Panchakajjaya recipe in Kannada | ಪಂಚಕಜ್ಜಾಯ ಮಾಡುವ ವಿಧಾನ
ಪಂಚಕಜ್ಜಾಯ ವಿಡಿಯೋ
ಬೇಕಾಗುವ ಪದಾರ್ಥಗಳು - ವಿಧಾನ 1: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡಲೆಬೇಳೆ
- 1/2 ಕಪ್ ಸಣ್ಣದಾಗಿ ತುರಿದ ತೆಂಗಿನ ತುರಿ
- 1/2 ಕಪ್ ಸಕ್ಕರೆ
- 1/8 ಕಪ್ ಎಳ್ಳು
- 1 ಟೇಬಲ್ ಚಮಚ ತುಪ್ಪ
- 1 ಏಲಕ್ಕಿ
ಬೇಕಾಗುವ ಪದಾರ್ಥಗಳು - ವಿಧಾನ 2: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಕಡಲೆಬೇಳೆ
- 1/4 ಕಪ್ ಸಣ್ಣದಾಗಿ ತುರಿದ ತೆಂಗಿನ ತುರಿ
- 1 ಕಪ್ ಸಕ್ಕರೆ
- 1/4 ಕಪ್ ಗೋಡಂಬಿ
- 4 ಟೇಬಲ್ ಚಮಚ ತುಪ್ಪ
- 2 ಏಲಕ್ಕಿ
ಪಂಚಕಜ್ಜಾಯ ಮಾಡುವ ವಿಧಾನ - 1:
- ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು ಪುಡಿ ಮಾಡಿ.
- ನಂತರ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಸಿಡಿಯುವವರೆಗೆ ಅಥವಾ ಚೆನ್ನಾಗಿ ಉಬ್ಬುವವರೆಗೆ ಹುರಿಯಿರಿ. ಎಳ್ಳು ಪುಡಿ ಮಾಡುವುದು ಬೇಡ.
- ಸಕ್ಕರೆಯನ್ನು ಪುಡಿ ಮಾಡಿ.
- ಒಂದು ಬಟ್ಟಲಿಗೆ ಪುಡಿ ಮಾಡಿದ ಕಡ್ಲೆಬೇಳೆ, ಎಳ್ಳು, ತೆಂಗಿನ ತುರಿ, ಪುಡಿಮಾಡಿದ ಸಕ್ಕರೆ, ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ. ಪಂಚಕಜ್ಜಾಯ ಸಿದ್ಧ.
ಪಂಚಕಜ್ಜಾಯ ಮಾಡುವ ವಿಧಾನ - 2:
- ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು ಪುಡಿ ಮಾಡಿ.
- ಸಕ್ಕರೆಯನ್ನು ಪುಡಿ ಮಾಡಿ.
- ಸ್ವಲ್ಪ ತುಪ್ಪದಲ್ಲಿ ಚೂರು ಮಡಿದ ಗೋಡಂಬಿಯನ್ನು ಹುರಿದಿಟ್ಟು ಕೊಳ್ಳಿ.
- ಒಂದು ಬಟ್ಟಲಿಗೆ ಪುಡಿ ಮಾಡಿದ ಕಡ್ಲೆಬೇಳೆ, ಗೋಡಂಬಿ, ತೆಂಗಿನ ತುರಿ, ಪುಡಿಮಾಡಿದ ಸಕ್ಕರೆ , ಬಿಸಿಮಾಡಿದ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ. ಪಂಚಕಜ್ಜಾಯ ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ