾಡಿದ ಮೆಂತೆ+ಸಾಸಿವೆ ಮತ್ತು ಉಪ್ಪು ಹಾಕಿ. 
  6.  ಸಣ್ಣ ಉರಿಯಲ್ಲಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಮಗುಚಿ. 6 - 7 ನಿಮಿಷ ಬೇಕಾಗಬಹುದು. 
  7. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  8. ಮಾವಿನಕಾಯಿ ತೊಕ್ಕು ಸವಿಯಲು ಸಿದ್ಧ. ಬಿಸಿ ಅನ್ನ ಅಥವಾ ಮೊಸರನ್ನದೊಂದಿಗೆ ಬಡಿಸಿ. 

ಸೋಮವಾರ, ಮೇ 21, 2018

Sabakki sandige recipe in Kannada | ಸಾಬಕ್ಕಿ ಸಂಡಿಗೆ ಮಾಡುವ ವಿಧಾನ

Sabakki sandige recipe in Kannada

Sabakki sandige recipe in Kannada | ಸಬಕ್ಕಿ ಸಂಡಿಗೆ ಮಾಡುವ ವಿಧಾನ

ಸಬ್ಬಕ್ಕಿ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಾಬಕ್ಕಿ 
  2. 2 ಕಪ್ ನೀರು
  3. 2 - 3 ಹಸಿರುಮೆಣಸಿನಕಾಯಿ ಅಥವಾ ನಿಮ್ಮ ರುಚಿ ಪ್ರಕಾರ
  4. 1 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿ ಪ್ರಕಾರ
  5. 1/2 ಟೀಸ್ಪೂನ್ ಜೀರಿಗೆ
  6. 1/4 ಟೀಸ್ಪೂನ್ ಇಂಗು
  7. ಎಣ್ಣೆ ಕಾಯಿಸಲು

ಸಾಬಕ್ಕಿ ಸಂಡಿಗೆ ಮಾಡುವ ವಿಧಾನ:

  1. ಸಾಬಕ್ಕಿಯನ್ನು ಮೂವತ್ತು ನಿಮಿಷಗಳ ಕಾಲ ನೀರಿನಲ್ಲಿನೆನೆಸಿಡಿ. 
  2. ನಂತರ ನೀರು ಬಗ್ಗಿಸಿ, ಎರಡು ಕಪ್ ನಷ್ಟು ನೀರು ಸೇರಿಸಿ (೧ ಕಪ್ ಸಾಬಕ್ಕಿಗೆ ೪ ಕಪ್ ನೀರು). 
  3. ಸಾಬಕ್ಕಿಯನ್ನು ಮೆತ್ತಗೆ ಬೇಯಿಸಿ. ನಾನು ಕುಕ್ಕರ್ ನಲ್ಲಿ ಎರಡು ವಿಷಲ್ ಮಾಡಿ ಬೇಯಿಸುತ್ತೇನೆ.  
  4. ನಂತ್ರ ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಮಿಕ್ಸಿಯಲ್ಲೂ ಪುಡಿ ಮಾಡಬಹುದು. 
  5. ಅದನ್ನು ಬೇಯಿಸಿದ ಸಾಬಕ್ಕಿಗೆ ಹಾಕಿ. 
  6. ಜೀರಿಗೆ ಮತ್ತು ಇಂಗನ್ನು ಸೇರಿಸಿ. ಚೆನ್ನಾಗಿ ಕಲಸಿ. 
  7. ಬಿಸಿ ಆರಿದ ಮೇಲೆ, ಬಟ್ಟೆ ಅಥವಾ ಪ್ಲಾಸ್ಟಿಕ್ ಶೀಟ್ನ ಮೇಲೆ ಸಂಡಿಗೆ ಹಾಕಿ. 
  8. ಬಿಸಿಲಿನಲ್ಲಿ ಗರಿಗರಿಯಾಗುವವರೆಗೆ ಒಣಗಿಸಿ. 
  9. ಎರಡು ದಿನದ ನಂತ್ರ ತಿರುಗಿಸಿ ಹಾಕಿ ಒಣಗಿಸಿ. ಒಣಗಲು ಬೇಕಾದ ದಿನ, ಬಿಸಿಲಿನ ಮೇಲೆ ಅವಲಂಬಿತವಾಗಿರುತ್ತದೆ. 
  10. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಒಣಗಿಸಿದ ಸಂಡಿಗೆಯನ್ನು ಬಿಸಿ ಎಣ್ಣೆಗೆ ಹಾಕಿ ಕಾಯಿಸಿ.
  11. ಊಟ, ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

Related Posts Plugin for WordPress, Blogger...