Fried rice recipe in Kannada | ಫ್ರೈಡ್ ರೈಸ್ ಮಾಡುವ ವಿಧಾನ
ಫ್ರೈಡ್ ರೈಸ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಬಾಸ್ಮತಿ ಅಕ್ಕಿ
- 2 ಎಸಳು ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ
- 1/2 ಸಣ್ಣದಾಗಿ ಕತ್ತರಿಸಿದ ಕ್ಯಾರೆಟ್
- 2 - 3 ಸಣ್ಣದಾಗಿ ಕತ್ತರಿಸಿದ ಬೀನ್ಸ್
- 1/4 ಭಾಗ ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ
- 2 ಎಲೆ ಕತ್ತರಿಸಿದ ಕೋಸು
- 2 ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಗಿಡ
- 1/2 ಟೀಸ್ಪೂನ್ ಸಕ್ಕರೆ
- 2 ಟೀಸ್ಪೂನ್ ವಿನೆಗರ್ ಅಥವಾ ಲಿಂಬೆ ರಸ
- 2 ಟೇಬಲ್ ಚಮಚ ಅಡುಗೆ ಎಣ್ಣೆ
- ಕಾಳುಮೆಣಸಿನ ಪುಡಿ ( ಬಡಿಸುವಾಗ ಬಳಸಲಾಗಿದೆ)
- ಟೊಮೆಟೊ ಸಾಸ್ ( ಬಡಿಸುವಾಗ ಬಳಸಲಾಗಿದೆ)
- ನಿಮ್ಮ ರುಚಿ ಪ್ರಕಾರ ಉಪ್ಪು
ಫ್ರೈಡ್ ರೈಸ್ ಮಾಡುವ ವಿಧಾನ:
- ಬಾಸ್ಮತಿ ಅಕ್ಕಿಯನ್ನು ಉದುರು ಉದುರಾಗಿ ಬೇಯಿಸಿಟ್ಟು ಕೊಳ್ಳಿ.
- ಒಂದು ಬಾಣಲೆಗೆ 2 ಟೇಬಲ್ ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ.
- ಅದಕ್ಕೆ ಕತ್ತರಿಸಿದ ತರಕಾರಿ ಮತ್ತು ಸಕ್ಕರೆ ಸೇರಿಸಿ ದೊಡ್ಡ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಹುರಿದರೆ ಸಾಕು.
- ಈಗ ಬೇಯಿಸಿಟ್ಟು ಕೊಂಡ ಅನ್ನವನ್ನು ಸೇರಿಸಿ.
- ನಂತರ ಅದಕ್ಕೆ ಉಪ್ಪು ಮತ್ತು ವಿನೆಗರ್ (ಅಥವಾ ನಿಂಬೆ ರಸ) ಸೇರಿಸಿ. ಬೇಕಾದಲ್ಲಿ 1/4 ಟೀಸ್ಪೂನ್ ಕಾಳುಮೆಣಸಿನ ಪುಡಿಯನ್ನೂ ಸೇರಿಸಿ.
- ಅದಕ್ಕೆ ಬೇಯಿಸಿದ ಅನ್ನ ಸೇರಿಸಿ ದೊಡ್ಡ ಉರಿಯಲ್ಲಿ ಹುರಿಯಿರಿ. ಸ್ಟವ್ ಆಫ್ ಮಾಡಿ.
- ಕತ್ತರಿಸಿದ ಈರುಳ್ಳಿ ಗಿಡದಿಂದ ಅಲಂಕರಿಸಿ.
- ಕಾಳುಮೆಣಸಿನ ಪುಡಿ ಮತ್ತು ಟೊಮೆಟೊ ಸಾಸ್ ನೊಂದಿಗೆ ಬಡಿಸಿ. ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ