How to clean oil bottle in Kannada | ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ
ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- ಎರಡು ಚಮಚ ಪಾತ್ರೆ ತೊಳೆಯುವ ಲಿಕ್ವಿಡ್ (ಅಥವಾ ವಾಷಿಂಗ್ ಪೌಡರ್)
- ಕಾಲು ಕಪ್ ವಿನೆಗರ್ (ಅಥವಾ ಎರಡು ದೊಡ್ಡ ನಿಂಬೆಹಣ್ಣು)
- ಒಂದು ಚಮಚ ಅಡುಗೆ ಸೋಡಾ
- ಸ್ವಲ್ಪ ಬಟ್ಟೆ ಸೋಪ್
- ಒಂದು ಹಳೇ ಬ್ರಷ್
- ಒಂದು ದೊಡ್ಡ ಪಾತ್ರೆ ಅಥವಾ ಟಬ್
- ಅಗತ್ಯವಿದ್ದಷ್ಟು ಬಿಸಿ ನೀರು
ಎಣ್ಣೆ ಬಾಟಲಿ ಸ್ವಚ್ಛ ಗೊಳಿಸುವ ವಿಧಾನ:
- ಎಣ್ಣೆ ಬಾಟಲಿಯಿಂದ ಹೆಚ್ಚಿನ ಎಣ್ಣೆಯನ್ನು ಪೇಪರ್ ಸಹಾಯದಿಂದ ಒರೆಸಿ ತೆಗೆಯಿರಿ.
- ನಂತರ ಒಂದು ಟಬ್ ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ.
- ಅದಕ್ಕೆ ಪಾತ್ರೆ ತೊಳೆಯೋ ಲಿಕ್ವಿಡ್, ವಿನೆಗರ್ ಮತ್ತು ಸೋಡಾ ಸೇರಿಸಿ.
- ಎಣ್ಣೆ ಬಾಟಲಿ ಮತ್ತು ಮುಚ್ಚಳವನ್ನು ಹದಿನೈದು ನಿಮಿಷ ನೆನೆಸಿಡಿ.
- ಮತ್ತೆ ಸೋಪು ಮತ್ತು ಬ್ರಷ್ ನ ಸಹಾಯದಿಂದ ಸಂದಿ ಮೂಲೆಗಳನ್ನು ಸ್ವಚ್ಛಗೊಳಿಸಿ.
- ನೀರು ಬದಲಿಸಿ, ಪುನಃ ಬಿಸಿ ನೀರು ಹಾಕಿ.
- ಕೊನೆಯಲ್ಲಿ ಸ್ಕ್ರಬ್ಬರ್ ಮತ್ತು ಪಾತ್ರೆ ತೊಳೆಯೋ ಸೋಪ್ ಹಾಕಿ ಒಮ್ಮೆ ಎಲ್ಲ ಜಾಗವನ್ನು ತಿಕ್ಕಿ.
- ಚೆನ್ನಾಗಿ ತೊಳೆದು, ನೀರಾರಲು ಬಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ