ಪಲ್ಯ-ಗೊಜ್ಜು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪಲ್ಯ-ಗೊಜ್ಜು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜೂನ್ 4, 2025

Badanekayi shenga pudi palya recipe in Kannada | ಬದನೇಕಾಯಿ ಪಲ್ಯ ಮಾಡುವ ವಿಧಾನ

 

Badanekayi shenga pudi palya recipe in Kannada

Badanekayi shenga pudi palya recipe in Kannada | ಬದನೇಕಾಯಿ ಪಲ್ಯ ಮಾಡುವ ವಿಧಾನ 

ಬದನೇಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 7 - 8 ಸಣ್ಣ ಗಾತ್ರದ ಬದನೆ ಕಾಯಿ
  2. 1/4 ಕಪ್ ಶೇಂಗಾ ಅಥವಾ ನೆಲಗಡಲೆ
  3. 1 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 7 - 8 ಕರಿಬೇವಿನ ಎಲೆ
  7. 2 - 3 ಹಸಿರು ಮೆಣಸಿನಕಾಯಿ
  8. 1 ದೊಡ್ಡ ಈರುಳ್ಳಿ
  9. 1/4 ಟೀಸ್ಪೂನ್ ಅರಿಶಿನ ಪುಡಿ
  10. ಒಂದು ದೊಡ್ಡ ಚಿಟಿಕೆ ಇಂಗು
  11. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  12. ನಿಮ್ಮ ರುಚಿ ಪ್ರಕಾರ ಉಪ್ಪು
  13. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಬದನೇಕಾಯಿ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಬದನೆಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿ ನೀರಿನಲ್ಲಿ ಹಾಕಿಟ್ಟು ಕೊಳ್ಳಿ.
  2. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಶೇಂಗಾ ಅಥವಾ ನೆಲಗಡಲೆಯನ್ನು ಕಂದು ಬಣ್ಣ ಬಂದು ಗರಿಗರಿ ಆಗುವವರೆಗೆ ಹುರಿಯಿರಿ. 
  4. ಬಿಸಿ ಕಡಿಮೆ ಆದಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ
  5. ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ. 
  6. ಸಾಸಿವೆ ಸಿಡಿದ ಕೂಡಲೇ ಸೀಳಿಟ್ಟ ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ. 
  7. ಕತ್ತರಿಸಿಟ್ಟ ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿಯಿರಿ. 
  8. ಅರಿಶಿನ ಮತ್ತು ಇಂಗು ಸೇರಿಸಿ. 
  9. ನಂತರ ನೀರಿನಲ್ಲಿ ಹಾಕಿದ ಬದನೆಕಾಯಿಯನ್ನು, ನೀರು ಹಿಂಡಿ ತೆಗೆದು ಹಾಕಿ.
  10. ರುಚಿಗೆ ತಕ್ಕಂತೆ ಉಪ್ಪು ಹಾಕಿ. 
  11. ರುಚಿಗೆ ತಕ್ಕಂತೆ ಹುಣಿಸೆರಸ ಹಾಕಿ ಮಗುಚಿ. 
  12. ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ ಬೇಯಿಸಿ.
  13. ಕೊನೆಯಲ್ಲಿ ಪುಡಿ ಮಾಡಿದ ಶೇಂಗಾ ಹಾಕಿ ಕಲಸಿ. ಸ್ಟವ್ ಆಫ್ ಮಾಡಿ. 
  14.  ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಭಾನುವಾರ, ಆಗಸ್ಟ್ 4, 2024

Bendekai mirpudi recipe in Kannada | ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ

 

Bendekai mirpudi recipe in Kannada

Bendekai mirpudi recipe in Kannada | ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ

ಬೆಂಡೆಕಾಯಿ ಮಿರ್ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/4 kg ಬೆಂಡೆಕಾಯಿ
  2. 1 ಕಪ್ ಒಣಕೊಬ್ಬರಿ ತುರಿ 
  3. 1/2 ಕಪ್ ಹುರಿಗಡಲೆ
  4. 1 ಟೇಬಲ್ ಚಮಚ ಅಚ್ಚಖಾರದ ಪುಡಿ (ರುಚಿಗೆ ತಕ್ಕಂತೆ ಹೊಂದಿಸಿ)
  5. 2 ಟೀಸ್ಪೂನ್ ಉಪ್ಪು (ರುಚಿಗೆ ತಕ್ಕಂತೆ ಹೊಂದಿಸಿ)
  6. 2 ಟೀಸ್ಪೂನ್ ಬೆಲ್ಲ (ರುಚಿಗೆ ತಕ್ಕಂತೆ ಹೊಂದಿಸಿ)
  7. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  8. 1/2 ಟೀಸ್ಪೂನ್ ಜೀರಿಗೆ
  9. ಎಣ್ಣೆ ಬೆಂಡೆಕಾಯಿ ಕಾಯಿಸಲು

ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ:

  1. ಬೆಂಡೆಕಾಯಿಯನ್ನು ತೊಳೆದು ನೀರಾರಿಸಿ. 
  2. ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 
  4. ಕತ್ತರಿಸಿದ ಬೆಂಡೆಕಾಯಿಯನ್ನು ಬಿಸಿ ಎಣ್ಣೆಗೆ ಹಾಕಿ. 
  5. ಹೊಂಬಣ್ಣ ಬರುವವರೆಗೆ ಖಾಯಿಸಿ ತೆಗೆಯಿರಿ. 
  6. ನಂತರ ನಂತ್ರ ಒಂದು ಮಿಕ್ಸಿಜಾರಿನಲ್ಲಿ ಕೊಬ್ಬರಿ ತುರಿ ತೆಗೆದುಕೊಳ್ಳಿ. 
  7. ಅದಕ್ಕೆ ಹುರಿಗಡಲೆ, ಅಚ್ಚಖಾರದ ಪುಡಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಜೀರಿಗೆ ಸೇರಿಸಿ. 
  8. ನುಣ್ಣಗೆ ಪುಡಿ ಮಾಡಿ. 
  9. ಪುಡಿಯನ್ನು ಕರಿದು ತೆಗೆದ ಬೆಂಡೆಕಾಯಿಗೆ ಸೇರಿಸಿ, ಕಲಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 15 ದಿನಗಳ ಕಾಲ ಹಾಳಾಗುವುದಿಲ್ಲ. 
  10. ಬಿಸಿಯಾದ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ. ಚಟ್ನಿ ಪುಡಿಯಂತೆ ಕಲಸಿ ತಿನ್ನಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಏಪ್ರಿಲ್ 8, 2024

Baale dindina palya recipe in Kannada | ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ

 

Baale dindina palya recipe in Kannada

Baale dindina palya recipe in Kannada | ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ 

bale dindu palya video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 20cm ಉದ್ದದ ಬಾಳೆ ದಿಂಡು
  2. 1/4 ಕಪ್ ಹೆಸರುಬೇಳೆ
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 1 ಒಣ ಮೆಣಸಿನಕಾಯಿ
  7. 1 - 2 ಹಸಿಮೆಣಸಿನಕಾಯಿ
  8. 7 - 8 ಕರಿಬೇವಿನ ಎಲೆ
  9. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  10. 1 ದೊಡ್ಡ ಚಿಟಿಕೆ ಇಂಗು
  11. 1/4 ಕಪ್ ತೆಂಗಿನ ತುರಿ
  12. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. 1 - 2 ಟೇಬಲ್ ಚಮಚ ಅಡುಗೆ ಎಣ್ಣೆ
  14. ಉಪ್ಪು ರುಚಿಗೆ ತಕ್ಕಷ್ಟು

ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ:

  1. ಹೆಸರುಬೇಳೆಯನ್ನು ಹದಿನೈದು ನಿಮಿಷ ನೆನೆಸಿಕೊಳ್ಳಿ. 
  2. ಬಾಳೆ ದಿಂಡಿನ ಹೊರಗಿನ ಸಿಪ್ಪೆಗಳನ್ನು ತೆಗೆದು, ಒಳಗಿನ ದಿಂಡನ್ನು ಮಾತ್ರ ತೆಗೆದುಕೊಳ್ಳಿ. 
  3. ಚಕ್ರಗಳನ್ನಾಗಿ ಕತ್ತರಿಸಿ, ನಾರನ್ನು ತೆಗೆದು, ಆಮೇಲೆ ಸಣ್ಣದಾಗಿ ಕತ್ತರಿಸಿಕೊಳ್ಳಿ. 
  4. ಒಂದು ಪಾತ್ರೆಯಲ್ಲಿ, ನೀರು ಮತ್ತು ನಿಂಬೆಹಣ್ಣಿನ ರಸ ತೆಗೆದುಕೊಂಡು, ಅದರಲ್ಲಿ ಕತ್ತರಿಸಿದ ಬಾಳೆದಿಂಡನ್ನು ನೆನೆಸಿಡಿ.
  5. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. 
  6. ಸಾಸಿವೆ ಸಿಡಿದ ಕೂಡಲೇ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ.  
  7. ಅರಿಶಿನ ಮತ್ತು ಇಂಗು ಸೇರಿಸಿ. 
  8. ನೆನೆಸಿದ ಹೆಸರುಬೇಳೆ ಹಾಕಿ ಮಗುಚಿ.
  9. ಅದಕ್ಕೆ ಕತ್ತರಿಸಿದ ಬಾಳೆದಿಂಡನ್ನು ಹಾಕಿ.
  10.  ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮಗುಚಿ.
  11. ಮುಚ್ಚಳ ಮುಚ್ಚಿ ಹೆಸರುಬೇಳೆ ಮೆತ್ತಗಾಗುವವರೆಗೆ ಬೇಯಿಸಿ. 
  12. ಮೆತ್ತಗೆ ಬೆಂದ ಮೇಲೆ ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. 
  13. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಡಿಸೆಂಬರ್ 20, 2023

Gobi palya recipe in Kannada | ಹೂಕೋಸು ಪಲ್ಯ ಮಾಡುವ ವಿಧಾನ

 

Gobi palya recipe in Kannada

Gobi palya recipe in Kannada | ಹೂಕೋಸು ಪಲ್ಯ ಮಾಡುವ ವಿಧಾನ

ಹೂಕೋಸು ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1 ಹೂಕೋಸು
  2. 1 ದೊಡ್ಡ ಈರುಳ್ಳಿ
  3. 2 ಟೊಮೇಟೊ
  4. ಸ್ವಲ್ಪ ಕರಿಬೇವು
  5. 1/2 ಟೀಸ್ಪೂನ್ ಸಾಸಿವೆ
  6. 1/2 ಟೀಸ್ಪೂನ್ ಜೀರಿಗೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. ಒಂದು ದೊಡ್ಡ ಚಿಟಿಕೆ ಇಂಗು
  9. 1 ಟೀಸ್ಪೂನ್ ಅಚ್ಚಖಾರದ ಪುಡಿ
  10. 1 ಟೀಸ್ಪೂನ್ ಧನಿಯಾ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 1/4 ಟೀಸ್ಪೂನ್ ಜೀರಿಗೆ ಪುಡಿ
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. ನಿಮ್ಮ ರುಚಿ ಪ್ರಕಾರ ಉಪ್ಪು
  15. 1 ಟೇಬಲ್ ಚಮಚ ಅಡುಗೆ ಎಣ್ಣೆ

 ಹೂಕೋಸು ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಹೂಕೋಸನ್ನುಬಿಡಿಸಿ, ತೊಳೆದು, ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಅರ್ಧ ಚಮಚ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಎರಡು ನಿಮಿಷ ಬೇಯಿಸಿ. 
  3. ನಂತರ ನೀರು ಬಗ್ಗಿಸಿ ತೆಗೆದಿಟ್ಟುಕೊಳ್ಳಿ. 
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿಕೊಳ್ಳಿ. 
  5. ಸಾಸಿವೆ ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಅರಿಶಿನ ಮತ್ತು ಇಂಗು ಸೇರಿಸಿ. 
  7. ಕತ್ತರಿಸಿದ ಟೊಮೇಟೊ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  8. ಅಚ್ಚಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಜೀರಿಗೆ ಪುಡಿ ಸೇರಿಸಿ ಮಗುಚಿ. 
  9. ಸ್ವಲ್ಪ ನೀರನ್ನು ಸೇರಿಸಿ, ಕುದಿಸಿ, ಗೊಜ್ಜು ತಯಾರಿಸಿಕೊಳ್ಳಿ. 
  10. ಅದಕ್ಕೆ ಬೇಯಿಸಿದ ಹೂಕೋಸು ಸೇರಿಸಿ. 
  11. ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  12. ಮಗುಚಿ, ಮುಚ್ಚಳ ಮುಚ್ಚಿ ಹೂಕೋಸು ಮೆತ್ತಗಾಗುವವರೆಗೆ ಬೇಯಿಸಿ.  
  13. ಕೊನೆಯಲ್ಲಿ ಬೇಕಾದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಸ್ಟವ್ ಆಫ್ ಮಾಡಿ. 
  14. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಬುಧವಾರ, ಸೆಪ್ಟೆಂಬರ್ 27, 2023

Sabbasige soppu palya recipe in Kannada | ಸಬ್ಬಸಿಗೆ ಸೊಪ್ಪು ಪಲ್ಯ ಮಾಡುವ ವಿಧಾನ

 

Sabbasige soppu palya recipe in Kannada

Sabbasige soppu palya recipe in Kannada | ಸಬ್ಬಸಿಗೆ ಸೊಪ್ಪು ಪಲ್ಯ ಮಾಡುವ ವಿಧಾನ

ಸಬ್ಬಸಿಗೆ ಸೊಪ್ಪು ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಸಬ್ಬಸಿಗೆ ಸೊಪ್ಪು
  2. 1/2 ಕಪ್ ಹೆಸರುಬೇಳೆ
  3. 1 ಟೇಬಲ್ ಚಮಚ ಅಡುಗೆ ಎಣ್ಣೆ
  4. 1/2 ಟೀಸ್ಪೂನ್ ಸಾಸಿವೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 4 - 5 ಕರಿಬೇವಿನ ಎಲೆ
  8. 1 - 2 ಹಸಿ ಮೆಣಸಿನಕಾಯಿ
  9. 1 ಈರುಳ್ಳಿ
  10. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
  11. ಒಂದು ದೊಡ್ಡ ಚಿಟಿಕೆ ಇಂಗು
  12. 1/4 ಕಪ್ ತೆಂಗಿನ ತುರಿ
  13. ಉಪ್ಪು ರುಚಿಗೆ ತಕ್ಕಷ್ಟು

ಸಬ್ಬಸಿಗೆ ಸೊಪ್ಪು ಪಲ್ಯ ಮಾಡುವ ವಿಧಾನ:

  1. ಹೆಸರುಬೇಳೆಯನ್ನು 15 ನಿಮಿಷ ನೆನೆಸಿಕೊಳ್ಳಿ.
  2. ಸಬ್ಬಸಿಗೆ ಸೊಪ್ಪನ್ನು ಆರಿಸಿ, ತೊಳೆದು ಕತ್ತರಿಸಿ.
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆಯ ಒಗ್ಗರಣೆ ಮಾಡಿ. 
  4. ಸಾಸಿವೆ ಸಿಡಿದ ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ.
  5. ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹುರಿಯಿರಿ. 
  6. ಅರಿಶಿನ ಮತ್ತು ಇಂಗು ಸೇರಿಸಿ. 
  7. ನೆನೆಸಿದ ಹೆಸರುಬೇಳೆ ಹಾಕಿ ಮಗುಚಿ. 
  8.  ಕತ್ತರಿಸಿದ ಸಬ್ಬಸಿಗೆ ಸೊಪ್ಪು ಸೇರಿಸಿ ಮಗುಚಿ.
  9. ಸುಮಾರು 1/2 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಹೆಸರುಬೇಳೆ ಮೆತ್ತಗಾಗುವವರೆಗೆ ಬೇಯಿಸಿ. 
  10. ಕೊನೆಯಲ್ಲಿ ರುಚಿಗೆ ತಕ್ಕಂತೆ ಉಪ್ಪು ಮತ್ತು ತೆಂಗಿನತುರಿ ಸೇರಿಸಿ. 
  11. ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. 
  12. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಏಪ್ರಿಲ್ 25, 2023

Heerekai rasa palya recipe in kannada | ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ

 

Heerekai rasa palya recipe in kannada

Heerekai rasa palya recipe in kannada | ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ

ಹೀರೆಕಾಯಿ ರಸ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಹೀರೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 5 - 6 ಕರಿಬೇವು
  5. 1 ಈರುಳ್ಳಿ
  6. 1 ಟೊಮೇಟೊ
  7. 1/4 ಟೀಸ್ಪೂನ್ ಅರಿಶಿನ
  8. ದೊಡ್ಡ ಚಿಟಿಕೆ ಇಂಗು
  9. ಉಪ್ಪು ರುಚಿಗೆ ತಕ್ಕಂತೆ
  10. 2 ಟೇಬಲ್ ಚಮಚ ಅಡುಗೆ ಎಣ್ಣೆ

ಮಸಾಲೆಪುಡಿಗೆ ಬೇಕಾಗುವ ಪದಾರ್ಥಗಳು:

  1. 2 ಟೇಬಲ್ ಚಮಚ ಶೇಂಗಾ ಅಥವಾ ಕಡಲೆಕಾಯಿ
  2. 3 - 4 ಒಣಮೆಣಸಿನಕಾಯಿ
  3. 1 ಟೇಬಲ್ ಚಮಚ ಕೊತ್ತಂಬರಿ ಬೀಜ
  4. 1 ಟೇಬಲ್ ಚಮಚ ಎಳ್ಳು
  5. 1/4 ಕಪ್ ಒಣಕೊಬ್ಬರಿ

ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ:

  1. ಹೀರೆಕಾಯಿಯನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ತೆಳುವಾದ ಸಿಪ್ಪೆ ತೆಗೆದರೆ ಸಾಕು. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಕರಿಬೇವು ಸೇರಿಸಿ. 
  4. ಕತ್ತರಿಸಿದ ಈರುಳ್ಳಿ ಮತ್ತು ದೊಣ್ಣೆಮೆಣಸಿನಕಾಯಿ ಸೇರಿಸಿ, ಹುರಿಯಲು ಪ್ರಾರಂಭಿಸಿ. 
  5. ಅರಿಶಿನ ಮತ್ತು ಇಂಗು ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  6. ಕತ್ತರಿಸಿದ ಟೊಮೇಟೊ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  7. ಕತ್ತರಿಸಿದ ಹೀರೆಕಾಯಿ ಹಾಕಿ ಹುರಿಯಿರಿ. 
  8. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಹೀರೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  9. ಹೀರೆಕಾಯಿ ಬೇಯುವ ಸಮಯದಲ್ಲಿ, ಮಸಾಲೆ ತಯಾರಿಸೋಣ. ಅದಕ್ಕೆ ಮೊದಲಿಗೆ ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿ ಮತ್ತು ಶೇಂಗಾ ಹುರಿಯಿರಿ. 
  10. ಶೇಂಗಾ ಹುರಿದ ಮೇಲೆ, ಅದೇ ಬಾಣಲೆಗೆ ಎಳ್ಳು ಮತ್ತು ಕೊತ್ತಂಬರಿ ಬೀಜ ಸೇರಿಸಿ ಹುರಿಯಿರಿ. 
  11. ಆನಂತರ ಒಣಕೊಬ್ಬರಿ ಸೇರಿಸಿ ಹುರಿಯಿರಿ. 
  12. ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. 
  13. ಬೇಯುತ್ತಿರುವ ಹೀರೇಕಾಯಿಗೆ ರುಚಿಗೆ ತಕ್ಕಂತೆ ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. 
  14. ತಯಾರಿಸಿದ ಮಸಾಲೆ ಪುಡಿ ಹಾಕಿ. 
  15. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಸಿಹಿಯನ್ನು ರುಚಿಗೆ ತಕ್ಕಂತೆ ಹೊಂದಿಸಿ. 
  16. ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
  17. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಗುರುವಾರ, ಏಪ್ರಿಲ್ 13, 2023

Alu jeera recipe in Kannada | ಆಲೂಗಡ್ಡೆ ಜೀರಿಗೆ ಪಲ್ಯ ಮಾಡುವ ವಿಧಾನ

 

Alu jeera recipe in Kannada

Alu jeera recipe in Kannada | ಆಲೂಗಡ್ಡೆ ಜೀರಿಗೆ ಪಲ್ಯ ಮಾಡುವ ವಿಧಾನ 

ಆಲೂಗಡ್ಡೆ ಜೀರಿಗೆ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 3  ಮಧ್ಯಮ ಗಾತ್ರದ ಆಲೂಗಡ್ಡೆ
  2. 2 ಚಮಚ ಜೀರಿಗೆ
  3. 1 ಹಸಿಮೆಣಸಿನಕಾಯಿ
  4. 1/4 ಟೀಸ್ಪೂನ್ ಅರಿಶಿನ ಪುಡಿ
  5. ಒಂದು ದೊಡ್ಡ ಚಿಟಿಕೆ ಇಂಗು
  6. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  7. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1/2 ಟೀಸ್ಪೂನ್ ನಿಂಬೆರಸ (ಬೇಕಾದಲ್ಲಿ)
  9. ನಿಮ್ಮ ರುಚಿ ಪ್ರಕಾರ ಉಪ್ಪು 
  10. 1 ಟೇಬಲ್ ಚಮಚ ಅಡುಗೆ ಎಣ್ಣೆ

 ಆಲೂಗಡ್ಡೆ ಜೀರಿಗೆ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ. ತುಂಬ ಮೆತ್ತಗೆ ಬೇಯಿಸುವುದು ಬೇಡ. 
  2. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಮತ್ತು ಹಸಿಮೆಣಸಿನಕಾಯಿಯ ಒಗ್ಗರಣೆ ಮಾಡಿಕೊಳ್ಳಿ. 
  3. ಜೀರಿಗೆ ಸಿಡಿದ ಮೇಲೆ ಚೂರು ಮಾಡಿದ ಆಲೂಗಡ್ಡೆ ಸೇರಿಸಿ ಹುರಿಯಿರಿ. 
  4. ಅಚ್ಚಖಾರದ ಪುಡಿ, ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ. 
  5. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ. 
  6. ರುಚಿಗೆ ತಕ್ಕಂತೆ ಉಪ್ಪು ಮತ್ತು ನಿಂಬೆ ರಸ ಸೇರಿಸಿ. 
  7. ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  8. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ. ಹಾಗೆಯೆ ಸಂಜೆ ತಿಂಡಿಗೂ ಬಡಿಸಬಹುದು. 

ಶುಕ್ರವಾರ, ಮಾರ್ಚ್ 3, 2023

Dal fry recipe in Kannada | ದಾಲ್ ಫ್ರೈ ಮಾಡುವ ವಿಧಾನ

 

Dal fry recipe in Kannada

Dal fry recipe in Kannada | ದಾಲ್ ಫ್ರೈ ಮಾಡುವ ವಿಧಾನ 

ದಾಲ್ ಫ್ರೈ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೊಗರಿಬೇಳೆ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. ಒಂದು ಈರುಳ್ಳಿ
  5. 7 - 8 ಕರಿಬೇವಿನ ಎಲೆ
  6. 1 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  7. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  8. 1 ಟೊಮೇಟೊ
  9. 1/4 ಟೀಸ್ಪೂನ್ ಅರಶಿನ ಪುಡಿ
  10. 1 ಟೀಸ್ಪೂನ್ ಅಚ್ಚಖಾರದ ಪುಡಿ
  11. 1 ಟೀಸ್ಪೂನ್ ಗರಂ ಮಸಾಲಾ
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. ಉಪ್ಪು ರುಚಿಗೆ ತಕ್ಕಷ್ಟು
  14. 1 ಟೇಬಲ್ ಚಮಚ ಅಡುಗೆ ಎಣ್ಣೆ

ದಾಲ್ ಫ್ರೈ ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು, ಚಿಟಿಕೆ ಅರಿಶಿನ ಮತ್ತು ನಾಲ್ಕೈದು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  2. ಬೇಯಿಸಿದ ಬೇಳೆಯನ್ನು ಸೌಟಿನಲ್ಲಿ ಮಸೆದು ಪಕ್ಕಕ್ಕಿಡಿ.  
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  4.  ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  5. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಗುಚಿ. 
  6. ಕತ್ತರಿಸಿದ ಟೊಮೇಟೊ ಸೇರಿಸಿ, ಮೆತ್ತಗಾಗುವವರೆಗೆ ಹುರಿಯಿರಿ.
  7. ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಸೇರಿಸಿ. 
  8. ಮಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
  9. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
  10. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
  11. ಸ್ಟವ್ ಆಫ್ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಫೆಬ್ರವರಿ 24, 2023

Mavinakayi neer gojju recipe in Kannada | ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ

 

Mavinakayi neer gojju recipe in Kannada

Mavinakayi neer gojju recipe in Kannada | ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ 

ಮಾವಿನಕಾಯಿ ನೀರ್ ಗೊಜ್ಜು ವಿಡಿಯೋ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಣ್ಣ ಗಾತ್ರದ ಮಾವಿನಕಾಯಿ
  2. 2 - 4 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ 
  3. 1 ಒಣಮೆಣಸಿನಕಾಯಿ
  4. 7 - 8 ಎಸಳು ಬೆಳ್ಳುಳ್ಳಿ
  5. ಒಂದು ದೊಡ್ಡ ಚಿಟಿಕೆ ಇಂಗು 
  6. 4 - 5 ಕರಿಬೇವು
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1 ಟೇಬಲ್ ಚಮಚ ಅಡುಗೆ ಎಣ್ಣೆ

ಮಾವಿನಕಾಯಿ ನೀರ್ ಗೊಜ್ಜು ಮಾಡುವ ವಿಧಾನ:

  1. ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ. 
  2. ಒಂದು ಪಾತ್ರೆಗೆ ಕತ್ತರಿಸಿದ ಮಾವಿನಕಾಯಿ ಮತ್ತು ಹಸಿರು ಮೆಣಸಿನ ಕಾಯಿ ಸೇರಿಸಿ. 
  3. ಒಂದು ಕಪ್ ನೀರು ಹಾಕಿ ಮಾವಿನಕಾಯಿ ಮೆತ್ತಗಾಗುವವರೆಗೆ ಬೇಯಿಸಿ. ಒಂದೈದು ನಿಮಿಷ ಸಾಕಾಗುತ್ತದೆ. 
  4. ಬಿಸಿ ಆರಿದ ಮೇಲೆ ಚನ್ನಾಗಿ ಮಸೆದುಕೊಳ್ಳಿ ಅಥವಾ ಮಿಕ್ಸಿಗೆ ಹಾಕಿ ಅರೆಯಿರಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ. 
  6. ಕರಿಬೇವು ಮತ್ತು ಕತ್ತರಿಸಿದ ಬೆಳ್ಳುಳಿ ಹಾಕಿ ಹುರಿಯಿರಿ. 
  7. ಇಂಗನ್ನು ಸೇರಿಸಿ. 
  8. ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. 
  9. ಮಸೆದಿಟ್ಟ ಮಾವಿನಕಾಯಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ. 
  11. ಬಿಸಿ ಅನ್ನದೊಂದಿಗೆ ಸವಿದು ಆನಂದಿಸಿ. 

ಶುಕ್ರವಾರ, ಫೆಬ್ರವರಿ 3, 2023

Southekai mosaru palya recipe in kannada | ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ

 

Southekai mosaru palya in Kannada

Southekai mosaru palya recipe in kannada | ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ

ಸೌತೆಕಾಯಿ ಮೊಸರು ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ 
  2. 1/2 ಕಪ್ ಮೊಸರು
  3. 1 ಈರುಳ್ಳಿ
  4. 1 - 2 ಹಸಿ ಮೆಣಸಿನಕಾಯಿ
  5. 1 ಟೇಬಲ್ ಚಮಚ ಕರಿಬೇವು
  6. ದೊಡ್ಡ ಚಿಟಿಕೆ ಇಂಗು 
  7. ದೊಡ್ಡ ಚಿಟಿಕೆ ಅರಿಶಿನ
  8. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಕೆಂಪು ಮೆಣಸಿನಕಾಯಿ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ:

  1. ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  3. ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. 
  4. ಚೂರು ಮಾಡಿದ ಒಣಮೆಣಸಿನಕಾಯಿಯನ್ನು ಸೇರಿಸಿ. 
  5. ಕತ್ತರಿಸಿದ ಈರುಳ್ಳಿ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  6. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  7. ಕತ್ತರಿಸಿದ ಸೌತೆಕಾಯಿ ಸೇರಿಸಿ. 
  8. ಉಪ್ಪು, ಅರಿಶಿನ ಮತ್ತು ಇಂಗು ಸೇರಿಸಿ. 
  9. ಸೌತೆಕಾಯಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ.
  10. ಸ್ಟವ್ ಆಫ್ ಮಾಡಿ ಬಿಸಿ ಕಡಿಮೆ ಆಗುವವರೆಗೆ ಬಿಡಿ. 
  11. ಕಡೆದ ಗಟ್ಟಿ ಮೊಸರು ಸೇರಿಸಿ ಕಲಸಿ.
  12. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಶುಕ್ರವಾರ, ನವೆಂಬರ್ 25, 2022

Marige gojju recipe in Kannada | ಮರಿಗೆ ಗೊಜ್ಜು ಮಾಡುವ ವಿಧಾನ

 

Marige gojju recipe in Kannada

Marige gojju recipe in Kannada | ಮರಿಗೆ ಗೊಜ್ಜು ಮಾಡುವ ವಿಧಾನ

ಮರಿಗೆ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 3 - 4 ಒಣ ಮೆಣಸಿನಕಾಯಿ
  2. 3 ಟೀಸ್ಪೂನ್ ಉದ್ದಿನಬೇಳೆ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1 ಟೀಸ್ಪೂನ್ ಎಳ್ಳು
  5. 1/2 ಟೀಸ್ಪೂನ್ ಸಾಸಿವೆ
  6. 4 - 5 ಎಸಳು ಬೆಳ್ಳುಳ್ಳಿ ಅಥವಾ ದೊಡ್ಡ ಚಿಟಿಕೆ ಇಂಗು
  7. 1/2 ಕಪ್ ಮೊಸರು
  8. 1 ಟೀಸ್ಪೂನ್ ಅಡುಗೆ ಎಣ್ಣೆ
  9. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. ಸ್ವಲ್ಪ ಕರಿಬೇವು
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಮರಿಗೆ ಗೊಜ್ಜು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಮೊದಲಿಗೆ ಒಣ ಮೆಣಸಿನಕಾಯಿಯನ್ನು ಹುರಿಯಿರಿ. 
  2. ನಂತರ ಉದ್ದಿನಬೇಳೆ ಮತ್ತು ಕೊತ್ತಂಬರಿ ಬೀಜ ಸೇರಿಸಿ ಉದ್ದಿನಬೇಳೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. 
  3. ಆಮೇಲೆ ಎಳ್ಳು ಮತ್ತು ಸಾಸಿವೆ ಸೇರಿಸಿ, ಸಾಸಿವೆ ಸಿಡಿಯುವವರೆಗೆ ಹುರಿಯಿರಿ. 
  4. ಕೊನೆಯಲ್ಲಿ  ಇಂಗು ಅಥವಾ ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ (ನಾನು ಇಂಗು ಹಾಕಿದ್ದೆ).
  5. ಉಪ್ಪು ಸೇರಿಸಿ, ಒಂದು ಸುತ್ತು ಮಗುಚಿ ಸ್ಟವ್ ಆಫ್ ಮಾಡಿ. 
  6. ಬಿಸಿ ಆರಿದ ಮೇಲೆ ಮಿಕ್ಸಿ ಜಾರ್ನಲ್ಲಿ ಹುರಿದ ಪದಾರ್ಥಗಳನ್ನು ತೆಗೆದುಕೊಂಡು, ತರಿತರಿಯಾಗಿ ಪುಡಿ ಮಾಡಿಕೊಳ್ಳಿ. 
  7.  ಕೊನೆಯಲ್ಲಿ ಮೊಸರು ಸೇರಿಸಿ ಒಂದೆರಡು ಸುತ್ತು ಅರೆಯಿರಿ. 
  8. ಒಂದು ಪಾತ್ರೆಗೆ ಬಗ್ಗಿಸಿ. ಈ ಗೊಜ್ಜಿಗೆ ಒಗ್ಗರಣೆ ಹಾಕಬೇಕಾಗಿಲ್ಲ. ಬೇಕಾದಲ್ಲಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಜುಲೈ 1, 2022

Eerulli bhaji recipe in Kannada | ಈರುಳ್ಳಿ ಭಾಜಿ ಮಾಡುವ ವಿಧಾನ

 

Eerulli bhaji recipe in Kannada

Eerulli bhaji recipe in Kannada | ಈರುಳ್ಳಿ ಭಾಜಿ ಮಾಡುವ ವಿಧಾನ 

ಈರುಳ್ಳಿ ಭಾಜಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 2  ದೊಡ್ಡ ಗಾತ್ರದ ಈರುಳ್ಳಿ
  2. 1 ಟೊಮೇಟೊ
  3. 1/2 ಚಮಚ ಸಾಸಿವೆ 
  4. 1/2 ಚಮಚ ಉದ್ದಿನಬೇಳೆ
  5. ದೊಡ್ಡ ಚಿಟಿಕೆ ಅರಿಶಿನ ಪುಡಿ
  6. ದೊಡ್ಡ ಚಿಟಿಕೆ ಇಂಗು
  7. 5 - 6 ಕರಿಬೇವಿನ ಎಲೆ 
  8. ನಿಮ್ಮ ರುಚಿ ಪ್ರಕಾರ ಉಪ್ಪು 
  9. 2 ಟೇಬಲ್ ಚಮಚ ಅಡುಗೆ ಎಣ್ಣೆ

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 2  ಟೇಬಲ್ ಚಮಚ ಹುರಿಗಡಲೆ
  2. 2 - 3 ಒಣಮೆಣಸಿನಕಾಯಿ
  3. 1 ಟೀಸ್ಪೂನ್ ಧನಿಯಾ ಅಥವಾ ಕೊತ್ತಂಬರಿ ಬೀಜ
  4. 1/2 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಬಡೆಸೋಂಪು

ಈರುಳ್ಳಿ ಭಾಜಿ ಮಾಡುವ ವಿಧಾನ:

  1. ಮೊದಲಿಗೆ ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಟ್ಟು ಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 
  3. ಸಾಸಿವೆ ಮತ್ತು ಉದ್ದಿನಬೇಳೆ ಒಗ್ಗರಣೆ ಮಾಡಿ. 
  4. ಅದಕ್ಕೆ ಕರಿಬೇವು ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ. 
  5. ಕತ್ತರಿಸಿಟ್ಟ ಟೊಮೇಟೊ ಹಾಕಿ. 
  6. ಅರಶಿನ ಪುಡಿ ಮತ್ತು ಇಂಗು ಹಾಕಿ ಒಂದು ನಿಮಿಷ ಹುರಿಯಿರಿ. 
  7. ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಲು ಬಿಡಿ. 
  8. ಆ ಸಮಯದಲ್ಲಿ ಹುರಿಗಡಲೆ, ಒಣಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ ಮತ್ತು ಸೋಂಪನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. 
  9. ಅದನ್ನು ಬೇಯುತ್ತಿರುವ ಈರುಳ್ಳಿ ಮತ್ತು ಟೊಮ್ಯಾಟೊಗೆ ಸೇರಿಸಿ ಒಮ್ಮೆ ಮಗುಚಿ. 
  10. ಅಗತ್ಯವಿದ್ದಷ್ಟು ನೀರು ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಚೆನ್ನಾಗಿ ಮಗುಚಿ ಕುದಿಸಿ. 
  11. ಮುಚ್ಚಳ ಮುಚ್ಚಿ ಒಂದೆರಡು ನಿಮಿಷ ಬೇಯಿಸಿ. 
  12. ನಂತರ ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  13. ಚಪಾತಿ ಅಥವಾ ದೋಸೆ ಅಥವಾ ರೊಟ್ಟಿಯೊಂದಿಗೆ ಬಡಿಸಿ.

ಶುಕ್ರವಾರ, ಏಪ್ರಿಲ್ 8, 2022

Southekayi sasive recipe in kannada | ಸೌತೆಕಾಯಿ ಸಾಸಿವೆ ಮಾಡುವ ವಿಧಾನ

 

Southekayi sasive recipe in kannada

Southekayi sasive recipe in kannada | ಸೌತೆಕಾಯಿ ಸಾಸಿವೆ (ಹಸಿಗೊಜ್ಜು) ಮಾಡುವ ವಿಧಾನ

ಸೌತೆಕಾಯಿ ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ ೧: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ
  2. 1 - 2 ಒಣಮೆಣಸಿನಕಾಯಿ
  3. 1/2 ಕಪ್ ತೆಂಗಿನ ತುರಿ 
  4. 1/2 ಟೀಸ್ಪೂನ್ ಸಾಸಿವೆ
  5. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಬೇಕಾಗುವ ಪದಾರ್ಥಗಳು - ವಿಧಾನ ೨: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ 
  2. 1/4 ಕಪ್ ಮೊಸರು
  3. 1 - 2 ಹಸಿ ಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ 
  5. 1/4 ಟೀಸ್ಪೂನ್ ಸಾಸಿವೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1/2 ಕೆಂಪು ಮೆಣಸಿನಕಾಯಿ
  3. 4 -5 ಕರಿಬೇವು
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೧:

  1. ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ. 
  2. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ತುರಿದ ಅಥವಾ ಕೊಚ್ಚಿದ ಸೌತೆಕಾಯಿ ಹಾಕಿ ಒಂದೆರಡು ಸುತ್ತು ಅರೆಯಿರಿ.
  4. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  5. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೨:

  1. ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ. 
  2. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ತುರಿದ ಅಥವಾ ಕೊಚ್ಚಿದ ಸೌತೆಕಾಯಿ, ಮೊಸರು ಮತ್ತು ಉಪ್ಪು ಸೇರಿಸಿ. ಒಂದೆರಡು ಸುತ್ತು ಅರೆಯಿರಿ.
  4. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಶುಕ್ರವಾರ, ನವೆಂಬರ್ 19, 2021

Badanekayi mosaru gojju recipe in Kannada | ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ

 

Badanekayi mosaru gojju recipe in Kannada

Badanekayi mosaru gojju recipe in Kannada | ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ 

ಬದನೇಕಾಯಿ ಮೊಸರು ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4kg ಸಣ್ಣ ಬದನೇಕಾಯಿ (ಅಥವಾ ಬೇರೆ ಯಾವುದೇ ಬದನೇಕಾಯಿ)
  2. 1 - 2 ಹಸಿರು ಮೆಣಸಿನಕಾಯಿ
  3. ಉಪ್ಪು ರುಚಿಗೆ ತಕ್ಕಷ್ಟು
  4. 1 ಕಪ್ ಮೊಸರು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೇಬಲ್ ಚಮಚ ಅಡುಗೆ ಎಣ್ಣೆ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ಉದ್ದಿನಬೇಳೆ
  5. ಒಂದು ಚಿಟಿಕೆ ಇಂಗು
  6. ಸ್ವಲ್ಪ ಕರಿಬೇವು

ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ:

  1. ಬದನೇಕಾಯಿ ತೊಳೆದು, + ಆಕಾರದಲ್ಲಿ ಸಿಗಿದು (ಸೀಳಿ), ಆವಿಯಲ್ಲಿ ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಬೇಯಿಸಿ. 
  2. ಆ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು, ಉಪ್ಪು ಮತ್ತು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ ಕಲಸಿ. 
  3. ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಉದ್ದಿನಬೇಳೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  4. ಒಗ್ಗರಣೆಯನ್ನು ಕಲಸಿಟ್ಟ ಮೊಸರಿಗೆ ಸೇರಿಸಿ. 
  5. ಬದನೇಕಾಯಿ ಬೆಂದ ಮೇಲೆ ಸಿಪ್ಪೆ ತೆಗೆದು, ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆಯಿರಿ.
  6. ಸಣ್ಣ ಚೂರುಗಳಾಗಿ ಕತ್ತರಿಸಿ. 
  7. ಅದನ್ನು ಮೊಸರು ಇರುವ ಪಾತ್ರೆಗೆ ಸೇರಿಸಿ ಕಲಸಿ. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಮಂಗಳವಾರ, ಅಕ್ಟೋಬರ್ 5, 2021

Badanekayi kai gojju recipe in Kannada | ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ

 

Badanekayi kai gojju recipe in Kannada

Badanekayi kai gojju recipe in Kannada | ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ 

ಬದನೇಕಾಯಿ ಕೈ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 kg ಬದನೇಕಾಯಿ
  2. 1/4 ಟೀಸ್ಪೂನ್ ಅರಿಶಿನ
  3. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  4. 1 ಚಮಚ ಬೆಲ್ಲ 
  5. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  6. ಒಂದು ಈರುಳ್ಳಿ
  7. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು
  9. 1 ಟೇಬಲ್ ಚಮಚ ತುಪ್ಪ (ಅಥವಾ ಎಣ್ಣೆ)

ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ:

  1. ಬದನೇಕಾಯಿಯನ್ನು ಕತ್ತರಿಸಿ, ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ.  
  2. ಒಂದು ಬಾಣಲೆಯಲ್ಲಿ ತುಪ್ಪ (ಅಥವಾ ಎಣ್ಣೆ) ಬಿಸಿ ಮಾಡಿ, ಬದನೆಕಾಯಿಯನ್ನು ಸೇರಿಸಿ. 
  3. ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ. 
  4. ಮುಚ್ಚಳ ಮುಚ್ಚಿ ಬದನೇಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  5. ನಂತ್ರ ಅಚ್ಚಖಾರದಪುಡಿ, ಬೆಲ್ಲ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ, ಕಲಸಿ. 
  6. ಸ್ಟವ್ ಆಫ್ ಮಾಡಿ, ಬಿಸಿ ಆರಲು ಬಿಡಿ. 
  7. ನಂತರ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಹಿಸುಕಿ ಕಲಸಿ. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಶನಿವಾರ, ಮೇ 8, 2021

Menthe hittu recipe in Kannada | ಮೆಂತೆ ಹಿಟ್ಟು ಮಾಡುವ ವಿಧಾನ

 

Menthe hittu recipe in Kannada

Menthe hittu recipe in Kannada | ಮೆಂತೆ ಹಿಟ್ಟು ಮಾಡುವ ವಿಧಾನ 

ಮೆಂತೆ ಹಿಟ್ಟು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡ್ಲೆಬೇಳೆ
  2. 1/4 ಕಪ್ ಉದ್ದಿನಬೇಳೆ 
  3. 1/4 ಕಪ್ ಹೆಸರು ಬೇಳೆ 
  4. 1/4 ಕಪ್ ತೊಗರಿಬೇಳೆ
  5. 1/4 ಕಪ್ ಗಿಂತ ಸ್ವಲ್ಪ ಕಡಿಮೆ ಗೋಧಿ ಅಥವಾ ಗೋಧಿನುಚ್ಚು
  6. 2 ಟೀಸ್ಪೂನ್ ಅಕ್ಕಿ
  7. 1 ಟೀಸ್ಪೂನ್ ಕೊತ್ತಂಬರಿ ಬೀಜ
  8. 3/4 ಟೀಸ್ಪೂನ್ ಜೀರಿಗೆ 
  9. 3/4 ಟೀಸ್ಪೂನ್ ಮೆಂತೆ
  10. 1/4 ಟೀಸ್ಪೂನ್ ಅರಿಶಿನ 
  11. ಉಪ್ಪು ರುಚಿಗೆ ತಕ್ಕಷ್ಟು 

ಮೆಂತೆ ಹಿಟ್ಟು ಮಾಡುವ ವಿಧಾನ:

  1. ಎಲ್ಲ ಪದಾರ್ಥಗಳನ್ನು ಅಳತೆ ಪ್ರಕಾರ ತೆಗೆದುಕೊಳ್ಳಿ. 
  2. ಮೊದಲಿಗೆ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  3. ನಂತರ ಹೆಸರು ಬೇಳೆ, ಆಮೇಲೆ ತೊಗರಿಬೇಳೆ, ನಂತರ ಉದ್ದಿನ ಬೇಳೆ ಹೀಗೆ ಎಲ್ಲ ಬೇಳೆ ಗಳನ್ನು ಕಂದು ಬಣ್ಣ ಬರುವವರೆಗೆ ಹುರಿದು ತೆಗೆದಿಡಿ. 
  4. ಗೋಧಿ ಅಥವಾ ಗೋಧಿ ನುಚ್ಚನ್ನು ಸಹ ಹುರಿದು ತೆಗೆದಿಡಿ.
  5. ಕೊನೆಯಲ್ಲಿ ಉಳಿದ ಪದಾರ್ಥಗಳನ್ನು (ಅಕ್ಕಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆ) ಸಣ್ಣ ಉರಿಯಲ್ಲಿ ಹುರಿದು ತೆಗೆದಿಡಿ.   
  6. ಸ್ಟವ್ ಆಫ್ ಮಾಡಿ, ಅರಿಶಿನ ಪುಡಿ ಸೇರಿಸಿ ಮಗುಚಿ.
  7. ಎಲ್ಲ ಹುರಿದ ಪದಾರ್ಥಗಳನ್ನು ಸೇರಿಸಿ, ಉಪ್ಪು ಸೇರಿಸಿ, ಬಿಸಿ ಆರಲು ಬಿಡಿ. 
  8. ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 
  9. ಬಿಸಿ ಅನ್ನ ಮತ್ತು ತುಪ್ಪದ ಜೊತೆ ಕಲಸಿ ತಿನ್ನಿ. ಅಥವಾ ಗೊಜ್ಜು ಮಾಡಬಹುದು. 
  10. ಗೊಜ್ಜು ಮಾಡಲು, ಒಂದು ಬೌಲ್ ನಲ್ಲಿ ಮೆಂತೆ ಹಿಟ್ಟು, ರುಚಿಗೆ ತಕ್ಕಂತೆ ಉಪ್ಪು, ಹುಳಿ ಮತ್ತು ಬೆಲ್ಲ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಹಾಕಿ ಕಲಸಿ. ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ. 


ಭಾನುವಾರ, ಏಪ್ರಿಲ್ 25, 2021

Halasinakai palya recipe in Kannada | ಹಲಸಿನಕಾಯಿ ಪಲ್ಯ ಮಾಡುವ ವಿಧಾನ

 

Halasinakai palya recipe in Kannada

Halasinakai palya recipe in Kannada | ಹಲಸಿನಕಾಯಿ ಪಲ್ಯ ಮಾಡುವ ವಿಧಾನ 

ಹಲಸಿನಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಎಳೆ ಹಲಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  7. 1 ದೊಡ್ಡ ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. ನೆಲ್ಲಿಕಾಯಿ ಗಾತ್ರದ ಬೆಲ್ಲ
  10. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  11. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 3 ಒಣ ಮೆಣಸಿನಕಾಯಿ
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ

ಹಲಸಿನಕಾಯಿ ಪಲ್ಯ ಮಾಡುವ ವಿಧಾನ:

  1. ಹಲಸಿನಕಾಯಿ ಹೊರಗಿನ ಸಿಪ್ಪೆ ಮತ್ತು ಒಳಗಿನ ತಿರುಳು ತೆಗೆದು ಕತ್ತರಿಸಿ ನೀರಿನಲ್ಲಿ ಹಾಕಿಡಿ.
  2. ನಂತ್ರ ಕುಕ್ಕರ್ ನಲ್ಲಿ ನೀರಿನಲ್ಲಿ ಹಾಕಿಟ್ಟ ಹಲಸಿನಕಾಯಿ ತೆಗೆದುಕೊಳ್ಳಿ.  
  3. ಒಂದು ಚಮಚ ಉಪ್ಪು ಮತ್ತು ಚಿಟಿಕೆ ಅರಶಿನ ಪುಡಿ ಹಾಕಿ.
  4. ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  5. ಬೇಯಿಸಿದ ನಂತರ ನೀರು ಬಸಿದು, ಹಲಸಿನಕಾಯಿಯನ್ನು ಗುದ್ದಿಕೊಳ್ಳಿ. 
  6. ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, ಸಾಸಿವೆ, ಕೊತ್ತಂಬರಿ ಬೀಜ ಮತ್ತು ಒಣ ಮೆಣಸಿನಕಾಯಿ ಹಾಕಿ, ನೀರು ಹಾಕದೆ ಪುಡಿ ಮಾಡಿ. 
  7. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  8. ಸಾಸಿವೆ ಸಿಡಿದ ಕೂಡಲೇ ಒಣಮೆಣಸಿನಕಾಯಿ, ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  9. ಅದಕ್ಕೆ ಜಜ್ಜಿದ ಹಲಸಿನಕಾಯಿ ಹಾಕಿ.  ಒಮ್ಮೆ ಮಗುಚಿ. 
  10. ಉಪ್ಪು, ಹುಳಿ ಮತ್ತು ಬೆಲ್ಲ ಹಾಕಿ ಮಗುಚಿ.
  11. ಪುಡಿ ಮಾಡಿದ ಮಸಾಲೆಯನ್ನು ಸೇರಿಸಿ ಮಗುಚಿ.  ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಮಾರ್ಚ್ 3, 2021

Sutta tomato gojju recipe in Kannada | ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ

 

Sutta tomato gojju recipe in Kannada

Sutta tomato gojju recipe in Kannada | ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ 

ಸುಟ್ಟ ಟೊಮೇಟೊ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೊಮೇಟೊ
  2. 2 - 3 ಹಸಿರು ಮೆಣಸಿನಕಾಯಿ
  3. 3 - 4 ಎಸಳು ಬೆಳ್ಳುಳ್ಳಿ (ಅಥವಾ ಅರ್ಧ ಚಮಚ ಜೀರಿಗೆ ಪುಡಿ)
  4. 1 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  5. 1 ಚಮಚ ಬೆಲ್ಲ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು
  7. 1 ಟೀಸ್ಪೂನ್ ಎಣ್ಣೆ

ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ:

  1. ಟೊಮೇಟೊ ತೊಳೆದು ನೀರಾರಿಸಿ, ನೇರವಾಗಿ ಸ್ಟವ್ ನಲ್ಲಿ ಮೆತ್ತಗಾಗುವವರೆಗೆ ಸುಡಿ. ಟೊಮ್ಯಾಟೊವನ್ನು ತಿರುಗಿಸಿ ತಿರುಗಿಸಿ ಸುಡಬೇಕು.
  2. ನಂತರ ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನೂ ಸುಡಿ. ಬೆಳ್ಳುಳ್ಳಿ ಬದಲು ಕೊನೆಯಲ್ಲಿ ಅರ್ಧ ಚಮಚ ಜೀರಿಗೆ ಪುಡಿ ಸೇರಿಸಬಹುದು.
  3. ಬಿಸಿ ಕಡಿಮೆ ಆದಮೇಲೆ ಸಿಪ್ಪೆ ತೆಗೆದು ಚೆನ್ನಾಗಿ ಮಸೆಯಿರಿ. ಮಿಕ್ಸಿಯಲ್ಲಿ ತರಿತರಿಯಾಗಿ ಅರೆಯಬಹುದು. 
  4. ಮಸೆದ ಅಥವಾ ಮ್ಯಾಶ್ ಮಾಡಿದ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿ. 
  5. ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  6. ಒಂದು ಚಮಚ ಎಣ್ಣೆ ಸೇರಿಸಿ ಕಲಸಿ. 
  7. ಚಟ್ನಿ ಅಥವಾ ಗೊಜ್ಜು ಹುಳಿ ಎನಿಸಿದರೆ, ಬೆಲ್ಲ ಸೇರಿಸಬಹುದು. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಗುರುವಾರ, ಫೆಬ್ರವರಿ 18, 2021

Potato upkari recipe in Kannada | ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ

 

Potato upkari recipe in Kannada

Potato upkari recipe in Kannada | ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ 


ಆಲೂ ಉಪ್ಕರಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 3  ಮಧ್ಯಮ ಗಾತ್ರದ ಆಲೂಗಡ್ಡೆ
  2. 1/2 ಚಮಚ ಸಾಸಿವೆ 
  3. ದೊಡ್ಡ ಚಿಟಿಕೆ ಅರಿಶಿನ ಪುಡಿ (ಬೇಕಾದಲ್ಲಿ)
  4. ಎರಡು ದೊಡ್ಡ ಚಿಟಿಕೆ ಇಂಗು
  5. ಸ್ವಲ್ಪ ಕರಿಬೇವಿನ ಎಲೆ
  6. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  7. ನಿಮ್ಮ ರುಚಿ ಪ್ರಕಾರ ಉಪ್ಪು 
  8. 2 ಟೇಬಲ್ ಚಮಚ ಅಡುಗೆ ಎಣ್ಣೆ

 ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ:

  1. ಮೊದಲಿಗೆ ಆಲೂಗಡ್ಡೆ ಸಿಪ್ಪೆ ತೆಗೆದು ತೆಳು ಮತ್ತು ಉದ್ದುದ್ದವಾಗಿ ಕತ್ತರಿಸಿ. 
  2. ನಂತ್ರ ಕತ್ತರಿಸಿದ ಆಲೂಗಡ್ಡೆಯನ್ನು ನೀರಿನಲ್ಲಿ ನಾಲ್ಕೈದು ನಿಮಿಷ ಹಾಕಿಡಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  4. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿಕೊಳ್ಳಿ. 
  5. ಸಾಸಿವೆ ಸಿಡಿದ ಮೇಲೆ ಸ್ಟವ್ ಆಫ್ ಮಾಡಿ. ಅರಿಶಿನ (ಬೇಕಾದಲ್ಲಿ), ಇಂಗು ಮತ್ತು ಅಚ್ಚಖಾರದ ಪುಡಿ ಸೇರಿಸಿ ಮಗುಚಿ. 
  6. ನೀರಲ್ಲಿ ಹಾಕಿಟ್ಟ ಆಲೂಗಡ್ಡೆಯನ್ನು ಸೇರಿಸಿ. 
  7.  ಸ್ಟವ್ ಆನ್ ಮಾಡಿ, ದೊಡ್ಡ ಉರಿಯಲ್ಲಿ ಒಂದು ನಿಮಿಷ ಚೆನ್ನಾಗಿ ಮಗುಚಿ.
  8. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  9. ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಆಲೂಗಡ್ಡೆ ಮೆತ್ತಗಾಗುವವರೆಗೆ ಬೇಯಿಸಿ. ನೀರು ಹಾಕದೇ ಹಾಗೇ ಬೇಯಿಸಬಹುದು. 
  10. ಒಂದೆರಡು ಬಾರಿ ಮಗುಚಿ ಆಲೂಗಡ್ಡೆ ಬೆಂದಿದೆಯಾ ಎಂದು ನೋಡಿ. ನನಗೆ ಸುಮಾರು ಹತ್ತು ನಿಮಷ ಬೇಕಾಯಿತು. 
  11. ಬೆಂದ ಕೂಡಲೇ ಸ್ಟವ್ ಆಫ್ ಮಾಡಿ. ನೀರಿದ್ದಲ್ಲಿ ಉರಿ ಜಾಸ್ತಿ ಮಾಡಿ ನೀರಾರಿಸಿ. ಜಾಸ್ತಿ ಬೇಯಿಸಬೇಡಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಶನಿವಾರ, ಫೆಬ್ರವರಿ 6, 2021

Thondekai masale palya recipe in Kannada | ತೊಂಡೆಕಾಯಿ ಮಸಾಲೆ ಪಲ್ಯ ಮಾಡುವ ವಿಧಾನ

 

Thondekai masale palya recipe in Kannada

Thondekai masale palya recipe in Kannada | ತೊಂಡೆಕಾಯಿ ಮಸಾಲೆ ಪಲ್ಯ ಮಾಡುವ ವಿಧಾನ 

ತೊಂಡೆಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4kg ತೊಂಡೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. ಸ್ವಲ್ಪ ಕರಿಬೇವಿನ ಎಲೆ
  4. ಚಿಟಿಕೆ ಅರಿಶಿನ ಪುಡಿ
  5.  2 ಟೇಬಲ್ ಚಮಚ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ
  2. 1/2 ಟೀಸ್ಪೂನ್ ಜೀರಿಗೆ
  3. 2 - 3 ಹಸಿಮೆಣಸಿನಕಾಯಿ
  4. ಉಪ್ಪು ರುಚಿಗೆ ತಕ್ಕಷ್ಟು
  5. ಒಂದು ಹಿಡಿ ಕೊತ್ತಂಬರಿ ಸೊಪ್ಪು

ತೊಂಡೆಕಾಯಿ ಪಲ್ಯ ಮಾಡುವ ವಿಧಾನ:

  1. ತೊಂಡೆಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಕರಿಬೇವು  ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ತೊಂಡೆಕಾಯಿ ಹಾಕಿ ಮಗುಚಿ. 
  4. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 
  5. ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ, ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಜೀರಿಗೆ ತೆಗೆದುಕೊಳ್ಳಿ. 
  6. ಕೊತ್ತಂಬರಿ ಸೊಪ್ಪು ಮತ್ತು ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆದು ಪಕ್ಕಕ್ಕಿಡಿ. 
  7. ಬೇಯುತ್ತಿರುವ ತೊಂಡೆಕಾಯಿಗೆ ಸ್ವಲ್ಪ ನೀರು, ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ.
  8. ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  9. ತೊಂಡೆಕಾಯಿ ಮೆತ್ತಗೆ ಬೆಂದ ಮೇಲೆ ಅರೆದ ಮಸಾಲೆ ಸೇರಿಸಿ. 
  10. ಒಂದೆರಡು ನಿಮಿಷ ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. 
  11. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...