ಶನಿವಾರ, ಜುಲೈ 31, 2021

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

 

Uddina happala recipe in Kannada

Uddina happala recipe in Kannada | ಉದ್ದಿನ ಹಪ್ಪಳ ಮಾಡುವ ವಿಧಾನ

ಉದ್ದಿನ ಹಪ್ಪಳ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಉದ್ದಿನಬೇಳೆ
  2. ಅಗತ್ಯವಿದ್ದಷ್ಟು ನೀರು
  3. 1/4 ಟೀಸ್ಪೂನ್ ಉಪ್ಪು
  4. 1/4 ಟೀಸ್ಪೂನ್ ಸೋಡಾ
  5. ಕಾಯಿಸಲು ಎಣ್ಣೆ

ಉದ್ದಿನ ಹಪ್ಪಳ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಉದ್ದಿನಬೇಳೆ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ ಜರಡಿ ಹಿಡಿದುಕೊಳ್ಳಿ. 
  2. ನಂತ್ರ ಆ ಹಿಟ್ಟಿಗೆ ಉಪ್ಪು ಮತ್ತು ಸೋಡಾ ಹಾಕಿ ಕಲಸಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ಗಟ್ಟಿಯಾದ ಹಿಟ್ಟು ಕಲಸಿ. 
  4. ಒಂದು ಕುಟ್ಟಾಣಿ ತೆಗೆದುಕೊಂಡು ಹಿಟ್ಟನ್ನು ಚೆನ್ನಾಗಿ ಗುದ್ದಿ ಮೃದು ಮಾಡಿಕೊಳ್ಳಿ. 
  5. ಸಣ್ಣ ಉಂಡೆ ತೆಗೆದುಕೊಂಡು, ತೆಳ್ಳಗೆ ಲಟ್ಟಿಸಿ. 
  6. ಒಂದು ಬಟ್ಟಲಿನಿಂದ ಒತ್ತಿ, ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ.  
  7. ಹತ್ತಿಯ ಬಟ್ಟೆ ಮೇಲೆ ಒಂದೆರಡು ಘಂಟೆ ಗಾಳಿಯಾಡಲು ಬಿಡಿ. ಬಿಸಿಲಿನಲ್ಲಿ ಒಣಗಿಸಬಾರದು.  
  8. ಎಣ್ಣೆಯಲ್ಲಿ ಕಾಯಿಸಿ. ಲಟ್ಟಿಸಿದ ಕೂಡಲೆಯೂ ಕಾಯಿಸಬಹುದು.  
  9. ಚೆನ್ನಾಗಿ ನೆರಳಿನಲ್ಲಿ ಒಣಗಿಸಿದರೆ ಒಂದು ತಿಂಗಳು ಹಾಳಾಗುವುದಿಲ್ಲ. 
  10. ಸವಿದು ಆನಂದಿಸಿ. 


ಮಂಗಳವಾರ, ಜುಲೈ 20, 2021

Godhi hittina unde recipe in Kannada | ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ

  

Godhi hittina unde recipe in Kannada

Godhi hittina unde recipe in Kannada | ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ

ಗೋಧಿ ಹಿಟ್ಟಿನ ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿಹಿಟ್ಟು
  2. 1/2 ಕಪ್ ನೀರು
  3. 3/4 ಕಪ್ ಬೆಲ್ಲ
  4. 3 ಟೀಸ್ಪೂನ್ ತುಪ್ಪ (ಬೇಕಾದಲ್ಲಿ ಜಾಸ್ತಿ ಹಾಕಬಹುದು)
  5. 2 - 3 ಟೇಬಲ್ ಚಮಚ ಚೂರು ಮಾಡಿದ ಗೋಡಂಬಿ
  6. ಎರಡು ಏಲಕ್ಕಿ (ಅಥವಾ ದೊಡ್ಡ ಚಿಟಿಕೆ ಏಲಕ್ಕಿ ಪುಡಿ)

ಗೋಧಿ ಹಿಟ್ಟಿನ ಉಂಡೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. 
  2. ಅದಕ್ಕೆ ಗೋಡಂಬಿ ಚೂರುಗಳನ್ನು ಹಾಕಿ ಹುರಿಯಿರಿ. 
  3. ನಂತ್ರ ಅದೇ ಬಾಣಲೆಗೆ ಗೋಧಿ ಹಿಟ್ಟು ಹಾಕಿ. 
  4. ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿ, ಒಳ್ಳೆ ಘಮ ಬರುವವರೆಗೆ ಹುರಿಯಿರಿ. 
  5. ಹುರಿದ ಹಿಟ್ಟು ಮತ್ತು ಗೋಡಂಬಿಯನ್ನು ಒಂದು ಪ್ಲೇಟ್ ನಲ್ಲಿ ತೆಗೆದುಕೊಂಡು, ಏಲಕ್ಕಿ ಪುಡಿ ಸೇರಿಸಿ ಪಕ್ಕಕ್ಕಿಡಿ. 
  6. ಪುನಃ ಅದೇ ಬಾಣಲೆಯಲ್ಲಿ ಪುಡಿಮಾಡಿದ ಬೆಲ್ಲ ಮತ್ತು ನೀರು ತೆಗೆದುಕೊಳ್ಳಿ. 
  7. ಆಗಾಗ್ಯೆ ಮಗುಚುತ್ತಾ ಕುದಿಸಿ.  
  8. ಬೆಲ್ಲ ಕರಗಿ ಚೆನ್ನಾಗಿ ನೊರೆ ಬಂದು ಕುದಿಯಲು ಪ್ರಾರಂಭವಾದಾಗ ಸ್ಟವ್ ಆಫ್ ಮಾಡಿ. 
  9. ಹುರಿದ ಗೋಧಿ ಹಿಟ್ಟಿಗೆ ಸೇರಿಸಿ. 
  10. ಚೆನ್ನಾಗಿ ಕಲಸಿ. 
  11. ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆ ಮಾಡಿ. ಸವಿದು ಆನಂದಿಸಿ. 


ಗುರುವಾರ, ಜುಲೈ 15, 2021

Kuttavalakki recipe in Kannada | ಕುಟ್ಟವಲಕ್ಕಿ ಮಾಡುವ ವಿಧಾನ

 

Kuttavalakki recipe in Kannada | ಕುಟ್ಟವಲಕ್ಕಿ ಮಾಡುವ ವಿಧಾನ 

ಕುಟ್ಟವಲಕ್ಕಿ ವಿಡಿಯೋ

ಪುಡಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೀಡಿಯಂ ಅವಲಕ್ಕಿ
  2. 4 - 5 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 2 ಟೀಸ್ಪೂನ್ ಜೀರಿಗೆ
  5. 2 ಟೇಬಲ್ ಚಮಚ ಒಣಕೊಬ್ಬರಿ ಪುಡಿ ಅಥವಾ ತುರಿ
  6. 2 ಟೀಸ್ಪೂನ್ ಬೆಲ್ಲ
  7. 1/2 ಟೀಸ್ಪೂನ್ ಹುಣಿಸೆಹಣ್ಣಿನ ಪೇಸ್ಟ್ (ಅಥವಾ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು)
  8. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೇಬಲ್ ಚಮಚ ಎಣ್ಣೆ
  2. 1 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  5. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  6. 2 ಟೇಬಲ್ ಚಮಚ ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ
  7. 5 - 6 ಕರಿಬೇವಿನ ಎಲೆ 
  8. 2 ದೊಡ್ಡ ಚಿಟಿಕೆ ಅರಿಶಿನ ಪುಡಿ 
  9. 2 ದೊಡ್ಡ ಚಿಟಿಕೆ ಇಂಗು

ಕುಟ್ಟವಲಕ್ಕಿ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಒಣಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕೊಬ್ಬರಿ ತುರಿ (ಅಥವಾ ಕೊಬ್ಬರಿ ಪುಡಿ) ಮತ್ತು ಉಪ್ಪನ್ನು ಪುಡಿಮಾಡಿಕೊಳ್ಳಿ. 
  2. ಅದಕ್ಕೆ ಅವಲಕ್ಕಿ, ಹುಣಿಸೇಹಣ್ಣು ಮತ್ತು ಬೆಲ್ಲಸೇರಿಸಿ. 
  3. ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಪಕ್ಕಕ್ಕಿಡಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಶೇಂಗಾ ಹಾಕಿ ಒಗ್ಗರಣೆ ಮಾಡಿ.
  5. ನಂತ್ರ ಹುರಿಗಡಲೆ,  ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ. 
  6. ಕೊನೆಯಲ್ಲಿ ಅರಿಶಿನ ಮತ್ತು ಇಂಗು ಸೇರಿಸಿ. 
  7. ಪುಡಿ ಮಾಡಿದ ಅವಲಕ್ಕಿ ಮತ್ತು ಮಸಾಲೆ ಸೇರಿಸಿ. 
  8. ಸಣ್ಣ ಉರಿಯಲ್ಲಿ ಒಂದು ನಿಮಿಷ ಚೆನ್ನಾಗಿ ಹುರಿಯಿರಿ. 
  9. ಸ್ಟವ್ ಆಫ್ ಮಾಡಿ, ಬಿಸಿ ಆರಿದ ಮೇಲೆ ಡಬ್ಬದಲ್ಲಿ ಹಾಕಿ ಎತ್ತಿಡಿ. 
  10. ಇದನ್ನು ಹಾಗೆಯೂ ತಿನ್ನಬಹುದು ಅಥವಾ ಮೊಸರಿನೊಂದಿಗೂ ತಿನ್ನಬಹುದು. ಅಥವಾ ಬಿಸಿ ನೀರು ಸೇರಿಸಿ, ಹುಳಿಯವಲಕ್ಕಿ ಮಾಡಬಹುದು. 

ಮಂಗಳವಾರ, ಜುಲೈ 13, 2021

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

 

Bellulli mandakki recipe in Kannada

Bellulli mandakki recipe in Kannada | ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 - 3 ಕಪ್  ಮಂಡಕ್ಕಿ
  2. 1/2  ಕಪ್ ತೆಂಗಿನತುರಿ
  3. 4 - 5 ಎಸಳು ಬೆಳ್ಳುಳ್ಳಿ (ಅಥವಾ 1/2 ಚಮಚ ಜೀರಿಗೆ)
  4. ಸ್ವಲ್ಪ ಕೊತ್ತಂಬರಿ ಸೊಪ್ಪು
  5. 2 - 3 ಹಸಿರು ಮೆಣಸಿನಕಾಯಿ
  6. 1 ಟೇಬಲ್ ಚಮಚ ತೆಂಗಿನ ಎಣ್ಣೆ (ಯಾವುದೇ ಅಡುಗೆ ಎಣ್ಣೆ ಅಥವಾ ಕರಗಿಸಿದ ತುಪ್ಪ)
  7. ಉಪ್ಪು ರುಚಿಗೆ ತಕ್ಕಷ್ಟು

ಬೆಳ್ಳುಳ್ಳಿ ಹಸಿಖಾರ ಮಂಡಕ್ಕಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ, ಸಣ್ಣಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಳ್ಳಿ. 
  2. ನಂತರ ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. 
  3. ಅದನ್ನು ಮಂಡಕ್ಕಿ ಇರುವ ಪಾತ್ರೆಗೆ ಹಾಕಿ. 
  4. ತೆಂಗಿನ ಎಣ್ಣೆ ಸೇರಿಸಿ.
  5. ಚೆನ್ನಾಗಿ ಕಲಸಿ. 
  6. ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.

ಗುರುವಾರ, ಜುಲೈ 8, 2021

Tasty rice breakfast recipe in Kannada | ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ

 

Tasty rice breakfast recipe in Kannada

Tasty rice breakfast recipe in Kannada | ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ 

ರುಚಿಕರ ತಿಂಡಿ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ
  2. 1 ಮಧ್ಯಮ ಗಾತ್ರದ ಆಲೂಗಡ್ಡೆ
  3. 1/2 ಟೀಸ್ಪೂನ್ ಜೀರಿಗೆ
  4. 1 ಹಸಿಮೆಣಸಿನಕಾಯಿ
  5. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  6. 1 ಟೇಬಲ್ ಚಮಚ ಕರಿಬೇವು
  7. 1 ಸಣ್ಣಗೆ ಹೆಚ್ಚಿದ ಈರುಳ್ಳಿ 
  8. 1/4 ಕಪ್ ತುರಿದ ಕ್ಯಾರಟ್ 
  9. 1/4 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು
  10. 1/4 ಕಪ್ ಸಣ್ಣಗೆ ಹೆಚ್ಚಿದ ಟೊಮೇಟೊ
  11. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  12. 2 ಟೇಬಲ್ ಚಮಚ ಮೊಸರು
  13. 1/2 ಟೀಸ್ಪೂನ್ ಏನೊ ಫ್ರೂಟ್ ಸಾಲ್ಟ್ ಅಥವಾ ಸೋಡಾ
  14. 8 ಚಮಚ ಎಣ್ಣೆ
  15. 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಅಕ್ಕಿಯಿಂದ ರುಚಿಕರ ತಿಂಡಿ ಮಾಡುವ ವಿಧಾನ:

  1. ಅಕ್ಕಿಯನ್ನು 4 - 5 ಘಂಟೆ ನೆನೆಸಿ. 
  2. ನೆನೆಸಿದ ನಂತರ ನೀರು ಬಸಿಯಿರಿ. ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  3. ಬೇಯಿಸಿದ ಆಲೂಗಡ್ಡೆ ಸೇರಿಸಿ, ಇನ್ನೊಂದು ಅರ್ಧ ಕಪ್ ನೀರು ಸೇರಿಸಿ ಪುನಃ ನುಣ್ಣಗೆ ಅರೆಯಿರಿ. 
  4. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ತೆಗೆದುಕೊಂಡು, ಉಪ್ಪು, ಜೀರಿಗೆ, ಸಣ್ಣಗೆ ಹೆಚ್ಚಿದ ಶುಂಠಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ. 
  5. ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆಮೆಣಸಿನಕಾಯಿ, ಟೊಮೇಟೊ, ತುರಿದ ಕ್ಯಾರಟ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ,  ಚೆನ್ನಾಗಿ ಕಲಸಿ. 
  6. ಕೊನೆಯಲ್ಲಿ ಮೊಸರು ಮತ್ತು ಏನೊ ಫ್ರೂಟ್ ಸಾಲ್ಟ್ (ಅಥವಾ ಸೋಡಾ) ಸೇರಿಸಿ ಕಲಸಿ. 
  7. ಒಂದು ಬಾಣಲೆ ಅಥವಾ ತವ ಮೇಲೆ ಎಣ್ಣೆ ಹಾಕಿ, ಹಿಟ್ಟು ಸುರಿದು, ಸ್ವಲ್ಪ ದಪ್ಪನಾಗಿ ಬಾಣಲೆ ದೋಸೆಯಂತೆ ಮಾಡಿ. 
  8. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  9. ತಿರುಗಿಸಿ ಹಾಕಿ ಇನ್ನೊಂದು ಬದಿಯೂ ಕಾಯಿಸಿ. 
  10.  ಚಟ್ನಿ ಅಥವಾ ಟೊಮೇಟೊ ಸಾಸ್ ನೊಂದಿಗೆ ಬಡಿಸಿ. 

ಗುರುವಾರ, ಜುಲೈ 1, 2021

No stuffing Aloo paratha recipe in Kannada | ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ

 

No stuffing Aloo paratha recipe in Kannada

No stuffing Aloo paratha recipe in Kannada | ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ 

ಮಸಾಲೆ ತುಂಬಿಸದೆ ಆಲೂ ಪರೋಟ ವಿಡಿಯೋ

ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗೋಧಿ ಹಿಟ್ಟು
  2. 2 ದೊಡ್ಡ ಗಾತ್ರದ ಆಲೂಗಡ್ಡೆ
  3. 1 ಟೀಸ್ಪೂನ್ ತುರಿದ ಶುಂಠಿ
  4. 1 ಟೀಸ್ಪೂನ್ ತುರಿದ ಬೆಳ್ಳುಳ್ಳಿ
  5. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕರಿಬೇವು
  6. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  8. 1/2 ಟೀಸ್ಪೂನ್ ಗರಂ ಮಸಾಲಾ
  9. 1/2 ಟೀಸ್ಪೂನ್ ಜೀರಿಗೆ ಪುಡಿ
  10. ದೊಡ್ಡ ಚಿಟಿಕೆ ಅರಿಶಿನ
  11. 6 - 8 ಚಮಚ ತುಪ್ಪ ಅಥವಾ ಎಣ್ಣೆ
  12. 1 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ಮಸಾಲೆ ತುಂಬಿಸದೆ ಆಲೂ ಪರೋಟ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹುರಿಯಿರಿ. 
  2. ನಂತ್ರ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹುರಿದು ಸ್ಟವ್ ಆಫ್ ಮಾಡಿ.
  3. ಉಪ್ಪು, ಅಚ್ಚಖಾರದ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ ಮತ್ತು ಅರಿಶಿನ ಹಾಕಿ. 
  4. ಬೇಯಿಸಿ, ಸಿಪ್ಪೆ ತೆಗೆದು, ಪುಡಿಮಾಡಿದ ಆಲೂಗಡ್ಡೆ ಸೇರಿಸಿ.
  5. ಚೆನ್ನಾಗಿ ಚೂರುಗಳಿಲ್ಲದಂತೆ ಹಿಸುಕಿ ಕಲಸಿ. 
  6. ಸುಮಾರು ಒಂದು ಕಪ್ ಗೋಧಿಹಿಟ್ಟು ಸೇರಿಸಿ, ಚೆನ್ನಾಗಿ ಕಲಸಿ. ಆಲೂಗಡ್ಡೆ ಗಾತ್ರದ ಮೇಲೆ ಗೋಧಿಹಿಟ್ಟು ಹೆಚ್ಚು ಕಡಿಮೆ ಆಗಬಹುದು.
  7. ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ಕಲಸಿಕೊಳ್ಳಿ. 
  8. ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿ ಲಟ್ಟಿಸಿ.
  9. ಬೇಕಾದಲ್ಲಿ ಒಂದು ಪ್ಲೇಟ್ ಅಥವಾ ಬೌಲ್ ತೆಗೆದುಕೊಂಡು ಒಳ್ಳೆಯ ವೃತ್ತಾಕಾರ ಮಾಡಿಕೊಳ್ಳಿ. 
  10. ಒಂದು ಹೆಂಚು ಅಥವಾ ತವಾ ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ತುಪ್ಪ ಅಥವಾ ಎಣ್ಣೆ ಹಾಕಿ. 
  11. ಉಪ್ಪಿನಕಾಯಿ ಅಥವಾ ಮೊಸರು ಅಥವಾ ಯಾವುದೇ ಗೊಜ್ಜಿನೊಂದಿಗೆ  ಬಡಿಸಿ. ಹಾಗೆಯೂ ತಿನ್ನಬಹುದು. 

Related Posts Plugin for WordPress, Blogger...