ಸೋಮವಾರ, ಡಿಸೆಂಬರ್ 27, 2021

Tengina kayi dose recipe in Kannada | ತೆಂಗಿನಕಾಯಿ ದೋಸೆ ಮಾಡುವ ವಿಧಾನ

 

Tengina kayi dose recipe in Kannada

Tengina kayi dose recipe in Kannada | ತೆಂಗಿನಕಾಯಿ ದೋಸೆ ಮಾಡುವ ವಿಧಾನ

ತೆಂಗಿನಕಾಯಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1 - 2 ಟೇಬಲ್ ಸ್ಪೂನ್ ಉದ್ದಿನಬೇಳೆ
  3. 1 ಟೀಸ್ಪೂನ್ ಮೆಂತ್ಯ
  4. 1/2 ಕಪ್ ತೆಂಗಿನತುರಿ
  5. 1/2 ಕಪ್ ಗಟ್ಟಿ ಅವಲಕ್ಕಿ ಅಥವಾ 1 ಕಪ್ ತೆಳು ಅವಲಕ್ಕಿ
  6. ಎಣ್ಣೆ ದೋಸೆ ಮಾಡಲು
  7. 1/2 ಟೀಸ್ಪೂನ ಸಕ್ಕರೆ
  8. ಉಪ್ಪು ರುಚಿಗೆ ತಕ್ಕಷ್ಟು.

ತೆಂಗಿನಕಾಯಿ ದೋಸೆ ಮಾಡುವ ವಿಧಾನ:

  1. ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು ಹತ್ತು ನಿಮಿಷ ನೆನೆಯಲು ಬಿಡಿ.
  3. ನೆನೆಸಿದ ನಂತರ ಮೊದಲಿಗೆ ಅಕ್ಕಿ ಮತ್ತು ಬೇಳೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  4. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. 
  5. ನಂತರ ತೆಂಗಿನತುರಿ ಮತ್ತು ಅವಲಕ್ಕಿ ಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  6. ಅರೆದು ಅದೇ ಪಾತ್ರೆಗೆ ಹಾಕಿ.
  7. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 10 - 12 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ಸೆಟ್ ದೋಸೆಯಂತೆ ಸಣ್ಣ ಸಣ್ಣ ದೋಸೆ ಮಾಡಿ. ಹಿಟ್ಟನ್ನು ಜಾಸ್ತಿ ಹರಡಬೇಡಿ. 
  10. ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ಚಟ್ನಿಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಡಿಸೆಂಬರ್ 15, 2021

Harive soppu chutney recipe in Kannada | ಹರಿವೆ ಸೊಪ್ಪು ಬಜ್ಜಿ ಮಾಡುವ ವಿಧಾನ

 

Harive soppu chutney recipe in Kannada

Harive soppu chutney recipe in Kannada | ಹರಿವೆ ಸೊಪ್ಪು ಬಜ್ಜಿ ಮಾಡುವ ವಿಧಾನ

ಹರಿವೆ ಸೊಪ್ಪು ಬಜ್ಜಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಹರಿವೆ ಸೊಪ್ಪು (ದಂಟಿನ ಸೊಪ್ಪು)
  2. 1/2 ಟೀಸ್ಪೂನ್ ಸಾಸಿವೆ
  3. 2 - 4 ಒಣಮೆಣಸಿನಕಾಯಿ
  4. 1/4 ಕಪ್ ತೆಂಗಿನತುರಿ
  5. 1 ಟೀಸ್ಪೂನ್ ಬೆಲ್ಲ (ಅಥವಾ ರುಚಿಗೆ ತಕ್ಕಷ್ಟು)
  6. ಸ್ವಲ್ಪ ಹುಣಿಸೇಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಟೇಬಲ್ ಚಮಚ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಸಾಸಿವೆ
  3. ದೊಡ್ಡ ಚಿಟಿಕೆ ಅರಿಶಿನ
  4. ದೊಡ್ಡ ಚಿಟಿಕೆಇಂಗು
  5. 1 ಟೇಬಲ್ ಚಮಚ ಅಡುಗೆ ಎಣ್ಣೆ (ಅಥವಾ ತುಪ್ಪ)

ಹರಿವೆ ಸೊಪ್ಪು ಬಜ್ಜಿ ಮಾಡುವ ವಿಧಾನ:

  1. ಹರಿವೆಸೊಪ್ಪನ್ನ ತೊಳೆದು ದೊಡ್ಡದಾಗಿ ಕತ್ತರಿಸಿಕೊಳ್ಳಿ. 
  2. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿಯಿರಿ.
  3. ಕತ್ತರಿಸಿದ ಸೊಪ್ಪು ಸೇರಿಸಿ ಹುರಿಯಿರಿ. 
  4. ಹುರಿಯುವಾಗ ಉಪ್ಪು ಸೇರಿಸಿ ಹುರಿಯಿರಿ. 
  5. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  6. ತೆಂಗಿನತುರಿ ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆದು ಪಕ್ಕಕ್ಕಿಡಿ. 
  8. ಒಂದು ಬಾಣಲೆಯಲ್ಲಿ ಎಣ್ಣೆ (ಅಥವಾ ತುಪ್ಪ) ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಮಾಡಿ. 
  9. ಅರಿಶಿನ ಮತ್ತು ಇಂಗು ಸೇರಿಸಿ. 
  10. ಆಮೇಲೆ ಅರೆದ ಅಥವಾ ರುಬ್ಬಿದ ಸೊಪ್ಪಿನ ಪೇಸ್ಟ್ ಹಾಕಿ ಮಗುಚಿ. 
  11. ಸ್ಟವ್ ಆಫ್ ಮಾಡಿ. ಬಿಸಿ ಅನ್ನ, ದೋಸೆ, ಇಡ್ಲಿ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ. 

ಭಾನುವಾರ, ಡಿಸೆಂಬರ್ 12, 2021

Nellikai candy recipe in Kannada | ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ

 

Nellikai candy recipe in Kannada

Nellikai candy recipe in Kannada | ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ

ನೆಲ್ಲಿಕಾಯಿ ಕ್ಯಾಂಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 10 - 12 ನೆಲ್ಲಿಕಾಯಿ 
  2. 1/2 ಕಪ್ ಸಕ್ಕರೆ
  3. 1/4 ಟೀಸ್ಪೂನ್ ಉಪ್ಪು

 ನೆಲ್ಲಿಕಾಯಿ ಕ್ಯಾಂಡಿ ಮಾಡುವ ವಿಧಾನ:

  1. ನೆಲ್ಲಿಕಾಯಿಯನ್ನು ತೊಳೆಯಿರಿ. 
  2. ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಆವಿಯಲ್ಲಿ ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ.
  3. ಸ್ವಲ್ಪ ಬಿಸಿ ಆರಿದ ಮೇಲೆ ನೆಲ್ಲಿಕಾಯಿ ಗೆರೆಯ ಮೇಲೆ ಕತ್ತರಿಸಿ, ಬೀಜ ತೆಗೆಯಿರಿ.  
  4. 1/4 ಕಪ್ ಸಕ್ಕರೆ ಮತ್ತು 1/4 ಟೀಸ್ಪೂನ್ ಹಾಕಿ ಕಲಸಿ 5 - 6 ಘಂಟೆ ಪಕ್ಕಕ್ಕಿಡಿ.
  5. ನೆಲ್ಲಿಕಾಯಿ ಬಿಟ್ಟ ನೀರನ್ನು ಬಸಿದು ತೆಗೆಯಿರಿ. 
  6. ಪುನಃ 1/4 ಕಪ್ ಸಕ್ಕರೆ ಹಾಕಿ ಕಲಸಿ. 
  7. 2 - 3 ದಿನ ಬಿಸಿಲಿನಲ್ಲಿ ಒಣಗಲು ಬಿಡಿ. 
  8. ವರ್ಷವಿಡೀ ಸವಿದು ಆನಂದಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ನವೆಂಬರ್ 23, 2021

Nellikai saaru recipe in Kannada | ನೆಲ್ಲಿಕಾಯಿ ಸಾರು ಮಾಡುವ ವಿಧಾನ

 

Nellikai saaru recipe in Kannada

Nellikai saaru recipe in Kannada |ನೆಲ್ಲಿಕಾಯಿ ಸಾರು ಮಾಡುವ ವಿಧಾನ

ನೆಲ್ಲಿಕಾಯಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 2 ನೆಲ್ಲಿಕಾಯಿ 
  2. 2 ಟೀಸ್ಪೂನ್ ತೊಗರಿಬೇಳೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
  5. 1/2 ಟೀಸ್ಪೂನ್ ಜೀರಿಗೆ
  6. ಸ್ವಲ್ಪ ಕರಿಮೆಣಸು 
  7. ಚಿಟಿಕೆ ಮೆಂತ್ಯ
  8. ಚಿಟಿಕೆ ಸಾಸಿವೆ
  9. 2 - 4 ಹಸಿಮೆಣಸಿನಕಾಯಿ
  10. 5 - 6 ಕರಿಬೇವಿನ ಎಲೆ
  11. 1/4 ಕಪ್ ತೆಂಗಿನ ತುರಿ
  12. 1.5 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  13. 1/4 ಟೀಸ್ಪೂನ್ ಅರಿಶಿನ
  14. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  15. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಒಣಮೆಣಸಿನಕಾಯಿ
  3. ದೊಡ್ಡ ಚಿಟಿಕೆ ಇಂಗು
  4. 5 - 6 ಕರಿಬೇವಿನ ಎಲೆ
  5. 1 ಟೇಬಲ್ ಚಮಚ ಎಣ್ಣೆ

 ನೆಲ್ಲಿಕಾಯಿ ಸಾರು ಮಾಡುವ ವಿಧಾನ:

  1. ನೆಲ್ಲಿಕಾಯಿಯನ್ನು ತೊಳೆದು ಕತ್ತರಿಸಿ ಬೀಜ ತೆಗೆಯಿರಿ. 
  2. ಒಂದು ಬಾಣಲೆಯಲ್ಲಿ ತೊಗರಿಬೇಳೆ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಕರಿಮೆಣಸು ಮೆಂತ್ಯ ಮತ್ತು ಸಾಸಿವೆಯನ್ನು ಒಂದು ಚಮಚ ಎಣ್ಣೆಯಲ್ಲಿ ಹುರಿಯಿರಿ.
  3. ಬೇಳೆಗಳು ಕಂದು ಬಣ್ಣ ಬಂದು, ಸುವಾಸನೆ ಬಂದ ಮೇಲೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ.  
  4. ಮಿಕ್ಸಿ ಜಾರಿನಲ್ಲಿ ಕತ್ತರಿಸಿದ ನೆಲ್ಲಿಕಾಯಿ, ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5. ಅದನ್ನು ಒಂದು ಪಾತ್ರೆಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಲೀಟರ್)
  6. ಉಪ್ಪು ಮತ್ತು ಅರಿಶಿನ ಸೇರಿಸಿ ಕುದಿಸಿ. 
  7. ಚೆನ್ನಾಗಿ ಕುದಿಸಿ, ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ. 
  8. ಆಮೇಲೆ ಎಣ್ಣೆ, ಸಾಸಿವೆ, ಒಣಮೆಣಸು, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  9. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ನವೆಂಬರ್ 19, 2021

Badanekayi mosaru gojju recipe in Kannada | ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ

 

Badanekayi mosaru gojju recipe in Kannada

Badanekayi mosaru gojju recipe in Kannada | ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ 

ಬದನೇಕಾಯಿ ಮೊಸರು ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4kg ಸಣ್ಣ ಬದನೇಕಾಯಿ (ಅಥವಾ ಬೇರೆ ಯಾವುದೇ ಬದನೇಕಾಯಿ)
  2. 1 - 2 ಹಸಿರು ಮೆಣಸಿನಕಾಯಿ
  3. ಉಪ್ಪು ರುಚಿಗೆ ತಕ್ಕಷ್ಟು
  4. 1 ಕಪ್ ಮೊಸರು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೇಬಲ್ ಚಮಚ ಅಡುಗೆ ಎಣ್ಣೆ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ಉದ್ದಿನಬೇಳೆ
  5. ಒಂದು ಚಿಟಿಕೆ ಇಂಗು
  6. ಸ್ವಲ್ಪ ಕರಿಬೇವು

ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ:

  1. ಬದನೇಕಾಯಿ ತೊಳೆದು, + ಆಕಾರದಲ್ಲಿ ಸಿಗಿದು (ಸೀಳಿ), ಆವಿಯಲ್ಲಿ ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಬೇಯಿಸಿ. 
  2. ಆ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು, ಉಪ್ಪು ಮತ್ತು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ ಕಲಸಿ. 
  3. ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಉದ್ದಿನಬೇಳೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  4. ಒಗ್ಗರಣೆಯನ್ನು ಕಲಸಿಟ್ಟ ಮೊಸರಿಗೆ ಸೇರಿಸಿ. 
  5. ಬದನೇಕಾಯಿ ಬೆಂದ ಮೇಲೆ ಸಿಪ್ಪೆ ತೆಗೆದು, ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆಯಿರಿ.
  6. ಸಣ್ಣ ಚೂರುಗಳಾಗಿ ಕತ್ತರಿಸಿ. 
  7. ಅದನ್ನು ಮೊಸರು ಇರುವ ಪಾತ್ರೆಗೆ ಸೇರಿಸಿ ಕಲಸಿ. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಬುಧವಾರ, ನವೆಂಬರ್ 17, 2021

Idli recipe using dosa rice in Kannada | ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ

 

Idli recipe using dosa rice in Kannada

Idli recipe using dosa rice in Kannada | ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ

ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1/2 - 1/3 ಕಪ್ ಉದ್ದಿನ ಬೇಳೆ 
  3. 1/2 ಟೀಸ್ಪೂನ್ ಮೆಂತೆ
  4. 1/4 - 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ


ದೋಸೆ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ:

  1. ಉದ್ದಿನಬೇಳೆ - ಮೆಂತೆ, ಅಕ್ಕಿ ಮತ್ತು ಅವಲಕ್ಕಿಯನ್ನು ಬೇರೆ ಬೇರೆ ಪಾತ್ರೆಯಲ್ಲಿ 3 - 4 ಗಂಟೆಗಳ ಕಾಲ ನೆನೆಸಿಡಿ.
  2. ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆಯಿರಿ ಒಂದು ಪಾತ್ರೆಗೆ ಬಗ್ಗಿಸಿ.
  3. ಅವಲಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆದು ಅದೇ ಪಾತ್ರೆಗೆ ಹಾಕಿ. 
  4. ಆಮೇಲೆ ನೆನೆಸಿದ ಅಕ್ಕಿಯ ನೀರು ಬಸಿದು, ಸ್ವಲ್ಪ ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ಮಾತ್ರ ನೀರು ಸೇರಿಸಿ. ಗಮನಿಸಿ, ಹೆಚ್ಚು ನೀರು ಸೇರಿಸಬೇಡಿ ಮತ್ತು ಸ್ವಲ್ಪ ತರಿ ತರಿ ಇದ್ದರೆ ಸಾಕು. 
  5. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 8 - 10 ಗಂಟೆಗಳ ಕಾಲ ಹುದುಗಲು ಬಿಡಿ. 
  6. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  7. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  8. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. 
  9. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆದು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಿ.

ಗುರುವಾರ, ನವೆಂಬರ್ 11, 2021

Beans bili huli recipe in Kannada | ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ

 

Beans bili huli recipe in Kannada

Beans bili huli recipe in Kannada | ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ

ಬೀನ್ಸ್ ಸಾಂಬಾರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4kg ಬೀನ್ಸ್
  2. ದೊಡ್ಡ ಚಿಟಿಕೆ ಅರಿಶಿನ ಪುಡಿ
  3. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  4. 1/2 ಟೀಸ್ಪೂನ್ ನಿಂಬೆರಸ

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಹಸಿಮೆಣಸಿನಕಾಯಿ
  3. 2 ಟೇಬಲ್ ಚಮಚ ಕಡ್ಲೆಬೇಳೆ
  4. 1 ಟೀಸ್ಪೂನ್ ಜೀರಿಗೆ
  5. 1/2 ಟೀಸ್ಪೂನ್ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 5 - 6 ಕರಿಬೇವು
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಬೀನ್ಸ್ ಬಿಳಿ ಹುಳಿ ಮಾಡುವ ವಿಧಾನ:

  1. ಕಡ್ಲೆಬೇಳೆಯನ್ನು ಒಂದರಿಂದ ಎರಡು ಘಂಟೆ ನೆನೆಸಿ. 
  2. ಬೀನ್ಸ್ ನ್ನು ತೊಳೆದು ಕತ್ತರಿಸಿ.
  3. ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್ ತೆಗೆದುಕೊಂಡು ಚಿಟಿಕೆ ಅರಶಿನ ಪುಡಿ, ಸ್ವಲ್ಪ ಉಪ್ಪು ಮತ್ತು 1 ಲೋಟ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  4. ನಂತ್ರ ಒಂದು ಮಿಕಿ ಜಾರ್ ನಲ್ಲಿ ತೆಂಗಿನತುರಿ, ನೆನೆಸಿದ ಕಡ್ಲೆ ಬೇಳೆ, ಜೀರಿಗೆ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  5. ಅರೆದ ಮಸಾಲೆಯನ್ನು ತರಕಾರಿ ಇರುವ ಕುಕ್ಕರ್ ಗೆ ಹಾಕಿ. 
  6. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  7. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ (ಸುಮಾರು 1 ಕಪ್) ಮಗುಚಿ.  
  8. ಒಂದೆರಡು ನಿಮಿಷ ಚೆನ್ನಾಗಿ ಕುದಿಸಿ.
  9. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಭಾನುವಾರ, ನವೆಂಬರ್ 7, 2021

Majjige kadubu recipe in Kannada | ಮಜ್ಜಿಗೆ ಕಡುಬು ಮಾಡುವ ವಿಧಾನ

 

Majjige kadubu recipe in Kannada | ಮಜ್ಜಿಗೆ ಕಡುಬು ಮಾಡುವ ವಿಧಾನ

ಮಜ್ಜಿಗೆ ಕಡುಬು ವಿಡಿಯೋ

ಮಜ್ಜಿಗೆ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸೋನಾ ಮಸೂರಿ ಅಕ್ಕಿ
  2. 1 ಕಪ್ ನೀರು 
  3. 1 ಕಪ್ ಮಜ್ಜಿಗೆ
  4. ಉಪ್ಪು ರುಚಿಗೆ ತಕ್ಕಷ್ಟು
  5. 1/2 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1 ಟೀಸ್ಪೂನ್ ಉದ್ದಿನಬೇಳೆ
  8. 1 ಟೀಸ್ಪೂನ್ ಶುಂಠಿ
  9. 1 ಹಸಿಮೆಣಸಿನಕಾಯಿ
  10. 1 ಟೇಬಲ್ ಚಮಚ ಕರಿಬೇವು
  11. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  12. 1 ಈರುಳ್ಳಿ
  13. ಇಂಗು ಒಂದು ಚಿಟಿಕೆ
  14. 1 ಟೇಬಲ್ ಚಮಚ ಅಡುಗೆ ಎಣ್ಣೆ

ಮಜ್ಜಿಗೆ ಕಡುಬು ಮತ್ತು ಸಾರು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ಅಗಲವಾದ ಪಾತ್ರೆಯಲ್ಲಿ ಹರಡಿ ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ. 
  3. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಒಗ್ಗರಣೆ ಮಾಡಿ. 
  4. ಅದಕ್ಕೆ ಕತ್ತರಿಸಿದ ಶುಂಠಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ ಹಾಕಿ ಹುರಿಯಿರಿ.
  5. ಹುರಿಯುವಾಗ ಇಂಗನ್ನು ಸೇರಿಸಿ.  
  6. ಅಕ್ಕಿ ತರಿ ಹಾಕಿ ಒಂದು ನಿಮಿಷ ಹುರಿದು ಸ್ಟವ್ ಆಫ್ ಮಾಡಿ. 
  7. ಬಿಸಿ ಸ್ವಲ್ಪ ಆರಿದ ಮೇಲೆ, ಉಪ್ಪು, ನೀರು ಮತ್ತು ಮಜ್ಜಿಗೆ ಸೇರಿಸಿ. 
  8. ತಟ್ಟೆ ಅಥವಾ ಪ್ಲೇಟ್ ಗೆ ತುಪ್ಪ ಹಚ್ಚಿ ಹಿಟ್ಟನ್ನು ಹಾಕಿ. ಹಿಟ್ಟು ಹಾಕುವಾಗ ಆಗಾಗ್ಯೆ ಮಗುಚಿ ಹಾಕಿ. 
  9. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ.
  10. ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಮಂಗಳವಾರ, ಅಕ್ಟೋಬರ್ 26, 2021

Godhi hittu rave dose recipe in Kannada | ಗೋಧಿಹಿಟ್ಟು ರವೇ ದೋಸೆ ಮಾಡುವ ವಿಧಾನ

 

Godhi hittu rave dose recipe in Kannada

Godhi hittu rave dose recipe in Kannada | ಗೋಧಿಹಿಟ್ಟು ರವೇ ದೋಸೆ ಮಾಡುವ ವಿಧಾನ

ಗೋಧಿಹಿಟ್ಟು ರವೇ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 1/2 ಕಪ್ ರವೆ
  3. 1/4 ಕಪ್ ಮೊಸರು 
  4. ಸಣ್ಣ ಚಿಟಿಕೆ ಅಡುಗೆ ಸೋಡಾ (ಬೇಕಾದಲ್ಲಿ)
  5. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  6. 1/4 ಟೀಸ್ಪೂನ್ ಸಕ್ಕರೆ
  7. ಉಪ್ಪು ರುಚಿಗೆ ತಕ್ಕಷ್ಟು
  8. ಸುಮಾರು 1.75 ಕಪ್ ನೀರು

ಗೋಧಿಹಿಟ್ಟು ರವೇ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು ಮತ್ತು ರವೆಯನ್ನು ತೆಗೆದುಕೊಳ್ಳಿ. 
  2. ಅದಕ್ಕೆ ಉಪ್ಪು, ಸಕ್ಕರೆ ಮತ್ತು ಸೋಡಾ ಸೇರಿಸಿ.  ಒಮ್ಮೆ ಕಲಸಿ. 
  3. ಮೊಸರು ಸೇರಿಸಿ. 
  4. ಅಗತ್ಯವಿದ್ದಷ್ಟು ನೀರು ಸ್ವಲ್ಪ ಸ್ವಲ್ಪವಾಗಿ ಸೇರಿಸಿ (ಸುಮಾರು 1.75 ಕಪ್). 
  5. ಗಂಟಿಲ್ಲದಂತೆ ಮಗುಚಿ ದೋಸೆ ಹಿಟ್ಟು ತಯಾರಿಸಿ. ಹಿಟ್ಟು ತೆಳುವಾದ ಉದ್ದಿನ ದೋಸೆ ಹಿಟ್ಟಿನಂತಿರಲಿ.
  6. ಒಂದೈದು ನಿಮಿಷ ನೆನೆಯಲು ಬಿಡಿ. 
  7. ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
  8. ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಉದ್ದಿನ ದೋಸೆಯಂತೆ ತೆಳ್ಳಗೆ ತಿಕ್ಕಿ ದೋಸೆ ಮಾಡಿ.
  9. ಮುಚ್ಚಳ ಮುಚ್ಚಿ ಬೇಯಿಸಿ.
  10. ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  11. ನಂತರ ಮಧ್ಯಮ ಉರಿಯಲ್ಲಿ, 5 - 10 ಸೆಕೆಂಡುಗಳ ಕಾಲ ಕಾಯಿಸಿ ದೋಸೆಯನ್ನು ತೆಗೆಯಿರಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಮಂಗಳವಾರ, ಅಕ್ಟೋಬರ್ 19, 2021

Plain rave rotti recipe in Kannada | ಉಕ್ಕರಿಸಿದ ರವೆ ರೊಟ್ಟಿ ಮಾಡುವ ವಿಧಾನ

 

Plain rave rotti recipe in Kannada

Plain rave rotti recipe in Kannada | ಉಕ್ಕರಿಸಿದ ರವೆ ರೊಟ್ಟಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಚಿರೋಟಿ ರವೆ 
  2. 1.25 ಕಪ್ ನೀರು
  3. 1 ಟೀಸ್ಪೂನ್ ಅಡುಗೆ ಎಣ್ಣೆ 
  4. ಉಪ್ಪು ರುಚಿಗೆ ತಕ್ಕಷ್ಟು

ಉಕ್ಕರಿಸಿದ ರವೆ ರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, ಉಪ್ಪು ಮತ್ತು ಎಣ್ಣೆ ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ರವೆ ಸೇರಿಸಿ ಒಂದು ನಿಮಿಷ ಚೆನ್ನಾಗಿ ಕಲಸಿ.
  3. ಸ್ಟವ್ ಆಫ್ ಮಾಡಿ. 
  4. ಬಿಸಿ ಆರಿದ ಮೇಲೆ ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ. 
  5. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು (ಅಕ್ಕಿ ಹಿಟ್ಟು ಅಥವಾ ಬೇರೆ ಯಾವುದಾದ್ರೂ ಹಿಟ್ಟು) ಹಾಕಿ ತೆಳ್ಳಗೆ ಲಟ್ಟಿಸಿ. 
  6. ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. 
  7. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ ಖಾಯಿಸಿ. 
  8. ಸಣ್ಣ ಗುಳ್ಳೆಗಳು ಬಂಡ ಕೂಡಲೇ ತಿರುಗಿಸಿ ಇನ್ನೊಂದು ಬದಿ ಕಾಯಿಸಿ.
  9. ಎರಡು ಬದಿ ಅಲ್ಲಲ್ಲಿ ಕೆಂಪಗಾಗುವವರೆಗೆ ಕಾಯಿಸಿ. 
  10. ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಮಂಗಳವಾರ, ಅಕ್ಟೋಬರ್ 12, 2021

Kayi sasive chitranna recipe in Kannada | ಕಾಯಿ ಸಾಸಿವೆ ಚಿತ್ರಾನ್ನ ಮಾಡುವ ವಿಧಾನ

 

Kayi sasive chitranna recipe in Kannada

Kayi sasive gojjina chitranna recipe in Kannada | ಕಾಯಿ ಸಾಸಿವೆ ಗೊಜ್ಜಿನ ಚಿತ್ರಾನ್ನ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಕಪ್ ಅಕ್ಕಿ (ಸೋನಾಮಸೂರಿ)
  2. 1 ಕಪ್ ತೆಂಗಿನ ತುರಿ
  3. 3 - 5 ಕೆಂಪು ಮೆಣಸಿನಕಾಯಿ
  4. 1/4 ಟೀಸ್ಪೂನ್ ಸಾಸಿವೆ
  5. 1 ಸಣ್ಣ ನಿಂಬೆ ಗಾತ್ರದ ಬೆಲ್ಲ
  6. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡಲೆಬೇಳೆ
  6. 4 - 6 ಕರಿಬೇವಿನ ಎಲೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. 4 ಟೇಬಲ್ ಚಮಚ ಅಡುಗೆ ಎಣ್ಣೆ (ತೆಂಗಿನೆಣ್ಣೆಗೆ ಆದ್ಯತೆ)

ಕಾಯಿ ಸಾಸಿವೆ ಚಿತ್ರಾನ್ನ ಮಾಡುವ ವಿಧಾನ:

  1. ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. 
  2. ಮಿಕ್ಸಿ ಜಾರಿಗೆ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆಯನ್ನು ಹಾಕಿ.
  3. ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆದು ಪಕ್ಕಕ್ಕಿಡಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಕಡಲೆಕಾಯಿ (ಶೇಂಗಾ) ಯನ್ನು ಹಾಕಿ ಹುರಿಯಿರಿ. 
  5. ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ ಮತ್ತು ಕಡಲೆಬೇಳೆ ಬಳಸಿಕೊಂಡು ಒಗ್ಗರಣೆ  ಮಾಡಿ. 
  6. ನಂತರ ಅರಿಶಿನ ಪುಡಿ , ಇಂಗು ಮತ್ತು ಕರಿಬೇವು ಸೇರಿಸಿ. ಉರಿ ಕಡಿಮೆ ಮಾಡಿ. 
  7. ಉಪ್ಪು, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ ಕುದಿಯಲು ಬಿಡಿ. 
  8. ಅರೆದ ಮಸಾಲಾ ಪೇಸ್ಟ್ ಸೇರಿಸಿ.
  9. ಚೆನ್ನಾಗಿ ಕಲಸಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೆ ಕುದಿಸಿ. ಸ್ಟವ್ ಆಫ್ ಮಾಡಿ. 
  10. ಅನ್ನ ಹಾಕಿ ಕಲಸಿ. 

ಮಂಗಳವಾರ, ಅಕ್ಟೋಬರ್ 5, 2021

Badanekayi kai gojju recipe in Kannada | ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ

 

Badanekayi kai gojju recipe in Kannada

Badanekayi kai gojju recipe in Kannada | ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ 

ಬದನೇಕಾಯಿ ಕೈ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 kg ಬದನೇಕಾಯಿ
  2. 1/4 ಟೀಸ್ಪೂನ್ ಅರಿಶಿನ
  3. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  4. 1 ಚಮಚ ಬೆಲ್ಲ 
  5. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  6. ಒಂದು ಈರುಳ್ಳಿ
  7. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು
  9. 1 ಟೇಬಲ್ ಚಮಚ ತುಪ್ಪ (ಅಥವಾ ಎಣ್ಣೆ)

ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ:

  1. ಬದನೇಕಾಯಿಯನ್ನು ಕತ್ತರಿಸಿ, ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ.  
  2. ಒಂದು ಬಾಣಲೆಯಲ್ಲಿ ತುಪ್ಪ (ಅಥವಾ ಎಣ್ಣೆ) ಬಿಸಿ ಮಾಡಿ, ಬದನೆಕಾಯಿಯನ್ನು ಸೇರಿಸಿ. 
  3. ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ. 
  4. ಮುಚ್ಚಳ ಮುಚ್ಚಿ ಬದನೇಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  5. ನಂತ್ರ ಅಚ್ಚಖಾರದಪುಡಿ, ಬೆಲ್ಲ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ, ಕಲಸಿ. 
  6. ಸ್ಟವ್ ಆಫ್ ಮಾಡಿ, ಬಿಸಿ ಆರಲು ಬಿಡಿ. 
  7. ನಂತರ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಹಿಸುಕಿ ಕಲಸಿ. 
  8. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಶನಿವಾರ, ಅಕ್ಟೋಬರ್ 2, 2021

Puliyogare mix recipe in Kannada | ಪುಳಿಯೋಗರೆ ಪುಡಿ ಮಾಡುವ ವಿಧಾನ

 

Puliyogare mix recipe in Kannada

Puliyogare mix recipe in Kannada | ಪುಳಿಯೋಗರೆ ಪುಡಿ ಮಾಡುವ ವಿಧಾನ

ಪುಳಿಯೋಗರೆ ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ನಿಂಬೆ ಗಾತ್ರದ ಹುಣಸೆ ಹಣ್ಣು 
  2. 2 ನಿಂಬೆ ಗಾತ್ರದ ಬೆಲ್ಲ 
  3. 6 ಟೀಸ್ಪೂನ್ ಉಪ್ಪು ( ಅಥವಾ ನಿಮ್ಮ ರುಚಿ ಪ್ರಕಾರ)
  4. 4 ಟೇಬಲ್ ಸ್ಪೂನ್ ಎಳ್ಳು
  5. 12 - 15 ಕೆಂಪು ಮೆಣಸಿನಕಾಯಿ ( ಗುಂಟೂರು ಮತ್ತು ಬ್ಯಾಡಗಿಯಲ್ಲಿ ಎರಡೂ ಬಳಸಿ) 
  6. 4 ಟೀಸ್ಪೂನ್ ಉದ್ದಿನ ಬೇಳೆ
  7. 4 ಟೀಸ್ಪೂನ್ ಕಡಲೆಬೇಳೆ 
  8. 8 ಟೀಸ್ಪೂನ್ ಕೊತ್ತಂಬರಿ ಬೀಜ 
  9. 4 ಟೀಸ್ಪೂನ್ ಜೀರಿಗೆ
  10. 1/2 ಟೀಸ್ಪೂನ್ ಸಾಸಿವೆ 
  11. 1/2 ಟೀಸ್ಪೂನ್ ಮೆಂತ್ಯ 
  12. 1/2 ಟೀಸ್ಪೂನ್ ಕರಿಮೆಣಸು 
  13. 1/2 ಟೀಸ್ಪೂನ್ ಇಂಗು 
  14. 1/2 ಟೀಸ್ಪೂನ್ ಅರಿಶಿನ
  15. 1/2 ಕಪ್ ತುರಿದ ಕೊಬ್ಬರಿ 
  16. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಚಮಚ ಸಾಸಿವೆ
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 2 ಟೀಸ್ಪೂನ್ ಕಡಲೆಬೇಳೆ 
  4. 4 ಟೇಬಲ್ ಸ್ಪೂನ್ ಕಡ್ಲೆಕಾಯಿ ಬೀಜ ಅಥವಾ ಶೇಂಗಾ
  5. ಸ್ವಲ್ಪ ಗೋಡಂಬಿ
  6. 2 ಟೀಸ್ಪೂನ್ ಎಳ್ಳು
  7. ಸ್ವಲ್ಪ ಕರಿಬೇವಿನ ಎಲೆ
  8. 1/4 ಕಪ್ ಅಡುಗೆ ಎಣ್ಣೆ

ಪುಳಿಯೋಗರೆ ಪುಡಿ ಮಾಡುವ ವಿಧಾನ:

  1. ಮೊದಲಿಗೆ ಎಳ್ಳನ್ನು ಎಣ್ಣೆ ಹಾಕದೆ ಹುರಿದು ತೆಗೆದಿಡಿ. 
  2. ನಂತ್ರ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ ಮೆಣಸಿನಕಾಯಿಯನ್ನು ಗರಿಗರಿ ಆಗುವವರೆಗೆ ಹುರಿದು ತೆಗೆದಿಡಿ.
  3. ಆಮೇಲೆ ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆದಿಡಿ. 
  4. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ. 
  5. ನಂತ್ರ ಮೆಂತೆ, ಜೀರಿಗೆ, ಸಾಸಿವೆ, ಕರಿಮೆಣಸು ಮತ್ತು ಕೊತ್ತಂಬರಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿಯಿರಿ. 
  6. ಅದಕ್ಕೆ ಕೊಬ್ಬರಿ ಪುಡಿ, ಅರಿಶಿನ ಮತ್ತು ಇಂಗು ಸೇರಿಸಿ, ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  7. ಹುರಿದ ಎಲ್ಲ ಪದಾರ್ಥಗಳು ತಣ್ಣಗಾದ ಮೇಲೆ ಪುಡಿ ಮಾಡಿಟ್ಟು ಕೊಳ್ಳಿ. 
  8. ನಂತರ ಮಿಕ್ಸಿ ಜಾರಿನಲ್ಲಿ ಚೂರು ಮಾಡಿದ ಹುಣಿಸೇಹಣ್ಣು ಉಪ್ಪನ್ನು ಪುಡಿ ಮಾಡಿ.
  9. ಅದಕ್ಕೆ ಬೆಲ್ಲ ಹಾಕಿ ಪುಡಿಮಾಡಿ. 
  10. ಪುಡಿಮಾಡಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ.  
  11.  ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶೇಂಗಾ (ಕಡ್ಲೆಕಾಯಿ) ಯನ್ನು  ಹುರಿಯಿರಿ.
  12.  ನಂತ್ರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಎಳ್ಳು ಮತ್ತು ಗೋಡಂಬಿಯ ಒಗ್ಗರಣೆ ಮಾಡಿ. 
  13. ಕೊನೆಯಲ್ಲಿ ಕರಿಬೇವು ಹಾಕಿ ಸ್ಟವ್ ಆಫ್ ಮಾಡಿ. 
  14. ಸ್ವಲ್ಪ ಬಿಸಿಕಡಿಮೆ ಆದ ಮೇಲೆ, ಮಾಡಿಟ್ಟುಕೊಂಡ ಪುಡಿ ಸೆರಿಸಿ ಕಲಸಿ. 
  15. ನಂತರ ಬೇಯಿಸಿಟ್ಟ ಅನ್ನಕ್ಕೆ, ಅಗತ್ಯವಿದ್ದಷ್ಟು ಪುಡಿ ಸೇರಿಸಿ, ಪುಳಿಯೋಗರೆ ಮಾಡಿ. 

ಬುಧವಾರ, ಸೆಪ್ಟೆಂಬರ್ 29, 2021

Dideer akki paddu recipe in Kannada | ಅಕ್ಕಿಯಿಂದ ದಿಢೀರ್ ಪಡ್ಡು ಮಾಡುವ ವಿಧಾನ

Dideer akki paddu recipe in Kannada

Dideer akki paddu recipe in Kannada |ಅಕ್ಕಿಯಿಂದ ದಿಢೀರ್ ಪಡ್ಡು ಮಾಡುವ ವಿಧಾನ 

ದಿಢೀರ್ ಪಡ್ಡು ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಇಡ್ಲಿರವೇ
  2. 1/4 ಕಪ್ ಮೊಸರು
  3. 1/4 ಕಪ್ ಅವಲಕ್ಕಿ (ಗಟ್ಟಿ ಅಥವಾ ಮೀಡಿಯಂ)
  4. 1/4 ಕಪ್ ಅಕ್ಕಿಹಿಟ್ಟು
  5. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  6. 1 ಈರುಳ್ಳಿ
  7. 4 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 2 ಟೇಬಲ್ ಚಮಚ ತೆಂಗಿನತುರಿ
  9. 1 ಹಸಿಮೆಣಸಿನಕಾಯಿ
  10. 1/2 ಚಮಚ ಶುಂಠಿ
  11. ಉಪ್ಪು ರುಚಿಗೆ ತಕ್ಕಷ್ಟು
  12. 1/4 ಟೀಸ್ಪೂನ್ ಎನೊ ಅಥವಾ ಸೋಡಾ (ಬೇಕಾದಲ್ಲಿ)

ದಿಢೀರ್ ಪಡ್ಡು ಮಾಡುವ ವಿಧಾನ:

  1. ಇಡ್ಲಿರವೆಯನ್ನು ತೊಳೆದು ನೀರು ಬಗ್ಗಿಸಿ.
  2. ಕುದಿ ಕುದಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ. 
  3. ಅವಲಕ್ಕಿಯನ್ನು ಮಾಮೂಲಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ.
  4. ನೆನೆಸಿದ ನಂತರ ಹೆಚ್ಚಿನ ನೀರು ಬಗ್ಗಿಸಿ ತೆಗೆಯಿರಿ. 
  5. ನೆನೆಸಿದ ಇಡ್ಲಿರವೆಯನ್ನು ಮಿಕ್ಸಿ ಜಾರಿಗೆ ಹಾಕಿ ಅರೆಯಿರಿ. 
  6. ರುಬ್ಬಿದ ನಂತರ ನೆನೆಸಿದ ಅವಲಕ್ಕಿ, ಅಕ್ಕಿಹಿಟ್ಟು ಮತ್ತು ಮೊಸರು ಸೇರಿಸಿ. 
  7. ಸ್ವಲ್ಪ ಹೊತ್ತು ರುಬ್ಬಿ ಒಂದು ಪಾತ್ರೆಗೆ ಹಾಕಿ. 
  8. ಅರೆಯಲು ಬೇರೆ ನೀರು ಸೇರಿಸುವುದು ಬೇಡ. ಹಿಟ್ಟು ತುಂಬ ಬಿಸಿಯಾಗದಂತೆ ನೋಡಿಕೊಳ್ಳಿ.
  9. ನಂತರ ಹಿಟ್ಟಿಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಾಯಿತುರಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  10. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  11. ಬೇಕಾದಲ್ಲಿ ಏನೋ ಅಥವಾ ಸೋಡಾ ಸೇರಿಸಿ ಕಲಸಿ.
  12. ಪಡ್ಡು ಕಾವಲಿಯನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  13. ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. 
  14. 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  15. ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಸೆಪ್ಟೆಂಬರ್ 21, 2021

Chigali recipe in Kannada | ಚಿಗಳಿ ಮಾಡುವ ವಿಧಾನ

 

Chigali recipe in Kannada

Chigali recipe in Kannada | ಚಿಗಳಿ  ಮಾಡುವ ವಿಧಾನ

ಚಿಗಳಿ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1/4 ಕಪ್ ಹುಣಿಸೇಹಣ್ಣು
  2. 1 ಟೀಸ್ಪೂನ್ ಜೀರಿಗೆ
  3. 1 ಟೀಸ್ಪೂನ್ ಉಪ್ಪು (ಅಥವಾ ರುಚಿಗೆ ತಕ್ಕಷ್ಟು)
  4. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  5. 1 ಟೇಬಲ್ ಚಮಚ ಬೆಲ್ಲ
  6. 1/2 ಟೀಸ್ಪೂನ್ ಎಣ್ಣೆ (ಬೇಕಾದಲ್ಲಿ)

ಚಿಗಳಿ ಮಾಡುವ ವಿಧಾನ:

  1.  ಉಪ್ಪು ಮತ್ತು ಜೀರಿಗೆಯನ್ನು ಚೆನ್ನಾಗಿ ಗುದ್ದಿ ಪುಡಿಮಾಡಿಕೊಳ್ಳಿ. ಜೀರಿಗೆ ಬದಲು ಜೀರಿಗೆ ಪುಡಿಯನ್ನು ಬಳಸಬಹುದು.  
  2. ಬೆಲ್ಲ, ಅಚ್ಚಖಾರದ ಪುಡಿ ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಚೆನ್ನಾಗಿ ಜಜ್ಜಿ.
  3. ಬೇಕಾದಲ್ಲಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು. 
  4. ಚೆನ್ನಾಗಿ ಜಜ್ಜಿ ಮುದ್ದೆ ಆದ ನಂತರ, ಎಣ್ಣೆ ಹಾಕಿ ಸ್ವಲ್ಪ ಹೊತ್ತು ಗುದ್ದಿ. 
  5. ಉಂಡೆಗಳನ್ನು ಮಾಡಿ ಕಡ್ಡಿಯನ್ನು ಚುಚ್ಚಿ. 
  6. ಅಥವಾ ಸಣ್ಣ ಉಂಡೆ ಮಾಡಿ ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿ, ಎತ್ತಿಡಿ. 
  7. ಮಿಠಾಯಿಯಂತೆ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Kempu khara dose recipe in Kannada | ಕೆಂಪು ಖಾರ ದೋಸೆ ಮಾಡುವ ವಿಧಾನ

 

Kempu khara dose recipe in Kannada

Kempu khara dose recipe in Kannada | ಕೆಂಪು ಖಾರ ದೋಸೆ  ಮಾಡುವ ವಿಧಾನ

ಕೆಂಪು ಖಾರ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಅಕ್ಕಿಹಿಟ್ಟು
  2. 1 ಕಟ್ಟು ಮೆಂತೆ ಸೊಪ್ಪು
  3. 1/2 ಕಪ್ ತೆಳು ಅವಲಕ್ಕಿ  (ಬೇಕಾದಲ್ಲಿ)
  4. 1 ದೊಡ್ಡ ಚಮಚ ಸಾರಿನ ಪುಡಿ (ರಸಂ ಪೌಡರ್)
  5. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  6. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  7. 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  8. ಉಪ್ಪು ರುಚಿಗೆ ತಕ್ಕಂತೆ
  9. ಎಣ್ಣೆ ದೋಸೆ ಮಾಡಲು

ಕೆಂಪು ಖಾರ ದೋಸೆ ಮಾಡುವ ವಿಧಾನ:

  1. ಮೆಂತೆ ಸೊಪ್ಪನ್ನು ಆರಿಸಿ, ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ.
  2. ಒಂದು ಪಾತ್ರೆಯಲ್ಲಿ ಅವಲಕ್ಕಿಯನ್ನು ತೊಳೆದು, ಚೆನ್ನಾಗಿ ಹಿಸುಕಿ ತೆಳ್ಳಗಿನ ಪೇಸ್ಟ್ ಮಾಡಿಕೊಳ್ಳಿ.   
  3. ಅಕ್ಕಿ ಹಿಟ್ಟು, ರಸಂ ಪೌಡರ್ ಮತ್ತು ಅಚ್ಚಖಾರದ ಪುಡಿ ಸೇರಿಸಿ. 
  4. ಉಪ್ಪು ಹುಳಿ ಮತ್ತು ಬೆಲ್ಲ ಹಾಕಿ. 
  5. ಅವಲಕ್ಕಿ ಪೇಸ್ಟ್ ಅನ್ನು ಸೇರಿಸಿ. 
  6. ಸುಮಾರು ಒಂದು ಕಪ್ ನೀರು ಸೇರಿಸಿ, ಹಿಟ್ಟು ತಯಾರಿಸಿಕೊಳ್ಳಿ. 
  7. ಕತ್ತರಿಸಿದ ಮೆಂತೆ ಸೊಪ್ಪು ಹಾಕಿ ಕಲಸಿ, ದೋಸೆ ಹಿಟ್ಟು ತಯಾರಿಸಿಕೊಳ್ಳಿ.  
  8. ದೋಸೆ ಕಾವಲಿ ಬಿಸಿ ಮಾಡಿ, ದೋಸೆ ಮಾಡಿ.
  9. ಮೇಲಿನಿಂದ ಎಣ್ಣೆ ಹಾಕಿ, ಇನ್ನೊಂದು ಬದಿಯೂ ಖಾಯಿಸಿ. 
  10. ಬೆಣ್ಣೆ ಅಥವಾ ಚಟ್ನಿಯೊಂದಿಗೆ ಬಡಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಸೆಪ್ಟೆಂಬರ್ 15, 2021

Hurali kalu dose recipe in Kannada | ಹುರುಳಿಕಾಳು ದೋಸೆ ಮಾಡುವ ವಿಧಾನ

 

Hurali kalu dose recipe in Kannada

Hurali kalu dose recipe in Kannada | ಹುರುಳಿಕಾಳು ದೋಸೆ ಮಾಡುವ ವಿಧಾನ

ಹುರುಳಿಕಾಳು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ದೋಸೆ ಅಕ್ಕಿ
  2. 1/4 ಕಪ್ ಹುರುಳಿಕಾಳು
  3. 1/2 ಟೀಸ್ಪೂನ್ ಮೆಂತ್ಯ
  4. 1/4 ಕಪ್ ಅವಲಕ್ಕಿ
  5. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  6. ಉಪ್ಪು ರುಚಿಗೆ ತಕ್ಕಷ್ಟು.

ಹುರುಳಿಕಾಳು ದೋಸೆ ಮಾಡುವ ವಿಧಾನ:

  1. ಅಕ್ಕಿ, ಹುರುಳಿಕಾಳು, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆದು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ಅವಲಕ್ಕಿಯನ್ನು ಅರೆಯುವ ಹತ್ತು ನಿಮಿಷ ಮೊದಲು ನೆನೆಸಿದರೂ ಸಾಕು. 
  2. ನೆನೆಸಿದ ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  3. ಎಲ್ಲವನ್ನು ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  4. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  5. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  6. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  7. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  8. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಸೆಪ್ಟೆಂಬರ್ 3, 2021

Bele kadubu recipe in Kannada | ಬೇಳೆ ಕಡುಬು ಮಾಡುವ ವಿಧಾನ

 

Bele kadubu recipe in Kannada

Bele kadubu recipe in Kannada | ಬೇಳೆ ಕಡುಬು ಮಾಡುವ ವಿಧಾನ 

ಬೇಳೆ ಕಡುಬು ವಿಡಿಯೋ

ಚಪಾತಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಗೋಧಿಹಿಟ್ಟು
  2. 1/4 ಕಪ್ ನೀರು
  3. 1/4 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ತೊಗರಿಬೇಳೆ
  2. 2 ಟೇಬಲ್ ಚಮಚ ಎಣ್ಣೆ
  3. 1/2 ಟೀಸ್ಪೂನ್ ಸಾಸಿವೆ
  4. 1/2 ಟೀಸ್ಪೂನ್ ಜೀರಿಗೆ
  5. 1 ಹಸಿಮೆಣಸಿನಕಾಯಿ
  6. 1 ಈರುಳ್ಳಿ
  7. 1 ಟೊಮೇಟೊ
  8. ಚಿಟಿಕೆ ಅರಿಶಿನ 
  9. ಚಿಟಿಕೆ ಇಂಗು
  10. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 2 ಟೇಬಲ್ ಚಮಚ ತೆಂಗಿನತುರಿ
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. ಉಪ್ಪು ರುಚಿಗೆ ತಕ್ಕಂತೆ

ಬೇಳೆ ಕಡುಬು ಮಾಡುವ ವಿಧಾನ:

  1. ತೊಗರಿಬೇಳೆಯನ್ನು, ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.
  3. ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
  4. ಹುರಿಯುವಾಗ ಅರಿಶಿನ ಮತ್ತು ಇಂಗು ಸೇರಿಸಿ. 
  5. ನಂತರ ಕತ್ತರಿಸದ ಟೊಮೇಟೊ ಹಾಕಿ ಹುರಿಯಿರಿ. 
  6. ಹುರಿಯುವಾಗ ಉಪ್ಪು, ಅಚ್ಚಖಾರದಪುಡಿ ಮತ್ತು ಗರಂ ಮಸಾಲಾ ಹಾಕಿ ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ.  
  7. ಬೇಯಿಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಇಡಿ.  
  8. ಗೋಧಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
  9. ತೆಳ್ಳಗೆ ಚಪಾತಿ ಮಾಡಿ, ಕತ್ತರಿಸಿ. 
  10. ಕುದಿಯುತ್ತಿರುವ ಮಸಾಲೆಗೆ ಹಾಕಿ.
  11. ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. 
  12. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿ.  
  13. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಸಿಹಿಯನ್ನು ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.  
  14. ಕುದಿಸಿ, ಸ್ಟವ್ ಆಫ್ ಮಾಡಿ, ಬಿಸಿ ಬಿಸಿಯಾಗಿ ಬಡಿಸಿ. 

ಸೋಮವಾರ, ಆಗಸ್ಟ್ 23, 2021

Beans sambar recipe in Kannada | ಬೀನ್ಸ್ ಸಾಂಬಾರ್ ಮಾಡುವ ವಿಧಾನ

 

Beans sambar recipe in Kannada

Beans sambar recipe in Kannada | ಬೀನ್ಸ್ ಸಾಂಬಾರ್ ಮಾಡುವ ವಿಧಾನ

ಬೀನ್ಸ್ ಸಾಂಬಾರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4kg ಬೀನ್ಸ್
  2. 1/4 ಕಪ್ ತೊಗರಿಬೇಳೆ
  3. ದೊಡ್ಡ ಚಿಟಿಕೆ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. 1/2 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  6. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು
  7. ಸ್ವಲ್ಪ ಕೊತ್ತಂಬರಿ ಸೊಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು
  7. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/2 ಟೀಸ್ಪೂನ್ ಸಾಸಿವೆ
  4. ಒಂದು ಚಿಟಿಕೆ ಇಂಗು
  5. 1 ಟೀಸ್ಪೂನ್ ಅಡುಗೆ ಎಣ್ಣೆ

ಬೀನ್ಸ್ ಸಾಂಬಾರ್ ಮಾಡುವ ವಿಧಾನ:

  1. ಬೀನ್ಸ್ ನ್ನು ತೊಳೆದು ಕತ್ತರಿಸಿ.
  2. ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಈಗ ಅದೇ ಕುಕ್ಕರ್ ಗೆ ಕತ್ತರಿಸಿದಬೀನ್ಸ್, ಸ್ವಲ್ಪ ಉಪ್ಪು ಮತ್ತು 1 ಲೋಟ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  4. ನಂತ್ರ ಒಂದು ಬಾಣಲೆ ತೆಗೆದು ಕೊಂಡು, ಒಣ ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  6. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. 
  7. ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ.
  8. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
  9. ಒಣ ಮೆಣಸಿನಕಾಯಿ, ಸಾಸಿವೆ, ಕರಿಬೇವಿನ ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಆಗಸ್ಟ್ 3, 2021

Mumbai masala majjige recipe in Kannada | ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ

 

Mumbai masala majjige recipe in Kannada | ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ

ಮುಂಬೈ ಮಸಾಲೆ ಮಜ್ಜಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಸರು (ಅಥವಾ ಮಜ್ಜಿಗೆ)
  2. 1 ಕಪ್ ನೀರು (ಜಾಸ್ತಿ ಬೇಕಾದಲ್ಲಿ ಹಾಕಬಹುದು)
  3. 1/2 ಟೀಸ್ಪೂನ್ ಶುಂಠಿ
  4. 1 ಹಸಿಮೆಣಸಿನಕಾಯಿ
  5. 1/4 ಟೀಸ್ಪೂನ್ ಜೀರಿಗೆ ಪುಡಿ
  6. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 4 - 5 ಪುದಿನ ಎಲೆ 
  8. 1/4 ಟೀಸ್ಪೂನ್ ಚಾಟ್ ಮಸಾಲಾ 
  9. 1/4 ಟೀಸ್ಪೂನ್ ಸೈನ್ದವ ಲವಣ (ಬ್ಲ್ಯಾಕ್ ಸಾಲ್ಟ್)
  10. ಉಪ್ಪು ರುಚಿಗೆ ತಕ್ಕಂತೆ 

ಮುಂಬೈ ಮಸಾಲೆ ಮಜ್ಜಿಗೆ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಮೊಸರು ಮತ್ತು ನೀರು ತೆಗೆದುಕೊಳ್ಳಿ. 
  2. ಅದಕ್ಕೆ ಶುಂಠಿ, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಪುದಿನಾ ಎಲೆ, ಚಾಟ್ ಮಸಾಲಾ, ಸೈನ್ದವ ಲವಣ ಮತ್ತು ಉಪ್ಪು ಸೇರಿಸಿ. 
  3. ಸ್ವಲ್ಪ ಹೊತ್ತು ಮಿಕ್ಸಿ ಮಾಡಿ. 
  4. ಸವಿದು ಆನಂದಿಸಿ. 


ಶನಿವಾರ, ಜುಲೈ 31, 2021

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

 

Uddina happala recipe in Kannada

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

ಉದ್ದಿನ ಹಪ್ಪಳ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಉದ್ದಿನಬೇಳೆ
  2. ಅಗತ್ಯವಿದ್ದಷ್ಟು ನೀರು
  3. 1/4 ಟೀಸ್ಪೂನ್ ಉಪ್ಪು
  4. 1/4 ಟೀಸ್ಪೂನ್ ಸೋಡಾ
  5. ಕಾಯಿಸಲು ಎಣ್ಣೆ

ಉದ್ದಿನ ಹಪ್ಪಳ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಉದ್ದಿನಬೇಳೆ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ ಜರಡಿ ಹಿಡಿದುಕೊಳ್ಳಿ. 
  2. ನಂತ್ರ ಆ ಹಿಟ್ಟಿಗೆ ಉಪ್ಪು ಮತ್ತು ಸೋಡಾ ಹಾಕಿ ಕಲಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ಗಟ್ಟಿಯಾದ ಹಿಟ್ಟು ಕಲಸಿ. 
  4. ಒಂದು ಕುಟ್ಟಾಣಿ ತೆಗೆದುಕೊಂಡು ಹಿಟ್ಟನ್ನು ಚೆನ್ನಾಗಿ ಗುದ್ದಿ ಮೃದು ಮಾಡಿಕೊಳ್ಳಿ. 
  5. ಸಣ್ಣ ಉಂಡೆ ತೆಗೆದುಕೊಂಡು, ತೆಳ್ಳಗೆ ಲಟ್ಟಿಸಿ. 
  6. ಒಂದು ಬಟ್ಟಲಿನಿಂದ ಒತ್ತಿ, ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ.  
  7. ಹತ್ತಿಯ ಬಟ್ಟೆ ಮೇಲೆ ಒಂದೆರಡು ಘಂಟೆ ಗಾಳಿಯಾಡಲು ಬಿಡಿ. ಬಿಸಿಲಿನಲ್ಲಿ ಒಣಗಿಸಬಾರದು.  
  8. ಎಣ್ಣೆಯಲ್ಲಿ ಕಾಯಿಸಿ. ಲಟ್ಟಿಸಿದ ಕೂಡಲೆಯೂ ಕಾಯಿಸಬಹುದು.  
  9. ಚೆನ್ನಾಗಿ ನೆರಳಿನಲ್ಲಿ ಒಣಗಿಸಿದರೆ ಒಂದು ತಿಂಗಳು ಹಾಳಾಗುವುದಿಲ್ಲ. 
  10. ಸವಿದು ಆನಂದಿಸಿ. 


ಮಂಗಳವಾರ, ಜುಲೈ 20, 2021

Godhi hittina unde recipe in Kannada | ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ

  

Godhi hittina unde recipe in Kannada

Godhi hittina unde recipe in Kannada | ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ

ಗೋಧಿ ಹಿಟ್ಟಿನ ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿಹಿಟ್ಟು
  2. 1/2 ಕಪ್ ನೀರು
  3. 3/4 ಕಪ್ ಬೆಲ್ಲ
  4. 3 ಟೀಸ್ಪೂನ್ ತುಪ್ಪ (ಬೇಕಾದಲ್ಲಿ ಜಾಸ್ತಿ ಹಾಕಬಹುದು)
  5. 2 - 3 ಟೇಬಲ್ ಚಮಚ ಚೂರು ಮಾಡಿದ ಗೋಡಂಬಿ
  6. ಎರಡು ಏಲಕ್ಕಿ (ಅಥವಾ ದೊಡ್ಡ ಚಿಟಿಕೆ ಏಲಕ್ಕಿ ಪುಡಿ)

ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. 
  2. ಅದಕ್ಕೆ ಗೋಡಂಬಿ ಚೂರುಗಳನ್ನು ಹಾಕಿ ಹುರಿಯಿರಿ. 
  3. ನಂತ್ರ ಅದೇ ಬಾಣಲೆಗೆ ಗೋಧಿ ಹಿಟ್ಟು ಹಾಕಿ. 
  4. ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿ, ಒಳ್ಳೆ ಘಮ ಬರುವವರೆಗೆ ಹುರಿಯಿರಿ. 
  5. ಹುರಿದ ಹಿಟ್ಟು ಮತ್ತು ಗೋಡಂಬಿಯನ್ನು ಒಂದು ಪ್ಲೇಟ್ ನಲ್ಲಿ ತೆಗೆದುಕೊಂಡು, ಏಲಕ್ಕಿ ಪುಡಿ ಸೇರಿಸಿ ಪಕ್ಕಕ್ಕಿಡಿ. 
  6. ಪುನಃ ಅದೇ ಬಾಣಲೆಯಲ್ಲಿ ಪುಡಿಮಾಡಿದ ಬೆಲ್ಲ ಮತ್ತು ನೀರು ತೆಗೆದುಕೊಳ್ಳಿ. 
  7. ಆಗಾಗ್ಯೆ ಮಗುಚುತ್ತಾ ಕುದಿಸಿ.  
  8. ಬೆಲ್ಲ ಕರಗಿ ಚೆನ್ನಾಗಿ ನೊರೆ ಬಂದು ಕುದಿಯಲು ಪ್ರಾರಂಭವಾದಾಗ ಸ್ಟವ್ ಆಫ್ ಮಾಡಿ. 
  9. ಹುರಿದ ಗೋಧಿ ಹಿಟ್ಟಿಗೆ ಸೇರಿಸಿ. 
  10. ಚೆನ್ನಾಗಿ ಕಲಸಿ. 
  11. ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆ ಮಾಡಿ. ಸವಿದು ಆನಂದಿಸಿ. 


ಗುರುವಾರ, ಜುಲೈ 15, 2021

Kuttavalakki recipe in Kannada | ಕುಟ್ಟವಲಕ್ಕಿ ಮಾಡುವ ವಿಧಾನ

 

Kuttavalakki recipe in Kannada | ಕುಟ್ಟವಲಕ್ಕಿ ಮಾಡುವ ವಿಧಾನ 

ಕುಟ್ಟವಲಕ್ಕಿ ವಿಡಿಯೋ

ಪುಡಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೀಡಿಯಂ ಅವಲಕ್ಕಿ
  2. 4 - 5 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 2 ಟೀಸ್ಪೂನ್ ಜೀರಿಗೆ
  5. 2 ಟೇಬಲ್ ಚಮಚ ಒಣಕೊಬ್ಬರಿ ಪುಡಿ ಅಥವಾ ತುರಿ
  6. 2 ಟೀಸ್ಪೂನ್ ಬೆಲ್ಲ
  7. 1/2 ಟೀಸ್ಪೂನ್ ಹುಣಿಸೆಹಣ್ಣಿನ ಪೇಸ್ಟ್ (ಅಥವಾ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು)
  8. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಎಣ್ಣೆ
  2. 1 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  5. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  6. 2 ಟೇಬಲ್ ಚಮಚ ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ
  7. 5 - 6 ಕರಿಬೇವಿನ ಎಲೆ 
  8. 2 ದೊಡ್ಡ ಚಿಟಿಕೆ ಅರಿಶಿನ ಪುಡಿ 
  9. 2 ದೊಡ್ಡ ಚಿಟಿಕೆ ಇಂಗು

ಕುಟ್ಟವಲಕ್ಕಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಒಣಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕೊಬ್ಬರಿ ತುರಿ (ಅಥವಾ ಕೊಬ್ಬರಿ ಪುಡಿ) ಮತ್ತು ಉಪ್ಪನ್ನು ಪುಡಿಮಾಡಿಕೊಳ್ಳಿ. 
  2. ಅದಕ್ಕೆ ಅವಲಕ್ಕಿ, ಹುಣಿಸೇಹಣ್ಣು ಮತ್ತು ಬೆಲ್ಲಸೇರಿಸಿ. 
  3. ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಪಕ್ಕಕ್ಕಿಡಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಶೇಂಗಾ ಹಾಕಿ ಒಗ್ಗರಣೆ ಮಾಡಿ.
  5. ನಂತ್ರ ಹುರಿಗಡಲೆ,  ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ. 
  6. ಕೊನೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ. 
  7. ಪುಡಿ ಮಾಡಿದ ಅವಲಕ್ಕಿ ಮತ್ತು ಮಸಾಲೆ ಸೇರಿಸಿ. 
  8. ಸಣ್ಣ ಉರಿಯಲ್ಲಿ ಒಂದು ನಿಮಿಷ ಚೆನ್ನಾಗಿ ಹುರಿಯಿರಿ. 
  9. ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಡಬ್ಬದಲ್ಲಿ ಹಾಕಿ ಎತ್ತಿಡಿ. 
  10. ಇದನ್ನು ಹಾಗೆಯೂ ತಿನ್ನಬಹುದು ಅಥವಾ ಮೊಸರಿನೊಂದಿಗೂ ತಿನ್ನಬಹುದು. ಅಥವಾ ಬಿಸಿ ನೀರು ಸೇರಿಸಿ, ಹುಳಿಯವಲಕ್ಕಿ ಮಾಡಬಹುದು. 

ಮಂಗಳವಾರ, ಜುಲೈ 13, 2021

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 - 3 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕೊತ್ತಂಬರಿ ಸೊಪ್ಪು
  5. 2 - 3 ಹಸಿರು ಮೆಣಸಿನಕಾಯಿ
  6. 1 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  2. ನಂತರ ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  3. ಅದನ್ನು ಮಂಡಕ್ಕಿ ಇರುವ ಪಾತ್ರೆಗೆ ಹಾಕಿ. 
  4. ತೆಂಗಿನ ಎಣ್ಣೆ ಸೇರಿಸಿ.
  5. ಚೆನ್ನಾಗಿ ಕಲಸಿ. 
  6. ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.

ಗುರುವಾರ, ಜುಲೈ 8, 2021

Tasty rice breakfast recipe in Kannada | ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ

 

Tasty rice breakfast recipe in Kannada

Tasty rice breakfast recipe in Kannada | ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ 

ರುಚಿಕರ ತಿಂಡಿ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ
  2. 1 ಮಧ್ಯಮ ಗಾತ್ರದ ಆಲೂಗಡ್ಡೆ
  3. 1/2 ಟೀಸ್ಪೂನ್ ಜೀರಿಗೆ
  4. 1 ಹಸಿಮೆಣಸಿನಕಾಯಿ
  5. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  6. 1 ಟೇಬಲ್ ಚಮಚ ಕರಿಬೇವು
  7. 1 ಸಣ್ಣಗೆ ಹೆಚ್ಚಿದ ಈರುಳ್ಳಿ 
  8. 1/4 ಕಪ್ ತುರಿದ ಕ್ಯಾರಟ್ 
  9. 1/4 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು
  10. 1/4 ಕಪ್ ಸಣ್ಣಗೆ ಹೆಚ್ಚಿದ ಟೊಮೇಟೊ
  11. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  12. 2 ಟೇಬಲ್ ಚಮಚ ಮೊಸರು
  13. 1/2 ಟೀಸ್ಪೂನ್ ಏನೊ ಫ್ರೂಟ್ ಸಾಲ್ಟ್ ಅಥವಾ ಸೋಡಾ
  14. 8 ಚಮಚ ಎಣ್ಣೆ
  15. 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ:

  1. ಅಕ್ಕಿಯನ್ನು 4 - 5 ಘಂಟೆ ನೆನೆಸಿ. 
  2. ನೆನೆಸಿದ ನಂತರ ನೀರು ಬಸಿಯಿರಿ. ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  3. ಬೇಯಿಸಿದ ಆಲೂಗಡ್ಡೆ ಸೇರಿಸಿ, ಇನ್ನೊಂದು ಅರ್ಧ ಕಪ್ ನೀರು ಸೇರಿಸಿ ಪುನಃ ನುಣ್ಣಗೆ ಅರೆಯಿರಿ. 
  4. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ತೆಗೆದುಕೊಂಡು, ಉಪ್ಪು, ಜೀರಿಗೆ, ಸಣ್ಣಗೆ ಹೆಚ್ಚಿದ ಶುಂಠಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ. 
  5. ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸಿನಕಾಯಿ, ಟೊಮೇಟೊ, ತುರಿದ ಕ್ಯಾರಟ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ,  ಚೆನ್ನಾಗಿ ಕಲಸಿ. 
  6. ಕೊನೆಯಲ್ಲಿ ಮೊಸರು ಮತ್ತು ಏನೊ ಫ್ರೂಟ್ ಸಾಲ್ಟ್ (ಅಥವಾ ಸೋಡಾ) ಸೇರಿಸಿ ಕಲಸಿ. 
  7. ಒಂದು ಬಾಣಲೆ ಅಥವಾ ತವ ಮೇಲೆ ಎಣ್ಣೆ ಹಾಕಿ, ಹಿಟ್ಟು ಸುರಿದು, ಸ್ವಲ್ಪ ದಪ್ಪನಾಗಿ ಬಾಣಲೆ ದೋಸೆಯಂತೆ ಮಾಡಿ. 
  8. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  9. ತಿರುಗಿಸಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  10.  ಚಟ್ನಿ ಅಥವಾ ಟೊಮೇಟೊ ಸಾಸ್ ನೊಂದಿಗೆ ಬಡಿಸಿ. 

ಗುರುವಾರ, ಜುಲೈ 1, 2021

No stuffing Aloo paratha recipe in Kannada | ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ

 

No stuffing Aloo paratha recipe in Kannada

No stuffing Aloo paratha recipe in Kannada | ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ 

ಮಸಾಲೆ ತುಂಬಿಸದೆ ಆಲೂ ಪರೋಟ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 2 ದೊಡ್ಡ ಗಾತ್ರದ ಆಲೂಗಡ್ಡೆ
  3. 1 ಟೀಸ್ಪೂನ್ ತುರಿದ ಶುಂಠಿ
  4. 1 ಟೀಸ್ಪೂನ್ ತುರಿದ ಬೆಳ್ಳುಳ್ಳಿ
  5. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವು
  6. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  8. 1/2 ಟೀಸ್ಪೂನ್ ಗರಂ ಮಸಾಲಾ
  9. 1/2 ಟೀಸ್ಪೂನ್ ಜೀರಿಗೆ ಪುಡಿ
  10. ದೊಡ್ಡ ಚಿಟಿಕೆ ಅರಿಶಿನ
  11. 6 - 8 ಚಮಚ ತುಪ್ಪ ಅಥವಾ ಎಣ್ಣೆ
  12. 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹುರಿಯಿರಿ. 
  2. ನಂತ್ರ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ.
  3. ಉಪ್ಪು, ಅಚ್ಚಖಾರದ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ ಮತ್ತು ಅರಿಶಿನ ಹಾಕಿ. 
  4. ಬೇಯಿಸಿ, ಸಿಪ್ಪೆ ತೆಗೆದು, ಪುಡಿಮಾಡಿದ ಆಲೂಗಡ್ಡೆ ಸೇರಿಸಿ.
  5. ಚೆನ್ನಾಗಿ ಚೂರುಗಳಿಲ್ಲದಂತೆ ಹಿಸುಕಿ ಕಲಸಿ. 
  6. ಸುಮಾರು ಒಂದು ಕಪ್ ಗೋಧಿಹಿಟ್ಟು ಸೇರಿಸಿ, ಚೆನ್ನಾಗಿ ಕಲಸಿ. ಆಲೂಗಡ್ಡೆ ಗಾತ್ರದ ಮೇಲೆ ಗೋಧಿಹಿಟ್ಟು ಹೆಚ್ಚು ಕಡಿಮೆ ಆಗಬಹುದು.
  7. ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿ. 
  8. ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿ ಲಟ್ಟಿಸಿ.
  9. ಬೇಕಾದಲ್ಲಿ ಒಂದು ಪ್ಲೇಟ್ ಅಥವಾ ಬೌಲ್ ತೆಗೆದುಕೊಂಡು ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ. 
  10. ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ತುಪ್ಪ ಅಥವಾ ಎಣ್ಣೆ ಹಾಕಿ. 
  11. ಉಪ್ಪಿನಕಾಯಿ ಅಥವಾ ಮೊಸರು ಅಥವಾ ಯಾವುದೇ ಗೊಜ್ಜಿನೊಂದಿಗೆ  ಬಡಿಸಿ. ಹಾಗೆಯೂ ತಿನ್ನಬಹುದು. 

ಗುರುವಾರ, ಜೂನ್ 24, 2021

Avalakki rotti recipe Kannada | ಅವಲಕ್ಕಿ ರೊಟ್ಟಿ ಮಾಡುವ ವಿಧಾನ

 

Avalakki rotti recipe Kannada.

Avalakki rotti recipe Kannada | ಅವಲಕ್ಕಿ ರೊಟ್ಟಿ ಮಾಡುವ ವಿಧಾನ

ಅಕ್ಕಿರೊಟ್ಟಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿಹಿಟ್ಟು
  2. 1/2 ಕಪ್ ತೆಳು ಅವಲಕ್ಕಿ
  3. 2 - 3  ಟೇಬಲ್ ಚಮಚ ಬಿಸಿ ನೀರು (ಬೇಕಾದಲ್ಲಿ)
  4. 1/2 ಟೀಸ್ಪೂನ್ ಜೀರಿಗೆ
  5. 2 ಟೇಬಲ್ ಸ್ಪೂನ್ ತೆಂಗಿನತುರಿ
  6. 1 - 2 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  7. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  8. 1 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಎಲೆ
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  10. ಉಪ್ಪು ರುಚಿಗೆ ತಕ್ಕಷ್ಟು
  11. ರೊಟ್ಟಿ ಮಾಡಲು ಎಣ್ಣೆ
  12. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಅವಲಕ್ಕಿ ರೊಟ್ಟಿ ಮಾಡುವ ವಿಧಾನ:

  1. ಅವಲಕ್ಕಿಯನ್ನು ತೊಳೆದು, ನೀರು ಬಸಿದು, ಚೆನ್ನಾಗಿ ಹಿಸುಕಿ.
  2. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಹಿಸುಕಿದ ಅವಲಕ್ಕಿ ತೆಗೆದುಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ಈರುಳ್ಳಿ , ತೆಂಗಿನತುರಿ ಮತ್ತು ಜೀರಿಗೆ ಸೇರಿಸಿ. 
  4. ನಂತ್ರ ಕತ್ತರಿಸಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ. 
  5. ಋಷಿಗೆ ತಕ್ಕಂತೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 
  6. ಬೇಕಾದಲ್ಲಿ ಸ್ವಲ್ಪ ಬಿಸಿ ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  7. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟು ಇರಿಸಿ.
  8. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ತಟ್ಟುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನುಮಾಡಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
  9. ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ.
  10. ಮೇಲಿನಿಂದ ಎಣ್ಣೆ ಹಾಕಿ ಕಾಯಿಸಿ. ರೊಟ್ಟಿಯನ್ನು ತಿರುವಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  11. ಚಟ್ನಿ ಅಥವಾ ಯಾವುದೇ ಗೊಜ್ಜಿನೊಂದಿಗೆ ಬಡಿಸಿ.

Related Posts Plugin for WordPress, Blogger...