ಶುಕ್ರವಾರ, ಏಪ್ರಿಲ್ 28, 2023

Ragi godhi dose recipe in Kannada | ರಾಗಿ ಗೋಧಿ ದೋಸೆ ಮಾಡುವ ವಿಧಾನ

 

Ragi godhi dose recipe in Kannada

Ragi godhi dose recipe in Kannada | ರಾಗಿ ಗೋಧಿ ದೋಸೆ ಮಾಡುವ ವಿಧಾನ

ರಾಗಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ರಾಗಿ ಹಿಟ್ಟು
  2. 1 ಕಪ್ ಗೋಧಿಹಿಟ್ಟು
  3. 1/2 ಕಪ್ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 ಕಪ್ ಗಟ್ಟಿ ಅವಲಕ್ಕಿ
  6. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  7. 2 ಕಪ್ ನೀರು (ಹಿಟ್ಟು ಕಲಸಲು)
  8. ಉಪ್ಪು ರುಚಿಗೆ ತಕ್ಕಷ್ಟು.

ರಾಗಿ ಗೋಧಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಉದ್ದಿನಬೇಳೆ, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆದು 3 - 4 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಉದ್ದಿನಬೇಳೆ ರುಬ್ಬುವ ಮೊದಲು, ಇನ್ನೊಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟು ತೆಗೆದುಕೊಳ್ಳಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ಗಂಟಿಲ್ಲದಂತೆ ಹಿಟ್ಟನ್ನು ಕಲಸಿ ಪಕ್ಕಕ್ಕಿಡಿ. 
  4. ನೆನೆಸಿದ ಉದ್ದಿನಬೇಳೆ, ಅವಲಕ್ಕಿ ಮತ್ತು ಮೆಂತೆಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5. ನುಣ್ಣನೆ ಅರೆದು, ರಾಗಿ ಮತ್ತು ಗೋಧಿ ಹಿಟ್ಟಿರುವ ಪಾತ್ರೆಗೆ ಹಾಕಿ.
  6. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  7. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  8. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  9. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  10. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಏಪ್ರಿಲ್ 25, 2023

Heerekai rasa palya recipe in kannada | ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ

 

Heerekai rasa palya recipe in kannada

Heerekai rasa palya recipe in kannada | ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ

ಹೀರೆಕಾಯಿ ರಸ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಹೀರೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 5 - 6 ಕರಿಬೇವು
  5. 1 ಈರುಳ್ಳಿ
  6. 1 ಟೊಮೇಟೊ
  7. 1/4 ಟೀಸ್ಪೂನ್ ಅರಿಶಿನ
  8. ದೊಡ್ಡ ಚಿಟಿಕೆ ಇಂಗು
  9. ಉಪ್ಪು ರುಚಿಗೆ ತಕ್ಕಂತೆ
  10. 2 ಟೇಬಲ್ ಚಮಚ ಅಡುಗೆ ಎಣ್ಣೆ

ಮಸಾಲೆಪುಡಿಗೆ ಬೇಕಾಗುವ ಪದಾರ್ಥಗಳು:

  1. 2 ಟೇಬಲ್ ಚಮಚ ಶೇಂಗಾ ಅಥವಾ ಕಡಲೆಕಾಯಿ
  2. 3 - 4 ಒಣಮೆಣಸಿನಕಾಯಿ
  3. 1 ಟೇಬಲ್ ಚಮಚ ಕೊತ್ತಂಬರಿ ಬೀಜ
  4. 1 ಟೇಬಲ್ ಚಮಚ ಎಳ್ಳು
  5. 1/4 ಕಪ್ ಒಣಕೊಬ್ಬರಿ

ಹೀರೆಕಾಯಿ ರಸ ಪಲ್ಯ ಮಾಡುವ ವಿಧಾನ:

  1. ಹೀರೆಕಾಯಿಯನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ತೆಳುವಾದ ಸಿಪ್ಪೆ ತೆಗೆದರೆ ಸಾಕು. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಕರಿಬೇವು ಸೇರಿಸಿ. 
  4. ಕತ್ತರಿಸಿದ ಈರುಳ್ಳಿ ಮತ್ತು ದೊಣ್ಣೆಮೆಣಸಿನಕಾಯಿ ಸೇರಿಸಿ, ಹುರಿಯಲು ಪ್ರಾರಂಭಿಸಿ. 
  5. ಅರಿಶಿನ ಮತ್ತು ಇಂಗು ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  6. ಕತ್ತರಿಸಿದ ಟೊಮೇಟೊ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  7. ಕತ್ತರಿಸಿದ ಹೀರೆಕಾಯಿ ಹಾಕಿ ಹುರಿಯಿರಿ. 
  8. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಹೀರೆಕಾಯಿ ಮೆತ್ತಗಾಗುವವರೆಗೆ ಬೇಯಿಸಿ. 
  9. ಹೀರೆಕಾಯಿ ಬೇಯುವ ಸಮಯದಲ್ಲಿ, ಮಸಾಲೆ ತಯಾರಿಸೋಣ. ಅದಕ್ಕೆ ಮೊದಲಿಗೆ ಒಂದು ಬಾಣಲೆಯಲ್ಲಿ ಒಣಮೆಣಸಿನಕಾಯಿ ಮತ್ತು ಶೇಂಗಾ ಹುರಿಯಿರಿ. 
  10. ಶೇಂಗಾ ಹುರಿದ ಮೇಲೆ, ಅದೇ ಬಾಣಲೆಗೆ ಎಳ್ಳು ಮತ್ತು ಕೊತ್ತಂಬರಿ ಬೀಜ ಸೇರಿಸಿ ಹುರಿಯಿರಿ. 
  11. ಆನಂತರ ಒಣಕೊಬ್ಬರಿ ಸೇರಿಸಿ ಹುರಿಯಿರಿ. 
  12. ಬಿಸಿ ಆರಿದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. 
  13. ಬೇಯುತ್ತಿರುವ ಹೀರೇಕಾಯಿಗೆ ರುಚಿಗೆ ತಕ್ಕಂತೆ ಬೆಲ್ಲ ಮತ್ತು ಹುಣಿಸೇಹಣ್ಣು ಸೇರಿಸಿ. 
  14. ತಯಾರಿಸಿದ ಮಸಾಲೆ ಪುಡಿ ಹಾಕಿ. 
  15. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಸಿಹಿಯನ್ನು ರುಚಿಗೆ ತಕ್ಕಂತೆ ಹೊಂದಿಸಿ. 
  16. ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
  17. ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೋಮವಾರ, ಏಪ್ರಿಲ್ 24, 2023

Rave sandige recipe in Kannada | ರವೆ ಸಂಡಿಗೆ ಮಾಡುವ ವಿಧಾನ

 
Rave sandige recipe in Kannada

Rave sandige recipe in Kannada |ರವೆ ಸಂಡಿಗೆ ಮಾಡುವ ವಿಧಾನ

ರವೆ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 60 ಎಂಎಲ್)

  1. 1 ಕಪ್ ರವೆ 
  2. 7 ಕಪ್ ನೀರು
  3. ದೊಡ್ಡ ಚಿಟಿಕೆ ಇಂಗು (ಬೇಕಾದಲ್ಲಿ)
  4. 1 ಟೀಸ್ಪೂನ್ ಜೀರಿಗೆ
  5. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ರವೆ ಸಂಡಿಗೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ನೀರನ್ನು ಅಳತೆ ಮಾಡಿ ಕುದಿಯಲು ಇಡಿ. 
  2. ಅದಕ್ಕೆ ಉಪ್ಪು, ಇಂಗು ಮತ್ತು ಜೀರಿಗೆ ಸೇರಿಸಿ. 
  3. ನೀರು ಕುದಿಯಲು ಶುರು ಆದ ಕೂಡಲೇ ರವೆ ಹಾಕಿ ಮಗುಚಿ. 
  4. ಐದಾರು ನಿಮಿಷ ಅಥವಾ ರವೆ ಬೇಯುವವರೆಗೆ ಮಗುಚಿ.  
  5. ಸ್ಟವ್ ಆಫ್ ಮಾಡಿ.
  6. ಬಿಸಿ ಕಡಿಮೆ ಆದ ಮೇಲೆ, ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ನಲ್ಲಿ ಸಂಡಿಗೆ ಹಾಕಿ. ಬಿಸಿಲಿನಲ್ಲಿ ಒಣಗಲು ಇಡಿ. 
  7. ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ. 
  8. ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. 
  9. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ.

ಗುರುವಾರ, ಏಪ್ರಿಲ್ 13, 2023

Alu jeera recipe in Kannada | ಆಲೂಗಡ್ಡೆ ಜೀರಿಗೆ ಪಲ್ಯ ಮಾಡುವ ವಿಧಾನ

 

Alu jeera recipe in Kannada

Alu jeera recipe in Kannada | ಆಲೂಗಡ್ಡೆ ಜೀರಿಗೆ ಪಲ್ಯ ಮಾಡುವ ವಿಧಾನ 

ಆಲೂಗಡ್ಡೆ ಜೀರಿಗೆ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 3  ಮಧ್ಯಮ ಗಾತ್ರದ ಆಲೂಗಡ್ಡೆ
  2. 2 ಚಮಚ ಜೀರಿಗೆ
  3. 1 ಹಸಿಮೆಣಸಿನಕಾಯಿ
  4. 1/4 ಟೀಸ್ಪೂನ್ ಅರಿಶಿನ ಪುಡಿ
  5. ಒಂದು ದೊಡ್ಡ ಚಿಟಿಕೆ ಇಂಗು
  6. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
  7. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1/2 ಟೀಸ್ಪೂನ್ ನಿಂಬೆರಸ (ಬೇಕಾದಲ್ಲಿ)
  9. ನಿಮ್ಮ ರುಚಿ ಪ್ರಕಾರ ಉಪ್ಪು 
  10. 1 ಟೇಬಲ್ ಚಮಚ ಅಡುಗೆ ಎಣ್ಣೆ

 ಆಲೂಗಡ್ಡೆ ಜೀರಿಗೆ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ. ತುಂಬ ಮೆತ್ತಗೆ ಬೇಯಿಸುವುದು ಬೇಡ. 
  2. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಮತ್ತು ಹಸಿಮೆಣಸಿನಕಾಯಿಯ ಒಗ್ಗರಣೆ ಮಾಡಿಕೊಳ್ಳಿ. 
  3. ಜೀರಿಗೆ ಸಿಡಿದ ಮೇಲೆ ಚೂರು ಮಾಡಿದ ಆಲೂಗಡ್ಡೆ ಸೇರಿಸಿ ಹುರಿಯಿರಿ. 
  4. ಅಚ್ಚಖಾರದ ಪುಡಿ, ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ. 
  5. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ. 
  6. ರುಚಿಗೆ ತಕ್ಕಂತೆ ಉಪ್ಪು ಮತ್ತು ನಿಂಬೆ ರಸ ಸೇರಿಸಿ. 
  7. ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  8. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ. ಹಾಗೆಯೆ ಸಂಜೆ ತಿಂಡಿಗೂ ಬಡಿಸಬಹುದು. 

ಶುಕ್ರವಾರ, ಏಪ್ರಿಲ್ 7, 2023

Kayi rotti recipe in Kannada | ಕಾಯಿ ರೊಟ್ಟಿ ಮಾಡುವ ವಿಧಾನ

 

Kayi rotti recipe in Kannada

Kayi rotti recipe in Kannada | ಕಾಯಿ ರೊಟ್ಟಿ ಮಾಡುವ ವಿಧಾನ

kayi rotti video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1/2 ಕಪ್ ತೆಂಗಿನತುರಿ
  3. 1.5 ಕಪ್ ನೀರು (ಕಾಯಿ ರುಬ್ಬುವ ನೀರು ಸೇರಿಸಿ)
  4. ಉಪ್ಪು ರುಚಿಗೆ ತಕ್ಕಷ್ಟು


ಕಾಯಿ ರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ 1.25 ಕಪ್ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ಆ ಸಮಯದಲ್ಲಿ ಮಿಕ್ಸಿ ಜಾರಿನಲ್ಲಿ ತೆಂಗಿನತುರಿ ಮತ್ತು ಉಳಿದ ನೀರು ತೆಗೆದುಕೊಂಡು ನುಣ್ಣಗೆ ಅರೆಯಿರಿ. 
  3. ಅದನ್ನು ಕುದಿಯಲು ಇಟ್ಟ ಬಾಣಲೆಗೆ ಸೇರಿಸಿ. 
  4. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ  ಅಕ್ಕಿ ಹಿಟ್ಟನ್ನು ಸೇರಿಸಿ ಒಂದೆರಡು ಸುತ್ತು ಕಲಸಿ. ಸ್ಟವ್ ಆಫ್ ಮಾಡಿ. 
  5. ಸ್ಟವ್ ಆರಿಸಿದ ಮೇಲೆ ಸಟ್ಟುಗದಿಂದ ಚೆನ್ನಾಗಿ ಕಲಸಿ ಮುಚ್ಚಿಡಿ. 
  6. ಬಿಸಿ ಆರಿದ ಮೇಲೆ ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ. 
  7. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. 
  8. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ.
  9. ಸಣ್ಣ ಗುಳ್ಳೆಗಳು ಬಂಡ ಕೂಡಲೇ ತಿರುಗಿಸಿ ಇನ್ನೊಂದು ಬದಿ ಕಾಯಿಸಿ. 
  10. ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

Related Posts Plugin for WordPress, Blogger...