Ele kosu pathrode recipe in Kannada | ಎಲೆಕೋಸು ಪತ್ರೊಡೆ ಮಾಡುವ ವಿಧಾನ
ಎಲೆಕೋಸು ಪತ್ರೊಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಮಧ್ಯಮ ಗಾತ್ರದ ಎಲೆಕೋಸು
- 1 ಕಪ್ ದೋಸೆ ಅಕ್ಕಿ
- 2 - 4 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
- 1/4 ಕಪ್ ತೆಂಗಿನ ತುರಿ
- 1 ದೊಡ್ಡ ನೆಲ್ಲಿಕಾಯಿ ಗಾತ್ರದ ಬೆಲ್ಲ
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನಬೇಳೆ
- 1 ಒಣ ಮೆಣಸಿನ ಕಾಯಿ
- ಚಿಟಿಕೆ ಅರಿಶಿನ
- ಚಿಟಿಕೆ ಇಂಗು
- 5 - 6 ಕರಿಬೇವಿನ ಎಲೆ
- 1/4 ಕಪ್ ತೆಂಗಿನ ತುರಿ
- 2 ಟೀಸ್ಪೂನ್ ಪುಡಿ ಮಾಡಿದ ಬೆಲ್ಲ
- ಸ್ವಲ್ಪ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಎಲೆಕೋಸು ಪತ್ರೊಡೆ ಮಾಡುವ ವಿಧಾನ:
- ಅಕ್ಕಿಯನ್ನು ಕನಿಷ್ಟ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು.
- ಕೋಸನ್ನು ಸಣ್ಣಗೆ ಹೆಚ್ಚಿ, ಹತ್ತು ನಿಮಿಷ ನೀರಲ್ಲಿ ನೆನೆಸಿ, ನೀರು ಬಗ್ಗಿಸಿ ಪಕ್ಕಕ್ಕಿಡಿ.
- ಅಕ್ಕಿ ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
- ಕೊತ್ತಂಬರಿ ಬೀಜ, ಜೀರಿಗೆ, ಒಣ ಮೆಣಸಿನಕಾಯಿ, ತೆಂಗಿನತುರಿ, ಬೆಲ್ಲ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ಸ್ವಲ್ಪ ನುಣ್ಣಗೆ ರುಬ್ಬಬೇಕು.
- ಹಿಟ್ಟು ದೋಸೆ ಹಿಟ್ಟಿನಷ್ಟು ದಪ್ಪವಿರಲಿ.
- ಆಮೇಲೆ ಹಿಟ್ಟನ್ನು ಕತ್ತರಿಸಿದ ಎಲೆಕೋಸಿಗೆ ಹಾಕಿ, ಕಲಸಿ, 30 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ.
- ಇಡ್ಲಿ ತಟ್ಟೆಯಲ್ಲಿಟ್ಟು ಬೇಯಿಸಿದರೆ ಕಡಿಮೆ ಸಮಯ ಸಾಕಾಗುವುದು.
- ಬೆಂದ ನಂತರ ಪುಡಿ ಮಾಡಿಕೊಳ್ಳಿ.
- ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಮೆಣಸಿನ ಕಾಯಿ, ಕರಿಬೇವಿನ ಎಲೆ, ಅರಿಶಿನ ಮತ್ತು ಇಂಗಿನ ಒಗ್ಗರಣೆ ಮಾಡಿಕೊಳ್ಳಿ.
- ಪುಡಿಮಾಡಿದ ಪತ್ರೊಡೆ ಹಾಕಿ ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಮಗುಚಿ.
- ಕೊನೆಯಲ್ಲಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಮತ್ತು ಪುಡಿ ಮಾಡಿದ ಬೆಲ್ಲ ಹಾಕಿ, ಚೆನ್ನಾಗಿ ಮಗುಚಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ