Layered parota recipe in Kannada | ಪದರು ಪದರಾದ ಪರೋಟ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- ಮೃದುವಾದ ಚಪಾತಿ ಹಿಟ್ಟು
- ಪಾಸ್ತಾ ಅಥವಾ ಪಿಜ್ಜಾ ಸೀಸನಿಂಗ್ (ಬೇಕಾದಲ್ಲಿ ಅಥವಾ ಬೇರೆ ನಿಮ್ಮಿಷ್ಟದ ಮಸಾಲೆ ಪುಡಿ)
- ಅಡುಗೆ ಎಣ್ಣೆ
- ಗೋಧಿ ಹಿಟ್ಟು ಸ್ವಲ್ಪ
ಪದರು ಪದರಾದ ಪರೋಟ ಮಾಡುವ ವಿಧಾನ:
- ಮೊದಲಿಗೆ ಒಂದು ನಿಂಬೆ ಗಾತ್ರದ ಚಪಾತಿ ಹಿಟ್ಟು ತೆಗೆದುಕೊಂಡು ತೆಳುವಾದ ಚಪಾತಿ ಮಾಡಿ.
- ಅದರ ಮೇಲೆ ಎಣ್ಣೆ, ಮಸಾಲೆ ಪುಡಿ ಮತ್ತು ಸ್ವಲ್ಪ ಗೋಧಿ ಹಿಟ್ಟನ್ನು ಉದುರಿಸಿ.
- ಚಪಾತಿಯನ್ನು ಸುತ್ತಿ ಎರಡು ಭಾಗವಾಗಿ ಸೀಳಿ. ಒಂದು ಬದಿ ಕೂಡಿ ಕೊಂಡಿರಲಿ.
- ನಂತರ ಸೀಳಿದ ಚಪಾತಿಯನ್ನು ವೃತ್ತಾಕಾರವಾಗಿ ಸುತ್ತಿ ಪುನಃ ಲಟ್ಟಿಸಿ. ದಯವಿಟ್ಟು ಮೇಲೆ ನೀಡಿದ ವಿಡಿಯೋ ನೋಡಿ.
- ಬಿಸಿ ತವಾ ಮೇಲೆ ಎಣ್ಣೆ ಹಾಕಿ ಎರಡು ಬದಿ ಕಾಯಿಸಿ. ನಿಮ್ಮಿಷ್ಟದ ಪಲ್ಯ ಅಥವಾ ಗೊಜ್ಜಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ