Beans palya recipe in Kannada | ಬೀನ್ಸ್ ಪಲ್ಯ ಮಾಡುವ ವಿಧಾನ
ಬೀನ್ಸ್ ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 kg ಬೀನ್ಸ್ ಅಥವಾ ಹುರುಳಿಕಾಯಿ
- 1/2 ಟೀಸ್ಪೂನ್ ಉದ್ದಿನ ಬೇಳೆ
- 1/2 ಟೀಸ್ಪೂನ್ ಕಡ್ಲೆ ಬೇಳೆ
- 4 ಟೀಸ್ಪೂನ್ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1 ಚಿಟಿಕೆ ಅರಿಶಿನ ಪುಡಿ
- 1 ಚಿಟಿಕೆ ಇಂಗು
- 3 - 4 ಕರಿಬೇವಿನ ಎಲೆ
- 1-2 ಹಸಿರು ಮೆಣಸಿನ ಕಾಯಿ
- 1/4 ಕಪ್ ತೆಂಗಿನ ತುರಿ
- 1 ಟೇಬಲ್ ಚಮಚ ಕೊತಂಬರಿ ಸೊಪ್ಪು(ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು
- 1/4 ಕಪ್ ನೀರು
ಬೀನ್ಸ್ ಪಲ್ಯ ಮಾಡುವ ವಿಧಾನ:
- ಬೀನ್ಸ್ ನ್ನು ನಾರು ತೆಗೆದು, ತೊಳೆದು, ಸಣ್ಣದಾಗಿ ಕತ್ತರಿಸಿ. ಸಾಧ್ಯವಾದಷ್ಟು ಎಳೆ ಬೀನ್ಸ್ ನ್ನು ಉಪಯೋಗಿಸಿ.
- ಒಂದು ಬಾಣಲೆ ತೆಗೆದುಕೊಂಡು, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಹಸಿರುಮೆಣಸಿನಕಾಯಿ, ಅರಶಿನ ಇಂಗು ಮತ್ತು ಕರಿಬೇವಿನ ಎಲೆ ಹಾಕಿ. ಬೇಕಾದಲ್ಲಿ ಈರುಳ್ಳಿಯನ್ನೂ ಹಾಕಬಹುದು.
- ಕತ್ತರಿಸಿದ ಬೀನ್ಸ್ ಹಾಕಿ ಮಗುಚಿ. ಉಪ್ಪು ಮತ್ತು ನೀರು ಹಾಕಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಆಗೊಮ್ಮೆ ಈಗೊಮ್ಮೆ ಮಗುಚಲು ಮರೆಯದಿರಿ.
- ಬೀನ್ಸ್ ಬೇಯುವವರೆಗೆ ಕಾಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ. ನಂತರ ತೆಂಗಿನತುರಿ, ಕೊತಂಬರಿ ಸೊಪ್ಪು ಹಾಕಿ ಮಗುಚಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ