Pudina pulao recipe in Kannada | ಪುದೀನಾ ಪಲಾವ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ (ಸೋನಾ ಮಸೂರಿ)
- 1 ಸಣ್ಣ ಕ್ಯಾರೆಟ್
- 1 ಸಣ್ಣ ಆಲೂಗಡ್ಡೆ
- 5 - 6 ಬೀನ್ಸ್
- 1/2 ದೊಣ್ಣೆ ಮೆಣಸಿನಕಾಯಿ (ಬೇಕಾದಲ್ಲಿ)
- 1/4 ಕಪ್ ನೆನೆಸಿದ ಬಟಾಣಿ
- 2 ದೊಡ್ಡ ಈರುಳ್ಳಿ
- 2 ಟೊಮ್ಯಾಟೋ (ಅಥವಾ ನಿಂಬೆ ರಸ)
- 1/2 ಟೀಸ್ಪೂನ್ ಜೀರಿಗೆ
- 1 ಚಕ್ರ ಮೊಗ್ಗು
- 1 ಪುಲಾವ್ ಎಲೆ
- 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
- 8-10 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
- 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
- 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)
ಬೇಕಾಗುವ ಪದಾರ್ಥಗಳು (ಮಸಾಲೆಗೆ):
- 1/2 ಕಪ್ ತೆಂಗಿನತುರಿ
- 2ಸೆಮೀ ಉದ್ದದ ಶುಂಠಿ
- 5-6 ಎಸಳು ಬೆಳ್ಳುಳ್ಳಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 1/2 ಟೀಸ್ಪೂನ್ ಜೀರಿಗೆ
- 1-2 ಹಸಿರುಮೆಣಸಿನಕಾಯಿ
- 1 ಬೆರಳುದ್ದ ಚಕ್ಕೆ
- 8-10 ಲವಂಗ
- 1 ಏಲಕ್ಕಿ
- 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- ಒಂದು ಹಿಡಿ ಪುದೀನಾ ಎಲೆ
- 1/2 ಕಪ್ ನೀರು ಅರೆಯಲು
ಪುದೀನಾ ಪಲಾವ್ ಮಾಡುವ ವಿಧಾನ:
- ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಹ ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
- ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು 1/2 ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
- ಈಗ ಒಂದು 5ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಅಥವಾ ತುಪ್ಪ ಹಾಕಿ. ಚಕ್ರ ಮೊಗ್ಗು ಮತ್ತು ಪುಲಾವ್ ಎಲೆ ಹಾಕಿ ಹುರಿಯಿರಿ.
- ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ. ನಿಂಬೆ ರಸ ಹಾಕುವುದಾದಲ್ಲಿ ಕೊನೆಯಲ್ಲಿ ಬಡಿಸುವ ಮುನ್ನ ಸೇರಿಸಿ.
- ಈಗ ಕತ್ತರಿಸಿದ ತರಕಾರಿ, ಅರೆದ ಮಸಾಲೆ ಮತ್ತು ಅರಶಿನ ಪುಡಿ ಹಾಕಿ ಪುನಃ 5 ನಿಮಿಷಗಳ ಕಾಲ ಹುರಿಯಿರಿ.
- ಮಸಾಲೆ ಹುರಿಯುತ್ತಿರುವಾಗಲೇ 1 ಕಪ್ ಅಕ್ಕಿ ತೊಳೆದು ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
- ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
- ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಟೊಮೇಟೊ ಬದಲಾಗಿ ನಿಂಬೆ ರಸ ಹಾಕುವುದಾದಲ್ಲಿ ಈಗ ಹಾಕಿ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ