How to store tamarind in Kannada | ಹುಣಿಸೇಹಣ್ಣು ಶೇಖರಿಸುವ ವಿಧಾನ
ಹುಣಿಸೇಹಣ್ಣು ಪೇಸ್ಟ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- ಅರ್ಧ ಕೆಜಿ ಹುಣಿಸೆಹಣ್ಣು
- ಅರ್ಧ ಕಪ್ ಉಪ್ಪು
- ಅಗತ್ಯವಿದ್ದಷ್ಟು ನೀರು
ಹುಣಿಸೇಹಣ್ಣು ಶೇಖರಿಸುವ ವಿಧಾನ:
- ಹುಣಿಸೆಹಣ್ಣನ್ನು ನೀರಿನಲ್ಲಿ ಎರಡು ಘಂಟೆಗಳ ಕಾಲ ನೆನೆಸಿಡಿ.
- ನಂತರ ಚೆನ್ನಾಗಿ ಹಿಸುಕಿ.
- ದೊಡ್ಡ ಕಣ್ಣಿರುವ ಪಾತ್ರೆ ಅಥವಾ ಪ್ಲೇಟ್ ನಲ್ಲಿ ಸೋಸಿ, ಗಟ್ಟಿಯಾದ ಹುಣಿಸೆರಸ ತೆಗೆದಿಟ್ಟುಕೊಳ್ಳಿ.
- ಸೋಸುವಾಗ ಸೌಟು ಮತ್ತು ಸ್ವಲ್ಪ ನೀರು ಬಳಸಿದಲ್ಲಿ ಸುಲಭವಾಗಿ ಆಗುವುದು.
- ನಂತರ ಆ ಹುಣಿಸೆ ಪೇಸ್ಟ್ ಅನ್ನು ಒಂದು ಬಾಣಲೆಗೆ ಹಾಕಿ, ಕುದಿಯಲು ಇಡಿ.
- ಕುದಿಯುವಾಗ ಅರ್ಧ ಕಪ್ ಉಪ್ಪು ಸೇರಿಸಿ.
- ಕುದಿಯಲು ಪ್ರಾರಂಭವಾದ ಮೇಲೆ, ಉರಿ ಕಡಿಮೆ ಮಾಡಿ.
- ಹುಣಿಸೆರಸ ಗಟ್ಟಿಯಾಗುವವರೆಗೆ ಅಥವಾ ಸಿಡಿಯಲು ಪ್ರಾರಂಭವಾಗುವವರೆಗೆ ಕುದಿಸಿ. ಸುಮಾರು ಇಪ್ಪತ್ತು ನಿಮಿಷ ಬೇಕಾಯಿತು ನನಗೆ.
- ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಡಬ್ಬದಲ್ಲಿ ತುಂಬಿಸಿ, ಫ್ರಿಡ್ಜ್ನಲ್ಲಿಡಿ. 6 - 7 ತಿಂಗಳು ಕೆಡುವುದಿಲ್ಲ.
- ಹೊರಗೆ ಇಡುವುದಾದಲ್ಲಿ ಇನ್ನು ಸ್ವಲ್ಪ ಗಟ್ಟಿ ಪೇಸ್ಟ್ ಮಾಡಬೇಕಾಗುವುದು.
madam is the tamarind paste needs to be boiled for long when used for sambar or saru
ಪ್ರತ್ಯುತ್ತರಅಳಿಸಿ