ಬುಧವಾರ, ಡಿಸೆಂಬರ್ 20, 2023

Gobi palya recipe in Kannada | ಹೂಕೋಸು ಪಲ್ಯ ಮಾಡುವ ವಿಧಾನ

 

Gobi palya recipe in Kannada

Gobi palya recipe in Kannada | ಹೂಕೋಸು ಪಲ್ಯ ಮಾಡುವ ವಿಧಾನ

ಹೂಕೋಸು ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1 ಹೂಕೋಸು
  2. 1 ದೊಡ್ಡ ಈರುಳ್ಳಿ
  3. 2 ಟೊಮೇಟೊ
  4. ಸ್ವಲ್ಪ ಕರಿಬೇವು
  5. 1/2 ಟೀಸ್ಪೂನ್ ಸಾಸಿವೆ
  6. 1/2 ಟೀಸ್ಪೂನ್ ಜೀರಿಗೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. ಒಂದು ದೊಡ್ಡ ಚಿಟಿಕೆ ಇಂಗು
  9. 1 ಟೀಸ್ಪೂನ್ ಅಚ್ಚಖಾರದ ಪುಡಿ
  10. 1 ಟೀಸ್ಪೂನ್ ಧನಿಯಾ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 1/4 ಟೀಸ್ಪೂನ್ ಜೀರಿಗೆ ಪುಡಿ
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. ನಿಮ್ಮ ರುಚಿ ಪ್ರಕಾರ ಉಪ್ಪು
  15. 1 ಟೇಬಲ್ ಚಮಚ ಅಡುಗೆ ಎಣ್ಣೆ

 ಹೂಕೋಸು ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಹೂಕೋಸನ್ನುಬಿಡಿಸಿ, ತೊಳೆದು, ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಅರ್ಧ ಚಮಚ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಎರಡು ನಿಮಿಷ ಬೇಯಿಸಿ. 
  3. ನಂತರ ನೀರು ಬಗ್ಗಿಸಿ ತೆಗೆದಿಟ್ಟುಕೊಳ್ಳಿ. 
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿಕೊಳ್ಳಿ. 
  5. ಸಾಸಿವೆ ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಅರಿಶಿನ ಮತ್ತು ಇಂಗು ಸೇರಿಸಿ. 
  7. ಕತ್ತರಿಸಿದ ಟೊಮೇಟೊ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  8. ಅಚ್ಚಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಜೀರಿಗೆ ಪುಡಿ ಸೇರಿಸಿ ಮಗುಚಿ. 
  9. ಸ್ವಲ್ಪ ನೀರನ್ನು ಸೇರಿಸಿ, ಕುದಿಸಿ, ಗೊಜ್ಜು ತಯಾರಿಸಿಕೊಳ್ಳಿ. 
  10. ಅದಕ್ಕೆ ಬೇಯಿಸಿದ ಹೂಕೋಸು ಸೇರಿಸಿ. 
  11. ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  12. ಮಗುಚಿ, ಮುಚ್ಚಳ ಮುಚ್ಚಿ ಹೂಕೋಸು ಮೆತ್ತಗಾಗುವವರೆಗೆ ಬೇಯಿಸಿ.  
  13. ಕೊನೆಯಲ್ಲಿ ಬೇಕಾದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಸ್ಟವ್ ಆಫ್ ಮಾಡಿ. 
  14. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಡಿಸೆಂಬರ್ 15, 2023

Onion rasam recipe in Kannada | ಈರುಳ್ಳಿ ಸಾರು ಮಾಡುವ ವಿಧಾನ

 

Onion rasam recipe in Kannada

Onion rasam recipe in Kannada | ಈರುಳ್ಳಿ ಸಾರು ಮಾಡುವ ವಿಧಾನ

ಈರುಳ್ಳಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಈರುಳ್ಳಿ ತೆಳ್ಳಗೆ ಕತ್ತರಿಸಿದ್ದು
  2. 7 - 8 ಎಸಳು ಬೆಳ್ಳುಳ್ಳಿ ಕತ್ತರಿಸಿದ್ದು
  3. 3 - 5 ಒಣಮೆಣಸಿನಕಾಯಿ
  4. 2 ಟೀಸ್ಪೂನ್ ಧನಿಯಾ ಅಥವಾ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಜೀರಿಗೆ
  6. 7 - 8 ಕರಿಬೇವು
  7. 1/4 ಕಪ್ ತೆಂಗಿನಕಾಯಿ
  8. 1/4 ಟೀಸ್ಪೂನ್ ಅರಿಶಿನ
  9. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  10. ಬೆಲ್ಲ ರುಚಿಗೆ ತಕ್ಕಷ್ಟು
  11. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  12. ಉಪ್ಪು ರುಚಿಗೆ ತಕ್ಕಷ್ಟು
  13. 1 ಟೀಸ್ಪೂನ್ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಒಣಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 1 ಟೇಬಲ್ ಚಮಚ ಎಣ್ಣೆ

 ಈರುಳ್ಳಿ ಸಾರು ಮಾಡುವ ವಿಧಾನ:

  1. ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  2. ಒಣಮೆಣಸಿನಕಾಯಿ, ಕೊತ್ತಂಬರಿ ಮತ್ತು  ಜೀರಿಗೆಯನ್ನು ಹಾಕಿ ಹುರಿಯಿರಿ. 
  3. ನಂತರ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಸೇರಿಸಿ.
  4. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  5. ಬಿಸಿ ಅರಿದಮೇಲೆ ಮಿಕ್ಸಿ ಜಾರಿಗೆ ಹಾಕಿ.
  6. ತೆಂಗಿನಕಾಯಿಯನ್ನು ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಮಸಾಲೆ ಪೇಸ್ಟ್ ತಯಾರಾಯಿತು. 
  8. ಅದನ್ನು ಒಂದು ಪಾತ್ರೆಗೆ ಹಾಕಿ, ಅರಿಶಿನ ಸೇರಿಸಿ. 
  9. ರುಚಿಗೆ ತಕ್ಕಂತೆ ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ. 
  10. ಅಗತ್ಯವಿದ್ದಷ್ಟು ನೀರು ಸೇರಿಸಿ. 
  11. ಒಂದು ನಿಮಿಷ ಚೆನ್ನಾಗಿ ಕುದಿಸಿ. 
  12. ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
  13. ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  14. ಸಾರಿಗೆ ಒಗ್ಗರಣೆ ಹಾಕಿ, ಒಮ್ಮೆ ಕಲಸಿ, ಬಿಸಿ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಡಿಸೆಂಬರ್ 12, 2023

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ

 

Navane khichdi recipe in Kannada

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ 

ನವಣೆ ಖಿಚಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ನವಣೆ
  2. 1/2 ಕಪ್ ಹೆಸರುಬೇಳೆ
  3. 1 ಪುಲಾವ್ ಎಲೆ
  4. 1/2 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಶುಂಠಿ
  7. ಸ್ವಲ್ಪ ಕರಿಬೇವು
  8. 1 - 2 ಹಸಿಮೆಣಸಿನಕಾಯಿ
  9. 1 ಈರುಳ್ಳಿ
  10. 1 ಸಣ್ಣ ಗಾತ್ರದ ದಪ್ಪಮೆಣಸು
  11. 2 ಕಪ್ ಬೆರಕೆ ತರಕಾರಿ
  12. ದೊಡ್ಡ ಚಿಟಿಕೆ ಅರಿಶಿನ ಪುಡಿ
  13. ದೊಡ್ಡ ಚಿಟಿಕೆ ಇಂಗು
  14. 1 ಟೊಮೇಟೊ
  15. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  16. 3 ಟೀಸ್ಪೂನ್ ತುಪ್ಪ
  17. ಸ್ವಲ್ಪ ಕೊತ್ತಂಬರಿ ಸೊಪ್ಪು

ಖಿಚಡಿ ಮಾಡುವ ವಿಧಾನ:

  1. ನವಣೆಯನ್ನು ಚೆನ್ನಾಗಿ ತೊಳೆದು, ಎರಡು ಘಂಟೆ ನೆನೆಸಿಡಿ. 
  2. ಹೆಸರುಬೇಳೆಯನ್ನು 20 ನಿಮಿಷ ನೆನೆಸಿ.
  3. ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. 
  4. ಪುಲಾವ್ ಎಲೆ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  5. ಶುಂಠಿ, ಕರಿಬೇವು ಮತ್ತು ಸೀಳಿದ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. 
  6. ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸು ಹಾಕಿ ಹುರಿಯಿರಿ. 
  7. ನಂತರ ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ. 
  8. ಕತ್ತರಿಸಿದ ಬೆರಕೆ ತರಕಾರಿಗಳನ್ನು ಹಾಕಿ ಹುರಿಯಿರಿ.  
  9. ಟೊಮೇಟೊ ಸೇರಿಸಿ ಹುರಿಯಿರಿ. 
  10. ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಮಗುಚಿ.
  11. ಸುಮಾರು 4 ಕಪ್ ನೀರು ಸೇರಿಸಿ.
  12. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.  
  13. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  14. ಮುಚ್ಚಳ ಮುಚ್ಚಿ 2 - 3 ವಿಷಲ್ ಮಾಡಿ. 
  15. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಡಿಸೆಂಬರ್ 5, 2023

Paneer tawa fry recipe in Kannada | ಪನೀರ್ ತವಾ ಫ್ರೈ ಮಾಡುವ ವಿಧಾನ

 

Paneer tawa fry recipe in Kannada | ಪನೀರ್ ತವಾ ಫ್ರೈ ಮಾಡುವ ವಿಧಾನ

ಪನೀರ್ ತವಾ ಫ್ರೈ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 200gm ಪನೀರ್
  2. 2 ಟೇಬಲ್ ಸ್ಪೂನ್ ಕಡ್ಲೆಹಿಟ್ಟು
  3. 1 ಟೇಬಲ್ ಸ್ಪೂನ್ ಬಿಸಿ ಎಣ್ಣೆ
  4. 1.5 ಟೀಸ್ಪೂನ್ ಅಚ್ಚಖಾರದ ಪುಡಿ
  5. 1 ಟೀಸ್ಪೂನ್ ಧನಿಯಾ ಪುಡಿ
  6. 1/2 ಟೀಸ್ಪೂನ್ ಜೀರಿಗೆ ಪುಡಿ
  7. 1/2 ಟೀಸ್ಪೂನ್ ಗರಂ ಮಸಾಲಾ
  8. 1/4 ಟೀಸ್ಪೂನ್ ಚಾಟ್ ಮಸಾಲಾ
  9. ದೊಡ್ಡ ಚಿಟಿಕೆ ಅರಿಶಿನ
  10. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  11. 2 ಟೇಬಲ್ ಸ್ಪೂನ್ ಗಟ್ಟಿ ಮೊಸರು
  12. 1 ಟೇಬಲ್ ಸ್ಪೂನ್ ಕಸೂರಿ ಮೇಥಿ
  13. ಉಪ್ಪು ರುಚಿಗೆ ತಕ್ಕಂತೆ

ಹಸಿರು ಚಟ್ನಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಸಣ್ಣ ಹಿಡಿ ಪುದೀನಾ ಸೊಪ್ಪು
  2. ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
  3. 1 - 2 ಹಸಿಮೆಣಸಿನಕಾಯಿ
  4. 1cm ಉದ್ದದ ಶುಂಠಿ
  5. 2 ಟೇಬಲ್ ಚಮಚ ಗಟ್ಟಿ ಮೊಸರು
  6. 1/4 ಟೀಸ್ಪೂನ್ ಜೀರಿಗೆ ಪುಡಿ
  7. 1/4 ಟೀಸ್ಪೂನ್ ಚಾಟ್ ಮಸಾಲಾ
  8. ಉಪ್ಪು ರುಚಿಗೆ ತಕ್ಕಷ್ಟು
  9. ಸಕ್ಕರೆ ರುಚಿಗೆ ತಕ್ಕಷ್ಟು

ಪನೀರ್ ತವಾ ಫ್ರೈ ಮಾಡುವ ವಿಧಾನ:

  1. ಕಡ್ಲೆಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಬಿಸಿ ಬಿಸಿ ಎಣ್ಣೆ ಹಾಕಿ ಕಲಸಿ.
  3. ಅದಕ್ಕೆ ಅಚ್ಚಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ.
  4. ಅರಿಶಿನ ಸೇರಿಸಿ ಮತ್ತು ಉಪ್ಪು ಸೇರಿಸಿ.
  5. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
  6. ಮೊಸರು ಮತ್ತು ಕಸೂರಿ ಮೇಥಿ ಸೇರಿಸಿ ಮಗುಚಿ.
  7. ಅದಕ್ಕೆ ಪನೀರ್ ಚೂರುಗಳನ್ನು ಹಾಕಿ ಕಲಸಿ, ಮೂವತ್ತು ನಿಮಿಷ ನೆನೆಯಲು ಬಿಡಿ.
  8. ತವ ಅಥವಾ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  9. ಮಸಾಲೆ ಹಚ್ಚಿದ ಪನೀರ್ ಚೂರುಗಳನ್ನು ಖಾಯಿಸಿ.
  10. ಹಸಿರು ಚಟ್ನಿ ಯೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು.

ಹಸಿರು ಚಟ್ನಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಪುದೀನಾ, ಕೊತ್ತಂಬರಿ ಸೊಪ್ಪು, ಮೊಸರು, ಹಸಿಮೆಣಸಿನಕಾಯಿ ಮತ್ತು ಶುಂಠಿ ತೆಗೆದುಕೊಳ್ಳಿ .
  2. ಅದಕ್ಕೆ ಜೀರಿಗೆ ಪುಡಿ, ಚಾಟ್ ಮಸಾಲಾ ಉಪ್ಪು ಮತ್ತು ಸಕ್ಕರೆ ಸೇರಿಸಿ.
  3. ನುಣ್ಣಗೆ ರುಬ್ಬಿ.
  4. ಪನೀರ್ ತವ ಫ್ರೈ ಅಥವಾ ಯಾವುದೇ ಸ್ನಾಕ್ಸ್ ಜೊತೆ ಬಡಿಸಿ.

ಶುಕ್ರವಾರ, ಡಿಸೆಂಬರ್ 1, 2023

Jeerige chitranna recipe in Kannada | ಜೀರಿಗೆ ಚಿತ್ರಾನ್ನ ಮಾಡುವ ವಿಧಾನ

 


Jeerige chitranna recipe in Kannada | ಜೀರಿಗೆ ಚಿತ್ರಾನ್ನ ಮಾಡುವ ವಿಧಾನ

ಜೀರಿಗೆ ಚಿತ್ರಾನ್ನ ವಿಡಿಯೋ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾಮಸೂರಿ)
  2. 1/2 ಕಪ್ ತೆಂಗಿನ ತುರಿ
  3. 3 - 5 ಕೆಂಪು ಮೆಣಸಿನಕಾಯಿ
  4. 2 ಟೀಸ್ಪೂನ್ ಜೀರಿಗೆ
  5. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  6. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  2. 1 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡಲೆಬೇಳೆ
  5. 4 - 6 ಕರಿಬೇವಿನ ಎಲೆ
  6. 1/4 ಟೀಸ್ಪೂನ್ ಅರಿಶಿನ ಪುಡಿ
  7. 2 ಟೇಬಲ್ ಚಮಚ ಅಡುಗೆ ಎಣ್ಣೆ

ಜೀರಿಗೆ ಚಿತ್ರಾನ್ನ ಮಾಡುವ ವಿಧಾನ:

  1. ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. 
  2. ಮಿಕ್ಸಿ ಜಾರಿಗೆ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಹಾಕಿ.
  3. ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ.
  4. ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆದು ಪಕ್ಕಕ್ಕಿಡಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಕಡಲೆಕಾಯಿ (ಶೇಂಗಾ) ಯನ್ನು ಹಾಕಿ ಹುರಿಯಿರಿ. 
  6. ಸಾಸಿವೆ , ಉದ್ದಿನ ಬೇಳೆ ಮತ್ತು ಕಡಲೆಬೇಳೆ ಸೇರಿಸಿ ಒಗ್ಗರಣೆ  ಮಾಡಿ. 
  7. ನಂತರ ಅರಿಶಿನ ಪುಡಿ ಮತ್ತು ಕರಿಬೇವು ಸೇರಿಸಿ. ಉರಿ ಕಡಿಮೆ ಮಾಡಿ.
  8. ಅರೆದ ಮಸಾಲಾ ಪೇಸ್ಟ್ ಸೇರಿಸಿ.
  9. ಹೆಚ್ಚಿನ ನೀರು ಆರುವವರೆಗೆ ಚೆನ್ನಾಗಿ ಮಗುಚಿ. ಸ್ಟವ್ ಆಫ್ ಮಾಡಿ. 
  10. ಅನ್ನ ಹಾಕಿ ಕಲಸಿ. 
  11. ಬೇಕಾದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಮೇಲಿನಿಂದ ಹಾಕಿ ಬಡಿಸಿ. 
Related Posts Plugin for WordPress, Blogger...