Sabsige soppu dose recipe in Kannada | ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ
ಸಬ್ಬಸ್ಸಿಗೆ ಸೊಪ್ಪು ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ದೋಸೆ ಅಕ್ಕಿ
- 1/4 ಕಪ್ ಉದ್ದಿನ ಬೇಳೆ
- 1/2 ಕಪ್ ತೆಳು ಅವಲಕ್ಕಿ ಅಥವಾ 1/4 ಕಪ್ ಗಟ್ಟಿ ಅವಲಕ್ಕಿ
- 1 ಟೀಸ್ಪೂನ್ ಮೆಂತ್ಯ
- ಉಪ್ಪು ರುಚಿಗೆ ತಕ್ಕಷ್ಟು
- 2 ಟೀಸ್ಪೂನ್ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1-2 ಹಸಿಮೆಣಸಿನಕಾಯಿ
- 1 ಈರುಳ್ಳಿ
- 1 ಸಣ್ಣ ಕಟ್ಟು ಸಬ್ಬಸ್ಸಿಗೆ ಸೊಪ್ಪು
- ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು
ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ :
- ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
- ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿ. ತೆಳು ಅವಲಕ್ಕಿ ಆದಲ್ಲಿ ನೆನೆಸುವುದು ಬೇಡ.
- ಅಕ್ಕಿ ಮತ್ತು ಬೇಳೆ ನೆನೆಸಿದ ನಂತ್ರ, ನೀರು ಬಗ್ಗಿಸಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ನುಣ್ಣಗೆ ರುಬ್ಬಿರಿ.
- ಕೊನೆಯಲ್ಲಿ ನೆನೆಸಿದ ಅವಲಕ್ಕಿ ಸೇರಿಸಿ ನುಣ್ಣಗೆ ಅರೆಯಿರಿ.
- ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
- ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
- ಆಮೇಲೆ ಉಪ್ಪು ಸೇರಿಸಿ ಕಲಸಿ.
- ಬಾಣಲೆಯಲ್ಲಿ ಎರಡು ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿ.
- ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ.
- ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಸಬ್ಬಸ್ಸಿಗೆ ಸೊಪ್ಪು ಸೇರಿಸಿ, ಹುರಿದು, ಬಿಸಿ ಆರಿದ ನಂತ್ರ ಹಿಟ್ಟಿಗೆ ಸೇರಿಸಿ.
- ದೋಸೆ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಒಂದು ಸೌಟು ಹಿಟ್ಟನ್ನು ಹಾಕಿ, ಸ್ವಲ್ಪ ತೆಳ್ಳಗೆ ಮಾಡಿ. ಮುಚ್ಚಳ ಮುಚ್ಚಿ.
- ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಕಾಯಿಸಿ.
- ಬೇಕಾದಲ್ಲಿ ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ