ಉತ್ತರ ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉತ್ತರ ಕರ್ನಾಟಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಆಗಸ್ಟ್ 10, 2023

Jolada hittina paddu recipe in Kannada | ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ

 

Jolada hittina paddu recipe in Kannada

Jolada hittina paddu recipe in Kannada | ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ 

ಜೋಳದ ಹಿಟ್ಟಿನ ಪಡ್ಡು ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಜೋಳದ ಹಿಟ್ಟು
  2. 1/2 ಕಪ್ ರವೆ
  3. 1/4 ಕಪ್ ಮೊಸರು
  4. 1.5 ಕಪ್ ನೀರು
  5. ಎಣ್ಣೆ ಪಡ್ಡು ಮಾಡಲು
  6. 1/2 ಟೀಸ್ಪೂನ್ ಸಕ್ಕರೆ
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಈರುಳ್ಳಿ ಸಣ್ಣಗೆ ಕತ್ತರಿಸಿದ್ದು
  9. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  10. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು ಕರಿಬೇವು
  11. 1 ಹಸಿಮೆಣಸಿನಕಾಯಿ ಕತ್ತರಿಸಿದ್ದು
  12. 1/2 ಟೀಸ್ಪೂನ್ ಜೀರಿಗೆ
  13. 1/4 ಟೀಸ್ಪೂನ್ ಅಡುಗೆ ಸೋಡಾ

ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ:

  1. ಜೋಳದ ಹಿಟ್ಟು, ರವೆ, ಉಪ್ಪು ಮತ್ತು ಸಕ್ಕರೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಒಮ್ಮೆ ಚೆನ್ನಾಗಿ ಕಲಸಿ. 
  3. ನಂತರ ಮೊಸರನ್ನು ಸೇರಿಸಿ. 
  4. ನೀರನ್ನು ಸೇರಿಸಿ. ಗಂಟಿಲ್ಲದಂತೆ ಹಿಟ್ಟನ್ನು ಕಲಸಿ ಹತ್ತು ನಿಮಿಷ ನೆನೆಯಲು ಬಿಡಿ. 
  5. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಜೀರಿಗೆಯನ್ನು ಸೇರಿಸಿ. ಚೆನ್ನಾಗಿ ಕಲಸಿ. 
  6. ಕೊನೆಯಲ್ಲಿ ಅಡುಗೆ ಸೋಡಾ ಸೇರಿಸಿ ಕಲಸಿ. 
  7. ಪಡ್ಡು ಕಾವಲಿಯನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  8. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  9. 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  10. ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಫೆಬ್ರವರಿ 3, 2023

Southekai mosaru palya recipe in kannada | ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ

 

Southekai mosaru palya in Kannada

Southekai mosaru palya recipe in kannada | ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ

ಸೌತೆಕಾಯಿ ಮೊಸರು ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ 
  2. 1/2 ಕಪ್ ಮೊಸರು
  3. 1 ಈರುಳ್ಳಿ
  4. 1 - 2 ಹಸಿ ಮೆಣಸಿನಕಾಯಿ
  5. 1 ಟೇಬಲ್ ಚಮಚ ಕರಿಬೇವು
  6. ದೊಡ್ಡ ಚಿಟಿಕೆ ಇಂಗು 
  7. ದೊಡ್ಡ ಚಿಟಿಕೆ ಅರಿಶಿನ
  8. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಕೆಂಪು ಮೆಣಸಿನಕಾಯಿ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೇಬಲ್ ಚಮಚ ಅಡುಗೆ ಎಣ್ಣೆ

ಸೌತೆಕಾಯಿ ಮೊಸರು ಪಲ್ಯ ಮಾಡುವ ವಿಧಾನ:

  1. ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  3. ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. 
  4. ಚೂರು ಮಾಡಿದ ಒಣಮೆಣಸಿನಕಾಯಿಯನ್ನು ಸೇರಿಸಿ. 
  5. ಕತ್ತರಿಸಿದ ಈರುಳ್ಳಿ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  6. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  7. ಕತ್ತರಿಸಿದ ಸೌತೆಕಾಯಿ ಸೇರಿಸಿ. 
  8. ಉಪ್ಪು, ಅರಿಶಿನ ಮತ್ತು ಇಂಗು ಸೇರಿಸಿ. 
  9. ಸೌತೆಕಾಯಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ.
  10. ಸ್ಟವ್ ಆಫ್ ಮಾಡಿ ಬಿಸಿ ಕಡಿಮೆ ಆಗುವವರೆಗೆ ಬಿಡಿ. 
  11. ಕಡೆದ ಗಟ್ಟಿ ಮೊಸರು ಸೇರಿಸಿ ಕಲಸಿ.
  12. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಗುರುವಾರ, ಸೆಪ್ಟೆಂಬರ್ 15, 2022

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 4 - 5 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕರಿಬೇವಿನ ಸೊಪ್ಪು
  5. 4 - 5 ಒಣ ಮೆಣಸಿನಕಾಯಿ
  6. 1 - 2 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಒಣ ಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. 
  2. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  3. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  4. ತಿನ್ನುವ ಮೊದಲು, ಮಂಡಕ್ಕಿ ಇರುವ ಪಾತ್ರೆಗೆ ತೆಂಗಿನ ಎಣ್ಣೆ ಅಥವಾ ಕರಗಿಸಿದ ತುಪ್ಪ ಸೇರಿಸಿ.
  5. ಪುಡಿ ಮಾಡಿದ ಮಸಾಲೆ ಸೇರಿಸಿ. 
  6. ಚೆನ್ನಾಗಿ ಕೈಯಿಂದ ಕಲಸಿ. 
  7. ತಕ್ಷಣವೇ ಬಡಿಸಿ.

ಶುಕ್ರವಾರ, ಸೆಪ್ಟೆಂಬರ್ 3, 2021

Bele kadubu recipe in Kannada | ಬೇಳೆ ಕಡುಬು ಮಾಡುವ ವಿಧಾನ

 

Bele kadubu recipe in Kannada

Bele kadubu recipe in Kannada | ಬೇಳೆ ಕಡುಬು ಮಾಡುವ ವಿಧಾನ 

ಬೇಳೆ ಕಡುಬು ವಿಡಿಯೋ

ಚಪಾತಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿಹಿಟ್ಟು
  2. 1/4 ಕಪ್ ನೀರು
  3. 1/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ತೊಗರಿಬೇಳೆ
  2. 2 ಟೇಬಲ್ ಚಮಚ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ
  5. 1 ಹಸಿಮೆಣಸಿನಕಾಯಿ
  6. 1 ಈರುಳ್ಳಿ
  7. 1 ಟೊಮೇಟೊ
  8. ಚಿಟಿಕೆ ಅರಿಶಿನ 
  9. ಚಿಟಿಕೆ ಇಂಗು
  10. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 2 ಟೇಬಲ್ ಚಮಚ ತೆಂಗಿನತುರಿ
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. ಉಪ್ಪು ರುಚಿಗೆ ತಕ್ಕಂತೆ

ಬೇಳೆ ಕಡುಬು ಮಾಡುವ ವಿಧಾನ:

  1. ತೊಗರಿಬೇಳೆಯನ್ನು, ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
  3. ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
  4. ಹುರಿಯುವಾಗ ಅರಿಶಿನ ಮತ್ತು ಇಂಗು ಸೇರಿಸಿ. 
  5. ನಂತರ ಕತ್ತರಿಸದ ಟೊಮೇಟೊ ಹಾಕಿ ಹುರಿಯಿರಿ. 
  6. ಹುರಿಯುವಾಗ ಉಪ್ಪು, ಅಚ್ಚಖಾರದಪುಡಿ ಮತ್ತು ಗರಂ ಮಸಾಲಾ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.  
  7. ಬೇಯಿಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಇಡಿ.  
  8. ಗೋಧಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
  9. ತೆಳ್ಳಗೆ ಚಪಾತಿ ಮಾಡಿ, ಕತ್ತರಿಸಿ. 
  10. ಕುದಿಯುತ್ತಿರುವ ಮಸಾಲೆಗೆ ಹಾಕಿ.
  11. ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. 
  12. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿ.  
  13. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಸಿಹಿಯನ್ನು ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.  
  14. ಕುದಿಸಿ, ಸ್ಟವ್ ಆಫ್ ಮಾಡಿ, ಬಿಸಿ ಬಿಸಿಯಾಗಿ ಬಡಿಸಿ. 

ಮಂಗಳವಾರ, ಜುಲೈ 13, 2021

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 - 3 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕೊತ್ತಂಬರಿ ಸೊಪ್ಪು
  5. 2 - 3 ಹಸಿರು ಮೆಣಸಿನಕಾಯಿ
  6. 1 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  2. ನಂತರ ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  3. ಅದನ್ನು ಮಂಡಕ್ಕಿ ಇರುವ ಪಾತ್ರೆಗೆ ಹಾಕಿ. 
  4. ತೆಂಗಿನ ಎಣ್ಣೆ ಸೇರಿಸಿ.
  5. ಚೆನ್ನಾಗಿ ಕಲಸಿ. 
  6. ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.

ಮಂಗಳವಾರ, ಜೂನ್ 8, 2021

Jolada hittina dose recipe in Kannada | ಜೋಳದ ಹಿಟ್ಟಿನ ದೋಸೆ ಮಾಡುವ ವಿಧಾನ

 

Jolada hittina dose recipe in Kannada

Jolada hittina dose recipe in Kannada | ಜೋಳದ ಹಿಟ್ಟಿನ ದೋಸೆ ಮಾಡುವ ವಿಧಾನ

ಜೋಳದ ಹಿಟ್ಟಿನ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಜೋಳದ ಹಿಟ್ಟು
  2. 1/4 ಕಪ್ ಉದ್ದಿನಬೇಳೆ
  3. 1 ಟೀಸ್ಪೂನ್ ಮೆಂತ್ಯ
  4. 1/4 ಕಪ್ ಅವಲಕ್ಕಿ
  5. 1 ಕಪ್ ನೀರು ಹಿಟ್ಟು ಅರೆಯಲು
  6. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  7. ಉಪ್ಪು ರುಚಿಗೆ ತಕ್ಕಷ್ಟು.

ಜೋಳದ ಹಿಟ್ಟಿನ ದೋಸೆ ಮಾಡುವ ವಿಧಾನ:

  1. ಉದ್ದಿನಬೇಳೆ, ಮೆಂತೆ ಮತ್ತು ಅವಲಕ್ಕಿಯನ್ನು ತೊಳೆದು 4 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ, ನೀರು ಬಗ್ಗಿಸಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ನುಣ್ಣನೆ ಅರೆದ ಮೇಲೆ, ಜೋಳದ ಹಿಟ್ಟು ಸೇರಿಸಿ ಪುನಃ ಅರೆಯಿರಿ. 
  4. ಎಲ್ಲ ಒಟ್ಟು, ಅರೆಯಲು ಸುಮಾರು ಒಂದು ಕಪ್ ನೀರು ಸೇರಿಸಿದರೆ ಸಾಕು. 
  5. ಹಿಟ್ಟು ಅರೆದ ನಂತ್ರ ಒಂದು ಪಾತ್ರೆಗೆ ಹಾಕಿ.
  6. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  7. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.
  11. ಹಿಟ್ಟು ತೆಳ್ಳಗಾಗಿ, ದೋಸೆ ಮಾಡಲು ಕಷ್ಟವಾದರೆ, ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ ದೋಸೆ ಮಾಡಿ. 
  12. ಬೇಕಾದಲ್ಲಿ ಈ ಹಿಟ್ಟಿನಿಂದ ಇಡ್ಲಿ ಮಾಡಬಹುದು. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಏಪ್ರಿಲ್ 15, 2021

Bevu bella recipe in Kannada | ಬೇವು ಬೆಲ್ಲ ಮಾಡುವ ವಿಧಾನ

 

Bevu bella recipe in Kannada

Bevu bella recipe in Kannada | ಬೇವು ಬೆಲ್ಲ ಮಾಡುವ ವಿಧಾನ 

ಬೇವು ಬೆಲ್ಲ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಪುಟಾಣಿ ಅಥವಾ ಹುರಿಗಡಲೆ
  2. 2 - 4 ಟೇಬಲ್ ಸ್ಪೂನ್ ಬೆಲ್ಲ 
  3. 4 ಬಾದಾಮಿ
  4. 4 ಗೋಡಂಬಿ
  5. 1 ಟೇಬಲ್ ಸ್ಪೂನ್ ಬೇವಿನ ಹೂವು 
  6. 4 ಎಳೆ ಬೇವಿನ ಎಲೆ (ಬೇಕಾದಲ್ಲಿ)
  7. ಒಂದು ಏಲಕ್ಕಿ

ಬೇವು ಬೆಲ್ಲ ಮಾಡುವ ವಿಧಾನ:

  1. ಪುಟಾಣಿ ಅಥವಾ ಹುರಿಗಡಲೆ ಅಥವಾ ಕಡ್ಲೆಪಪ್ಪು ವನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
  2. ಅದಕ್ಕೆ ಬಾದಾಮಿ, ಗೋಡಂಬಿ, ಬೆಲ್ಲ, ಏಲಕ್ಕಿ, ಬೇವಿನ ಹೂವು ಮತ್ತು ಬೇವಿನ ಎಲೆ ಸೇರಿಸಿ ಪುನಃ ಪುಡಿ ಮಾಡಿ
  3. ಹಬ್ಬದ ದಿನ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಸೆಪ್ಟೆಂಬರ್ 30, 2020

Masala jolada rotti recipe Kannada | ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ

 

Masala jolada rotti recipe Kannada

Masala jolada rotti recipe Kannada | ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ


ಮಸಾಲಾ ಜೋಳ ರೊಟ್ಟಿ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಜೋಳದ ಹಿಟ್ಟು
  2. 1.25 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ)
  3. 2 - 3 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1 ಮಧ್ಯಮ ಗಾತ್ರದ ಕ್ಯಾರಟ್
  6. 1ಸಣ್ಣ ಗಾತ್ರದ ಸೌತೆಕಾಯಿ
  7. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವು
  8. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ
  10. 1 ಚಮಚ ಜೀರಿಗೆ
  11. ಉಪ್ಪು ರುಚಿಗೆ ತಕ್ಕಷ್ಟು
  12. ಎಣ್ಣೆ ರೊಟ್ಟಿ ಕಾಯಿಸಲು

ಮಸಾಲೆ ಜೋಳದ ರೊಟ್ಟಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರಟ್ ಮತ್ತು ತುರಿದ ಸೌತೆಕಾಯಿ ಸೇರಿಸಿ. 
  3. ನಂತರ ಸಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿರು ಮೆಣಸಿನಕಾಯಿ ಮತ್ತೊ ಜೀರಿಗೆ ಸೇರಿಸಿ. 
  4. ಉಪ್ಪನ್ನು ಸೇರಿಸಿ ಒಮ್ಮೆ ಕಲಸಿ. 
  5. ಅಗತ್ಯವಿದ್ದಷ್ಟು ಬೆಚ್ಚಗಿನ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  6. ರೊಟ್ಟಿ ಮಾಡುವ ಕಾವಲಿಗೆ ಎಣ್ಣೆ ಹಚ್ಚಿ, ದೊಡ್ಡ ಕಿತ್ತಳೆ ಗಾತ್ರದ ಹಿಟ್ಟು ತೆಗೆದುಕೊಳ್ಳಿ. 
  7. ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ವೃತ್ತಾಕಾರದ ತೆಳುವಾದ ರೊಟ್ಟಿಯನ್ನು ತಟ್ಟಿ.
  8. ಆಮೇಲೆ ಕಾವಲಿಯನ್ನು ಸ್ಟವ್ ಮೇಲಿರಿಸಿ, ಮೇಲಿನಿಂದ ಒಂದು ಚಮಚ ಎಣ್ಣೆ ಹಾಕಿ.
  9. ಮುಚ್ಚಳ ಮುಚ್ಚಿ ಬೇಯಿಸಿ. 
  10. ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. 
  11. ಚಟ್ನಿಯೊಂದಿಗೆ ಬಡಿಸಿ.



ಶುಕ್ರವಾರ, ಜನವರಿ 17, 2020

Mandakki oggarane recipe in Kannada | ಮಂಡಕ್ಕಿ ಒಗ್ಗರಣೆ ಮಾಡುವ ವಿಧಾನ

Mandakki oggarane recipe in Kannada

Mandakki oggarane recipe in Kannada | ಮಂಡಕ್ಕಿ ಒಗ್ಗರಣೆ ಮಾಡುವ ವಿಧಾನ 


ಮಂಡಕ್ಕಿ ಒಗ್ಗರಣೆ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 8 ಕಪ್ ಅಥವಾ ಸುಮಾರು 200gm ಮಂಡಕ್ಕಿ  
  2. 1/4 ಕಪ್ ಹುರಿಗಡಲೆ ಅಥವಾ ಪುಟಾಣಿ
  3. 1/4 ಕಪ್ ಕಡ್ಲೆಕಾಯಿ ಅಥವಾ ಶೇಂಗಾ
  4. 1/2 ಟೀಸ್ಪೂನ್ ಸಾಸಿವೆ
  5. 1 ದೊಡ್ಡ ಈರುಳ್ಳಿ
  6. 1 ಟೊಮ್ಯಾಟೋ 
  7. 1-2 ಹಸಿರು ಮೆಣಸಿನಕಾಯಿ
  8. 4-5 ಕರಿ ಬೇವಿನ ಎಲೆ
  9. 1/4 ಟೀಸ್ಪೂನ್ ಅರಶಿನ ಪುಡಿ
  10. 2 ಟೇಬಲ್ ಚಮಚ ಅಡುಗೆ ಎಣ್ಣೆ
  11. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
  12. ಸಕ್ಕರೆ ರುಚಿಗೆ ತಕ್ಕಷ್ಟು
  13. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  14. ನಿಂಬೆ ರಸ ರುಚಿಗೆ ತಕ್ಕಷ್ಟು

ಮಂಡಕ್ಕಿ ಒಗ್ಗರಣೆ ಮಾಡುವ ವಿಧಾನ:

  1. ಹುರಿಗಡಲೆ ಅಥವಾ ಪುಟಾಣಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. 
  2. ಮಂಡಕ್ಕಿಯನ್ನು ನೀರಲ್ಲಿ 2 ನಿಮಿಷ ನೆನೆಸಿ. 
  3. ನಂತರ ನೀರು ಹಿಂಡಿ ತೆಗೆದು, ನೆನೆಸಿದ ಮಂಡಕ್ಕಿಯನ್ನು ಪಕ್ಕಕ್ಕಿಡಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮೊದಲಿಗೆ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ. 
  5. ಅದಕ್ಕೆ ಸಾಸಿವೆ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ.
  6. ಸಾಸಿವೆ ಸಿಡಿದ ಕೂಡಲೇ ಕರಿಬೇವು ಮತ್ತು ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.
  7. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  8. ರುಚಿಗೆ ತಕ್ಕಂತೆ ಉಪ್ಪು ಮತ್ತು ಸಕ್ಕರೆ ಸೇರಿಸಿ. 
  9. ನೆನೆಸಿಟ್ಟ ಮಂಡಕ್ಕಿ ಹಾಕಿ. 
  10. ಮೇಲಿನಿಂದ ಕೊತ್ತಂಬರಿ ಸೊಪ್ಪು ಮತ್ತು ಹುರಿಗಡಲೆ ಪುಡಿ ಹಾಕಿ. 
  11. ರುಚಿಗೆ ತಕ್ಕಂತೆ ನಿಂಬೆ ರಸ ಸೇರಿಸಿ. 
  12. ಸ್ಟವ್ ಆಫ್ ಮಾಡಿ, ಚೆನ್ನಾಗಿ ಮಗುಚಿ. 
  13. ಸ್ಟವ್ ಆಫ್ ಮಾಡಿ, ಬಡಿಸಿ.


ಶುಕ್ರವಾರ, ಅಕ್ಟೋಬರ್ 5, 2018

Khara mandakki recipe in Kannada | ಖಾರ ಮಂಡಕ್ಕಿ ಮಾಡುವ ವಿಧಾನ

Khara mandakki recipe in Kannada

Khara mandakki recipe in Kannada | ಖಾರ ಮಂಡಕ್ಕಿ ಮಾಡುವ ವಿಧಾನ 

ಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 200gm ಮಂಡಕ್ಕಿ
  2. 3 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  3. 3 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  4. 1 ಚಮಚ ಸಾಸಿವೆ 
  5. 1 ಚಮಚ ಜೀರಿಗೆ
  6. 1 ಒಣ ಮೆಣಸಿನಕಾಯಿ
  7. 1 - 2 ಹಸಿರು ಮೆಣಸಿನಕಾಯಿ
  8. 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  9. 1/4 ಟೀಸ್ಪೂನ್ ಅರಿಶಿನ ಪುಡಿ 
  10. 5 - 6 ಕರಿಬೇವಿನ ಎಲೆ 
  11. 2 ಟೇಬಲ್ ಚಮಚ ಎಣ್ಣೆ
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ. 
  2. ಅದಕ್ಕೆ ಸಾಸಿವೆ ಮತ್ತು ಜೀರಿಗೆ ಸೇರಿಸಿ ಹುರಿಯಿರಿ. 
  3. ಸಾಸಿವೆ ಸಿಡಿದ ಮೇಲೆ ಒಣಮೆಣಸಿನ ಚೂರು, ಸೀಳಿದ ಹಸಿರುಮೆಣಸು, ಜಜ್ಜಿದ ಬೆಳ್ಳುಳ್ಳಿ ಮತ್ತು  ಕರಿಬೇವನ್ನು ಹಾಕಿ ಹುರಿಯಿರಿ. 
  4. ನಂತರ ಹುರಿಗಡಲೆ ಅಥವಾ ಪುಟಾಣಿ ಸೇರಿಸಿ ಹುರಿಯಿರಿ.
  5. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ.  
  6. ನಂತರ ಮಂಡಕ್ಕಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.
  7. ಅಥವಾ ಮೇಲಿನಿಂದ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ. 

ಮಂಗಳವಾರ, ಆಗಸ್ಟ್ 14, 2018

Sambar butti recipe in Kannada | ಸಾಂಬಾರ್ ಬುತ್ತಿ ಮಾಡುವ ವಿಧಾನ

Sambar butti recipe in Kannada

Sambar butti recipe in Kannada | ಸಾಂಬಾರ್ ಬುತ್ತಿ ಮಾಡುವ ವಿಧಾನ

ಸಾಂಬಾರ್ ಬುತ್ತಿ ವಿಡಿಯೋ

 ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಸೋನಾ ಮಸೂರಿ ಅಕ್ಕಿ
  2. 1 ಸಣ್ಣ ನಿಂಬೆ ಗಾತ್ರದ ಹುಣಸೆ ಹಣ್ಣು 
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ 
  4. ರುಚಿಗೆ ತಕ್ಕಷ್ಟು ಉಪ್ಪು
  5. 1  ಟೇಬಲ್ ಚಮಚ ಸಾಂಬಾರ್ ಪುಡಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1/2 ಚಮಚ ಜೀರಿಗೆ
  3. 1 ಕೆಂಪು ಮೆಣಸಿನಕಾಯಿ
  4. 1 - 2 ಹಸಿರು ಮೆಣಸಿನಕಾಯಿ
  5. 7 - 8 ಕರಿಬೇವಿನ ಎಲೆ
  6. 4 - 5 ಬೇಳೆ ಬೆಳ್ಳುಳ್ಳಿ 
  7. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  8. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಸಾಂಬಾರ್ ಬುತ್ತಿ ಮಾಡುವ ವಿಧಾನ:

  1. ಮೊದಲಿಗೆ ಮೆತ್ತಗೆ ಅನ್ನ ಮಾಡಿಟ್ಟು ಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಮೇಲೆ, ಒಣ ಮೆಣಸಿನಕಾಯಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವು ಹಾಕಿ. 
  4. ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. 
  5. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. 
  6. ಅದಕ್ಕೆ ಹುಣಿಸೆರಸ, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಕುದಿಸಿ. 
  7.  ಕುದಿದು ಸ್ವಲ್ಪ ಗಟ್ಟಿಯಾದ ಮೇಲೆ ಸಾಂಬಾರ್ ಪುಡಿ ಹಾಕಿ.
  8. ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ ಸ್ಟವ್ ಆಫ್ ಮಾಡಿ.  
  9. ನಂತರ ಬೇಯಿಸಿಟ್ಟ ಅನ್ನವನ್ನು ಸ್ವಲ್ಪ ನುರಿದು ಹಾಕಿ, ಚೆನ್ನಾಗಿ ಕಲಸಿ. ಕಿತ್ತಳೆ ಹಣ್ಣಿನ ಗಾತ್ರದ ಉಂಡೆಕಟ್ಟಿ ಬಡಿಸಿ. 

ಮಂಗಳವಾರ, ಮೇ 22, 2018

Jolada dose recipe in Kannada | ಜೋಳದ ದೋಸೆ ಮಾಡುವ ವಿಧಾನ

Jolada dose recipe in Kannada

Jolada dose recipe in Kannada |  ಜೋಳದ ದೋಸೆ ಮಾಡುವ ವಿಧಾನ


ಜೋಳದ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಜೋಳದ ಹಿಟ್ಟು
  2. 1/2 ಕಪ್ ಅಕ್ಕಿ ಹಿಟ್ಟು
  3. 2 ಟೇಬಲ್ ಚಮಚ ರವೆ (ಬೇಕಾದಲ್ಲಿ)
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು 
  8. 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
  9. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  10. ಉಪ್ಪು ರುಚಿಗೆ ತಕ್ಕಷ್ಟು

ಜೋಳದ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
  2. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. 
  3. ಆಮೇಲೆ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ. 
  4. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತ ತೆಳುವಾದ ಹಿಟ್ಟು ತಯಾರಿಸಿಕೊಳ್ಳಿ. ಆದರೆ ಹಿಟ್ಟು ನೀರು ದೋಸೆ ಅಥವಾ ರವೇ ದೋಸೆಗಿಂತ ಸ್ವಲ್ಪ ಗಟ್ಟಿ ಇರಲಿ.   
  5. ಬೇಕಾದಲ್ಲಿ ಎರಡು ಟೇಬಲ್ ಚಮಚ ರವೇ ಸೇರಿಸಿ. ರವೇ ಸೇರಿಸಿದರೇ ದೋಸೆ ಗರಿಗರಿಯಾಗುವುದು ಮತ್ತು ದೋಸೆ ಮಾಡಲು ಸುಲಭವಾಗುವುದು.
  6. ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ. 
  7. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  8. ಮುಚ್ಚಳ ಮುಚ್ಚಿ ಬೇಯಿಸಿ. 
  9. ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  10. ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಶುಕ್ರವಾರ, ಜನವರಿ 12, 2018

Shenga holige recipe in Kannada | ಶೇಂಗಾ ಹೋಳಿಗೆ ಮಾಡುವ ವಿಧಾನ

Shenga holige recipe in Kannada

Shenga holige recipe in Kannada | ಶೇಂಗಾ ಹೋಳಿಗೆ ಮಾಡುವ ವಿಧಾನ 

ಕಣಕಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 ಕಪ್ ಗೋಧಿ ಹಿಟ್ಟು 
  2. ಉಪ್ಪು ರುಚಿಗೆ ತಕ್ಕಷ್ಟು
  3. 6 ಟೇಬಲ್ ಚಮಚ ಅಡುಗೆ ಎಣ್ಣೆ

ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1 ಕಪ್ ಶೇಂಗಾ
  2. 3/4 ಕಪ್ ಪುಡಿಮಾಡಿದ ಬೆಲ್ಲ
  3. 1/4 ಕಪ್ ಎಳ್ಳು 
  4. 2 ಚಮಚ ಗಸಗಸೆ
  5. 2 ಏಲಕ್ಕಿ

ಶೇಂಗಾ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಹಾಕಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ಕಲಸಿ. 
  3. ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ. 
  4. ಈಗ ಹೂರಣ ತಯಾರಿಸಲು, ಮೊದಲಿಗೆ ಶೇಂಗಾವನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. 
  5. ಎಳ್ಳನ್ನು ಕಂದು ಬಣ್ಣ ಬರುವವರೆಗೆ ಅಥವಾ ಚಟಪಟ ಅನ್ನುವವರೆಗೆ ಹುರಿಯಿರಿ. 
  6. ಹುರಿದ ಶೇಂಗಾ, ಎಳ್ಳು, ಗಸಗಸೆ ಮತ್ತು ಏಲಕ್ಕಿಯನ್ನು ಪುಡಿ ಮಾಡಿ. 
  7.  ನಂತ್ರ ಪುಡಿಮಾಡಿದ ಬೆಲ್ಲವನ್ನು ಸೇರಿಸಿ ಅರೆಯಿರಿ. ನೀರು ಹಾಕಬೇಡಿ. 
  8. ಅರೆದ ಮಿಶ್ರಣಕ್ಕೆ ಒಂದೆರಡು ಚಮಚ ನೀರು ಅಥವಾ ಹಾಲು ಹಾಕಿ ಕಲಸಿ.  
  9. ನಂತರ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಉಂಡೆ ಮೃದುವಾಗಿರಬೇಕು. 
  10. ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಒಂದು ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಬಟ್ಟಲಿನಾಕಾರ ಮಾಡಿ.  ಹೂರಣಇಟ್ಟು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ.
  11. ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ.
  12. ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ. ರುಚಿ ರುಚಿಯಾದ ಶೇಂಗಾ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

ಸೋಮವಾರ, ನವೆಂಬರ್ 20, 2017

Belgaum Kunda recipe in Kannada | ಬೆಳಗಾಂ ಕುಂದಾ ಮಾಡುವ ವಿಧಾನ

Belgaum Kunda recipe in Kannada

Belgaum Kunda recipe in Kannada | ಬೆಳಗಾಂ ಕುಂದಾ ಮಾಡುವ ವಿಧಾನ

ಬೆಳಗಾಂ ಕುಂದಾ ವಿಡಿಯೋ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಲೀ ಹಾಲು
  2. 1/2 + 1/4 ಕಪ್ ಸಕ್ಕರೆ
  3. 1/2 ಕಪ್ ಮೊಸರು (ಹುಳಿಯಿಲ್ಲದ್ದು)
  4. 2 ಏಲಕ್ಕಿ ಪುಡಿಮಾಡಿದ್ದು


ಬೆಳಗಾಂ ಕುಂದಾ ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಹಾಲನ್ನು ಕುದಿಯಲು ಇಡಿ. 
  2. ಹಾಲು ಸುಮಾರು 1/4  ಭಾಗದಷ್ಟಾಗುವವರೆಗೆ ಆಗಾಗ್ಯೆ ಮಗುಚುತ್ತಾ ಕುದಿಸಿ. 
  3. ನಂತರ ಮೊಸರನ್ನು ಸೇರಿಸಿ ಕುದಿಸುವುದನ್ನು ಮುಂದುವರೆಸಿ.  
  4. ಹಾಲು ಒಡೆಯಲು ಪ್ರಾರಂಭವಾದಾಗ ಸಕ್ಕರೆ ಸೇರಿಸಿ ಕುದಿಸುವುದನ್ನು ಮುಂದುವರೆಸಿ.
  5. ಇನ್ನೊಂದು ಬಾಣಲೆಯಲ್ಲಿ ಉಳಿದ 1/4 ಕಪ್  ಸಕ್ಕರೆ ಹಾಕಿ ಬಿಸಿ ಮಾಡಿ. 
  6. ನೀರು ಹಾಕದೆ ಕಂದುಬಣ್ಣಕ್ಕೆ ತಿರುಗುವವರೆಗೆ ಬಿಸಿಮಾಡಿ. 
  7. ಇದನ್ನು ಕುದಿಯುತ್ತಿರುವ ಹಾಲು+ಸಕ್ಕರೆ+ಮೊಸರು ಇರುವ ಬಾಣಲೆಗೆ ಹಾಕಿ. 
  8. ಹೆಚ್ಚಿನ ನೀರಾರುವವರೆಗೆ ಕುದಿಸಿ.
  9. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ.

ಸೋಮವಾರ, ಮೇ 1, 2017

Palak palle or palak dal in Kannada | ಪಾಲಕ್ ಪಲ್ಲೆ ಮಾಡುವ ವಿಧಾನ

Palak palle or palak dal in Kannada

Palak palle in Kannada | ಪಾಲಕ್ ಪಲ್ಲೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಕಟ್ಟು ಪಾಲಕ್ ಸೊಪ್ಪು
  2. 1 ಕಪ್ ತೊಗರಿಬೇಳೆ 
  3. 1 ಟೀಸ್ಪೂನ್ ಜೀರಿಗೆ 
  4. 1 ಟೀಸ್ಪೂನ್ ಸಾಸಿವೆ
  5. 1 ಕೆಂಪು ಮೆಣಸಿನಕಾಯಿ (ಬೇಕಾದಲ್ಲಿ) 
  6. ಚಿಟಿಕೆ ಅರಿಶಿನ ಪುಡಿ
  7. ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. 1 - 2 ಹಸಿಮೆಣಸಿನಕಾಯಿ 
  10. 4 ಎಸಳು ಬೆಳ್ಳುಳ್ಳಿ 
  11. 1ಸೆಮೀ ಉದ್ದದ ಶುಂಠಿ 
  12. 1 ಈರುಳ್ಳಿ 
  13. 1 ಟೊಮೆಟೊ (ಬೇಕಾದಲ್ಲಿ) 
  14. 1/2 ಟೀ ಚಮಚ ಜೀರಿಗೆ ಪುಡಿ (ಬೇಕಾದಲ್ಲಿ) 
  15. 1 ಟೀಸ್ಪೂನ್ ನಿಂಬೆರಸ
  16. ಉಪ್ಪು ರುಚಿಗೆ ತಕ್ಕಷ್ಟು 

ಪಾಲಕ್ ಪಲ್ಲೆ ಮಾಡುವ ವಿಧಾನ:

  1. ತೊಗರಿಬೇಳೆ ತೊಳೆದು ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಒಣಮೆಣಸು ಮತ್ತು ಜೀರಿಗೆಯನ್ನು ಹಾಕಿ.
  3. ಸಾಸಿವೆ ಸಿಡಿದ ಕೂಡಲೇ ಇಂಗು, ಅರಿಶಿನ ಮತ್ತು ಕರಿಬೇವು ಸೇರಿಸಿ. 
  4. ನಂತರ ಸೀಳಿದ ಹಸಿರು ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ ಹುರಿಯಿರಿ. 
  5. ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ  ಹುರಿಯಿರಿ.
  6. ಕತ್ತರಿಸಿದ ಟೊಮ್ಯಾಟೊ ಮತ್ತು ಉಪ್ಪು ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಹುರಿಯಿರಿ.
  7. ಕತ್ತರಿಸಿದ ಪಾಲಕ್ ಸೊಪ್ಪು ಸೇರಿಸಿ ಹುರಿಯಿರಿ. ಮುಚ್ಚಳ ಮುಚ್ಚಿ ಬೇಯಿಸಿ. 
  8. ನಂತರ ಬೇಯಿಸಿದ ತೊಗರಿ ಬೇಳೆಯನ್ನು ಸೇರಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  10. ಕೊನೆಯಲ್ಲಿ ಜೀರಿಗೆ ಪುಡಿ ಮತ್ತು ನಿಂಬೆ ರಸ ಸೇರಿಸಿ. 
  11.  ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಗುರುವಾರ, ಮಾರ್ಚ್ 2, 2017

Menthe kadubu recipe in Kannada | ಮೆಂತೆ ಕಡುಬು ಮಾಡುವ ವಿಧಾನ

Menthe kadubu recipe in Kannada

Menthe kadubu recipe in Kannada | ಮೆಂತೆ ಕಡುಬು ಮಾಡುವ ವಿಧಾನ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿ ಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
  3. 1/4 ಟೀಸ್ಪೂನ್ ಅಜ್ವಾಯ್ನ್ ಅಥವಾ ಓಂಕಾಳು
  4. ದೊಡ್ಡ ಚಿಟಿಕೆ ಇಂಗು 
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಟೀಸ್ಪೂನ್ ಸಾಸಿವೆ 
  2. 1/2 ಟೀಸ್ಪೂನ್ ಜೀರಿಗೆ
  3. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  4. 1/2 ಕಪ್ ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು
  5. 1/4 ಟೀಸ್ಪೂನ್ ಅಚ್ಚ ಖಾರದ ಪುಡಿ (ಬೇಕಾದಲ್ಲಿ)
  6. 1/4 ಟೀಸ್ಪೂನ್ ಅರಿಶಿನ ಪುಡಿ
  7. 5 - 6 ಟೀಸ್ಪೂನ್ ಎಣ್ಣೆ 
  8. ಉಪ್ಪು ರುಚಿಗೆ ತಕ್ಕಷ್ಟು

ಮೆಂತೆ ಕಡುಬು ಮಾಡುವ ವಿಧಾನ:

  1.  ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು, ತೊಳೆದು, ಸಣ್ಣದಾಗಿ ಹೆಚ್ಚಿಕೊಳ್ಳಿ.
  2. ಒಂದು ಪಾತ್ರೆಯಲ್ಲಿ ಹಿಟ್ಟಿಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು (ಗೋಧಿ ಹಿಟ್ಟು, ಉಪ್ಪು, ಅಚ್ಚ ಖಾರದ ಪುಡಿ ಇಂಗು ಮತ್ತು ಓಂಕಾಳು). ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಮೆತ್ತಗಿನ ಹಿಟ್ಟು ಕಲಸಿ. ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿರಲಿ. 
  3. ನಂತರ ಸಣ್ಣ ನೆಲ್ಲಿಕಾಯಿ ಗಾತ್ರದ ಬಿಲ್ಲೆಗಳನ್ನು (ಚಪ್ಪಟೆಯಾದ ಉಂಡೆ) ಮಾಡಿ. 
  4. ಕುದಿಯುವ ನೀರಿನಲ್ಲಿ ಹಾಕಿ 20 ನಿಮಿಷಗಳ ಕಾಲ ಬೇಯಿಸಿ.
  5. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
  6.  ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. 
  7. ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು ಹಾಕಿ ಬಾಡಿಸಿ. ಖಾರದ ಪುಡಿ (ಬೇಕಾದಲ್ಲಿ), ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಮಗುಚಿ. 
  8. ಬೇಯಿಸಿದ ಬಿಲ್ಲೆಗಳನ್ನು ಅರ್ಧ ಕಪ್ ನೀರಿನೊಂದಿಗೆ ಹಾಕಿ, ಕುದಿಸಿ. 
  9. ನೀರಾರಿದ ಮೇಲೆ ಸ್ಟವ್ ಆಫ್ ಮಾಡಿ, ಬಡಿಸಿ.

ಸೋಮವಾರ, ಜನವರಿ 9, 2017

Girmit recipe in Kannada | ಗಿರ್ಮಿಟ್ ಮಾಡುವ ವಿಧಾನ

Girmit recipe in Kannada

Girmit recipe in Kannada | ಗಿರ್ಮಿಟ್ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ಮಂಡಕ್ಕಿ 
  2. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ 
  3. 2 ಹಸಿರು ಸೀಳಿದ ಹಸಿರು ಮೆಣಸಿನಕಾಯಿ
  4. 1/2 ಸಣ್ಣದಾಗಿ ಹೆಚ್ಚಿದ ಈರುಳ್ಳಿ
  5. 1/2 ಸಣ್ಣದಾಗಿ ಹೆಚ್ಚಿದ ಟೊಮೇಟೊ
  6. 2 ಟೇಬಲ್ ಚಮಚ ಪುಟಾಣಿ ಹಿಟ್ಟು ಅಥವಾ ಹುರಿಗಡಲೆ ಪುಡಿ
  7. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 2 ಟೇಬಲ್ ಚಮಚ ಸೇವ್ (ಬೇಕಾದಲ್ಲಿ)

ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/4 ಟೀಸ್ಪೂನ್ ಸಾಸಿವೆ 
  2. 1/4 ಟೀಸ್ಪೂನ್ ಜೀರಿಗೆ 
  3. 3 - 4 ಕರಿಬೇವಿನ ಎಲೆ 
  4. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  5. 1 - 2 ಕತ್ತರಿಸಿದ ಹಸಿರು ಮೆಣಸಿನಕಾಯಿ
  6. 3 - 4 ಬೇಳೆ ಬೆಳ್ಳುಳ್ಳಿ
  7. 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
  8. 1 ಸಣ್ಣದಾಗಿ ಹೆಚ್ಚಿದಟೊಮೇಟೊ
  9. 1 ಟೀಸ್ಪೂನ್ ಬೆಲ್ಲ ಅಥವಾ ಸಕ್ಕರೆ 
  10. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  11. 2 ಟೇಬಲ್ ಚಮಚ ಪುಟಾಣಿ ಹಿಟ್ಟು ಅಥವಾ ಹುರಿಗಡಲೆ ಪುಡಿ
  12. 2 ಟೀಸ್ಪೂನ್ ಅಡುಗೆ ಎಣ್ಣೆ 
  13. ಉಪ್ಪು ರುಚಿಗೆ ತಕ್ಕಷ್ಟು

ಗಿರ್ಮಿಟ್ ಮಾಡುವ ವಿಧಾನ:

  1. 1/2 ಕಪ್ ನಷ್ಟು ಹುರಿಗಡಲೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. 
  2. ಗೊಜ್ಜಿಗೆ ಬೇಕಾದ ಈರುಳ್ಳಿ, ಟೊಮೇಟೊ ಮತ್ತು ಹಸಿರುಮೆಣಸಿನಕಾಯಿಯನ್ನು ಹೆಚ್ಚಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಕಡಲೇಕಾಯಿ ಅಥವಾ ಶೇಂಗಾವನ್ನು ಹುರಿದು ತೆಗೆದಿಟ್ಟುಕೊಳ್ಳಿ. 
  4. ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ 2 ಸೀಳಿದ ಹಸಿರು ಮೆಣಸಿನಕಾಯಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. 
  5. ನಂತರ ಅದೇ ಬಾಣಲೆಯಲ್ಲಿ, ಗೊಜ್ಜು ಮಾಡಲು, ಸಾಸಿವೆ, ಜೀರಿಗೆ, ಕರಿಬೇವಿನ ಎಲೆ ಮತ್ತು ಅರಿಶಿನ ಪುಡಿ ಸೇರಿಸಿ ಒಗ್ಗರಣೆ ಮಾಡಿ. 
  6. ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿ. 
  7. ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ.
  8. ಹುಣಿಸೆಹಣ್ಣಿನ ರಸ ಸೇರಿಸಿ, ಟೊಮೇಟೊ ಮುದ್ದೆ ಆಗುವವರೆಗೆ ಬೇಯಿಸಿ. 
  9. ಕೊನೆಯಲ್ಲಿ ಉಪ್ಪು, ಬೆಲ್ಲ ಮತ್ತು 2 ಟೇಬಲ್ ಚಮಚ ಹುರಿಗಡಲೆ ಪುಡಿ (ಪುಟಾಣಿ) ಸೇರಿಸಿ. ಮಗುಚಿ ಸ್ಟವ್ ಆಫ್ ಮಾಡಿ. 
  10. ತಣ್ಣಗಾದ ನಂತರ ಒಂದು ಪ್ಲೇಟ್ ಗಿರ್ಮಿಟ್ ಮಾಡಲು, ಒಂದು ಪಾತ್ರೆಯಲ್ಲಿ ೧ ಕಪ್ ನಷ್ಟು ಮಂಡಕ್ಕಿ ತೆಗೆದುಕೊಳ್ಳಿ. 
  11. ಅದಕ್ಕೆ ೨ ಟೇಬಲ್ ಚಮಚದಷ್ಟು ಗೊಜ್ಜು ಸೇರಿಸಿ ಕಲಸಿ. 
  12. ೧ ಟೇಬಲ್ ಚಮಚದಷ್ಟು ಹುರಿಗಡಲೆ ಪುಡಿ ಸೇರಿಸಿ ಕಲಸಿ. 
  13. ಪ್ಲೇಟ್ ಗೆ ಹಾಕಿ. ಮೇಲಿನಿಂದ ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ಅಥವಾ ಖಾರ ಶೇವ್ ಹಾಕಿ. ಕೂಡಲೇ ಸವಿಯಿರಿ.

ಸೋಮವಾರ, ಡಿಸೆಂಬರ್ 19, 2016

Mixed flour poori or hittina vade recipe in kannada | ಮಿಕ್ಸೆಡ್ ಫ್ಲೋರ್ ಪೂರಿ ಅಥವಾ ಹಿಟ್ಟಿನ ವಡೆ ಮಾಡುವ ವಿಧಾನ

Mixed flour poori or hittina vade recipe in kannada

Hittina vade recipe in kannada | ಹಿಟ್ಟಿನ ವಡೆ ಮಾಡುವ ವಿಧಾನ

Hittina vade video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಗೋಧಿ ಹಿಟ್ಟು 
  2. 1/4 ಕಪ್ ಮೈದಾ 
  3. 1/4 ಕಪ್ ಕಡ್ಲೆಹಿಟ್ಟು
  4. 1/4 ಕಪ್ ಅಕ್ಕಿ ಹಿಟ್ಟು
  5. 1/4 ಕಪ್ ಜೋಳದ ಹಿಟ್ಟು
  6. ಉಪ್ಪು ರುಚಿಗೆ ತಕ್ಕಷ್ಟು
  7. ಎಣ್ಣೆ ಪೂರಿ ಕಾಯಿಸಲು

ಅರೆಯಲು ಬೇಕಾಗುವ ಪದಾರ್ಥಗಳು:

  1. 1 ಈರುಳ್ಳಿ ಕತ್ತರಿಸಿದ್ದು
  2. 1 - 3 ಹಸಿರುಮೆಣಸಿನಕಾಯಿ
  3. 2 ಎಸಳು ಕರಿಬೇವು
  4. 1/4 ಕಪ್ ತೆಂಗಿನ ತುರಿ
  5. 1 ಚಮಚ ಜೀರಿಗೆ

ಮಿಕ್ಸೆಡ್ ಫ್ಲೋರ್ ಪೂರಿ ಅಥವಾ ಹಿಟ್ಟಿನ ವಡೆ ಮಾಡುವ ವಿಧಾನ:

  1. ಒಂದು ಅಗಲವಾದ ಬಟ್ಟಲಿಗೆ ಎಲ್ಲ ಹಿಟ್ಟುಗಳನ್ನೂ ಹಾಕಿ. 
  2. ನಂತರ ಒಂದು ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಹುರಿಯಿರಿ.
  3. ಹುರಿದ ಪದಾರ್ಥಗಳು ತಣ್ಣಗಾದಮೇಲೆ, ತೆಂಗಿನ ತುರಿ ಮತ್ತು ಜೀರಿಗೆಯೊಂದಿಗೆ ಸಾಧ್ಯವಾದಷ್ಟು ಕಡಿಮೆ ನೀರಿನಲ್ಲಿ  ನುಣ್ಣನೆ ಅರೆಯಿರಿ. 
  4. ಬಟ್ಟಲಿನಲ್ಲಿರುವ ಹಿಟ್ಟಿಗೆ, ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಪೂರಿ ಹಿಟ್ಟನ್ನು ಕಲಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಹೆಚ್ಚು ಗಟ್ಟಿ ಮಾಡಿದಲ್ಲಿ ಪೂರಿ ಗಟ್ಟಿಯಾಗುವುದು, ಹಾಗೆಯೇ ಮೃದು ಮಾಡಿದಲ್ಲಿ ಪೂರಿ ಎಣ್ಣೆ ಎಳೆದು ಮೆತ್ತಗಾಗಬಹದು. 
  5. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. 
  6. ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ. 
  7. ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.  
  8. ಎರಡು ಬದಿ ಕಾಯಿಸಿ. ಆಲೂ ಭಾಜಿಯೊಂದಿಗೆ ಅಥವಾ ಕಾಯಿ ಚಟ್ನಿಯೊಂದಿಗೆ ಬಡಿಸಿ. ಈ ಪೂರಿಯನ್ನು ಹಾಗೆಯೂ ತಿನ್ನಬಹುದು. 

ಗುರುವಾರ, ಡಿಸೆಂಬರ್ 15, 2016

Peas pulao recipe in Kannada | ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ

Peas pulao recipe in Kannada

Peas pulao recipe in Kannada | ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಬಾಸಮತಿ ಅಕ್ಕಿ
  2. 1 ಕಪ್ ಹಸಿ ಬಟಾಣಿ 
  3. 1.5 ಕಪ್ ನೀರು
  4. 0.5 ಕಪ್ ತೆಂಗಿನ ಕಾಯಿಹಾಲು
  5. 4 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ
  6. 1 ಸಣ್ಣ ಪುಲಾವ್ ಎಲೆ
  7. 1 ಮರಾಟಿ ಮೊಗ್ಗು
  8. 2 ದಳ ಜಾಪತ್ರೆ (ಬೇಕಾದಲ್ಲಿ)
  9. 1 ಏಲಕ್ಕಿ
  10. 1/2 ಬೆರಳುದ್ದ ಚಕ್ಕೆ 
  11. 5 - 6 ಲವಂಗ
  12. 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
  13. 5 ಗೋಡಂಬಿ ತುಂಡು ಮಾಡಿದ್ದು 
  14. 4 - 5 ಬೇಳೆ ಬೆಳ್ಳುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  15. 1 - 2 ಹಸಿರು ಮೆಣಸಿನಕಾಯಿ
  16. 2 ಟೇಬಲ್ ಚಮಚ ಕತ್ತರಿಸಿದ ಪುದೀನಾ ಎಲೆ ಅಥವಾ ಮೆಂತೆ ಸೊಪ್ಪು (ಬೇಕಾದಲ್ಲಿ)
  17. 2 ಈರುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  18. 1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  19. 2 ಚಮಚ ನಿಂಬೆ ರಸ (ಬೇಕಾದಲ್ಲಿ)
  20. ಉಪ್ಪು ರುಚಿಗೆ ತಕ್ಕಷ್ಟು


ಹಸಿ ಬಟಾಣಿ ಪುಲಾವ್ ಮಾಡುವ ವಿಧಾನ:

  1. ಅಕ್ಕಿ ತೊಳೆದು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ. 
  2. ಬಟಾಣಿ ಸುಲಿಯಿರಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಪುದಿನ ಎಲೆಗಳನ್ನು ಕತ್ತರಿಸಿ. 
  3. ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ. 
  4. ಕುಕ್ಕರ್ ನಲ್ಲಿ ತುಪ್ಪ ಅಥವಾ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ಅದಕ್ಕೆ ಪುಲಾವ್ ಎಲೆ, ಮರಾಟಿ ಮೊಗ್ಗು, ಜಾಪತ್ರೆ, ಏಲಕ್ಕಿ, ಚಕ್ಕೆ ಮತ್ತು ಲವಂಗ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. 
  5. ಸಣ್ಣದಾಗಿ ಕತ್ತರಿಸಿದ ಶುಂಠಿ , ಬೆಳ್ಳುಳ್ಳಿ ಮತ್ತು ತುಂಡು ಮಾಡಿದ ಗೋಡಂಬಿಯನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
  6. ಕತ್ತರಿಸಿದ ಪುದಿನ ಎಲೆ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಹುರಿಯಿರಿ. 
  7. ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಮಗುಚಿ. 
  8. ಮತ್ತು ಸುಲಿದ ಬಟಾಣಿ ಹಾಕಿ ಮಧ್ಯಮ ಉರಿಯಲ್ಲಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  9. ನಂತರ ತೊಳೆದಿಟ್ಟ ಅಕ್ಕಿ ಹಾಕಿ 2 - 3 ನಿಮಿಷಗಳ ಕಾಲ ಹುರಿಯಿರಿ. 
  10. ನೀರು ಮತ್ತು ತೆಂಗಿನ ಕಾಯಿ ಹಾಲು ಹಾಕಿ ಮಗುಚಿ.
  11. ಉಪ್ಪು ಸೇರಿಸಿ, ಮಗುಚಿ, ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ. 
  12. ಒತ್ತಡ ಇಳಿದ ಕೂಡಲೇ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಕಲಸಿ. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಸವಿಯಿರಿ.

ಗುರುವಾರ, ನವೆಂಬರ್ 24, 2016

Nargis mandakki recipe in Kannada | ನರ್ಗಿಸ್ ಮಂಡಕ್ಕಿ ಮಾಡುವ ವಿಧಾನ

Nargis mandakki recipe in Kannada

Nargis mandakki recipe in Kannada | ನರ್ಗಿಸ್ ಮಂಡಕ್ಕಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಕಪ್ ಮಂಡಕ್ಕಿ 
  2. 1/4 ಟೀಸ್ಪೂನ್ ಸಾಸಿವೆ 
  3. 1/4 ಟೀಸ್ಪೂನ್ ಜೀರಿಗೆ 
  4. 4 - 5 ಕರಿಬೇವಿನ ಎಲೆ 
  5. 1 - 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
  6. 1 ಸಣ್ಣದಾಗಿ ಹೆಚ್ಚಿದ ಸಣ್ಣ ಈರುಳ್ಳಿ
  7. 1 ಸಣ್ಣದಾಗಿ ಹೆಚ್ಚಿದ ಸಣ್ಣ ಟೊಮೇಟೊ
  8. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  9. 1/4 ಟೀಸ್ಪೂನ್ ಸಕ್ಕರೆ 
  10. 1/4 ಟೀಸ್ಪೂನ್ ಸಾಂಬಾರ್ ಪುಡಿ
  11. 1/2 ಚಮಚ ನಿಂಬೆ ರಸ (ಬೇಕಾದಲ್ಲಿ)
  12. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  13. 2 ಟೇಬಲ್ ಚಮಚ ಹಸಿ ತೆಂಗಿನ ತುರಿ
  14. 2 ಟೇಬಲ್ ಚಮಚ ಸೇವ್ (ಬೇಕಾದಲ್ಲಿ)
  15. 2 ಟೀಸ್ಪೂನ್ ಅಡುಗೆ ಎಣ್ಣೆ 
  16. ಉಪ್ಪು ರುಚಿಗೆ ತಕ್ಕಷ್ಟು

ನರ್ಗಿಸ್ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಸ್ಟವ್ ಆಫ್ ಮಾಡಿ. 
  2. ಹೆಚ್ಚಿದ ಈರುಳ್ಳಿ, ಟೊಮೇಟೊ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಕಲಸಿ. 
  3. ನಂತರ ಉಪ್ಪು, ಸಕ್ಕರೆ, ಸಾಂಬಾರ್ ಪುಡಿ ಮತ್ತು ನಿಂಬೆ ರಸ ಸೇರಿಸಿ ಕಲಸಿ. 
  4. ನಂತರ ಮಂಡಕ್ಕಿ, ಹಾಕಿ ಚೆನ್ನಾಗಿ ಕಲಸಿ. 
  5. ಸರ್ವಿಂಗ್ ಪ್ಲೇಟ್ ಗೆ ಕಲಸಿದ ಮಂಡಕ್ಕಿ ಹಾಕಿ. 
  6. ಕೊತ್ತಂಬರಿ ಸೊಪ್ಪು, ಹಸಿ ತೆಂಗಿನ ತುರಿ ಮತ್ತು ಸೇವ್ ನಿಂದ ಅಲಂಕರಿಸಿ. ಹಾಗು ಕೂಡಲೇ ಬಡಿಸಿ. ಸವಿದು ಆನಂದಿಸಿ. 
Related Posts Plugin for WordPress, Blogger...