Malnad style kodu bale recipe in Kannada | ಕೋಡುಬಳೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ ಹಿಟ್ಟು
- 1/2 ಕಪ್ ಮೈದಾ ಹಿಟ್ಟು
- 1/2 ಕಪ್ ತೆಂಗಿನ ತುರಿ
- 3 - 6 ಕೆಂಪು ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
- 1 ಸಣ್ಣನೆಲ್ಲಿಕಾಯಿ ಗಾತ್ರದ ಬೆಣ್ಣೆ ಅಥವಾ 1 ಟೇಬಲ್ ಚಮಚ ಬಿಸಿ ಎಣ್ಣೆ
- ಎಣ್ಣೆ ಕೋಡುಬಳೆ ಕಾಯಿಸಲು
ಕೋಡುಬಳೆ ಮಾಡುವ ವಿಧಾನ:
- ಮೈದಾ ಹಿಟ್ಟನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಸೆಕೆಯಲ್ಲಿ ೧೦ ನಿಮಿಷ ಬೇಯಿಸಿಕೊಳ್ಳಿ (ಇಡ್ಲಿ ಬೇಯಿಸಿದ ಹಾಗೆ).
- ಅಕ್ಕಿ ಹಿಟ್ಟು ಮತ್ತು ಬೇಯಿಸಿದ ಮೈದಾ ಹಿಟ್ಟನ್ನು ಸಾರಣಿಸಿ ಕೊಳ್ಳಿ (ಜರಡಿ).
- ಬೆಣ್ಣೆ ಮತ್ತು ಉಪ್ಪು ಹಾಕಿ ಕಲಸಿ.
- ಮಿಕ್ಸಿ ಜಾರಿಗೆ ತೆಂಗಿನ ತುರಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆ ಹಾಕಿ ಸಾಧ್ಯವಾದಷ್ಟು ಕಡಿಮೆ ನೀರು ಉಪಯೋಗಿಸಿ ನುಣ್ಣನೆ ಅರೆಯಿರಿ.
- ಅರೆದ ಮಸಾಲೆಯನ್ನು ಬೆಣ್ಣೆ ಹಾಕಿ ಕಲಸಿದ ಹಿಟ್ಟಿಗೆ ಹಾಕಿ ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಕೋಡುಬಳೆ ಮಾಡುವಷ್ಟು ಮೆತ್ತಗಿದ್ದರೆ ಸಾಕು. ತುಂಬ ಮೆತ್ತಗೆನಿಸಿದರೆ ಒಂದೆರಡು ಚಮಚ ಅಕ್ಕಿ ಹಿಟ್ಟು ಹಾಕಿ ಪುನಃ ಚೆನ್ನಾಗಿ ಕಲಸಿ ಕೊಳ್ಳಿ.
- ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಬಳೆಗಳನ್ನು ಮಾಡಿ.
- ಎಣ್ಣೆ ಬಿಸಿ ಮಾಡಿ ಕೊಡು ಬಳೆಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ