Onion or eerulli dose recipe in Kannada | ಈರುಳ್ಳಿ ದೋಸೆ ಮಾಡುವ ವಿಧಾನ
ಈರುಳ್ಳಿ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 ದೊಡ್ಡ ದೋಸೆಗೆ ಬೇಕಾಗುವಷ್ಟು ಸೆಟ್ ದೋಸೆ ಹಿಟ್ಟು
- 2 ದೊಡ್ಡ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1 - 2 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು
- 4 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಸಣ್ಣ ಕ್ಯಾರಟ್ ತುರಿದಿದ್ದು
- ಎಣ್ಣೆ ಅಥವಾ ತುಪ್ಪ ಕಾಯಿಸಲು
- ಉಪ್ಪು ರುಚಿಗೆ ತಕ್ಕಷ್ಟು.
ಈರುಳ್ಳಿ ದೋಸೆ ಮಾಡುವ ವಿಧಾನ:
- ಈರುಳ್ಳಿ , ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ಹೆಚ್ಚಿಟ್ಟು ಕೊಳ್ಳಿ. ಕ್ಯಾರಟ್ ನ್ನು ತುರಿದಿಟ್ಟು ಕೊಳ್ಳಿ.
- ಸ್ವಲ್ಪ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿಟ್ಟು ಕೊಳ್ಳಿ.
- ಒಂದು ದೊಡ್ಡ ಸೌಟು ಹಿಟ್ಟನ್ನು ಬಿಸಿ ತವಾ ಮೇಲೆ ಸುರಿದು ಮೇಲಿನಿಂದ ಹೆಚ್ಚಿದ ಈರುಳ್ಳಿ , ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕ್ಯಾರಟ್ ಮಿಶ್ರಣವನ್ನು ಹಾಕಿ.
- ದೋಸೆ ಸಟ್ಟುಗದಿಂದ ಮೆಲ್ಲನೆ ಒತ್ತಿ. ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಬದಿ ಕಾಯಿಸಿ.
- ಅಥವಾ ಬೇಕಾದಲ್ಲಿ ನೀವು ಹೆಚ್ಚಿದ ಈರುಳ್ಳಿ , ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕ್ಯಾರಟ್ ಮಿಶ್ರಣವನ್ನು ನೇರವಾಗಿ ದೋಸೆ ಹಿಟ್ಟಿಗೆ ಸೇರಿಸಿ ನಂತರ ದೋಸೆ ಮಾಡಬಹುದು. ಕಾಯಿ ಚಟ್ನಿ ಅಥವಾ ಸಾಗುವಿನೊಂದಿಗೆ ಬಡಿಸಿ. ಹಾಗೆಯೂ ತಿನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ