Kadle usli recipe in Kannada | ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಕಡಲೆ ಕಾಳು
- 1 - 2 ಟೇಬಲ್ ಚಮಚ ಬೆಲ್ಲ
- 2 ಟೇಬಲ್ ಚಮಚ ಅಡುಗೆ ಎಣ್ಣೆ
- 1/4 ಟೀಸ್ಪೂನ್ ಸಾಸಿವೆ
- 1 ಕೆಂಪು ಮೆಣಸಿನಕಾಯಿ
- 1 ಟೀಸ್ಪೂನ್ ಉದ್ದಿನ ಬೇಳೆ
- ಒಂದು ಚಿಟಿಕೆ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- 4 - 5 ಕರಿಬೇವಿನ ಎಲೆ
- ಉಪ್ಪು ರುಚಿಗೆ ತಕ್ಕಷ್ಟು.
ಮಸಾಲೆಗೆ ಬೇಕಾಗುವ ಪದಾರ್ಥಗಳು:
- 1/2 ಕಪ್ ತೆಂಗಿನ ತುರಿ
- 2 - 4 ಕೆಂಪು ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ:
- ಕಡ್ಲೆಕಾಳನ್ನು 7 - 8 ಘಂಟೆಗಳ ಕಾಲ ನೆನೆಸಿ. ಕಡ್ಲೆ ಮುಚ್ಚುವಷ್ಟು ನೀರು ಹಾಕಿ ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ.
- ಆ ಸಮಯದಲ್ಲಿ ತೆಂಗಿನ ತುರಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ಪುಡಿ ಮಾಡಿ ಮಸಾಲೆ ತಯಾರಿಸಿಟ್ಟು ಕೊಳ್ಳಿ.
- ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
- ಅದಕ್ಕೆ ಬೇಯಿಸಿದ ಕಡ್ಲೆಯನ್ನು ಬೇಯಿಸಿದ ನೀರು ಸಹಿತ ಹಾಕಿ.
- ಅರೆದ ಮಸಾಲೆ, ಬೆಲ್ಲ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಗುಚಿ.
- ನೀರಾರುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ಈ ಉಸುಳಿ ಸ್ವಲ್ಪ ನೀರು ನೀರಾಗಿರಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ