ಸೋಮವಾರ, ಜುಲೈ 20, 2020

Instant set dose recipe in Kannada | ದಿಢೀರ್ ಸೆಟ್ ದೋಸೆ ಮಾಡುವ ವಿಧಾನ

Instant set dose recipe in Kannada

Instant set dose recipe in Kannada | ದಿಢೀರ್ ಸೆಟ್ ದೋಸೆ ಮಾಡುವ ವಿಧಾನ

ದಿಢೀರ್ ಸೆಟ್ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರವೆ
  2. 1/2 ಕಪ್ ಗಟ್ಟಿ ಅವಲಕ್ಕಿ ಅಥವಾ 3/4 ತೆಳು ಅವಲಕ್ಕಿ
  3. 1/2 ಕಪ್ ಮೊಸರು 
  4. 1/2 ಚಮಚ ಅಡುಗೆ ಸೋಡಾ
  5. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  6. ಸುಮಾರು 1.25 ಕಪ್ ನೀರು
  7. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ಸೆಟ್ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ತೊಳೆಯಿರಿ. 
  2. ಅದಕ್ಕೆ ರವೇ ಮತ್ತು ನೀರು ಸೇರಿಸಿ. 
  3. ಮೊಸರನ್ನೂ ಸೇರಿಸಿ. 
  4. ಹತ್ತು ನಿಮಿಷ ನೆನೆಯಲು ಬಿಡಿ. 
  5. ಆಮೇಲೆ ಮಿಕ್ಸಿಯಲ್ಲಿ ನುಣ್ಣನೆ ಅರೆಯಿರಿ. 
  6. ಪಾತ್ರೆಗೆ ಬಗ್ಗಿಸಿ, ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ. 
  7. ಚೆನ್ನಾಗಿ ಕಲಸಿ. ಅಗತ್ಯವಿದ್ದಲ್ಲಿ ನೀರು ಸೇರಿಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
  9. ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಸೆಟ್ ದೋಸೆಯಂತೆ ಸ್ವಲ್ಪ ಅಗಲ ಮಾಡಿ.
  10. ಮುಚ್ಚಳ ಮುಚ್ಚಿ ಬೇಯಿಸಿ. 
  11. ಹತ್ತು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  12. ನಂತರ ದೋಸೆಯನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. 
  13. ದೋಸೆಯನ್ನು ತೆಗೆಯಿರಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.

1 ಕಾಮೆಂಟ್‌:

  1. ನಿಮ್ಮ ಅಡುಗೆಗಳ ಕನ್ನಡ ವಿವರಣೆ: - ಬಹಳ ಹಿಂದೆ ಕನ್ನಡ ವಿವರಣೆಯನ್ನು ನಕಲು ಮಾಡಿ ಮುಂದಿನ ರೆಫರೆನ್ಸಿಗಾಗಿ ಉಳಿಸಿಕೊಳ್ಳಲು ಅವಕಾಶ ಇತ್ತು, ನಂತರ ನಕಲು ಮಾಡುವ ಸವಲತ್ತು, ಅದ್ಹೇಗೋ, ಇರಲಿಲ್ಲ. ಈಗ ಮತ್ತೆ ಕನ್ನಡ ವಿವರಣೆ ನಕಲು ಮಾಡಲು ಅನುಕೂಲವಿದೆ, ಆಶ್ಚರ್ಯ ಮತ್ತು ಸಂತೋಷ ಆಯಿತು.
    ಇನ್ನೊಂದೆರಡು ವಿಚಾರವಿದೆ, ವೈಯಕ್ತಿಕ ಮೇಲ್ ನಲ್ಲಿ ತಿಳಿಸುತ್ತೇನೆ.

    ಪ್ರತ್ಯುತ್ತರಅಳಿಸಿ

Related Posts Plugin for WordPress, Blogger...