Shenga or Nelagadale unde recipe in Kannada | ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಶೇಂಗಾ ಅಥವಾ ನೆಲಗಡಲೆ
- 3/4 ಕಪ್ ಬೆಲ್ಲ
- 1/4 ಕಪ್ ಕೊಬ್ಬರಿ
- 1/4 ಕಪ್ ಎಳ್ಳು
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಶೇಂಗಾ ಅಥವಾ ನೆಲಗಡಲೆ ಉಂಡೆ ಮಾಡುವ ವಿಧಾನ:
- ಒಂದು ದಪ್ಪ ತಳದ ಬಾಣಲೆಯಲ್ಲಿ ನೆಲಗಡಲೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ನಂತರ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಅಥವಾ ಚೆನ್ನಾಗಿ ಉಬ್ಬುವವರೆಗೆ ಹುರಿಯಿರಿ.
- ನಂತರ ತುರಿದ ಕೊಬ್ಬರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
- ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ. ಪಲ್ಸ್ ಬಟನ್ ಉಪಯೋಗಿಸಿ ಬುರ್-ಬುರ್ ಮಾಡಿದರೆ ಸಾಕು. ತುಂಬ ಹೊತ್ತು ಮಿಕ್ಸಿ ರನ್ ಮಾಡಬೇಡಿ.
- ನಂತರ ಪುಡಿ ಮಾಡಿದ ಬೆಲ್ಲ ಹಾಕಿ ಪುನಃ ಪಲ್ಸ್ ಬಟನ್ ಉಪಯೋಗಿಸಿ 3 - 4 ಸಲ ಬುರ್-ಬುರ್ ಮಾಡಿ.
- ಒಂದು ಬಟ್ಟಲಿಗೆ ಪುಡಿ ಮಾಡಿದ ಶೇಂಗಾ-ಎಳ್ಳು-ಕೊಬ್ಬರಿ-ಬೆಲ್ಲದ ಮಿಶ್ರಣ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ.
- ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ