ಗುರುವಾರ, ಫೆಬ್ರವರಿ 24, 2022

Batani chat recipe in Kannada | ಬಟಾಣಿ ಚಾಟ್ ಮಾಡುವ ವಿಧಾನ

 

Batani chat recipe in Kannada

Batani chat recipe in Kannada | ಬಟಾಣಿ ಚಾಟ್ ಮಾಡುವ ವಿಧಾನ

ಬಟಾಣಿ ಚಾಟ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ 
  2. 2 ಸಣ್ಣದಾಗಿ ಹೆಚ್ಚಿದ ಟೊಮೆಟೊ 
  3. 4 ಟೇಬಲ್ ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 
  4. 4 ಟೇಬಲ್ ಚಮಚ ಸೇವ್
  5. 2 ಟೇಬಲ್ ಚಮಚ ಹುರಿದ ಶೇಂಗಾ

ಗ್ರೇವಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಒಣ ಬಟಾಣಿ 
  2. 1/4 ಕಪ್ ಕಡ್ಲೆಕಾಳು
  3. 1 ಆಲೂಗಡ್ಡೆ 
  4. 1/2 ಟೀಸ್ಪೂನ್ ಬಡೆಸೊಂಪು
  5. 1 - 2 ಹಸಿರು ಮೆಣಸು 
  6. 4 - 5 ಎಸಳು ಬೆಳ್ಳುಳ್ಳಿ 
  7. 1 cm ಉದ್ದದ ಶುಂಠಿ 
  8. 1 ಕತ್ತರಿಸಿದ  ಈರುಳ್ಳಿ
  9. 1 ಕತ್ತರಿಸಿದ ಟೊಮೆಟೊ
  10. 2 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  11. 2 ಟೇಬಲ್ ಚಮಚ ಕತ್ತರಿಸಿದ ಪುದಿನ 
  12. 1/2 ಟೀಸ್ಪೂನ್ ಗರಂ ಮಸಾಲಾ ಪುಡಿ 
  13. 1/2 ಟೀಸ್ಪೂನ್ ಚಾಟ್ ಮಸಾಲಾ 
  14. 1/2 ಟೀಸ್ಪೂನ್ ಜೀರಿಗೆ ಪುಡಿ
  15. 1/4 ಟೀಸ್ಪೂನ್ ಮಾವಿನಕಾಯಿ ಪುಡಿ (ಅಥವಾ ಹುಣಿಸೆ ರಸ)
  16. ನಿಮ್ಮ ರುಚಿಗೆ ತಕ್ಕಂತೆ ಉಪ್ಪು
  17. 1/4 ಟೀಸ್ಪೂನ್ ಸೈನ್ದವ ಲವಣ (ಬೇಕಾದಲ್ಲಿ)
  18. 1 ಟೀಸ್ಪೂನ್ ಎಣ್ಣೆ

ಬಟಾಣಿ ಚಾಟ್ ಮಾಡುವ ವಿಧಾನ:

  1. ಬಟಾಣಿ ಮತ್ತು ಕಡ್ಲೆಕಾಳನ್ನು 5  ಘಂಟೆ ಅಥವಾ ರಾತ್ರೆಯಿಡಿ ನೆನೆಸಿಡಿ. 
  2. ನೆನೆಸಿದ ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  3. ಆಲೂಗಡ್ಡೆಯನ್ನು ಪುಡಿಮಾಡಿಕೊಳ್ಳಿ. 
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಬಡೆಸೋಂಪನ್ನು ಹುರಿಯಿರಿ. 
  5. ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ. 
  6. ನಂತರ ಈರುಳ್ಳಿ ಸೇರಿಸಿ ಹುರಿಯಿರಿ. 
  7. ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ
  8. ಮೆತ್ತಗಾದ ಮೇಲೆ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಹಾಕಿ ಹುರಿಯಿರಿ.
  9. ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  10. ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆ ಇರುವ ಕುಕ್ಕರ್ ಗೆ ಅರೆದ ಮಿಶ್ರಣವನ್ನು ಹಾಕಿ. 
  11. ಮಸಾಲೆ ಪುಡಿಗಳನ್ನು ಸೇರಿಸಿ (ಗರಂ ಮಸಾಲಾ ಪುಡಿ, ಚಾಟ್ ಮಸಾಲಾ,  ಜೀರಿಗೆ ಪುಡಿ ಮತ್ತು ಮಾವಿನಕಾಯಿ ಪುಡಿ). 
  12. ಉಪ್ಪನ್ನೂ ಸೇರಿಸಿ. 
  13. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಗ್ರೇವಿ ತಯಾರಾಯಿತು. 
  14. ಸರ್ವಿಂಗ್ ಪ್ಲೇಟ್ ನಲ್ಲಿ 4 ಸೌಟಿನಷ್ಟು ತಯಾರಿಸಿದ ಗ್ರೇವಿಯನ್ನು ಹಾಕಿ. 
  15. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ. ಸವಿದು ಆನಂದಿಸಿ. 

ಬುಧವಾರ, ಫೆಬ್ರವರಿ 16, 2022

Masale rave kadubu recipe in Kannada | ಮಸಾಲೆ ರವೇ ಕಡುಬು ಮಾಡುವ ವಿಧಾನ

 

Masale rave kadubu recipe in Kannada

Masale rave kadubu recipe in Kannada | ಮಸಾಲೆ ರವೇ ಕಡುಬು ಮಾಡುವ ವಿಧಾನ

ಮಸಾಲೆ ರವೇ ಕಡುಬು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೀಡಿಯಂ ರವೆ
  2. 1/2 ಕಪ್ ಉದ್ದಿನಬೇಳೆ
  3. ಬಾಳೆಎಲೆ ಅಥವಾ ಅಗಲವಾದ ಪಾತ್ರೆ
  4. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 1 ಟೀಸ್ಪೂನ್ ಉದ್ದಿನಬೇಳೆ
  4. 1 ಟೀಸ್ಪೂನ್ ಕಡ್ಲೆಬೇಳೆ
  5. 1/2 - 1 ಟೀಸ್ಪೂನ್ ಜಜ್ಜಿದ ಕಾಳುಮೆಣಸು
  6. 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು 
  7. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. 1 ಹೆಚ್ಚಿದ ಹಸಿರು ಮೆಣಸಿನಕಾಯಿ
  10. ದೊಡ್ಡ ಚಿಟಿಕೆ ಇಂಗು
  11. 2 ಟೀಸ್ಪೂನ್ ಅಡುಗೆ ಎಣ್ಣೆ

ಮಸಾಲೆ ರವೇ ಕಡುಬು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು, 4 ಘಂಟೆ ನೆನೆಸಿಡಿ. 
  2. ರವೆಯನ್ನು ಒಂದು ಬಾಣಲೆಯಲ್ಲಿ ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಒಳ್ಳೆ ಘಮ ಬರುವವರೆಗೆ ಹುರಿಯಿರಿ. 
  3. ಹುರಿದು ಒಂದು ಪಾತ್ರೆಗೆ ಹಾಕಿ. 
  4. ಉದ್ದಿನಬೇಳೆ ನೆನೆಸಿದ ನಂತರ ನೀರು ಬಗ್ಗಿಸಿ, ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  5. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  6. ರವೇ ಇರುವ ಪಾತ್ರೆಗೆ ಉದ್ದಿನಹಿಟ್ಟನ್ನ ಹಾಕಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. 
  8. ಮುಚ್ಚಳ ಮುಚ್ಚಿ 8 - 10 ಘಂಟೆ ಹಿಟ್ಟು ಹುದುಗಲು ಬಿಡಿ. 
  9. ಹಿಟ್ಟು ಹುದುಗಿದ ಮೇಲೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಕಲಸಿ. 
  10. ಒಂದು ಬಾಣಲೆ ಬಿಸಿ ಮಾಡಿ. ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆಯ ಒಗ್ಗರಣೆ ಮಾಡಿ.
  11. ಸಾಸಿವೆ ಸಿಡಿದ ಕೂಡಲೇ ಜಜ್ಜಿದ ಕಾಳುಮೆಣಸು, ಹೆಚ್ಚಿದ ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಹಸಿರುಮೆಣಸಿನಕಾಯಿ ಸೇರಿಸಿ ಹುರಿಯಿರಿ. 
  12. ನಂತರ ಇಂಗು ಸೇರಿಸಿ ಸ್ಟವ್ ಆಫ್ ಮಾಡಿ. ಬಿಸಿ ಕಡಿಮೆ ಆದ ಮೇಲೆ ಹಿಟ್ಟಿಗೆ ಹಾಕಿ ಕಲಸಿ. 
  13. ಇಡ್ಲಿ ಪಾತ್ರೆಗೆ ಬಾಳೆಎಲೆ ಹಾಕಿ, ಹಿಟ್ಟನ್ನು ಹಾಕಿ 20 ನಿಮಿಷ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. 
  14. ಬಾಳೆಎಲೆ ಬದಲಾಗಿ ಅಗಲವಾದ ಪಾತ್ರೆಗೂ ಹಾಕಿ ಬೇಯಿಸಬಹುದು. 
  15. ತೆಂಗಿನ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಶುಕ್ರವಾರ, ಫೆಬ್ರವರಿ 11, 2022

New tasty chutney recipe Kannada | ಹೊಸ ರೀತಿಯ ಚಟ್ನಿ ಮಾಡುವ ವಿಧಾನ

 

New tasty chutney recipe Kannada

New tasty chutney recipe Kannada | ಹೊಸ ರೀತಿಯ ಚಟ್ನಿ ಮಾಡುವ ವಿಧಾನ

ಹೊಸ ರೀತಿಯ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 - 2 ಒಣಮೆಣಸಿನಕಾಯಿ
  2. 2 ಟೀಸ್ಪೂನ್ ಉದ್ದಿನಬೇಳೆ
  3. 3 - 4 ಎಸಳು ಬೆಳ್ಳುಳ್ಳಿ (ಅಥವಾ ಚಿಟಿಕೆ ಇಂಗು)
  4. 1 ಸಣ್ಣ ಗಾತ್ರದ ಈರುಳ್ಳಿ
  5. ಸ್ವಲ್ಪ ಕರಿಬೇವು
  6. 1 ಸಣ್ಣ ಗಾತ್ರದ ಟೊಮೇಟೊ
  7. 2 ಟೇಬಲ್ ಚಮಚ ತೆಂಗಿನತುರಿ
  8. 4 ಟೇಬಲ್ ಚಮಚ ಹುರಿಗಡಲೆ ಅಥವಾ ಕಡ್ಲೆ ಪಪ್ಪು
  9. ಉಪ್ಪು ರುಚಿಗೆ ತಕ್ಕಷ್ಟು
  10. 1 ಟೀಸ್ಪೂನ್ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟೀಸ್ಪೂನ್ ಎಣ್ಣೆ 
  2. ಅರ್ಧ ಒಣಮೆಣಸಿನಕಾಯಿ
  3. 4 ಕರಿಬೇವಿನ ಎಲೆ
  4. 1/2 ಟಿಸ್ಪೂನ್ ಸಾಸಿವೆ 

 ಹೊಸ ರೀತಿಯ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಒಣಮೆಣಸಿನಕಾಯಿ ಮತ್ತು ಉದ್ದಿನಬೇಳೆ ಹಾಕಿ ಹುರಿಯಿರಿ. 
  2. ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  3. ಕರಿಬೇವು ಮತ್ತು ಟೊಮೇಟೊ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  4. ಕೊನೆಯಲ್ಲಿ ತೆಂಗಿನತುರಿ ಮತ್ತು ಹುರಿಗಡಲೆ ಸೇರಿಸಿ, ಒಮ್ಮೆ ಹುರಿದು, ಸ್ಟವ್ ಆಫ್ ಮಾಡಿ. 
  5. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  6. ರುಚಿಗೆ ತಕ್ಕಂತೆ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  7. ಒಂದು ಬಟ್ಟಲಿಗೆ ತೆಗೆಯಿರಿ. 
  8. ಸಾಸಿವೆ, ಕರಿಬೇವು ಮತ್ತು ಒಣಮೆಣಸಿನಕಾಯಿಯ ಒಗ್ಗರಣೆ ಕೊಡಿ. 
  9. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಮಂಗಳವಾರ, ಫೆಬ್ರವರಿ 8, 2022

Khichdi recipe in Kannada | ಕಿಚಡಿ ಮಾಡುವ ವಿಧಾನ

 

Khichdi recipe in Kannada

Khichdi recipe in Kannada | ಕಿಚಡಿ ಮಾಡುವ ವಿಧಾನ 

ಕಿಚಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/4 ಕಪ್ ಅಕ್ಕಿ (ಅಥವಾ ಗೋದಿ ನುಚ್ಚು ಬಳಸಬಹುದು)
  2. 1/4 ಕಪ್ ಹೆಸರುಬೇಳೆ
  3. 1 ಪುಲಾವ್ ಎಲೆ
  4. 1/2 ಟೀಸ್ಪೂನ್ ಜೀರಿಗೆ
  5. 1/2 ಟೀಸ್ಪೂನ್ ಶುಂಠಿ
  6. ಸ್ವಲ್ಪ ಕರಿಬೇವು
  7. 1 ಹಸಿಮೆಣಸಿನಕಾಯಿ
  8. 1/2 ಈರುಳ್ಳಿ
  9. ದೊಡ್ಡ ಚಿಟಿಕೆ ಅರಿಶಿನ ಪುಡಿ
  10. ದೊಡ್ಡ ಚಿಟಿಕೆ ಇಂಗು 
  11. 1/2 ಟೊಮೇಟೊ
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  13. 1 ಟೀಸ್ಪೂನ್ ತುಪ್ಪ
  14. ಸ್ವಲ್ಪ ಕೊತ್ತಂಬರಿ ಸೊಪ್ಪು

ಕಿಚಡಿ ಮಾಡುವ ವಿಧಾನ:

  1. ಹೆಸರುಬೇಳೆ ಮತ್ತು ಅಕ್ಕಿಯನ್ನು 20 ನಿಮಿಷ ನೆನೆಸಿ.
  2. ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. 
  3. ಪುಲಾವ್ ಎಲೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  4. ಶುಂಠಿ, ಕರಿಬೇವು, ಸೀಳಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. 
  5. ನಂತರ ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ. 
  6. ಟೊಮೇಟೊ ಸೇರಿಸಿ ಹುರಿಯಿರಿ. 
  7. ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಮಗುಚಿ.
  8. ಸುಮಾರು ಎರಡು ಕಪ್ ನೀರು ಸೇರಿಸಿ.
  9. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.  
  10. ಮುಚ್ಚಳ ಮುಚ್ಚಿ 3 - 4 ವಿಷಲ್ ಮಾಡಿ. 
  11. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಫೆಬ್ರವರಿ 4, 2022

Rave poori recipe in Kannada | ರವೆ ಪೂರಿ ಮಾಡುವ ವಿಧಾನ

 

Rave poori recipe in Kannada

Rave poori recipe in Kannada | ರವೆ ಪೂರಿ ಮಾಡುವ ವಿಧಾನ 


ರವೆ ಪೂರಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಚಿರೋಟಿ ರವೆ ಅಥವಾ ಸಣ್ಣ ರವೆ
  2. 1 ಚಮಚ ಬಿಸಿ ತುಪ್ಪ ಅಥವಾ ಎಣ್ಣೆ
  3. ಉಪ್ಪು ರುಚಿಗೆ ತಕ್ಕಷ್ಟು
  4. ಸುಮಾರು 3/4 ಕಪ್ ನೀರು
  5. ಎಣ್ಣೆ ಪೂರಿ ಕಾಯಿಸಲು

ರವೆ ಪೂರಿ ಮಾಡುವ ವಿಧಾನ:

  1. ಒಂದು ಅಗಲವಾದ ಬಟ್ಟಲಿಗೆ ರವೆ ಮತ್ತು ಉಪ್ಪು ಹಾಕಿ.
  2. ಒಂದು ಚಮಚ ಎಣ್ಣೆ ಸೇರಿಸಿ, ಚೆನ್ನಾಗಿ ಕಲಸಿ.   
  3. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಪೂರಿ ಹಿಟ್ಟನ್ನು ತಯಾರಿಸಿ. ಸುಮಾರು 3/4 ಕಪ್ ನೀರು ಬೇಕಾಗುವುದು. 
  4. ಹದಿನೈದು ನಿಮಿಷ ನೆನೆಯಲು ಬಿಡಿ. 
  5. ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. 
  6. ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಯಷ್ಟು ತೆಳುವಾಗಿರಲಿ. 
  7. ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.  
  8. ಎರಡು ಬದಿ ಕಾಯಿಸಿ. ಗೊಜ್ಜು, ಖಾರ ಚಟ್ನಿ ಅಥವಾ ಆಲೂ ಭಾಜಿಯೊಂದಿಗೆ ಬಡಿಸಿ. 

Related Posts Plugin for WordPress, Blogger...