ಉಪಹಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉಪಹಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜೂನ್ 7, 2025

Masala oats recipe in Kannada | ಮಸಾಲಾ ಓಟ್ಸ್ ಮಾಡುವ ವಿಧಾನ

 

Masala oats recipe in Kannada

Masala oats recipe in Kannada | ಮಸಾಲಾ ಓಟ್ಸ್ ಮಾಡುವ ವಿಧಾನ

ಮಸಾಲಾ ಓಟ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಓಟ್ಸ್
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 tsp ಟೀಸ್ಪೂನ್ ಶುಂಠಿ
  5. 1 tsp ಟೀಸ್ಪೂನ್ ಬೆಳ್ಳುಳ್ಳಿ
  6. 1 ಹಸಿಮೆಣಸಿನಕಾಯಿ
  7. ಸ್ವಲ್ಪ ಕರಿಬೇವು
  8. 1 ಈರುಳ್ಳಿ
  9. 1/2 cup ಮಿಶ್ರ ತರಕಾರಿಗಳು
  10. 1 ಟೊಮೇಟೊ
  11. 1/4 tsp ಅರಿಶಿನ ಪುಡಿ
  12. 1/2 tsp ಅಚ್ಚಖಾರದ ಪುಡಿ
  13. 1/2 tsp ಧನಿಯಾ ಪುಡಿ
  14. 1/2 tsp ಪಾವ್ ಬಾಜಿ ಮಸಾಲಾ
  15. 1/4 tsp ಗರಂ ಮಸಾಲಾ
  16. ಸ್ವಲ್ಪ ಕೊತ್ತಂಬರಿ ಸೊಪ್ಪು
  17. ನಿಂಬೆ ಹಣ್ಣಿನ ರಸ ರುಚಿಗೆ ತಕ್ಕಂತೆ
  18. 2 tbsp ಅಡುಗೆ ಎಣ್ಣೆ
  19. ಉಪ್ಪು ರುಚಿಗೆ ತಕ್ಕಂತೆ

ಮಸಾಲಾ ಓಟ್ಸ್ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಒಗ್ಗರಣೆ ಮಾಡಿ. 
  2. ಸಣ್ಣಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು  ಹಾಕಿ ಹುರಿಯಿರಿ. 
  3. ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. 
  4. ಮಿಶ್ರ ತರಕಾರಿಗಳನ್ನು ಹಾಕಿ ಹುರಿಯಿರಿ. 
  5. ಹೆಚ್ಚಿದ ಟೊಮೇಟೊ ಹಾಕಿ ಹುರಿಯಿರಿ. 
  6. ನಂತರ ಅಚ್ಚಖಾರದ ಪುಡಿ, ಧನಿಯಾ ಪುಡಿ, ಪಾವ್ ಬಾಜಿ ಮಸಾಲಾ, ಗರಂ ಮಸಾಲ ಮತ್ತು ಅರಿಶಿನ ಸೇರಿಸಿ ಹುರಿಯಿರಿ. 
  7. ಸುಮಾರು ಒಂದೂವರೆ ಕಪ್ ನೀರು ಸೇರಿಸಿ
  8. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕುದಿಯಲು ಬಿಡಿ.   
  9. ಒಂದು ಕುದಿ ಬಂದ ಮೇಲೆ, ಅರ್ಧ ಕಪ್ ಓಟ್ಸ್ ಹಾಕಿ ಮಗುಚಿ.
  10. ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ. 
  11. ಅಗತ್ಯವಿದ್ದರೆ ನೀರು ಸೇರಿಸಿ, ಕುದಿಸಿ. 
  12. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟವ್ ಆಫ್ ಮಾಡಿ.  
  13. ಕೊನೆಯಲ್ಲಿ ರುಚಿಗೆ ತಕ್ಕಂತೆ ನಿಂಬೆ ಹಣ್ಣಿನ ರಸ ಸೇರಿಸಿ. 
  14. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ರುಚಿಯಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಸೆಪ್ಟೆಂಬರ್ 17, 2024

Eerulli rice recipe in Kannada | ಈರುಳ್ಳಿ ರೈಸ್ ಮಾಡುವ ವಿಧಾನ

 

Eerulli rice recipe in Kannada

Eerulli rice recipe in Kannada | ಈರುಳ್ಳಿ ರೈಸ್ ಮಾಡುವ ವಿಧಾನ 

ಈರುಳ್ಳಿ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಅಕ್ಕಿ (ಸೋನಾ ಮಸೂರಿ)
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 7 - 8 ಕರಿಬೇವಿನ ಎಲೆ
  5. 1 ದೊಡ್ಡ ಈರುಳ್ಳಿ
  6. 1/4 ಟೀಸ್ಪೂನ್ ಅರಿಶಿನ ಪುಡಿ
  7. 1 ಟೇಬಲ್ ಸ್ಪೂನ್ ರಸಂ ಪೌಡರ್
  8. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು (ಅಥವಾ ರುಚಿಗೆ ತಕ್ಕಷ್ಟು)
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ರುಚಿಗೆ ತಕ್ಕಷ್ಟು)
  11. 1 ಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  12. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಈರುಳ್ಳಿ ರೈಸ್ ಮಾಡುವ ವಿಧಾನ:

  1. ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಮೊದಲಿಗೆ ಸಾಸಿವೆ ಮತ್ತು ಜೀರಿಗೆ ಸೇರಿಸಿ.
  4. ಸಾಸಿವೆ ಸಿಡಿದ ಕೂಡಲೇ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
  5.  ಅರಿಶಿನ, ಉಪ್ಪು ಮತ್ತು ಸಾರಿನ ಪುಡಿ ಸೇರಿಸಿ ಹುರಿಯಿರಿ. 
  6. ನಂತರ ಹುಣಿಸೆರಸ ಸೇರಿಸಿ. 
  7. ರುಚಿಗೆ ತಕ್ಕಂತೆ ಬೆಲ್ಲ ಸೇರಿಸಿ. 
  8. ಚೆನ್ನಾಗಿ ಮಗುಚಿ ಒಂದು ನಿಮಿಷ ಕುದಿಸಿ. 
  9.  ಬೇಯಿಸಿದ ಅನ್ನ ಸೇರಿಸಿ. 
  10. ಕೊತ್ತಂಬರಿ ಸೊಪ್ಪು ಸೇರಿಸಿ. 
  11. ಒಂದು ಚಪ್ಪಟೆಯಾದ ಸಟ್ಟುಗದಿಂದ ಕಲಸಿ. 
  12. ಸ್ಟವ್ ಆಫ್ ಮಾಡಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಸೆಪ್ಟೆಂಬರ್ 13, 2024

Mandakki dose recipe in Kannada | ಮಂಡಕ್ಕಿ ದೋಸೆ ಮಾಡುವ ವಿಧಾನ

 

Mandakki dose recipe in Kannada

Mandakki dose recipe in Kannada | ಮಂಡಕ್ಕಿ ದೋಸೆ ಮಾಡುವ ವಿಧಾನ

ಮಂಡಕ್ಕಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಅಕ್ಕಿ
  2. 1 ಟೀಸ್ಪೂನ್ ಮೆಂತ್ಯ
  3. 2 ಕಪ್ ಮಂಡಕ್ಕಿ
  4. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  5. ಉಪ್ಪು ರುಚಿಗೆ ತಕ್ಕಷ್ಟು.

ಮಂಡಕ್ಕಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿಅಕ್ಕಿ ಮತ್ತು ಮೆಂತೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಇನ್ನೊಂದು ಪಾತ್ರೆಯಲ್ಲಿ ಮಂಡಕ್ಕಿಯನ್ನು ಹತ್ತು ನಿಮಿಷ ನೆನೆಯಲು ಬಿಡಿ.
  3. ನೆನೆಸಿದ ಅಕ್ಕಿ ಮತ್ತು ಮೆಂತೆಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಳ್ಳಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. 
  5. ಆನಂತರ ನೆನೆಸಿದ ಮಂಡಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆದು ಅದೇ ಪಾತ್ರೆಗೆಹಾಕಿ. 
  6. ಹಿಟ್ಟನ್ನು ಚೆನ್ನಾಗಿ ಕಲಸಿ. 
  7. ಮುಚ್ಚಳವನ್ನು ಮುಚ್ಚಿ, 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ತೆಳ್ಳಗಿನ ದೋಸೆ ಮಾಡಿ.
  10. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ತುಪ್ಪ ಅಥವಾ ಎಣ್ಣೆ ಹಾಕಿ ಖಾಯಿಸಿ.
  12. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜೂನ್ 7, 2024

Ragi vegetable dose recipe in Kannada | ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ

 

Ragi vegetable dose recipe in Kannada

Ragi vegetable dose recipe in Kannada | ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ

ತರಕಾರಿ ಹಾಕಿ ರಾಗಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರಾಗಿಹಿಟ್ಟು
  2. 2 ಟೇಬಲ್ ಚಮಚ ರವೆ
  3. 2 ಟೇಬಲ್ ಚಮಚ ಗೋಧಿಹಿಟ್ಟು
  4. 1 ಟೀಸ್ಪೂನ್ ಹೆಚ್ಚಿದ ಶುಂಠಿ
  5. 1 ಟೇಬಲ್ ಚಮಚ ಕರಿಬೇವಿನ ಸೊಪ್ಪು
  6. 2 ಟೇಬಲ್ ಚಮಚ ಮೆಂತೆಸೊಪ್ಪು
  7. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1 ಮಧ್ಯಮ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  9. 1/2 ದಪ್ಪಮೆಣಸು ಸಣ್ಣಗೆ ಹೆಚ್ಚಿದ್ದು
  10. 1/2 ಕ್ಯಾರಟ್ ತುರಿದಿದ್ದು
  11. 1/2 ಟೀಸ್ಪೂನ್ ಜೀರಿಗೆ
  12. ಉಪ್ಪು ರುಚಿಗೆ ತಕ್ಕಷ್ಟು

ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರಾಗಿಹಿಟ್ಟು, ರವೆ ಮತ್ತು ಗೋಧಿಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಹೆಚ್ಚಿದ ಶುಂಠಿ, ಕರಿಬೇವು, ಮೆಂತೆಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  3. ಹಾಗೆಯೇ ತುರಿದ ಕ್ಯಾರಟ್, ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸನ್ನು ಸೇರಿಸಿ. 
  4. ಸುಮಾರು ಎರಡು ಕಪ್ ನೀರನ್ನು ಸ್ವಲ್ಪಸ್ವಲ್ಪವೇ ಸೇರಿಸುತ್ತಾ ಗಂಟಿಲ್ಲದಂತೆ ಹಿಟ್ಟನ್ನು ತಯಾರಿಸಿಕೊಳ್ಳಿ. 
  5. ಜೀರಿಗೆಯನ್ನು ಸೇರಿಸಿ. 
  6. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ. 
  7. ಚನ್ನಾಗಿ ಪಳಗಿಸಿದ ಕಬ್ಬಿಣದ ತವಾ ಅಥವಾ ನಾನ್ ಸ್ಟಿಕ್ ತವ ಬಿಸಿ ಮಾಡಿ, ರವೇ ದೋಸೆಯಂತೆ ತೆಳ್ಳಗಿನ ದೋಸೆ ಮಾಡಿ. 
  8. ಮೇಲಿನಿಂದ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಖಾಯಿಸಿ. 
  9. ಚಟ್ನಿಯೊಂದಿಗೆ ಅಥವಾ ಚಟ್ನಿ ಪುಡಿಯೊಂದಿಗೆ ಸವಿದು ಆನಂದಿಸಿ. 


ಗುರುವಾರ, ಏಪ್ರಿಲ್ 18, 2024

Kallangadi sippe dose recipe in Kannada | ಕಲ್ಲಂಗಡಿ ಸಿಪ್ಪೆ ದೋಸೆ ಮಾಡುವ ವಿಧಾನ

 

Kallangadi sippe dose recipe in Kannada

Kallangadi sippe dose recipe in Kannada | ಕಲ್ಲಂಗಡಿ ಸಿಪ್ಪೆ ದೋಸೆ ಮಾಡುವ ವಿಧಾನ

ಕಲ್ಲಂಗಡಿ ಸಿಪ್ಪೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಅಕ್ಕಿ
  2. 1 ಕಪ್ ಕಲ್ಲಂಗಡಿ ಹಣ್ಣಿನ ಬಿಳಿ ಭಾಗ 
  3. 2 ಟೇಬಲ್ ಚಮಚ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 ಕಪ್ ಅವಲಕ್ಕಿ
  6. ಉಪ್ಪು ರುಚಿಗೆ ತಕ್ಕಷ್ಟು.

ಕಲ್ಲಂಗಡಿ ಸಿಪ್ಪೆ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಇನ್ನೊಂದು ಪಾತ್ರೆಯಲ್ಲಿಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  3. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಬಿಳಿ ಭಾಗವನ್ನು ತೆಗೆದಿಟ್ಟುಕೊಳ್ಳಿ. 
  4. ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು ಹಾಕಿ.  
  5. ಆದಷ್ಟು ಕಡಿಮೆ ನೀರು ಸೇರಿಸಿ ಅರೆಯಿರಿ. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  6. ನಂತರ ನೆನೆಸಿದ ಅಕ್ಕಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. ಕಡಿಮೆ ನೀರು ಬಳಸಿ, ಏಕೆಂದರೆ ಕಲ್ಲಂಗಡಿ ಹಣ್ಣಿನ ಬಿಳಿ ಭಾಗದಲ್ಲಿ ನೀರಿನಂಶ ಜಾಸ್ತಿ ಇರುತ್ತದೆ. 
  7. ನುಣ್ಣನೆ ಅರೆದು ಅದೇ ಪಾತ್ರೆಗೆ ಹಾಕಿ.
  8. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  9. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  10. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  11. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  12. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ, ಖಾಯಿಸಿ.
  13. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಡಿಸೆಂಬರ್ 12, 2023

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ

 

Navane khichdi recipe in Kannada

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ 

ನವಣೆ ಖಿಚಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ನವಣೆ
  2. 1/2 ಕಪ್ ಹೆಸರುಬೇಳೆ
  3. 1 ಪುಲಾವ್ ಎಲೆ
  4. 1/2 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಶುಂಠಿ
  7. ಸ್ವಲ್ಪ ಕರಿಬೇವು
  8. 1 - 2 ಹಸಿಮೆಣಸಿನಕಾಯಿ
  9. 1 ಈರುಳ್ಳಿ
  10. 1 ಸಣ್ಣ ಗಾತ್ರದ ದಪ್ಪಮೆಣಸು
  11. 2 ಕಪ್ ಬೆರಕೆ ತರಕಾರಿ
  12. ದೊಡ್ಡ ಚಿಟಿಕೆ ಅರಿಶಿನ ಪುಡಿ
  13. ದೊಡ್ಡ ಚಿಟಿಕೆ ಇಂಗು
  14. 1 ಟೊಮೇಟೊ
  15. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  16. 3 ಟೀಸ್ಪೂನ್ ತುಪ್ಪ
  17. ಸ್ವಲ್ಪ ಕೊತ್ತಂಬರಿ ಸೊಪ್ಪು

ಖಿಚಡಿ ಮಾಡುವ ವಿಧಾನ:

  1. ನವಣೆಯನ್ನು ಚೆನ್ನಾಗಿ ತೊಳೆದು, ಎರಡು ಘಂಟೆ ನೆನೆಸಿಡಿ. 
  2. ಹೆಸರುಬೇಳೆಯನ್ನು 20 ನಿಮಿಷ ನೆನೆಸಿ.
  3. ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. 
  4. ಪುಲಾವ್ ಎಲೆ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  5. ಶುಂಠಿ, ಕರಿಬೇವು ಮತ್ತು ಸೀಳಿದ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. 
  6. ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸು ಹಾಕಿ ಹುರಿಯಿರಿ. 
  7. ನಂತರ ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ. 
  8. ಕತ್ತರಿಸಿದ ಬೆರಕೆ ತರಕಾರಿಗಳನ್ನು ಹಾಕಿ ಹುರಿಯಿರಿ.  
  9. ಟೊಮೇಟೊ ಸೇರಿಸಿ ಹುರಿಯಿರಿ. 
  10. ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಮಗುಚಿ.
  11. ಸುಮಾರು 4 ಕಪ್ ನೀರು ಸೇರಿಸಿ.
  12. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.  
  13. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  14. ಮುಚ್ಚಳ ಮುಚ್ಚಿ 2 - 3 ವಿಷಲ್ ಮಾಡಿ. 
  15. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಡಿಸೆಂಬರ್ 1, 2023

Jeerige chitranna recipe in Kannada | ಜೀರಿಗೆ ಚಿತ್ರಾನ್ನ ಮಾಡುವ ವಿಧಾನ

 


Jeerige chitranna recipe in Kannada | ಜೀರಿಗೆ ಚಿತ್ರಾನ್ನ ಮಾಡುವ ವಿಧಾನ

ಜೀರಿಗೆ ಚಿತ್ರಾನ್ನ ವಿಡಿಯೋ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾಮಸೂರಿ)
  2. 1/2 ಕಪ್ ತೆಂಗಿನ ತುರಿ
  3. 3 - 5 ಕೆಂಪು ಮೆಣಸಿನಕಾಯಿ
  4. 2 ಟೀಸ್ಪೂನ್ ಜೀರಿಗೆ
  5. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  6. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  2. 1 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡಲೆಬೇಳೆ
  5. 4 - 6 ಕರಿಬೇವಿನ ಎಲೆ
  6. 1/4 ಟೀಸ್ಪೂನ್ ಅರಿಶಿನ ಪುಡಿ
  7. 2 ಟೇಬಲ್ ಚಮಚ ಅಡುಗೆ ಎಣ್ಣೆ

ಜೀರಿಗೆ ಚಿತ್ರಾನ್ನ ಮಾಡುವ ವಿಧಾನ:

  1. ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. 
  2. ಮಿಕ್ಸಿ ಜಾರಿಗೆ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಹಾಕಿ.
  3. ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
  4. ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆದು ಪಕ್ಕಕ್ಕಿಡಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಕಡಲೆಕಾಯಿ (ಶೇಂಗಾ) ಯನ್ನು ಹಾಕಿ ಹುರಿಯಿರಿ. 
  6. ಸಾಸಿವೆ , ಉದ್ದಿನ ಬೇಳೆ ಮತ್ತು ಕಡಲೆಬೇಳೆ ಸೇರಿಸಿ ಒಗ್ಗರಣೆ  ಮಾಡಿ. 
  7. ನಂತರ ಅರಿಶಿನ ಪುಡಿ ಮತ್ತು ಕರಿಬೇವು ಸೇರಿಸಿ. ಉರಿ ಕಡಿಮೆ ಮಾಡಿ.
  8. ಅರೆದ ಮಸಾಲಾ ಪೇಸ್ಟ್ ಸೇರಿಸಿ.
  9. ಹೆಚ್ಚಿನ ನೀರು ಆರುವವರೆಗೆ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  10. ಅನ್ನ ಹಾಕಿ ಕಲಸಿ. 
  11. ಬೇಕಾದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಮೇಲಿನಿಂದ ಹಾಕಿ ಬಡಿಸಿ. 

ಶನಿವಾರ, ನವೆಂಬರ್ 25, 2023

Khaproli dose recipe in Kannada | ಖಾಪ್ರೊಳಿ ದೋಸೆ ಮಾಡುವ ವಿಧಾನ

 

Khaproli dose recipe in Kannada

Khaproli dose recipe in Kannada | ಖಾಪ್ರೊಳಿ ದೋಸೆ ಮಾಡುವ ವಿಧಾನ

ಖಾಪ್ರೊಳಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1.5 ಕಪ್ ದೋಸೆ ಅಕ್ಕಿ
  2. 1/2 ಕಪ್ ಉದ್ದಿನಬೇಳೆ
  3. 1/4 ಕಪ್ ಕಡ್ಲೆಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/2 ಕಪ್ ಗಟ್ಟಿ ಅವಲಕ್ಕಿ
  6. ಉಪ್ಪು ರುಚಿಗೆ ತಕ್ಕಷ್ಟು.

ಕಾಯಿ ಹಾಲಿಗೆ ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 2 ಕಪ್ ತೆಂಗಿನಕಾಯಿ ಹಾಲು
  2. 1/4 ಕಪ್ ಪುಡಿ ಮಾಡಿದ ಬೆಲ್ಲ
  3. ದೊಡ್ಡ ಚಿಟಿಕೆ ಏಲಕ್ಕಿ
  4. ದೊಡ್ಡ ಚಿಟಿಕೆ ಉಪ್ಪು

ಖಾಪ್ರೊಳಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಮೆಂತೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  3. ಅವಲಕ್ಕಿಯನ್ನು ಹಿಟ್ಟು ರುಬ್ಬುವ ೧೦ ನಿಮಿಷ ಮೊದಲು ನೆನೆಸಿ. 
  4. ನೆನೆಸಿದ ನಂತರ ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  5. ಚಿಟಿಕೆ ಅರಿಶಿನ ಹಾಕಿ, ಹಿಟ್ಟನ್ನು ಚೆನ್ನಾಗಿ ಕಲಸಿ. 
  6. ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  7. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ಕಾಯಿ ಹಾಲು, ಬೆಲ್ಲ, ಏಲಕ್ಕಿ ಮತ್ತು ಚಿಟಿಕೆ ಉಪ್ಪು ಸೇರಿಸಿ, ಸಿಹಿ ಕಾಯಿಹಾಲನ್ನು ತಯಾರಿಸಿಟ್ಟುಕೊಳ್ಳಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಹಿಟ್ಟು ಸುರಿದು, ಸೆಟ್ ದೋಸೆಯಂತೆ ದಪ್ಪ ದೋಸೆ ಮಾಡಿ.
  10. ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ದೋಸೆ ತೆಗೆಯಿರಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ಸಿಹಿ ಕಾಯಿಹಾಲು ಅಥವಾ ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ನವೆಂಬರ್ 16, 2023

Ragi shavige recipe in Kannada | ರಾಗಿ ಶಾವಿಗೆ ಮಾಡುವ ವಿಧಾನ

 

Ragi shavige recipe in Kannada

Ragi shavige recipe in Kannada | ರಾಗಿ ಶಾವಿಗೆ ಮಾಡುವ ವಿಧಾನ

ರಾಗಿ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರಾಗಿ ಹಿಟ್ಟು
  2. 1.25 ಕಪ್ ನೀರು
  3. 1 ಟೀಸ್ಪೂನ್ ಎಣ್ಣೆ
  4. ಉಪ್ಪು ರುಚಿಗೆ ತಕ್ಕಷ್ಟು

ರಾಗಿ ಶಾವಿಗೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ನೀರನ್ನು ಗಂಟಿಲ್ಲದಂತೆ ಕಲಸಿ.
  2. ಕಲಸಿದ ಹಿಟ್ಟನ್ನು ಒಂದು ಬಾಣಲೆಯಲ್ಲಿ ತೆಗೆದುಕೊಳ್ಳಿ.
  3. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.
  4.  ಎಣ್ಣೆಯನ್ನೂ ಸೇರಿಸಿ. 
  5. ಮಧ್ಯಮ ಉರಿಯಲ್ಲಿ ಕೈ ಬಿಡದೆ ಮಗುಚುತ್ತಾ ಮೃದುವಾದ ಹಿಟ್ಟನ್ನು ತಯಾರಿಸಿ.
  6. ಸ್ಟವ್ ಆಫ್ ಮಾಡಿ, ಕೈಗೆ ಎಣ್ಣೆ ಹಚ್ಚಿಕೊಂಡು, ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ. 
  7. ಹಿಟ್ಟು ಮೃದುವಾಗಿರಲಿ. 
  8. ನಂತರ ಉದ್ದುದ್ದ ಉಂಡೆಗಳನ್ನು ಮಾಡಿ.
  9. ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. 
  10. ಸೆಕೆಯಲ್ಲಿ (ಆವಿಯಲ್ಲಿ) 8-10 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ.


ಶುಕ್ರವಾರ, ಅಕ್ಟೋಬರ್ 20, 2023

Masale avalakki recipe in Kannada | ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ

 

Hasiru masale avalakki recipe in Kannada

Masale avalakki recipe in Kannada | ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ

ಮಸಾಲೆ ಅವಲಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 3 ಕಪ್ ತೆಳು ಅವಲಕ್ಕಿ
  2. 1 ಕಪ್ ತೆಂಗಿನತುರಿ
  3. 2 ಹಸಿಮೆಣಸಿನಕಾಯಿ
  4. ಸ್ವಲ್ಪ ಕರಿಬೇವು
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. 1 - 2 ಟೀಸ್ಪೂನ್ ನಿಂಬೆಹಣ್ಣಿನ ರಸ
  7. ರುಚಿಗೆ ತಕ್ಕಂತೆ ಉಪ್ಪು
  8. ರುಚಿಗೆ ತಕ್ಕಂತೆ ಸಕ್ಕರೆ

ಹಸಿರು ಮಸಾಲೆ ಅವಲಕ್ಕಿ ಮಾಡುವ ವಿಧಾನ:

  1. ಒಂದು ಮಿಕ್ಸಿಜಾರಿನಲ್ಲಿ ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಕರಿಬೇವನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
  3. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.  
  4. ರುಚಿಗೆ ತಕ್ಕಂತೆ ಸಕ್ಕರೆಯನ್ನು ಸೇರಿಸಿ. 
  5. ನಿಂಬೆಹಣ್ಣಿನ ರಸವನ್ನೂ ಸೇರಿಸಿ. 
  6. ನೀರು ಹಾಕದೇ ಪುಡಿಮಾಡಿಕೊಳ್ಳಿ. 
  7. ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ.
  8. ಚೆನ್ನಾಗಿ ಹಿಸುಕಿ ಕಲಸಿ. 
  9. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಟೀ ಯೊಂದಿಗೆ ಸವಿದು ಆನಂದಿಸಿ. ಕಡ್ಲೆ ಉಸ್ಲಿಯೊಂದಿಗೆ ಬಡಿಸಿದರೆ ಬಹಳ ಚೆನ್ನಾಗಿರುತ್ತದೆ. 


ಶುಕ್ರವಾರ, ಅಕ್ಟೋಬರ್ 6, 2023

Ragi hesaru kalu dose recipe in Kannada | ರಾಗಿ ಹೆಸರು ಕಾಳು ದೋಸೆ ಮಾಡುವ ವಿಧಾನ

 

Ragi hesaru kalu dose recipe in Kannada | ರಾಗಿ ಹೆಸರು ಕಾಳು ದೋಸೆ ಮಾಡುವ ವಿಧಾನ


ರಾಗಿ ಮತ್ತು ಹೆಸರುಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಹೆಸರು ಕಾಳು
  2. 1/2 ಕಪ್ ರಾಗಿ
  3. 1/2 ಕಪ್ ತೆಂಗಿನತುರಿ
  4. 2 - 3 ಹಸಿರುಮೆಣಸಿನಕಾಯಿ
  5. ಸ್ವಲ್ಪ ಕೊತ್ತಂಬರಿ ಸೊಪ್ಪು
  6. 1cm ಉದ್ದದ ಶುಂಠಿ 
  7. 1 ಟೀಸ್ಪೂನ್ ಜೀರಿಗೆ
  8. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
  9. ಉಪ್ಪು ರುಚಿಗೆ ತಕ್ಕಷ್ಟು.

ಹೆಸರು ಕಾಳು ದೋಸೆ ಮಾಡುವ ವಿಧಾನ:

  1. ಹೆಸರು ಕಾಳು ಮತ್ತು ರಾಗಿಯನ್ನು ಚೆನ್ನಾಗಿ ತೊಳೆದು 4 - 5 ಘಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ನಂತರ ನೀರು ಬಗ್ಗಿಸಿ ಮಿಕ್ಸಿ ಜಾರಿಗೆ ಹಾಕಿ. 
  3. ಅದಕ್ಕೆ ತೆಂಗಿನತುರಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  4. ಜೊತೆಗೆ ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಜೀರಿಗೆ ಸೇರಿಸಿ. 
  5. ಅಗತ್ಯವಿದ್ದಷ್ಟು ನೀರು ಹಾಕಿ ನಯವಾಗಿ ಅರೆಯಿರಿ. ಒಂದು ಪಾತ್ರೆಗೆ ಹಾಕಿ.
  6. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  7. ಹಿಟ್ಟು ತೆಳುವಾದ ಉದ್ದಿನ ದೋಸೆ ಹಿಟ್ಟಿನ ಹದಕ್ಕಿರಲಿ. ಹಿಟ್ಟು ಹುಳಿ ಬರಿಸುವುದು ಬೇಡ. 
  8. ದೋಸೆ ಮಾಡಲು ಹೆಂಚನ್ನು ಬಿಸಿಮಾಡಿ ಕೊಳ್ಳಿ. 
  9. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ತೆಳುವಾಗಿ ಹರಡಿ. 
  10. ಮುಚ್ಚಳ ಮುಚ್ಚಿ ಬೇಯಿಸಿ.
  11. ಮೇಲಿನಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿ ದೋಸೆಯನ್ನು ಚಟ್ನಿಯೊಂದಿಗೆ ಬಡಿಸಿ. 

ಶುಕ್ರವಾರ, ಸೆಪ್ಟೆಂಬರ್ 29, 2023

Pepper rice recipe in Kannada | ಕಾಳುಮೆಣಸಿನ ಅನ್ನ ಮಾಡುವ ವಿಧಾನ

 

Pepper rice recipe in Kannada

Pepper rice recipe in Kannada | ಕಾಳುಮೆಣಸಿನ ಅನ್ನ ಮಾಡುವ ವಿಧಾನ

ಕಾಳುಮೆಣಸಿನ ಅನ್ನ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 2 ಟೇಬಲ್ ಚಮಚ ಗೋಡಂಬಿ
  6. 1 ಈರುಳ್ಳಿ
  7. ಸ್ವಲ್ಪ ಕರಿಬೇವು
  8. 2 ಟೀಸ್ಪೂನ್ ಕರಿಮೆಣಸು ಅಥವಾ ಕಾಳುಮೆಣಸು
  9.  ಉಪ್ಪು ರುಚಿಗೆ ತಕ್ಕಷ್ಟು

ಕಾಳುಮೆಣಸಿನ ಅನ್ನ ಮಾಡುವ ವಿಧಾನ:

  1. ಉದುರುದುರಾದ ಅನ್ನ ಮಾಡಿ ಎತ್ತಿಟ್ಟುಕೊಳ್ಳಿ. ಉಳಿದ ಅನ್ನವನ್ನು ಬಳಸಬಹುದು. 
  2. ಕರಿಮೆಣಸು ಅಥವಾ ಕಾಳುಮೆಣಸನ್ನು ತರಿತರಿಯಾಗಿ ಜಜ್ಜಿ ಎತ್ತಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆಯ ಒಗ್ಗರಣೆ ಮಾಡಿ. 
  4. ಗೋಡಂಬಿ ಹಾಕಿ ಹುರಿಯಿರಿ. 
  5. ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಹಾಕಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಜಜ್ಜಿದ ಕಾಳುಮೆಣಸು ಸೇರಿಸಿ. 
  7. ಒಮ್ಮೆ ಮಗುಚಿ, ಕೂಡಲೇ ಮಾಡಿಟ್ಟ ಅನ್ನ ಸೇರಿಸಿ. 
  8. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.

ಬುಧವಾರ, ಸೆಪ್ಟೆಂಬರ್ 13, 2023

Oggarane dose recipe in Kannada | ಒಗ್ಗರಣೆ ದೋಸೆ ಮಾಡುವ ವಿಧಾನ

 

Oggarane dose recipe in Kannada

Oggarane dose recipe in Kannada | ಒಗ್ಗರಣೆ ದೋಸೆ ಮಾಡುವ ವಿಧಾನ 

ಒಗ್ಗರಣೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
  2. 1/2 ಕಪ್ ತೆಂಗಿನ ತುರಿ
  3. 1/4 ಕಪ್ ಅವಲಕ್ಕಿ
  4. 4 - 5 ಒಣಮೆಣಸಿನಕಾಯಿ
  5. 1 ಟೀಸ್ಪೂನ್ ಕೊತ್ತಂಬರಿ ಬೀಜ
  6. 1/2 ಟೀಸ್ಪೂನ್ ಜೀರಿಗೆ
  7. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  8. 1 ಟೀಸ್ಪೂನ್ ಬೆಲ್ಲ
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. ಸಾಸಿವೆ 
  2. ಉದ್ದಿನಬೇಳೆ
  3. ಸಣ್ಣಗೆ ಹೆಚ್ಚಿದ ಈರುಳ್ಳಿ
  4. ಸಣ್ಣಗೆ ಹೆಚ್ಚಿದ ಕರಿಬೇವು
  5. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. ಒಗ್ಗರಣೆ ಮಾಡಲು ಎಣ್ಣೆ

ಒಗ್ಗರಣೆ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 3 - 4 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ಅವಲಕ್ಕಿಯನ್ನು ಹತ್ತು ನಿಮಿಷ ನೆನೆಸಿ. 
  3. ನಂತರ ನೀರನ್ನು ಬಗ್ಗಿಸಿ, ಅಕ್ಕಿ ಮತ್ತು ಅವಲಕ್ಕಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಳ್ಳಿ. 
  4. ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ ಮತ್ತು ಒಣ ಮೆಣಸಿನಕಾಯಿಯನ್ನು ಸೇರಿಸಿ. 
  5. ಅಗತ್ಯವಿದ್ದಷ್ಟು ನೀರು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. 
  6. ಒಂದು ಪಾತ್ರೆಗೆ ಹಿಟ್ಟನ್ನು ಬಗ್ಗಿಸಿ. ರುಚಿಗೆ ತಕ್ಕಂತೆ ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕಲಸಿ. ಹಿಟ್ಟು ನೀರ್ ದೋಸೆಗಿಂತ ಸ್ವಲ್ಪ ದಪ್ಪ ಇರಲಿ. 
  8. ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಬಿಸಿ ಮಾಡಿ. 
  9. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನ ಒಗ್ಗರಣೆ ಮಾಡಿ. 
  10.  ಒಗ್ಗರಣೆಯನ್ನು ಹರಡಿ, ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  11. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ ಬೇಯಿಸಿ.
  12. ನಂತರ ಮುಚ್ಚಳ ತೆರೆದು, ದೋಸೆ ತಿರುಗಿಸಿ ಹಾಕಿ ಇನ್ನೊಂದು ಬದಿ ಕಾಯಿಸಿ.
  13. ದೋಸೆಯನ್ನು ಹಾಗೆ ತಿನ್ನಬಹುದು. ಚಟ್ನಿ ಜೊತೆ ಬೇಕಾದರೂ ಬಡಿಸಬಹುದು. 

ಮಂಗಳವಾರ, ಆಗಸ್ಟ್ 22, 2023

Mylari dosa recipe in Kannada | ಮೈಲಾರಿ ದೋಸೆ ಮಾಡುವ ವಿಧಾನ

 

Mylari dosa recipe in Kannada | ಮೈಲಾರಿ ದೋಸೆ ಮಾಡುವ ವಿಧಾನ 

ಮೈಲಾರಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್):

  1. 1 ಕಪ್ ಕುಸುಬಲಕ್ಕಿ
  2. 1/2 ಕಪ್ ದೋಸೆ ಅಕ್ಕಿ
  3. 1/2 ಕಪ್ ಉದ್ದಿನಬೇಳೆ
  4. 1/2 ಕಪ್ ಮೈದಾ
  5. 1/4 ಕಪ್ ಅಕ್ಕಿಹಿಟ್ಟು
  6. ಉಪ್ಪು ರುಚಿಗೆ ತಕ್ಕಷ್ಟು.

ಮೈಲಾರಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಕುಸುಬಲಕ್ಕಿಯನ್ನು ತೆಗೆದುಕೊಳ್ಳಿ. ಕುಸುಬಲಕ್ಕಿ ಸಿಗದೇ ಇದ್ರೆ ಇಡ್ಲಿ ಅಕ್ಕಿಯನ್ನು ಬಳಸಬಹುದು.
  2. ಅದಕ್ಕೆ ದೋಸೆ ಅಕ್ಕಿಯನ್ನು ಸೇರಿಸಿ. 4 - 5 ಘಂಟೆ ನೆನೆಸಿ.
  3. ಇನ್ನೊಂದು ಪಾತ್ರೆಯಲ್ಲಿ ಉದ್ದಿನಬೇಳೆಯನ್ನು 4 - 5 ಘಂಟೆ ನೆನೆಸಿ.
  4. ನೆನೆಸಿದ ಉದ್ದಿನಬೇಳೆಯನ್ನು ನೀರು ಬಗ್ಗಿಸಿ ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
  5. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ.
  6. ನೆನೆಸಿದ ಅಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  7. ನುಣ್ಣಗೆ, ಆದರೆ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ. ಅದೇ ಪಾತ್ರೆಗೆ ಹಾಕಿ. 
  8. ಮಿಕ್ಸಿಜಾರಿನಲ್ಲಿ ಅಕ್ಕಿಹಿಟ್ಟು ಮತ್ತು ಮೈದಾ ಹಿಟ್ಟನ್ನು ತೆಗೆದುಕೊಂಡು, ಸ್ವಲ್ಪ ನೀರು ಸೇರಿಸಿ, ಒಮ್ಮೆ ಮಿಕ್ಸಿ ಮಾಡಿ, ಅದೇ ಪಾತ್ರೆಗೆ ಹಾಕಿ. 
  9. ಕೈಯಿಂದ ಚೆನ್ನಾಗಿ ಕಲಸಿ. 
  10. ಮುಚ್ಚಳ ಮುಚ್ಚಿ 7 - 8 ಘಂಟೆ ಹಿಟ್ಟು ಹುದುಗಲು ಬಿಡಿ. 
  11. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  12. ದೋಸೆ ಹೆಂಚನ್ನು ಬಿಸಿಮಾಡಿ. 
  13. ಉದ್ದಿನದೋಸೆಯಂತೆ ದೋಸೆ ಮಾಡಿ.
  14. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  15. 5 - 10 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ ಖಾಯಿಸಿ.
  16. ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಆಗಸ್ಟ್ 10, 2023

Jolada hittina paddu recipe in Kannada | ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ

 

Jolada hittina paddu recipe in Kannada

Jolada hittina paddu recipe in Kannada | ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ 

ಜೋಳದ ಹಿಟ್ಟಿನ ಪಡ್ಡು ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಜೋಳದ ಹಿಟ್ಟು
  2. 1/2 ಕಪ್ ರವೆ
  3. 1/4 ಕಪ್ ಮೊಸರು
  4. 1.5 ಕಪ್ ನೀರು
  5. ಎಣ್ಣೆ ಪಡ್ಡು ಮಾಡಲು
  6. 1/2 ಟೀಸ್ಪೂನ್ ಸಕ್ಕರೆ
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಈರುಳ್ಳಿ ಸಣ್ಣಗೆ ಕತ್ತರಿಸಿದ್ದು
  9. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  10. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು ಕರಿಬೇವು
  11. 1 ಹಸಿಮೆಣಸಿನಕಾಯಿ ಕತ್ತರಿಸಿದ್ದು
  12. 1/2 ಟೀಸ್ಪೂನ್ ಜೀರಿಗೆ
  13. 1/4 ಟೀಸ್ಪೂನ್ ಅಡುಗೆ ಸೋಡಾ

ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ:

  1. ಜೋಳದ ಹಿಟ್ಟು, ರವೆ, ಉಪ್ಪು ಮತ್ತು ಸಕ್ಕರೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಒಮ್ಮೆ ಚೆನ್ನಾಗಿ ಕಲಸಿ. 
  3. ನಂತರ ಮೊಸರನ್ನು ಸೇರಿಸಿ. 
  4. ನೀರನ್ನು ಸೇರಿಸಿ. ಗಂಟಿಲ್ಲದಂತೆ ಹಿಟ್ಟನ್ನು ಕಲಸಿ ಹತ್ತು ನಿಮಿಷ ನೆನೆಯಲು ಬಿಡಿ. 
  5. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಜೀರಿಗೆಯನ್ನು ಸೇರಿಸಿ. ಚೆನ್ನಾಗಿ ಕಲಸಿ. 
  6. ಕೊನೆಯಲ್ಲಿ ಅಡುಗೆ ಸೋಡಾ ಸೇರಿಸಿ ಕಲಸಿ. 
  7. ಪಡ್ಡು ಕಾವಲಿಯನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  8. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  9. 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  10. ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಆಗಸ್ಟ್ 8, 2023

Beetroot dose recipe in Kannada | ಬೀಟ್ರೂಟ್ ದೋಸೆ ಮಾಡುವ ವಿಧಾನ

 

Beetroot dose recipe in Kannada

Beetroot dose recipe in Kannada | ಬೀಟ್ರೂಟ್ ದೋಸೆ ಮಾಡುವ ವಿಧಾನ

ಬೀಟ್ರೂಟ್ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿಹಿಟ್ಟು
  2. 1/2 ಕಪ್ ರವೆ
  3. 1 ಟೇಬಲ್ ಚಮಚ ಗೋಧಿಹಿಟ್ಟು
  4. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  5. 1/2 ಟೀಸ್ಪೂನ್ ಜಜ್ಜಿದ ಕಾಳುಮೆಣಸು
  6. 1/2 ಟೀಸ್ಪೂನ್ ಜೀರಿಗೆ
  7. 1 ಸಣ್ಣ ಗಾತ್ರದ ಬೀಟ್ರೂಟ್ ಸಿಪ್ಪೆ ತೆಗೆದು ತುರಿದಿದ್ದು
  8. 1 ಸಣ್ಣ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  9. 2 ಟೇಬಲ್ ಚಮಚ ತೆಂಗಿನತುರಿ
  10. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  11. 1 ಟೇಬಲ್ ಚಮಚ ಕರಿಬೇವಿನ ಸೊಪ್ಪು
  12. ಚಿಟಿಕೆ ಇಂಗು (ಬೇಕಾದಲ್ಲಿ)
  13. 2.25  ಕಪ್ ನೀರು
  14. 5 - 6 ಎಣ್ಣೆ ದೋಸೆ ಮಾಡಲು
  15. ಉಪ್ಪು ರುಚಿಗೆ ತಕ್ಕಷ್ಟು

ಬೀಟ್ರೂಟ್ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರವೆ, ಅಕ್ಕಿಹಿಟ್ಟು ಮತ್ತು ಗೋಧಿಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಉಪ್ಪು, ಅಚ್ಚಖಾರದ ಪುಡಿ, ಜಜ್ಜಿದ ಕಾಳುಮೆಣಸು ಮತ್ತು ಜೀರಿಗೆ ಸೇರಿಸಿ. 
  3. ಹಾಗೆಯೇ ತುರಿದ ಬೀಟ್ರೂಟ್, ಕತ್ತರಿಸಿದ ಈರುಳ್ಳಿ ಮತ್ತು ತೆಂಗಿನತುರಿ ಸೇರಿಸಿ. 
  4. ಕತ್ತರಿಸಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  5. ಚೆನ್ನಾಗಿ ಒಮ್ಮೆ ಕಲಸಿ. 
  6. ಅಗತ್ಯವಿದ್ದಷ್ಟು ನೀರನ್ನು ಸ್ವಲ್ಪಸ್ವಲ್ಪವೇ ಸೇರಿಸುತ್ತಾ ತೆಳ್ಳಗಿನ ಹಿಟ್ಟನ್ನು ತಯಾರಿಸಿಕೊಳ್ಳಿ. 
  7. ಬೇಕಾದಲ್ಲಿ ಚಿಟಿಕೆ ಇಂಗನ್ನು ಸೇರಿಸಿ. 
  8. ಚನ್ನಾಗಿ ಪಳಗಿಸಿದ ಕಬ್ಬಿಣದ ತವಾ ಅಥವಾ ನಾನ್ ಸ್ಟಿಕ್ ತವ ಬಿಸಿ ಮಾಡಿ, ರವೇ ದೋಸೆಯಂತೆ ತೆಳ್ಳಗಿನ ದೋಸೆ ಮಾಡಿ. 
  9. ಮೇಲಿನಿಂದ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಖಾಯಿಸಿ. 
  10. ಚಟ್ನಿಯೊಂದಿಗೆ ಅಥವಾ ಹಾಗೆ ಸವಿದು ಆನಂದಿಸಿ. 


ಮಂಗಳವಾರ, ಆಗಸ್ಟ್ 1, 2023

Pocket paratha recipe in Kannada | ಪಾಕೆಟ್ ಪರೋಟ ಮಾಡುವ ವಿಧಾನ

 

Pocket paratha recipe in Kannada

Pocket paratha recipe in Kannada | ಪಾಕೆಟ್ ಪರೋಟ ಮಾಡುವ ವಿಧಾನ 

ಪಾಕೆಟ್ ಪರೋಟ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಗೋಧಿ ಹಿಟ್ಟು
  2. 1 ಟೇಬಲ್ ಚಮಚ ಎಣ್ಣೆ
  3. ಉಪ್ಪು ರುಚಿಗೆ ತಕ್ಕಷ್ಟು
  4. 3 ಟೇಬಲ್ ಚಮಚ ಎಣ್ಣೆ ಪರೋಟ ಕಾಯಿಸಲು

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ 
  2. 1 - 2 ಹಸಿಮೆಣಸಿನಕಾಯಿ
  3. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  4. 1/2 ದೊಣ್ಣೆಮೆಣಸು
  5. 1 ಸಣ್ಣ ಕ್ಯಾರಟ್ 
  6. ಚಿಟಿಕೆ ಅರಿಶಿನ
  7. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  8. 1/2 ಟೀಸ್ಪೂನ್ ಧನಿಯಾ ಪುಡಿ
  9. 1/4 ಟೀಸ್ಪೂನ್ ಜೀರಿಗೆ ಪುಡಿ
  10. 1/4 ಟೀಸ್ಪೂನ್ ಗರಂ ಮಸಾಲಾ
  11. 1/4 ಟೀಸ್ಪೂನ್ ಮಾವಿನಕಾಯಿ ಪುಡಿ
  12. 100gm ಪನ್ನೀರ್
  13. 1 ಟೇಬಲ್ ಚಮಚ ಕಸೂರೀಮೇಥಿ ಅಥವಾ ಕೊತ್ತಂಬರಿ ಸೊಪ್ಪು
  14. 3 ಟೇಬಲ್ ಚಮಚ ಎಣ್ಣೆ
  15. ಉಪ್ಪು ರುಚಿಗೆ ತಕ್ಕಷ್ಟು

ಪಾಕೆಟ್ ಪರೋಟ ಮಾಡುವ ವಿಧಾನ:

  1. ಗೋಧಿ ಹಿಟ್ಟು, ಉಪ್ಪು, ಎಣ್ಣೆ ಮತ್ತು ನೀರು ಬಳಸಿ ಮೆತ್ತಗಿನ ಚಪಾತಿ ಹಿಟ್ಟು ಕಲಸಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.  
  3.  ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಲು ಮುಂದುವರೆಸಿ. 
  4. ಸಣ್ಣಗೆ ಕತ್ತರಿಸಿದ ದೊಣ್ಣೆಮೆಣಸು ಮತ್ತು ತುರಿದ ಕ್ಯಾರಟ್ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  5. ಅದಕ್ಕೆ ಉಪ್ಪು ಅರಿಶಿನ, ಧನಿಯಾ ಪುಡಿ, ಜೀರಿಗೆ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲಾ ಪುಡಿ ಮತ್ತು ಮಾವಿನಕಾಯಿ ಪುಡಿ ಸೇರಿಸಿ ಮಗುಚಿ. 
  6. ತುರಿದ ಪನೀರ್ ಮತ್ತು ಕಸೂರಿ ಮೇಥಿ ಸೇರಿಸಿ ಮಗುಚಿ. 
  7. ಚಪಾತಿ ಹಿಟ್ಟನ್ನು ತೆಗೆದುಕೊಂಡು, ತೆಳುವಾದ ದೊಡ್ಡ ಚಪಾತಿ ಲಟ್ಟಿಸಿ.
  8. ಮಧ್ಯದಲ್ಲಿ ಮಸಾಲೆ ಇಟ್ಟು ಪಾಕೆಟಿನಂತೆ ಮಡಿಸಿ. 
  9. ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ತುಪ್ಪ ಅಥವಾ ಎಣ್ಣೆ ಹಾಕಿ. 
  10. ಕೆಚಪ್ ಅಥವಾ ಮೊಸರು ಅಥವಾ ಯಾವುದೇ ಗೊಜ್ಜಿನೊಂದಿಗೆ  ಬಡಿಸಿ. ಹಾಗೆಯೂ ತಿನ್ನಬಹುದು. 

ಮಂಗಳವಾರ, ಜುಲೈ 11, 2023

Ottu shavige recipe in Kannada | ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ

 

Ottu shavige recipe in Kannada

Ottu shavige recipe in Kannada | ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ

ಉಳಿದ ಅನ್ನದ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅನ್ನ
  2. 1/2 ಕಪ್ ಅಕ್ಕಿಹಿಟ್ಟು 
  3. 1/4 ಕಪ್ ನೀರು
  4. 1 ಟೀಸ್ಪೂನ್ ಎಣ್ಣೆ
  5. ಉಪ್ಪು ರುಚಿಗೆ ತಕ್ಕಷ್ಟು

ಉಳಿದ ಅನ್ನದಿಂದ ಶಾವಿಗೆ ಮಾಡುವ ವಿಧಾನ:

  1. ಮಿಕ್ಸಿಯಲ್ಲಿ ಅನ್ನ ತೆಗೆದುಕೊಂಡು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಸುಮಾರು ಕಾಲು ಕಪ್ ನೀರು ಸಾಕಾಗುವುದು. 
  2. ರುಬ್ಬಿದ ಅನ್ನವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು, ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  3. ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟು ತಯಾರಿಸಿ. 
  4. ಕೈಗೆ ಎಣ್ಣೆ ಹಚ್ಚಿಕೊಂಡು  ಉದ್ದುದ್ದ ಉಂಡೆಗಳನ್ನು ಮಾಡಿ. 
  5. ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. 
  6. ಸೆಕೆಯಲ್ಲಿ (ಆವಿಯಲ್ಲಿ) 8-10 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ. 


ಮಂಗಳವಾರ, ಮೇ 23, 2023

Shenga dose recipe in Kannada | ಶೇಂಗಾ ದೋಸೆ ಮಾಡುವ ವಿಧಾನ

 

ಶೇಂಗಾ ದೋಸೆ ಮಾಡುವ ವಿಧಾನ

Shenga dose recipe in Kannada | ಶೇಂಗಾ ದೋಸೆ ಮಾಡುವ ವಿಧಾನ

ಶೇಂಗಾ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಅಕ್ಕಿ
  2. 1/2 ಕಪ್ ಶೇಂಗಾ ಅಥವಾ ಕಡಲೆಕಾಯಿ
  3. 1/2 ಕಪ್ ಗಟ್ಟಿ ಅವಲಕ್ಕಿ
  4. ಉಪ್ಪು ರುಚಿಗೆ ತಕ್ಕಷ್ಟು.

ಶೇಂಗಾ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿಅಕ್ಕಿ, ಶೇಂಗಾ ಮತ್ತು ಅವಲಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ನೆನೆಸಿದ ಅಕ್ಕಿ, ಶೇಂಗಾ ಮತ್ತು ಅವಲಕ್ಕಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  4. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  5. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  6. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  7. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  8. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಏಪ್ರಿಲ್ 28, 2023

Ragi godhi dose recipe in Kannada | ರಾಗಿ ಗೋಧಿ ದೋಸೆ ಮಾಡುವ ವಿಧಾನ

 

Ragi godhi dose recipe in Kannada

Ragi godhi dose recipe in Kannada | ರಾಗಿ ಗೋಧಿ ದೋಸೆ ಮಾಡುವ ವಿಧಾನ

ರಾಗಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ರಾಗಿ ಹಿಟ್ಟು
  2. 1 ಕಪ್ ಗೋಧಿಹಿಟ್ಟು
  3. 1/2 ಕಪ್ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 ಕಪ್ ಗಟ್ಟಿ ಅವಲಕ್ಕಿ
  6. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  7. 2 ಕಪ್ ನೀರು (ಹಿಟ್ಟು ಕಲಸಲು)
  8. ಉಪ್ಪು ರುಚಿಗೆ ತಕ್ಕಷ್ಟು.

ರಾಗಿ ಗೋಧಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉದ್ದಿನಬೇಳೆ, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆದು 3 - 4 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಉದ್ದಿನಬೇಳೆ ರುಬ್ಬುವ ಮೊದಲು, ಇನ್ನೊಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟು ತೆಗೆದುಕೊಳ್ಳಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ಗಂಟಿಲ್ಲದಂತೆ ಹಿಟ್ಟನ್ನು ಕಲಸಿ ಪಕ್ಕಕ್ಕಿಡಿ. 
  4. ನೆನೆಸಿದ ಉದ್ದಿನಬೇಳೆ, ಅವಲಕ್ಕಿ ಮತ್ತು ಮೆಂತೆಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5. ನುಣ್ಣನೆ ಅರೆದು, ರಾಗಿ ಮತ್ತು ಗೋಧಿ ಹಿಟ್ಟಿರುವ ಪಾತ್ರೆಗೆ ಹಾಕಿ.
  6. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  7. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...