ಸೋಮವಾರ, ಜುಲೈ 20, 2020

Instant set dose recipe in Kannada | ದಿಢೀರ್ ಸೆಟ್ ದೋಸೆ ಮಾಡುವ ವಿಧಾನ

Instant set dose recipe in Kannada

Instant set dose recipe in Kannada | ದಿಢೀರ್ ಸೆಟ್ ದೋಸೆ ಮಾಡುವ ವಿಧಾನ

ದಿಢೀರ್ ಸೆಟ್ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರವೆ
  2. 1/2 ಕಪ್ ಗಟ್ಟಿ ಅವಲಕ್ಕಿ ಅಥವಾ 3/4 ತೆಳು ಅವಲಕ್ಕಿ
  3. 1/2 ಕಪ್ ಮೊಸರು 
  4. 1/2 ಚಮಚ ಅಡುಗೆ ಸೋಡಾ
  5. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  6. ಸುಮಾರು 1.25 ಕಪ್ ನೀರು
  7. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ಸೆಟ್ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ತೊಳೆಯಿರಿ. 
  2. ಅದಕ್ಕೆ ರವೇ ಮತ್ತು ನೀರು ಸೇರಿಸಿ. 
  3. ಮೊಸರನ್ನೂ ಸೇರಿಸಿ. 
  4. ಹತ್ತು ನಿಮಿಷ ನೆನೆಯಲು ಬಿಡಿ. 
  5. ಆಮೇಲೆ ಮಿಕ್ಸಿಯಲ್ಲಿ ನುಣ್ಣನೆ ಅರೆಯಿರಿ. 
  6. ಪಾತ್ರೆಗೆ ಬಗ್ಗಿಸಿ, ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ. 
  7. ಚೆನ್ನಾಗಿ ಕಲಸಿ. ಅಗತ್ಯವಿದ್ದಲ್ಲಿ ನೀರು ಸೇರಿಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
  9. ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಸೆಟ್ ದೋಸೆಯಂತೆ ಸ್ವಲ್ಪ ಅಗಲ ಮಾಡಿ.
  10. ಮುಚ್ಚಳ ಮುಚ್ಚಿ ಬೇಯಿಸಿ. 
  11. ಹತ್ತು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  12. ನಂತರ ದೋಸೆಯನ್ನು ತಿರುಗಿಸಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. 
  13. ದೋಸೆಯನ್ನು ತೆಗೆಯಿರಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.

ಗುರುವಾರ, ಜುಲೈ 16, 2020

Ele kosu pathrode recipe in Kannada | ಎಲೆಕೋಸು ಪತ್ರೊಡೆ ಮಾಡುವ ವಿಧಾನ

Ele kosu pathrode recipe in Kannada

Ele kosu pathrode recipe in Kannada | ಎಲೆಕೋಸು ಪತ್ರೊಡೆ ಮಾಡುವ ವಿಧಾನ

ಎಲೆಕೋಸು ಪತ್ರೊಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಮಧ್ಯಮ ಗಾತ್ರದ ಎಲೆಕೋಸು
  2. 1 ಕಪ್ ದೋಸೆ ಅಕ್ಕಿ
  3. 2 - 4 ಒಣ ಮೆಣಸಿನಕಾಯಿ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಜೀರಿಗೆ
  6. 1/4 ಕಪ್ ತೆಂಗಿನ ತುರಿ
  7. 1 ದೊಡ್ಡ ನೆಲ್ಲಿಕಾಯಿ ಗಾತ್ರದ ಬೆಲ್ಲ
  8. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  9. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಉದ್ದಿನಬೇಳೆ
  3. 1 ಒಣ ಮೆಣಸಿನ ಕಾಯಿ
  4. ಚಿಟಿಕೆ ಅರಿಶಿನ
  5. ಚಿಟಿಕೆ ಇಂಗು
  6. 5 - 6 ಕರಿಬೇವಿನ ಎಲೆ
  7. 1/4 ಕಪ್ ತೆಂಗಿನ ತುರಿ
  8. 2 ಟೀಸ್ಪೂನ್ ಪುಡಿ ಮಾಡಿದ ಬೆಲ್ಲ
  9. ಸ್ವಲ್ಪ ಕೊತ್ತಂಬರಿ ಸೊಪ್ಪು
  10. 2 ಟೇಬಲ್ ಚಮಚ ಅಡುಗೆ ಎಣ್ಣೆ

ಎಲೆಕೋಸು ಪತ್ರೊಡೆ ಮಾಡುವ ವಿಧಾನ:

  1. ಅಕ್ಕಿಯನ್ನು ಕನಿಷ್ಟ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು. 
  2. ಕೋಸನ್ನು ಸಣ್ಣಗೆ ಹೆಚ್ಚಿ, ಹತ್ತು ನಿಮಿಷ ನೀರಲ್ಲಿ ನೆನೆಸಿ, ನೀರು ಬಗ್ಗಿಸಿ ಪಕ್ಕಕ್ಕಿಡಿ. 
  3. ಅಕ್ಕಿ ನೆನೆದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  4. ಕೊತ್ತಂಬರಿ ಬೀಜ, ಜೀರಿಗೆ, ಒಣ ಮೆಣಸಿನಕಾಯಿ, ತೆಂಗಿನತುರಿ, ಬೆಲ್ಲ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ಸ್ವಲ್ಪ ನುಣ್ಣಗೆ ರುಬ್ಬಬೇಕು. 
  5. ಹಿಟ್ಟು ದೋಸೆ ಹಿಟ್ಟಿನಷ್ಟು ದಪ್ಪವಿರಲಿ.
  6. ಆಮೇಲೆ ಹಿಟ್ಟನ್ನು ಕತ್ತರಿಸಿದ ಎಲೆಕೋಸಿಗೆ ಹಾಕಿ, ಕಲಸಿ, 30 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ. 
  7. ಇಡ್ಲಿ ತಟ್ಟೆಯಲ್ಲಿಟ್ಟು ಬೇಯಿಸಿದರೆ ಕಡಿಮೆ ಸಮಯ ಸಾಕಾಗುವುದು. 
  8. ಬೆಂದ ನಂತರ ಪುಡಿ ಮಾಡಿಕೊಳ್ಳಿ. 
  9. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಮೆಣಸಿನ ಕಾಯಿ, ಕರಿಬೇವಿನ ಎಲೆ, ಅರಿಶಿನ ಮತ್ತು ಇಂಗಿನ ಒಗ್ಗರಣೆ ಮಾಡಿಕೊಳ್ಳಿ. 
  10. ಪುಡಿಮಾಡಿದ ಪತ್ರೊಡೆ ಹಾಕಿ ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಮಗುಚಿ. 
  11. ಕೊನೆಯಲ್ಲಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಮತ್ತು ಪುಡಿ ಮಾಡಿದ ಬೆಲ್ಲ ಹಾಕಿ, ಚೆನ್ನಾಗಿ ಮಗುಚಿ ಬಡಿಸಿ.

ಶುಕ್ರವಾರ, ಜುಲೈ 10, 2020

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ

Bellulli uppinakayi recipe in Kannada | ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ


ಕ್ಯಾರಟ್ ಉಪ್ಪಿನಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 5 - 6 ಬೆಳ್ಳುಳ್ಳಿ ಗಡ್ಡೆ ಅಥವಾ 3/4 ಕಪ್ ಸಿಪ್ಪೆ ತೆಗೆದ ಬೆಳ್ಳುಳ್ಳಿ
  2. 1 ನಿಂಬೆಹಣ್ಣು ಗಾತ್ರದ ಹುಣಿಸೇಹಣ್ಣು
  3. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  4. 3 - 4 ಟೀಸ್ಪೂನ್ ಅಚ್ಚಖಾರದ ಪುಡಿ
  5. 1/4 ಟೀಸ್ಪೂನ್  ಇಂಗು
  6. 1/4 ಟೀಸ್ಪೂನ್ ಅರಿಶಿನ
  7. 1 ಟೀಸ್ಪೂನ್ ಸಾಸಿವೆ
  8. ಸ್ವಲ್ಪ ಕರಿಬೇವು
  9. 2 - 4 ಟೇಬಲ್ ಚಮಚ ಎಣ್ಣೆ
  10. 2 ಟೀಸ್ಪೂನ್ ಉಪ್ಪು

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಮೆಂತೆ
  2. 1 ಟೇಬಲ್ ಚಮಚ ಜೀರಿಗೆ
  3. 2 ಟೇಬಲ್ ಚಮಚ ಕೊತ್ತಂಬರಿ ಬೀಜ

ದಿಢೀರ್ ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಬೆಳ್ಳುಳ್ಳಿ ಸಿಪ್ಪೆ ತೆಗೆದಿಟ್ಟುಕೊಳ್ಳಿ.  
  2. ಒಂದು ಬಾಣಲೆಯಲ್ಲಿ ಜೀರಿಗೆ, ಕೊತ್ತಂಬರಿ ಬೀಜ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  3. ನಂತ್ರ ಅದೇ ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ.
  4. ಸಾಸಿವೆ ಸೇರಿಸಿ. 
  5. ಸಾಸಿವೆ ಸಿಡಿದ ಮೇಲೆ, ಇಂಗು ಮತ್ತು ಕರಿಬೇವು ಹಾಕಿ. 
  6. ಆಮೇಲೆ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿಯಿರಿ. 
  7. ಹುಣಿಸೆಹಣ್ಣಿನ ರಸ ಸೇರಿಸಿ. 
  8. ಅಚ್ಚಖಾರದ ಪುಡಿ, ಉಪ್ಪು ಮತ್ತು ಅರಿಶಿನ ಸೇರಿಸಿ. ಒಂದೆರಡು ನಿಮಿಷ ಕುದಿಸಿ. 
  9. ಕೊನೆಯಲ್ಲಿ ಉಪ್ಪಿನಕಾಯಿ ಮಸಾಲೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಗುಚಿ. 
  10. ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಬೆಲ್ಲ ಸೇರಿಸಬಹುದು .  
  11. ರುಚಿಕರ ಉಪ್ಪಿನಕಾಯಿ ಸವಿಯಲು ಸಿದ್ಧ. ಇದನ್ನು ಫ್ರಿಡ್ಜ್ ನಲ್ಲಿ ಒಂದೆರಡು ತಿಂಗಳು ಇಡಬಹುದು. 

ಬುಧವಾರ, ಜುಲೈ 8, 2020

Rave shavige recipe in Kannada | ರವೆ ಶಾವಿಗೆ ಮಾಡುವ ವಿಧಾನ

Rave shavige recipe in Kannada | ರವೆ ಶಾವಿಗೆ ಮಾಡುವ ವಿಧಾನ 


ರವೇ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ರವೇ (ಮೀಡಿಯಂ ಅಥವಾ ಸಣ್ಣ ರವೇ)
  2. 1 ಕಪ್ ನೀರು
  3. 1/2 ಟೀಸ್ಪೂನ್ ತುಪ್ಪ 
  4. ಉಪ್ಪು ರುಚಿಗೆ ತಕ್ಕಷ್ಟು

ರವೇ ಶಾವಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ರವೆಯನ್ನು ಹಾಕಿ, ಚೆನ್ನಾಗಿ ಮಗುಚಿ ಬೇಯಿಸಿ. 
  3. ಗಟ್ಟಿಯಾಗುತ್ತಾ ಬಂದಾಗ,  ಸ್ಟವ್ ಆಫ್ ಮಾಡಿ. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ಹೆಚ್ಚಿನ ಬಿಸಿ ಆರಿದ ಮೇಲೆ, ಚೆನ್ನಾಗಿ ನಾದಿ.
  5. ತುಂಬ ಗಟ್ಟಿ ಎನಿಸಿದಲ್ಲಿ, ಸ್ವಲ್ಪ ನೀರು ಚಿಮುಕಿಸಿ ಗಂಟಿಲ್ಲದಂತೆ  ಹಿಟ್ಟನ್ನು ತಯಾರಿಸಿಕೊಳ್ಳಿ. 
  6. ಉದ್ದುದ್ದ ಉಂಡೆಗಳನ್ನು ಮಾಡಿ, ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ. ಎಣ್ಣೆಯ ಬದಲು, ಸ್ವಲ್ಪ ತೆಂಗಿನತುರಿ ಬೇಕಾದರೂ ಹಾಕಬಹುದು. 
  7. ಸೆಕೆಯಲ್ಲಿ (ಆವಿಯಲ್ಲಿ) 5 - 6 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ. 


ಶನಿವಾರ, ಜುಲೈ 4, 2020

Sabsige soppu dose recipe in Kannada | ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ

Sabsige soppu dose recipe in Kannada | ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ


ಸಬ್ಬಸ್ಸಿಗೆ ಸೊಪ್ಪು ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1/4 ಕಪ್ ಉದ್ದಿನ ಬೇಳೆ
  3. 1/2 ಕಪ್ ತೆಳು ಅವಲಕ್ಕಿ ಅಥವಾ 1/4 ಕಪ್ ಗಟ್ಟಿ ಅವಲಕ್ಕಿ 
  4. 1 ಟೀಸ್ಪೂನ್ ಮೆಂತ್ಯ
  5. ಉಪ್ಪು ರುಚಿಗೆ ತಕ್ಕಷ್ಟು
  6. 2 ಟೀಸ್ಪೂನ್ ಎಣ್ಣೆ
  7. 1/2 ಟೀಸ್ಪೂನ್ ಸಾಸಿವೆ
  8. 1/2 ಟೀಸ್ಪೂನ್ ಜೀರಿಗೆ
  9. 1-2 ಹಸಿಮೆಣಸಿನಕಾಯಿ
  10. 1 ಈರುಳ್ಳಿ
  11. 1 ಸಣ್ಣ ಕಟ್ಟು ಸಬ್ಬಸ್ಸಿಗೆ ಸೊಪ್ಪು
  12. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು

ಸಬ್ಬಸ್ಸಿಗೆ ಸೊಪ್ಪು ದೋಸೆ ಮಾಡುವ ವಿಧಾನ :

  1. ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿ. ತೆಳು ಅವಲಕ್ಕಿ ಆದಲ್ಲಿ ನೆನೆಸುವುದು ಬೇಡ. 
  3. ಅಕ್ಕಿ ಮತ್ತು ಬೇಳೆ ನೆನೆಸಿದ ನಂತ್ರ, ನೀರು ಬಗ್ಗಿಸಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ನುಣ್ಣಗೆ ರುಬ್ಬಿರಿ.
  4. ಕೊನೆಯಲ್ಲಿ ನೆನೆಸಿದ ಅವಲಕ್ಕಿ ಸೇರಿಸಿ ನುಣ್ಣಗೆ ಅರೆಯಿರಿ. 
  5. ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
  6. ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
  7. ಆಮೇಲೆ ಉಪ್ಪು ಸೇರಿಸಿ ಕಲಸಿ. 
  8. ಬಾಣಲೆಯಲ್ಲಿ ಎರಡು ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿ. 
  9. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
  10. ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಸಬ್ಬಸ್ಸಿಗೆ ಸೊಪ್ಪು ಸೇರಿಸಿ, ಹುರಿದು, ಬಿಸಿ ಆರಿದ ನಂತ್ರ ಹಿಟ್ಟಿಗೆ ಸೇರಿಸಿ. 
  11. ದೋಸೆ ಕಲ್ಲನ್ನು ಬಿಸಿಮಾಡಿ ಕೊಳ್ಳಿ. ಒಂದು ಸೌಟು ಹಿಟ್ಟನ್ನು ಹಾಕಿ, ಸ್ವಲ್ಪ ತೆಳ್ಳಗೆ ಮಾಡಿ. ಮುಚ್ಚಳ ಮುಚ್ಚಿ. 
  12. ೫ - ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಕಾಯಿಸಿ. 
  13. ಬೇಕಾದಲ್ಲಿ ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.


Related Posts Plugin for WordPress, Blogger...