Togarikalu saaru recipe in Kannada | ತೊಗರಿಕಾಳು ಸಾರು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 1 ಕಪ್ ತೊಗರಿಕಾಳು
- 1 - 2 ಟೀ ಚಮಚ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ ಅಥವಾ ಕೆಳಗೆಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿಯಿರಿ
- 2 ಟೀಸ್ಪೂನ್ ಅಡುಗೆ ಎಣ್ಣೆ
- 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- ನಿಮ್ಮ ರುಚಿ ಪ್ರಕಾರ ಉಪ್ಪು
ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ml)
- 1 ಕತ್ತರಿಸಿದ ಈರುಳ್ಳಿ
- 4 ಬೇಳೆ ಬೆಳ್ಳುಳ್ಳಿ
- ಸ್ವಲ್ಪ ಶುಂಠಿ
- 1 ಕತ್ತರಿಸಿದ ಟೊಮೆಟೊ
- 1/4 ಕಪ್ ತೆಂಗಿನ ತುರಿ
- ಸ್ವಲ್ಪ ಚಕ್ಕೆ
- ಸ್ವಲ್ಪ ಲವಂಗ
- ಸ್ವಲ್ಪ ಕೊತ್ತುಂಬರಿ ಸೊಪ್ಪು
- ಸ್ವಲ್ಪ ಕರಿಬೇವು
ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ ಇಲ್ಲದಿದ್ದಲ್ಲಿ:
- 2 - 5 ಒಣಮೆಣಸಿನಕಾಯಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಮೆಂತ್ಯ
- ದೊಡ್ಡ ಚಿಟಿಕೆ ಸಾಸಿವೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1/2 ಚಮಚ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ತೊಗರಿಕಾಳು ಸಾರು ಮಾಡುವ ವಿಧಾನ:
- ತೊಗರಿಕಾಳನ್ನು ಬಿಡಿಸಿ ತೆಗೆದುಕೊಳ್ಳಿ.
- ಒಂದು ಕುಕ್ಕರ್ ಅಥವಾ ಪಾತ್ರೆಗೆ ಹಾಕಿ. ಅರಿಶಿನ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಮೆತ್ತಗೆ ಬೇಯಿಸಿಕೊಳ್ಳಿ.
- ಆ ಸಮಯದಲ್ಲಿ, ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಣಮೆಣಸಿನಕಾಯಿ ಮತ್ತು ಸಾರಿನಪುಡಿಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹುರಿದುಕೊಳ್ಳಿ. ಸಾರಿನಪುಡಿ ಅಥವಾ ಸಾಂಬಾರ್ ಪುಡಿ ಇದ್ದಲ್ಲಿ ಹುರಿಯುವುದು ಬೇಡ.
- ನಂತರ ಚಕ್ಕೆ, ಲವಂಗ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹುರಿಯಿರಿ.
- ಹೆಚ್ಚಿದ ಈರುಳ್ಳಿಯನ್ನು ಹುರಿಯಿರಿ.
- ಈರುಳ್ಳಿ ಹುರಿಯುವಾಗ, ಕರಿಬೇವು ಸೇರಿಸಿ ಹುರಿಯಿರಿ.
- ಆಮೇಲೆ ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹುರಿಯಿರಿ.
- ಕೊನೆಯಲ್ಲಿ ಕಾಯಿತುರಿ ಹಾಕಿ, ಸ್ಟವ್ ಆಫ್ ಮಾಡಿ, ಒಮ್ಮೆ ಮಗುಚಿ.
- ಬಿಸಿ ಅರಿದಮೇಲೆ, ಒಂದು ಸೌಟು ಬೇಯಿಸಿದ ತೊಗರಿಕಾಳಿನೊಂದಿಗೆ, ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಅರೆದಿಟ್ಟುಕೊಳ್ಳಿ.
- ಬೇಯಿಸಿದ ತೊಗರಿಕಾಳಿಗೆ ಅರೆದ ಮಸಾಲೆ ಹಾಕಿ.
- ಉಪ್ಪು, ಬೆಲ್ಲ ಮತ್ತು ಹುಳಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ಮಗುಚಿ, ಕುದಿಸಿ.
- ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ, ಸ್ಟವ್ ಆಫ್ ಮಾಡಿ.
- ಎಣ್ಣೆ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ.
- ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ