Ribbon pakoda recipe in Kannada | ರಿಬ್ಬನ್ ಪಕೋಡ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿಹಿಟ್ಟು
- 1/2 ಕಪ್ ಕಡ್ಲೆಹಿಟ್ಟು
- 1 ಟೀಸ್ಪೂನ್ ಎಳ್ಳು
- 1/2 ಟೀಸ್ಪೂನ್ ಜಜ್ಜಿದ ಜೀರಿಗೆ
- ದೊಡ್ಡ ಚಿಟಿಕೆ ಅರಿಶಿನ
- ದೊಡ್ಡ ಚಿಟಿಕೆ ಇಂಗು
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
- 1 ಟೇಬಲ್ ಚಮಚ ಬೆಣ್ಣೆ ಅಥವಾ 2 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಕಾಯಿಸಲು
ರಿಬ್ಬನ್ ಪಕೋಡ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಕಡ್ಲೆಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಎಳ್ಳು ಮತ್ತು ಜಜ್ಜಿದ ಜೀರಿಗೆ ಹಾಕಿ.
- ಆಮೇಲೆ ಅರಿಶಿನ, ಅಚ್ಚಖಾರದ ಪುಡಿ ಮತ್ತು ಇಂಗು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ. ಒಮ್ಮೆ ಕಲಸಿ.
- ಬೆಣ್ಣೆ (ಅಥವಾ ಬಿಸಿ ಎಣ್ಣೆ) ಹಾಕಿ, ಚೆನ್ನಾಗಿ ತಿಕ್ಕಿ ಕಲಸಿ.
- ಬೆಚ್ಚಗಿನ ನೀರು ಹಾಕಿ ಮೃದುವಾದ ಹಿಟ್ಟು ಸಿದ್ಧಪಡಿಸಿಕೊಳ್ಳಿ.
- ರಿಬ್ಬನ್ ಪಕೋಡದ ಅಚ್ಚಿಗೆ ಹಿಟ್ಟನ್ನು ಹಾಕಿ ಬಿಸಿ ಎಣ್ಣೆಗೆ ಒತ್ತಿ.
- ಮಧ್ಯಮ ಉರಿಯಲ್ಲಿ ಕಾಯಿಸಿ. ಸುಮಾರು ಹತ್ತು ಸೆಕೆಂಡ್ ಗಳ ನಂತರ ತಿರುಗಿಸಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ.
- ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಬಿಸಿ ಆರಿದ ಮೇಲೆ ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ