Hagalakayi chutney recipe in Kannada | ಹಾಗಲಕಾಯಿ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಹಾಗಲಕಾಯಿ
- 1 ಕಪ್ ತೆಂಗಿನ ತುರಿ
- 2 - 4 ಒಣ ಮೆಣಸಿನಕಾಯಿ
- 4 ಟೀಸ್ಪೂನ್ ಉದ್ದಿನ ಬೇಳೆ
- 1/4 ಟೀಸ್ಪೂನ್ ಸಾಸಿವೆ
- ಗೋಲಿ ಗಾತ್ರದ ಹುಣಿಸೇಹಣ್ಣು
- 2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಹಾಗಲಕಾಯಿ ಚಟ್ನಿ ಮಾಡುವ ವಿಧಾನ:
- ಹಾಗಲಕಾಯಿಯನ್ನು ತೊಳೆದು ಉದ್ದನಾಗಿ ಕತ್ತರಿಸಿ.
- ಬೀಜವನ್ನು ತೆಗೆದು ಸಾಧ್ಯವಾದಷ್ಟು ತೆಳುವಾಗಿ ಕತ್ತರಿಸಿಕೊಳ್ಳಿ.
- ಕತ್ತರಿಸಿದ ಹಾಗಲಕಾಯಿಯನ್ನು ಉಪ್ಪು ನೀರಿನಲ್ಲಿ ೧೦ ನಿಮಿಷ ಹಾಕಿಡಿ.
- ಬಾಣಲೆ ಬಿಸಿ ಮಾಡಿ, 1/2 ಚಮಚ ಎಣ್ಣೆ, ಒಣ ಮೆಣಸಿನಕಾಯಿ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ.
- ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ.
- ನಂತರ ಅದೇ ಬಾಣಲೆಗೆ ಉಳಿದ ಎಣ್ಣೆ, ನೀರು ಹಿಂಡಿ ತೆಗೆದ ಹಾಗಲಕಾಯಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಅಥವಾ ಗರಿ ಗರಿಯಾಗುವವರೆಗೆ ಹುರಿಯಿರಿ.
- ತೆಂಗಿನ ತುರಿ, ಹುರಿದ ಒಣ ಮೆಣಸು, ಸಾಸಿವೆ, ಉದ್ದಿನಬೇಳೆ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ನಂತರ ಹುರಿದ ಹಾಗಲಕಾಯಿ ಹಾಕಿ ಒಂದೆರಡು ಸುತ್ತು ಅರೆದು ತೆಗೆಯಿರಿ.
- ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ