Thondekai majjige huli recipe in Kannada | ತೊಂಡೆಕಾಯಿ ಮಜ್ಜಿಗೆ ಹುಳಿ ಅಥವಾ ಕಾಯಿ ಹುಳಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 kg ತೊಂಡೆಕಾಯಿ
- 1/4 ಕಪ್ ಕಾಬೂಲ್ ಕಡ್ಲೆ
- 1 - 2 ಹಸಿರು ಮೆಣಸಿನಕಾಯಿ
- 1/4 ಕಪ್ ಹುಳಿಮಜ್ಜಿಗೆ ಅಥವಾ 1/2 ಕಪ್ ಮಜ್ಜಿಗೆ
- 1 ಕಪ್ ತೆಂಗಿನ ತುರಿ
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಕೆಂಪು ಮೆಣಸಿನಕಾಯಿ
- ಒಂದು ಚಿಟಿಕೆ ಇಂಗು
- 5 - 6 ಕರಿಬೇವಿನ ಎಲೆ
- 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
ತೊಂಡೆಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ:
- ಕಡ್ಲೆಯನ್ನು 7-8 ಘಂಟೆಗಳ ಕಾಲ ನೆನೆಸಿ.
- ತೊಂಡೆಕಾಯಿಯನ್ನು ತೊಳೆದು ಉದ್ದುದ್ದವಾಗಿ ಕತ್ತರಿಸಿ.
- ಕತ್ತರಿಸಿದ ತೊಂಡೆಕಾಯಿ, ನೆನೆಸಿದ ಕಡ್ಲೆ ಕಾಳು, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ನೀರನ್ನು ಕುಕ್ಕರ್ ಗೆ ಹಾಕಿ ಬೇಯಿಸಿಕೊಳ್ಳಿ.
- ಮಿಕ್ಸಿ ಜಾರಿನಲ್ಲಿ ತೆಂಗಿನತುರಿಯನ್ನು ನುಣ್ಣನೆ ಅರೆದು ಕೊಳ್ಳಿ.
- ಅದಕ್ಕೆ ಹಸಿರುಮೆಣಸಿನಕಾಯಿ ಮತ್ತು ಮಜ್ಜಿಗೆ ಹಾಕಿ ಒಂದೆರಡು ಸುತ್ತು ಅರೆದು ತೆಗೆಯಿರಿ.
- ರುಬ್ಬಿದ ಮಸಾಲೆಯನ್ನು ಬೇಯಿಸಿದ ತೊಂಡೆಕಾಯಿಗೆ ಸೇರಿಸಿ.
- ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ.
- ಚೆನ್ನಾಗಿ ಕಲಸಿ, ಕುದಿಯಲು ಇಡಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆಫ್ ಮಾಡಿ. ಹೆಚ್ಚು ಕುದಿಸಬೇಡಿ.
- ಎಣ್ಣೆ, ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ